ಲೇಖಕ: admin

ಮಡಿಕೇರಿ ಜ.12 : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾಗಿದ್ದು, ಗ್ರಾಮೀಣ ಭಾಗದ ಜನರು ಮತ್ತು ಮಹಿಳೆಯರು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ವಿರಾಜಪೇಟೆ ತಾಲೂಕು ಪಂಚಾಯಿತಿ ಇ.ಒ. ಕೆ.ಸಿ.ಅಪ್ಪಣ್ಣ ಕರೆ ನೀಡಿದರು. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಿರಾಜಪೇಟೆ ತಾಲ್ಲೂಕು ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಮಹಿಳಾ ಸ್ವ ಸಹಾಯ ಸಂಘದ ಸದಸ್ಯರುಗಳಿಗೆ ನಡೆದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆಯರಿಗೆ ನರೇಗಾ ಯೋಜನೆಯಲ್ಲಿ ಹಲವಾರು ಸೌಲಭ್ಯಗಳಿದ್ದು, ಅದರ ಸದುಪಯೋಗವನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಸ್ವಾವಲಂಬಿ ಬದುಕು ನಡೆಸಲು ನರೇಗಾ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಸತೀಶ್ ಮಾತನಾಡಿ, ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಆಶಯದಂತೆ ಹಸಿವು ಮುಕ್ತ ಭಾರತವಾಗಬೇಕು. ಈ ನಿಟ್ಟಿನಲ್ಲಿ ನರೇಗಾ ಯೋಜನೆಯು ಗ್ರಾಮೀಣ ಭಾಗದ ಜನರಿಗೆ ಕನಿಷ್ಠ ಆರ್ಥಿಕ ವರ್ಷದಲ್ಲಿ 100 ದಿನಗಳ ಕೂಲಿ ನೀಡುತ್ತಿದ್ದು, ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೂಲಿ ಇದ್ದು, ಗ್ರಾಮೀಣ ಭಾಗದ ಜನರಿಗೆ…

Read More

ಮಡಿಕೇರಿ ಜ.12 : ಕೊಡಗು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಮಿನಿ ತಾರಾಲಯ ನಿರ್ಮಾಣ ಸಂಬಂಧ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್, ಹುಬ್ಬಳ್ಳಿಯ ಸಂಕಲ್ಪ ಗ್ರೂಪ್‍ನ ಕಟ್ಟಡ ವಾಸ್ತುಶಿಲ್ಪಿ ಮುಖ್ಯಸ್ಥ ಮಹೇಶ್ ಹಿರೇಮಠ ಹಾಗೂ ಸುಷ್ಕಮ ಸ್ಥಳ ವೀಕ್ಷಿಸಿದರು. ನಗರದ ಹೊರ ವಲಯದ ಕೆ.ನಿಡುಗಣೆ ಗ್ರಾ.ಪಂ.ವ್ಯಾಪ್ತಿಯಲ್ಲಿರುವ ಜಾಗವನ್ನು ಪರಿಶೀಲಿಸಿದರು. ಕೆ.ನಿಡುಗಣೆ ಗ್ರಾ.ಪಂ. ವ್ಯಾಪ್ತಿಯಲ್ಲಿ 3 ಎಕರೆ ಜಾಗವಿದ್ದು, ಅದರ ಪಕ್ಕದಲ್ಲಿರುವ ಸರ್ಕಾರಿ ಜಾಗದ ಗಡಿ ಗುರುತಿಸಿ ಡಿಜಿಟಲ್ ಸರ್ವೇ ಮಾಡುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು. ಜಿಲ್ಲಾ ಕೇಂದ್ರದಲ್ಲಿ ಕೊಡಗು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಮಿನಿ ತಾರಾಲಯ ನಿರ್ಮಾಣ ಮಾಡಬೇಕಿದೆ ಆ ನಿಟ್ಟಿನಲ್ಲಿ ತ್ವರಿತವಾಗಿ ಕ್ರಮವಹಿಸಬೇಕು ಎಂದರು. ಹುಬ್ಬಳ್ಳಿಯ ಸಂಕಲ್ಪ ಗ್ರೂಪ್‍ನ ಕಟ್ಟಡ ವಾಸ್ತುಶಿಲ್ಪಿ ಮುಖ್ಯಸ್ಥ ಮಹೇಶ್ ಹಿರೇಮಠ ಮಾತನಾಡಿ, ಕೆ.ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಜಾಗವನ್ನು ಸರ್ವೇ ಮಾಡಿಸಿ ಗಡಿ ಗುರುತಿಸಬೇಕು. ನಂತರ ಮತ್ತೊಂದು ಸಾರಿ ವೀಕ್ಷಣೆ ಮಾಡಿ ಅಂತಿಮಗೊಳಿಸಲಾಗುವುದು ಎಂದರು. ನೋಡಲ್ ಅಧಿಕಾರಿ ಟಿ.ಜಿ. ಪ್ರೇಮಕುಮಾರ್ ಅವರು ಮಾತನಾಡಿ 5…

Read More

ಮಡಿಕೇರಿ ಜ.12 : ಚಾಲನೆಯಲ್ಲಿದ್ದ ಹಿಟ್ಟಿನ ಗಿರಣಿ ಬೆಲ್ಟ್‌ಗೆ ಆಕಸ್ಮಿಕವಾಗಿ ತಾಯಿಯ ತಲೆ ಸಿಲುಕಿದಾಗ ಸಮಯ ಪ್ರಜ್ಞೆ ಮೆರೆದು ತಾಯಿಯ ಪ್ರಾಣ ಉಳಿಸಿದ ವಿದ್ಯಾರ್ಥಿ ದೀಕ್ಷಿತ್ (9) 2022-23ನೇ ಸಾಲಿನ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಪಾತ್ರನಾಗಿದ್ದಾನೆ. ದೀಕ್ಷಿತ್ ತಾಯಿ ಅರ್ಪಿತಾ ಕೂಡೂರು ಗ್ರಾಮದ ಹಿಟ್ಟಿನ ಗಿರಣಿಯಲ್ಲಿ ಅಕ್ಕಿ ಪುಡಿ ಮಾಡಿಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಚಾಲನೆಯಲ್ಲಿದ್ದ ಗಿರಣಿಯ ಬೆಲ್ಟ್‌ಗೆ ಅವರ ತಲೆಗೆ ಸಿಲುಕಿಕೊಂಡು, ಜೋರಾಗಿ ಕಿರುಚಿಕೊಂಡರು. ಗಿರಣಿ ಪಕ್ಕದಲ್ಲಿ ಆಟವಾಡುತ್ತಿದ್ದ ಬಾಲಕ ದೀಕ್ಷಿತ್ ತಾಯಿಯ ಕೂಗು ಕೇಳಿಸಿಕೊಂಡು ಓಡಿ ಬಂದು ಹಿಟ್ಟಿನ ಗಿರಣಿಯ ವಿದ್ಯುತ್ ಸರಬರಾಜಿನ ಸ್ವಿಚ್ ಆಫ್ ಮಾಡುವ ಮೂಲಕ ಸಮಯ ಪ್ರಜ್ಞೆ ಮೆರೆದು ತಾಯಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದನು. ದೆಹಲಿಯಲ್ಲಿ ಜ.26 ರಂದು ಗಣರಾಜ್ಯೋತ್ಸವ ಅಂಗವಾಗಿ ನಡೆಯಲಿರುವ 2022-23ನೇ ಸಾಲಿನ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ದೀಕ್ಷಿತ್ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಸ್ವೀಕರಿಸಲಿದ್ದಾನೆ ಎಂದು ಬಾಲಕನ ಪೋಷಕರು ತಿಳಿಸಿದ್ದಾರೆ. ಈತ ಇಲ್ಲಿನ ಕೂಡೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ…

Read More

ಮಡಿಕೇರಿ ಜ.12 : ಇಂದಿನ ಯುವ ಜನಾಂಗವು ಉತ್ತಮವಾದ ದಾರಿಯಲ್ಲಿ ನಡೆದರೆ ಮಾತ್ರ , ಭವಿಷ್ಯದ ಭಾರತವನ್ನು ಸದೃಢವಾಗಿ ಕಟ್ಟಲು ಸಾಧ್ಯ ಎಂದು ಶಾಸಕ ಕೆ.ಜಿ.ಬೋಪಯ್ಯ ಕಿವಿ ಮಾತುಹೇಳಿಸದರು. ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಅಂಗವಾಗಿ ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆಂತರಿಕ ಗುಣಮಟ್ಟ ಭರವಸಾ ಕೋಶ , ಎನ್.ಎಸ್.ಎಸ್ ಘಟಕ ಹಾಗೂ ಜಿಲ್ಲಾಡಳಿತ, ಜಿ.ಪಂ ಕೊಡಗು , ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ ಮಡಿಕೇರಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕೊಡಗು ಜಿಲ್ಲಾ ಯುವ ಒಕ್ಕೂಟ , ವಿರಾಜಪೇಟೆ, ಸೋಮವಾರಪೇಟೆ , ಮಡಿಕೇರಿ ತಾಲ್ಲೂಕು ಯುವ ಒಕ್ಕೂಟದ  ಸಂಯುಕ್ತ ಆಶ್ರಯದಲ್ಲಿ ನಡೆದ   “ರಾಷ್ಟ್ರೀಯ ಯುವ ದಿನ” ಹಾಗೂ “ಯುವ ಸಪ್ತಾಹ”  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಬಿ.ಪ್ರಸಾದ್‌ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಯಾವುದೇ ಆಸೆ ಆಮಿಷಗಳು , ಮಾದಕ ಚಟಗಳಿಗೆ ಒಳಗಾಗದೇ ಶಿಸ್ತುಬದ್ಧ ಹಾಗೂ ಸಂಯಮದ ಜೀವನವನ್ನು…

Read More

ವಿರಾಜಪೇಟೆ ಜ.12 : ಮೂರ್ನಾಡಿನ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಗ್ರೀಷ್ಮಗೆ ಬೆಸ್ಟ್ ಮ್ಯಾನೇಜರ್ ಪ್ರಶಸ್ತಿ ಲಭಿಸಿದೆ. ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ನಡೆದ ಕಂಪ್ಯೂಟರ್ ಸೈನ್ಸ್ ವಿಭಾಗದ ಫೆಸ್ಟ್‍ನಲ್ಲಿ ಮೂರ್ನಾಡಿನ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಕಾಂ.ನ ಕಂಪ್ಯೂಟರ್ ವಿಭಾಗದ ವಿದ್ಯಾರ್ಥಿ ಗ್ರೀಷ್ಮ ಈ ಪ್ರಶಸ್ತಿ ಪಡೆದಿರುವುದಾಗಿ ಕಾಲೇಜು ಪ್ರಕಟಣೆ ತಿಳಿಸಿದೆ.

Read More

ಮಡಿಕೇರಿ ಜ.12 : ಮೂರ್ನಾಡಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಈ ಹಿಂದೆ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರೊ. ಪಟ್ಟಡ ಪೂವಣ್ಣ ನಿವೃತ್ತಿಗೊಂಡ ಸ್ಥಾನಕ್ಕೆ ನೂತನ ಪ್ರಾಂಶುಪಾಲರಾಗಿ ಬಿದ್ದಂಡ ಡಾ. ರೇಖಾ ಚಿಣ್ಣಪ್ಪ ನೇಮಕಗೊಂಡಿದ್ದಾರೆ. ಇವರು ಜನವರಿ 2 ರಂದು ಅಧಿಕಾರವನ್ನು ವಹಿಸಿಕೊಂಡಿದ್ದಾರೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.

Read More

ಕೂಡಿಗೆ ಜ.12 : ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕೂಡಿಗೆ ಕ್ಲಸ್ಟರ್ ಕೇಂದ್ರದ ವತಿಯಿಂದ ಕೂಡುಮಂಗಳೂರು (ಕೂಡ್ಲೂರು) ಸರ್ಕಾರಿ ಪ್ರೌಢಶಾಲೆಯಲ್ಲಿ ಎನ್.ಎಸ್.ಎಸ್.ಘಟಕ ಹಾಗೂ ಎಸ್.ಡಿ.ಎಂ.ಸಿ.ಸಹಯೋಗದೊಂದಿಗೆ  ( (ಜ.12 ರಿಂದ) ಆರಂಭಗೊಂಡ ಎರಡು ದಿನಗಳ ಕಾಲದ ಕೂಡಿಗೆ ಕ್ಲಸ್ಟರ್ ಮಟ್ಟದ ಮಕ್ಕಳ ಕಲಿಕಾ ಹಬ್ಬಕ್ಕೆ ಚಾಲನೆ ನೀಡಲಾಯಿತು. ತರಗತಿ ಕೋಣೆಯ ಪಾಠದಿಂದ ಹೊರಬಂದ ಮಕ್ಕಳು ಆಟ- ಪಾಠ, ಹಾಡು- ನೃತ್ಯ, ಕರಕುಶಲ ಕಲೆ ಹಾಗೂ ಚಿತ್ರಕಲೆ ರಚನೆ ಮತ್ತಿತರ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ದಿನವಿಡೀ ತಮ್ಮನ್ನು ತೊಡಗಿಸಿಕೊಂಡು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಮಕ್ಕಳು ಸ್ವತಃ ತಾವೇ ತಯಾರಿಸಿಕೊಂಡಿದ್ದ ಕಾಗದದ ಟೋಪಿ ಧರಿಸಿ ಸಂಭ್ರಮಿಸಿದರು. ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಿಂದ ಆಗಮಿಸಿದ್ದ 4 ರಿಂದ 9ನೇ ತರಗತಿವರೆಗಿನ 120ಕ್ಕೂ ಹೆಚ್ಚಿನ ಮಕ್ಕಳು ವಿವಿಧ ಚಟುವಟಿಕೆಗಳಲ್ಲಿ ತೊಡಗಿ ತಮ್ಮನ್ನು ತಾವು ಮೈಮರೆತು ನಲಿಯುತ್ತಾ ಕಲಿಕೆಯಲ್ಲಿ ತೊಡಗಿದ್ದು, ಕಂಡುಬಂತು. ಮಕ್ಕಳ ಕಲಿಕಾ ಹಬ್ಬಕ್ಕೆ…

Read More

ಮಡಿಕೇರಿ ಜ.12 : ಮಡಿಕೇರಿ ನಗರದ 23 ವಾರ್ಡ್‍ಗಳ ಜನರ ಸಮಸ್ಯೆಗಳನ್ನು ಆಲಿಸುವ ಒಂದು ತಿಂಗಳ ಅಭಿಯಾನಕ್ಕೆ ಕೊಡಗು ರಕ್ಷಣಾ ವೇದಿಕೆ ಚಾಲನೆ ನೀಡಿದೆ. ನಗರದ ಮಲ್ಲಿಕಾರ್ಜುನ ನಗರ ಬಡಾವಣೆಯಿಂದ ಅಭಿಯಾನವನ್ನು ಆರಂಭಿಸಿದ ಕೊರವೇ ಅಧ್ಯಕ್ಷ ಅಚ್ಚಾಂಡಿರ ಪವನ್ ಪೆಮ್ಮಯ್ಯ ಅವರ ನೇತೃತ್ವದ ತಂಡ ಮೂಲಭೂತ ಸೌಲಭ್ಯಗಳ ಕೊರತೆಯ ಕುರಿತು ಸ್ಥಳೀಯ ನಿವಾಸಿಗಳಿಗೆ ಮಾಹಿತಿ ಸಂಗ್ರಹಿಸಿತು. ನಗರಸಭಾ ವ್ಯಾಪ್ತಿಯ 23 ವಾರ್ಡ್‍ಗಳ 11 ಸಾವಿರಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ, ಆಡಳಿತ ವ್ಯವಸ್ಥೆಯ ಗಮನಕ್ಕೆ ತರುವ ಪ್ರಯತ್ನ ಮಾಡಲಾಗುತ್ತಿದೆ. ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವುದೇ ಒಂದು ತಿಂಗಳ ಅಭಿಯಾನದ ಉದ್ದೇಶವಾಗಿದೆ ಎಂದು ಪವನ್ ಪೆಮ್ಮಯ್ಯ ಈ ಸಂದರ್ಭ ತಿಳಿಸಿದರು. ಕೊರವೇ ಮಡಿಕೇರಿ ನಗರ ಘಟಕದ ಅಧ್ಯಕ್ಷ ಶರತ್, ಉಪಾಧ್ಯಕ್ಷ ವರ್ಗೀಸ್, ಪ್ರಧಾನ ಕಾರ್ಯದರ್ಶಿ ಬನ್ಸಿ ನಾಣಯ್ಯ, ಖಜಾಂಚಿ ಸಿದ್ದಿಕ್, ಜಿಲ್ಲಾ ನಿರ್ದೇಶಕ ಸುಲೇಮಾನ್, ಪ್ರಮುಖರಾದ ಮುದ್ದುರ ನಿತಿನ್ ದೇವಯ್ಯ ಮತ್ತಿತರರು ಹಾಜರಿದ್ದರು.

Read More

ಮಡಿಕೇರಿ ಜ.12 : ಒಂಟಿ ಸಲಗವೊಂದು ತೋಟಗಳಿಗೆ ಲಗ್ಗೆ ಇಟ್ಟು ಕೃಷಿ ಫಸಲು ನಾಶ ಮಾಡಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಮಗ್ಗುಲ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತರಾದ ಪುಲಿಯಂಡ ಜಗದೀಶ್ ಹಾಗೂ ಕುಪ್ಪಚ್ಚಿರ ಸತೀಶ್ ಅವರುಗಳ ತೋಟಕ್ಕೆ ದಾಳಿ ಮಾಡಿದ ಕಾಡಾನೆ ಕಾಫಿ, ತೆಂಗು, ಅಡಿಕೆ, ಬಾಳೆ ಮತ್ತಿತರ ಗಿಡಗಳನ್ನು ನಾಶಪಡಿಸಿದೆ. ಲಕ್ಷಾಂತರ ರೂ. ನಷ್ಟ ಉಂಟಾಗಿದ್ದು, ಸೂಕ್ತ ಪರಿಹಾರ ನೀಡಬೇಕು ಮತ್ತು ಕಾಡಾನೆಗಳನ್ನು ಕಾಡಿಗಟ್ಟಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಆನೆ ಕಾರ್ಯಪಡೆ ಎ.ಸಿ.ಎಫ್ ಚಂಗಪ್ಪ, ಉಪವಲಯ ಅರಣ್ಯಾಧಿಕಾರಿ ಮೋನಿಶ, ಶ್ರೀಶೈಲ ಸೇರಿದಂತೆ ಆನೆ ಕಾರ್ಯಪಡೆ ತಂಡದ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮದಲ್ಲಿ ಭೀತಿಯ ವಾತಾವರಣವಿದ್ದು, ಕಾರ್ಮಿಕರು ತೋಟಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ಕಾಫಿ ಕೊಯ್ಲಿನ ಸಂದರ್ಭವಾಗಿರುವುದರಿಂದ ಬೆಳೆಗಾರರು ನಷ್ಟದ ಆತಂಕ ಎದುರಿಸುತ್ತಿದ್ದಾರೆ.

Read More

ಬೇಕಾಗುವ ಸಾಮಾಗ್ರಿಗಳು :  ಬೆಳ್ಳುಳ್ಳಿ – 15-20, ಶುಂಠಿ – ಸ್ವಲ್ಪ, ಹಸಿ ಮೆಣಸಿನಕಾಯಿ – 8-10, ಹೆಚ್ಚಿದ ಈರುಳ್ಳಿ – ಅರ್ಧ ಬಟ್ಟಲು, ಹೆಚ್ಚಿದ ಕೊತ್ತಂಬರಿ ಸೊಪ್ಪು – ಸ್ವಲ್ಪ, ಹೆಚ್ಚಿದ ಪುದೀನ – ಮುಕ್ಕಾಲು ಬಟ್ಟಲು, ದಾಲ್ಚಿನ್ನಿ (ಚಕ್ಕೆ)– ಸ್ವಲ್ಪ, ಲವಂಗ – 8, ಕಾಳುಮೆಣಸು – 1 ಚಮಚ, ದನಿಯಾ ಪುಡಿ – 2 ಚಮಚ, ತುರಿದ ತೆಂಗಿನಕಾಯಿ – ಸ್ವಲ್ಪ, ಚಿಕನ್ ತುಂಡುಗಳು – 3/4 ಕೆಜಿ, ಹೆಚ್ಚಿದ ಈರುಳ್ಳಿ – 1 ಬಟ್ಟಲು, ಹೆಚ್ಚಿದ ಟೊಮೆಟೊ – ಅರ್ಧ ಬಟ್ಟಲು, ನಿಂಬೆ ಹಣ್ಣು – ಅರ್ಧ, ಎಣ್ಣೆ – 3 ಚಮಚ, ಉಪ್ಪು – ರುಚಿಗೆ ತಕ್ಕಷ್ಟು ಮಾಡುವ ವಿಧಾನ :  ಮೊದಲಿಗೆ ಮಿಕ್ಸಿ ಜಾರ್’ಗೆ ಬೆಳ್ಳುಳ್ಳಿ, ಶುಂಠಿ, ಹಸಿರು ಮೆಣಸಿನ ಕಾಯಿ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಪುದೀನ, ಚಕ್ಕೆ, ಲವಂಗ, ಕಾಳುಮೆಣಸು, ದನಿಯಾ ಪುಡಿ, ತುರಿದ ತೆಂಗಿನಕಾಯಿ ಹಾಕಿ, ಸ್ವಲ್ಪ ನೀರು ಬೆರೆಸಿ…

Read More