ನಾಪೋಕ್ಲು ಮಾ.17 : 23ನೇ ಕೊಡವ ಕುಟುಂಬಗಳ ನಡುವಿನ ಅಪ್ಪಚೆಟ್ಟೋಳಂಡ ಹಾಕಿ ಉತ್ಸವಕ್ಕೆ ನಾಲ್ಕುನಾಡು ಸಜ್ಜಾಗುತ್ತಿದೆ. ಮಾ.18 ರಂದು ಉದ್ಘಾಟನೆಗೊಳ್ಳಲಿರುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ವಿವಿಧ ಮಂತ್ರಿಗಳು, ಚುನಾಯಿತ ಪ್ರತಿನಿಧಿಗಳು, ಗಣ್ಯರು ಭಾಗವಹಿಸಲಿದ್ದಾರೆ. ಈ ನಿಟ್ಟಿನಲ್ಲಿ ಕ್ರೀಡಾಕೂಟ ಜರುಗಲಿರುವ ಇಲ್ಲಿಗೆ ಸಮೀಪದ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಸ್ಥಳ ಪರಿಶೀಲಿಸಿ ಸಾಧಕ ಬಾಧಕಗಳ ಬಗ್ಗೆ ಆಯೋಜಕರಲ್ಲಿ ಚರ್ಚಿಸಿ ಕೆಲವೊಂದು ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಈ ಸಂದರ್ಭ ಡಿ ವೈಎಸ್ ಪಿ ಜಗದೀಶ್, ವೃತ ನಿರಿಕ್ಷಕ ಶೇಖರ್, ನಾಪೋಕ್ಲು ಠಾಣಾಧಿಕಾರಿ ಇ. ಮಂಜುನಾಥ್, ಹಾಕಿ ಉತ್ಸವದ ಆಯೊಜಕರಾದ ಅಪ್ಪಚೆಟ್ಟೋಳಂಡ ಮನುಮುತ್ತಪ್ಪ, ಅಪ್ಪಚೆಟ್ಟೋಳಂಡ ನವೀನ್ ಅಪ್ಪಯ್ಯ, ನಾಯಕಂಡ ದೀಪಕ್ ಚಂಗಪ್ಪ, ಕೇಲೇಟಿರ ದೀಪು ದೇವಯ್ಯ, ಕೆಲೇಟೀರ ಸುಬ್ರಮಣಿ, ಕೊಂಡಿರ ಚಂಗಪ್ಪ ಹಾಕಿ ಉತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು. ವರದಿ : ದುಗ್ಗಳ ಸದಾನಂದ.
ಲೇಖಕ: admin
ಮಡಿಕೇರಿ ಮಾ.17 : ಬಹುಭಾಷಾ ಚಿತ್ರನಟಿ ಕೊಡಗಿನ ಹರ್ಷಿಕಾ ಪೂಣಚ್ಚ ಅವರಿಗೆ ಭೋಜ್‍ಪುರಿ ಭಾಷೆಯಲ್ಲಿನ ಚಿತ್ರದ ಅಭಿನಯಕ್ಕಾಗಿ ಪ್ರಶಸ್ತಿ ದೊರೆತಿದೆ. ಭೋಜ್‍ಪುರಿ ಭಾಷಾ ಸಿನಿಮಾ ‘ಹಮ್ ಹೆ ರಾಜಿ ಪ್ಯಾರ್ ಕೆ’ ಚಿತ್ರದಲ್ಲಿ ಇವರು 2012ರಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಮೊದಲ ಚಿತ್ರದಲ್ಲೇ ನೀಡಿರುವ ಉತ್ತಮ ಅಭಿನಯಕ್ಕಾಗಿ ‘ಬೆಸ್ಟ್ ಡೆಬ್ಯೂ ಆಕ್ಟ್ರೆಸ್’ ಪ್ರಶಸ್ತಿ ನೀಡಲಾಗಿದೆ. ದುಬಾಯಿಯಲ್ಲಿ ಇಂಟರ್ ನ್ಯಾಷನಲ್ ಭೋಜ್‍ಪುರಿ ಫಿಲಂ ಅವಾರ್ಡ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹರ್ಷಿಕಾ ಐ.ಬಿ.ಎಫ್.ಎ.ಪ್ರಶಸ್ತಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಭೋಜ್‍ಪುರಿ ಭಾಷಾ ಚಿತ್ರ ತಂಡದ ಬಹುತೇಕ ಪ್ರಮುಖ ನಟ-ನಟಿಯರು, ಬಾಲಿವುಡ್ ನಟ ಗೋವಿಂದ್ ಸೇರಿದಂತೆ ಬಾಲಿವುಡ್‍ನ ತಾರೆಯರು ಪಾಲ್ಗೊಂಡಿದ್ದರು.
ಪುನೀತ್ ರಾಜ್ಕುಮಾರ್ ಅವರ ಜನ್ಮದಿನದ ಪ್ರಯುಕ್ತ ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿರುವ ಪುನೀತ್ ಸಮಾಧಿಗೆ ಪುನೀತ್ ಸೋದರ ನಟ ರಾಘವೇಂದ್ರ ರಾಜ್ ಕುಮಾರ್ ಕುಟುಂಬಸ್ಥರು, ಪುನೀತ್ ಪುತ್ರಿ ವಂದಿತಾ ತೆರಳಿ ಅವರ ಇಷ್ಟದ ತಿನಿಸುಗಳು, ಕೇಕ್ ಇಟ್ಟು ಕತ್ತರಿಸಿ, ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದ್ದಾರೆ. ಈ ವೇಳೆ ಪುನೀತ್ ಅಭಿಮಾನಿಗಳು ಸಹ ಹಾಜರಿದ್ದರು. ಸಮಾಧಿಗೆ ಪೂಜೆ: ಅಶ್ವಿನಿ ಪುನೀತ್ ರಾಜ್ ಕುಮಾರ್, ನಟ ಶಿವರಾಜ್ ಕುಮಾರ್ ಕುಟುಂಬ ಸೇರಿದಂತೆ ಇತರರು ಸಮಾಧಿ ಬಳಿ ಬಂದು ಪೂಜೆ ಸಲ್ಲಿಕೆ ಮಾಡಲಿದ್ದಾರೆ.
ಮಡಿಕೇರಿ ಮಾ.16 : ನಗರದ ರಸ್ತೆಗಳ ದುರಸ್ತಿ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದ್ದು, ಜನಪ್ರತಿನಿಧಿಗಳಿಗೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಆಸಕ್ತಿ ಇಲ್ಲವೆಂದು ನಗರಸಭಾ ಮಾಜಿ ಉಪಾಧ್ಯಕ್ಷೆ ಲೀಲಾ ಶೇಷಮ್ಮ ಟೀಕಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಸ್ತೆಗಳ ದುರಸ್ತಿಗೆಂದು ಭೂಮಿಪೂಜೆ ನಡೆದು ಗುದ್ದಲಿ ಸವಿಯಿತೇ ಹೊರತು ನಿರೀಕ್ಷಿತ ಮಟ್ಟದಲ್ಲಿ ಡಾಂಬರೀಕರಣ ಕಾರ್ಯ ನಡೆಯುತ್ತಿಲ್ಲ. ನಗರಸಭೆಯ 23 ವಾರ್ಡ್ ಗಳ ಸದಸ್ಯರ ಬೇಡಿಕೆಗೆ ಅನುಗುಣವಾಗಿ ಅನುದಾನ ಲಭಿಸುತ್ತಿಲ್ಲ. ನಗರದಲ್ಲಿ ಅಭಿವೃದ್ಧಿ ಕಾರ್ಯ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಗುಂಡಿ ಬಿದ್ದ ರಸ್ತೆಗಳಿಂದ ಅಪಾಯ ಎದುರಾಗುತ್ತಿದೆ, ಕೆಲವು ಬಡಾವಣೆಗಳಲ್ಲಿ ಮಾತ್ರ ಡಾಂಬರೀಕರಣ ಮಾಡಲಾಗಿದೆ. ಕಾಂಕ್ರೀಟ್ ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದೆ. ನಿರಂತರ ಭೂಮಿಪೂಜೆ ಮಾಡುವ ಮೂಲಕ ಜನರ ಕಣ್ಣೊರೆಸುವ ತಂತ್ರ ಅನುಸರಿಸಲಾಗುತ್ತಿದೆ. ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿ ನಗರದ ರಸ್ತೆಗಳು ಹೀನಾಯ ಸ್ಥಿತಿಯಲ್ಲಿರುವುದರಿಂದ ಪ್ರವಾಸಿಗರು ಕೂಡ ಬೇಸರ ಪಟ್ಟುಕೊಳ್ಳುತ್ತಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಜನಪ್ರತನಿಧಿಗಳು ರಸ್ತೆ ಅಭಿವೃದ್ಧಿ ಬಗ್ಗೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ, ಕಾಮಗಾರಿ ಯಾವ ಗುಣಮಟ್ಟದಲ್ಲಿದೆ ಎಂದು ಪರಿಶೀಲಿಸುತ್ತಿಲ್ಲ. ಜನಹಿತ…
ಮಡಿಕೇರಿ ಮಾ.16 : ರಸ್ತೆ ದುರಸ್ತಿಗೆಂದು ಸಾಲು ಸಾಲು ಭೂಮಿಪೂಜೆ ನೆರವೇರಿಸುವ ಮೂಲಕ ಜನರ ಕಣ್ಣಿಗೆ ಮಣ್ಣೆರೆಚುವ ಕಾರ್ಯವನ್ನು ನಗರಸಭೆ ಮಾಡುತ್ತಿದೆ ಎಂದು ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹೊಟ್ಟೆಯಂಡ ಫ್ಯಾನ್ಸಿ ಬೆಳ್ಯಪ್ಪ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ನಗರದ ಎಲ್ಲಾ ವಾರ್ಡ್ಗಳ ರಸ್ತೆಗಳನ್ನು ತಕ್ಷಣ ದುರಸ್ತಿ ಪಡಿಸದಿದ್ದಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ನಗರಸಭೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ರಸ್ತೆಗಳೆಲ್ಲವೂ ಸಂಪೂರ್ಣವಾಗಿ ಹೊಂಡಗುoಡಿಗಳಾಗಿವೆ, ವಾಹನಗಳು ಮಾತ್ರವಲ್ಲದೆ ಪಾದಾಚಾರಿಗಳ ಸಂಚಾರಕ್ಕೂ ಅಡಚಣೆಯಾಗಿದೆ. ದ್ವಿಚಕ್ರ ವಾಹನ ಸವಾರರು ರಸ್ತೆ ಗುಂಡಿ ತಪ್ಪಿಸುವ ಸಂದರ್ಭ ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿದೆ. ಚುನಾವಣೆ ಸಮೀಪಿಸಿತು ಎನ್ನುವ ಕಾರಣಕ್ಕೆ ಕೇವಲ ಭೂಮಿಪೂಜೆಗೆ ಅಭಿವೃದ್ಧಿಯನ್ನು ಸೀಮಿತಗೊಳಿಸುತ್ತಿರುವ ಜನಪ್ರತಿನಿಧಿಗಳು ಗುದ್ದಲಿಗೆ ಬೆಲೆ ಇಲ್ಲದಂತೆ ಮಾಡಿದ್ದಾರೆ. ರಸ್ತೆಗಳ ಮರು ಡಾಂಬರೀಕರಣಕ್ಕೆ ಕೋಟಿ ಕೋಟಿ ಹಣ ಬಂದಿದೆ ಎಂದು ಹೇಳಿಕೆಗಳನಷ್ಟೇ ನೀಡುತ್ತಿದ್ದಾರೆ. ಆದರೆ ಮರು ಡಾಂಬರೀಕರಣ ಕಾರ್ಯ ಮಾಡದೆ ತೇಪೆ ಹಾಕಲಾಗುತ್ತಿದೆ. ಕಾಂಕ್ರೀಟ್ ರಸ್ತೆಗಳಿಗೂ ಡಾಂಬರಿನ ತೇಪೆ ಹಾಕುವ…
ಕುಶಾಲನಗರ ಮಾ.16 : ದಲಿತ ಯುವತಿಯ ಅನುಮಾನಾಸ್ಪದ ಸಾವಿಗೆ ಸಂಬoದಿಸಿದoತೆ ಯುವತಿಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ಯುವತಿಯ ಕುಟುಂಬಸ್ಥರು ಹಾಗೂ ದಲಿತ ಸಂಘಟನೆಗಳ ಪ್ರಮುಖರು ಯುವಕನ ಮನೆ ಮುಂಭಾಗ ಯುವತಿಯ ಶವವನ್ನಿಟ್ಟು ಪ್ರತಿಭಟನೆ ನಡೆಸಿದರು. ಅಂತರ್ಜಾತಿ ವಿವಾಹವಾಗಿದ್ದ ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಗ್ರಾಮದ ಅಕ್ಷಿತಾ ಎಂಬಾಕೆ ಪತಿಯ ಮನೆ ಸೇರಿದ ನಾಲ್ಕೇ ದಿನದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಳು. ಕೊಲೆ ಎಂದು ಆರೋಪಿಸಿ, ಯುವತಿಯ ಕುಟುಂಬಸ್ಥರು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆ ವಿವಾಹವಾದ ಯುವಕ ಹೇಮಂತ್ ಹಾಗೂ ಆತನ ತಂದೆ, ತಾಯಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಹೇಮಂತ್ ಕ್ರಿಮಿನಾಶಕ ಸೇವಿಸಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಈ ನಡುವೆ ಇಂದು ಈತನ ತಾಯಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತಂದೆಯನ್ನು ಇಲ್ಲಿಯವರೆಗೆ ಬಂಧಿಸಿಲ್ಲವೆoದು ಅಸಮಾಧಾನ ವ್ಯಕ್ತಪಡಿಸಿದ ಅಕ್ಷಿತಾ ಕುಟುಂಬಸ್ಥರು, ಯುವಕನ ಮನೆ ಮುಂದೆ ಮೃತ ಶರೀರವನ್ನು ಇಟ್ಟು ಪ್ರತಿಭಟನೆ ನಡೆಸಿದರು. ದಲಿತ ಸಂಘಟನೆಗಳ ಪ್ರಮುಖರು ಇವರ ಬೆಂಬಲಕ್ಕೆ ನಿಂತರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ…
ಮಡಿಕೇರಿ ಮಾ.16 : ದೇಶ ಮತ್ತು ಸಮಾಜದ ರಕ್ಷಣೆ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಪಕ್ಷದ ವಕ್ತಾರರು ಹಾಗೂ ವಿಧಾನಪರಿಷತ್ ಸದಸ್ಯರಾದ ತೇಜಸ್ವಿನಿ ರಮೇಶ್ ಅಭಿಪ್ರಾಯಪಟ್ಟಿದ್ದಾರೆ. ಕುಶಾಲನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಎಸ್ ಸಿ ಮೋರ್ಚಾ ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಸ್ ಸಿ ಸಮುದಾಯವನ್ನು ಮುಖ್ಯ ವಾಹಿನಿಗೆ ತರಲು ಹಲವು ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತಂದಿದೆ ಎಂದರು. ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನೇ ತರುವ ನಿಟ್ಟಿನಲ್ಲಿ ಎಲ್ಲರ ಬೆಂಬಲ ಅಗತ್ಯ ಎಂದರು. ಈ ಸಂದರ್ಭ ಮಾತನಾಡಿದ ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಶಾಸಕ ಕೆ.ಜಿ.ಬೋಪಯ್ಯ ಕಾಂಗ್ರೆಸ್ ಸರ್ಕಾರದ ಸಂದರ್ಭ ಎಸ್‌ಸಿ ಸಮುದಾಯವನ್ನು ಭಯದ ವಾತಾವರಣದಲ್ಲಿ ಇರಿಸುವ ಮೂಲಕ ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದರು ಎಂದು ಹೇಳಿದರು. ಬಿಜೆಪಿ ಸರಕಾರ ಬಂದ ನಂತರ ಡಾ. ಅಂಬೇಡ್ಕರ್ ಅವರಿಗೆ ಹೆಚ್ಚಿನ ಗೌರವ ಸಂದಿದೆ ಎಂದರು. ಬಿಜೆಪಿ ಯಾವುದೇ ವರ್ಗಕ್ಕೆ ಸೀಮಿತ ಪಕ್ಷ ಅಲ್ಲ ಎಂದ ಕೆ.ಜಿ ಬೋಪಯ್ಯ,…
ಮಡಿಕೇರಿ ಮಾ.16 : ಯುವ ಪತ್ರಕರ್ತ ಹಾಗೂ ಬರಹಗಾರ ಕೆ.ಎಂ ಇಸ್ಮಾಯಿಲ್ ಕಂಡಕರೆ ಅವರ, ಮಾವನ ಮಗಳ ಪತಿ ಕಬಡಕ್ಕೇರಿ ಮುಸ್ಲಿಂ ಜಮಾಹತ್ ಕಮಿಟಿ ಕಾರ್ಯದರ್ಶಿ ಹಾಶಿಮ್ ಕಬಡಕ್ಕೇರಿ ಅನಾರೋಗ್ಯದಿಂದ ನಿಧಾನರಾಗಿದ್ದಾರೆ. ಇವರ ಹೆಸರಿನಲ್ಲಿ ಶುಕ್ರವಾರ ಮಯ್ಯತ್ ನಮಾಜ್ ಹಾಗೂ ಕುರುಆನ್ ಪಠಿಸಿ, ವಿಶೇಷ ದುಆ ಮಾಡಬೇಕಾಗಿ ಪತ್ರಕರ್ತ ಇಸ್ಮಾಯಿಲ್ ಕಂಡಕರೆ ಮನವಿ ಮಾಡಿದ್ದಾರೆ.
ಶನಿವಾರಸಂತೆ ಮಾ.16 : ಅಂಗಡಿಗಳಿಗೆ ಹೊರಗಡೆಯಿಂದ ಸರಕು ಸಾಮಾನುಗಳನ್ನು ತರುವ ವಾಹನಗಳಿಗೆ ಸುಂಕ ವಸೂಲಾತಿ ಮಾಡದಂತೆ ಕೊಡ್ಲಿಪೇಟೆ ವರ್ತಕರ ಸಂಘ ಮನವಿ ಮಾಡಿದೆ. ವರ್ತಕರ ಸಂಘದ ಅಧ್ಯಕ್ಷ ಎಚ್.ಸಿ.ಯತೀಶ್‌ಕುಮಾರ್ ನೇತೃತ್ವದಲ್ಲಿ ಕೊಡ್ಲಿಪೇಟೆ ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಹೂವಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದ ಸಂಘದ ಪ್ರಮುಖರು ಹಾಗೂ ಪದಾಧಿಕಾರಿಗಳು, ಕೊಡ್ಲಿಪೇಟೆ ಪಟ್ಟಣದಲ್ಲಿ ಅಂಗಡಿಗಳಿಗೆ ಸರಕು ಸಾಮಾಗ್ರಿಗಳನ್ನು ತರುತ್ತಿರುವ ವಾಹನಗಳಿಗೆ ದುಬಾರಿ ಶುಲ್ಕ ವಸೂಲಾತಿ ಮಾಡುತ್ತಿದ್ದು, ಇದರಿಂದ ಅಂಗಡಿಗಳಿಗೆ ಸಾಮಾಗ್ರಿ ಸರಬರಾಜು ಮಾಡುವ ವಾಹನಗಳು ಬರುತ್ತಿಲ್ಲ ಹಾಗೂ ಹೊಟೇಲ್ , ಇತರೆ ಅಂಗಡಿಗಳಿಗೆ ಭೇಟಿ ನೀಡುವ ಟೂರಿಸ್ಟ್ ವಾಹನಗಳಿಗೂ ಸಹ ಸುಂಕ ವಿಧಿಸುತ್ತಿರುವುದರಿಂದ ವಾಹನಗಳು ಬರುತ್ತಿಲ್ಲ. ಈ ಕಾರಣದಿಂದ ವರ್ತಕರಿಗೆ ವ್ಯಾಪಾರ ವ್ಯವಹಾರ ಮಾಡಲು ಕಷ್ಟವಾಗುತ್ತಿದೆ ಎಂದು ವರ್ತಕರು ಬೇಸರ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಗ್ರಾ.ಪಂ.ಯವರು ಅಂಗಡಿಗಳಿಗೆ ಸರಕು ಸಾಮಾಗ್ರಿ ಸರಬರಾಜು ಮಾಡುವ ವಾಹನಗಳಿಗೆ ಮತ್ತು ಟೂರಿಸ್ಟ್ ವಾಹನಗಳಿಗೆ ಸುಂಕವನ್ನು ವಿಧಿಸದೆ ವರ್ತಕರಿಗೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿದ್ದಾರೆ. ಈ ಸಂದರ್ಭ ವರ್ತಕರ ಸಂಘದ ಪ್ರಮುಖರಾದ ಎಚ್.ಎಂ.ದಿವಾಕರ್,…
ಮಡಿಕೇರಿ ಮಾ.16 : ಶನಿವಾರಸಂತೆ- ಕೊಡಗು ಹಾಸನ ಜಿಲ್ಲಾ ಗಡಿಭಾಗದಲ್ಲಿರುವ ಕೊಡಗು ಜಿಲ್ಲೆಗೆ ದಿನನಿತ್ಯದ ಒಡನಾಟ ಹೊಂದಿರುವ ಸಕಲೇಶಪುರ ತಾಲೂಕಿಗೆ ಸೇರಿದ ಈಚಲಬೀಡು ಗ್ರಾಮದಲ್ಲಿ ಮಾ.19ರಂದು ಸಕಲೇಶಪುರ ತಾಲೂಕು ಮಟ್ಟದ ಮಲೆನಾಡು ಜಾನಪದ ಉತ್ಸವ ನಡೆಯಲಿದೆ ಎಂದು ಕರ್ನಾಟಕ ಜಾನಪದ ಪರಿಷತ್ ಸಕಲೇಶಪುರ ತಾಲೂಕು ಘಟಕದ ಅಧ್ಯಕ್ಷ ದೊಡ್ಡ ಮನೆ ಆನಂದ್ ಹೇಳಿದರು. ಶನಿವಾರಸಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜಾನಪದ ಸೊಗಡು ದೇಶಿಯ ಸಂಸ್ಕೃತಿಯಾಗಿದ್ದು, ಈ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ತಾಲೂಕು ಜಿಲ್ಲಾ ರಾಜ್ಯ ಮಟ್ಟದ ಜಾನಪದ ಉತ್ಸವಗಳನ್ನು ನಡೆಸಲಾಗುತ್ತಿದೆ. ಈ ದಿಶೆಯಲ್ಲಿ ಸಕಲೇಶಪುರ ತಾಲೂಕು ಘಟಕದ ವತಿಯಿಂದ ಮಾ.19ರಂದು ಕೊಡಗು ಹಾಸನ ಗಡಿ ಭಾಗದಲ್ಲಿರುವ ಈಚಲಬೀಡು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಮಟ್ಟದ ಮಲೆನಾಡು ಜಾನಪದ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಮಲೆನಾಡು ಜಾನಪದ ಉತ್ಸವ ದೊಡ್ಡ ಮಟ್ಟದಲ್ಲಿ ನಡೆಯುತ್ತದೆ ಜಿಲ್ಲೆ ಅಕ್ಕಪಕ್ಕದ ಜಿಲ್ಲೆಯ ಕಡೆಗಳಿಂದಲೂ ಜಾನಪದ ಉತ್ಸವದಲ್ಲಿ ಜನರು ಪಾಲ್ಗೊಳ್ಳಲಿದ್ದು ಉತ್ಸವದಲ್ಲಿ…






