ಲೇಖಕ: admin

ಮಡಿಕೇರಿ ಜ.18 : ಶ್ರೀ ರಾಮಚಂದ್ರಪುರ ಮಠದ ಅಧೀನದಲ್ಲಿರುವ ಸಂಪಾಜೆಯ ಜೇಡ್ಲದಲ್ಲಿನ ಗೋಪಾಲಕೃಷ್ಣ ದೇವಕಿ ಪಶು ಸಂಗೋಪನಾ ಕೇಂದ್ರದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಗೋವುಗಳ ಆರೋಗ್ಯ ಸುಧಾರಣೆ ಹಾಗೂ ಗ್ರಾಮದ ಕ್ಷೇಮಾಭಿವೃದ್ಧಿಗೆ ಪ್ರಾರ್ಥಿಸಿ ಗೋಪೂಜೆ ಮತ್ತು ಗೋವುಗಳ ಕಿಚ್ಚು ಹಾಯಿಸುವ ವಿನೂತನ ಕಾರ್ಯಕ್ರಮ  ನಡೆಯಿತು. ಬಯಲುಸೀಮೆಯಲ್ಲಿ ಚಿರಪರಿಚಿತವಾಗಿದ್ದ ಸುಗ್ಗಿಹಬ್ಬದ ಈ ಕಾರ್ಯಕ್ರಮವನ್ನು ಪ್ರಥಮ ಬಾರಿಗೆ  ಆಚರಿಸಲಾಯಿತು. ಸರಳವಾಗಿ ಅಲಂಕರಿಸಿದ್ದ ಗೋವುಗಳನ್ನು ಮೆರವಣಿಗೆ ಮೂಲಕ ಕಾರ್ಯಕ್ರಮಕ್ಕೆ ಕರೆತರಲಾಯಿತು. ಸುಳ್ಯದ ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಿತಿನ್ ಪ್ರಭು ಕಾರ್ಯಕ್ರಮ ಉದ್ಘಾಟಿಸಿ ಗೋವುಗಳನ್ನು ಕಿಚ್ಚು ಹಾಯಿಸುವದರ ಪ್ರಾಮುಖ್ಯತೆ ಹಾಗೂ ಇದರ ಹಿಂದೆ ಇರುವ ವೈಜ್ಞಾನಿಕ ಕಾರಣವನ್ನು ವಿವರಿಸಿದರು. ಗೋಶಾಲೆಯ ಪ್ರಧಾನ ಕಾರ್ಯದರ್ಶಿ ವಿಜಯಕೃಷ್ಣ ಕಬ್ಬಿನಗದ್ದೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಲ್ಲುಗುಂಡಿಯ ವೈದ್ಯರಾದ ಡಾ.ಜಯರಾಮ್ ಭಟ್ ಗೋಬಂಧು ಯೋಜನೆಯನ್ನು ಬಿಡುಗಡೆಗೊಳಿಸಿದರು‌. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಶಾಲೆಯ ಕಾರ್ಯಾಧ್ಯಕ್ಷ ಡಾ.ರಾಜಾರಾಮ್ ಅಖಿಲಾತಿ ವಹಿಸಿದ್ದರು. ಸಂಪಾಜೆ ಗ್ರಾ.ಪಂ  ಅಧ್ಯಕ್ಷೆ ನಿರ್ಮಲಾ ಭರತ್ ಪಾಲ್ಗೊಂಡಿದ್ದರು. ನಿರಂತರ ಗೋಸೇವೆಯಲ್ಲಿ ತೊಡಗಿಸಿಕೊಂಡಿರುವ ನಾಲ್ವರು ಗೋಪ್ರೇಮಿಗಳನ್ನು …

Read More

ಮಡಿಕೇರಿ ಜ.18 : ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯ ಮಾಲ್ದಾರೆ ಗ್ರಾಮದ ಅವರೆಗುಂದದಲ್ಲಿ ನಿತ್ರಾಣಗೊಂಡಿದ್ದ ಹುಲಿಯೊಂದನ್ನು ರಕ್ಷಿಸುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಸೆರೆಯಾದ ಹುಲಿಯನ್ನು ಮೈಸೂರು ಬಳಿಯ ಕೂರ್ಗಳ್ಳಿಗೆ ಸ್ಥಳಾಂತರಿಸಲಾಗಿದೆ. 12 ವರ್ಷದ ಹುಲಿ ಕಳೆದ ಕೆಲವು ದಿನಗಳ ಹಿಂದೆ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿತ್ತು. ಈ ಹುಲಿಯ ಮೇಲೆ ನಿಗಾ ಇರಿಸಿದ್ದ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಮಾಲ್ದಾರೆ ಗ್ರಾಮದ ಆಸ್ತಾನ ಕೆರೆಯ ಬಳಿ ಸಾಕಾನೆಗಳಾದ ಪ್ರಶಾಂತ್, ಸುಗ್ರೀವ, ಶ್ರೀರಾಮ, ವಿಕ್ರಮ, ಹರ್ಷ, ಈಶ್ವರ ಸಹಯೋಗದೊಂದಿಗೆ ಅರಣ್ಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು. ವೈದ್ಯಾಧಿಕಾರಿ ಡಾ.ರಮೇಶ್ ಹಾಗೂ ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ಅರವಳಿಕೆ ಪ್ರಯೋಗಿಸಿದರು. ಆಹಾರ ಸೇವಿಸದೆ ನಿತ್ರಾಣಗೊಂಡಿದ್ದ ಹುಲಿಗೆ ವೈದ್ಯಾಧಿಕಾರಿ ಡಾ.ಚೆಟ್ಟಿಯಪ್ಪ ಹಾಗೂ ಡಾ.ರಮೇಶ್ ಚಿಕಿತ್ಸೆ ನೀಡಿದರು. ನಂತರ ಹುಲಿಯನ್ನು ಕೂರ್ಗಳ್ಳಿಗೆ ಸ್ಥಳಾಂತರಿಸಲಾಯಿತು. ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಮೂರ್ತಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಎಫ್‍ಓ ಎಂ.ಟಿ.ದೇವಯ್ಯ, ಎಸಿಎಫ್ ಎ.ಎ.ಗೋಪಾಲ, ಕುಶಾಲನಗರ ವಲಯ…

Read More

ಮಡಿಕೇರಿ ಜ.18 :  ಸ್ವಾಮಿ ವಿವೇಕಾನಂದರ 161ನೇ ಜನ್ಮ ದಿನಾಚರಣೆಯ ಪ್ರಯುಕ್ತ ರಾಷ್ಟ್ರೀಯ ಯುವ ದಿನ ಹಾಗೂ ಯುವ ಸಪ್ತಾಹದ ಅಂಗವಾಗಿ ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ ವತಿಯಿಂದ ಯುವಕರಿಗೆ ತರಬೇತಿ ಕಾರ್ಯಕ್ರಮ  ನಡೆಯಿತು. ಗೋಣಿಕೊಪ್ಪ ಪ್ರೌಢಶಾಲೆಯಲ್ಲಿ  ನಡೆದ ಕಾರ್ಯಕ್ರಮವನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ರತಿಷ್ ರೈ ಉದ್ಘಾಟಿಸಿ, ಯುವಕರು ಮಾದಕ ವ್ಯಸನಕ್ಕೆ ಒಳಗಾಗದೆ ಶಿಕ್ಷಕಣಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಕಿವಿ ಮಾತು ಹೇಳಿದರು. ತರಬೇತುದಾರ  ಜೆಸಿಐ ಭಾರತದ ವಲಯ 14ರ ಪೂರ್ವ ಕಾರ್ಯದರ್ಶಿ  ಜೆಸಿ ಡೆನ್ನಿಸ್ ಡಿಸೋಜ ಮಾತನಾಡಿ, ವಿವೇಕಾನಂದರ  ಹಿತನುಡಿಗಳನ್ನು ತಿಳಿಸಿ ಯುವಕರ ಮುಂದಿನ ಭವಿಷ್ಯದಲ್ಲಿ  ಉತ್ತಮ ಪ್ರಜೆಯಾಗಿ ರೂಪಿಸಲು ತರಬೇತಿ ನೀಡಿದರು. ಜೇಸಿ ನೀತ್ ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ  ಕಾರ್ಯಕ್ರಮದಲ್ಲಿ  ನಿರ್ದೇಶಕ  ಜೆಸಿ ಅಂತೋಣಿ ಟಿ.ಜೆ, ಘಟಕದ ಸದಸ್ಯರು, ಶಾಲೆಯ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜೇಸಿ ನೀತ್ ಅಯ್ಯಪ್ಪ  ಸರ್ವರನ್ನು ಸ್ವಾಗತಿಸಿದರು. ಕಾರ್ಯದರ್ಶಿ ಜೆಸಿ ಚೆಟ್ಟೋಳಿರ ಶರತ್ ಸೋಮಣ್ಣ ವಂದಿಸಿದರು.

Read More

ಮಡಿಕೇರಿ ಜ.18 : ಕೊಡಗು ಜಿಲ್ಲೆಯ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಹುಜನ ಸಮಾಜ ಪಕ್ಷ ಸ್ಪರ್ಧಿಸಲಿದ್ದು, ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನವನ್ನು ಈಗಾಗಲೇ ಆರಂಭಿಸಲಾಗಿದೆ ಎಂದು ಬಿಎಸ್‍ಪಿ ಯ ಜಿಲ್ಲಾ ಉಸ್ತುವಾರಿ ಜಯಪ್ಪ ಹಾನಗಲ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲು ಪಕ್ಷ ನಿರ್ಧರಿಸಿದೆ. ಸದಸ್ಯತ್ವ ನೋಂದಣಿ ಅಭಿಯಾನ ಈಗಾಗಲೇ ಪ್ರಾರಂಭವಾಗಿದ್ದು, ಕಾರ್ಯಕರ್ತರು ಸದಸ್ಯತ್ವ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಕೊಡಗು ಜಿಲ್ಲೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ, ಮೂಲಭೂತ ಸೌಲಭ್ಯ, ನಿವೇಶನ ಮತ್ತು ವಸತಿಗಾಗಿ ಹೋರಾಟಗಳು ನಡೆಯುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರೂ ಸಮಸ್ಯೆಗಳು ಜೀವಂತವಾಗಿರುವುದು ಮತ್ತು ಮೂಲಭೂತ ಸೌಲಭ್ಯಕ್ಕೂ ಹೋರಾಟಗಳು ನಡೆಯುತ್ತಿರುವುದು ವಿಷಾದನೀಯವೆಂದರು. ಪರಿಶಿಷ್ಟ ಜಾತಿ ಮತ್ತು ಪಂಗಡದ ಮಂದಿಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ಸಹಾಯಧನದ ಲಾಭವೂ ಅರ್ಹರ ಪಾಲಾಗುತ್ತಿಲ್ಲವೆಂದು ಆರೋಪಿಸಿದರು. ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಂಡು ಬಡವರ ಹಾಗೂ ದುರ್ಬಲ ವರ್ಗದವರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸಬೇಕೆಂದು ಜಯಪ್ಪ ಹಾನಗಲ್ ಒತ್ತಾಯಿಸಿದರು.…

Read More

ಮಡಿಕೇರಿ ಜ.18 : ಆಟೋರಿಕ್ಷಾವೊಂದು ಅಗ್ನಿಗಾಹುತಿಯಾದ ಘಟನೆ ಸುಂಟಿಕೊಪ್ಪ ಸಮೀಪದ ಅಂದಗೋವೆಯಲ್ಲಿ ನಡೆದಿದೆ. ಅಂದಗೋವೆ ನಿವಾಸಿ ಶಿವರಾಜ್ ಎಂಬುವವರಿಗೆ ಸೇರಿದ ಆಟೋರಿಕ್ಷಾ ಇದಾಗಿದ್ದು, ಮಂಗಳವಾರ ರಾತ್ರಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ತಾವು ಕುಳಿತ್ತಿದ್ದ ಸೀಟ್ ಬಿಸಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಶಿವರಾಜ್ ಆಟೋ ನಿಲ್ಲಿಸಿ ತಕ್ಷಣ ಹೊರ ಬಂದಿದ್ದಾರೆ. ಭಯದಿಂದ ದೂರ ಸರಿಯುತ್ತಿದ್ದಂತೆ ಬೆಂಕಿ ವ್ಯಾಪಿಸಿ ಆಟೋರಿಕ್ಷಾ ಸಂಪೂರ್ಣ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಶಿವರಾಜ್ ಅಪಾಯದಿಂದ ಪಾರಾಗಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Read More

ಮಡಿಕೇರಿ ಜ.18 : ವಿರಾಜಪೇಟೆಯ ಬಿಟ್ಟಂಗಾಲದ ನಾಂಗಾಲ ಗ್ರಾಮದಲ್ಲಿ ಭಾನುವಾರ ನಡೆದ ಯುವತಿ ಬುಟ್ಟಿಯಂಡ ಆರತಿ (24) ಎಂಬುವವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಕೊಲೆ ಆರೋಪಿ ತಿಮ್ಮಯ್ಯನ ಮೃತದೇಹ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ. ಆರತಿಯನ್ನು ಆಕೆಯ ಮನೆಯ ಬಳಿಯೇ ಕತ್ತಿಯಿಂದ ಕಡಿದು ಕೊಲೆ ಮಾಡಲಾಗಿತ್ತು. ಈ ಘಟನೆಯ ನಂತರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಆರೋಪಿ ತಿಮ್ಮಯ್ಯನ ಹೆಲ್ಮೆಟ್ ಪತ್ತೆಯಾಗಿತ್ತು. ಅಲ್ಲದೆ ಪಕ್ಕದಲೇ ಇದ್ದ ಕೆರೆಯ ಮೇಲ್ಭಾಗ ಆತನ ಚಪ್ಪಲಿ, ಮೊಬೈಲ್, ಮದ್ಯ ಹಾಗೂ ವಿಷದ ಬಾಟಲ್ ಇರುವುದು ಕಂಡು ಬಂದಿತ್ತು. ಆರತಿಯನ್ನು ಕೊಲೆ ಮಾಡಿದ ಆರೋಪಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಸಂಶಯ ವ್ಯಕ್ತಪಡಿಸಿದ ಪೊಲೀಸರು ಈಜು ತಜ್ಞರ ಮೂಲಕ ಪತ್ತೆ ಕಾರ್ಯಾಚರಣೆ ಆರಂಭಿಸಿದರು. ಆದರೆ ಎರಡು ದಿನಗಳ ಕಾರ್ಯಾಚರಣೆಯ ನಂತರವೂ ಮೃತದೇಹ ಪತ್ತೆಯಾಗದೆ ಇದ್ದ ಕಾರಣ ಕೆರೆಯ ನೀರನ್ನು ಖಾಲಿ ಮಾಡಿ ಶೋಧ ಕಾರ್ಯ ಮುಂದುವರೆಸಲಾಯಿತು. ಮಂಗಳವಾರ ಮಧ್ಯರಾತ್ರಿ ತಿಮ್ಮಯ್ಯನ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಮುಂದಿನ ತನಿಖೆ…

Read More

ಮಡಿಕೇರಿ ಜ.18 : ಮೈಸೂರಿನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಜ.20 ರಂದು ವಿರಾಜಪೇಟೆಯಲ್ಲಿ ಮೂಳೆ ಮತ್ತು ಸಂಧಿವಾತ ತಪಾಸಣೆ ನಡೆಯಲಿದೆ. ವಿರಾಜಪೇಟೆಯ ಮಗ್ಗುಲ ನಾರಾಯಣ ಮೆಡಿಕಲ್ ಸೆಂಟರ್‍ನಲ್ಲಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ1 ಗಂಟೆ ವರೆಗೆ ಮೂಳೆ ಚಿಕಿತ್ಸಾ ತಜ್ಞ ಡಾ. ವೈ.ಬಿ.ಜಯವರ್ಧನ್ ತಪಾಸಣೆ ನಡೆಸಲಿದ್ದಾರೆ. ನೋಂದಣಿಗಾಗಿ 9513408004, 8904258788, 8904736606 ಸಂಪರ್ಕಿಸಬಹುದಾಗಿದೆ.

Read More

ಮಡಿಕೇರಿ ಜ.18 :  ಚಾಲಕ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ ಅರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಬಳಿ  ನಡೆದಿದೆ. ಮಡಿಕೇರಿ ಯಿಂದ ಸುಳ್ಯ ಕಡೆ ತೆರಳುತ್ತಿದ್ದ ಕಾರು ಪಲ್ಟಿಯಾಗಿದ್ದು, ಅದೃಷ್ಟವಶತ್  ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

Read More

ಸೋಮವಾರಪೇಟೆ ಜ.18 : ಮಕ್ಕಳ ಕಲಿಕೆಯಲ್ಲಿ ಶಿಕ್ಷಕರೊಂದಿಗೆ ಪೋಷಕರ ಜವಾಬ್ದಾರಿಯೂ ಮುಖ್ಯ ಎಂದು ವ್ಯಕ್ತಿತ್ವ ವಿಕಸನ ಮಾರ್ಗದರ್ಶಕ ಹಾಗೂ ಅಂತಾರಾಷ್ಟ್ರೀಯ ಅಥ್ಲೇಟ್ ತೀತಮಾಡ ಅರ್ಜುನ್ ದೇವಯ್ಯ ಹೇಳಿದರು. ಕೊಡಗು ವಿಕಸನ ಸಂಸ್ಥೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ವಿಶ್ವ ಮಾನವ ಕುವೆಂಪು ವಿದ್ಯಾಸಂಸ್ಥೆಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಪರೀಕ್ಷಾ ಸಿದ್ದತೆ ಮಾರ್ಗದರ್ಶನ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು. ಮಕ್ಕಳಿಗೆ ಮನೆಯಲ್ಲಿ ಒಳ್ಳೆಯ ವಾತಾವರಣ ಇದ್ದರೆ ಮಾತ್ರ ಕಲಿಕೆಗೆ ಆಸಕ್ತಿ ಇರುತ್ತದೆ. ಇದರೊಂದಿಗೆ ಆತ್ಮವಿಶ್ವಾಸ ಮತ್ತು ಏಕಾಗ್ರತೆ ವಿದ್ಯಾರ್ಥಿ ಜೀವನದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಎಲ್ಲಾ ಮಕ್ಕಳಲ್ಲೂ ಅಗಾಧವಾದ ಪ್ರತಿಭೆ ಇದ್ದೇ ಇರುತ್ತದೆ. ಆದರೆ ವಿದ್ಯಾರ್ಥಿ ಜೀವನದಲ್ಲಿ ಕೆಲವೊಮ್ಮೆ ಮಾರ್ಗದರ್ಶನದ ಕೊರತೆ ಸಾಧನೆಯ ಹಾದಿಗೆ ಅಡ್ಡ ಬರುತ್ತದೆ. ಇಂತಹ ಸಂದರ್ಭದಲ್ಲಿ ಯಾರೂ ವಿಚಲಿತರಾಗುವ ಅವಶ್ಯಕತೆಯಿಲ್ಲ. ಸಾಧನೆಗೆ ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ.ಸುರೇಶ್, ಪಠ್ಯದ ಪ್ರತಿಯೊಂದು ವಿಷಯಗಳನ್ನು ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿಯುವಂತಾಗಬೇಕು.…

Read More

ಸೋಮವಾರಪೇಟೆ,ಜ.18 : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಪದಾಧಿಕಾರಿಗಳ ಪ್ರಶಿಕ್ಷಣ ವರ್ಗಕ್ಕೆ ಚಾಲನೆ ದೊರೆಯಿತು. ಸೋಮವಾರಪೇಟೆ ಪಟ್ಟಣ ಸಮೀಪದ ಜಾನಕಿ ಕನ್ವೆನ್‍ಷನ್ ಸಭಾಂಗಣದಲ್ಲಿ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ, ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ಕೆ ಮಹಿಳಾ ಮೋರ್ಚಾ ಹೆಚ್ಚಿನ ಒತ್ತು ನೀಡಬೇಕು. ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಬೇಕು. ಪಕ್ಷದ ಅಸ್ತಿತ್ವದ ಮಾನದಂಡ ಚುನಾವಣೆಯಾಗಿದೆ. ಇದರ ಫಲಿತಾಂಶದ ಮೇಲೆ ಪಕ್ಷದ ಬಲ ಪ್ರದರ್ಶನಗೊಳ್ಳಲಿದೆ. ಈ ಹಿನ್ನೆಲೆ ಮಹಿಳಾ ಮೋರ್ಚಾವು ಸಂಘಟನೆಗೆ ಇನ್ನಷ್ಟು ಒತ್ತು ನೀಡಬೇಕು ಎಂದರು. ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ, ಹಿರಿಯರ ಪರಿಶ್ರಮದಿಂದ ಇಂದು ಭಾರತೀಯ ಜನತಾ ಪಾರ್ಟಿ ಸ್ಥಳೀಯ ಸಂಸ್ಥೆಗಳಿಂದ ಹಿಡಿದು ರಾಜ್ಯ ರಾಷ್ಟ್ರದಲ್ಲಿ ಅಧಿಕಾರದಲ್ಲಿದೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ದೇಶದ ಅಭಿವೃದ್ಧಿಗೆ ಹೊಸ ಆಯಾಮ ಬಂದಿದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಮಹಿಳಾ…

Read More