ಮಡಿಕೇರಿ ಏ.6 NEWS DESK : ಕೇರಳ ರಾಜ್ಯದ ಚುನಾವಣೆಯ ಮಾನಂದವಾಡಿ ವಿಧಾನಸಭಾ ಕ್ಷೇತ್ರದ ತೂಂಡರ್ ನಾಡ್ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಚುನಾವಣೆ ರೂಪುರೇಷೆ ಬಗ್ಗೆ ಸ್ಥಳೀಯ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭ ಕೊಡಗಿನಿಂದ ಬಂದ ಮಹಿಳಾ ಘಟದ ಅಧ್ಯಕ್ಷರು, ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಲೇಖಕ: admin
ಮಡಿಕೇರಿ ಏ.6 NEWS DESK : ಟೀಂ ಕೆ.ಆರ್.ಟಿ (ಟೀಮ್ ಕೋದಂಡರಾಮ ಟೆಂಪಲ್) ಆಯೋಜಿತ 2ನೇ ವರ್ಷದ ದಶಮಂಟಪ ಪ್ರೀಮಿಯರ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಗೆ ಏ.10 ರಂದು ಚಾಲನೆ ದೊರಕಲಿದೆ. ಕಳೆದ ವರ್ಷ ನೂತನ ಪರಿಕಲ್ಪನೆಯಲ್ಲಿ ಐತಿಹಾಸಿಕ ಮಡಿಕೇರಿ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ದಶ ದೇವಾಲಯಗಳ ಮಂಟಪ ಸಮಿತಿಗಳನ್ನೊಳಗೊಂಡ ಕ್ರಿಕೆಟ್ ಪಂದ್ಯಾಟವನ್ನು ಟೀಂ ಕೆ.ಆರ್.ಟಿ ತಂಡ ಪ್ರಾರಂಭಿಸಿತ್ತು. ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಟೂರ್ನಿ ಯಶಸ್ವಿಯಾಗಿ ಜರುಗಿತ್ತು. ಈ ಬಾರಿ 3 ದಿನಗಳ ಕಾಲ 10 ಮಂಟಪ ತಂಡಗಳನ್ನೊಳಗೊಂಡ ಟೂರ್ನಿ ತಾ.10, 11 ಹಾಗೂ 12 ರಂದು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಗೆದ್ದ ತಂಡಕ್ಕೆ ಆಕರ್ಷಕ ಹನುಮ ಗದೆ ಆಕಾರದ ರೋಲಿಂಗ್ ಟ್ರೋಫಿಯೊಂದಿಗೆ ವಿನ್ನರ್ರ್ಸ್ ಟ್ರೋಫಿ ಹಾಗೂ ನಗದು ಬಹುಮಾನವಿರಲಿದೆ. ಮೊದಲ ಹಾಗೂ ಎರಡನೆಯ ರನ್ನರ್ಸ್ ಟ್ರೋಫಿಯನ್ನೂ ತಂಡಗಳಿಗೆ ನೀಡಲಾಗುವುದೆಂದು ಟೀಂ ಕೆ.ಆರ್.ಟಿ ತಂಡ ತಿಳಿಸಿದೆ. :: ಟ್ರೋಫಿ ಅನಾವರಣ :: ದಶಮಂಟಪ ಪ್ರೀಮಿಯರ್…
ಸೋಮವಾರಪೇಟೆ ಏ.6 NEWS DESK : ಕನ್ನಡ ಚಿತ್ರಗಳು ಹೆಚ್ಚು ಹೆಚ್ಚು ನಿರ್ಮಾಣವಾಗಬೇಕು, ಚಿತ್ರರಂಗ ಬೆಳೆಯಬೇಕು. ಕನ್ನಡಿಗರು ಚಿತ್ರಮಂದಿರಕ್ಕೆ ಬಂದು ಚಿತ್ರನೋಡಬೇಕೆಂದು ಮಾಜಿ ಕ್ರೀಡಾಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಹೇಳಿದರು. ಕೊಡಗಿನ ರೂಪಾಮೋಹನ್ ಸೃಷ್ಟಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಿಸಿ, ನಿರ್ದೇಶಿಸುತ್ತಿರುವ ಜೇನುಬೇಲಿ ಚಿತ್ರದ ಚಿತ್ರೀಕರಣಕ್ಕೆ ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ಚಾಲನೆ ನೀಡಿ ಮಾತನಾಡಿದರು. ಕರ್ನಾಟಕದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ ಇಲ್ಲಿ ಸಾಕಷ್ಟು ಚಿತ್ರಗಳು ನಿರ್ಮಾಣ ವಾಗುತ್ತಿದೆ, ಆಗಬೇಕುಕೂಡ. ಆದರೆ ಕನ್ನಡಿಗರು ಚಿತ್ರಮಂದಿರಗಳಿಗೆ ತೆರಳಿ ಚಿತ್ರನೋಡಿದರೆ ಚಿತ್ರರಂಗ ಉಳಿಯುತ್ತದೆ, ಬೆಳೆಯುತ್ತದೆ ಎಂದರು. ಕೊಡಗು ಜಿಲ್ಲೆಯ ಮೂಲದವರಾದ ರೂಪ ಮೋಹನ್ ಉತ್ತಮ ಕಥೆಯನ್ನು ಆಯ್ಕೆಮಾಡಿಕೊಂಡು ಸಿನಿಮಾ ಮಾಡಲು ಹೊರಟಿರುವುದು ಶ್ಲಾಘನೀಯವೆಂದರು. ಚಿತ್ರದ ನಿರ್ಮಾಪಕಿ, ನಿರ್ದೇಶಕಿ ರೂಪಮೋಹನ್ ಮಾತನಾಡಿ, ಜೇನು ಕುರುಬರ ಜೀವನಶೈಲಿ ಮತ್ತು ಅವರ ನೋವು ನಲಿವುಗಳ ಕಥೆಯನ್ನು ಕಲಾತ್ಮಕ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ ಈ ಚಿತ್ರವನ್ನು ಬಹುತೇಕ ಕೊಡಗಿನಲ್ಲಿಯೇ ಚಿತ್ರಿಕರಿಸಲಾಗುವುದು ಎಂದು ತಿಳಿಸಿದರು. ಗಿರಿಜನರ ಬದುಕಿನ ಬಗ್ಗೆ ಬೆಳಕು ಚೆಲ್ಲುವ ಪೂರ್ಣ ಪ್ರಮಾಣದ ಎರಡು ಗಂಟೆಯ…
ಮಡಿಕೇರಿ NEWS DESK ಏ.6 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ಆಯೋಜಿಸಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.6ರಂದು ನಡೆದ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ತಂಡಗಳು. *ಮೈದಾನ 1* ಕಾಂಚೇರಿರ ಮತ್ತು ಕಲಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಕಲಿಯಂಡ ತಂಡಕ್ಕೆ 6 ವಿಕೆಟ್‌ಗಳ ಜಯ ಲಭಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಕಾಂಚೇರಿರ 6 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 44 ರನ್ ಗಳನ್ನು ಗಳಿಸಿತು. ಕಲಿಯಂಡ ತಂಡ 5.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 47 ರನ್ ಗಳನ್ನು ಸೇರಿಸಿ ಗೆಲುವು ದಾಖಲಿಸಿತು. ಮೇದುರ ಮತ್ತು ಬಾಳೆಯಡ ನಡುವಿನ ಪಂದ್ಯದಲ್ಲಿ ಮೇದುರ ತಂಡ 8 ವಿಕೆಟ್ ಗಳ ಜಯ ಸಾಧಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಳೆಯಡ ತಂಡ 6 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 51 ರನ್ ಗಳನ್ನು ಗಳಿಸಿತು. ಮೇದುರ 5.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 55…
ಮಡಿಕೇರಿ ಏ.6 : *ಮೈದಾನ 1* ಬೆಳಿಗ್ಗೆ 9 ಗಂಟೆಗೆ ಅಮ್ಮಣಿಚಂಡ ಮತ್ತು ಕಂಬೆಯಂಡ, 10ಕ್ಕೆ ಅಜ್ಜೆಟ್ಟಿರ ಮತ್ತು ಕೊಲ್ಲಿರ, 11ಕ್ಕೆ ಅಪ್ಪನೆರವಂಡ ಮತ್ತು ತಾತಂಡ (ಕುಕ್ಲೂರು), 12ಕ್ಕೆ ಮುಕ್ಕಾಟಿರ (ಮೂವತ್ತೊಕ್ಲು) ಮತ್ತು ಅಲ್ಮಚಂಡ, 1ಕ್ಕೆ ಮಣವಟ್ಟಿರ ಮತ್ತು ಪಾಸುರ, 2ಕ್ಕೆ ಮಲ್ಲೇಂಗಡ ಮತ್ತು ಕುಂಡ್ಯೋಳಂಡ ಹಾಗೂ 3 ಗಂಟೆಗೆ ಓಡಿಯಂಡ ಮತ್ತು ಮಾಳೇಟಿರ (ಕುಕ್ಲೂರು) *ಮೈದಾನ 2* 9 ಗಂಟೆಗೆ ಚೆರುವಾಳಂಡ (ಪುಲ್ಲಿಮಕ್ಕಿ) ಮತ್ತು ಜಮ್ಮಡ, 10ಕ್ಕೆ ಮಂಡೇಪಂಡ ಮತ್ತು ಅಲ್ಲುಮಾಡ, 11ಕ್ಕೆ ಕಾಂಡೇರ ಮತ್ತು ಮಂದನೆರವಂಡ, 12ಕ್ಕೆ ಪುಗ್ಗೇರ ಮತ್ತು ಕಳಕಂಡ, 1ಕ್ಕೆ ಕೇಳೇಟಿರ ಮತ್ತು ಅಯ್ಯಮಾಡ, 2ಕ್ಕೆ ಮಲಚ್ಚಿರ ಮತ್ತು ಉಳುವಂಗಡ, 3ಕ್ಕೆ ಅಣ್ಣೀರ ಮತ್ತು ಚೆಯ್ಯಂಡ (ಬಲಮುರಿ)
ಮಡಿಕೇರಿ, NEWS DESK ಏ.6 : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಏಪ್ರಿಲ್, 17 ರಂದು ಕೊಡಗು ಜಿಲ್ಲೆಗೆ ಭೇಟಿ ನೀಡುವ ಸಾಧ್ಯತೆ ಇದ್ದು, ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಸಂಬoಧಪಟ್ಟ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯ ಲೈನ್‌ಮನೆಗಳಲ್ಲಿ ವಾಸ ಮಾಡುತ್ತಿರುವ ಪರಿಶಿಷ್ಟ ಪಂಗಡದವರಿಗೆ ನಿವೇಶನ ಹಕ್ಕುಪತ್ರ ವಿತರಿಸುವುದರ ಜೊತೆಗೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಭೂಮಿ ಪೂಜೆ ನೆರವೇರಿಸುವ ಸಾಧ್ಯತೆ ಇದೆ. ಆದ್ದರಿಂದ ವಿವಿಧ ಇಲಾಖೆಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಅವರು ಸೂಚಿಸಿದರು. ಲೈನ್‌ಮನೆಗಳಲ್ಲಿ ವಾಸಿಸುವ ನಿವೇಶನ ರಹಿತ ಕುಟುಂಬದವರ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಆದರೂ ಸಹ ಕೆಲವು ಕುಟುಂಬದವರ ಸಮರ್ಪಕ ಮಾಹಿತಿ ಲಭ್ಯ ಇಲ್ಲದಿರುವ ಹಿನ್ನೆಲೆ ಸಂಬAಧಪಟ್ಟ ಗ್ರಾಮಕ್ಕೆ ತೆರಳಿ ಆಧಾರ್ ಕಾರ್ಡ್ ಮಾಡಿಸುವುದು ಹಾಗೆಯೇ ಜಾತಿ ಮತ್ತು ಆದಾಯ ಪ್ರಮಾಣ ಪತ್ರ…
ಮಡಿಕೇರಿ, NEWS DESK ಏ 6- ಬೆಂಗಳೂರಿನಲ್ಲಿ ನೆಲಸಿರುವ ಬೊಪ್ಪಂಡ ರಶ್ಮಿ ಅಯ್ಯಪ್ಪ ಅವರಿಗೆ ಜೀವಮಾನ ಸಾಧನೆಗಾಗಿ ಪ್ರತಿಷ್ಟಿತ ಉದ್ಯೋಗ್ ಯೋಗ್ ಧಾನ್ – 2026 ಪ್ರಶಸ್ತಿ ಲಭಿಸಿದ್ದು, ಬೆಂಗಳೂರಿನಲ್ಲಿ ಆಯೋಜಿತ ಸಮಾರಂಭದಲ್ಲಿ ಖ್ಯಾತ ಚಿತ್ರ ನಟಿ ಶಿಲ್ಪಾ ಶೆಟ್ಟಿ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಯೋಗ ಕ್ಷೇಮ, ಆರೋಗ್ಯ ಸ್ವಾಸ್ತ್ಯ, ಜೀವನೋಲ್ಲಾಸ ಕ್ಷೇತ್ರದಲ್ಲಿ ಹೆಸರಾಗಿರುವ ಆಶ್ವಾಸನ್ ಸಂಸ್ಥೆಯ ಸಂಸ್ಥಾಪಕಿಯಾಗಿ ಮತ್ತು ಕಾಯ೯ನಿವಾ೯ಹಕಿ ಅಧ್ಯಕ್ಷೆಯಾಗಿರುವ ರಶ್ಮಿ ಅಯ್ಯಪ್ಪ ಎರಡು ದಶಕಗಳಿಂದ 30 ದೇಶಗಳಲ್ಲಿ ಆರೋಗ್ಯ ಸ್ವಾಸ್ತ್ಯ ಸಂಬಂಧಿತ 100 ಕ್ಕೂ ಹೆಚ್ಚು ಅಭೂತಪೂರ್ವ ಫಲಿತಾಂಶಗಳು ತಂದಿದ್ದು, ಆರೋಗ್ಯ ಸ್ವಾಸ್ತ್ಯ ಕ್ಷೇತ್ರದಲ್ಲಿ ಇವರ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಯೋಗ ಕ್ಷೇಮ, ಆಧ್ಯಾತ್ಮದ ಮೂಲಕ ಜೀವನೊಲ್ಲಾಸ ಕುರಿತಾದ ರಶ್ಮಿ ಅಯ್ಯಪ್ಪ ಅವರ ಕಾಯ೯ಕ್ರಮಗಳು ಜಗತ್ತಿನಾದ್ಯಂತ ಮನ್ನಣೆ ಪಡೆದಿದೆ. 2005 ರ ಮೇ 23 ರಂದು ಆರೋಗ್ಯ ಸುರಕ್ಷತೆ ಮತ್ತು ಯೋಗ ಕ್ಷೇಮ ವಿಚಾರವನ್ನೇ ಆದ್ಯತೆಯಾಗಿರಿಸಿಕೊಂಡು ಆಶ್ವಾಸನ್ ಎಂಬ ಸಂಸ್ಥೆಯನ್ನು ರಶ್ಮಿ ಅಯ್ಯಪ್ಪ ಪ್ರಾರಂಭಿಸಿದ್ದರು.…
ಮನೆಹಳ್ಳಿ(ಆಲೂರುಸಿದ್ದಾಪುರ), NEWS DESK ಏ.06:- ಈ ಜಗತ್ತಿನಲ್ಲಿ ಸನಾತನ ಧರ್ಮ ಉಳಿಯಬೇಕಾದರೆ ಮಠಮಾನ್ಯಗಳು ಇರಬೇಕೆಂದು ವಿಧಾನ ಪರಿಷತ್ ಸದಸ್ಯೆ ಶ್ರೀಮತಿ.ಭಾರತಿ ಶೆಟ್ಟಿ ತಿಳಿದರು. ತಾಲೂಕಿನ ಶನಿವಾರಸಂತೆ ಸಮೀಪದ ಆಲೂರುಸಿದ್ದಾಪುರಬಳಿಯ ಶ್ರೀ ತಪೋಕ್ಷೇತ್ರ ಮನೆಹಳ್ಳಿ ಮಠದಲ್ಲಿ ೧೪ ನೇ ವರ್ಷದ ಶ್ರೀ ಗುರುಸಿದ್ಧವೀರೇಶ್ವರ ಮಹಾರಥೋತ್ಸವದ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸದಾ ಅಸ್ತಿತ್ವದಲ್ಲಿರುವ ಜೀವನ ಮಾರ್ಗ ಇದು ಹಿಂದೂ ಧರ್ಮದ ಮೂಲಭೂತ ಮತ್ತು ಪ್ರಾಚೀನ ಹೆಸರಾಗಿದ್ದು, ಯಾವುದೇ ನಿರ್ದಿಷ್ಟ ಆರಂಭ ಅಥವಾ ಅಂತ್ಯವಿಲ್ಲದ, ನೈಸರ್ಗಿಕ ಕಾನೂನುಗಳು, ಕರ್ಮ, ಜ್ಞಾನ ಮತ್ತು ಭಕ್ತಿಯ ಮೇಲೆ ಆಧಾರಿತವಾದ ಸಾರ್ವತ್ರಿಕ ತತ್ವಗಳನ್ನು ಒಳಗೊಂಡಿದೆ. ಪ್ರಸ್ತುತ ಸಂದರ್ಭದಲ್ಲಿ ಮಠ ಮಾನ್ಯಗಳು ಧಾರ್ಮಿಕ ಚಿಂತನೆಯ ಜೊತೆಗೆ ಸಮಾಜ ಮುಖಿ ಚಿಂತನೆ ಹಾಗೂ ಶಿಕ್ಷಣ ಸಂಸ್ಥೆಗಳನ್ನ ಕಟ್ಟಿ ಬೆಳಸುತ್ತಿರುವುದು ಅತ್ಯಂತ ಸಂತಸದ ವಿಷಯ. ಆ ನಿಟ್ಟಿನಲ್ಲಿ ಮಠ ಮಾನ್ಯಗಳು ಆಧ್ಯಾತ್ಮಕ ಕೇಂದ್ರಗಳಷ್ಟೆ ಅಲ್ಲ ಅವು ನೆಮ್ಮದಿಯ ತಾಣಗಳು ಕೂಡ ಆಗಿವೆ ಎಂದು ವಿಧಾನ ಪರಿಷತ್ ಸದಸ್ಯೆ ಭಾರತೀ ಶೆಟ್ಟಿ ಹೇಳಿದರು.…
ಕುಶಾಲನಗರ, NEWS DESK ಏ.06 : ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಮುಂಬರುವ ಜೂನ್ 23 ರಂದು ಮಂಗಳವಾರ ಕುಶಾಲನಗರದ ರೈತ ಸಹಕಾರ ಭವನದಲ್ಲಿ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗುತ್ತಿದ್ದು ಕುಶಾಲನಗರದ ಸರ್ವರೂ ಸಮ್ಮೇಳನದ ಭಾಗವಾಗಬೇಕೆಂದು ಪರಿಷತ್ತಿನ ಗೌರವ ಅಧ್ಯಕ್ಷರೂ ಆದ ವಿರಾಜಪೇಟೆ ತಾಲ್ಲೂಕು ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಕರೆಕೊಟ್ಟರು. ಕುಶಾಲನಗರದ ಚೌಡೇಶ್ವರಿ ದೇವಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಶರಣ ಸಾಹಿತ್ಯ ಸಮ್ಮೇಳನ ಕೇವಲ ಸಮುದಾಯವೊಂದಕ್ಕೆ ಸೀಮಿತವಾದುದಲ್ಲ. ಇದು ಜನಪರವಾದ ಜೀವಪರವಾದ ಅಭಿವ್ಯಕ್ತಿ. ಸಮ ಸಮಾಜ ನಿರ್ಮಾಣದ ಪರಿಕಲ್ಪನೆ. ಹನ್ನೆರಡನೆ ಶತಮಾನದಲ್ಲಿ ಸಮಾಜದಲ್ಲಿದ್ದ ಅಂಕು ಡೊಂಕುಗಳು – ಮೇಲು ಕೀಳು ಬೇಧಗಳನ್ನು ಬುಡಸಹಿತ ಕಿತ್ತೊಗೆಯಲು ರಚನೆಯಾದ ವಚನಗಳು ಹಾಗೂ ಶರಣ ಸಾಹಿತ್ಯವನ್ನು ಹಳ್ಳಿ – ಪೇಟೆ, ನಗರಗಳ ಪ್ರತಿ ಮನೆ ಮನೆಗಳಿಗೆ ಜನಸಾಮಾನ್ಯರ ಮನ ಮನಕ್ಕೆ ತಲುಪಿಸುವ ಉದ್ದೇಶವೇ ಶರಣ ಸಾಹಿತ್ಯ ಸಮ್ಮೇಳನದ ಮೂಲ ಧ್ಯೆಯ ಎಂದು ಶ್ರೀ…
ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರ ಸಮೀಪದ ತಪೋಕ್ಷೇತ್ರ ಮನೆಹಳ್ಳಿ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಟ್ಟಣದ ಲೇಖಕಿ ಹಾಗೂ ಕವಯತ್ರಿ ಎನ್.ಎಂ.ಗೀತಾಂಜಲಿ ಮಹೇಶ್ ರವರ ಮಾನಿನಿಯ ಮಾರ್ದನಿ,ಜ್ಞಾನ ಮಂಥನ ಹಾಗೂ ನಿನಾದ ಕೃತಿಗಳು ಅನಾವರಣಗೊಂಡವು. ಶಕ್ತಿ ದಿನ ಪತ್ರಿಕೆಯ ಪ್ರಧಾನ ಸಂಪಾದಕ ಅನಂತ ಶಯನ “ಮಾನಿನಿಯ ಮಾರ್ದನಿ” ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಾನವನು ಸೃಷ್ಟಿಯ ಅದ್ಭುತ ಸಂಕೇತ ಅವನು ತನ್ನೊಳಗೆ ಒಂದು ಪುಟ್ಟ ಬ್ರಹ್ಮಾಂಡವಿದ್ದಂತೆ. ಸೃಷ್ಟಿಕರ್ತನು ಮನುಷ್ಯನನ್ನು ಮಣ್ಣಿನಿಂದ ಸೃಷ್ಟಿಸಿ, ಅವನ ದೇಹವನ್ನು ರೂಪಿಸಿದ್ದಾನೆ. ಆ ದೇಹದ ರಕ್ಷಣೆ ಮತ್ತು ಪೋಷಣೆಗಾಗಿ ಸಹಜವಾದ ಆಸೆಗಳನ್ನು ಇರಿಸಿದ್ದಾನೆ. ಅದು ಜೀವಶಕ್ತಿ, ಪ್ರಜ್ಞೆ ಮತ್ತು ಅರಿವನ್ನು ಹೊತ್ತಿದೆ. ಸೃಷ್ಟಿಕರ್ತನೊಂದಿಗೆ ದೈವಿಕ ಪ್ರೇರಣೆಯಾದಾಗ ತನ್ನಲ್ಲಿ ಅಡಕವಾಗಿರುವ ಕಲೆ ಚೈತನ್ನ ಜಾಗೃತಗೊಂಡು ವಿವಿಧ ಆಯಾಮಗಳಲ್ಲಿ ಹೊರತರಲು ಆರಂಬಿಸಿರುತ್ತಾನೆ. ಅದೇ ರೀತಿ ಲೇಖಕಿ ಗೀತಾಂಜಲಿ ಮಹೇಶ್ ರವರು ಈ ಕ್ಷೇತ್ರದಲ್ಲಿ ಗುರುಗಳ ಅನುಗ್ರಹದಿಂದ ತಮಗೇ ಅರಿವಿಲ್ಲದಂತೆ ಬರಹಗಳ ರೂಪದಲ್ಲಿ ಮಾನಿನಿಯ ಮಾರ್ದನಿ,ಜ್ಞಾನ ಮಂಥನ,…






