ಶನಿವಾರಸಂತೆ ಫೆ.18 : ಕಾಡಾನೆಯೊಂದು ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಹೋಬಳಿ ವ್ಯಾಪ್ತಿಯ ಎಳನೀರುಗುಂಡಿ ಗ್ರಾಮದಲ್ಲಿ ನಡೆದಿದೆ. ಕಾಫಿ ತೋಟದಲ್ಲಿ ನೀರಾವರಿ ಸೌಲಭ್ಯಕ್ಕಾಗಿ ನಿರ್ಮಿಸಿದ್ದ ನೀರಿನ ತೊಟ್ಟಿಗೆ ಸುಮಾರು 20 ವರ್ಷದ ಹೆಣ್ಣಾನೆಯೊಂದು ಬಿದ್ದು ಮೃತಪಟ್ಟಿದೆ. ಪಕ್ಕದ ಮೀಸಲು ಅರಣ್ಯದಿಂದ ಬಂದ 3 ಕಾಡಾನೆಗಳು ಕಾಫಿ ತೋಟದೊಳಗೆ ನುಸುಳಿದೆ. ಈ ಸಂದರ್ಭ ಹೆಣ್ಣಾನೆಯೊಂದು ಆಕಸ್ಮಿಕವಾಗಿ ಸುಮಾರು 10 ಅಡಿಯಷ್ಟು ಆಳದ ನೀರಿನ ತೊಟ್ಟಿಯೊಳಗೆ ಬಿದ್ದಿದೆ. ಹೊರ ಬರಲು ಸಾಧ್ಯವಾಗದ ಆನೆ ಉಸಿರುಗಟ್ಟಿ ಮೃತಪಟ್ಟಿದೆ. ಶನಿವಾರ ಬೆಳಗ್ಗೆ ತೋಟದ ಕಾರ್ಮಿಕರು ನೀರಿನ ತೊಟ್ಟಿಯಲ್ಲಿ ಆನೆ ಸತ್ತು ಬಿದ್ದಿರುವುದನ್ನು ಗಮನಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಶನಿವಾರಸಂತೆ ಅರಣ್ಯ ವಲಯಾಧಿಕಾರಿ ಪ್ರಪುಲ್‌ಕುಮಾರ್ ಶೆಟ್ಟಿ ಹಾಗೂ ಸಿಬ್ಬಂದಿಗಳು ಆನೆಯ ಮೃತದೇಹವನ್ನು ಹೊರ ತೆಗೆದರು. ಶನಿವಾರಸಂತೆ ಪಶುವೈದ್ಯಾಧಿಕಾರಿ ಡಾ.ಸತೀಶ್ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಪಕ್ಕದ ಮೀಸಲು ಅರಣ್ಯದಲ್ಲಿ ಅಂತಿಮ ಸಂಸ್ಕಾರ ಮಾಡಲಾಯಿತು. ನೀರಿನ ತೊಟ್ಟಿ…
ಲೇಖಕ: admin
ಮಡಿಕೇರಿ ಫೆ.18 : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಫೆ.20 ರಂದು ಮಡಿಕೇರಿಯಲ್ಲಿ ನಡೆಯುವ ಸರ್ವಜ್ಞ ಜಯಂತಿಯ ಬಗ್ಗೆ ಕುಲಾಲ ಕುಂಬಾರರ ಸಮಾಜಕ್ಕೆ ಯಾವುದೇ ಮಾಹಿತಿಯನ್ನು ನೀಡದೆ ನಿರ್ಲಕ್ಷಿಸಲಾಗಿದೆ ಎಂದು ಕೊಡಗು ಜಿಲ್ಲಾ ಕುಲಾಲ ಕುಂಬಾರರ ಸಮಾಜದ ಅಧ್ಯಕ್ಷ ಎಂ.ಡಿ.ನಾಣಯ್ಯ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಶ್ರೀ ಸರ್ವಜ್ಞ ಅವರು ಕುಂಬಾರ ಜನಾಂಗಕ್ಕೆ ಸೇರಿದವರಾಗಿದ್ದು, ಆಹ್ವಾನ ಪತ್ರಿಕೆಯಲ್ಲಿ ಕುಂಬರ ಜನಾಂಗದ ಹೆಸರನ್ನು ಬಳಸದೇ ಇರುವುದು ಖಂಡನೀಯ. ಪ್ರತಿವರ್ಷ ಸರ್ವಜ್ಞ ಜಯಂತಿ ಕಾರ್ಯಕ್ರಮಕ್ಕೆ ಕುಲಾಲ ಕುಂಬಾರರ ಸಮಾಜದ ಪ್ರಮುಖರನ್ನು ಆಹ್ವಾನಿಸಲಾಗುತ್ತಿತ್ತು. ಆದರೆ ಈ ಬಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾವುದೇ ಮಾಹಿತಿಯನ್ನು ಸಮಾಜಕ್ಕೆ ನೀಡಲಿಲ್ಲ. ಅಲ್ಲದೆ ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ಆಹ್ವಾನಿಸದೆ ಮತ್ತು ಆಹ್ವಾನ ಪತ್ರಿಕೆಯಲ್ಲಿ ಸಮಾಜದ ಹೆಸರನ್ನು ಬಳಸದೆ ಕುಂಬಾರ ಜನಾಂಗವನ್ನು ನಿರ್ಲಕ್ಷಿಸಿದ್ದಾರೆ ಎಂದು ದೂರಿದ್ದಾರೆ. ಕುಂಬಾರ ಸಮಾಜವನ್ನು ಕಡೆಗಣಿಸಿರುವುದರಿಂದ ಸೋಮವಾರ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಇರಲು ನಿರ್ಧರಿಸಿರುವುದಾಗಿ ನಾಣಯ್ಯ ತಿಳಿಸಿದ್ದಾರೆ. ಇಲಾಖೆಯಿಂದ ಈ ರೀತಿಯ ತಪ್ಪುಗಳು…
ನಾಪೋಕ್ಲು ಫೆ.7 : ಕೊಂಡಂಗೇರಿ ದರ್ಗಾ ಶರೀಫ್ ಉರೂಸ್ ಗೆ ಚಾಲನೆ ನೀಡಲಾಯಿತು. ಸೈಯದ್ ಹಸನ್ ಅಟಕೋಯ ಹಾಗೂ ಭಕ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಉರೂಸ್ ಗೆ ಚಾಲನೆ ದೊರೆಯಿತು. ನಂತರ ಮಾತನಾಡಿದ ಸೈಯದ್ ಹಸನ್ ಅಟಕೋಯ ಪ್ರವಾದಿ ಮಹಮ್ಮದ್ ಪೈಗಂಬರ್ ರವರ ಕುಟುಂಬ ಪರಂಪರೆಯ ಸಂತತಿ ಒಬ್ಬರು ಇಲ್ಲಿ ಸಮಾಧಿಯಾಗಿರುವುದು ನಮ್ಮೆಲ್ಲರ ಸೌಭಾಗ್ಯ. ಮಹಾತ್ಮರು ಬೋಧಿಸಿದ ಮಾನವೀಯ ಮೌಲ್ಯಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಜಮಾಯತ್ ಅಧ್ಯಕ್ಷ ಪಿ.ಈ.ಮೊಹಮ್ಮದ್ ಹಾಜಿ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಸಹಾಯಕ ಖಾಜಿ ಕೆ.ಎಸ್.ಶಾದುಲಿ ಫೈಸಿ, ತಕ್ಕ ಮುಖ್ಯಸ್ಥರಾದ ಆರ್.ಕೆ.ಅಹಮದ್ ಮುಸ್ಲಿ, ಎ.ಹೆಚ್. ಇಕ್ಬಾಲ್, ಇಬ್ರಾಹಿಂ, ಉಪಾಧ್ಯಕ್ಷ ಪಿ.ಎಚ್.ಅಬ್ಬಾಸ್, ಪ್ರಧಾನ ಕಾರ್ಯದರ್ಶಿ ಕೆ.ವೈ.ಮೊಹಮ್ಮದ್ ಹಾಜಿ, ಕೋಶಾಧಿಕಾರಿ ಎ.ಯ0.ಅಬ್ದುಲ್ಲಾ, ಮುದರೀಸ್ ಜುನೈದ್ ಸಖಾಫಿ, ಖತೀಬರಾದ ಯಾಸಿರ್ ಸಖಾಫಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು. ವರದಿ : ದುಗ್ಗಳ ಸದಾನಂದ
ಮಡಿಕೇರಿ ಜ.18 : ನಗರದಂಚಿನಲ್ಲಿರುವ ಕರ್ಣಂಗೇರಿ ಕ್ಷೇತ್ರದ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನೆರವೇರಿತು. ಮುಂಜಾನೆ ಕಾಶಿಲಿಂಗಕ್ಕೆ ಕ್ಷೀರಾಭಿಷೇಕ ಹಾಗೂ ಪಂಚಾಮೃತ ಅಭಿಷೇಕ ಜರುಗಿದವು. ಮಧ್ಯಾಹ್ನ ಮಹಾಮಂಗಳಾರತಿ ನಂತರ ಭಕ್ತಾಧಿಗಳು ಪಂಚಲಿಂಗಕ್ಕೆ ಪವಿತ್ರ ಗಂಗಾಜಲ ಅಭಿಷೇಕ ಮತ್ತು ಶಿವನ ಮೂರ್ತಿಗೆ ಪುಷ್ಪಾರ್ಚನೆ ಸೇವೆ ಸಲ್ಲಿಸಿದರು. ಸಂಜೆ ಭಕ್ತಾಧಿಗಳಿಂದ ದೀಪಲಂಕಾರ ಹಾಗೂ ತಾಯಿಯ ದರ್ಶನ ನೆರವೇರಲಿದೆ. ಜಗರಣೆ ಪ್ರಯುಕ್ತ ರಾತ್ರಿಯಿಂದ ಭಕ್ತಿ ಪ್ರಧಾನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಮಡಿಕೇರಿ ಫೆ.18 : ಮಡಿಕೇರಿ ನಗರದ ದಾಸವಾಳ ಬಡಾವಣೆಯಲ್ಲಿರುವ ಶ್ರೀವೀರಭದ್ರ ಮುನೇಶ್ವರ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಮಹಾಶಿವರಾತ್ರಿ ಮಹೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಮುಂಜಾನೆ ಮಡಿವಾಳರ ಅಭಿವೃದ್ಧಿ ಸಂಘದ ಸಹಭಾಗಿತ್ವದಲ್ಲಿ ಮಹಾಗಣಪತಿ ಹೋಮ ನೆರವೇರಿತು. ನಂತರ ನಗರದ ಗಣಪತಿ ಬೀದಿಯಿಂದ ಬನ್ನಿಮಂಟಪ, ಮಹದೇವಪೇಟೆ, ಖಾಸಗಿ ಬಸ್ ನಿಲ್ದಾಣ ವೃತ್ತದಿಂದ ಜೂನಿಯರ್ ಕಾಲೇಜು ರಸ್ತೆ ಮಾರ್ಗವಾಗಿ ದೇವಾಲಯದ ವರೆಗೆ ವೀರಭದ್ರ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ಮಧ್ಯಾಹ್ನ ಮಹಾಪೂಜೆ ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ::: ದ್ವಾರ ಉದ್ಘಾಟನೆ ::: ಶ್ರೀ ಮಡಿವಾಳ ಮಾಚಿದೇವ ಮಹಾದ್ವಾರವನ್ನು ಉದ್ಘಾಟಿಸಲಾಯಿತು. ಸಂಜೆ ಜಾಮ ಪೂಜೆ ಮತ್ತು ರಂಗಪೂಜೆ ನೆರವೇರಲಿದ್ದು, ಜಾಗರಣೆ ಪ್ರಯುಕ್ತ ಮಹಾಮೃತ್ಯುಂಜಯ ಹೋಮ ಸಭಾ ಕಾರ್ಯಕ್ರಮ ಮತ್ತು ನೃತ್ಯ ಸ್ಪರ್ಧೆ ನಡೆಯಲಿದೆ.
ಮಡಿಕೇರಿ ಫೆ.18 : ಕೊಡಗು ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮಾ. 4 ಮತ್ತು 5 ರಂದು ಗೋಣಿಕೊಪ್ಪಲಿನ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದೆ. ಈ ಸಮ್ಮೇಳನದ ಲಾಂಛನವನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಜಿ. ಬೋಪಯ್ಯ ಅನಾವರಣಗೊಳಿಸಿದರು. ಈ ಸಂದರ್ಭ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್, ಗೌರವ ಕಾರ್ಯದರ್ಶಿಗಳಾದ ಎಸ್.ಐ. ಮುನೀರ್ ಅಹ್ಮದ್, ರೇವತಿ ರಮೇಶ್, ಸಮ್ಮೇಳನದ ಹಣಕಾಸು ಸಮಿತಿ ಸಂಚಾಲಕ ಬಿ.ಎನ್. ಪ್ರಕಾಶ್ ಹಾಜರಿದ್ದರು. ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಬೋಪಯ್ಯ ಅವರು ನೂತನ ಪೊನ್ನಂಪೇಟೆ ತಾಲೂಕಿನಲ್ಲಿ ಮೊದಲ ಬಾರಿ ಜಿಲ್ಲಾ ಸಮ್ಮೇಳನ ನಡೆಯುತ್ತಿದ್ದು, ಇದು ಕನ್ನಡಿಗರ ಹಬ್ಬವಾಗಿದೆ. ಎಲ್ಲಾ ಸಂಘ ಸಂಸ್ಥೆಗಳ, ಸಮುದಾಯಗಳ, ಶಾಲಾ ಕಾಲೇಜು ವಿದ್ಯಾರ್ಥಿಗಳು, ಅಧ್ಯಾಪಕರು, ಕನ್ನಡ ಅಭಿಮಾನಿಗಳು, ಸರ್ಕಾರಿ ಅಧಿಕಾರಿಗಳು ಸೇರಿ ಉತ್ತಮವಾದಂತಹ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಸಂದೇಶ ನೀಡುವಂತಹ ಸಮ್ಮೇಳನ ಇದಾಗಬೇಕು ಎಂದರು. ಈ ಲಾಂಛನವನ್ನು ಜಿಲ್ಲೆಯ…
ಮಡಿಕೇರಿ ಫೆ.18 : ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ‘ಶ್ರೀ ರುದ್ರ ಹೋಮ’ ಶ್ರದ್ಧಾಭಕ್ತಿಯಿಂದ ನಡೆಯಿತು. ಮುಂಜಾನೆಯಿಂದಲೇ ವಿವಿಧ ಪೂಜಾ ವಿಧಿವಿಧಾನಗಳು ಜರುಗಿದವು. ಮಧ್ಯಾಹ್ನ ಮಹಾಮಂಗಳಾರತಿ ನಂತರ ನೆರೆದಿದ್ದ ಭಕ್ತಾಧಿಗಳಿಗೆ ಪ್ರಸಾದ ವಿತರಿಸಲಾಯಿತು.
ಗ್ವಾಲಿಯರ್: ಭಾರತೀಯ ವಾಯುಪಡೆಯ ಸಿ-17 ಗ್ಲೋಬ್ ಮಾಸ್ಟರ್ ಕಾರ್ಗೋ ವಿಮಾನವು ಇಂದು ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಭಾರತಕ್ಕೆ ತಂದಿದೆ. ಚೀತಾಗಳು ಭಾರತಕ್ಕೆ ಮರು ಪರಿಚಯಿಸುವ ಅಂತರ್ ಸರ್ಕಾರಿ ಒಪ್ಪಂದದ ಭಾಗವಾಗಿ 12 ದಕ್ಷಿಣ ಆಫ್ರಿಕಾದ ಚಿರತೆಗಳು ಇಂದು ಮಧ್ಯಪ್ರದೇಶದ ಗ್ವಾಲಿಯರ್‌ಗೆ ಆಗಮಿಸಿವೆ.
ಮಡಿಕೇರಿ ಫೆ.18 : ನಗರದ ಬ್ರಹ್ಮಕುಮಾರಿ ಲೈಟ್ ಹೌಸ್‍ನಲ್ಲಿ ಮಹಾಶಿವರಾತ್ರಿಯ ಅಂಗವಾಗಿ ತ್ರಿಮೂರ್ತಿ ಶಿವನ ಧ್ವಜಾರೋಹಣ ನೆರವೇರಿಸಲಾಯಿತು. ನಂತರ ಲೈಟ್ ಹೌಸ್‍ನ ಜಿಲ್ಲಾ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಗಾಯತ್ರಿ ಜೀ ಅವರು ಈಶ್ವರೀಯ ಸಂದೇಶವನ್ನು ನೀಡಿ ಮಹಾಶಿವರಾತ್ರಿಯ ಆಚರಣೆಯ ಆಧ್ಯಾತ್ಮಿಕ ರಹಸ್ಯವನ್ನು ತಿಳಿಸಿದರು. ಈ ಸಂದರ್ಭ ನಿವೃತ್ತ ಏರ್ ಮಾರ್ಷಲ್ ನಂದಾಕಾರ್ಯಪ್ಪ, ಸ್ತ್ರೀರೋಗ ತಜ್ಞೆ ಡಾ.ಸುಮಂಗಲ, ಇಎನ್‍ಟಿ ಸರ್ಜನ್ ಡಾ.ಮೋಹನ್ ಅಪ್ಪಾಜಿ, ಸಮಾಜ ಸೇವಕ ಬೇಬಿ ಮ್ಯಾಥ್ಯು ಹಾಗೂ ಅನೇಕ ಬ್ರಹ್ಮಕುಮಾರ, ಕುಮಾರಿಯರು ಪಾಲ್ಗೊಂಡು ಪರಮಾತ್ಮನ ಸ್ಮೃತಿಯಿಂದ ಶಾಂತಿಯ ಸಂದೇಶ ಸಾರಿದರು. ವಿಶೇಷ ಪೂಜೆಯ ನಂತರ ನೆರೆದಿದ್ದ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗವಾಯಿತು.
ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜ್ಯದ ಜನತೆಗೆ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಸಾಮಾಜಿಕ ಜಾಲತಾಣ ಟ್ವೀಟ್ ಮಾಡಿರುವ ಅವರು, ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ಮಹಾಶಿವನ ಕೃಪಾಶೀರ್ವಾದ ಸದಾ ಈ ನಾಡಿನ ಜನತೆಯ ಮೇಲಿದ್ದು, ನಾಡಿನಲ್ಲಿ ಸದಾ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.






