ಮಡಿಕೇರಿ ಮಾ.17 : ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಿರಂತರವಾಗಿ ಹೋರಾಟ ನಡೆಸುತ್ತಲೇ ಬರುತ್ತಿದೆ. ಆದರೆ ಇತ್ತೀಚೆಗೆ ಕೆಲವರು ಕೊಡವರ ಹೆಸರಿನಲ್ಲಿ ಕೊಡವ ಸಮುದಾಯದ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಆರೋಪಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪ್ರತಿಮ ದೇಶಪ್ರೇಮಿ ಕೊಡವರನ್ನು ಅನ್ಯಾಯವಾಗಿ ಧಮನಿಸುವ ಪ್ರಯತ್ನಗಳು ನಡೆಯುತ್ತಿದೆ. ಈ ದೇಶದ ಸರ್ವಜನರಿಗೂ ಸಂವಿಧಾನದ ಆಶಯದಂತೆ ಹಕ್ಕು ನೀಡಬೇಕು ಆ ಹಕ್ಕನ್ನು ರಾಜ್ಯದಲ್ಲಿರುವ ಮತ್ತು ಕೊಡಗಿನಲ್ಲಿರುವ ಹತ್ತಾರು ಇತರೆ ಸಮುದಾಯಗಳು ಅವರ ವಂಶವಾಹಿ ಮತ್ತು ಮೂಲ ಕುಲ ಕಸುಬಿನಂತೆ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಆದರೆ ತಮ್ಮ ಅಸಲಿಯತ್ತನ್ನು ಮರೆಮಾಚಿ ಕೊಡವರ ಹೆಸರಿನಲ್ಲಿ ಕೊಡವರಿಗೆ ದೊರಕುವ ಹಕ್ಕನ್ನು ಅಪಹರಿಸಿ ಧಕ್ಕಿಸಿಕೊಳ್ಳಬಾರದಷ್ಟೆ ಎಂದರು. ಕೊಡವ ಸಮುದಾಯಗಳು ಎಂಬ ಯಾವುದೇ ಗುಂಪುಗಳಿಲ್ಲ, ಕೇವಲ ಕೊಡವ ಸಮುದಾಯ ಎನ್ನುವ ಏಕೈಕ ಗುಂಪಿದೆ. ರಾಜ್ಯದ ಮುಖ್ಯಮಂತ್ರಿಗಳು ಜನಸಂಖ್ಯಾ ಶಾಸ್ತ್ರದ ಬಗ್ಗೆ ಮಾಹಿತಿ ಪಡೆದು ಚಾರಿತ್ರಿಕ…
ಲೇಖಕ: admin
ಮಡಿಕೇರಿ ಮಾ.17 : ವಿವೇಕಾನಂದ ಯೂತ್ ಮೂಮೆಟ್, ವನವಾಸಿ ಕಲ್ಯಾಣ ಕೊಡಗು, ಬಾಳೆಲೆ ಗ್ರಾ. ಪಂ ವತಿಯಿಂದ ಬಾಳೆಲೆ ವ್ಯಾಪ್ತಿಯ ಗಿರಿಜನ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ನಡೆಯಿತು. ಬಾಳೆಲೆ ಗ್ರಾ.ಪಂ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 21 ಮಂದಿ ಗಿರಿಜನ ಗರ್ಭಿಣಿ ಮಹಿಳೆಯರಿಗೆ ಸೀಮಂತರ ಮಾಡಲಾಯಿತು. ಈ ಸಂದರ್ಭ ಬಾಳೆಲೆ ಗ್ರಾ.ಪಂ ಅಧ್ಯಕ್ಷ ಪೊಡಮಾಡ ಸುಖೇಶ್ ಭೀಮಯ್ಯ ಮಾತನಾಡಿ, ಮುಂದಿನ ಪೀಳಿಗೆಗೆ ಆಧಾರ ಸ್ತಂಭಗಳಾದ ಗರ್ಭಿಣಿ ಸ್ತ್ರೀಯರು ಉತ್ತಮ ಆರೋಗ್ಯಕರ ಪದ್ಧತಿಯನ್ನು ರೂಢಿಸಿಕೊಂಡು ಮಗುವಿನ ಆರೋಗ್ಯದ ಕಡೆ ಗಮನಹರಿಸಬೇಕೆಂದು ಕರೆ ನೀಡಿದರು. ವೇದಿಕೆಯಲ್ಲಿ ಗ್ರಾ.ಪಂ ಸದಸ್ಯರಾದ ಮುಕ್ಕಾಟಿರ ಜಾನಕಿ, ತಾಲೂಕು ಶಿಸು ಕಲ್ಯಣ ಅಭಿವೃದ್ಧಿ ಅಧಿಕಾರಿ ರಾಜೇಶ್, ಮಹಿಳಾ ಆರೋಗ್ಯ ಪರಿವೀಕ್ಷಕರಾದ ಕಾವೇರಮ್ಮ, ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅಶೋಕ್ ಕುಮಾರ್, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸಂತೋಷ್, ಸ್ವಾಮಿ ವಿವೇಕಾನಂದ ಯೂತ್ ಮೂಮೆಟ್ ಕಾರ್ಯಕ್ರಮ ವ್ಯವಸ್ಥಾಪಕರಾದ ಕುಸುಮ, ಮೇಲ್ವಿಚಾರಕರಾದ ಶ್ರತೇಶ್, ಪ್ರಮುಖರಾದ ಪಡಿಞರಂಡ ಪ್ರಭುಕುಮಾರ್, ಅಂಗನವಾಡಿ ಕಾರ್ಯಕರ್ತೆಯರು ಆಶಾಕಾರ್ಯಕರ್ತೆಯರು ಹಾಗೂ ವಿವಿಧ…
ವಿರಾಜಪೇಟೆ ಮಾ.17 : ಕರ್ನಾಟಕ ಸರಕಾರದ ವತಿಯಿಂದ ನೀಡಲಾಗುವ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಪೂಮಾಲೆ ಪತ್ರಿಕೆ ಸಂಪಾದಕರು, ವಿರಾಜಪೇಟೆ ತಾಲೂಕು ಜಾನಪದ ಪರಿಷತ್ತಿನ ಗೌರವ ಅದ್ಯಕ್ಷರು ಆಗಿರುವ ಅಜ್ಜೀನಿಕಂಡ ಮಹೇಶ್ ನಾಚಯ್ಯ ಅವರನ್ನು ವಿರಾಜಪೇಟೆ ಜಾನಪದ ಪರಿಷತ್ತಿನ ವತಿಯಿಂದ ಅವರ ನಿವಾಸಕ್ಕೆ ತೆರಳಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇವರಿಗೆ ಮಾದ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು, 27 ವರ್ಷಗಳ ನನ್ನ ಪತ್ರಿಕೋದ್ಯಮದಲ್ಲಿ “ಕಾಯಕವೇ ಕೈಲಾಸ’ ಎಂಬಂತೆ ಬಂದ ನನ್ನ ಹಾದಿಯಲ್ಲಿ ಕಲ್ಲು ಮುಳ್ಳುಗಳನ್ನು ಹಲವು ಬಾರಿ ಮೆಟ್ಟಿದ್ದರೂ ಧೃತಿಗೆಡದೆ ಮುನ್ನುಗ್ಗಿದ್ದೇನೆ. ಇಂದಿಗೂ ನಾನಾಗಿ ಯಾವುದೇ ಪ್ರಶಸ್ತಿ, ಸನ್ಮಾನಗಳ ಹಿಂದೆ ಬಿದ್ದಿಲ್ಲ. ನನಗಾಗಿ ಒಲಿದು ಬಂದವು ಒಂದಿಷ್ಟು. ಇದರಲ್ಲಿ ಪ್ರತಿಷ್ಟಿತ ಮಾಧ್ಯಮ ಅಕಾಡೆಮಿಯ ರಾಜ್ಯ ಪ್ರಶಸ್ತಿಯು ದೊರಕಿರುವುದು ನನ್ನಲ್ಲಿ ಸಾರ್ಥಕತೆ ತಂದಿದೆ. ಕುಟುಂಬವೆಂಬಂತೆ ಆತ್ಮೀಯತೆಯ ನಂಟನ್ನು ಹೊತ್ತಿರುವ ನಮ್ಮ ಜಾನಪದ ಮನಸ್ಸುಗಳು, ಅದರಲ್ಲೂ ವೀರಾಜಪೇಟೆ ತಾಲೂಕು…
ಮಡಿಕೇರಿ ಮಾ.17 : ಗೋಸಂರಕ್ಷಣೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಗ್ರಾಮ ವ್ಯಾಪ್ತಿಗಳಲ್ಲಿನ ಗೋಮಾಳಗಳಿಗೆ ಆಯಾ ವ್ಯಾಪ್ತಿಯಲ್ಲಿನ ಗೋಶಾಲೆಗಳಿಂದ ಬೇಲಿ ಹಾಕಿ, ಜಾನುವಾರುಗಳ ಸಂರಕ್ಷಣೆಗೆ ರಾಜ್ಯ ವ್ಯಾಪಿ ಕಾರ್ಯಕ್ರಮ ರೂಪಿಸಲಾಗುವುದೆಂದು ಕುಶಾಲನಗರ ಬಳಿಯ ಚಿಕ್ಕತ್ತೂರು ಗ್ರಾಮದ ಶ್ರೀಕೃಷ್ಣ ಗೋ ಶಾಲೆಯ ಅಧ್ಯಕ್ಷರು ಹಾಗೂ ಪ್ರಾಣಿ ದಯಾ ಸಂಘದ ಸದಸ್ಯ ಹರೀಶ್ ಜಿ.ಆಚಾರ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಮಾಳಗಳನ್ನು ಯಾವುದೇ ಸಂಘ-ಸಂಸ್ಥೆಗಳು, ಟ್ರಸ್ಟ್‍ಗಳಿಗೆ ಕಾನೂನೂ ಬದ್ಧವಾಗಿ ನೀಡಲು ಬರುವುದಿಲ್ಲವೆಂದು ಸರ್ಕಾರ ತಿಳಿಸುತ್ತದೆ. ಆದರೆ, ಇದೇ ಗೋಮಾಳಗಳನ್ನು ಅತಿಕ್ರಮಿಸಿಕೊಂಡು ಸಾಕಷ್ಟು ಮಂದಿ ಮನೆಗಳನ್ನು ನಿರ್ಮಿಸಿದ ಪ್ರಕರಣಗಳಿವೆ. ಅವರನ್ನು ತೆರವು ಮಾಡಬೇಕೆಂದು ನಾವು ಹೇಳುತ್ತಿಲ್ಲ. ಆದರೆ, ಆ ಸಂದರ್ಭ ಮೌನವಾಗಿದ್ದ ಸರ್ಕಾರ ಗೋವುಗಳಿಗೆ ಅನುಕೂಲ ಮಾಡಿಕೊಡುವ ಗೋಶಾಲೆಗಳಿಗೆ ಗೋಮಾಳವನ್ನು ಒದಗಿಸಲು ಯಾಕೆ ಮುಂದಾಗುತ್ತಿಲ್ಲವೆಂದು ಪ್ರಶ್ನಿಸಿದರು. ಗೋಮಾಳಗಳಲ್ಲಿ ರೆಸಾರ್ಟ್, ಕಟ್ಟಡ ನಿರ್ಮಾಣ, ಕೃಷಿ ನಡೆಸುವುದಿಲ್ಲ ಮೊದಲಾದ ನಿರ್ಬಂಧಗಳನ್ನು ವಿಧಿಸಿ ಗೋಶಾಲೆಗಳಿಗೆ ಅದನ್ನು ಒದಗಿಸಿದಲ್ಲಿ ಗೋವುಗಳ ಸಂರಕ್ಷಣೆ ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಕಾಲ ಕ್ರಮೇಣ ಇರುವ ಗೋಮಾಳಗಳು ಅತಿಕ್ರಮಣಕ್ಕೆ ಒಳಗಾಗಿ ಗೋಮಾಳಗಳೇ…
ಮಡಿಕೇರಿ ಮಾ.17 : ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದರೂ ಕೊಡಗಿನ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಬಿಜೆಪಿ ಪ್ರತಿನಿಧಿಗಳು ವಿಫರಾಗಿರುವುದರಿಂದ ಭ್ರಮನಿರಸನಗೊಂಡಿರುವ ಜನ ಈ ಬಾರಿ ಬದಲಾವಣೆಯನ್ನು ಬಯಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಸಂಕೇತ್ ಪೂವಯ್ಯ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯ್ತಿಯಿಂದ ಹಿಡಿದು ಕೇಂದ್ರದವರೆಗೆ ಬಿಜೆಪಿ ಅಧಿಕಾರದಲ್ಲಿರುವುದಲ್ಲದೆ, ಜಿಲ್ಲೆಯ ಎರಡು ಕ್ಷೇತ್ರಗಳಲ್ಲು ಬಿಜೆಪಿ ಶಾಸಕರಿದ್ದಾರೆ. ಹೀಗಿದ್ದೂ ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಇವರುಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು. ಕೊಡಗಿನ ಪ್ರಮುಖ ಕೃಷಿಯಾಗಿರುವ ಕಾಫಿ ವಾಣಿಜ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ. ಈ ಕೃಷಿಗೆ ಸಂಬಂಧ ಪಟ್ಟಂತೆ ಸೂಕ್ತ ಆಮದು ನೀತಿಯನ್ನು ರೂಪಿಸುವುದು ಸೇರಿದಂತೆ ಯಾವುದೇ ಗಂಭೀರ ವಿಚಾರಗಳ ಬಗ್ಗೆ ಬಿಜೆಪಿ ಸೂಕ್ತ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಸೋತಿದೆಯೆಂದು ಆರೋಪಿಸಿದ ಅವರು, ಜಿಲ್ಲೆಯಲ್ಲಿ ದಿನೇ ದಿನೇ ಮಾನವ ಮತ್ತು ವನ್ಯ ಜೀವಿಗಳ ಸಂಘರ್ಷ ಹೆಚ್ಚುತ್ತಿದೆಯಾದರು ಇದಕ್ಕೆ ವೈಜ್ಞಾನಿಕವಾದ ಶಾಶ್ವತ ಪರಿಹಾರ ರೂಪಿಸುವಲ್ಲಿ ಬಿಜೆಪಿ ವಿಫಲವಾಗಿದೆಯೆಂದು ಹೇಳಿದರು. ವನ್ಯಜೀವಿಗಳ ಹಾವಳಿ ಸೇರಿದಂತೆ…
ಮಡಿಕೇರಿ ಮಾ.17 : ನಗರಸಭೆಯ 2023-24ನೇ ಸಾಲಿನ ಆಯವ್ಯಯ ಮಂಜೂರಾತಿಗೆ ಮಾರ್ಚ್, 20 ರಂದು ಬೆಳಗ್ಗೆ 11.30 ಗಂಟೆಗೆ ನಗರಸಭೆ ಕೌನ್ಸಿಲ್ ವಿಶೇಷ ಸಭೆಯು ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ನಗರಸಭಾ ಕೌನ್ಸಿಲ್ ಸಭಾಂಗಣದಲ್ಲಿ ನಡೆಯಲಿದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಮಡಿಕೇರಿ ಮಾ.17 : ಕೊಡಗು ಜಿಲ್ಲೆಯಾದ್ಯಂತ ಕ.ವಿ.ಪ್ರ.ನಿ.ನಿ.ರವರ ಕೋರಿಕೆಯ ಮೇರೆಗೆ ತುರ್ತು ನಿರ್ವಹಣೆ ಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ಮಾರ್ಚ್, 19 ರಂದು ಬೆಳಗ್ಗೆ 11 ರಿಂದ ಸಂಜೆ 3 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಕೊಡಗು ಜಿಲ್ಲಾ ವ್ಯಾಪ್ತಿಯ ಗ್ರಾಹಕರು/ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.
ಮಡಿಕೇರಿ ಮಾ.17 : ಕರ್ನಾಟಕ ಜೀವ ವೈವಿಧ್ಯ ಮಂಡಳಿ ಹಾಗೂ ಅರಣ್ಯ ಇಲಾಖೆ ವತಿಯಿಂದ ಕೊಡಗು ಜಿಲ್ಲೆಯ ಹಾರಂಗಿಯಲ್ಲಿ ಉದ್ದೇಶಿತ ‘ಜೀವ ವೈವಿಧ್ಯ ಔಷಧ ಉದ್ಯಾನ’ ನಿರ್ಮಾಣ ಕಾರ್ಯಕ್ಕೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಭೂಮಿ ಪೂಜೆ ನೆರವೇರಿಸಿದರು. ಹಾರಂಗಿ ವೃಕ್ಷೋದ್ಯಾನವನ ಆವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಶಿಲಾನ್ಯಾಸ ಫಲಕ ಅನಾವರಣಗೊಳಿಸಿ, ಸಾಂಕೇತಿಕವಾಗಿ ಔಷಧಿಯ ಗಿಡಗಳನ್ನು ನೆಡುವ ಮೂಲಕ ಉದ್ದೇಶಿತ ಯೋಜನೆಗೆ ಚಾಲನೆ ನೀಡಿದರು. ಔಷಧೀಯ ಸಸ್ಯಗಳನ್ನು ಬೆಳೆಸಿ, ಅವುಗಳ ಮಹತ್ವವನ್ನು ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ತಿಳಿಸುವ ನಿಟ್ಟಿನಲ್ಲಿ 2.5 ಹೆಕ್ಟೇರ್ ಪ್ರದೇಶದಲ್ಲಿ ‘ಜೀವ ವೈವಿಧ್ಯ ಔಷಧ ಉದ್ಯಾನ’ ನಿರ್ಮಿಸಲು ಮಂಡಳಿ ಮುಂದಾಗಿದೆ. ಚಾಲನೆ ನೀಡಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅಪ್ಪಚ್ಚು ರಂಜನ್ ಅವರು ಔಷಧ ಉದ್ಯಾನ ನಿರ್ಮಾಣಕ್ಕೆ ಹಾರಂಗಿ ಉತ್ತಮ ಜಾಗ. ಔಷಧಿ ಸಸ್ಯಗಳನ್ನು ಉಳಿಸುವ ಕಾರ್ಯ ನಿರಂತರವಾಗಿ ಆಗಬೇಕು. ನಮ್ಮ ಪರಿಸರ ಉಳಿದರೆ ಮಾತ್ರ ಜೀವರಾಶಿಗಳು ಬದುಕಲು ಸಾಧ್ಯ ಎಂದರು. ಭಾರತೀಯರು ಪ್ರಕೃತಿ ಆರಾಧಕರು.…
ಮಡಿಕೇರಿ ಮಾ.17 : ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ವತಿಯಿಂದ ಕೊಡಗಿನ ಏಲಕ್ಕಿ ಬೆಳೆಗಾರರಿಂದಲೇ ಖರೀದಿಸಿದ ಅಪ್ಪಟ ಏಲಕ್ಕಿಯಿಂದ ಘಮಘಮಿಸುವ ಆಕರ್ಷಕ ಏಲಕ್ಕಿ ಹಾರ ತಯಾರಿಸಿ ಶೀಘ್ರ ಮಾರುಕಟ್ಟೆಗೆ ಬಿಡಲಾಗುವುದು ಎಂದು ಸಂಘದ ಅಧ್ಯಕ್ಷ ಸೂದನ ಎಸ್.ಈರಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗಿನ ಏಲಕ್ಕಿ ವಿಶ್ವ ಪ್ರಸಿದ್ಧವಾಗಿದ್ದು, ಸಭೆ-ಸಮಾರಂಭ ಮತ್ತಿತರ ಕಾರ್ಯಕ್ರಮಗಳಲ್ಲಿ ಏಲಕ್ಕಿ ಹಾರವನ್ನು ಬಳಸುವುದರಿಂದ ಬೆಳೆಗಾರರಿಗೂ ಸಹಕಾರಿಯಾಗಲಿದೆ. ಏಲಕ್ಕಿ ಹಾರವನ್ನು ಹೂವಿನ ಹಾರದಂತೆ ಎಸೆಯುವ ಅಗತ್ಯವಿಲ್ಲ, ಇದು ಸಂಗ್ರಹ ಯೋಗ್ಯವಾಗಿದೆ. ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೂ ಏಲಕ್ಕಿ ಹಾರವನ್ನು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಕೊಡಗಿನ ಬೆಳೆಗಾರರರು ಬೆಳೆದ ಗುಣಮಟ್ಟದ ಏಲಕ್ಕಿಯಿಂದ ಉತ್ತಮ ಮತ್ತು ಆಕರ್ಷಕ ಏಲಕ್ಕಿ ಹಾರವನ್ನು ತಯಾರಿಸಲಾಗುವುದು. ಸ್ಥಳೀಯ ಹಾರ ತಯಾರಕರನ್ನು ಗುರುತಿಸಿ ಅಗತ್ಯವಿದ್ದರೆ ಸಂಘದಿಂದಲೇ ತರಬೇತಿ ನೀಡಲಾಗುವುದು. ವಿವಿಧ ಗಾತ್ರದ ಹಾರ ತಯಾರಿಸಿ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಏಲಕ್ಕಿ ಮಾರಾಟ ಸಹಕಾರ…
ಮಡಿಕೇರಿ ಮಾ.17 : ಪರಿಶಿಷ್ಟ ಜಾತಿ ಮತ್ತು ಪಂಗಡದ ಹೆಸರಿನಲ್ಲಿ ನಕಲಿ ಪ್ರಮಾಣ ಪತ್ರ ಪಡೆದು ಸರಕಾರಿ ಸೌಲಭ್ಯ ಪಡೆಯುತ್ತಿರುವ ವಂಚಕರನ್ನು ಪತ್ತೆಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಜೆ.ಆರ್.ಪಾಲಾಕ್ಷ ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಜಿಲ್ಲೆಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರದ ಹಾವಳಿ ಹೆಚ್ಚಾಗುತ್ತಿದ್ದು, ಪರಿಶಿಷ್ಟರ ಮೀಸಲಾತಿ ಸೌಲಭ್ಯವನ್ನು ವಂಚಕರು ಪಡೆದುಕೊಳ್ಳುತ್ತಿದ್ದಾರೆ. ಸೋಮವಾರಪೇಟೆ ತಾಲ್ಲೂಕಿನ ಕೊಡ್ಲಿಪೇಟೆಯ ಲಕ್ನಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಪರಿಶಿಷ್ಟ ಜಾತಿಗೆ ಸೇರಿದವರೆಂದು ಸುಳ್ಳು ಜಾತಿ ದೃಢೀಕರಣ ಪತ್ರ ಪಡೆದು ಸರ್ಕಾರಿ ಯೋಜನೆಯಡಿ ಮನೆಯ ಪಕ್ಕದಲ್ಲೇ ರಸ್ತೆ ಮಾಡಿಸಿಕೊಂಡಿದ್ದಾರೆ. ಸಣ್ಣ ಕೈಗಾರಿಕಾ ಇಲಾಖೆಯಿಂದ ಹಾಗೂ ಅಂಬೇಡ್ಕರ್ ನಿಗಮದಿಂದ ಸಾಲ ಸೌಲಭ್ಯ ಪಡೆದುಕೊಂಡು ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ. ಅಲ್ಲದೆ ಕೊಡ್ಲಿಪೇಟೆಯ ವ್ಯಕ್ತಿಯೊಬ್ಬರು ಸುಳ್ಳು ದೃಢೀಕರಣ ಪತ್ರ ಪಡೆದು ಸರ್ಕಾರದ ಸೌಲಭ್ಯಗಳನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅಲ್ಲಿನ ಗ್ರಾಮಸ್ಥರು ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರೂ ಯಾವುದೇ…






