ಲೇಖಕ: admin

ಮಡಿಕೇರಿ ಮಾ.17 : ಹೊದ್ದೂರು ಗ್ರಾ.ಪಂ ವ್ಯಾಪ್ತಿಯ ಪಾಲೇಮಾಡು ಕಾನ್ಶಿರಾಂ ನಗರದ ಬಡಜನತೆಗೆ ಅಕ್ರಮ ಸಕ್ರಮದಡಿ ಜಾಗ ಮಂಜೂರು ಮಾಡದಿದ್ದಲ್ಲಿ ವಿಧಾನಸಭೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಲೇಮಾಡು ನಿವಾಸಿ ಪಿ.ಎ.ಧನಂಜಯ ಭೂಮಾಲೀಕರು ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಾಗವನ್ನು 30 ವರ್ಷಗಳಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ತಯಾರಿರುವ ಸರ್ಕಾರ ಬಡವರ ಸ್ವಾಧೀನದಲ್ಲಿರುವ 5- 10 ಸೆಂಟ್ ಜಾಗಕ್ಕೆ ಯಾಕೆ ಹಕ್ಕುಪತ್ರ ನೀಡುತ್ತಿಲ್ಲವೆಂದು ಪ್ರಶ್ನಿಸಿದರು. ಒಂದು ಸಣ್ಣ ಸೂರಿಗಾಗಿ 94ಸಿ, 94ಸಿಸಿ ಯಡಿ ಅರ್ಜಿ ಸಲ್ಲಿಸಿ ವರ್ಷಗಟ್ಟಲೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಅಕ್ರಮ ಸಕ್ರಮದಡಿ ನೀಡಲಾಗಿರುವ ಬಡವರ ಅರ್ಜಿ ತಿರಸ್ಕೃತವಾಗುತ್ತಿದ್ದು, ಸರ್ಕಾರ ಬಡವರ ಬಗ್ಗೆ ಮಲತಾಯಿ ಧೋರಣೆ ಪ್ರದರ್ಶಿಸುತ್ತಿದೆ. ಕಳೆದ 15 ವರ್ಷಗಳಿಂದ ಪಾಲೇಮಾಡಿನ ಕಾನ್ಶಿರಾಂ ನಗರದಲ್ಲಿ 260 ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಹಕ್ಕುಪತ್ರ ಮತ್ತು ಮೂಲಭೂತ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿವೆ. ಈ ಬಗ್ಗೆ ಅನೇಕ ವರ್ಷಗಳಿಂದ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯುತ್ತಾ…

Read More

ಮಡಿಕೇರಿ ಮಾ.17  : ಶತಶತಮಾನಗಳ ಇತಿಹಾಸವಿರುವ ಹಾಗೂ ಉದ್ಭವ ಶಿವಲಿಂಗವೆಂಬ ಖ್ಯಾತಿ ಹೊಂದಿರುವ ಪೊನ್ನಂಪೇಟೆ ತಾಲ್ಲೂಕಿನ ಕುಂದಾ ಮುಗುಟಿಗೇರಿ ಗ್ರಾಮದಲ್ಲಿರುವ “ಬೊಟ್ಟಿಯತ್ ನಾಡ್” ಈಶ್ವರ  ದೇವಾಲಯದ (ನಾಡ್ ದೇವಸ್ಥಾನ) ವಾರ್ಷಿಕೋತ್ಸವವು ಅವಭೃತ ಸ್ನಾನದೊಂದಿಗೆ (ದೇವ ಕುಳಿಪೋ) ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು. ಕುಂದಾ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಈಶ್ವರ ದೇವಾಲಯಕ್ಕೆ  ಸಾವಿರಾರು ವರ್ಷಗಳ ಇತಿಹಾಸವಿದ್ದು,  ಈ ಭಾಗದ ಆರು ಗ್ರಾಮಗಳಾದ ಮುಗುಟಿಗೇರಿ, ಕುಂದಾ, ಈಚೂರ್, ಹುದೂರ್, ಹಳ್ಳಿಗಟ್ಟ್ ಹಾಗೂ ಅರ್ವತೋಕ್ಲು ಗ್ರಾಮಗಳಿಗೆ ಸೇರಿರುವ ನಾಡ್ ದೇವಸ್ಥಾನ ಇದಾಗಿದೆ.  ಬೊಟ್ಟಿಯತ್ ನಾಡ್ ಈಶ್ವರ ದೇವಸ್ಥಾನವೆಂದು ಖ್ಯಾತಿ ಪಡೆದಿರುವ ಈ ದೇವಾಲಯದಲ್ಲಿ ನಿತ್ಯ ಪೂಜೆಯ ಜೊತೆಗೆ, ವಿವಿಧ ಪೂಜಾ ಕೈಂಕರ್ಯಗಳು ಪ್ರತಿನಿತ್ಯ ನಡೆಯುತ್ತದೆ. ಪ್ರತಿವರ್ಷ ಮಾರ್ಚ್ ತಿಂಗಳಲ್ಲಿ ವಾರ್ಷಿಕ ಹಬ್ಬ ನಡೆಯಲಿದ್ದು, ಈ ಬಾರಿ  ಕೊಡಿಮರೆ ನಿಲ್ಲಿಸುವುದರ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಗಿತ್ತು. ಉತ್ಸವದ ಪ್ರತಿನಿತ್ಯ ಮಧ್ಯಾಹ್ನ ಹಾಗೂ ರಾತ್ರಿ ನಿರಂತರ ಅನ್ನಸಂತರ್ಪಣೆ ಕಾರ್ಯಕ್ರಮದೊಂದಿಗೆ ಹರಕೆ ಬೊಳಕ್, ಅಲಂಕಾರ ಪೂಜೆ ಸೇರಿದಂತೆ 9ದಿನಗಳ ಕಾಲ ವಿವಿಧ ಪೂಜಾ…

Read More

ಮಡಿಕೇರಿ ಮಾ.17 : ಜಿಲ್ಲಾಡಳಿತ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯ ಫಲಾನುಭವಿಗಳ ಸಮ್ಮೇಳನದ ಜೊತೆಗೆ ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಸಮಾರಂಭ ಹಿನ್ನೆಲೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಸಾಧ್ಯತೆ ಇದೆ. ಆದ್ದರಿಂದ ಮಾ.18 ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆ ವರೆಗೆ ಸಂಚಾರ ಮತ್ತು ವಾಹನ ನಿಲುಗಡೆ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ಅವರು ತಿಳಿಸಿದ್ದಾರೆ. ಬದಲಾವಣೆ ಮಾಡಲಾಗಿರುವ ಸ್ಥಳಗಳ ಮಾಹಿತಿ ಇಂತಿದೆ: ಮಡಿಕೇರಿ ನಗರದ ಮೇಜರ್ ಮಂಗೇರಿರ ಮುತ್ತಣ್ಣ ವೃತ್ತದಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ರಸ್ತೆಯ ಎರಡು ಬದಿಗಳಲ್ಲಿ ವಾಹನ ನಿಲುಗಡೆ ನಿಷೇದಿಸಲಾಗಿದೆ. ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ ಮಂಗಳೂರು ರಸ್ತೆಯ ದೊಡ್ಡ ತಿರುವು ವರೆಗೆ (ಎಂಆರ್‍ಎಫ್ ಟೈರ್ ಶಾಪ್) ವರೆಗೆ ವಾಹನ ನಿಲುಗಡೆ ನಿಷೇದಿಸಲಾಗಿದೆ, ನಗರದ ಮೇಜರ್ ಮಂಗೇರಿರ ಮುತ್ತಣ್ಣ ವೃತ್ತದಿಂದ ರಾಜಸೀಟ್…

Read More

ನಾಪೋಕ್ಲು  ಮಾ.16  :  ಸಮೀಪದ ಬೇತು ಗ್ರಾಮದ ಶ್ರೀ ಮಕ್ಕಿ ಶಾಸ್ತಾವು ಸೇವಾ ಕಾರ್ಯಪಡೆ ಸಂಘದ ಸದಸ್ಯರು ನಾಪೋಕ್ಲು ಮಡಿಕೇರಿ ಮುಖ್ಯ ರಸ್ತೆಯ ಬದಿಗಳಲ್ಲಿ ತುಂಬಿಕೊಂಡಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು. ನಾಪೋಕ್ಲು ಬಳಿಯ ಚೆರಿಯಪರಂಬು ಜನರಲ್ ಕೆ. ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಅಪ್ಪಚ್ಚೆಟ್ಟೋಳಂಡ ಕುಟುಂಬಸ್ಥರು ನಡೆಸಲಿರುವ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಉದ್ಘಾಟನಾ ಸಮಾರಂಭಕ್ಕೆ  ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ರಾಜಕೀಯ ನಾಯಕರು ಹಾಗೂ ಗಣ್ಯವ್ಯಕ್ತಿಗಳು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಸೇವಾ ಕಾರ್ಯಪಡೆಯ ಸದಸ್ಯರು ನಾಪೋಕ್ಲು -ಮಡಿಕೇರಿ ಮುಖ್ಯ ರಸ್ತೆಯ ಕೊಟ್ಟಮುಡಿ ಕಾವೇರಿನದಿ ಸೇತುವೆ ಬಳಿಯಿಂದ ಚೆರಿಯಪರಂಬು ಜನರಲ್ ಕೆ. ಎಸ್.ತಿಮ್ಮಯ್ಯ ಕ್ರೀಡಾಂಗಣದವರೆಗಿನ ರಸ್ತೆಯ ಎರಡು ಬದಿಗಳಲ್ಲಿ  ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಹೆಕ್ಕಿ  ಸುಚಿಗೊಳಿಸಿದರು. ಕಾರ್ಯದಲ್ಲಿ ಶ್ರೀ ಮಕ್ಕಿ ಶಾಸ್ತಾವು ಸೇವಾ ಕಾರ್ಯ ಪಡೆಯ ಅಧ್ಯಕ್ಷ ಕಾಳೆಯಂಡ ಸಾಬಾ ತಿಮ್ಮಯ್ಯ, ಉಪಾಧ್ಯಕ್ಷ ಮಿಟ್ಟು ಸೋಮಯ್ಯ, ಸದಸ್ಯರಾದ ದೀಕ್ಷಿತ್ ದೇವಯ್ಯ, ಸುಧಿ ಅಪ್ಪಯ್ಯ, ಗಿರೀಶ್, ವಿಪನ್, ವಿಜು, ಲಕ್ಷ್ಮಿಕಾಂತ್, ರಾಜೇಶ್, ಅನಿಲ್ ತಮ್ಮಯ್ಯ,…

Read More

ಮಡಿಕೇರಿ ಮಾ.17 : ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ದಂಡಿನ ಮಾರಿಯಮ್ಮ ದೇವಿಯ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ವಾರ್ಷಿಕೋತ್ಸವದ ಅಂಗವಾಗಿ ಎರಡುದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳು ಜರುಗಿದವು. ಮಾ.16 ರಂದು ಸಂಜೆ ಪ್ರಸಾದ ಸಿದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಿಷ್ಣು ಪೂಜೆ, ದಿಶಾ ಬಲಿ (ದಿಕ್ಷಾಲಕ ಬಲಿ), ಮಹಾ ಮಂಗಳಾರತಿ ಹಾಗೂ ತೀರ್ಥಪ್ರಸಾದ ವಿನಿಯೋಗ ನಡೆಯಿತು. ಇಂದು ಮುಂಜಾನೆಯಿಂದಲೇ ಗಣಪತಿ ಹೋಮ, ಕಲಶ ಪೂಜೆ, ಕಲಶಾಭಿಷೇಕ, ನಾಗದೇವರಿಗೆ ಪಂಚಾಮೃತಾಭಿಷೇಕ, ನಾಗಪೂಜೆ, ದೇವಿಗೆ ಅಲಂಕಾರ ಪೂಜೆ ಜರುಗಿದವು. ಮಧ್ಯಾಹ್ನ ಮಹಾ ಪೂಜೆ ನಂತರ ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ನಗರದ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು.

Read More

ಮಡಿಕೇರಿ ಮಾ.17 : ಕಳೆದ 12 ವರ್ಷಗಳಿಂದ ಭಾರತೀಯ ಜನತಾ ಪಾರ್ಟಿಯಲ್ಲಿ ಗುರುತಿಸಿಕೊಂಡಿದ್ದ ವಿರಾಜಪೇಟೆಯ ಜೋಕಿಂ ರಾಡ್ರಿಕ್ಸ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಕೆ.ಪಿ.ಸಿ.ಸಿ.ಕಾನೂನು ಘಟಕದ ರಾಜ್ಯ ಅಧ್ಯಕ್ಷ ಎ.ಎಸ್. ಪೊನ್ನಣ್ಣ  ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜಾ ಉತ್ತಪ್ಪ ಅವರ ಸಮ್ಮುಖದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

Read More

ಮಡಿಕೇರಿ ಮಾ.17 :  ಕರ್ನಾಟಕ ರಾಜ್ಯ ಕಾಂಗ್ರೆಸ್ ಸಾಮಾಜಿಕ ನ್ಯಾಯ ವಿಭಾಗಕ್ಕೆ ಉಪಾಧ್ಯಕ್ಷರಾಗಿ ಕಿರುಗೂರು ಗ್ರಾಮದ ಕೊರಕುಟ್ಟೀರ ಸರ ಚಂಗಪ್ಪ  ಆಯ್ಕೆಯಾಗಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷ  ಡಿ.ಕೆ.ಶಿವಕುಮಾರ್ ಆದೇಶದ ಮೇರೆಗೆ ನೇಮಿಸಲಾಗಿದೆ ಎಂದು  ಕರ್ನಾಟಕ ರಾಜ್ಯ ಕಾಂಗ್ರೆಸ್ ಸಾಮಾಜಿಕ ನ್ಯಾಯ ವಿಭಾಗದ ಅಧ್ಯಕ್ಷ  ದ್ವಾರಕನಾಥ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೊರಕುಟ್ಟೀರ ಸರ ಚಂಗಪ್ಪ  ಕಿರುಗೂರು ಗ್ರಾಮ ಪಂಚಾಯಿತಿ ಸದಸ್ಯರಾಗಿ 1999 ರಿಂದ  2015ರವರಗೆ ಸತತ ಮೂರುಬಾರಿ ಆಯ್ಕೆಯಾಗಿ,  ಗ್ರಾ.ಪಂ  ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಕೊಡಗು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿ, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಕೃಷಿ ಪತ್ತಿನ ಸಹಕಾರ ಸಂಘ ಪೊನ್ನಂಪೇಟೆ ಶಾಖೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.  ಪ್ರಸ್ತುತ  ಇವರು ಕೊಡಗು ಹೆಗ್ಗಡೆ ಸಮಾಜದ ಉಪಾಧ್ಯಕ್ಷರಾಗಿದ್ದಾರೆ. ಕೊಡಗು ಹೆಗ್ಗಡೆ ಸಮಾಜದ ಅಧ್ಯಕ್ಷರಾದ ಪಡಿಞರಂಡ ಅಯ್ಯಪ್ಪನವರು ಕೊಡಗು ಹೆಗ್ಗಡೆ ಸಮಾಜದ ಆಡಳಿತ ಮಂಡಳಿ ಪರವಾಗಿ ಅಭಿನಂದನೆ ಸಲ್ಲಿಸಿದರು.

Read More

ಕುಶಾಲನಗರ ಮಾ.17 : ಕೂಡೂಮಂಗಳೂರು ಗ್ರಾ.ಪಂ ನ‌ ನವಗ್ರಾಮದ ಅಂಗನವಾಡಿಯನ್ನು 1.6 ಲಕ್ಷ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಕಾಮಗಾರಿಯನ್ನು ಗ್ರಾ.ಪಂ ಸದಸ್ಯರಾದ ಕೆ.ಬಿ.ಶಂಶುದ್ಧೀನ್  ಪರಿಶೀಲನೆ ನಡೆಸಿದರು. ಅಂಗನವಾಡಿ ಕೇಂದ್ರಕ್ಕೆ ಮಳೆಗಾಲದಲ್ಲಿ ತೊಂದರೆಯಾಗುತ್ತಿದ್ದು, ಆಹಾರ ಸಂಗ್ರಹಣಾ ಕೊಠಡಿಯಲ್ಲಿ ನೀರು ಸೋರುವಿಕೆಯಿಂದ ಬಹಳ ಸಮಸ್ಯೆಯಾಗುತ್ತಿತ್ತು. ಈ ಹಿನ್ನಲೆ ನವಗ್ರಾಮದ ಅಂಗನವಾಡಿ ಕೇಂದ್ರವನ್ನು 1.6 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.‌  ಜಿ‌.ಪಂ 1.2 ಲಕ್ಷ ರೂ ಹಾಗೂ ತಾ.ಪಂ ನ 60 ಸಾವಿರ ರೂ ಗಳನ್ನು ಅಂಗನವಾಡಿ ಕೇಂದ್ರದ ಅಭಿವೃದ್ಧಿಗೆ ವ್ಯಯಿಸಲಾಗುತ್ತಿದೆ. ಆಹಾರ ಸಾಮಗ್ರಿಗಳ ಸಂಗ್ರಹಣಾ ಕೊಠಡಿಗೆ ಮೇಲ್ಬಾವಣಿ ಅಳವಡಿಕೆ, ಅಂಗನಾಡಿ ಕೇಂದ್ರದ ಕಾಂಪೌಂಡ್ ಗೆ ಮೆಷ್ ಅಳವಡಿಕೆ‌, ಇನ್ನಿತರ ದುರಸ್ತಿ ಕಾರ್ಯ ಹಾಗೂ ಬಣ್ಣ ಬಳಿಯುವ ಕೆಲಸವನ್ನು ನಡೆಸಲಾಗುತ್ತಿದೆ.  ಈ ಸಂದರ್ಭ ಅಂಗನವಾಡಿ ಶಿಕ್ಷಕಿ ಕಲಾವತಿರವರು,‌ ಅಂಗನವಾಡಿಯ ಸಣ್ಣ ಪುಟ್ಟ ಸಮಸ್ಯೆಗಳ ಬಗ್ಗೆ ಸದಸ್ಯ‌ ಕೆ.ಬಿ.ಶಂಶುದ್ಧೀನ್ ಅವರ ಗಮನಕ್ಕೆ ತಂದರು.  ಮಕ್ಕಳ ಸಂಖ್ಯೆ ಕಡಿಮೆ ಇರುವಾಗ ಅಡುಗೆ ಮಾಡಲು ಸಣ್ಣ ಕುಕ್ಕರ್ ನ‌ ಅವಶ್ಯಕತೆ…

Read More

ನಾಪೋಕ್ಲು ಮಾ.17 : ಕಾಫಿ ತೋಟಕ್ಕೆ ಬೆಂಕಿ ಬಿದ್ದ ಪರಿಣಾಮ ಅಪಾರ ಪ್ರಮಾಣದಲ್ಲಿ ನಷ್ಟ ಸಂಭವಿಸಿದ ಘಟನೆ ಕಕ್ಕಬೆ ಗ್ರಾ.ಪಂ ವ್ಯಾಪ್ತಿಯ ಮರಂದೋಡ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮಾಜಿ ಸೈನಿಕ ಬಿಲ್ಲವರ ಪೂವಪ್ಪ ಅವರ ಕಾಫಿ ತೋಟ ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಆಕಸ್ಮಿಕವಾಗಿ ಬಿದ್ದ ಬೆಂಕಿ ಇವರ ತೋಟಕೆ ವ್ಯಾಪಿಸಿದ್ದು, ಸುಮಾರು ಮೂರು ಎಕರೆಯಷ್ಟು ತೋಟ ಸುಟ್ಟು ಭಸ್ಮವಾಗಿದೆ. ಕಿಡಿಗೇಡಿಗಳು ಈ ಕೃತ್ಯವನ್ನು ನಡೆಸಿರಬಹುದು ಶಂಕಿಸಲಾಗಿದೆ. ವರದಿ : ದುಗ್ಗಳ ಸದಾನಂದ.  

Read More

ನಾಪೋಕ್ಲು ಮಾ.17 : ಮಡಿಕೇರಿಯ ನೆರಳಿನ ಮನೆ ತನಲ್ ನಲ್ಲಿರುವ ಆಶ್ರಿತರೊಂದಿಗೆ ಮರಗೋಡು ಶೌರ್ಯ ಘಟಕ ಸದಸ್ಯರು ಒಂದು ದಿನ ಕಳೆದರು. ಸ್ನಾನಕ್ಕೆ ಸ್ವಲ್ಪ ಪ್ರಮಾಣದ ಕಟ್ಟಿಗೆಯ ವ್ಯವಸ್ಥೆಮಾಡಿ ಹಣ್ಣು ತಿಂಡಿಗಳನ್ನು ನೀಡಿ ಸ್ವಲ್ಪ ಸಮಯವನ್ನು ನೆರಳಿನ ಮನೆಯಲ್ಲಿ ವೃದ್ದರಿಗಾಗಿ ಮೀಸಲಿಟ್ಟರು. ಈ ಸೇವಾಕಾರ್ಯದಲ್ಲಿ ಸಂಯೋಜಕಿ ಮಮತಾ ಸೇವಾಪ್ರತಿನಿಧಿ ಲತಾ ಸ್ವಯಂ ಸೇವಕರಾದ ಧನಂಜಯ, ಐತಪ್ಪ , ವಿಶ್ವನಾಥ, ಪ್ರಸನ್ನ, ಸುನೀತಾ , ಸುಂದರಿ, ರಮ್ಯಾ ಪಾಲ್ಗೊಂಡಿದ್ದರು. ವರದಿ : ದುಗ್ಗಳ ಸದಾನಂದ.  

Read More