ಲೇಖಕ: admin

ಕುಶಾಲನಗರ, NEWS DESK, ಏ.04 : 113 ವರ್ಷಗಳ ಸುಧೀರ್ಘ ಜೀವಿತಾವಧಿಯಲ್ಲಿ ತಮ್ಮ ಬದುಕನ್ನು ಸಮಾಜ ಸೇವೆಗೆ ಅರ್ಪಿಸುವ ಮೂಲಕ ಜಗತ್ತಿಗೆ ಆದರ್ಶರಾದವರು ಡಾ.ಶಿವಕುಮಾರ ಸ್ವಾಮೀಜಿ ಎಂದು ವಿರಾಜಪೇಟೆ ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಬಣ್ಣಿಸಿದರು. ಕುಶಾಲನಗರದ ಸಿದ್ದಗಂಗಾ ಭಕ್ತಮಂಡಳಿ ಹಾಗೂ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ನಗರದ ರಥಬೀದಿಯ ಚೌಡೇಶ್ವರಿ ದೇವಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಾ.ಶಿವಕುಮಾರ ಸ್ವಾಮೀಜಿ ಯವರ 119 ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದ ಶ್ರೀಗಳು, ಇಡೀ ನಾಡು ಬರಗಾಲದಲ್ಲಿ ನಲುಗಿದ್ದ ಸಂದರ್ಭ ಅಲ್ಲಿ ಕಲಿಯುತ್ತಿದ್ದ ಬಡ ಮಕ್ಕಳ ಹೊಟ್ಟೆ ತುಂಬಿಸಲು ಹಳ್ಳಿ ಹಳ್ಳಿಗಳಿಗೆ ಪಾದಯಾತ್ರೆ ನಡೆಸಿ ಜೋಳಿಗೆ ಹಿಡಿದು ಭಿಕ್ಷಾಟನೆ ಮಾಡಿ ತಂದ ದವಸದಲ್ಲಿ ಮಕ್ಕಳ ಹೊಟ್ಟೆ ತುಂಬಿಸುತ್ತಿದ್ದರು. ನರ್ಸರಿ ಯಿಂದ ಉನ್ನತ ಶಿಕ್ಷಣದವರೆಗೂ ನಾನಾ ಶಿಕ್ಷಣ ಸಂಸ್ಥೆಗಳನ್ನು ತೆರೆದ ಸಿದ್ದಗಂಗಾ ಶ್ರೀಗಳು, ಬಡ ಮಕ್ಕಳಿಗೆ ಉಚಿತವಾಗಿ ವೈದ್ಯಕೀಯ ಶಿಕ್ಷಣ ನೀಡಲು ಸಾಧ್ಯವಾಗದ ಕಾರಣ ವೈದ್ಯಕೀಯ ಕಾಲೇಜನ್ನು ಡಾ.ಶಿವಕುಮಾರ ಸ್ವಾಮೀಜಿ ಗಳು ತೆರೆದಿರಲಿಲ್ಲ.…

Read More

ವಿರಾಜಪೇಟೆ ಏ.3 NEWS DESK : ವಿರಾಜಪೇಟೆ ನಗರದಲ್ಲಿ ಹನುಮ ಜಯಂತಿ ಪ್ರಯುಕ್ತ ವಿರಾಜಪೇಟೆಯ ಹನುಮ ಜಯಂತಿ ಆಯೋಜನಾ ಸಮಿತಿ ವತಿಯಿಂದ ಏರ್ಪಡಿಸಿದ್ದ ಶೋಭಾಯಾತ್ರೆ ಸಹಸ್ರಾರು ಭಕ್ತರ ನಡುವೆ ಸಂಭ್ರಮದಿಂದ ಜರುಗಿತು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಹನುಮ ಭಕ್ತರು ಶೋಭಾಯಾತ್ರೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ನಗರದ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಶ್ರೀ ಬಾಲಾಂಜನೇಯ ದೇವಾಸ್ಥಾನದಲ್ಲಿ ಮಧ್ಯಾಹ್ನ ಪೂಜೆ ನೆರೆವೇರಿದ ಬಳಿಕ ಹನುಮನ ಮೂರ್ತಿ ಹೊತ್ತ ಬೆಳ್ಳಿರಥಕ್ಕೆ ಚಾಲನೆ ದೊರೆಯಿತು. ವಿರಾಜಪೇಟೆಯ ವಿಧಾನ ಪರಿಷತ್ ಸದಸ್ಯರಾದ ಮಂಡೆಪಂಡ ಸುಜಾ ಕುಶಾಲಪ್ಪ ಅವರು, ಪೂಜೆ ಸಲ್ಲಿಸಿ ಈಡುಗಾಯಿ ಹಾಕುವುದರ ಮೂಲಕ ಚಾಲನೆ ನೀಡಿದರು. ವಿವಿಧ ಚಂಡೆ ಮೇಳ ಹಾಗೂ ವಾದ್ಯಗಳೊಂದಿಗೆ ಉತ್ಸವ ಮೂರ್ತಿಯನ್ನು ಹೊತ್ತ ರಥದ ವಾಹನದೊಂದಿಗೆ ಮೆರವಣಿಗೆ ಮೂಲಕ ನಗರದ ಛತ್ರಕೆರೆ ಸಮೀಪವಿರುವ ವೀರಾಂಜನೇಯ ದೇವಸ್ಥಾನಕ್ಕೆ ತೆರಳಿ ಅಲ್ಲಿ ವೀರಾಂಜನೇಯ ದೇವರಿಗೆ ಪೂಜೆ ಸಲ್ಲಿಸಿ ಬಳಿಕ ಮೆರವಣಿಗೆ ಮೂಲಕ ಸಾಗಿ ಬಂದು ತೆಲುಗರ ಬೀದಿಯಲ್ಲಿರುವ ಮಾರಿಯಮ್ಮ ದೇವಾಲಯದ ಬಳಿ ಸಂಗಮಗೊಂಡಿತು. ಅಪಾರ ಜನಸ್ತೋಮದೊಂದಿಗೆ ಮಾರಿಯಮ್ಮ…

Read More

ವಿರಾಜಪೇಟೆ ಏ.3 NEWS DESK : ಕೊಡಗು ಮಹಿಳಾ ಸಹಕಾರ ಸಂಘ ನಿಯಮಿತ ವಿರಾಜಪೇಟೆ ಇವರ ವತಿಯಿಂದ ಮಹಿಳಾ ಸಮಾಜದ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಶಾಲಿ ಪ್ರಮೋದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈಗಿನ ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರದಲ್ಲೂ ಛಾಪು ಮೂಡಿಸುತ್ತಿದ್ದಾರೆ. ಆದರೆ ಮನ್ನಣೆ ಸಿಗುವುದು ಮಾತ್ರ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುವರಿಗೆ. ದೇಶದ ಯಶಸ್ಸಿನ ಹಿಂದೆ ಎಷ್ಟೋ ಕೋಟಿ ಹೆಣ್ಣುಮಕ್ಕಳ ಶ್ರಮವಿದೆ. ಅಂತಹ ಪರಿಶ್ರಮಕ್ಕೆ ಬೆಲೆ ನೀಡಬೇಕು ಎಂದರು. ಆರೋಗ್ಯವಿದ್ದರೆ ನಾವು ಏನು ಬೇಕಾದರೂ ಸಾಧಿಸಬಹುದು. ಹಾಗಾಗಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಲು ಮುಖ್ಯ. ಹಾಗೆಯೇ ನಮ್ಮ ಮಕ್ಕಳಿಗೆ ಸಂಸ್ಕಾರವನ್ನು ಕಲಿಸಿಕೊಡಬೇಕು. ಇದರಿಂದ ಮಕ್ಕಳು ಸುಸಂಸ್ಕøತರಾಗಿ ಬೆಳೆಯಲು ಸಾದ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರಲ್ಲದೆ ಮಹಿಳಾ ಸಮಾಜದ ಅಧ್ಯಕ್ಷೆಯಾಗಿ ತಮ್ಮ ಅತ್ತೆ ದಿ. ಲೀಲಾವತಿ ಆಸ್ರಣ್ಣ ಅವರ ಸಾಮಾಜಿಕ ಬದ್ದತೆ, ಸಮಾಜದ ಮೇಲೆ ಇದ್ದ ಅವರ ಹಿತಾಶಕ್ತಿ ಹಾಗೂ ಕಾಳಜಿ, ಸೇರಿದಂತೆ…

Read More

ವಿರಾಜಪೇಟೆ ಏ.3 NEWS DESK : ನಗರದ ಶಿವಕೇರಿಯಲ್ಲಿರುವ ಶ್ರೀ ದುರ್ಗಿ ವಿಷ್ಣು ಮೂರ್ತಿ ನಾಗ ದೇವಸ್ಥಾನದಲ್ಲಿ ಏ.10 ರಂದು ಶ್ರಿ ದುರ್ಗಿ ವಿಷ್ಣುಮೂರ್ತಿ ನಾಗದೇವರ ಪ್ರತಿಷ್ಠಾ ವರ್ಧಂತಿ 5 ನೇ ವಾರ್ಷಿಕೋತ್ಸವ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ ಗಣಪತಿ ಹೋಮ, ಪ್ರಧಾನ ಕಳಶ ಪೂಜೆ, ವಿಷ್ಣು ಸಹಸ್ರನಾಮ, ತುಳಸಿ ಅರ್ಚನೆ, ಕಳಶ ಅಭಿಷೇಕ, ಬೆಳ್ಳಿಯ ಕವಚ ಸಮರ್ಪಣೆ, ಬಳಿಕ ಬೆಳಿಗ್ಗೆ 10 ಗಂಟೆಯಿಂದ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ಸತ್ಯನಾರಾಯಣ ಪೂಜೆಗೆ ಹೆಸರು ನೀಡುವವರು ದೇವಾಲಯದಲ್ಲಿ ಹೆಸರನ್ನು ನೀಡಬಹುದು. ಮಧ್ಯಾಹ್ನ 12.30ಕ್ಕೆ ದೇವರ ಅಲಂಕಾರ ಪೂಜೆ ನಡೆಯುತ್ತದೆ. ಬಳಿಕ, ಶ್ರೀದುರ್ಗಿ ವಿಷ್ಣು ಮೂರ್ತಿ ನಾಗದೇವರಿಗೆ ಮಹಾಪೂಜೆ ಪ್ರಸಾಧ ವಿನಿಯೋಗ ನಂತರ ಅನ್ನ ಸಂತಾರ್ಪಣೆ ನಡೆಯಲಿದೆ.ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ಆಡಳಿತ ಮಂಡಳಿ ತಿಳಿಸಿದ್ದಾರೆ.

Read More

ವಿರಾಜಪೇಟೆ ಏ.3 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿರಾಜಪೇಟೆ ವಲಯದ ಬಿಟ್ಟಂಗಾಲ, ಕೆದಮುಳ್ಳುರು, ಬೇಟೋಳಿ ಕಾರ್ಯಕ್ಷೇತ್ರದ ಮಾಸಾಶನ ಫಲಾನುಭವಿಗಳಿಗೆ ಮಾತೃಶ್ರೀ ಹೇಮಾವತಿ ಅಮ್ಮನವರ ಹುಟ್ಟು ಹಬ್ಬದ ಪ್ರಯುಕ್ತ ಆರೋಗ್ಯ ವಿಚಾರಿಸಿ ಹಣ್ಣು ಹಂಪಲುಗಳನ್ನು ನೀಡಲಾಯಿತು. ತಾಲೂಕಿನಲ್ಲಿ ಇರುವ ಒಟ್ಟು 66 ಮಾಸಾಶನ ಫಲಾನುಭವಿಗಳಿಗೂ ಕೂಡ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೊಜನಾಧಿಕಾರಿ ಹರೀಶ್ ಪಿ, ಮೇಲ್ವಿಚಾರಕರದ ಶಿವಾಕುಮಾರ್, ಸೇವಾ ಪ್ರತಿನಿಧಿ ಪುಷ್ಪ ಉಪಸ್ಥಿತರಿದ್ದರು.

Read More

ಮಡಿಕೇರಿ ಏ.3 NEWS DESK :  ಮುತ್ತಪ್ಪ ಸೇವಾ ಸಂಘ ಬ್ರಹ್ಮಗಿರಿಪುರ ಕಾನೂರು ವತಿಯಿಂದ ಶ್ರೀ ಮುತ್ತಪ್ಪ ದೇವರ ಜಾತ್ರಾ ಮಹೋತ್ಸವ ಏ.5, 6 ರಂದು ದೇವಾಲಯ ಆವರಣದಲ್ಲಿ ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಏ.5ರ ಸೋಮವಾರದಂದು ಸಂಜೆ 5.30 ಗಂಟೆಗೆ ಮುತ್ತಪ್ಪ ದೇವರ ಮಲೆ ಇಳಿಸುವುದು, ಸಂಜೆ 6 ಗಂಟೆಗೆ ಮುತ್ತಪ್ಪನ್ ಬೆಳ್ಳಾಟ್, ಸಂಜೆ 7.30 ಗಂಟೆಗೆ ಕುಟ್ಟಿಚಾತನ್ ಬೆಳ್ಳಾಟ್, ರಾತ್ರಿ 8 ಗಂಟೆಗೆ ಅನ್ನದಾನ, ರಾತ್ರಿ 9.30 ಗಂಟೆಗೆ ಕಂಡಕರ್ಣನ್ ಬೆಳ್ಳಾಟ್ ನಡೆಯಲಿದೆ. ಸೋಮವಾರ ಬೆಳಗ್ಗಿನ ಜಾವ 2 ಗಂಟೆಗೆ ಗುಳಿಗನ್ ತೆರೆ, 3 ಗಂಟೆಗೆ ಕಂಡಕರ್ಣನ್ ತೆರೆ, 6 ಗಂಟೆಗೆ ಮುತ್ತಪ್ಪನ್ ತೆರೆ ನಡೆಯಲಿದ್ದು, ಬೆಳಗ್ಗೆ 11.50 ಗಂಟೆಗೆ ದೇವರ ಉತ್ಸವ ಸಂಪನ್ನಗೊಳ್ಳಲಿದೆ. ಕಾರ್ಯಕ್ರಮಕ್ಕೆ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಾಲಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ಕೋರಿದೆ.

Read More

ಕುಶಾಲನಗರ, ಏ.3 NEWS DESK : ರೈತರು ಕೃಷಿಯೊಂದಿಗೆ ಅರಣ್ಯ ಕೃಷಿಯನ್ನು ವೈಜ್ಞಾನಿಕವಾಗಿ ಮಾಡಿದರೆ ಕೃಷಿ ಕ್ಷೇತ್ರದಲ್ಲಿ ಆರ್ಥಿಕವಾಗಿ ಹೆಚ್ಚಿನ ಲಾಭ ಗಳಿಸುವ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದು ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರೂ ಆದ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರಾದ ಪರಿಸರ ಕಾರ್ಯಕ್ರಮಗಳ ಸಂಘಟಕ ಪರಿಸರ ಪ್ರೇಮಿ ಟಿ.ಜಿ.ಪ್ರೇಮಕುಮಾರ್ ಹೇಳಿದರು. ಕೊಡಗು ಜಿಲ್ಲಾ ಪಂಚಾಯಿತಿ, ಸಾಮಾಜಿಕ ಅರಣ್ಯ ವಿಭಾಗ, ಮಡಿಕೇರಿ ಹಾಗೂ ಸೋಮವಾರಪೇಟೆ ಸಾಮಾಜಿಕ ಅರಣ್ಯ ವಲಯದ ವತಿಯಿಂದ ಕೂಡಿಗೆ ಬಳಿಯ ಹುದುಗೂರು ಅರಣ್ಯ ಸಸ್ಯಕ್ಷೇತ್ರದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ಏರ್ಪಡಿಸಿದ್ದ ಕೌಶಲ್ಯ ತರಬೇತಿ ಮತ್ತು ಅರಿವು ಹಾಗೂ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೃಷಿ ಅರಣ್ಯದಿಂದ ಕೃಷಿ ಭೂಮಿಯ ಅಂತರ್ಜಲ ವೃದ್ಧಿ ಸಾಧ್ಯ. ಇಂದಿನ ಹವಾಮಾನ ವೈಪರೀತ್ಯ, ಅತಿವೃಷ್ಠಿ ಹಾಗೂ ಅಕಾಲಿಕ ಮಳೆಯಿಂದ ಒಂದು ಬೆಳೆ ಕೈಕೊಟ್ಟರೂ, ಅರಣ್ಯ ಕೃಷಿಯಿಂದ ಬರುವ ಮರಗಳ ಆದಾಯವು ರೈತರಿಗೆ ಆರ್ಥಿಕ ನೆರವು ನೀಡುತ್ತದೆ.ಇದು ರೈತರ ಆದಾಯದ ವೈವಿಧ್ಯೀಕರಣಕ್ಕೆ…

Read More

ಸುಂಟಿಕೊಪ್ಪ ಏ.3 NEWS DESK : ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ವತಿಯಿಂದ ಸಂತಮೇರಿ ಶಾಲಾ ಸಭಾಂಗಣದಲ್ಲಿ ಶುಭ ಶುಕ್ರವಾರ (ಗುಡ್‍ಫ್ರೈಡೆ)ದ ಅಂಗವಾಗಿ ವಿಶೇಷ ಬಲಿಪೂಜೆ ನಡೆಯಿತು.  ಪ್ರಾರ್ಥನಾ ಕೂಟವನ್ನು ವಿಶೇಷ ಪೂಜೆ ಪ್ರಾರ್ಥನೆ ಹಾಗೂ ಆರಾಧಾನೆಯನ್ನು ಶುಭ ಶುಕ್ರವಾರದ ಸಾಂಘ್ಯಗಳನ್ನು ಬೆಂಗಳೂರಿನ ಧರ್ಮಕೇಂದ್ರ ಪ್ರೇಮ್‍ಕುಮಾರ್ ಹಾಗೂ ಸಂತ ಅಂತೋಣಿ ದೇವಾಲಯದ ಧರ್ಮಗುರುಳಾದ ರೇ.ಫಾ.ವಿಜಯಕುಮಾರ್ ನೇರವೇರಿಸಿದರು. ವಿಶೇಷ ಪ್ರಾರ್ಥನೆ ಹಾಗೂ ಸುತ್ತು ಆರಾಧನೆಗಳನ್ನು ದೇವಾಲಯದ ಧರ್ಮಗುರುಗಳು ಹಾಗೂ ಕನ್ಯಾಸ್ತ್ರಿಯರು ನೆರವೇರಿಸಿದರು. ನೂರಾರು ಸಂಖ್ಯೆಯಲ್ಲಿ ಕ್ರೈಸ್ತ ಬಾಂಧವರು ಪ್ರಾರ್ಥನಾ ಕೂಟದಲ್ಲಿ ಪಾಲ್ಗೊಂಡಿದ್ದರು. ದೇವಾಲಯದಿಂದ ಆರಂಭಗೊಂಡ ಶಿಲುಬೆಯಾದಿಯಲ್ಲಿ ಸಂತ ಅಂತೋಣಿ ಶಾಲಾವರಣದಿಂದ ಆರಂಭಗೊಂಡು ಸಂತಮೇರಿ ಕ್ರಿಸ್ತ ಶಿಲುಬೆಯಾತನೆಯನ್ನು ಸ್ಮರಿಸುತ್ತಾ ಪ್ರಾರ್ಥನೆ ಹಾಗೂ ಆರಾಧನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತಾಧಿಗಳು ತೊಂಡಗಿಸಿಕೊಂಡರು.

Read More

ವಿರಾಜಪೇಟೆ ಏ.3 NEWS DESK : ವಿರಾಜಪೇಟೆಯ ಸಂತ ಅನ್ನಮ್ಮನ ದೇವಾಲಯದಲ್ಲಿ ಶುಭ ಶುಕ್ರವಾರ (ಗುಡ್‍ಫ್ರೈಡೆ)ದ ಅಂಗವಾಗಿ ವಿಶೇಷ ಬಲಿಪೂಜೆ ನಡೆಯಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಭೇಟಿ ನೀಡಿದರು. ಚರ್ಚ್ ನಲ್ಲಿ ಕ್ರೈಸ್ತ ಸಮುದಾಯದವರ ಪ್ರಾರ್ಥನೆಯ ಬಳಿಕ, ಯೇಸು ಕ್ರಿಸ್ತನಿಗೆ ಪುಷ್ಪಾರ್ಪಣೆ ಮಾಡುವ ಮೂಲಕ ನಮಿಸಿದರು. ಕಿಟ್ ವಿತರಣೆ : ಇದೇ ಸಂದರ್ಭ ಗುಡ್ ಫ್ರೈಡೆ ಆಚರಣೆ ಪ್ರಯುಕ್ತ ಅನಾಥ ಆಶ್ರಮಕ್ಕೆ ಆಹಾರ ಸಾಮಗ್ರಿಯ ಕಿಟ್ ವಿತರಿಸಿದರು. ನಾಡಿನ ಎಲ್ಲರಿಗೂ ಶುಭವನ್ನು ಕರುಣಿಸಲಿ ಎಂದು ಶುಭ ಹಾರೈಸಿದರು. ಧರ್ಮ ಗುರುಗಳು, ಪ್ರಮುಖರಾದ ಜೋಕಿಂ ರೋಡರಿಗಸ್, ಮರ್ವಿನ್ ಲೋಬೋ, ಜೇವಿಯರ್, ಹ್ಯಾಂಸಿ, ಮಾರ್ಟಿನ್, ಡೇನಿಯಲ್, ಜಗನ್, ರಿಯಾನ್ ಲೋಬೋ, ಚಾರ್ಲ್ಸ್ ಡಿಸೋಜ, ಮೆಲ್ರೋಯ್ ಲೋಬೊ, ಕುಂಡಚ್ಚಿರ ಮಂಜುದೇವಯ್ಯ, ಮೊದಲಾದವರು ಉಪಸ್ಥಿತರಿದ್ದರು.

Read More

ಮಡಿಕೇರಿ NEWS DESK ಏ.3 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ನಡೆಯುತ್ತಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.4ರಂದು ನಡೆಯುವ ಪಂದ್ಯಗಳ ವಿವರ. *ಮೈದಾನ 1* ಬೆಳಿಗ್ಗೆ 9ಗಂಟೆಗೆ ಪೆರಿಯಂಡ ಮತ್ತು ಕಲ್ಲೇಂಗಡ (ನಾಪೋಕ್ಲು), 10ಕ್ಕೆ ಪೂಲಂಡ ಮತ್ತು ಕಾಳಿಮಾಡ, 11ಕ್ಕೆ ಸಿದ್ದಂಡ ಮತ್ತು ನಂದೇಟಿರ, ಮಧ್ಯಾಹ್ನ 12ಕ್ಕೆ ಚಮ್ಮಟ್ಟಿರ ಮತ್ತು ಅಳ್ಮಚಂಡ, 1ಕ್ಕೆ ತೆನ್ನಿರ ಮತ್ತು ಮಳವಂಡ, 2ಕ್ಕೆ ನಂಬಿಯಪAಡ ಮತ್ತು ಮಾಚಿಮಂಡ ಹಾಗೂ 3ಗಂಟೆಗೆ ಕೀಕನಮಾಡ ಮತ್ತು ಮಂಡುವoಡ *ಮೈದಾನ 2* ಬೆಳಿಗ್ಗೆ 10 ಗಂಟೆಗೆ ಚರಿಮಂಡ ಮತ್ತು ಚಪ್ಪಂಡ, 11ಕ್ಕೆ ಪೋರಂಗಡ ಮತ್ತು ನಾಪಂಡ, ಮಧ್ಯಾಹ್ನ 12ಕ್ಕೆ ಬಲ್ಲಡಿಚಂಡ ಮತ್ತು ಸಾದೇರ, 1ಕ್ಕೆ ಐಮುಡಿಯಂಡ ಮತ್ತು ಬಲ್ಲಿಮಾಡ, 2ಕ್ಕೆ ತಾತಪಂಡ ಮತ್ತು ಐಚಂಡ (ದೇವಣಗೇರಿ) ಹಾಗೂ 3 ಗಂಟೆಗೆ ಮಲ್ಲಂಡ (ಬೇಗೂರು) ಮತ್ತು ಚೇರಂಡ

Read More