ಮಡಿಕೇರಿ ಫೆ.28 : ಕುಲಶಾಸ್ತ್ರ ಅಧ್ಯಯನದ ಹೆಸರಿನಲ್ಲಿ ನೈಜ ಕೊಡವರನ್ನು ವಂಚಿಸಿ ಕೊಡವರ ಹೆಸರಿನಲ್ಲಿ ಕೊಡವರಲ್ಲದವರ ಅಧ್ಯಯನಕ್ಕೆ ಸರ್ಕಾರ ಮುಂದಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಗಂಭೀರ ಆರೋಪ ಮಾಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸರ್ಕಾರದ ನಡೆ ಸಂವಿಧಾನಿಕ ನೈತಿಕತೆಯ ಉಲ್ಲಂಘನೆಯಾಗಿದೆ. ಹುಲಿಯ ಅಧ್ಯಯನ ಹುಲಿಯ ಹೆಸರಿನಲ್ಲೇ ನಡೆಯಲಿ, ಹುಲಿ ಚಿತ್ರ ತೋರಿಸಿ ಕಾಡುಬೆಕ್ಕು ಅಧ್ಯಯನವನ್ನು ಮಾಡಬೇಡಿ. ಮುಖ್ಯಮಂತ್ರಿಗಳು ಕೊಡವ ವಿರೋಧಿ ಎಂಬ ಕಳಂಕ ಹೊತ್ತುಕೊಳ್ಳಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಕೊಡವರ ಕುಲ ಶಾಸ್ತ್ರ” ಅಧ್ಯಯನಕ್ಕೆ ಸಂಬoಧಿಸಿದ ಕಡತ (ಸಂಖ್ಯೆ SWD74 SAD 2022 ರ ಕಡತ) ಕಳೆದ ಆಗಸ್ಟ್ ತಿಂಗಳಿನಿoದ ಮುಖ್ಯಮಂತ್ರಿಗಳ ಬಳಿಯೇ ಉಳಿದಿದೆ. ನೈಜ ಕೊಡವರ ಅಧ್ಯಯನಕ್ಕೆ ತಕ್ಷಣ ಚಾಲನೆ ನೀಡುವ ಮೂಲಕ ಈ ಕಡತಕ್ಕೆ ಜೀವ ತುಂಬಬೇಕು ಎಂದು ಒತ್ತಾಯಿಸಿದ್ದಾರೆ. ಭಾಷಿಕರ ಪ್ರತ್ಯೇಕ ವ್ಯಕ್ತಿತ್ವದ ಹೆಸರಿನಲ್ಲಿ ಕುಲಶಾಸ್ತ್ರದ ಅಧ್ಯಯನ ನಡೆಸಲಿ, ಆದರೆ ಅವರ ಅಸಲಿಯತ್ತನ್ನು ಮರೆಮಾಚಿ (ಕ್ಯಾಮೋಫ್ಲೋಜ್) ಕೊಡವ ಮುಖವಾಡ ತೊಡಿಸುವ ಮೂಲಕ…
ಲೇಖಕ: admin
ಕೂಡುಮಂಗಳೂರು, ಫೆ.28 : ಉತ್ತರ ಕೊಡಗಿನ ಕುಶಾಲನಗರ ತಾಲ್ಲೂಕಿನ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿಯ ವತಿಯಿಂದ ಶಾಲೆಯ ವಿಜ್ಞಾನ ಸಂಘ, ಇಕೋ ಕ್ಲಬ್, ಎನ್.ಎಸ್.ಎಸ್.ಘಟಕದ ಸಹಯೋಗದೊಂದಿಗೆ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು. ವಿಜ್ಞಾನ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳು ವಿವಿಧ ವಿಜ್ಞಾನ ಪ್ರಯೋಗಗಳ ಪ್ರಾತ್ಯಕ್ಷಿಕೆ ಪ್ರದರ್ಶಿಸಿ ವೈಜ್ಞಾನಿಕ ಕಾರಣಗಳನ್ನು ನೀಡುವ ಮೂಲಕ ಗಮನ ಸೆಳೆದರು. ವಿದ್ಯಾರ್ಥಿಗಳು ಸ್ವತಃ ಪ್ರದರ್ಶಿಸಿದ ವಿಜ್ಞಾನ ಪ್ರಯೋಗಕ್ಕೆ ಚಾಲನೆ ನೀಡುವ ಮೂಲಕ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಅಧ್ಯಕ್ಷರೂ ಆದ ಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಮಾತನಾಡಿ,ವಿದ್ಯಾರ್ಥಿಗಳು ದೇಶದ ವಿಜ್ಞಾನಿಗಳ ಸಂಶೋಧನೆ ಮತ್ತು ಅವರ ಸಾಧನೆಗಳ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸುವ ಮೂಲಕ ಮೂಲ ವಿಜ್ಞಾನ ಕಲಿಕೆಯೊಂದಿಗೆ ತಮ್ಮನ್ನು ಹೊಸ ಹೊಸ ಅನ್ವೇಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.…
ಮಡಿಕೇರಿ ಫೆ.28 : ಪೊನ್ನಂಪೇಟೆ 66/11 ಕೆವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಎಫ್1 ನಲ್ಲೂರು ಮತ್ತು ಎಫ್2 ಬಾಳೆಲೆ ಫೀಢರ್‍ನಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕಿರುವುದರಿಂದ ಮಾರ್ಚ್, 01 ರಿಂದ 04 ರವರೆಗೆ ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಆದ್ದರಿಂದ ಕಿರುಗೂರು, ನಲ್ಲೂರು, ಸುಳುಗೋಡು, ಬಾಳೆಲೆ, ನಿಟ್ಟೂರು, ಮತ್ತೂರು, ಬೆಸಗೂರು, ರಾಜಪುರ, ಪೊನ್ನಪ್ಪಸಂತೆ, ಕಾರ್ಮಾಡು, ದೇವನೂರು ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅನಿತಾ ಬಾಯಿ ಅವರು ಕೋರಿದ್ದಾರೆ.
ಮಡಿಕೇರಿ ಫೆ.28 : ಕವಿ ಸರ್ವಜ್ಞ ಅವರು ತ್ರಿಪದಿಗಳ ಮೂಲಕ ಸಮಾಜದ ಆಗುಹೋಗುಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಸರ್ವಜ್ಞರು ತ್ರಿಪದಿಗಳ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಭಾರತೀಯ ವಿದ್ಯಾಭವನದಲ್ಲಿ ತ್ರಿಪದಿ ಕವಿ ಸರ್ವಜ್ಞ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಡಿದರೆ ಆಡುವನು, ವಾಚಿಸಿದರೆ ವಾಚಿಸುವನು ಹೀಗೆ ವಿಶಿಷ್ಟ ಸಾಹಿತ್ಯ ಪರಂಪರೆಯನ್ನು ಹುಟ್ಟು ಹಾಕಿದ್ದ ಸರ್ವಜ್ಞರ ತ್ರಿಪದಿ ಸಾಹಿತ್ಯ ಸಾರ್ವಕಾಲಿಕವಾಗಿದೆ ಎಂದು ಡಾ.ನಂಜುಂಡೇಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಸಾಹಿತಿ ಡಾ.ಜೆ.ಸೋಮಣ್ಣ ಅವರು ಮಾತನಾಡಿ ಸರ್ವಜ್ಞರು ತನಗಾಗಿ ಬದುಕದೆ ಸಮಾಜಕ್ಕಾಗಿ ಬದುಕಿದರು. ನಾಡಿನುದ್ದಗಲಕ್ಕೂ ಸಂಚರಿಸಿದ ಸರ್ವಜ್ಞರು ಶಾಲೆ ಕಾಲೇಜುಗಳಲ್ಲಿ ಕಲಿಯುವ ವಿಷಯಕ್ಕೆ ಹೆಚ್ಚಿನ ಜ್ಞಾನವನ್ನು ಸಮಾಜದಿಂದ ಕಲಿತರು. ಹೀಗಾಗಿ ಇವರಿಗೆ ಸರ್ವಜ್ಞ ಎಂದು ಹೆಸರು ಬರಲು ಸಾಧ್ಯವಾಯಿತು ಎಂದರು. ಸರ್ವಜ್ಞರ ಮೊದಲಿನ ಹೆಸರು ಪುಷ್ಪದತ್ತ…
ಮಡಿಕೇರಿ ಫೆ.28 : ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ ವಾಪ್ತಿಯಲ್ಲಿ 20 ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 45 ಒಟ್ಟು 65 ಮತಗಟ್ಟೆಗಳಲ್ಲಿ ಶೇ.65 ಕ್ಕಿಂತ ಕಡಿಮೆ ಮತದಾನವಾಗಿದ್ದು, ಈ ಹಿನ್ನೆಲೆ ಈ 65 ಮತಗಟ್ಟೆಗಳಲ್ಲಿ ಮತದಾನ ಕಡಿಮೆಯಾಗಲು ಕಾರಣವೇನು ಮತ್ತು ಮತದಾನ ಹೆಚ್ಚಳಕ್ಕೆ ಯಾವ ರೀತಿಯ ಕ್ರಮವಹಿಸಬಹುದು ಎಂಬ ಬಗ್ಗೆ ಮಾರ್ಚ್, 4 ರೊಳಗೆ ನಿಖರ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಸ್ವೀಪ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಡಿಕೇರಿ ನಗರಸಭೆ, ವಿರಾಜಪೇಟೆ ಪಟ್ಟಣ ಪಂಚಾಯಿತಿ, ಕುಶಾಲನಗರ ಹಾಗೂ ಜಿಲ್ಲೆಯ ಗಡಿ ಪ್ರದೇಶದಲ್ಲಿ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಡಿಮೆ ಮತದಾನವಾಗಿದೆ. ಆದ್ದರಿಂದ ಕಡಿಮೆ ಮತದಾನವಾಗಲು ಕಾರಣ ಮತ್ತು ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಮತದಾನವಾಗಲು ಯಾವ ರೀತಿ ಕ್ರಮವಹಿಸಬಹುದು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ…
ಮಡಿಕೇರಿ ಫೆ.28 : ಒಡಿಶಾದ ರೋರ್ಕೆಲಾದಲ್ಲಿ ನಡೆಯಲಿರುವ ಎಫ್‍ಐಎಚ್ ಪ್ರೋ-ಲೀಗ್ ಅಂತರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಭಾರತೀಯ ಪರುಷರ ಹಾಕಿ ತಂಡದ ತರಬೇತುದಾರರಾಗಿ ಕಾರ್ಯನಿರ್ವಹಿಸಲು ಕೊಡಗಿನ ವಿರಾಜಪೇಟೆಯ ಬೊಳ್ಳೆಪಂಡ ಜೆ.ಕಾರ್ಯಪ್ಪ ಆಯ್ಕೆಯಾಗಿದ್ದಾರೆ. ಇವರೊಂದಿಗೆ ಶಿವೇಂದರ್ ಸಿಂಗ್, ಆಸ್ಟ್ರೀಲಿಯಾದ ಡೇವಿಡ್ ಜಾನ್ ಅವರು ಕೂಡ ಕೈಜೋಡಿಸಲಿದ್ದಾರೆ. ಇತ್ತೀಚಿಗಷ್ಟೆ ಭಾರತ ತಂಡದ ಮುಖ್ಯ ತರಬೇತುದಾರರ ಹುದ್ದೆಗೆ ಭಾರತವು ವಿಶ್ವಕಪ್‍ನಲ್ಲಿ ಸಾಧನೆ ಮಾಡಲು ವಿಫಲವಾದ ಕಾರಣ ರಾಜಿನಾಮೆ ನೀಡಿದ್ದ ಗ್ರಾಹಾಮ್ ರೀಡ್ ಸ್ಥಾನವನ್ನು ಇವರುಗಳು ತುಂಬಲಿದ್ದಾರೆ. ಮುಂದಿನ ತಿಂಗಳು ಪ್ರತಿಷ್ಠಿತ ಆಸ್ಟ್ರೇಲಿಯಾ ಹಾಗೂ ಜರ್ಮನಿ ಹಾಕಿ ತಂಡಗಳ ವಿರುದ್ಧ ರೋರ್ಕೆಲಾದಲ್ಲಿ ಹಾಕಿ ಪಂದ್ಯಾವಳಿ ನಡೆಯಲಿದ್ದು, ಈ ಟೂರ್ನಿಯಲ್ಲಿ ತರಬೇತುದಾರರ ಪಾತ್ರವನ್ನು ಕಾರ್ಯಪ್ಪ ಹಾಗೂ ತಂಡ ವಹಿಸಲಿದೆ. ತಂಡದ ನಾಯಕತ್ವವನ್ನು ಹರ್ಮನ್‍ಪ್ರೀತ್ ಸಿಂಗ್ ವಹಿಸಿಲಿದ್ದಾರೆ. ಗೋಲ್‍ಕೀಪರ್‍ಗಳಾಗಿ ಶ್ರೀಜೇಶ್, ಪವನ್, ಮಿಡ್‍ಫೀಲ್ಡ್‍ರ್ಸ್ ಆಗಿ ಹಾರ್ದಿಕ್ ಸಿಂಗ್, ರಾಜ್‍ಕುಮಾರ್ ಪಾಲ್, ವಿವೇಕ್ ಸಾಗರ್ ಪ್ರಸಾದ್, ಮನ್‍ಪ್ರೀತ್ ಸಿಂಗ್, ಮೊಯ್ರಾಂಗ್‍ತೆಮ್, ರಬಿಚಂದ್ರ ಸಿಂಗ್ ವಿಷ್ಣುಕಾಂತ್ ಸಿಂಗ್, ದಿಲ್ ಪ್ರೀತ್ ಸಿಂಗ್, ಶಿಮ್‍ಶೀರ್ ಸಿಂಗ್,…
ವಿರಾಜಪೇಟೆ ಫೆ.28 : ಸುಮಾರು 300 ವರ್ಷಗಳ ಪುರಾತನವಾದ ವಿರಾಜಪೇಟೆ ತಾಲ್ಲೂಕಿನ ಕದನೂರು ಗ್ರಾಮದಲ್ಲಿ ನೆಲೆಗೊಂಡಿರುವ ಶ್ರೀ ಚೈತನ್ಯ ಮಠಪುರ ಆದಿ ಮುತ್ತಪ್ಪನ್ ದೇವಾಲಯದ ವಾರ್ಷಿಕ ತೆರೆ ಮಹೋತ್ಸವವು ಮಾ.1 ರಂದು ಜರುಗಲಿದೆ. ಅಂದು ಬೆಳಿಗ್ಗೆ 6-30ಕ್ಕೆ ಗಣಪತಿ ಹೋಮ, 9 ಗಂಟೆಗೆ ಧ್ವಜಾರೋಹಣ, 10.30 ಕ್ಕೆ ಪೈಂಗುತ್ತಿ ನೆರವೇಲಿದೆ. ಸಂಜೆ 6.30ಕ್ಕೆ ಶ್ರೀ ಮುತ್ತಪ್ಪನ್ ವೆಳ್ಳಾಟಂ,7-30 ಗಂಟೆಗೆ ಶ್ರೀ ಗುಳಿಗನ್ ವೆಳ್ಖಾಟಂ ನಡೆಯಲಿದೆ. ದೇವಾಲಯದ ತೆರೆ ಮಹೋತ್ಸವಕ್ಕೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ಮುಖ್ಯಸ್ಥರು ಮತ್ತು ಉತ್ಸವ ಸಮಿತಿ ಸದಸ್ಯರು ಮನವಿ ಮಾಡಿದ್ದಾರೆ.
ಸಿದ್ದಾಪುರ ಫೆ.28 : ಆಟೋ ಚಾಲಕರು ಮತ್ತು ಮಾಲೀಕರು ಸಾರ್ವಜನಿಕ ವಲಯದಲ್ಲಿ ಬದುಕು ಕಂಡುಕೊಳ್ಳಲು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು ಎಂದು ಸಿದ್ದಾಪುರ ಗ್ರಾ.ಪಂ ಅಧ್ಯಕ್ಷರಾದ ತಿತಮಾಡ ರೀನಾ ತುಳಸಿ ಅಭಿಪ್ರಾಯ ವ್ಯಕ್ತಪಡಿಸಿದರು. ಸಿದ್ದಾಪುರ ಮತ್ತು ನೆಲ್ಯಹುದಿಕೇರಿ ಆಟೋ ಚಾಲಕ ಮತ್ತು ಮಾಲೀಕರ ಸಂಘ ವತಿಯಿಂದ ಸಿದ್ದಾಪುರದ ಮೈಸೂರು ರಸ್ತೆಯ ಸಂಘ ಕಚೇರಿಯಲ್ಲಿ ನಡೆದ ಮೂರನೇ ವರ್ಷದ ವಾರ್ಷಿಕೋತ್ಸವ ಮತ್ತು ಮಹಾಸಭೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಆಟೋ ಚಾಲಕರು ಸ್ನೇಹಜೀವಿಗಳು, ಕಡು ಬಡವರು, ಮಧ್ಯಮ ಕುಟುಂಬ ವರ್ಗಕ್ಕೆ ಬಡವನ ತೇರು. ಬದುಕನ್ನು ರೂಪಿಸಿಕೊಳ್ಳಲು ಸಮಾಜದ ಮುಖ್ಯವಾಹಿನಿಗೆ ಬಂದವರು. ಸಾರ್ವಜನಿಕರೊಂದಿಗೆ ಸೌಜನ್ಯದೊಂದಿಗೆ ವರ್ತನೆ ಮಾಡಬೇಕು. ಆರ್ಥಿಕವಾಗಿ ಸಫಲತೆ ಹೊಂದಬೇಕು. ಕುಟುಂಬ ನಿರ್ವಹಣೆ ಕಷ್ಟ ಸಾದ್ಯವಾದರು. ವೃತ್ತಿಗೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು. ಸಂಘದ ಜಿಲ್ಲಾ ಉಪಾಧ್ಯಕ್ಷ ಶಶಿಧರನ್ ಮಾತನಾಡಿ, ಚಾಲಕರು ಸಂಘಟನೆಯಲ್ಲಿ ತೊಡಗಬೇಕು. ಚಾಲನೆಯಲ್ಲಿರುವ ಆಟೋಗಳಲ್ಲಿ ಎಲ್ಲಾ ದಾಖಲೆ ಪತ್ರಗಳನ್ನು ಹೊಂದಿಕೊಂಡು ತೆರಳಬೇಕು. ಇಲಾಖೆಯಿಂದ…
ಮಡಿಕೇರಿ ಫೆ.28 : ದೆಹಲಿಯ ಉಪಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ಮನೀಷ್ ಸಿಸೋದಿಯಾ ಬಂಧನವನ್ನು ಆಮ್ ಆದ್ಮಿ ಪಾರ್ಟಿಯ ಕೊಡಗು ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ಖಂಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ದೇಶಾದ್ಯಂತ ಎಎಪಿ ಬೆಳೆಯುತ್ತಿರುವುದನ್ನು ಸಹಿಸದ ಬಿಜೆಪಿ ಸರ್ಕಾರ ಹತಾಶ ಮನೋಭಾವದಿಂದ ಈ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ದೆಹಲಿಯ ಅಬಕಾರಿ ನೀತಿಯಲ್ಲಿ ಯಾವುದೇ ಅವ್ಯವಹಾರವಾಗಿಲ್ಲ. ನೂತನ ಅಬಕಾರಿ ನೀತಿಯನ್ನು ದೆಹಲಿಯಲ್ಲಿ ಇನ್ನೂ ಜಾರಿಗೆ ತಂದಿಲ್ಲ ಹಾಗೂ ಹಲವು ರಾಜ್ಯಗಳಲ್ಲಿ ಇದೇ ನೀತಿ ಜಾರಿಯಲ್ಲಿದೆ ಎಂಬುವುದನ್ನು ನಾವಿಲ್ಲಿ ಗಮನಿಸಬೇಕು. ಸುಮಾರು ಒಂದು ವರ್ಷದಿಂದ ಕೇಂದ್ರ ಸರ್ಕಾರದ ತನಿಖಾಧಿಕಾರಿಗಳು ಸಿಸೋದಿಯಾರವರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿದ್ದರೂ, ಆರೋಪವನ್ನು ಸಾಬೀತುಪಡಿಸುವಂತಹ ಯಾವುದೇ ಸಣ್ಣ ಸಾಕ್ಷಿ ಸಿಕ್ಕಿಲ್ಲ. ನಗದು ಅಥವಾ ಯಾವುದೇ ಅಕ್ರಮ ದಾಖಲೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಆಮ್ ಆದ್ಮಿ ಪಾರ್ಟಿಯೊಂದೇ ಬಿಜೆಪಿಯನ್ನು ಎದುರಿಸುವ ಏಕೈಕ ಶಕ್ತಿ ಎಂಬುವುದನ್ನು ಅರಿತಿರುವ ಕೇಂದ್ರ ಸರ್ಕಾರ ನಮ್ಮನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದೇ, ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು…
ಮಡಿಕೇರಿ ಫೆ.28 : ಚಾಲಕನ ನಿಯಂತ್ರಣ ತಪ್ಪಿದ ಗೊಬ್ಬರ ಸಾಗಿಸುತ್ತಿದ್ದ ಲಾರಿಯೊಂದು ರಸ್ತೆ ಬದಿಗೆ ಉರುಳಿ ಬಿದ್ದ ಘಟನೆ ಮೇಕೇರಿ ಬಳಿ ನಡೆದಿದೆ. ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳೂರು ಕಡೆಯಿಂದ ಪೊನ್ನಂಪೇಟೆ ತಾಲೂಕಿನ ಹುದಿಕೇರಿಗೆ ಲಾರಿಯಲ್ಲಿ ಗೊಬ್ಬರ ಸಾಗಿಸಲಾಗುತ್ತಿತ್ತು. ಲಾರಿ ಚಾಲಕ ತಾಳತ್ತಮನೆ-ಮೇಕೇರಿ ಬೈಪಾಸ್ ರಸ್ತೆಯ ಮಾಹಿತಿ ಅರಿಯದೆ ಮಡಿಕೇರಿಗೆ ಆಗಮಿಸಿ ಜನರಲ್ ತಿಮ್ಮಯ್ಯ ವೃತ್ತದಿಂದ ವಿರಾಜಪೇಟೆ ಮಾರ್ಗಕ್ಕಾಗಿ ಹುದಿಕೇರಿ ಕಡೆಗೆ ಲಾರಿ ಚಲಾಯಿಸಿದ್ದಾರೆ. ಮೇಕೇರಿ ಮಸೀದಿ ಬಳಿಯ ಇಳಿಜಾರು ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡ ಲಾರಿ ರಸ್ತೆ ಬದಿಗೆ ಮಗುಚಿ ಬಿದ್ದಿದೆ. ಗೊಬ್ಬರ ಚೀಲಗಳು ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದ್ದು, ಕೆಲವು ಚೀಲಗಳಿಗೆ ಹಾನಿಯಾಗಿದೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಕ್ರೇನ್‍ಗಳ ಸಹಾಯದಿಂದ ಲಾರಿಯನ್ನು ಮೇಲೆತ್ತಲಾಗಿದೆ. ಕೆಲವು ದಿನಗಳ ಹಿಂದೆ ಇದೇ ಸ್ಥಳದಲ್ಲಿ ಸುಣ್ಣ ಸಾಗಿಸುತ್ತಿದ್ದ ಲಾರಿಯೊಂದು ಮಗುಚಿ ಬಿದ್ದಿತ್ತು.






