ಮಡಿಕೇರಿ ಜ.17 : ಜಲ ಮತ್ತು ಮಣ್ಣು ಸಂರಕ್ಷಣೆಯ ಸಂದೇಶದೊಂದಿಗೆ ರೈಡ್ ಪಾರ್ ರೋಟರಿ ಹೆಸರಿನ ರೋಟರಿ ಬೈಕ್ ಜಾಥಾ ಇದೇ 24 ರಂದು ಮಡಿಕೇರಿಗೆ ಬರುತ್ತಿದ್ದು, ವಿದೇಶಿಯರೂ ಸೇರಿದಂತೆ ಭಾರತೀಯ ಮೂಲದ 40 ಬೈಕ್ ಸವಾರರು ಜಾಥಾದಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ರೋಟರಿ ಜಿಲ್ಲಾ ಗವನ೯ರ್ ಪ್ರಕಾಶ್ ಕಾರಂತ್ ಮಾಹಿತಿ ನೀಡಿದ್ದಾರೆ. ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಗೆ ಅಧಿಕೃತ ಭೇಟಿ ಸಂದಭ೯ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪ್ರಕಾಶ್ ಕಾರಂತ್, ರೋಟರಿ ಜಿಲ್ಲೆ 3181 ರ ಮಹತ್ವದ ಯೋಜನೆಯಾದ ರೈಡ್ ಫಾರ್ ರೋಟರಿಯ 7 ನೇ ಆವೃತ್ತಿಯು ತಮಿಳುನಾಡಿನ ಮಹಾಬಲಿಪುರಂನಿಂದ ಇದೇ ಭಾನುವಾರ ಪ್ರಾರಂಭಗೊಂಡಿದ್ದು ವಿವಿಧ ನಗರಗಳನ್ನು ಹಾದು ಜಾಥಾದಲ್ಲಿನ ಸವಾರರು ಜ.24 ರಂದು ಮಂಗಳಪಾರ ಮಡಿಕೇರಿಗೆ ಬರುತ್ತಿದ್ದಾರೆ. ವಿದೇಶದ 36 ಬೈಕ್ ಸವಾರರೂ ಒಳಗೊಂಡಂತೆ 40 ಸವಾರರು ಈ ಜಾಥಾದಲ್ಲಿದ್ದಾರೆ. ಮಣ್ಣು ಮತ್ತು ನೀರಿನ ಸಂರಕ್ಷಣೆಯ ಸಂದೇಶ ಸಾರುವ ಈ ಜಾಥಾ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಂದವ್ಯ ವೃದ್ಧಿಗೆ ರೋಟರಿಗೆ ಸಹಕಾರಿಯಾಗಿದೆ…
ಲೇಖಕ: admin
ಮಡಿಕೇರಿ ಜ.17 : ಮೇಕೇರಿಯ ಸಕಾ೯ರಿ ಮಾದರಿ ಪ್ರಾಥಮಿಕ ಶಾಲೆಗೆ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕೊಡುಗೆಯಾಗಿ ಜಿಲ್ಲಾ ರೋಟರಿ ಗವನ೯ರ್ ಪ್ರಕಾಶ್ ಕಾರಂತ್ ನೀಡಿದರು. ಮೇಕೇರಿ ಶಾಲೆಯಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ದಾನಿಗಳಾದ ಮಡಿಕೇರಿಯ ಮಹೇಶ್ ಎಂಟರ್ ಪ್ರೈಸಸ್ ನ ಮಾಲೀಕ ಎಸ್.ಹರೀಶ್ ಕುಮಾರ್ ರೋಟರಿ ಮಿಸ್ಟಿ ಹಿಲ್ಸ್ ಮೂಲಕ ನೀಡಿದ ಬಿಸಿ ಮತ್ತು ತಣ್ಣಗಿನ ಶುದ್ಧ ನೀರಿನ ಘಟಕವನ್ನು ವಿತರಿಸಲಾಯಿತು. ಈ ಸಂದಭ೯ ಮಾತನಾಡಿದ ರೋಟರಿ ಜಿಲ್ಲೆ 3181 ನ ಗವನ೯ರ್ ಪ್ರಕಾಶ್ ಕಾರಂತ್, ಅಪೇಕ್ಷಿತರಿಗೆ ದಾನ ಮಾಡುವ ಸಂದಭ೯ ಸಿಗುವ ಆತ್ಮತೖಪ್ತಿಗಿಂತ ಬೇರೆ ಸಮಧಾನ ಯಾವುದರಿಂದಲೂ ದೊರಕುವುದಿಲ್ಲ. ರೋಟರಿ ಸಂಸ್ಥೆ ಕೂಡ ಅಗತ್ಯವುಳ್ಳವರಿಗೆ ವಿದ್ಯಾಸಿರಿ, ಜಲಸಿರಿ, ವನಸಿರಿ, ಆರೋಗ್ಯ ಸಿರಿ ಎಂಬ ಜಿಲ್ಲಾ ಯೋಜನೆಗಳ ಮೂಲಕ ನಾನಾ ರೀತಿಯ ಸಹಾಯ ನೀಡುತ್ತಾ ಬಂದಿದೆ. ಶುದ್ದ ನೀರಿನ ಘಟಕದ ಮೂಲಕ ದೊರಕುವ ಶುದ್ಧ ನೀರಿನಿಂದ ಮಕ್ಕಳಿಗೆ ಉತ್ತಮ ಗುಣಮಟ್ಟದ ನೀರು ಕುಡಿಯಲು ದೊರಕಿ, ಅನಾರೋಗ್ಯಪೀಡಿತರಾಗುವವರ…
ಮಡಿಕೇರಿ ಜ.16 : ಭಾರತ ಸರ್ಕಾರ, ನೆಹರು ಯುವ ಕೇಂದ್ರ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಸಂಯುಕ್ತಶ್ರಯದಲ್ಲಿ ಸುಭಾಷ್ ಚಂದ್ರ ಬೋಸ್ ಜನ್ಮದಿನಾಚರಣೆಯ ಅಂಗವಾಗಿ ನಡೆಸಲಾದ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಎ.ಎ.ರಾಝಿಕ್ ಮೊದಲ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಚೆಯ್ಯಂಡಾಣೆ ಜ.17 : ಕೊಡಗು ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಚೆಯ್ಯಂಡಾಣೆ ಕ್ಲಸ್ಟರ್ ಗೆ ಒಳಪಟ್ಟ ಪ್ರಾಥಮಿಕ ಶಾಲೆಗಳ ಮಕ್ಕಳ ಕಲಿಕಾ ಹಬ್ಬಕ್ಕೆ ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾ.ಪಂ ಅಧ್ಯಕ್ಷ ಬಿದ್ದಂಡ ರಾಜೇಶ್ ಅಚ್ಚಯ್ಯ ದೀಪ ಬೆಳೆಗಿಸುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿ ಅವರು, ಪ್ರಸ್ತುತ ದಿನಗಳಲ್ಲಿ ಸರಕಾರಿ ಶಾಲೆಯ ವಿದ್ಯಾರ್ಥಿಗಳ ಕಲಿಕೆಗೆ ಸರ್ಕಾರ ವಿನೂತನ ಕಾರ್ಯಕ್ರಮಗಳ ಮೂಲಕ ಸಹಕಾರ ನೀಡುತ್ತಿದ್ದು, ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು. ಚೆಯ್ಯಂಡಾಣೆ ಕ್ಲಸ್ಟರ್ ಮಟ್ಟದ ಸಿ ಆರ್ ಪಿ ಉಷಾ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರಲು ಇದೊಂದು ಉತ್ತಮ ಕಾರ್ಯಕ್ರಮ, ಎರಡು ವರ್ಷ ಕೋವಿಡ್‍ನಿಂದಾಗಿ ವಿದ್ಯಾರ್ಥಿಗಳಿಗೆ ಸಾಕಷ್ಟು ನಷ್ಟ ಉಂಟಾಗಿದ್ದು, ಅದನ್ನು ಈ ವರ್ಷ ಕಲಿಕಾ ವರ್ಷ ಎಂದು ಆಚರಿಸುತ್ತಿದ್ದೇವೆ, ಕಲಿಕಾ ಚೇತರಿಕೆ ಹಾಗೂ ಕಲಿಕಾ ಹಬ್ಬಕ್ಕೆ ಪೂರಕವಾದ ಸಂಬಂಧವಿದೆ ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ…
ಮಡಿಕೇರಿ ಜ.17 : ಕುಶಾಲನಗರದ ಯುವ ವಕೀಲ ಅಬೂತಾಹಿರ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಅಬೂತಾಹಿರ್ ಅರ್ಹತೆ ಪಡೆದಿದ್ದು, ಈ ಬಾರಿ ಒಟ್ಟು 40 ಮಂದಿ ವಕೀಲರು ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಮಡಿಕೇರಿ ಜ.17 : ಸಿಮೆಂಟ್ ತುಂಬಿದ ಲಾರಿಯೊಂದು ಮಗುಚಿಕೊಂಡ ಘಟನೆ ಗೋಣಿಕೊಪ್ಪ ವಿರಾಜಪೇಟೆ ಮುಖ್ಯ ರಸ್ತೆಯ ಹಾತೂರು ಗ್ರಾಮದ ತಿರುವಿನಲ್ಲಿ ನಡೆದಿದೆ. ಸೋಮವಾರ ರಾತ್ರಿ ಸುಮಾರು 11.45 ಗಂಟೆಗೆ ಈ ಘಟನೆ ನಡೆದಿದ್ದು, ವಿಷಯ ತಿಳಿದ ಸ್ಥಳೀಯ ನಿವಾಸಿ ಕೊಕ್ಕಂಡ ರೂಪ ಭೀಮಯ್ಯ ಹಾಗೂ ಪುತ್ರ ಬಿದ್ದಪ್ಪ ಅವರುಗಳು ಸ್ಥಳಕ್ಕೆ ಆಗಮಿಸಿ ಚಾಲಕ ಹಾಗೂ ನಿರ್ವಾಹಕನನ್ನು ಲಾರಿಯಿಂದ ಹೊರ ತರುವಲ್ಲಿ ಯಶಸ್ವಿಯಾದರು. ನಂತರ ಪೊಲೀಸ್ ಹಾಗೂ ಆಂಬ್ಯುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಿಸಲು ನೆರವಾದರು. ಇದೀಗ ಇಬ್ಬರು ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಗೋಣಿಕೊಪ್ಪಲು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಡಿಕೇರಿ ಜ.17 : ಚೆಟ್ಟಳ್ಳಿ ಪ್ರೌಢಶಾಲೆಯ ಸಮೀಪದಲ್ಲಿರುವ ಶ್ರೀಗಣಪತಿ ದೇವಾಲಯಕ್ಕೆ ಕಳ್ಳರು ನುಗ್ಗಿದ್ದು, ಹುಂಡಿಯಲ್ಲಿದ್ದ ಹಣವನ್ನು ದೋಚಿದ್ದಾರೆ. ಇಂದು ಬೆಳಗ್ಗೆ ದೇವಾಲಯ ಸಮಿತಿಯ ಅಧ್ಯಕ್ಷ ಮುಳ್ಳಂಡ ರತ್ತುಚಂಗಪ್ಪ ಅವರು ಪೂಜೆ ಸಲ್ಲಿಸಲು ಆಗಮಿಸಿದಾಗ ದೇವಾಲಯದ ಬಾಗಿಲಿನ ಬೀಗ ಮುರಿದಿರುವುದು ಕಂಡು ಬಂದಿದೆ. ಚೆಟ್ಟಳ್ಳಿ ಪೊಲೀಸ್ ಉಪಠಾಣೆಗೆ ಮಾಹಿತಿ ನೀಡಿದ ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು. ಕಳ್ಳರು ಹುಂಡಿಯ ಬೀಗವನ್ನು ಮುರಿದು ಸುಮಾರು 5 ಸಾವಿರ ರೂ.ಗಳಷ್ಟು ಹಣವನ್ನು ದೋಚಿರುವುದು ಕಂಡು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮಡಿಕೇರಿ ಜ.17 : ಮಡಿಕೇರಿ ಪುರಸಭೆಯ ಮಾಜಿ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ಕಾರ್ಯದರ್ಶಿ ಹಾಗೂ ವಕೀಲ ಎಂ.ಸಿ.ವಾಸುದೇವ್ (80) ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಮೃತರು ಮೂವರು ಪುತ್ರಿಯರನ್ನು ಅಗಲಿದ್ದಾರೆ. ಬೆಂಗಳೂರಿನ ಪುತ್ರಿಯ ಮನೆಯಲ್ಲೇ ವಾಸುದೇವ್ ಅವರು ನಿಧನ ಹೊಂದಿದರು. ಪುರಸಭೆಯ ಅಧ್ಯಕ್ಷರಾಗಿದ್ದಾಗ ಅವರು ಉತ್ತಮ ಆಡಳಿತ ನೀಡಿದ್ದರು. ::: ಸಂತಾಪ ::: ಹಿರಿಯ ಕಾಂಗ್ರೆಸ್ಸಿಗ ಎಂ.ಸಿ.ವಾಸುದೇವ್ ಅವರ ನಿಧನಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಧರ್ಮಜ ಉತ್ತಪ್ಪ, ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ, ಯುವ ಮುಖಂಡ ಡಾ.ಮಂತರ್ ಗೌಡ, ಮಾಜಿ ಸಚಿವ ಬಿ.ಎ.ಜೀವಿಜಯ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ.ರಮೇಶ್, ಜಿ.ಪಂ ಮಾಜಿ ಅಧ್ಯಕ್ಷೆ ಕೆ.ಪಿ.ಚಂದ್ರಕಲಾ, ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಹೊಸೂರು ಸೂರಜ್, ಪ್ರಮುಖರಾದ ಕೆ.ಎ.ಯಾಕುಬ್, ಕೆ.ಯು.ಅಬ್ದುಲ್ ರಜಾಕ್, ಅಯ್ಯಪ್ಪ ಸೇರಿದಂತೆ ಎಲ್ಲಾ ಬ್ಲಾಕ್ ಮತ್ತು ವಿವಿಧ ಘಟಕಗಳ ಪದಾಧಿಕಾರಿಗಳು…
ಮಡಿಕೇರಿ ಜ.17 : ಕಪಿಲಾ ನದೀತೀರದಲ್ಲಿರುವ ಶ್ರೀ ಸುತ್ತೂರು ಕ್ಷೇತ್ರವನ್ನು ತಮ್ಮ ತಪಸ್ಸಿದ್ಧಿಯಿಂದ ಜಾಗೃತ ಧರ್ಮಕ್ಷೇತ್ರವನ್ನಾಗಿ ನೆಲೆಗೊಳಿಸಿದ ಮಹಾಮಹಿಮರು ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರು. ಪೂಜ್ಯರು ಸಂಸ್ಥಾಪಿಸಿದ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠವು ಸಹಸ್ರಾರು ವರ್ಷಗಳಿಂದ ಜನತೆಯ ಸಮಗ್ರ ಉನ್ನತಿಗಾಗಿ ಜ್ಞಾನಾನ್ನದಾಸೋಹಗಳ ಕೈಂಕರ್ಯವನ್ನು ನಡೆಸುತ್ತಾ ಬಂದಿದೆ. ಇಂಥ ಭವ್ಯ ಇತಿಹಾಸವುಳ್ಳ ಶ್ರೀಮಠದ ಎಲ್ಲ ಪೂಜ್ಯ ಜಗದ್ಗುರುಗಳು ತಮ್ಮ ಅನುಪಮ ತಪೋನುಷ್ಠಾನದಿಂದ ಲೋಕೋದ್ಧಾರದ ಸೇವಾಕಾರ್ಯಗಳನ್ನು ಕೈಗೊಂಡಿದ್ದಾರೆ. ಶ್ರೀಮಠದ ಬಹುಮುಖ ಚಟುವಟಿಕೆಗಳ ನಿರ್ವಹಣೆಗಾಗಿ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರಿಂದ ಸ್ಥಾಪಿತವಾದ ಜೆಎಸ್‍ಎಸ್ ಮಹಾವಿದ್ಯಾಪೀಠ ಹಾಗೂ ಇದರ ಅಂಗಸಂಸ್ಥೆಗಳ ಮೂಲಕ ದೇಶವಿದೇಶಗಳಲ್ಲಿ ಧರ್ಮ, ಸಂಸ್ಕೃತಿ, ಶಿಕ್ಷಣ, ಆರೋಗ್ಯ, ಕೃಷಿ, ಗ್ರಾಮೀಣಾಭಿವೃದ್ಧಿ, ಸಮಾಜಸುಧಾರಣೆ ಮುಂತಾದ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವಾಕಾರ್ಯಗಳು ನಡೆಯುತ್ತಿವೆ. ಆದಿ ಜಗದ್ಗುರುಗಳವರ ಜಾತ್ರಾ ಮಹೋತ್ಸವವು ಪ್ರತಿ ವರ್ಷ ಪುಷ್ಯ ಬಹುಳ ದ್ವಾದಶಿಯಂದು ಪ್ರಾರಂಭವಾಗುತ್ತದೆ. ಮಾಸಶಿವರಾತ್ರಿಯಂದು ರಥೋತ್ಸವ ಹಾಗೂ ಮಾಘ ಶುದ್ಧ ಪಾಡ್ಯಮಿಯಂದು ತೆಪ್ಪೋತ್ಸವ ಜರುಗುತ್ತವೆ. ಆರು ದಿನಗಳ ಕಾಲ…
ಮಡಿಕೇರಿ ಜ.17 : ಹುದಿಕೇರಿ ಜನತಾ ಪ್ರೌಢಶಾಲೆ ಆಡಳಿತ ಮಂಡಳಿಯಿಂದ ಕೆಪಿಸಿಸಿ ಕಾನೂನು ಘಟಕದ ಮುಖ್ಯಸ್ಥ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹುದಿಕೇರಿ ಜನತಾ ಪ್ರೌಢಶಾಲೆ ಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಪೊನ್ನಣ್ಣ , ಈ ಶಾಲೆಯಲ್ಲಿ ಓದಿದವರು ಹಲವು ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ. ಶಾಲೆ ಆಡಳಿತ ಮಂಡಳಿಯವರು ಶಾಲೆಯ ಕಟ್ಟಡಗಳ ದುಸ್ಥಿತಿಯ ಬಗ್ಗೆ ತಿಳಿಸಿದಾಗ ಶಾಲೆಯನ್ನು ಉಳಿಸಿಕೊಳ್ಳಬೇಕೆಂಬ ಸಂಕಲ್ಪದೊಂದಿಗೆ ವಿವಿಧ ಆಯಾಮಗಳಲ್ಲಿ ಪ್ರಯತ್ನಿಸಿ ಕೊನೆಗೆ ಕೋಲಾರ ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ಅವರಿಂದ 10 ಲಕ್ಷ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದು, ಈ ಶಾಲೆಯಲ್ಲಿ ತಂದೆಯವರು ಓದಿದ ಶಾಲೆ ಎಂದು ಸ್ಮರಿಸಿದರು. ಶಾಲಾ ಅಡತ ಮಂಡಳಿ ಅಧ್ಯಕ್ಷ ಮಂಡೆಚಂಡ ದಿನೇಶ್ ಚಿಟ್ಯಪ್ಪ ಮಾತನಾಡಿ, ಹಲವಾರು ವರ್ಷಗಳಿಂದ ಶಾಲೆಯ ದುರಸ್ತಿಗೆ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ರಾಜಕೀಯ ಲೆಕ್ಕಾಚಾರಗಳಿಂದಾಗಿ ಯಾರೊಬ್ಬರೂ ಆಸಕ್ತಿ ವಹಿಸಿರಲಿಲ್ಲ. ಆದರೆ ಪೊನ್ನಣ್ಣ ಅವರು ತಮ್ಮ ಸೇವಾ ಮನೋಭಾವದಿಂದ ಶಾಲಾ ಆಡಳಿತ ಮಂಡಳಿಯವರೊಂದಿಗೆ ಕೈಜೋಡಿಸಿ ಶಾಲೆಯನ್ನು…






