ಲೇಖಕ: admin

ಮಡಿಕೇರಿ ಫೆ.4 : ದಿನ ನಿತ್ಯದ ವ್ಯವಹಾರದ ಮಧ್ಯೆ ಆರೋಗ್ಯವೇ ಭಾಗ್ಯ ಎನ್ನುವುದನ್ನು ಮರೆಯಬಾರದು ಎಂದು ಕೊಡಗು ಪ್ರೆಸ್‍ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಮಹಾಪೋಷಕ ಜಿ. ರಾಜೇಂದ್ರ ಹೇಳಿದರು. ಕೊಡಗು ಪ್ರೆಸ್‍ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ವತಿಯಿಂದ ಅಶ್ವಿನಿ ಆಸ್ಪತ್ರೆ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸುಯೋಗ್ ಆಸ್ಪತ್ರೆ, ವಾಕ್ ಮತ್ತು ಶ್ರವಣ ಇನ್ ಪ್ಲಾಂಟ್‍ಕ್ಲಿನಿಕ್ ಹಾಗೂ ಜಸ್ಟೀಸ್ ಕೆ.ಎಸ್. ಹೆಗಡೆ ಸ್ಮಾರಕದಂತ ವಿಭಾಗದ ಸಹಯೋಗದಲ್ಲಿ ಅಶ್ವಿನಿ ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ತಪಾಸಣಾ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು. ನಮ್ಮ ಆರೋಗ್ಯಕ್ಕೆ ಪ್ರಥಮ ಆದ್ಯತೆ ಕೊಡಬೇಕು. ಕ್ಯಾನ್ಸರ್ ನಂತಹ ಕಾಯಿಲೆಗಳನ್ನು ಮೂಲದಲ್ಲೇ ಗುಣಪಡಿಸಬಹುದು ಎಂದ ಅವರು ಸರ್ವೇಜನಃ ಸುಖಿನೋಭವತು ಎನ್ನುವುದು ಕೊರೊನಾ ಸಮಯದಲ್ಲಿ ಹೆಚ್ಚು ಪ್ರಸ್ತುತವಾಯಿತು. ಇಂತಹ ಶಿಬಿರಗಳ ಪ್ರಯೋಜನ ಎಲ್ಲರೂ ಪಡೆದುಕೊಳ್ಳಬೇಕು ಎಂದರು. ಅಶ್ವಿನಿ ಆಸ್ಪತ್ರೆ ಕಾರ್ಯದರ್ಶಿ ಕುಪ್ಪಂಡರಾಜಪ್ಪ ಮಾತನಾಡಿ, ಸೇವೆಗಾಗಿಯೇ ಇರುವ ಅಶ್ವಿನಿ ಆಸ್ಪತ್ರೆ ಈಗ ಪ್ರಗತಿ ಸಾಧಿಸುತ್ತಿದೆ. 100 ಹಾಸಿಗೆಗಳ ಆಸ್ಪತ್ರೆ ಆಗಿ…

Read More

ಸಿದ್ದಾಪುರ ಫೆ.4 :  ಸರ್ವಧರ್ಮ ಸಂಕೇತದ ಇತಿಹಾಸ ಪ್ರಸಿದ್ಧ ಆರ್ಕಾಡ್ ಪಟ್ಟಾಣ್ ಬಾಬಾ ಶಾವಲಿ ಉರೂಸ್ ನೇರ್ಚೆ ಗೆ ಪಾಲಿಬೆಟ್ಟದಲ್ಲಿ ಗಣ್ಯರು ಚಾಲನೆ  ನೀಡಿದರು. ಮಸೀದಿಯಲ್ಲಿ ಜುಮಾ ನಮಾಜ್ ಬಳಿಕ ಆರ್ಕಾಡ್ ಪಟ್ಟಾಣ್ ಬಾಬಾ ದರ್ಗಾಗೆ ತೆರಳಿ ಬಾಂಧವರು ವಿಶೇಷ ಪ್ರಾರ್ಥನೆಯೊಂದಿಗೆ ಮುಖಾಂ ಝಿಯಾರತ್ ಬಳಿಕ ಜುಮಾ ಮಸೀದಿ ಕಮಿಟಿ ಅಧ್ಯಕ್ಷ ಪಿ.ಕೆ ಇಸ್ಮಾಯಿಲ್ ಹಾಜಿ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಧಾರ್ಮಿಕ ಪಂಡಿತ ಸಯ್ಯದ್‌ ಮೆಹರೂಫ್‌ ಅಲ್ ಜಫ್ರಿ ತಂಗಳ್ ದುಆ ನೇತೃತ್ವದೊಂದಿಗೆ ಪಾಲಿಬೆಟ್ಟ ಜುಮಾ ಮಸೀದಿಯ ಖತಿಬ್ ಅಲಿ ಸಖಾಫಿ ಉದ್ಘಾಟಿಸಿದರು. ಸಮಾರಂಭದಲ್ಲಿ ಧಾರ್ಮಿಕ ಪಂಡಿತ ಸಯ್ಯದ್ ಸರುಫುದ್ದೀನ್ ಐಲ್ ಹೈದ್ರೊಸಿ ತಂಗಳ್ ದಿಕ್ರ್ ದುವಾ ಮಜ್ಲೀಸ್ ನೇತೃತ್ವ ವಹಿಸಿದ್ದರು. ತಾರಿಕಟ್ಟೆ ಜುಮಾ ಮಸೀದಿಯ ಅಧ್ಯಕ್ಷ ಕೆ.ಎಂ ಅಲಿ, ಪಾಲಿಬೆಟ್ಟ ಜುಮಾ ಮಸೀದಿ ಕಮಿಟಿ ಉಪಾಧ್ಯಕ್ಷ ಸೈನುದ್ದಿನ್, ಪ್ರಧಾನ ಕಾರ್ಯದರ್ಶಿ ಸಮೀರ್ ಮುನ್ನ, ಕಾರ್ಯದರ್ಶಿ ಎ.ಸಿ ಸಮೀರ್, ಸಹಕಾರಿದರ್ಶಿ ಮುನೀರ್, ಖಜಾಂಜಿ ಮುಸ್ತಫ, ಉರೂಸ್ ಸಮಿತಿಯ ಪ್ರಮುಖರಾದ ಸಿ.ಎಚ್…

Read More

ಮಡಿಕೇರಿ ಫೆ.4 :  ಜೆಸಿಐ ಪೊನ್ನಂಪೇಟೆ ನಿಸರ್ಗಕ್ಕೆ ಆಯ್ಕೆಗೊಂಡಿರುವ 12ನೇ ಘಟಕಾಡಳಿತ ಮಂಡಳಿಯ ನೂತನ ಪದಾಧಿಕಾರಿಗಳ ಪದಸ್ವೀಕಾರ ಸಮಾರಂಭವು ಫೆ.6ರಂದು ಪೊನ್ನಂಪೇಟೆಯಲ್ಲಿ ಜರುಗಲಿದೆ. ಪೊನ್ನಂಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಸಂಜೆ 6.30 ಕ್ಕೆ ಘಟಕದ 2022ನೇ ಸಾಲಿನ ಅಧ್ಯಕ್ಷರಾದ ಎ.ಪಿ.ದಿನೇಶ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜೆಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷರಾದ ಜೆಸಿಐ ಸೆನೆಟರ್ ಭರತ್ ಎನ್ ಆಚಾರ್ಯ, ಗೌರವ ಅತಿಥಿಗಳಾಗಿ ಜೆಸಿಐ ಭಾರತದ ವಲಯ-14ರ ವಲಯ ಅಧ್ಯಕ್ಷರಾದ ಯಶಸ್ವಿನಿ ಹಾಗೂ ಜೆಸಿಐ ಭಾರತದ ಸೀನಿಯರ್ ಮೆಂಬರ್ಸ್ ಅಸೋಸಿಯೇಷನ್ (ಎಸ್ಎಂಎ) ಸಂಸ್ಥಾಪನಾ ರಾಷ್ಟ್ರೀಯ ಮಂಡಳಿಯ ಉಪಾಧ್ಯಕ್ಷ  ಎ.ಎಸ್.ನರೇನ್ ಕಾರ್ಯಪ್ಪ, ಇಂಡಕ್ಷನ್ ಅಧಿಕಾರಿ  ಜೆಸಿಐ ಭಾರತದ ವಲಯ-14ರಪ್ರಾಂತ್ಯದ ವಲಯ ಉಪಾಧ್ಯಕ್ಷ  ಆಶಾ ಜೈನ್  ಪಾಲ್ಗೊಳ್ಳಲಿದ್ದಾರೆ. ಜೆಸಿಐ ಪೊನ್ನಂಪೇಟೆ ನಿಸರ್ಗ ಘಟಕದ 12ನೇ ಘಟಕಾಡಳಿತ ಮಂಡಳಿಯ ಅಧ್ಯಕ್ಷರಾಗಿ ಮುಕ್ಕಾಟಿರ ನೀತ್ ಅಯ್ಯಪ್ಪ , ಕಾರ್ಯದರ್ಶಿಯಾಗಿ ಚೆಟ್ಟೋಳಿರ ಶರತ್ ಸೋಮಣ್ಣ, ಕೋಶಾಧಿಕಾರಿಯಾಗಿ ಬೊಜ್ಜಂಗಡ ಚೆಂಗಪ್ಪ. ಉಪಾಧ್ಯಕ್ಷರುಗಳಾಗಿ ಹೆಚ್.ಆರ್. ಸತೀಶ್ (ನಿರ್ವಹಣೆ), ಟಿ.ಜೆ. ಆಂಟೋನಿ…

Read More

ಕಡಂಗ ಫೆ.4 :  ಕರಡ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಬೆಳೆಗಾರರ ಜೀವನಕ್ಕೆ ಆಸರೆಯಾಗಿರುವ ಕಾಫಿ ಫಸಲನ್ನು ತಿಂದು ನಾಶಪಡಿಸುತ್ತಿರುವ ಹಿನ್ನೆಲೆ ರೈತರು ತೀವ್ರ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಈ ಭಾಗದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಒಂದಲ್ಲಾ ಒಂದು ಸಮಸ್ಯೆಯಿಂದ ಜನರು ಕಂಗಾಲಾಗಿದ್ದಾರೆ. ಹಲವಾರು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿದರು ಯಾವುದೆ ಪ್ರಯೋಜನವಾಗಲಿಲ್ಲ ಎಂದು ಬೆಳೆಗಾರರು ಬೇಸರ ವ್ಯಕ್ತಪಡಿಸಿದರು. ಸರಕಾರ ಈ ಬಗ್ಗೆ ಗಮನಹರಿಸಿ ಶಾಶ್ವತ ಪರಿಹಾರ ಒದಗಿಸುವಂತೆ ಪಂಚಾಯತ್ ಸದಸ್ಯ ವಿಲಿನ್ ಬೇಪಡಿಯಂಡ ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ. ವರದಿ : ನೌಫಲ್ ಕಡಂಗ     

Read More

ನಾಪೋಕ್ಲು ಫೆ.3 : ಕೊಡವ ಕೌಟುಂಬಿಕ ಹಾಕಿ ಉತ್ಸವ ಐದು ವರ್ಷಗಳ ನಂತರ ಕೊಡವ ಹಾಕಿ ಅಕಾಡೆಮಿ ಸಹಯೋಗದೊಂದಿಗೆ ನಡೆಯುತ್ತಿದೆ. ಅಪ್ಪಚೆಟ್ಟೋಳಂಡ ಕುಟುಂಬ ಈ ಬಾರಿಯ ಹಾಕಿ ನಮ್ಮೆಯನ್ನು ನಡೆಸುತ್ತಿದ್ದು, ನಾಪೋಕ್ಲುವಿನಲ್ಲಿ ಭರದ ಸಿದ್ಧತೆ ನಡೆದಿದೆ. ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅವರ ನೇತೃತ್ವದಲ್ಲಿ ಇಂದು ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಗ್ಯಾಲರಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಈಗಾಗಲೇ ಕೊಡವ ಕೌಟುಂಬಿಕ ಹಾಕಿ ಉತ್ಸವ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದೆ. ಗಿನ್ನಿಸ್ ದಾಖಲೆಯಾಗಿ ಕೊಡಗಿನ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರಕೀರ್ತಿ ತರುವಂತಾಗಬೇಕು ಎಂದು ಮನು ಮುತ್ತಪ್ಪ ಹೇಳಿದರು. ಗ್ಯಾಲರಿ ನಿರ್ಮಾಣ ದೊಡ್ಡ ಕೆಲಸವಾಗಿದ್ದು, ಎಲ್ಲಾ ಗ್ರಾಮಸ್ಥರು, ಶಾಲೆ ಆಡಳಿತ ಮಂಡಳಿ ಸಹಕಾರ ನೀಡುವಂತೆ ಮನವಿ ಮಾಡಿದರು. ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ನಾಪೋಕ್ಲುವಿನ ಪಬ್ಲಿಕ್ ಶಾಲೆಯ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣ ಸೇರಿದಂತೆ ಒಟ್ಟು ಮೂರು ಮೈದಾನಗಳಲ್ಲಿ ಆಯೋಜಿಸಲಾಗುತ್ತಿದೆ. ಕೊಡವ ಹಾಕಿ ಅಕಾಡೆಮಿಯು ಹಾಕಿ…

Read More

ಮಡಿಕೇರಿ ಫೆ.3 : ಮಡಿಕೇರಿ ನಗರಸಭಾ ನಾಮನಿರ್ದೇಶಿತ ಸದಸ್ಯ ಕವನ್ ಕಾವೇರಪ್ಪ ಹಾಗೂ ಹಿಂದೂ ಜಾಗರಣಾ ವೇದಿಕೆಯ ಹಿಂದೂ ವಾಹಿನಿಯ ಜಿಲ್ಲಾ ಸಂಚಾಲಕ್ ವಿನಯ್ ಕುಮಾರ್ ಅವರುಗಳನ್ನು ಗಡಿಪಾರು ಮಾಡುವ ಕುರಿತು ಪ್ರಸ್ತಾಪಿಸಿರುವ ಕ್ರಮವನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕು ಕೇಂದ್ರದಲ್ಲಿ ಪ್ರತಿಭಟನೆ ನಡೆಯಿತು. ವಿಭಾಗ ಸಂಚಾಲಕ್ ಮಹೇಶ್, ಪ್ರಾಂತ ಸಮಿತಿಯ ಜೀವನ್, ಜಿಲ್ಲಾ ಸಮಿತಿಯ ಸುನಿಲ್ ಯೋಗೇಶ್, ಜೋಯಪ್ಪ, ಅನಿಲ್, ಶರತ್  ಸೇರಿದಂತೆ  ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Read More

ಮಡಿಕೇರಿ ಫೆ.3 : ಕೊಡಗು ಜಿಲ್ಲೆಯ ಸಾರ್ವಜನಿಕರು ಮನೆ ಹಾಗೂ ಅಂಗಡಿ ಮಳಿಗೆಗಳಿಗೆ ಸಿಸಿ ಕ್ಯಾಮೆರಾ, ಡೋರ್ ಅಲಾರಂ, ಸೆನ್ಸಾರ್ ಫ್ರೇಮ್‌ಗಳನ್ನು ಅಳವಡಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮನವಿ ಮಾಡಿದ್ದಾರೆ. ಬೀಗ ಹಾಕಿಕೊಂಡು ಬೇರೆ ಊರುಗಳಿಗೆ ತೆರಳುವ ಸಂದರ್ಭ ಯಾವುದೇ ಬೆಲೆ ಬಾಳುವ ಸೊತ್ತುಗಳು, ನಗದು, ಚಿನ್ನಾಭರಣಗಳನ್ನು ಮನೆ ಹಾಗೂ ಅಂಗಡಿಯಲ್ಲಿಡಬಾರದು. ತೆರಳುವ ಸಂದರ್ಭದಲ್ಲಿ ತಮ್ಮ ಮನೆಗಳಲ್ಲಿ ಪರಿಚಯಸ್ಥರನ್ನು ಉಳಿದುಕೊಳ್ಳುವ ಬಗ್ಗೆ ನೋಡಿಕೊಳ್ಳುವುದು. ಸಾರ್ವಜನಿಕರು ಅಂಗಡಿ ಹಾಗೂ ಮನೆಗೆ ಬೀಗ ಹಾಕಿಕೊಂಡು ಹೋಗುವ ವೇಳೆ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ 112 ಇಂಡಿಯಾ ಎಂಬ ತಂತ್ರಾಂಶವನ್ನು ತಯಾರಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಅಪರಾಧಗಳನ್ನು ತಡೆಗಟ್ಟುವಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕೆಂದು ಪೊಲೀಸ್ ವರಿಷ್ಠಾಧಿಕಾರಿ ಕೋರಿಕೊಂಡಿದ್ದಾರೆ.

Read More

ಮಡಿಕೇರಿ ಫೆ.3 : ನಮ್ಮೊಂದಿಗೆ ಇರುವವರ ನೆಮ್ಮದಿ ಮತ್ತು ಶಾಂತಿಯೇ ಸಾಹಿತ್ಯವಾಗಿದ್ದು, ಪರಸ್ಪರ ಸೌಹಾರ್ದತೆಯೇ ಅದರ ಅಂತಿಮ ಗುರಿಯಾಗಿದೆಯೆಂದು ಕುಶಾಲನಗರ ತಾಲ್ಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಹಿರಿಯ ಸಾಹಿತಿ ಬಿ.ಆರ್. ನಾರಾಯಣ ಅವರು ಅಭಿಪ್ರಾಯಿಸಿದ್ದಾರೆ. ನಗರದ ರೈತ ಸಹಕಾರ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿತ ‘ಕನ್ನಡ ಸಾಹಿತ್ಯ ಸಮ್ಮೇಳನ’ದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿಜ ಜೀವನದ ಎಲ್ಲ ವಿಚಾರಗಳು, ಘಟನೆಗಳು ಸಾಹಿತ್ಯವಾಗಬಲ್ಲುದು. ಹಾಗೆಯೇ ಓದು, ಬರಹ ಅರಿಯದ ನಿಷ್ಕಳಂಕ, ಶ್ರಮ ಜೀವಿಗಳ ಬದುಕೇ ಒಂದು ಸಾಹಿತ್ಯವಾಗಿದೆ. ಏಕೆಂದರೆ ಸಾಹಿತ್ಯವೆನ್ನುವುದು ಜೀವನದ ಪ್ರತಿಬಿಂಬವೆಂದು ನುಡಿದರು. ಕನ್ನಡ ಸಾಹಿತ್ಯ ಭಂಡಾರ ಅತ್ಯಂತ ಪ್ರಬುದ್ಧ ಕೃತಿಗಳಿಂದ ತುಂಬಿ ತುಳುಕುತ್ತಿದೆ. ಹಳೆಗನ್ನಡ ರಚನೆಗಳಿಂದ ತೊಡಗಿ, ನಡುಗನ್ನಡ, ಹೊಸಗನ್ನಡ, ವಚನ ಸಾಹಿತ್ಯ, ದಾಸ ಸಾಹಿತ್ಯ, ನವೋದಯ, ಪ್ರಗತಿಶೀಲ, ದಲಿತ ಬಂಡಾಯದವರೆಗೆ ಕನ್ನಡ ಸಾಹಿತ್ಯ ಹರಿದು ಬಂದಿದ್ದು, ವೈವಿಧ್ಯಮಯವಾದ ಸಾಹಿತ್ಯ ಕೃತಿಗಳು ಮೂಡಿ ಬಂದಿವೆ. ಕನ್ನಡ ಸಾಹಿತ್ಯಕ್ಕೆ ಇಲ್ಲಿಯವರೆಗೆ 8 ಜ್ಞಾನ ಪೀಠ ಪ್ರಶಸ್ತಿಗಳು…

Read More

ನಾಪೋಕ್ಲು ಫೆ.3 : ಕೊಡವ ಕೌಟುಂಬಿಕ ಹಾಕಿ ಉತ್ಸವ ಐದು ವರ್ಷಗಳ ನಂತರ ಕೊಡವ ಹಾಕಿ ಅಕಾಡೆಮಿ ಸಹಯೋಗದೊಂದಿಗೆ ನಡೆಯುತ್ತಿದೆ. ಅಪ್ಪಚೆಟ್ಟೋಳಂಡ ಕುಟುಂಬ ಈ ಬಾರಿಯ ಹಾಕಿ ನಮ್ಮೆಯನ್ನು ನಡೆಸುತ್ತಿದ್ದು, ನಾಪೋಕ್ಲುವಿನಲ್ಲಿ ಭರದ ಸಿದ್ಧತೆ ನಡೆದಿದೆ. ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅವರ ನೇತೃತ್ವದಲ್ಲಿ ಇಂದು ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಗ್ಯಾಲರಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಈಗಾಗಲೇ ಕೊಡವ ಕೌಟುಂಬಿಕ ಹಾಕಿ ಉತ್ಸವ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದಿದೆ. ಗಿನ್ನಿಸ್ ದಾಖಲೆಯಾಗಿ ಕೊಡಗಿನ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರಕೀರ್ತಿ ತರುವಂತಾಗಬೇಕು ಎಂದು ಮನು ಮುತ್ತಪ್ಪ ಹೇಳಿದರು. ಗ್ಯಾಲರಿ ನಿರ್ಮಾಣ ದೊಡ್ಡ ಕೆಲಸವಾಗಿದ್ದು, ಎಲ್ಲಾ ಗ್ರಾಮಸ್ಥರು, ಶಾಲೆ ಆಡಳಿತ ಮಂಡಳಿ ಸಹಕಾರ ನೀಡುವಂತೆ ಮನವಿ ಮಾಡಿದರು. ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ನಾಪೋಕ್ಲುವಿನ ಪಬ್ಲಿಕ್ ಶಾಲೆಯ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣ ಸೇರಿದಂತೆ ಒಟ್ಟು ಮೂರು ಮೈದಾನಗಳಲ್ಲಿ ಆಯೋಜಿಸಲಾಗುತ್ತಿದೆ. ಕೊಡವ ಹಾಕಿ ಅಕಾಡೆಮಿಯು ಹಾಕಿ…

Read More

ಮಡಿಕೇರಿ ಫೆ.3 :  ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ವತಿಯಿಂದ ಫೆಬ್ರವರಿ 6 ರವರೆಗೆ ನಗರದ ರಾಜಾಸೀಟು ಉದ್ಯಾನವನದಲ್ಲಿ ಏರ್ಪಡಿಸಲಾಗಿರುವ ‘ಫಲಪುಷ್ಪ ಪ್ರದರ್ಶನ’ ಕಣ್ಮನ ಸೆಳೆಯುತ್ತಿದೆ. ಅಲ್ಲಿನ ಪುಷ್ಪಗಳಿಂದ ನಿರ್ಮಾಣವಾಗಿರುವ ಕಲಾಕೃತಿಗಳು ಒಂದಕ್ಕೊಂದು ಗಮನ ಸೆಳೆಯುತ್ತಿವೆ. ನಾಲ್ಕುನಾಡು ಅರಮನೆ ಕಲಾಕೃತಿಯ ಚಿತ್ರದಲ್ಲಿ ರಾಜರು ಕುಳಿತಿರುವುದು, ಹಾಗೆಯೇ ಕೊಡವ ಉಡುಪಿನಲ್ಲಿ ಸ್ವಾಗತಿಸುವ ಚಿತ್ರಗಳು, ಸಿಂಡ್ರೆಲಾ, ಹಾಗೆಯೇ ವೈನ್‍ಕಪ್ ಒಳಗೊಂಡ ಚಿತ್ರಗಳು, ಹೆಸರು ಕಾಳು ಮತ್ತು ಬಿಳಿ ಎಳ್ಳು ಮೂಲಕ ಕ್ರೀಯಾಶೀಲವಾಗಿ ನಿರ್ಮಾಣ ಮಾಡಿರುವ ಸೈನಿಕ, ಹೀಗೆ ರಾಜಸೀಟು ಉದ್ಯಾನವನದಲ್ಲಿ ಮತ್ತೊಮ್ಮೆ ಮೊಗದೊಮ್ಮೆ ನೋಡುವಂತೆ ಜನಮನ ಸೆಳೆಯುತ್ತಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್,ಅಂಬೇಡ್ಕರ್, ವೀರಸೇನಾನಿ ಜನರಲ್ ಕೆ.ಎಸ್.ತಿಮ್ಮಯ್ಯ, ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ, ರಾಷ್ಟ್ರಕವಿ ಕುವೆಂಪು, ಸ್ವಾಮಿ ವಿವೇಕಾನಂದ, ನೇತಾಜಿ ಸುಭಾಷ್ ಚಂದ್ರಬೋಸ್, ಭಗತ್‍ಸಿಂಗ್, ಪುನಿತ್ ರಾಜ್‍ಕುಮಾರ್ ಸೇರಿದಂತೆ ವಿವಿಧ ಗಣ್ಯರ ಕಲಾಕೃತಿಯನ್ನು ತರಕಾರಿ/ ಹಣ್ಣುಗಳಲ್ಲಿ ಕೆತ್ತನೆ ಮಾಡಲಾಗಿದೆ. ವಿವಿಧ ಅಲಂಕಾರಿಕ ಗಿಡಗಳಾದ ಬೋನ್ಸ್‍ಯ್ ಗಿಡಗಳ ಪ್ರದರ್ಶನ, ಇಕೆಬಾನೆ…

Read More