ಲೇಖಕ: admin

ಹುಬ್ಬಳ್ಳಿ ಫೆ.28 : 7ನೇ ವೇತನ ಆಯೋಗದ ಮಧ್ಯಂತರ ವರದಿ ಪಡೆದು ಅನುಷ್ಠಾನ ಮಾಡಲಾಗುವುದು. ಬಜೆಟ್ ನಲ್ಲಿ ಅದಕ್ಕಾಗಿ ಹಣವನ್ನೂ ಮೀಸಲಿಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು  ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನಾಳೆಯಿಂದ ಸರ್ಕಾರಿ ನೌಕರರು ಅನಿರ್ದಿಷ್ಟಾವಧಿಗೆ ಮುಷ್ಕರ ನಡೆಸಲು ಆರಂಭಿಸಿರುವ ಬಗ್ಗೆ ಪ್ರತಿಕ್ರಿಯಿಸಿದರು. ಮಧ್ಯಂತರ ವರದಿ ಪಡೆದು ವೇತನ ಪರಿಷ್ಕರಣೆ ಮಾಡಬೇಕೆಂಬ ಸರ್ಕಾರಿ ನೌಕರರ ಬೇಡಿಕೆಯನ್ನು ಸರ್ಕಾರ ಒಪ್ಪಿದೆ. ನಾವು ಕೂಡಲೇ 7 ನೇ ಆಯೋಗಕ್ಕೆ ಸೂಚನೆ ನೀಡಿ ಮಧ್ಯಂತರ ವರದಿ ಪಡೆದು ಅದರ ಅನುಷ್ಠಾನಕ್ಕೆ ಸಿದ್ಧರಿದ್ದೇವೆ ಎಂದು ತಿಳಿಸಿದರು. ಸಿ.ಎ.ಆರ್ ಸಿಬ್ಬಂದಿ ಬಲ ಪಡಿಸುವ ಬಗ್ಗೆ ಡಿ.ಜಿ ಅವರಿಗೆ ಸೂಚನೆ ನೀಡಲಾಗಿದೆ ಎಂದರು.

Read More

ಮಡಿಕೇರಿ ಫೆ 28 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತನ್ನ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಈ ಬಾರಿ ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪಲಿನಲ್ಲಿ ನಡೆಸುತಿದೆ. ಮಾ4 ಮತ್ತು 5 ರಂದು ಗೋಣಿಕೊಪ್ಪಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಿರ್ಮಿಸುವ ಸಾಹಿತಿ ಐ.ಮಾ.ಮುತ್ತಣ್ಣ ವೇದಿಕೆಯಲ್ಲಿ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಿಲ್ಲೆಯ ಹಿರಿಯ ಸಾಹಿತಿಗಳು ಮೈಸೂರಿನ ಯುವರಾಜ ಕಾಲೇಜಿನ ಕನ್ನಡ ಸಹಪ್ರಾಧ್ಯಾಪಕರು ಡಾ. ಎಂ.ಪಿ.ರೇಖಾ ಆಯ್ಕೆಯಾಗಿದ್ದು, ಸಮ್ಮೇಳನವನ್ನು ನಡೆಸಿಕೊಡಲಿದ್ದಾರೆ. ಸಮ್ಮೇಳನದ ಯಶಸ್ಸಿಗಾಗಿ ಸ್ವಾಗತ ಸಮಿತಿ ರಚಿಸಲಾಗಿದ್ದು ಅದರೊಂದಿಗೆ ಹಲವಾರು ಉಪಸಮಿತಿಗಳನ್ನು ರಚಿಸಲಾಗಿದೆ. ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು, ಸರಕಾರಿ ಭೂ ಅತಿಕ್ರಮ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಕೆ.ಜಿ.ಬೋಪಯ್ಯ ಮತ್ತು ಗೌರವಾಧ್ಯಕ್ಷರಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಹಾಗೂ ವಿಧಾನಪರಿಷತ್ ಸದಸ್ಯರಾದ ಎಂ.ಪಿ ಸುಜಾ ಕುಶಾಲಪ್ಪ ಕಾರ್ಯ ನಿರ್ವಹಿಸಲಿದ್ದಾರೆ. ಮಹಾಪೋಷಕರುಗಳಾಗಿ ಅರಮೇರಿ ಕಳಂಚೇರಿ ಮಠದ ಪೀಠಾಧ್ಯಕ್ಷ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ…

Read More

ಮಡಿಕೇರಿ ಫೆ.28 : ಭಾರತೀಯ ರೆಡ್ ಕ್ರಾಸ್ ನ ಕೊಡಗು ಘಟಕದ ವತಿಯಿಂದ ಸುಸಜ್ಜಿತ ವೈದ್ಯಕೀಯ ತಪಾಸಣಾ ಬಸ್ ನ್ನು ಮಾ.2 ರಂದು  ಲೋಕಾಪ೯ಣೆ ಮಾಡಲಾಗುತ್ತದೆ. ಮಡಿಕೇರಿಯ ಗಾಂಧಿ ಮಂಟಪದ ಮುಂಬದಿ ಬೆಳಗ್ಗೆ 9 ಗಂಟೆಗೆ ರೂ.75 ಲಕ್ಷ  ಮೌಲ್ಯದ ಸುಸಜ್ಜಿತ ಮೊಬೈಲ್ ಘಟಕವನ್ನು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮತ್ತು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಲೋಕಾಪ೯ಣೆ ಮಾಡಲಿದ್ದಾರೆ. ಕಾಯ೯ಕ್ರಮದಲ್ಲಿ ರೆಡ್ ಕ್ರಾಸ್ ಸಭಾಧ್ಯಕ್ಷ ಹಾಗೂ  ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ, ಜಿ.ಪಂ ಮುಖ್ಯ ಕಾಯ೯ನಿವ೯ಹಣಾಧಿಕಾರಿ ಡಾ.ಎನ್. ಆಕಾಶ್, ಹೆಚ್ಚುವರಿ ಜಿಲ್ಲಾಧಿಕಾರಿ ನಂಜುಂಡೇಗೌಡ, ಉಪವಿಭಾಗಾಧಿಕಾರಿ ಯತೀಶ್ ಉಲ್ಲಾಳ್ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ , ವೈದ್ಯಕೀಯ ಕಾಲೇಜಿನ ಡೀನ್ ಡಾ.ಕಾಯ೯ಪ್ಪ, ರೆಡ್ ಕ್ರಾಸ್ ಕೊಡಗು ಘಟಕದ ಸಭಾಪತಿ ಬಿ.ಕೆ.ರವೀಂದ್ರ ರೈ, ಉಪಾಧ್ಯಕ್ಷ ಎಚ್.ಟಿ.ಅನಿಲ್,  ಕಾಯ೯ದಶಿ೯ ಮುರಳೀಧರ್ ಪಾಲ್ಗೊಳ್ಳಲಿದ್ದಾರೆ ಎಂದು  ರೆಡ್ ಕ್ರಾಸ್ ಪ್ರಕಟಣೆ ತಿಳಿಸಿದೆ. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಕೊಡಗು ರೆಡ್ ಕ್ರಾಸ್…

Read More

ಮಡಿಕೇರಿ ಫೆ.28 :  ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ನಿಮಾ)  ಕೊಡಗು ಜಿಲ್ಲಾ ಶಾಖೆಯು ಚೆಯ್ಯಂಡಾಣೆ ಸಮೀಪದ ಚೋಮನ ಕುಂದ್ ಬೆಟ್ಟದಲ್ಲಿ ಚಾರಣ ನಡೆಸಿ ಪರಿಸರ ಉಳಿಸುವ ಸಂದೇಶ ಫಲಕಗಳನ್ನು ಇಲಾಖೆಗೆ ಹಸ್ತಾಂತರಿಸಿತು. ಚೋಮನ ಕುಂದ್ ಅತ್ಯಂತ ಸುಂದರ ಪ್ರವಾಸಿ ತಾಣವಾಗಿದ್ದು, ಅದರ ಶಿಖರದ ಮೇಲೆ ಮದ್ಯದ ಬಾಟಲಿಗಳು, ಪ್ಲಾಸ್ಟಿಕ್ ತ್ಯಾಜ್ಯ ಗಳು ಎಸೆಯುವ ಪ್ರವೃತ್ತಿಯನ್ನು ಖಂಡಿಸಿದ ನಿಮಾ ಅಧ್ಯಕ್ಷ ಡಾ.ರಾಜಾರಾಮ್ ಈ ಕುರಿತು ಎಚ್ಚರ ಮೂಡಿಸಲು  ಕಿರು ಪ್ರಯತ್ನ ಮಾಡಲಾಗಿದೆ ಎಂದರು. ಜಿಲ್ಲೆಯಲ್ಲಿ ನಶಿಸಿಹೋಗುತ್ತಿರುವ ಔಷಧ ಸಸ್ಯಗಳ ಸಂರಕ್ಷಣೆಯ ಉದ್ದೇಶದಿಂದ ವನಸ್ಪತಿ ಉದ್ಯಾನವೊಂದನ್ನು ನಿರ್ಮಿಸುವ ನಮ್ಮ ಆಶಯಕ್ಕೆ ಜಿಲ್ಲಾಡಳಿತವು ಪೂರಕವಾಗಿ ಸ್ಪಂದಿಸುತ್ತಿದೆ ಎಂದರು. ಕೊಡಗು ಜಿಲ್ಲಾ ಆರೋಗ್ಯ ಭಾರತಿ ಮತ್ತು ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಈ ಸಂಘಟನೆಗಳ ಪರವಾಗಿ ಮಾತನಾಡಿದ ಪ್ರಸಾದ್ ಗೌಡ,  ನಿಮಾದ ಪರಿಸರ ರಕ್ಷಣೆಯ ಯೋಜನೆಗಳಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಕೊಡಗು ಹವ್ಯಕ ವಲಯದ ಮುಖಂಡರಾದ ನಾರಾಯಣ ಮೂರ್ತಿ  ಚಾರಣಿಗರಿಗೆ…

Read More

ಮಡಿಕೇರಿ ಫೆ.28 : ಪ್ರತಿ ಮನುಷ್ಯನಿಗೆ ನೇತ್ರ ಪ್ರಮುಖವಾಗಿದ್ದು, ಎಲ್ಲರೂ ನೇತ್ರ ಸಂರಕ್ಷಣೆಗೆ ಮುಂದಾಗಬೇಕು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಸಿ.ಕೆ.ರೋಹಿತ್ ಹೇಳಿದರು. ಪಟ್ಟಣದ ಜ್ಞಾನವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಚಿಕ್ಕಮಗಳೂರಿನ ಡೆಲ್ಟಾ ಕಣ್ಣಿನ ಕೇಂದ್ರ ಮತ್ತು ಲಯನ್ಸ್ ಕ್ಲಬ್ ಆಫ್ ಸೋಮವಾರಪೇಟೆ ಆಶ್ರಯದಲ್ಲಿ ನಡೆದ ನೇತ್ರ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರು ವರ್ಷಕೊಮ್ಮೆಯಾದರೂ ನೇತ್ರ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಮುಂಜಾಗ್ರತೆ ವಹಿಸಬೇಕು ಎಂದರು. ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ಕೆ.ಎನ್.ತೇಜಸ್ವಿ, ಖಜಾಂಚಿ ಜಿ.ಟಿ.ಯೋಗೇಂದ್ರ, ನಿಕಟಪೂರ್ವ ಅಧ್ಯಕ್ಷ ಸಿ.ಕೆ.ಮಲ್ಲಪ್ಪ, ನಿರ್ವಾಣಿ ಶೆಟ್ಟಿ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬಿ.ಎಂ.ಚಂದ್ರಾಜು, ಕಾರ್ಯದರ್ಶಿ ವೆಂಕಟೇಶ್, ಎ.ಎಸ್.ಮಹೇಶ್, ಶಾಲಾ ಮುಖ್ಯಶಿಕ್ಷಕಿ ಲಕ್ಷ್ಮಿ, ಚಿಕ್ಕಮಗಳೂರಿನ ಡೆಲ್ಟಾ ಕಣ್ಣಿನ ಕೇಂದ್ರದ ಪ್ರಮುಖರಾದ ಜ್ಯೋತಿ ಹಾಜರಿದ್ದರು.

Read More

ಚೆಟ್ಟಳ್ಳಿ ಫೆ.28 : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ರೈತರಿಗೆ ಪ್ರಯೋಜನಕಾರಿಯಾಗಿದೆ ಎಂದು  ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ, ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ  ಬಲ್ಲಾರಂಡ ಮಣಿ ಉತ್ತಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಚೆಟ್ಟಳ್ಳಿಯ ವಿಶ್ವಗುರು ಶ್ರೀ ನರೇಂದ್ರ ಮೋದಿ ಸಹಕಾರ ಭವನದಲ್ಲಿ ನಡೆದ ನಬಾರ್ಡ್ ಪ್ರಾಯೋಜಿತ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕು ಹಾಗೂ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಜಂಟಿ ಆಶ್ರಯದಲ್ಲಿ ನಡೆದ ಆರ್ಥಿಕ ಸಾಕ್ಷರತೆ ಹಾಗೂ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯ ಕಾರ್ಯಗಾರವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಸಹಕಾರ ಸಂಘಗಳಲ್ಲಿ ರೈತರಿಗೆ ಶೇ.40 ರಷ್ಟು ಆರ್ ಟಿಸಿಯಿಂದ ಸಾಲ ಸೌಲಭ್ಯ ಪಡೆಯುತ್ತಿದ್ದು, ಸರಕಾರದ ಸೌಲಭ್ಯಗಳನ್ನು ಪಡೆಯಲು ತೀವ್ರ ತೊಂದರೆಯಾಗುತ್ತಿದೆ ಎಂದರು. ಜಾಗದಾಖಲೆ ಸರಿಪಡಿಸಲು ರೈತರಿಂದ ಪ್ರತೀ ಏಕರೆಗೆ 25 ಸಾವಿರ ಲಂಚ ಪಡೆಯುತ್ತಿರುವುದು ವಿಷಾದನೀಯ  ಎಂದ  ಅವರು,  ಬ್ಯಾಂಕ್ ವ್ಯವಹಾರದಲ್ಲಿ…

Read More

ನಾಪೋಕ್ಲು ಫೆ.28 : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕುರುಚಲು ಕಾಡು ಹಾಗೂ ಗಿಡಗಳು ಭಸ್ಮವಾಗಿವೆ. ಸುಮಾರು ಮೂರುವರೆ (3.5)ಎಕ್ರೆ ವ್ಯಾಪ್ತಿಯ ಕಾಲೇಜಿನ ಆವರಣ ಬೆಂಕಿಗೆ ಆಹುತಿಯಾಗಿದ್ದು, ನಷ್ಟ ಸಂಭವಿಸಿದೆ. ಅಗ್ನಿಶಾಮಕ ದಳ ಹಾಗೂ ಸಾರ್ವಜನಿಕರ ನೆರವಿನೊಂದಿಗೆ ವ್ಯಾಪಕವಾಗಿ ಹಬ್ಬಿದ ಬೆಂಕಿಯನ್ನು ಸಹಬಂದಿಗೆ ತರಲಾಯಿತು. ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ.ಕಾವೇರಿ ಮಾತನಾಡಿ, ಕಾಲೇಜಿನ ಆವರಣದಲ್ಲಿ ಮೊಬಿಯಸ್ ಕಂಪನಿಯ ಸಹಯೋಗದೊಂದಿಗೆ ನೂರಕ್ಕೂ ಅಧಿಕ ಹಣ್ಣಿನ ಗಿಡಗಳನ್ನು ನೆಟ್ಟು ಸಂರಕ್ಷಿಸಲಾಗಿತ್ತು. ಆದರೆ, ಕುರುಚಲು ಕಾಡಿನೊಂದಿಗೆ ಹಣ್ಣಿನ ಗಿಡಗಳು ಅಗ್ನಿ ಗಾಹುತಿಯಾಗಿದ್ದು, ನಷ್ಟ ಸಂಭವಿಸಿದೆ ಎಂದು ತಿಳಿಸಿದ್ದಾರೆ. ವರದಿ : ದುಗ್ಗಳ ಸದಾನಂದ 

Read More

ಸೋಮವಾರಪೇಟೆ ಫೆ.28 : ಭತ್ತದ ಫಸಲು ತುಂಬಿದ ಹುಲ್ಲಿನ ಮೆದೆಗೆ ಕಾಡಾನೆಗಳು ದಾಳಿ ನಾಶಪಡಿಸಿರುವ ಘಟನೆ ಐಗೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೃಷಿಕ ಕೆ.ಪಿ.ದಿನೇಶ್ ಎಂಬವರು ಗದ್ದೆಯಲ್ಲಿ ಸಂಗ್ರಹಿಸಿಟ್ಟ ಹುಲ್ಲನ್ನು ನಾಶಪಡಿಸಿದ್ದು, ರೂ. 1 ಲಕ್ಷ ನಷ್ಟ ಉಂಟಾಗಿದೆ ಎಂದು ಕೆ.ಪಿ.ದಿನೇಶ್ ಅರಣ್ಯ ಇಲಾಖೆಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಸ್ಥಳಕ್ಕೆ ಡಿಆರ್‍ಎಫ್‍ಒ ಜಗದೀಶ್ ಮತ್ತು ಅರಣ್ಯ ರಕ್ಷಕ ಭರಮಪ್ಪ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

Read More

ಸೋಮವಾರಪೇಟೆ ಫೆ.28 : ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆ ಮತ್ತು ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ರಾಜ್ಯ ಸರ್ಕಾರಿ ನೌಕರರ ಸಂಘ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ತಾಲ್ಲೂಕು ಪ್ರಥಮಿಕ ಶಾಲಾ ಶಿಕ್ಷಕರ ಸಂಘ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಸಂಘದ ತಾಲೂಕು ಘಟಕ ಅಧ್ಯಕ್ಷ ಬಸವರಾಜು, ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಸೌಲಭ್ಯಗಳನ್ನು 2022ರ ಜುಲೈ 1 ರಿಂದಲೇ ಜಾರಿಗೊಳಿಸಬೇಕಾಗಿತ್ತು. ಆದರೆ, ಇದೂವರೆಗೂ ಜಾರಿಯಾಗಿಲ್ಲ. ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲೂ ಇದರ ಉಲ್ಲೇಖವಿಲ್ಲ. ರಾಜ್ಯ ಸರ್ಕಾರಿ ನೌಕರರು ಹಾಗೂ ಸರ್ಕಾರದ ಅಧೀನಕ್ಕೆ ಒಳಪಡುವ ನೌಕರರು 7ನೇ ವೇತನ ಆಯೋಗದ ಸೌಲಭ್ಯಕ್ಕೆ ಅರ್ಹರಾಗಿದ್ದು, ರಾಜ್ಯ ಸರ್ಕಾರ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮೊದಲು ಈ ಸೌಲಭ್ಯಗಳನ್ನು ನೀಡಬೇಕೆಂದು ಆಗ್ರಹಿಸಿದರು. ರಾಜ್ಯದ ಎನ್‍ಪಿಎಸ್ ನೌಕರರ ಜೀವನ ನಿರ್ವಹಣೆ ಹಾಗೂ ಸಂದ್ಯಾಕಾಲದ ಬದುಕು ಅತ್ಯಂತ ಕಷ್ಟಕರವಾಗಿರುವುದರಿಂದ ಎನ್‍ಪಿಎಸ್ ನೌಕರರನ್ನು ಓಪಿಎಸ್ ವ್ಯಾಪ್ತಿಗೆ ತರಲೇಬೇಕು. ಈಗಾಗಲೇ ಪಂಜಾಬ್, ರಾಜಸ್ಥಾನ,…

Read More

ಸೋಮವಾರಪೇಟೆ ಫೆ.28 : ದೊಡ್ಡಮಳ್ತೆ ಫಾರ್ಮರ್ಸ್ ಸ್ಪೋರ್ಟ್ಸ್ ರಿಕ್ರಿಯೇಷನ್ ಅಸೋಸಿಯೇಷನ್ ವತಿಯಿಂದ ದೊಡ್ಡಮಳ್ತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬ್ಯಾಂಡ್‍ ಸೆಟ್ ನ್ನು ಕೊಡುಗೆಯಾಗಿ ನೀಡಲಾಯಿತು. ಶಾಲಾ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಸೋಸಿಯೇಷನ್ ಅಧ್ಯಕ್ಷ ಜಿ.ಪಿ.ಸುನೀಲ್ ಬ್ಯಾಂಡ್ ಸೆಟ್ ಹಸ್ತಾಂತರಿಸಿದರು. ನಂತರ ಮಾತನಾಡಿದ ಅವರು ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಅನುಭವಿ ಶಿಕ್ಷಕರು ಇರುತ್ತಾರೆ. ಸರ್ಕಾರದಿಂದ ಎಲ್ಲಾ ರೀತಿಯ ಸೌಲಭ್ಯಗಳು ಸಿಗುತ್ತಿವೆ. ಹಳ್ಳಿಗಾಡಿನ ಕ್ರೀಡಾ ಪ್ರತಿಭೆಗಳು ಗ್ರಾಮೀಣ ಶಾಲೆಯಲ್ಲಿ ಇದ್ದು, ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಶಿಕ್ಷಕರು, ಪೋಷಕರು, ನಾವೆಲ್ಲರೂ ಮಾಡಬೇಕು ಎಂದರು. ಈ ಸಂದರ್ಭ ಅಸೋಸಿಯೇಷನ್ ಕಾರ್ಯದರ್ಶಿ ಎಂ.ಪಿ.ರವಿ, ಎಸ್‍ಡಿಎಂಸಿ ಅಧ್ಯಕ್ಷ ಸತೀಶ್, ಗ್ರಾ.ಪಂ ಸದಸ್ಯ ರುದ್ರಪ್ಪ, ಮುಖ್ಯಶಿಕ್ಷಕಿ ತಂಗಮ್ಮ, ಶಾಲಾ ಜಾಗದ ದಾನಿಗಳಾದ ಶಾಂತಪ್ಪ, ಮಾಜಿ ಸೈನಿಕ ಶಾಂತರಾಜು, ದೈಹಿಕ ಶಿಕ್ಷಣ ಶಿಕ್ಷಕ ಶಿವಶಂಕರ್, ಅಸೋಸಿಯೇಷನ್ ಸದಸ್ಯರಾದ ಎಚ್.ಕೆ.ಪೃಥ್ವಿ, ಡಿ.ಎಸ್.ಸುಬ್ರಮಣಿ, ಎಂ.ಬಿ.ಚಂದ್ರಶೇಖರ್, ಎಚ್.ಕೆ.ಗಿರೀಶ್, ಚಿದಾನಂದ ಇದ್ದರು. ವಿದ್ಯಾರ್ಥಿಗಳಿಂದ ಆಕರ್ಷಕ ಕವಾಯತು ನಡೆಯಿತು.

Read More