ಮಡಿಕೇರಿ ಫೆ.14 : ಮಡಿಕೇರಿ ತಾಲೂಕಿನ ಚೆಂಬು ಗ್ರಾಮ ಪಂಚಾಯಿತಿ ಆವರಣದಲ್ಲಿ ಕೊಡಗು ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ವತಿಯಿಂದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಶ್ರೀ ಭಗವಾನ್ ಸಂಘ ಚೆಂಬು ಗ್ರಾಮ ಮತ್ತು ಮಿತ್ರಕೂಟ ಕ್ರೀಡಾ ಸಂಘಗಳ ಸಹಯೋಗದಲ್ಲಿ ಫೆ.15 ರಂದು ರಕ್ತದಾನ ಶಿಬಿರ ನಡೆಯಲಿದೆ. ರಕ್ತದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಪ್ರಕಟಣೆಯಲ್ಲಿ ಕೋರಿದೆ. ಹೆಚ್ಚಿನ ಮಾಹಿತಿಗೆ ಧನಂಜಯ ಎಂ. 9844461777 ಸಂಪರ್ಕಿಸಬಹುದು.
ಲೇಖಕ: admin
ಮಡಿಕೇರಿ ಫೆ.14 : ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಪ್ರತೀ ವರ್ಷ ಸಂಪ್ರದಾಯದಂತೆ ಮಹಾಶಿವರಾತ್ರಿಯನ್ನು ನಡೆಸಿಕೊಂಡು ಬರುತ್ತಿರುವ ಹಿನ್ನಲೆಯಲ್ಲಿ ಈ ವರ್ಷವೂ ಫೆ.18 ರಂದು ಮಹಾಶಿವರಾತ್ರಿ ಪೂಜೆ ನಡೆಯಲಿದೆ. ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಫೆ.18 ರಂದು ಬೆಳಗ್ಗೆ 7 ಗಂಟೆಗೆ ಶತರುದ್ರಾಭಿಷೇಕ, ಬೆಳಗ್ಗೆ 9.30 ಗಂಟೆಗೆ ರುದ್ರಹೋಮ, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಸಂಜೆ 6 ಗಂಟೆಗೆ ತಾಯಂಬಕ ಸೇವೆ, ಸಂಜೆ 6.30 ಗಂಟೆಯಿಂದ ಏಕಾದಶ ರುದ್ರಾಭಿಷೇಕ, ಮಹಾಮಂಗಳಾರತಿ, ದೇವರ ನೃತ್ಯ ಉತ್ಸವ. ಸಂಜೆ 7.30 ಗಂಟೆಗೆ ಲಘು ಉಪಹಾರ. ರಾತ್ರಿ 11 ಗಂಟೆಗೆ ಶ್ರೀ ದುರ್ಗಾಪರಮೇಶ್ವರೀ ಯಕ್ಷಗಾನ ಕಲಾಮಂಡಳಿ ಕೊಲ್ಲಂಗಾಲ ಕಾಸರಗೋಡು ಯುವಕ ಯಕ್ಷಗಾನ ಕಲಾರಂಗ ಸುಳ್ಯ ಇವರಿಂದ ಯಕ್ಷಗಾನ ಬಯಲಾಟ ಪ್ರಸಂಗ “ಶ್ರೀ ಕೃಷ್ಣ ಲೀಲಾಮೃತ ಕಂಸವಧೆ ಶಿವ ತಪೋಭಂಗ” ನಡೆಯಲಿದೆ. ತಲಕಾವೇರಿ ಶ್ರೀ ತಲಕಾವೇರಿ ದೇವಾಲಯದಲ್ಲಿ ಫೆಬ್ರವರಿ, 18 ರಂದು ಬೆಳಗ್ಗೆ 9.30 ಗಂಟೆಗೆ ಶತರುದ್ರಾಭಿಷೇಕ, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ,…
ಮಡಿಕೇರಿ ಫೆ.14 : ನಗರಸಭಾ ವ್ಯಾಪ್ತಿಯಲ್ಲಿ ಬರುವ ಕುರಿ, ಕೋಳಿ ಮತ್ತು ಹಂದಿ ಮಾಂಸ ವ್ಯಾಪಾರ ಮಾಡುತ್ತಿರುವವರು ಸ್ಥಳೀಯ ಮತ್ತು ರಾಷ್ಟ್ರೀಯ ಹಬ್ಬಗಳ ದಿವಸಗಳಂದು ತಾವು ಸ್ವಯಂ ಪ್ರೇರಿತರಾಗಿ ಪ್ರಾಣಿವದೆ ಮತ್ತು ಮಾಂಸ ಮಾರಾಟ ಮಾಡುವುದನ್ನು ಸ್ಥಗಿತಗೊಳಿಸಬೇಕು. ಉಲ್ಲಂಘಿಸಿದಲ್ಲಿ ತಮ್ಮ ವ್ಯಾಪಾರದ ಪರವಾನಗಿ ರದ್ದುಗೊಳಿಸಲಾಗುವುದು ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದ ಸಾಮಾಗ್ರಿಗಳನ್ನು ನಗರಸಭೆ ವಶಕ್ಕೆ ತೆಗೆದುಕೊಂಡು ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತ ವಿಜಯ ತಿಳಿಸಿದ್ದಾರೆ. ಮಾಂಸ ಮಾರಾಟ ನಿಷೇಧಿತ ದಿನದ ವಿವರ ಇಂತಿದೆ:- ಫೆಬ್ರವರಿ, 18 ಮಹಾ ಶಿವರಾತ್ರಿ, ಮಾರ್ಚ್, 30 ಶ್ರೀ ರಾಮ ನವಮಿ, ಏಪ್ರಿಲ್, 3 ರಂದು ಮಹಾವೀರ ಜಯಂತಿ, ಮೇ, 5 ರಂದು ಬುದ್ಧ ಪೂರ್ಣಿಮ, ಸೆಪ್ಟೆಂಬರ್, 6 ರಂದು ಕೃಷ್ಣ ಜನ್ಮಾಷ್ಠಮಿ, ಸೆಪ್ಟೆಂಬರ್, 18 ರಂದು ಗಣೇಶ ಚತುರ್ಥಿ, ಅಕ್ಟೋಬರ್, 2 ರಂದು ಗಾಂಧಿ ಜಯಂತಿ ಹಾಗೂ ಅಕ್ಟೋಬರ್, 18 ರಂದು ತುಲಾ ಸಂಕ್ರಮಣ. ಈ ದಿನಗಳಂದು ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ ಮಾಂಸ ಮಾರಾಟ…
ಮಡಿಕೇರಿ ಫೆ.14 : ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ವತಿಯಿಂದ 2022-23 ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆಯಡಿ ಗುರುಶಿಷ್ಯ ಪರಂಪರೆಯಲ್ಲಿ ಅಕಾಡೆಮಿ ವ್ಯಾಪ್ತಿಯೊಳಗೆ ಬರುವ ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ನೃತ್ಯ(ಭರತನಾಟ್ಯ, ಕಥಕ್, ಕೂಚಿಪುಡಿ) ಕಥಾಕೀರ್ತನ ಮತ್ತು ಗಮಕ ಕ್ಷೇತ್ರಗಳಲ್ಲಿ ಯುವ ಕಲಾವಿದರಲ್ಲಿ ಕಲಾನೈಪುಣ್ಯತೆಯನ್ನು ಹೆಚ್ಚಿಸುವ ಸಲುವಾಗಿ ಪ್ರತಿಷ್ಠಿತ ಸಂಸ್ಥೆಯ ಗುರುಗಳ ಮೂಲಕ 5 ತಿಂಗಳ ಸಂಗೀತ ನೃತ್ಯ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವ ಶಿಬಿರಾರ್ಥಿಗಳು 16 ರಿಂದ 30 ವರ್ಷದ ಒಳಗಿರಬೇಕು. ಗುರುಗಳ ಬಳಿ ಕನಿಷ್ಠ 2 ವರ್ಷ ಅಭ್ಯಾಸ ಮಾಡಿರಬೇಕು. ಗುರುಗಳ ಪ್ರಮಾಣ ಪತ್ರ ಲಗತ್ತಿಸಬೇಕು. ಓದು ಬರಹ ಬಲ್ಲವರಾಗಿರಬೇಕು. ಕಲಿಯುವ ಆಸಕ್ತಿ ಇದ್ದು ಹೆಚ್ಚಿನ ಅಭ್ಯಾಸ ಮಾಡುವ ಉತ್ಸುಕತೆಯಿರಬೇಕು. ಪ್ರತಿಷ್ಠಿತ ಸಂಸ್ಥೆಗಳು ಅರ್ಜಿ ಸಲ್ಲಿಸಲು ಕನಿಷ್ಠ 10 ವರ್ಷಗಳ ಸೇವೆ ಸಲ್ಲಿಸಿರಬೇಕು. ಸಂಸ್ಥೆ ನೋಂದಣಿ ಹಾಗೂ ನವೀಕರಣ ಪತ್ರ ಲಗತ್ತಿಸಬೇಕು. ಗುರು ಶಿಷ್ಯ ಪರಂಪರೆ ತರಬೇತಿ ಶಿಬಿರದಲ್ಲಿ…
ನಾಪೋಕ್ಲು ಫೆ.14 : ಸುನ್ನಿ ಸ್ಟೂಡೆಂಟ್ ಫೆಡರೇಶನ್ (ಎಸ್ ಎಸ್ಎಫ್ )ಮಡಿಕೇರಿ ಶಾಖೆಯ ನೂತನ ಅಧ್ಯಕ್ಷರಾಗಿ ನವಾಝ್ ಮದನಿ ಆಝಾದ್ ನಗರ ಆಯ್ಕೆಯಾಗಿದ್ದಾರೆ. ಕೊಟ್ಟ ಮುಡಿಯ ಮರ್ಕಝುಲ್ ಹಿದಾಯ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ಎಸ್ಎಸ್ಎಫ್ ಮಡಿಕೇರಿ ಶಾಖೆಯ ವಾರ್ಷಿಕ ಮಹಾಸಭೆಯಲ್ಲಿ ಇವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಅಸ್ಲಂ ಮೂರ್ನಾಡು, ಕೋಶಾಧಿಕಾರಿಯಾಗಿ ಅಫ್ಸಲ್ ಬೇತ್ರಿ, ಸಹ ಕಾರ್ಯದರ್ಶಿಗಳಾಗಿ ರಾಶಿದ್ ಅನ್ವಾರಿ, ಬಶೀರ್ ಅಝಾದ್ ನಗರ, ಯೂನಸ್ ನಾಪೋಕ್ಲು, ಆಸಿಫ್ ಹಳೇತಾಲ್ಲೂಕು, ಸಫ್ವಾನ್ ಸಖಾಫಿ ಮಡಿಕೇರಿ, ಝಕರಿಯ ಸಅದಿ ಎಮ್ಮೆಮಾಡು, ಶಾಫಿ ಸಾದಾತ್ ನಗರ ಸೇರಿದಂತೆ 20ಸದಸ್ಯರನ್ನು ಒಳಗೊಂಡ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ನೂತನ ಪದಾಧಿಕಾರಿಗಳಿಗೆ ಹಿಂದಿನ ಅಧ್ಯಕ್ಷರಾದ ನಝೀರ್ ಸಖಾಫಿ ಹಾಗೂ ಆಡಳಿತ ಮಂಡಳಿಯವರು ಅಧಿಕಾರವನ್ನು ಹಸ್ತಾಂತರಿಸಿದರು. ಈ ಸಂದರ್ಭ ಎಸ್ ಎಸ್ ಎಫ್ ಜಿಲ್ಲಾಧ್ಯಕ್ಷ ಶಾಫಿ ಸಅದಿ ಸೋಮವಾರಪೇಟೆ, ಮಾಜಿ ಅಧ್ಯಕ್ಷರಾದ ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, ಜಿಲ್ಲಾ ನಾಯಕರಾದ ಶಿಹಾಬ್ ತಂಙಳ್, ಜುನೈದ್ ಮಾಸ್ಟರ್,ಶಮೀಹ್ ಅನ್ವಾರಿ ತಂಙಳ್, ಸೈಫುದ್ದೀನ್…
ಕಡಂಗ ಫೆ.14 : ಕಡಂಗ ಪ್ರೀಮಿಯರ್ ಕ್ರಿಕೆಟ್ ಲೀಗ್ ನ ಫೈನಲ್ ಪಂದ್ಯಾವಳಿ ಮತ್ತು ಸಮಾರೋಪ ಸಮಾರಂಭವು ಕಡಂಗ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲಾ ಮೈದಾನದಲ್ಲಿ ನಡೆಯಿತು. ಎಂಟು ಬಲಿಷ್ಠ ತಂಡಗಳ ನಡುವೆ ಪಂದ್ಯಾವಳಿ ನಡೆದಿದ್ದು, ಮೊದಲ ಕ್ವಾಲಿಫೈಯರ್ ಪಂದ್ಯಾವಳಿಯಲ್ಲಿ ಬಲಿಷ್ಠ ಬ್ಲಾಸ್ಟರ್ ತಂಡವನ್ನು ರೈಸಿಂಗ್ ಸ್ಟಾರ್ ಮಣಿಸಿ ಫೈನಲ್ ಹಂತಕ್ಕೆ ಪ್ರವೇಶಿಸಿದರು. 2ನೇ ಕ್ವಾಲಿಫೈಯರ್ ಪಂದ್ಯಾವಳಿಯಲ್ಲಿ ಕ್ರಿಕೆಟ್ ಸ್ಟಾರ್ ತಂಡವನ್ನು ಬ್ಲಾಸ್ಟರ್ ತಂಡ ಮಣಿಸಿ, ಫೈನಲ್ ಹಂತಕ್ಕೆ ಪ್ರವೇಶಿಸಿದರು. ಫೈನಲ್ ಪಂದ್ಯಾವಳಿಯಲ್ಲಿ ಮೊದಲು ಬ್ಯಾಟ್ ಮಾಡಿದ ರೈಸಿಂಗ್ ಸ್ಟಾರ್ ತಂಡ ಐದು ಓವರ್ ನಲ್ಲಿ 62 ರನ್ನು ಕಲೆ ಹಾಕಿದರು. ಈ ಮೊತ್ತವನ್ನು ಬೆನ್ನಟ್ಟಿದ ಬ್ಲಾಸ್ಟರ್ಸ್ ತಂಡ 4 ಓವರ್ ಎರಡು ಎಸೆತಗಳಲ್ಲಿ 35ರನ್ ಗಳಿಸಿ ಆಲ್ ಔಟ್ ಆಗಿ ರನ್ನರ್ ಪ್ರಶಸ್ತಿ ಪಡೆದರು. ವೈಯುಕ್ತಿಕ ಪ್ರಶಸ್ತಿಗಳ ವಿವರ : ಪಂದ್ಯ ಶ್ರೇಷ್ಠ ಪ್ರಶಸ್ತಿ ರೈಸಿಂಗ್ ಸ್ಟಾರ್ ತಂಡದ ಸುಹೈಲ್ , ಕ್ರೀಡಾಕೂಟದ ಉತ್ತಮ ಬಾಲರ್ ನೌಶಾದ್, ಉತ್ತಮ ಕ್ಯಾಚ್ ರಾಜ್,…
ಮಡಿಕೇರಿ ಫೆ.14 : ಎರಡು ದಿನಗಳ ಹಿಂದೆ ಕೆ.ಬಾಡಗ ಗ್ರಾಮದಲ್ಲಿ ಇಬ್ಬರನ್ನು ಬಲಿ ಪಡೆದ ಹುಲಿಯನ್ನು ಕೊನೆಗೂ ಅರಣ್ಯ ಇಲಾಖೆ ಇಂದು ಜೀವಂತವಾಗಿ ಸೆರೆ ಹಿಡಿದಿದೆ. ದಸರಾ ಆನೆ ಅಭಿಮನ್ಯು ನೇತೃತ್ವದಲ್ಲಿ 3 ಸಾಕಾನೆಗಳನ್ನು ಬಳಸಿ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿಗಳು ದಕ್ಷಿಣ ಕೊಡಗಿನ ಕುಟ್ಟ ಗ್ರಾಮದ ನಾಣಚ್ಚಿ ಬಳಿ ಅರವಳಿಕೆ ಚುಚ್ಚುಮದ್ದು ನೀಡಿ ಹುಲಿಯನ್ನ ಸೆರೆ ಹಿಡಿದಿದ್ದಾರೆ.
ಕುಶಾಲನಗರ ಫೆ.14 : ಅಕ್ರಮವಾಗಿ ಸಾಗಾಟವಾಗುತ್ತಿದ್ದ ಬೀಟೆ ಮರದ ತುಂಡುಗಳನ್ನು ಅರಣ್ಯ ಇಲಾಖೆಯ ಕುಶಾಲನಗರ ವಿಭಾಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕೊಪ್ಪ ಅರಣ್ಯ ತಪಾಸಣಾ ಗೇಟ್ ಬಳಿ ಕಾರೊಂದನ್ನು ಪರಿಶೀಲನೆಗೆ ಒಳಪಡಿಸಿದಾಗ ಬೀಟೆ ಮರಗಳು ಇರುವುದು ಪತ್ತೆಯಾಗಿದೆ. ಈ ಸಂದರ್ಭ ಆರೋಪಿಗಳು ಪರಾರಿಯಾಗಿದ್ದಾರೆ. ಬೀಟೆ ಮರ ಮತ್ತು ಕಾರನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ. ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ ಅವರ ಮಾರ್ಗದರ್ಶನದಲ್ಲಿ ಎಸಿಎಫ್ ಎ.ಎ.ಗೋಪಾಲ್, ಕುಶಾಲನಗರ ವಲಯ ಅರಣ್ಯಾಧಿಕಾರಿ ಕೆ.ವಿ.ಶಿವರಾಮ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ದೇವಯ್ಯ ಮತ್ತಿತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಮಡಿಕೇರಿ ಫೆ.14 : ಹೆಬ್ಬೆಟ್ಟಗೇರಿ-ದೇವಸ್ತೂರು ಗ್ರಾಮದ ರಸ್ತೆ ಅಬ್ಬಿಪಾಲ್ಸ್ ಜಂಕ್ಷನ್ ನಿಂದ ದೇವಸ್ತೂರು ಗ್ರಾಮದವರೆಗೆ ಸಂಪೂರ್ಣ ಹದಗೆಟ್ಟಿದ್ದು, ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಆಗ್ರಹಿಸಿ ಫೆ.17 ರಂದು ರಸ್ತೆ ತಡೆ ಪ್ರತಿಭಟನೆ ನಡೆಸುವುದಾಗಿ ಹೆಬ್ಬೆಟ್ಟಗೇರಿ ಗ್ರಾಮಸ್ಥರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥ ಪಿ.ಸಿ.ರಮೇಶ್, ಹೆಬ್ಬೆಟ್ಟಗೇರಿ-ದೇವಸ್ತೂರು ಗ್ರಾಮದ ರಸ್ತೆ ಅಬ್ಬಿಪಾಲ್ಸ್ ಜಂಕ್ಷನ್‍ನಿಂದ ದೇವಸ್ತೂರು ಗ್ರಾಮದವರೆಗೆ ಸುಮಾರು 8 ಕಿ.ಮೀ ನಷ್ಟು ದೂರ ಸಂಪೂರ್ಣ ಹದಗೆಟ್ಟಿದ್ದು, ಪಾದಾಚಾರಿಗಳು ಹಾಗೂ ವಾಹನ ಸವಾರರಿಗೆ ಓಡಾಡಲು ಅನಾನುಕೂಲವಾಗಿದೆ ಎಂದರು. ಗುಂಡಿಮಯ ರಸ್ತೆಗಳಿಂದಾಗಿ ಗ್ರಾಮಸ್ಥರು ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ಗ್ರಾಮಕ್ಕೆ ಬರುತ್ತಿದ್ದ ಶಾಲಾ ವಾಹನ ಬಾರದೆ ಇರುವುದರಿಂದ ವಿದ್ಯಾರ್ಥಿಗಳು ಆಟೋದಲ್ಲೇ ತೆರಳಬೇಕಾಗಿದೆ. ಆಟೋ ಚಾಲಕರು ಕೂಡ ಗ್ರಾಮಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ದುಬಾರಿ ಹಣ ಕೇಳುತ್ತಿದ್ದಾರೆ, ಇದರಿಂದಾಗಿ ಪೋಷಕರು ಮಕ್ಕಳ ಶಿಕ್ಷಣದ ಬಗ್ಗೆ ಚಿಂತಿತರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಂಜಿನಿಯರ್‍ಗಳಿಗೆ ರಸ್ತೆ…
ಮಡಿಕೇರಿ ಫೆ.14 : ಕೊಡಗಿನ ವಿಶಿಷ್ಟ ಭೂ ಹಿಡುವಳಿ ‘ಜಮ್ಮಾ’ ಖಾಸಗಿ ಆಸ್ತಿಯಾಗಿದ್ದು, ಈ ವಿಷಯದ ಗೊಂದಲಗಳು ರಾಜ್ಯ ಉಚ್ಚ ನ್ಯಾಯಾಲಯದ ತೀರ್ಪಿನೊಂದಿಗೆ ಈಗಾಗಲೆ ಇತ್ಯರ್ಥವಾಗಿದೆ. ಹೀಗಿದ್ದೂ ಜಮ್ಮಾ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಅವರು ನೀಡಿರುವ ಹೇಳಿಕೆ ರಾಜಕೀಯ ಪ್ರೇರಿತ ಮತ್ತು ಜನರನ್ನು ಮಾನಸಿಕವಾಗಿ ದುರ್ಬಲರನ್ನಾಗಿ ಮಾಡುವ ದುರುದ್ದೇಶವಾಗಿದೆ ಎಂದು ಕೆಪಿಸಿಸಿ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಎಸ್. ಪೊನ್ನಣ್ಣ ಆರೋಪಿಸಿದ್ದಾರೆ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂದಾಯ ಸಚಿವರ ಹೇಳಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕು ಮತ್ತು ಜಿಲ್ಲೆಯ ಜನರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು. ನ್ಯಾಯಾಲಯದ ತೀರ್ಪಿನ ವಿರುದ್ಧವಾಗಿ ಕಂದಾಯ ಸಚಿವರು ಹೇಳಿಕೆ ನೀಡಿ, ಜಿಲ್ಲೆಯ ಜಮ್ಮಾಜಾಗ ಹೊಂದಿರುವ ಹಿಡುವಳಿದಾರರನ್ನು ಗೊಂದಲ ಮತ್ತು ಆತಂಕಕ್ಕೆ ತಳ್ಳಿದ್ದಾರೆ. ಜಿಲ್ಲೆಯ ಜನರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿ ಚುನಾವಣಾ ಹಂತದಲ್ಲಿ ರಾಜಕೀಯ ಲಾಭ ಪಡೆಯುವ ಹುನ್ನಾರ ನಡೆದಿದೆ ಎಂದು ಟೀಕಿಸಿದರು. ‘ಜಮ್ಮಾ’ ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ‘ಚಕ್ಕೇರ ಪೂವಯ್ಯ ಮತ್ತು ಕರ್ನಾಟಕ…






