ಲೇಖಕ: admin

ಮಡಿಕೇರಿ ಫೆ.18 : ಮಡಿಕೇರಿ ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆ ನಿವಾರಿಸುವ ಸಭೆಯು ಫೆ.20 ರಂದು ಮಧ್ಯಾಹ್ನ 3.30 ಗಂಟೆಯಿಂದ ಸಂಜೆ 4.30 ಗಂಟೆವರೆಗೆ ಮಡಿಕೇರಿ ಉಪ ವಿಭಾಗ ಕಚೇರಿ ಆವರಣದಲ್ಲಿ ಅಧೀಕ್ಷಕ ಎಂಜಿನಿಯರ್, ಸೆಸ್ಕ್, ಕೊಡಗು ಮತ್ತು ಚಾಮರಾಜನಗರ ವೃತ್ತ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮಡಿಕೇರಿ ಉಪ ವಿಭಾಗ (ಮಡಿಕೇರಿ ತಾಲ್ಲೂಕು) ವ್ಯಾಪ್ತಿಯ ಸಾರ್ವಜನಿಕರು/ವಿದ್ಯುತ್ ಗ್ರಾಹಕರ ವಿದ್ಯುಚ್ಛಕ್ತಿಗೆ ಸಂಬಂಧಿಸಿದ ಸಮಸ್ಯೆ ಅಥವಾ ದೂರುಗಳು ಇದ್ದಲ್ಲಿ ಈ ಸಭೆಯಲ್ಲಿ ಚರ್ಚಿಸಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಈ ಸಭೆಗೆ ಹಾಜರಾಗುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅನಿತಾ ಬಾಯಿ ಅವರು ಕೋರಿದ್ದಾರೆ.

Read More

ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು. ಈ ಹಬ್ಬವನ್ನು ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಫೆಬ್ರುವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಶಿವರಾತ್ರಿ ಹಬ್ಬ ಬರುತ್ತದೆ. ಇಡೀ ದಿನ ಉಪವಾಸ, ಜಾಗರಣೆಗಳನ್ನು ಮಾಡಿ,೪ ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡುವ ಮೂಲಕ ಆಚರಿಸಲಾಗುತ್ತದೆ.ಇದರ ಮುಂದಿನ ದಿನ ವಿವಿಧ ರೀತಿಯ ಸಿಹಿ ತಿನಿಸುಗಳನ್ನು ತಯಾರಿಸುವರು.ತಂಬಿಟ್ಟು ಈ ಹಬ್ಬದ ಪ್ರಮುಖ ತಿನಿಸು. ಶಿವರಾತ್ರಿ, ಈ ದಿನದಂದು ಕೈಲಾಸ ವಾಸ ಪರಶಿವನನ್ನು ಕೋಟಿ ಕೋಟಿ ಜನರು ಭಜಿಸಿ ಪೂಜಿಸುತ್ತಾರೆ. ಶಿಶಿರ ಋತುವಿನ ಮಾಘ ಮಾಸದ ಕೃಷ್ಣ ಪಕ್ಷ ಬಹುಳ ಚತುರ್ದಶಿ ಯಂದು ಬರುವ ಶಿವರಾತ್ರಿಯ ದಿನ ಭಕ್ತಾದಿಗಳು ಶಂಭೋ ಶಂಕರನನ್ನು ನೆನೆದು, ಪುನೀತರಾಗುತ್ತಾರೆ. ತನ್ನ ನಂಬಿ ಬಂದ ಭಕ್ತರ ಇಷ್ಟಾರ್ಥಗಳಿಗೆ ಎಂದಿಗೂ ನಿರಾಸೆ ಮಾಡದ ದಯಾಮಯಿ ಶಿವನಿಗೆ ಶಿವರಾತ್ರಿಯಂದು ದೇಶಾದ್ಯಂತ ವಿಶೇಷ ಪೂಜೆಗಳು ನೆರವೇರುತ್ತವೆ. ಇಡೀ ಭಾರತದಾದ್ಯಂತ ಬಹುತೇಕ ಎಲ್ಲಾ ಭಾಗಗಳಲ್ಲೂ ಆಚರಿಸುವ ಹಬ್ಬ ಇದು. ಈ ಹಬ್ಬದಂದು ದಿನವಿಡೀ ಪೂಜೆ, ಉಪವಾಸ ಮಾಡಿ, ರಾತ್ರಿಯಿಡೀ ಜಾಗರಣೆ ಮಾಡಿ…

Read More

ಮಡಿಕೇರಿ ಫೆ.17 : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಜನಸ್ನೇಹಿ ಬಜೆಟ್ ಮಂಡಿಸಿದ್ದಾರೆ. ಕೊಡಗು ಜಿಲ್ಲೆಯ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಕೋರಿ ಮನವಿ ನೀಡಲಾಗಿತ್ತು, ಅದಕ್ಕೆ ಸ್ಪಂದಿಸಿ ಮುಖ್ಯ ರಸ್ತೆಗಳ ಅಭಿವೃದ್ಧಿಗೆ 100 ಕೋಟಿ ರೂ. ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಪಶ್ಚಿಮಘಟ್ಟ ಜಿಲ್ಲೆಗಳಲ್ಲಿ 500 ಕಾಲು ಸೇತುವೆಗಳ ನಿರ್ಮಾಣಕ್ಕೆ 250 ಕೋಟಿ ರೂ.ಗಳನ್ನು ಮೀಸಲಿಟ್ಟಿರುವುದು ಸ್ವಾಗತಾರ್ಹ. ರೈತ ಶಕ್ತಿ ಯೋಜನೆ ರೈತರಲ್ಲಿ ಆರ್ಥಿಕ ಚೈತನ್ಯವನ್ನು ತುಂಬಿದೆ. 400 ಕೋಟಿ ರೂ. ಮೀಸಲಿಡುವ ಮೂಲಕ ರೈತರಲ್ಲಿ ನವೋತ್ಸಾಹ ಮೂಡಿಸಿದೆ. (ಕೆ.ಜಿ.ಬೋಪಯ್ಯ, ಶಾಸಕರು, ವಿರಾಜಪೇಟೆ ಕ್ಷೇತ್ರ)

Read More

ಮಡಿಕೇರಿ ಫೆ.17 : ಕೊಡಗಿನ ಜನರ ಎಲ್ಲಾ ನಿರೀಕ್ಷೆಗಳನ್ನು ಹುಸಿ ಮಾಡಲಾಗಿದೆ, ಇತರ ಜಿಲ್ಲೆಗಳನ್ನು ಹೋಲಿಕೆ ಮಾಡಿದರೆ ಕೊಡಗು ಜಿಲ್ಲೆಗೆ ಭಿಕ್ಷೆ ನೀಡುವಂತೆ ಕೇವಲ 100 ಕೋಟಿ ರೂ. ನೀಡಲಾಗಿದೆ. ಜಿಲ್ಲೆಯ ಎಲ್ಲಾ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ, ಇವುಗಳ ದುರಸ್ತಿಗೆ ಕನಿಷ್ಠ ಸಾವಿರ ಕೋಟಿ ರೂ.ಗಳನ್ನಾದರು ನೀಡಬೇಕಾಗಿತ್ತು. ಪ್ರತಿ ಮಳೆಗಾಲದಲ್ಲಿ ಕೊಡಗು ಅನೇಕ ಕಷ್ಟ, ನಷ್ಟಗಳನ್ನು ಅನುಭವಿಸುತ್ತದೆ. ಇಲ್ಲಿ ಹಲವು ಗಂಭೀರ ಸಮಸ್ಯೆಗಳಿದ್ದರೂ ಪರಿಹಾರೋಪಾಯಗಳನ್ನು ಸರ್ಕಾರ ಘೋಷಿಸಿಲ್ಲ. ವನ್ಯಜೀವಿ ದಾಳಿಯಿಂದ ಸಾಲು ಸಾಲು ಸಾವುಗಳಾಗುತ್ತಿದ್ದರೂ ಇದನ್ನು ನಿಯಂತ್ರಿಸಲು ಯೋಜನೆಯನ್ನು ರೂಪಿಸಿಲ್ಲ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆಯನ್ನು ಕಡೆಗಣಿಸಲಾಗಿದೆ. ಬಜೆಟ್ ರೂಪದಲ್ಲಿ ಚುನಾವಣಾ ಗಿಮಿಕ್ ಮಾಡುವಲ್ಲಿಯೂ ಸರ್ಕಾರ ವಿಫಲವಾಗಿದೆ. ಈ ರೀತಿಯ ನಿರ್ಲಕ್ಷö್ಯವನ್ನು ಗಮನಿಸಿದರೆ ಕೊಡಗು ಕರ್ನಾಟಕದೊಂದಿಗೆ ಇರಬೇಕೆ ಅಥವಾ ಬೇಡವೇ ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ. (ಪವನ್ ಪೆಮ್ಮಯ್ಯ, ಅಧ್ಯಕ್ಷರು, ಕೊಡಗು ರಕ್ಷಣಾ ವೇದಿಕೆ)

Read More

ಮಡಿಕೇರಿ ಫೆ.17 : ಚುನಾವಣೆ ಸಮೀಪಿಸುತ್ತಿರುವಂತೆಯೇ ಜನರ ಕಿವಿಗೆ ಹೂವು ಇಡುವ ರೀತಿಯ ಬಜೆಟ್ ನ್ನು ಮಂಡಿಸಲಾಗಿದೆ. ಇಲ್ಲಿ ಘೋಷಿಸಿರುವ ಅನೇಕ ಭರವಸೆಗಳನ್ನು ಈಡೇರಿಸುವ ವಿಶ್ವಾಸ ಸರ್ಕಾರಕ್ಕೇ ಇದ್ದಂತ್ತಿಲ್ಲ. ಕೊಡಗನ್ನು ಸರ್ಕಾರ ಮರೆತೇ ಬಿಟ್ಟಿದೆ, ವನ್ಯಜೀವಿಗಳ ದಾಳಿ, ರಸ್ತೆಗಳ ಅವ್ಯವಸ್ಥೆ, ಅತಿವೃಷ್ಟಿಯಿಂದಾಗುವ ಅನಾಹುತ, ಬೆಳೆಗಾರರು ಹಾಗೂ ಕಾರ್ಮಿಕರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಅರಿವಿಲ್ಲದಂತೆ ಸರ್ಕಾರ ವರ್ತಿಸಿದೆ. ಯಾವುದೇ ಭರವಸೆಗಳನ್ನು ಮೂಡಿಸದ ಬಜೆಟ್ ನಲ್ಲಿ ಕೊಡಗು ಜಿಲ್ಲೆಗೆ ಕೇವಲ 100 ಕೋಟಿ ರೂ.ಗಳನ್ನು ನೀಡಲಾಗಿದೆ. ಜಿಲ್ಲೆಯ ಶಾಸಕರುಗಳಿಗೆ ಸ್ವಾಭಿಮಾನವಿದ್ದರೆ ಈ ಹಣವನ್ನು ತಿರಸ್ಕರಿಸಿ ಸಾವಿರ ಕೋಟಿಗೆ ಬೇಡಿಕೆ ಇಡಲಿ. (ಸೂರಜ್ ಹೊಸೂರು, ಅಧ್ಯಕ್ಷರು, ಕಾಂಗ್ರೆಸ್ ಸಾಮಾಜಿಕ ಜಾಲತಾಣ, ಕೊಡಗು ಜಿಲ್ಲೆ)

Read More

ಮಡಿಕೇರಿ ಫೆ.17 : ಕಾರ್ಮಿಕ ವರ್ಗದ ಅನೇಕ ವರ್ಷಗಳ ಬೇಡಿಕೆಗಳಲ್ಲಿ ಕೆಲವನ್ನಷ್ಟೇ ಈಡೇರಿಸಲಾಗಿದೆ, ಕಾರ್ಮಿಕರ ಅಭ್ಯುದಯಕ್ಕಾಗಿ ಹೊಸ ಯೋಜನೆಗಳನ್ನು ಘೋಷಿಸಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಶ್ರಮಿಕ ವರ್ಗ ತತ್ತರಿಸಿ ಹೋಗಿದೆ. ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಮೇಲಿನ ತೆರಿಗೆ ಇಳಿಕೆ ಮಾಡಿ ಇವುಗಳ ಬೆಲೆಯನ್ನು ಕಡಿಮೆ ಮಾಡುವ ಪ್ರಯತ್ನವನ್ನು ಸರ್ಕಾರ ಮಾಡಿಲ್ಲ. ಕೊಡಗು ಜಿಲ್ಲೆಗೆ ಕೇವಲ ರೂ.100 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಸರ್ಕಾರ ಕೈತೊಳೆದುಕೊಂಡಿದೆ. ಕಾಫಿ ಮತ್ತು ಕರಿಮೆಣಸು ಇಲ್ಲಿನ ಪ್ರಮುಖ ಬೆಳೆಯಾದರೂ ಬೆಳೆಗಾರರ ನೆರವಿಗೆ ಪೂರಕವಾಗುವ ಯಾವುದೇ ವಿಶೇಷ ಅನುದಾನವನ್ನು ನೀಡಿಲ್ಲ, ಕೊಡಗು ಜಿಲ್ಲೆಗೆ ಅನ್ಯಾಯವಾಗಿದೆ. (ಪಿ.ಆರ್.ಭರತ್, ಕಾರ್ಮಿಕ ಸಂಘಟನೆಗಳ ಮುಖಂಡ, ಕೊಡಗು ಜಿಲ್ಲೆ)

Read More

ಮಡಿಕೇರಿ ಫೆ.17 : ನಗರದ ಮನೆಯೊಂದರಲ್ಲಿ 500 ಗ್ರಾಂ ಗಾಂಜಾ ಪತ್ತೆಯಾಗಿದ್ದು, ನಾಲ್ವರು ಆರೋಪಿಗಳನ್ನು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ನಗರದ ರಾಣಿಪೇಟೆಯ ಮನೆಯೊಂದರಲ್ಲಿ ಅಕ್ರಮವಾಗಿ ಗಾಂಜಾ ದಾಸ್ತಾನು ಮಾಡಿರುವ ಕುರಿತು ಮಾಹಿತಿ ಪಡೆದ ಪೊಲೀಸರು ಶ್ವಾನ ದಳ, ಕಂದಾಯ ಇಲಾಖೆ, ನಗರಸಭೆ ಅಧಿಕಾರಿಗಳ ಸಹಿತ ಮನೆಯ ಮೇಲೆ ದಾಳಿ ನಡೆಸಿದರು. ಈ ಸಂದರ್ಭ ಮಾಲು ಸಹಿತ ನಾಲ್ವರು ಆರೋಪಿಗಳನ್ನು ಸ್ಥಳದಲ್ಲೇ ಬಂಧಿಸಲಾಗಿದೆ. ಮಡಿಕೇರಿ ನಿವಾಸಿಗಳಾದ ಅಜ್ಗರ್, ನೌಶಾದ್, ಮಂಜು ಹಾಗೂ ರಫೀಕ್ ಬಂಧಿತ ಆರೋಪಿಗಳಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ನಗರ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Read More

ಕುಶಾಲನಗರ ಫೆ.17 : ಕರುವೊಂದು ಕಾಡುಪ್ರಾಣಿಯ ದಾಳಿಗೊಳಗಾಗಿ ಪ್ರಾಣ‌ಕಳೆದುಕೊಂಡ ಘಟನೆ ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಕೂಡ್ಲೂರು ಬಸವೇಶ್ವರ ಬಡಾವಣೆಯಲ್ಲಿ ನಡೆದಿದೆ. ಕರುವು ಚಿರತೆ ದಾಳಿಗೊಳಗಾರುವ ಬಗ್ಗೆ ಕರುವಿನ ಮಾಲೀಕರು ಸಂಶಯ ವ್ಯಕ್ತಪಡಿಸುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ಬಸವೇಶ್ವರ ಬಡಾವಣೆಯ ಜಿ‌.ವಿ.ಕುಮಾರ್ ಎಂಬವರ ಕರು ಪ್ರಾಣಿದಾಳಿಗೊಳಗಾಗಿದೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್ ಅವರು, ಕೂಡಲೇ ವಲಯ ಅರಣ್ಯಾಧಿಕಾರಿಗಳ ಗಮನಕ್ಕೆ ತಂದರು. ನಂತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅರಣ್ಯಾ ಇಲಾಖೆಯ ಅಧಿಕಾರಿಗಳು, ಮುಂದಿನ ಕ್ರಮ ಕೈಗೊಂಡರು. ಈ ಸಂದರ್ಭ ಮಾತನಾಡಿದ ವಾರ್ಡ್ ಸದಸ್ಯ ಕೆ.ಬಿ.ಶಂಶುದ್ಧೀನ್, ಚಿರತೆ ದಾಳಿ ಶಂಕೆ ಇರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮನವಿ ಮಾಡಲಾಗಿದೆ. ಸ್ಥಳಕ್ಕೆ ಸಿಸಿ ಕ್ಯಾಮರಾ ಅಳವಡಿಸುವ ಬಗ್ಗೆ ಹಾಗೂ ಕಾಡಿಗೆ ಸಿಬ್ಬಂದಿಗಳನ್ನು ಕಳುಹಿಸಿ ಪರಿಶೀಲನೆ ನಡೆಸುವ ಬಗ್ಗೆ ವಲಯ ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕರುವಿಗೆ ಬೇಗನೇ ಪರಿಹಾರ ಒದಗಿಸಿಕೊಡುವ ಬಗ್ಗೆಯೂ…

Read More

ಮಡಿಕೇರಿ ಫೆ.17 : ಮೈಸೂರಿನ ಯುವರಾಜ ಇಂಡೋರ್ ಹಾಲ್ ನಲ್ಲಿ ಫೆ.11 ರಂದು ನಡೆದ ವಿ ಎಸ್ ಕೆ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕೊಡಗಿನ 8 ವಿದ್ಯಾರ್ಥಿಗಳು ಪ್ರಥಮ, 9 ವಿದ್ಯಾರ್ಥಿಗಳು ದ್ವಿತೀಯ ಹಾಗೂ ಮೂವರು ತೃತೀಯ ಸ್ಥಾನ ಗಳಿಸಿದ್ದಾರೆ. ಮಾದಾಪುರ ಸಮೀಪದ ಹಟ್ಟಿಹೂಳೆ ನಿರ್ಮಲ ವಿದ್ಯಾ ಭವನ ಶಾಲೆಯ ವಿದ್ಯಾರ್ಥಿಗಳು 11 ವರ್ಷದ ಬಾಲಕರ ವಿಭಾಗದಲ್ಲಿ ಸಜಿನ್ ಎ ಕಟಾ ಹಾಗೂ ಕುಮಿತೆ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ. 12 ವರ್ಷದ ಬಾಲಕರ ವಿಭಾಗದಲ್ಲಿ ಡೀನ್ ಅಪ್ಪಣ್ಣ ಕಟಾ ಹಾಗೂ ಕುಮಿತೆ ವಿಭಾಗದಲ್ಲಿ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ 12ವರ್ಷದ ವಿಭಾಗದಲ್ಲಿ ಕವನ ಎಂ ಎಸ್  ಕಟಾ ಪ್ರಥಮ ಹಾಗೂ ಕುಮಿತೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. 13ವರ್ಷ ವಿಭಾಗದಲ್ಲಿ ಮರಿಯಾ ಜೋಶ್ನ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ,13 ವರ್ಷದ ವಿಭಾಗದಲ್ಲಿ ಮೌನ ಜಿ ಸಿ ಕಟಾ ವಿಭಾಗದಲ್ಲಿ ದ್ವಿತೀಯ ಹಾಗೂ ತೃತೀಯ ಸ್ಥಾನ ಕುಮಿತೆ ವಿಭಾಗದಲ್ಲಿ  13…

Read More

ಮಡಿಕೇರಿ ಫೆ.17 : ಕೊಡಗು ಜಿಲ್ಲಾ ಮೊಗೇರಾ ಸೇವಾ ಸಮಾಜ ಹಾಗೂ ಮೊಗೇರ ಗ್ರಾಮ ವಿಕಾಸ ಯೋಜನೆಯ ಜಿಲ್ಲಾ ಕಚೇರಿಯ ಉದ್ಘಾಟನಾ ಸಮಾರಂಭ ಫೆ.19ರಂದು ನಡೆಯಲಿದೆ. ಬೆಳಿಗ್ಗೆ 10.30 ಗಂಟೆಗೆ ಸುಂಟಿಕೊಪ್ಪದ ದೇವಯ್ಯ ಕಾಂಪ್ಲೆಕ್ಸ್ ನಲ್ಲಿ ನೂತನ ಕಚೇರಿ ಉದ್ಘಾಟನೆಗೊಳ್ಳಲಿದೆ. ನಂತರ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದೇ ಸಂದರ್ಭ ಕುಶಾಲನಗರ ತಾಲ್ಲೂಕು ಸಮಿತಿಗೆ ಪದಾಧಿಕಾರಿಗಳ ಸೇರ್ಪಡೆ ಹಾಗೂ ಸುಂಟಿಕೊಪ್ಪ ಹೋಬಳಿ ಸಮಿತಿ ರಚನೆಯೂ ನಡೆಯಲಿದೆ. ಮೊಗೇರ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮೊಗೇರ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಗೌತಮ್ ಶಿವಪ್ಪ ಮನವಿ ಮಾಡಿದ್ದಾರೆ.

Read More