ಗೋಣಿಕೊಪ್ಪ ಜ.14 NEWS DESK : ಗೋಣಿಕೊಪ್ಪ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಸಂಭ್ರಮದಿಂದ ನಡೆಯಿತು. ಎಂಟು ಶಾಲೆಯ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ತಮ್ಮ ಕಲಿಕೆಗಳನ್ನು ಪ್ರದರ್ಶಸಿ, ಬಹುಮಾನ ಪಡೆದುಕೊಂಡರು. ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಮುಕ್ತ ಕಲಿಕೆಯ ವಾತಾವರಣಕ್ಕೆ ಅನುಕೂಲಕರವಾಗಿ ಕಲಿಕಾ ಹಬ್ಬವನ್ನು ಸರಕಾರ ಜಾರಿಗೆ ತಂದಿದೆ. ಅದನ್ನು ಸಮರ್ಪಕವಾಗಿ ಮಕ್ಕಳೆಡೆಗೆ ತಲುಪಿಸುವ ವ್ಯವಸ್ಥೆಯನ್ನು ಸಂಭ್ರಮವಾಗಿಸುವ ಮೂಲಕ ಮಕ್ಕಳಲ್ಲಿ ಕಲಿಕೆಯ ಆಸಕ್ತಿಯನ್ನು ದ್ವಿಗುಣಗೊಳಿಸುವಲ್ಲಿ ಕಾರ್ಯಕ್ರಮ ಆಯೋಜನೆಯಾಗಿರುವುದು ಶ್ಲಾಘನೀಯ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಆನಂದ್ ಮಾತನಾಡಿ, ಮಕ್ಕಳಲ್ಲಿ ಸೃಜನಶೀಲತೆಯನ್ನು ಹುಟ್ಟು ಹಾಕುವ ಸಲುವಾಗಿ ಕಲಿಕಾ ಹಬ್ಬ ಆಚರಣೆ ಮಾಡಲಾಗುತ್ತಿದೆ. ಮಕ್ಕಳಲ್ಲಿ ಅಡಗಿರುವ ಅಗಾಧ ಪ್ರತಿಭೆಗಳು ಹೊರಬಂದು ಗುರುತಿಸಿಕೊಳ್ಳುವ ವೇದಿಕೆಯಾಗುತ್ತಿದೆ ಎಂದು ಹೇಳಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ ಮಾತನಾಡಿ ಮಕ್ಕಳಲ್ಲಿ ಕಲಿಯುವ ಗುಣಗಳನ್ನು ಹೆಚ್ಚಿಸುವ ಪ್ರಯೋಗಾತ್ಮಕ ಕಾರ್ಯಕ್ರಮಗಳು ಸರ್ಕಾರದ ಚಿಂತನೆಯ ಯೋಜನೆಗಳಾಗಿವೆ. ಈ ಕಾರ್ಯಕ್ರಮಗಳನ್ನು ಶಿಕ್ಷಕರು ಮಕ್ಕಳಕಡೆ ತಲುಪಿಸುವ…
ಲೇಖಕ: admin
ಮಡಿಕೇರಿ ಜ.14 NEWS DESK : ಇದೇ ಜ.28 ರಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಜನ್ಮ ದಿನಾಚರಣೆ ಹಾಗೂ ಜ.30 ರಂದು ಹುತಾತ್ಮರ ದಿನ ಸಂಬಂಧ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ರಾಷ್ಟ್ರದ ಪ್ರಥಮ ಸೇನಾ ಮಹಾ ದಂಡನಾಯಕ, ವೀರ ಸೇನಾನಿ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಜನ್ಮ ದಿನಾಚರಣೆಯನ್ನು ಅಚ್ಚುಕಟ್ಟಾಗಿ ಆಯೋಜಿಸುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚಿಸಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಜೀವನ ಚರಿತ್ರೆ ಕುರಿತು ಪ್ರಬಂಧ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆಯನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸುವಂತಾಗಬೇಕು ಎಂದು ಸಲಹೆ ಮಾಡಿದರು. ಸೈನಿಕ ಶಾಲೆ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಎನ್‍ಸಿಸಿ ವಿದ್ಯಾರ್ಥಿಗಳನ್ನು ಆಹ್ವಾನಿಸುವುದು, ನಗರದಲ್ಲಿರುವ ಮಹನೀಯರ ಪ್ರತಿಮೆಗಳಿಗೆ ಹೂವಿನ ಅಲಂಕಾರ ಮಾಡುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಹೇಳಿದರು. ಫೀಲ್ಡ್…
ಮಡಿಕೇರಿ ಜ.12 NEWS DESK : ಯಲಹಂಕ ಗೌಡ ಸಮಾಜದ 2025–26ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಸಂತೋಷಕೂಟವು ಸಂಭ್ರಮದಿಂದ ನಡೆಯಿತು. ಸಮಾಜದ ಅಧ್ಯಕ್ಷರಾದ ಕುಂಞಳಿಯನ ಅಜೀತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ, ಸಮಾಜದ ನೂರಾರು ಸದಸ್ಯರು, ಮಹಿಳೆಯರು, ಯುವಕರು ಹಾಗೂ ಗಣ್ಯ ಅತಿಥಿಗಳು ಸಮ್ಮುಖದಲ್ಲಿ ಭವ್ಯವಾಗಿ ನಡೆಯಿತು. ಯಲಹಂಕದ ರೈಲ್ ವೀಲ್ ಫ್ಯಾಕ್ಟರಿ ಎಂಪ್ಲಾಯಿಸ್ ಇನ್ಸ್‍ಟಿಟ್ಯೂಟ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಅವರು ಸಮಾಜದ ಅಭಿವೃದ್ಧಿಗೆ ಅಗತ್ಯವಾದ ಒಗ್ಗಟ್ಟು, ಶಿಕ್ಷಣ, ಉದ್ಯೋಗಾವಕಾಶಗಳು ಹಾಗೂ ಯುವಕರ ಪಾತ್ರ ಕುರಿತು ಮಾರ್ಗದರ್ಶನ ನೀಡಿದರು. ಸಮಾಜದ ಅಧ್ಯಕ್ಷರಾದ ಕುಂಞಳಿಯನ ಅಜೀತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಂಗಾರು ನಿಂಗರಾಜು, ಕೋಟೇರ ವೇಣುಗೋಪಾಲ್, ಅಚ್ಚಲ್ಪಾಡಿ ಲಕ್ಷಕುಮಾರ್, ಕಲ್ಲುಮುಟ್ಟು ನಿತ್ಯಾನಂದ, ಕನ್ನಡ್ಕ ವಿಜಯಲಕ್ಷ್ಮಿ ಜಯರಾಮ್, ಕಲ್ಲುಮುಟ್ಲು ಪವನ್, ಅಯ್ಯಣರ ಶಾಲಿನಿ ನಿತ್ಯ, ಕೋಳುಮುಡಿಯನ ಮಿಲನ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು. ಸಭೆಯಲ್ಲಿ 2024–25ನೇ…
ಮಡಿಕೇರಿ ಜ.13 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆ ವತಿಯಿಂದ ಸಿರಿಧಾನ್ಯದ ಮಹತ್ವ ಕುರಿತು ಜಾಗೃತಿ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ಪ್ರಯುಕ್ತ ಜಾಥಾ ನಡೆಯಿತು. ನಗರದ ಕೋಟೆ ಆವರಣದಲ್ಲಿ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಿರಿಧಾನ್ಯದಲ್ಲಿ ಪೌಷ್ಠಿಕಾಂಶ ಹೆಚ್ಚಿದ್ದು, ಅದರ ಬಳಕೆಯಿಂದ ಆಯೋಗ್ಯಯುತ ಜೀವನ ನಡೆಸಬಹುದು. ಆದ್ದರಿಂದ ಈ ಬಗ್ಗೆ ಜಾಗೃತಿ ಮೂಡಿಸುವಂತಾಗಬೇಕು ಎಂದರು. ಸಿರಿಧಾನ್ಯ ಉಪಯೋಗದಿಂದ ದೇಹದಲ್ಲಿ ಆಹಾರದ ಸಮತೋಲನ ಕಾಯ್ದುಕೊಳ್ಳಬಹುದು. ಮಧುಮೇಹ ಮತ್ತು ರಕ್ತದೊತ್ತಡದಿಂದ ದೂರವಿರಬಹುದು ಎಂದು ಜಿ.ಪಂ.ಸಿಇಒ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್ ಮಾತನಾಡಿ, ಸಿರಿಧಾನ್ಯ ಉಪಯೋಗದಿಂದ ಹಲವು ರೀತಿಯ ಪೋಷಕಾಂಶಗಳು ದೊರೆಯಲಿದ್ದು, ಇವುಗಳನ್ನು ಬಳಸುವಂತಾಗಬೇಕು ಎಂದು ಅವರು ಸಲಹೆ ಮಾಡಿದರು. ಸಿರಿಧಾನ್ಯ ಬಳಕೆಯಿಂದ ಮೂಳೆಯು ಸಹ ಗಟ್ಟಿಯಾಗಲಿದೆ. ಕ್ಯಾಲ್ಸಿಯಂ ದೊರೆಯಲಿದೆ. ಆದ್ದರಿಂದ ಸಿರಿಧಾನ್ಯ ಬಳಕೆ ಅತ್ಯಗತ್ಯ ಎಂದರು. ಜಾಥಾದಲ್ಲಿ ಉಪ ನಿರ್ದೇಶಕರಾದ ಸೋಮಶೇಖರ್, ತೋಟಗಾರಿಕೆ…
ಮಡಿಕೇರಿ ಜ.13 NEWS DESK : ಕಾರು ಚಾಲಕರೊಬ್ಬರು ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಕದನೂರು ಗ್ರಾ.ಪಂ ವ್ಯಾಪ್ತಿಯ ಅರಮೇರಿ ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಡಾಲು ನಂಜಪ್ಪ (64) ಎಂಬುವವರೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ತಮಗೆ ಸೇರಿದ ಗದ್ದೆಯಲ್ಲಿ ಒಂಟಿ ನಳಿಕೆ ಕೋವಿ ಮತ್ತು ಮೃತದೇಹ ಪತ್ತೆಯಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ವಿರಾಜಪೇಟೆ ಠಾಣಾಧಿಕಾರಿ ಎನ್.ಜಿ.ಲತಾ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಡಿಕೇರಿ ಜ.13 NEWS DESK : ಕೊಡಗು ಜಿಲ್ಲೆಯ ಅರೆಸೇನಾಪಡೆಯ ನಿವೃತ್ತ ಯೋಧರ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರನ್ನು ಭೇಟಿ ಮಾಡಿ ಅಭಿನಂದಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಒಕ್ಕೂಟದ ಪದಾಧಿಕಾರಿಗಳು ಹೂವಿನ ಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ನಂತರ ಜಿಲ್ಲೆಯಲ್ಲಿ ಯೋಧರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಿ ಸೂಕ್ತ ಪರಿಹಾರಕ್ಕೆ ಮನವಿ ಮಾಡಿದರು. ಕೊಡಗು ಜಿಲ್ಲೆಯಲ್ಲಿ ಹಾಲಿ ಕರ್ತವ್ಯದಲ್ಲಿ ಇರುವ ಮತ್ತು ಈಗಾಗಲೇ ಕರ್ತವ್ಯ ಗೈದು ನಿವೃತ್ತಿ ಹೊಂದಿರುವ ಯೋಧರ ಸಂಖ್ಯೆ ಸುಮಾರು 5 ಸಾವಿರದಷ್ಟಿದ್ದು, ಇದೂವರೆಗೂ ಯೋಧರ ಹಿತರಕ್ಷಣೆಗಾಗಿ ಸಂಘ ಸ್ವಂತ ಜಾಗವನ್ನು ಕೂಡ ಹೊಂದಲು ಸಾಧ್ಯವಾಗಿಲ್ಲ. ಮಡಿಕೇರಿಯ ಮಹದೇವಪೇಟೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಛೇರಿ ತೆರೆದು ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು. ಈಗಾಗಲೇ ಮೃತ ಯೋಧರ ಪತ್ನಿಯರು ಹಾಗೂ ಕುಟುಂಬ ಸದಸ್ಯರ ಸಂಕಷ್ಟಗಳಿಗೆ ನೆರವಾಗುವ ಮೂಲಕ ಆ ಕುಟುಂಬಗಳಿಗೆ ಸರ್ಕಾರದ ಸೌಲಭ್ಯಗಳ ಮಾಹಿತಿ ನೀಡಲಾಗುತ್ತಿದೆ ಎಂದರು. ಕುಶಾಲನಗರದ ಪುರಸಭಾ ವ್ಯಾಪ್ತಿಯ ಮುಳ್ಳುಸೋಗೆಯಲ್ಲಿ ಈಗಾಗಲೇ 60 ಸೆಂಟ್…
ಮಡಿಕೇರಿ ಜ.13 NEWS DESK : ನವಜಾತ ಶಿಶುಗಳ ಸಂರಕ್ಷಣೆಗೆ ಪೂರಕವಾಗಿ ‘ತಾಯಿಯ ಎದೆಹಾಲು ಸಂಗ್ರಹ ಕೇಂದ್ರ’ಗಳನ್ನು ತೆರೆಯುವ ನಿಟ್ಟಿನಲ್ಲಿ ರೋಟರಿ ಸೇವಾ ಸಂಸ್ಥೆ ಪ್ರಥಮ ಆದ್ಯತೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆಯೆಂದು ರೋಟರಿ ಜಿಲ್ಲಾ ರಾಜ್ಯಪಾಲರಾದ ಪಿ.ಕೆ.ರಾಮಕೃಷ್ಣ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಕಷ್ಟು ಬಾರಿ ನವಜಾತ ಶಿಶುಗಳು ಅಗತ್ಯ ಪೋಷಕಾಂಶಯುಕ್ತ ಹಾಲಿನ ಕೊರತೆಯಿಂದ ಕೊನೆಯುಸಿರೆಳೆಯುತ್ತವೆ. ನವಜಾತ ಶಿಶುಗಳ ರಕ್ಷಣೆಗೆ ಕೃತಕ ಹಾಲು ಸಹಕಾರಿಯಾಗದಿರುವುದನ್ನು ಮನಗಂಡ ರೋಟರಿ ಸಂಸ್ಥೆ ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಹಾಗೂ ಮಂಗಳೂರಿನಲ್ಲಿ ‘ತಾಯಿ ಎದೆ ಹಾಲು ಸಂಗ್ರಹ ಕೇಂದ್ರ’ವನ್ನು ತೆರೆದಿದೆ. ಇವುಗಳ ಮೂಲಕ ಈಗಾಗಲೆ 436 ನವಜಾತ ಶಿಶುಗಳು ಪ್ರಯೋಜನವನ್ನು ಪಡೆದುಕೊಂಡಿರುವುದಾಗಿ ತಿಳಿಸಿದರು. ರಾಜ್ಯ ಸರ್ಕಾರವು ನವಜಾತ ಶಿಶುಗಳ ರಕ್ಷಣೆಯ ನಿಟ್ಟಿನಲ್ಲಿ ಆಸಕ್ತವಾಗಿರುವುದಲ್ಲದೆ, ಪ್ರತಿ ಜಿಲ್ಲಾ ಕೇಂದ್ರದ ಆಸ್ಪತ್ರೆಯಲ್ಲಿ ‘ತಾಯಿಯ ಎದೆಹಾಲು ಸಂಗ್ರಹ ಕೇಂದ್ರ’ವನ್ನು ತೆರೆಯುವ ನಿಟ್ಟಿನ ಚಿಂತನೆಗಳನ್ನು ನಡೆಸಿದೆಯೆಂದು ಅವರು ಹೇಳಿದರು. :: ಜೀವ ರಕ್ಷಣೆಗೆ ಅಗತ್ಯ ಮಾರ್ಗದರ್ಶನ :: ಹೃದಯಾಘಾತದ ಸಂದರ್ಭ ಸಂಕಷ್ಟದಲ್ಲಿರುವ ವ್ಯಕ್ತಿಯ…
ಮಡಿಕೇರಿ ಜ.13 NEWS DESK : ಕೂಡು ಕುಟುಂಬದಲ್ಲಿ ಅಡುಗೆ ಮನೆಗಷ್ಟೆ ಸೀಮಿತವಾಗಿದ್ದ ಅಮ್ಮನನ್ನು, ಅಪ್ಪ ಕೊಡಿಸಿದ್ದ ಬಜಾಜ್ ಚೇತಕ್ ಸ್ಕೂಟರ್‍ನಲ್ಲಿ ಭಾರತದ ಎಲ್ಲಾ ರಾಜ್ಯವನ್ನು ಒಳಗೊಂಡಂತೆ ಸುತ್ತಮುತ್ತಲ ಮೂರು ದೇಶಗಳಿಗೆ ಕರೆದೊಯ್ದು, ಅಲ್ಲಿನ ಪುಣ್ಯ ಸ್ಥಳ ಪ್ರವಾಸಿ ತಾಣಗಳಿಗೆ ಭೇಟಿ ಮಾಡಿಸಿ ಮನಃಸಂತೋಷ ಪಡುತ್ತಿರುವ ಡಿ. ಕೃಷ್ಣಕುಮಾರ್ ಮತ್ತು ಅವರಮ್ಮ ಚೂಡಾ ರತ್ನಮ್ಮ ಮಂಜಿನ ನಗರಿ ಮಡಿಕೇರಿಗಿಂದು ಭೇಟಿ ನೀಡಿದರು. ಮೂಲತಃ ಮೈಸೂರಿನವರಾದ ಕೃಷ್ಣ ಕುಮಾರ್ ಅವರು ತಮ್ಮಮ್ಮನೊಂದಿಗೆ 2018 ರ ಜ.16 ರಂದು ಆರಂಭಿಸಿರುವ ಪ್ರವಾಸ ಇಂದಿಗೂ ಮುಂದುವರೆದಿದೆ. ಇವರು ಇಲ್ಲಿಯವರೆಗೆ ಭಾರತದ ವಿವಿಧ ರಾಜ್ಯಗಳು, ನೆರೆಯ ನೇಪಾಳ, ಬೂತಾನ್, ಮ್ಯಾನ್ಮಾರ್ ದೇಶ ಸೇರಿದಂತೆ ಒಂದು ಲಕ್ಷ ಕಿ.ಮೀ.ಗೂ ಹೆಚ್ಚಿನ ದೂರವನ್ನು ಕ್ರಮಿಸಿ, ಅಮ್ಮನಿಚ್ಛೆಯ ಪ್ರದೇಶಗಳನ್ನು, ತೀರ್ಥ ಕ್ಷೇತ್ರಗಳ ದರ್ಶನವನ್ನು ಅವರಿಗೆ ಮಾಡಿಸಿದ್ದಾರೆ. ಅಪ್ಪ ದಕ್ಷಿಣಾ ಮೂರ್ತಿಗಳು ಕಾಲವಾದ ಬಳಿಕ, ಅವರು ಕೊಡಿಸಿದ್ದ ‘ಬಜಾಜ್ ಚೇತಕ್’ ಸ್ಕೂಟರ್‍ನಲ್ಲೆ ತಂದೆಯನ್ನು ಕಾಣುತ್ತಿದ್ದೇನೆ. ಇದರಿಂದಾಗಿ ಸ್ಕೂಟರ್‍ನಲ್ಲಿ ಅಮ್ಮನೊಂದಿಗಿನ ಪ್ರವಾಸ ಅಂದರೆ ಅದು…
ಬೆಂಗಳೂರು NEWS DESK ಜ.13 : ಶನಿವಾರಸಂತೆಯ ನೂತನ ಬಸ್ ನಿಲ್ದಾಣದ ಉದ್ಘಾಟನಾ ಸಮಾರಂಭಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್ ಎಸ್ ಭೋಸರಾಜು ಅವರನ್ನು ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರ ನೇತೃತ್ವದಲ್ಲಿ ಶನಿವಾರ ಸಂತೆ ಗ್ರಾಮ ಪಂಚಾಯಿತಿ ಆಡಳಿತ ಸಮಿತಿ ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖರು ಆಹ್ವಾನಿಸಿದರು. ಇದೇ ಫೆ.7 ರಂದು ಬಸ್ ನಿಲ್ದಾಣ ಉದ್ಘಾಟನೆಗೊಳ್ಳಲಿದೆ.
ಬೆಂಗಳೂರು NEWS DESK ಜ.13 : ಸೋಮವಾರಪೇಟೆ ತಾಲ್ಲೂಕು ಸರಕಾರಿ ಆಸ್ಪತ್ರೆ ಮೇಲ್ದರ್ಜೆಗೆ ಮತ್ತು ಹೊಸ ಕಟ್ಟಡ ನಿರ್ಮಾಣ ವಿಚಾರವಾಗಿ 2026-2027 ರ ಆಯವ್ಯಯದಲ್ಲಿ ಅನುದಾನ ನೀಡುವ ಸಂಬಂಧ ಇಂದು ಶಾಸಕ ಡಾ.ಮಂತರ್ ಗೌಡ ಅವರು ಕರ್ನಾಟಕ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಅವರನ್ನು ಭೇಟಿ ಮಾಡಿ ಪ್ರಸ್ತಾವನೆಯನ್ನು ಸಲ್ಲಿಸಿದರು.






