ಮಡಿಕೇರಿ, NEWS DESK ಏ. 6 – ಭಾರತದ ಹಾಕಿ ತಂಡದ 2024 ರ ಪ್ಯಾರಿಸ್ ಒಲಂಪಿಕ್ ಹಾಕಿ ಕ್ರೀಡಾಕೂಟದಲ್ಲಿ ಭಾರತ ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ, ಪದ್ಮಭೂಷಣ, ಪದ್ಮಶ್ರೀ, ಅರ್ಜುನ ಹಾಗೂ ಕ್ರೀಡಾಪಟುಗಳಿಗೆ ನೀಡುವ ಅತ್ಯುನ್ನತ ಧ್ಯಾನ್ ಚಂದ್ ಖೇಲ್ ಪ್ರಶಸ್ತಿಗೆ ಭಾಜನರಾದ ,ಭಾರತದ ಹಾಕಿ ತಂಡದ ಮಾಜಿ ಗೋಲ್ ಕೀಪರ್ ಶ್ರೀಜೇಶ್ ಮಡಿಕೇರಿ ಸಾಯಿ ಹಾಕಿ ಕೇಂದ್ರಕ್ಕೆ ಭೇಟಿ ನೀಡಿ, ಕ್ರೀಡಾಥಿ೯ಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳಿಗೆ ಜೀವನದಲ್ಲಿ ಸ್ಪಷ್ಟ ಗುರಿ ಇದ್ದಲ್ಲಿ ಹಾಗೂ ತಾವು ಮಾಡುವ ಕೆಲಸದ ಮೇಲೆ ನಿಷ್ಠೆ ಬದ್ಧತೆ ಇದ್ದಲ್ಲಿ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದ ಶ್ರೀಜೇಶ್, ತಮ್ಮ ಕ್ರೀಡಾ ಜೀವನದ ಅನುಭವ ಹಾಗೂ ಸಾಧನೆಗಳನ್ನು ಉದಾಹರಣೆ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಸ್ಫೂರ್ತಿಯನ್ನು ತುಂಬಿದರು. ಮಡಿಕೇರಿ ಸಾಯಿ ಕೇಂದ್ರದ ಮುಖ್ಯ ಕೋಚ್ ಮಿನಿ ಉನ್ನಿರಾಜ್ ಹಾಜರಿದ್ದರು.
ಲೇಖಕ: admin
ಮಡಿಕೇರಿ, NEWS DESK ಏ.06 : ನಗರದ ಮುನೀಶ್ವರ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ʼಮುನೀಶ್ವರ ಕ್ರಿಕೆಟ್ ಲೀಗ್ 2026ʼ ಪ್ರಥಮ ವರ್ಷದ ಲೆದರ್ ಬಾಲ್ ಟೂರ್ನಮೆಂಟ್ ಚಾಂಪಿಯನ್ ಆಗಿ ಟೀಂ ಸ್ಟ್ರೈಕರ್ಸ್ ಹೊರಹೊಮ್ಮಿದೆ. ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ 08 ದಿನ ಕಾಲ ನಡೆದ ಟೂರ್ನಮೆಂಟ್‌ನಲ್ಲಿ ಜಿಲ್ಲೆಯ ಪ್ರತಿಷ್ಠಿತ 08 ತಂಡಗಳು ಪಾಲ್ಗೊಂಡಿದ್ದವು. ಶನಿವಾರ ಅಪರಾಹ್ನ ನಡೆದ ಫೈನಲ್ ಪಂದ್ಯದಲ್ಲಿ ಎಂವೈಸಿಸಿ ಮಡಿಕೇರಿ ತಂಡದ ಎದುರು ಟೀಂ ಸ್ಟ್ರೈಕರ್ಸ್ ಸುಲಭ ಜಯ ದಾಖಲಿಸಿತು. ಮೊದಲು ಬ್ಯಾಟ್ ಮಾಡಿದ ಎಂವೈಸಿಸಿ 99 ರನ್‌ಗೆ ಆಲೌಟ್ ಆಯಿತು. ಗುರಿ ಬೆನ್ನತ್ತಿದ ಸ್ಟ್ರೈಕರ್ಸ್ ತಂಡ 14.2 ಓವರ್‌ನಲ್ಲಿ 04 ವಿಕೆಟ್ ಕಳೆದುಕೊಂಡು ಸುಲಭವಾಗಿ ಜಯಗಳಿಸಿತು. ಬಹುಮಾನ ಬಹುಮಾನ ವಿತರಣೆ : ಸಂಘದ ಅಧ್ಯಕ್ಷ ಟಿ.ಕೆ. ನಾಗರಾಜ್ ಅಧ್ಯಕ್ಷತೆಯಲ್ಲಿ ಸಂಜೆ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಿತು. ವಿಜೇತ ತಂಡಕ್ಕೆ 50 ಸಾವಿರ ರೂ. ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 30 ಸಾವಿರ…
*ಮೈದಾನ 1* ಬೆಳಿಗ್ಗೆ 9 ಗಂಟೆಗೆ ಕಂಚೇರಿರ ಮತ್ತು ಕಲಿಯಂಡ, 10ಕ್ಕೆ ಮೇದೂರು ಮತ್ತು ಬಾಳೆಯಡ, 11ಕ್ಕೆ ಮಲ್ಲಂಗಡ ಮತ್ತು ಅಚ್ಚಕಾಳೇರ, 12ಕ್ಕೆ ಮಂಡೀರ (ಮಾದಾಪುರ) ಮತ್ತು ಚಿಯನಮಾಡ, 1ಕ್ಕೆ ಕಲ್ಲೇಂಗಡ ಮತ್ತು ಮಾಚಿಮಂಡ, 2ಕ್ಕೆ ಮುಕ್ಕಾಟಿರ (ಅರಪಟ್ಟು) ಮತ್ತು ಕಲಿಯಾಟಂಡ ಹಾಗೂ 3 ಗಂಟೆಗೆ ಮರುವಂಡ ಮತ್ತು ಕೈಪಟ್ಟೀರ *ಮೈದಾನ 2* 9 ಗಂಟೆಗೆ ಗೀಜಿಗಂಡ ಮತ್ತು ದೇಯಂಡ 10ಕ್ಕೆ ಚಿಮ್ಮುಣಿರ (ಹರಿಹರ) ಮತ್ತು ಕೇತಿರ 11ಕ್ಕೆ ಬಾಚಿರ ಮತ್ತು ಐಪುಮಾಡ 12ಕ್ಕೆ ಪೆಮ್ಮನಮಾಡ (ಹರಿಹರ) ಮತ್ತು ಕೊಟ್ಟುಕತೀರ 1ಕ್ಕೆ ನಾಯಕಂಡ ಮತ್ತು ತೀತಿರ (ಹರಿಹರ) 2ಕ್ಕೆ ಕೊಂಗoಡ ಮತ್ತು ಪೊನ್ನಿಮಾಡ 3ಕ್ಕೆ ಚೆಂಬoಡ ಮತ್ತು ಮಾತ್ರಮಾಡ 4 ಗಂಟೆಗೆ ಬಲ್ಯಂಡ ಮತ್ತು ಕುಪ್ಪಂಡ (ನಾಂಗಾಲ)
ಮಡಿಕೇರಿ, NEWS DESK ಏ.05:- ರಾಷ್ಟ್ರದ ಅಪರೂಪದ ರಾಜಕೀಯ ಮುತ್ಸದ್ಧಿ, ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ಅವರ ಹೆಸರಿನಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಸಮಾಜ ಕಲ್ಯಾಣ ಅಧಿಕಾರಿಗೆ ಶಾಸಕರಾದ ಡಾ.ಮಂತರ್ ಗೌಡ ಅವರು ಸಲಹೆ ಮಾಡಿದ್ದಾರೆ. ಈಗಾಗಲೇ ಕುಶಾಲನಗರದಲ್ಲಿ ಬಾಬೂಜಿ ಹೆಸರಿನಲ್ಲಿ ವೃತ್ತ ನಿರ್ಮಾಣಕ್ಕೆ ಮುಂದಾಗಲಾಗಿದೆ. ಹಾಗೆಯೇ ಬಾಬು ಜಗಜೀವನ್ ರಾಮ್ ಹೆಸರಿನಲ್ಲಿ ಹಲವು ಸ್ಮರಣೀಯ ಕಾರ್ಯಗಳು ಆಗಬೇಕು ಎಂದು ಶಾಸಕರು ತಿಳಿಸಿದರು. ಆಹಾರ ಮತ್ತು ಕೃಷಿ ಸಚಿವರಾಗಿ ರಾಷ್ಟ್ರದಲ್ಲಿ ಹಸಿರು ಕ್ರಾಂತಿಯನ್ನು ನಿರ್ಮಿಸಿದ ಕೀರ್ತಿ ಬಾಬು ಜಗಜೀವನ್ ರಾಮ್ ಅವರಿಗೆ ಸಲ್ಲುತ್ತದೆ ಎಂದು ಶಾಸಕರು ನುಡಿದರು. ರಕ್ಷಣಾ ಸಚಿವರಾಗಿ ಉತ್ತಮ ಕೆಲಸ, ಕಾರ್ಮಿಕ ಸಚಿವರಾಗಿ ದುಡಿಯುವ ವರ್ಗದ ಹಿತರಕ್ಷಣೆ, ಸಮಾಜದ ಶೋಷಿತ ಸಮುದಾಯಗಳ ಧ್ವನಿಯಾಗಿದ್ದ ರಾಷ್ಟ್ರದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಂ ಅವರ ಜೀವನ ಸಾಧನೆಗಳು ದಾಖಲೆಯಾಗಿದ್ದು, ಸ್ಮರಣೀಯವಾಗಿದೆ ಎಂದು ಡಾ.ಮಂತರ್ ಗೌಡ ಅವರು ವಿವರಿಸಿದರು.…
ಮಡಿಕೇರಿ NEWS DESK ಏ.5 : ಕೊಡಗಿನ ಕೊಡವ ಕುಟುಂಬಗಳ ನಡುವಿನ ಹಾಕಿ ಹಬ್ಬದ 26ನೇ ವರ್ಷದ “ಚೇನಂಡ ಕಪ್ ಹಾಕಿ ಉತ್ಸವ”ಕ್ಕೆ ನಾಪೋಕ್ಲುವಿನಲ್ಲಿ ವರ್ಣರಂಜಿತ ಚಾಲನೆಯನ್ನು ನೀಡಲಾಯಿತು. ಕೊಡವ ಸಮುದಾಯದ ಒಟ್ಟು 383 ತಂಡಗಳ ನಡುವೆ 28 ದಿನಗಳ ಕಾಲ ಪಂದ್ಯಾವಳಿ ನಡೆಯಲಿದ್ದು, ಮೇ 2 ರಂದು ಅಂತಿಮ ಪಂದ್ಯವನ್ನು ಆಯೋಜಿಸಲಾಗಿದೆ. ಅತ್ಯಾಕರ್ಷಕವಾಗಿ ಸಜ್ಜುಗೊಂಡಿರುವ ನಾಪೋಕ್ಲು ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಭಾನುವಾರ “ಚೇನಂಡ ಕಪ್ ಹಾಕಿ ಉತ್ಸವ”ಕ್ಕೆ ಸಾಂಪ್ರದಾಯಿಕವಾಗಿ ಬೆಳ್ಳಿಯ ಚೆಂಡನ್ನು ಬೆಳ್ಳಿಯ ಸ್ಟಿಕ್‌ನಿಂದ ಹೊಡೆಯುವ ಮೂಲಕ ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷರಾದ ಪಾಂಡoಡ ಬೋಪಣ್ಣ ಹಾಗೂ ಗಣ್ಯರು ವಿದ್ಯುಕ್ತ ಚಾಲನೆ ನೀಡಿದರು. ಶಾಸಕ ಎ.ಎಸ್.ಪೊನ್ನಣ್ಣ ಮಾತನಾಡಿ ದೇಶ ವಿದೇಶಗಳಲ್ಲಿ ಕೊಡವ ಕೌಟುಂಬಿಕ ಹಾಕಿ ಪ್ರಸಿದ್ಧಿಯನ್ನು ಪಡೆದಿದೆ, ಈ ಹಿಂದಿನ ಹಾಕಿ ಉತ್ಸವದ ಸಂದರ್ಭ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಸ್ಥಾನ ಪಡೆದಿರುವ…
ಮಡಿಕೇರಿ NEWS DESK ಏ.5 : ಮೂಲತಃ ಬೇಕಲ್ ಕರಿಕೆಯ ನಿಧಿ ಗೌಡ ಮುರುಳ್ಯ ಅವರು 46 ಬ್ಯಾಚ್ ನ ಸಿವಿಲ್ ಪಿಎಸ್‌ಐ ಆಗಿ ನೇಮಕಗೊಂಡಿದ್ದಾರೆ. ಇವರು ಬಾಲಕೃಷ್ಣ ಮುರುಳ್ಯ ಹಾಗೂ ನಳಿನಿ ದಂಪತಿಯ ಪುತ್ರಿ.
ಮಡಿಕೇರಿ NEWS DESK ಏ.5 : ಕೊಡಗಿನ ಅತಿ ಎತ್ತರದ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳ ಕೊಚ್ಚಿ ಮೂಲದ ಜಿ.ಎಸ್.ಶರಣ್ಯ(36) ಕೊನೆಗೂ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ. ಸ್ಥಳೀಯ ಕಕ್ಕಬ್ಬೆ ಯವಕಪಾಡಿ ಗ್ರಾಮದ ಕುಡಿಯ ಸಮುದಾಯದ ಯುವಕರ ರಕ್ಷಣಾ ತಂಡ ಶರಣ್ಯ ಅವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ತಡಿಯಂಡಮೋಳ್ ಬೆಟ್ಟದ ಟ್ರಕ್ಕಿಂಗ್ ಪಾಯಿಂಟ್ ನಿಂದ 3.5 ಕಿ.ಮೀ ದೂರದ ಮಲೆ ತಿರಿಕೆ ಎಂಬ ಅರಣ್ಯದೊಳಗೆ ಸುರಕ್ಷಿತವಾಗಿದ್ದ ಶರಣ್ಯ ಅವರನ್ನು ಕುಡಿಯ ಸಮುದಾಯದ ಯುವಕರ ರಕ್ಷಣಾ ತಂಡ ಪತ್ತೆ ಮಾಡಿ ಕರೆ ತಂದಿದ್ದಾರೆ. ತಡಿಯಂಡಮೋಳ್ ಬೆಟ್ಟದ ಸಂಪೂರ್ಣ ಮಾಹಿತಿ ಹೊಂದಿದ್ದ ಸ್ಥಳೀಯ ಕುಡಿಯ ಬುಡಕಟ್ಟು ಸಮುದಾಯದ ಯುವಕರ ತಂಡ ಇಂದು ಸಂಜೆ ವೇಳೆಗೆ ಮಲೆ ತಿರಿಕೆ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಶರಣ್ಯ ಇರುವುದನ್ನು ಪತ್ತೆ ಮಾಡುವಲ್ಲಿ ಸಫಲರಾಗಿದ್ದಾರೆ. ಬಳಿಕ ಯುವಕರು ರಕ್ಷಣಾ ತಂಡಗಳಿಗೆ ಮಾಹಿತಿ ರವಾನಿಸಿದ್ದಾರೆ. ಆಹಾರವಿಲ್ಲದೆ ಬಳಲಿದ್ದ ಶರಣ್ಯ ಅವರನ್ನು ಉಪಚರಿಸಿದ ವಿವಿಧ ಇಲಾಖೆಗಳ ರಕ್ಷಣಾ ತಂಡ ಟ್ರಕ್ಕಿಂಗ್ ಪಾಯಿಂಟ್ ಪ್ರವೇಶ…
ಮಡಿಕೇರಿ NEWS DESK ಏ.5 : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ಆಯೋಜಿಸಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.5ರಂದು ನಡೆದ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ತಂಡಗಳು. *ಮೈದಾನ 1* ಮಾಚೆಟ್ಟಿರ ಮತ್ತು ಐಚೋಡಿಯಂಡ ತಂಡಗಳ ನಡುವಿನ ಪಂದ್ಯದಲ್ಲಿ ಐಚೋಡಿಯಂಡ 5 ವಿಕೆಟ್ ಗಳ ಜಯ ಸಾಧಿಸಿದೆ. ಐಚೋಡಿಯಂಡ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮಾಚೆಟ್ಟಿರ ತಂಡ 6 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 61 ರನ್ ಗಳನ್ನು ಗಳಿಸಿತು. ಐಚೋಡಿಯಂಡ ತಂಡ 6 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 62 ರನ್ ಗಳನ್ನು ಸೇರಿಸಿ ಗೆಲುವಿನ ನಗು ಬೀರಿತು. ನಾಳಿಯಂಡ ಮತ್ತು ಚೆಟ್ರಂಡ ತಂಡಗಳ ನಡುವಿನ ಪಂದ್ಯದಲ್ಲಿ ನಾಳಿಯಂಡ 51 ರನ್ ಗಳಿಂದ ಗೆಲುವು ಸಾಧಿಸಿತು. ಟಾಸ್ ಗೆದ್ದ ನಾಳಿಯಂಡ ಬ್ಯಾಟಿಂಗ್ ಆಯ್ದುಕೊಂಡು 6 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 80 ರನ್ ಗಳನ್ನು ಗಳಿಸಿತು. ಚೆಟ್ರಂಡ…
ಮಡಿಕೇರಿ ಏ.4 NEWS DESK : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ಆಯೋಜಿಸಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.4ರಂದು ನಡೆದ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ತಂಡಗಳು. *ಮೈದಾನ 1* ಪೆರಿಯಂಡ ಮತ್ತು ಕಲ್ಲೇಂಗಡ (ನಾಪೋಕ್ಲು) ನಡುವಿನ ಪಂದ್ಯದಲ್ಲಿ 3 ವಿಕೆಟ್ ನಷ್ಟಕ್ಕೆ 44 ರನ್ ಗಳನ್ನು ಗಳಿಸಿ ಕಲ್ಲೇಂಗಡ ಜಯ ಸಾಧಿಸಿತು. ಪೆರಿಯಂಡ ತಂಡ 1 ವಿಕೆಟ್ ನಷ್ಟಕ್ಕೆ 41 ರನ್ ಗಳನ್ನು ಗಳಿಸಿ ಸೋಲೊಪ್ಪಿಕೊಂಡಿತು. ಪೂಲಂಡ ಮತ್ತು ಕಾಳಿಮಾಡ ನಡುವಿನ ಪಂದ್ಯದಲ್ಲಿ ಕಾಳಿಮಾಡ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 29 ರನ್ ಗಳನ್ನು ಗಳಿಸಿ ಗೆಲುವು ಸಾಧಿಸಿತು. ಪೂಲಂಡ ತಂಡ 6 ವಿಕೆಟ್ ಗಳನ್ನು ಕಳೆದುಕೊಂಡು 28 ರನ್ ಗಳನ್ನು ಗಳಿಸಿ ಸೋಲು ಅನುಭವಿಸಿತು. ಸಿದ್ದಂಡ ಮತ್ತು ನಂದೇಟಿರ ನಡುವಿನ ಪಂದ್ಯದಲ್ಲಿ 3 ವಿಕೆಟ್ ನಷ್ಟಕ್ಕೆ 61 ರನ್ ಗಳನ್ನು ಗಳಿಸಿ ಸಿದ್ದಂಡ ಗೆಲುವು ಸಾಧಿಸಿತು. ನಂದೇಟಿರ 3 ವಿಕೆಟ್ ನಷ್ಟಕ್ಕೆ 60…
ಮಡಿಕೇರಿ ಏ.4 NEWS DESK : ಕೊಡವ ಕುಟುಂಬಗಳ ನಡುವೆ ಮೂರ್ನಾಡಿನಲ್ಲಿ ಆಯೋಜಿಸಿರುವ 24ನೇ ವರ್ಷದ ‘ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ’ ಯಲ್ಲಿ ಏ.4ರಂದು ನಡೆದ ಪಂದ್ಯಾವಳಿಯಲ್ಲಿ ಗೆಲುವು ಸಾಧಿಸಿದ ತಂಡಗಳು. *ಮೈದಾನ 1* ಪೆರಿಯಂಡ ಮತ್ತು ಕಲ್ಲೇಂಗಡ (ನಾಪೋಕ್ಲು) ನಡುವಿನ ಪಂದ್ಯದಲ್ಲಿ 3 ವಿಕೆಟ್ ನಷ್ಟಕ್ಕೆ 44 ರನ್ ಗಳನ್ನು ಗಳಿಸಿ ಕಲ್ಲೇಂಗಡ ಜಯ ಸಾಧಿಸಿತು. ಪೆರಿಯಂಡ ತಂಡ 1 ವಿಕೆಟ್ ನಷ್ಟಕ್ಕೆ 41 ರನ್ ಗಳನ್ನು ಗಳಿಸಿ ಸೋಲೊಪ್ಪಿಕೊಂಡಿತು. ಪೂಲಂಡ ಮತ್ತು ಕಾಳಿಮಾಡ ನಡುವಿನ ಪಂದ್ಯದಲ್ಲಿ ಕಾಳಿಮಾಡ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 29 ರನ್ ಗಳನ್ನು ಗಳಿಸಿ ಗೆಲುವು ಸಾಧಿಸಿತು. ಪೂಲಂಡ ತಂಡ 6 ವಿಕೆಟ್ ಗಳನ್ನು ಕಳೆದುಕೊಂಡು 28 ರನ್ ಗಳನ್ನು ಗಳಿಸಿ ಸೋಲು ಅನುಭವಿಸಿತು. ಸಿದ್ದಂಡ ಮತ್ತು ನಂದೇಟಿರ ನಡುವಿನ ಪಂದ್ಯದಲ್ಲಿ 3 ವಿಕೆಟ್ ನಷ್ಟಕ್ಕೆ 61 ರನ್ ಗಳನ್ನು ಗಳಿಸಿ ಸಿದ್ದಂಡ ಗೆಲುವು ಸಾಧಿಸಿತು. ನಂದೇಟಿರ 3 ವಿಕೆಟ್ ನಷ್ಟಕ್ಕೆ 60…






