ಲೇಖಕ: admin

ಮಡಿಕೇರಿ ಜ.12 :  ಕೊಡಗು ರಕ್ಷಣಾ ವೇದಿಕೆಯ ವತಿಯಿಂದ ಮಡಿಕೇರಿಯ 23 ವಾರ್ಡಿನ 11,000 ಮನೆಗಳಿಗೆ ಭೇಟಿ ನೀಡಿ ಸಮಸ್ಯೆಯನ್ನು ಅರಿಯುವ ನಿರಂತರ ಒಂದು ತಿಂಗಳ ನೂತನ ಅಭಿಯಾನಕ್ಕೆ ನಗರದ ಮಲ್ಲಿಕಾರ್ಜುನ ನಗರ ವಾರ್ಡಿನಲ್ಲಿ ಕೊಡಗು ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ  ಪವನ್ ಪೆಮ್ಮಯ ಚಾಲನೆ ನೀಡಿದರು. ಈ ಸಂದರ್ಭ  ವೇದಿಕೆಯ ಮಡಿಕೇರಿ ನಗರ ಘಟಕದ ಅಧ್ಯಕ್ಷ  ಶರತ್, ಉಪಾಧ್ಯಕ್ಷ  ವರ್ಗೀಸ್, ಪ್ರಧಾನ ಕಾರ್ಯದರ್ಶಿ ಬನ್ಸೀ ನಾಣಯ್ಯ , ಖಜಾಂಚಿ ಸಿದ್ದಿಕ್, ಜಿಲ್ಲಾ ನಿರ್ದೇಶಕ  ಸುಲೇಮಾನ್, ಮುಖಂಡ  ಮುದ್ದುರ ನಿತಿನ್ ದೇವಯ್ಯ ಮತ್ತಿತರರು ಹಾಜರಿದ್ದರು.

Read More

ಮಡಿಕೇರಿ,ಜ. 12 :  ಕೊಡಗು ಜಿಲ್ಲೆಯಲ್ಲಿ ಫುಟ್ಬಾಲ್ ಆಟ ಶೇ.100ರಷ್ಟು ಏಳಿಗೆ ಕಂಡಿದೆ. ಕೊಡಗು ಜಿಲ್ಲೆಯಿಂದ ಹಲವಾರು ಮಂದಿ ಕರ್ನಾಟಕ ರಾಜ್ಯ ಹಾಗೂ ಭಾರತ ದೇಶಕ್ಕಾಗಿ ಆಡಿದ್ದಾರೆ ಎಂದು ರಾಷ್ಟ್ರೀಯ ಫುಟ್ಬಾಲ್ ಆಟಗಾರ ಹಾಗೂ ಎಂಸಿಸಿ ಹಿರಿಯ ಆಟಗಾರ ಬೆಪ್ಪುರನ ಅಣ್ಣಪ್ಪ ಹೇಳಿದರು. ಮ್ಯಾನ್ಸ್ ಕಾಂಪೌಂಡ್ ಕ್ಲಬ್(ಎಂಸಿಸಿ) ವತಿಯಿಂದ ಇಲ್ಲಿನ ಫುಟ್ಬಾಲ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಮುಕ್ತ ಫುಟ್ಬಾಲ್ ಪಂದ್ಯಾವಳಿಯ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜಿಲ್ಲೆಯಲ್ಲಿ ಫುಟ್ಬಾಲ್ ಆಟಕ್ಕೆ ಹೆಚ್ಚಿನ ಪ್ರೋತ್ಸಾಹ ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. 1968ರಲ್ಲಿ ಆರಂಭಗೊಂಡ ಎಂಸಿಸಿ ಕ್ಲಬ್ೆಲ್ಲರ ಸಹಕಾರದಿಂದ ಮುನ್ನಡೆಯುತ್ತಿದೆ. 5-7 ಆಟಗಾರರ ಪಂದ್ಯಾವಳಿಯೊಂದಿಗೆ ಪೂರ್ಣ ಪ್ರಮಾಣದ 11 ಆಟಗಾರರ 45 ನಿಮಿಷಗಳ ಪಂದ್ಯಾವಳಿ ಆಯೋಜಿಸುವಂತಾಗಬೇಕು. ಪ್ರತಿದಿನ ಅಭ್ಯಾಸ ಮಾಡಿದಲ್ಲಿ ಉನ್ನತ ಮಟ್ಟಕ್ಕೇರಲು ಸಾಧ್ಯ. ಆಟಗಾರರು ಕೊಡಗು ಮಾತ್ರವಲ್ಲದೆ, ಮೈಸೂರ, ಬೆಂಗಳೂರು ಸೇರಿದಂತೆ ಹೊಗಡೆ ಆಡಿದಾಗ ರಾಜ್ಯ, ರಾಷ್ಟ್ರೀಯ ತಂಡದಲ್ಲಿ ಆಯ್ಕೆಯಾಗಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು. ಎಂಸಿಸಿ…

Read More

ಮಡಿಕೇರಿ ಜ.12 : ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಪ್ರಯುಕ್ತ ಜ.15 ರಂದು ನಡೆಯುವ ರಾಷ್ಟ್ರೀಯ ಯುವ ಸಪ್ತಾಹ ಪ್ರಯುಕ್ತ ಜಿಲ್ಲೆಯಲ್ಲಿ ಯೋಗಥಾನ್ ಕಾರ್ಯಕ್ರಮ ನಡೆಯಲಿದೆ. ಮಡಿಕೇರಿ ಸಾಯಿ ಹಾಕಿ ಟರ್ಫ್, ಪೊನ್ನಂಪೇಟೆ ಹಾಕಿ ಟರ್ಫ್(ಜೂನಿಯರ್ ಕಾಲೇಜು ಮೈದಾನ) ಹಾಗೂ ಕೂಡಿಗೆ ಕ್ರೀಡಾ ಶಾಲೆ ಹಾಕಿ ಟರ್ಫ್‍ಗಳಲ್ಲಿ ಯೋಗಥಾನ್ ನಡೆಯಲಿದೆ. ಯೋಗ ಅಭ್ಯಾಸವು ಜನವರಿ, 12 ಮತ್ತು 13 ರಂದು ಎಲ್ಲಾ ಶಾಲೆಗಳು, ಕಾಲೇಜುಗಳಲ್ಲಿ ತಮ್ಮ ದೈಹಿಕ ಶಿಕ್ಷಣ ಶಿಕ್ಷಕರು/ ಯೋಗ ಬೋಧಕರ ನೆರವಿನೊಂದಿಗೆ ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡಲಿದ್ದಾರೆ. ಜನವರಿ, 14 ರಂದು ಬೆಳಗ್ಗೆ 9 ಗಂಟೆಗೆ ಮಡಿಕೇರಿ, ಪೊನ್ನಂಪೇಟೆ ಮತ್ತು ಕೂಡಿಗೆಯಲ್ಲಿ ಯೋಗ ಅಭ್ಯಾಸ ನಡೆಯಲಿದೆ. ಜನವರಿ 15 ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಮಡಿಕೇರಿ, ಪೊನ್ನಂಪೇಟೆ ಮತ್ತು ಕೂಡಿಗೆಯಲ್ಲಿ ಯೋಗಥಾನ್ ನಡೆಯಲಿದೆ. ಯೋಗದ ವಿವರಗಳಿಗೆ http://youtu.be/RgiLepPugrY ಲಿಂಕ್ ಅನ್ನು ಕ್ಲಿಕ್ ಮಾಡಿ ಪಡೆಯಬಹುದು. ಬಿಳಿ ಬಣ್ಣದ ಟಿ ಶರ್ಟ್ ಧರಿಸಿ ಯೋಗ ಮಾಡುವುದು. ಭಾಗವಹಿಸುವವರು ತಮ್ಮ…

Read More

ಮಡಿಕೇರಿ ಜ.12 : ಮನೆಯಲ್ಲಿ ಸೇರಿಕೊಂಡಿದ್ದ ನಾಗರ ಹಾವನ್ನು ಉರಗ ತಜ್ಞ ಪ್ರವೀಣ್ ರಕ್ಷಿಸಿದ್ದಾರೆ. ಮಡಿಕೇರಿಯ ವಿದ್ಯಾನಗರದ ನಿವಾಸಿ ಸುಮ ಎಂಬವರ ಮನೆಯಲ್ಲಿ ನಾಗರ ಹಾವು ಕಾಣಿಸಿಕೊಂಡಿದ್ದು, ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆಯ ಸ್ನೇಕ್ ಪ್ರವೀಣ್ ಅವರಿಗೆ ಮಾಹಿತಿ ನೀಡಿದ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಪ್ರವೀಣ್ ನಾಗರಹಾವನ್ನು ಹಿಡಿದು ರಕ್ಷಿಸಿ ಅದನ್ನು ರಕ್ಷಿತಾರಣ್ಯಕ್ಕೆ ಬಿಟ್ಟರು. ಹಾವುಗಳು ಕಂಡುಬಂದಲ್ಲಿ ಅವುಗಳಿಗೆ ಯಾವುದೇ ರೀತಿಯ ಹಿಂಸೆ ನೀಡದೆ 8197689934 ಸಂಖ್ಯೆಗೆ ಕರೆ ಮಾಡುವಂತೆ ಪ್ರವೀಣ್ ಮನವಿ ಮಾಡಿದರು.

Read More

ಮಡಿಕೇರಿ ಜ.11 : ಮಡಿಕೇರಿ ನಗರದ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ನೀಡಲಾಗುವ ಬಿಸಿಯೂಟದ ಅಕ್ಕಿಯಲ್ಲಿ ಪ್ಲಾಸ್ಟಿಕ್ ತುಂಡುಗಳು ಮಿಶ್ರಿತವಾಗಿದೆ ಎಂದು ಆರೋಪಿಸಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದಾರೆ. ಪ್ಲಾಸ್ಟಿಕ್ ಮಿಶ್ರಿತ ಅಕ್ಕಿಯಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿರುವ ಅಧ್ಯಕ್ಷ ಆರ್.ಪಿ.ಚಂದ್ರಶೇಖರ್ ಅಕ್ಕಿಯನ್ನು ಸರಬರಾಜು ಮಾಡಿರುವ ಗುತ್ತಿಗೆದಾರನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಮತ್ತು ಶಾಲೆಗೆ ಗುಣಮಟ್ಟದ ಅಕ್ಕಿಯನ್ನು ಪೂರೈಸಬೇಕು ಎಂದು ಒತ್ತಾಯಿಸಿದ್ದಾರೆ. ತಪ್ಪಿದಲ್ಲಿ ವಿದ್ಯಾರ್ಥಿಗಳ ಪೋಷಕರ ಸಹಕಾರದೊಂದಿಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬಿಸಿಯೂಟಕ್ಕಾಗಿ ದಾಸ್ತಾನಿರಿಸಿರುವ ಅಕ್ಕಿಯಲ್ಲಿ ಮಣಿಯ ರೂಪದ ಪ್ಲಾಸ್ಟಿಕ್ ತುಂಡುಗಳಿರುವುದು ಕಂಡು ಬಂದಿದೆ. ಅಕ್ಕಿಯನ್ನು ತೊಳೆಯುವಾಗ ನೀರಿನಲ್ಲಿ ತೇಲುತ್ತಿತ್ತು ಎಂದು ಚಂದ್ರಶೇಖರ್ ಅಪರ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರ ಗಮನ ಸೆಳೆದರು. ಎಸ್ ಡಿ ಎಂ ಸಿ ಸದಸ್ಯ ದಿನೇಶ್ ಈ ಸಂದರ್ಭ ಹಾಜರಿದ್ದರು.

Read More

ಮಡಿಕೇರಿ ಜ.11 : ಮಡಿಕೇರಿ ತಾಲ್ಲೂಕಿನ ಕುರುಳಿ ಗ್ರಾಮದಲ್ಲಿ ಅನಧಿಕೃತವಾಗಿ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಕಾರ್ಯಚರಣೆ ನಡೆಸಿದರು. ರೂ. 61,600/- ಗಳನ್ನು ದಂಡ ವಿಧಿಸಲಾಗಿದ್ದು, ಕೃತ್ಯಕ್ಕೆ ಬಳಸಲಾಗಿದ್ದ ಕಬ್ಬಿಣದ ತೆಪ್ಪ ನಾಪೋಕ್ಲು ಪೊಲೀಸ್ ಠಾಣೆಯ ವಶದಲ್ಲಿದೆ.

Read More

ಮಡಿಕೇರಿ ಜ.11 : ಮಡಿಕೇರಿ ತಾಲ್ಲೂಕು ಮದೆನಾಡು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದ ಕಬಡ್ಡಿ ಪಂದ್ಯಾಟದಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಇದೀಗ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವ ಬ್ರದರ್ಸ್ ದೇವರಕೊಲ್ಲಿ ತಂಡಕ್ಕೆ ಪಂಚಾಯಿತಿ ವತಿಯಿಂದ ಸಮವಸ್ತ್ರ ವಿತರಣಾ ಕಾರ್ಯಕ್ರಮ ನಡೆಯಿತು. ಪಂಚಾಯತ್ ಅಭಿವೃದ್ದಿ ಅಧಿಕಾರಿಯಾದ ನಂಜುಂಡ ಸ್ವಾಮಿ, ಪಂಚಾಯತ್ ಅಧ್ಯಕ್ಷರಾದ ರಾಮ್ಮಯ್ಯ, ಪಂಚಾಯತ್ ಸದಸ್ಯ ಸೈದಲವಿ, ಹಿರಿಯ ಕ್ರೀಡಾಪಟು, ಸಾಮಾಜಿಕ ಕಾರ್ಯಕರ್ತ ಮುಸ್ತಫ, ತಂಡದ ತರಬೇತುದಾರ ಸಮೀರ್  ಹಾಗೂ ತಂಡದ ಸದಸ್ಯರುಗಳು ಉಪಸ್ಥಿತರಿದ್ದರು.

Read More

ಮಡಿಕೇರಿ ಜ.11: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ಪಕ್ಷದ ಪೂರ್ವಭಾವಿ ಸಭೆ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಅಫ್ಸರ್ ಕೊಡ್ಲಿಪೇಟೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊಡಗಿನ ಎರಡು ಕ್ಷೇತ್ರಗಳಲ್ಲಿ SDPI ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ರೂಪರೇಷ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಪಕ್ಷದ ಜಿಲ್ಲಾಧ್ಯಕ್ಷ ಕಲೀಲ್ ಮಡಿಕೇರಿ, ಪ್ರಧಾನ ಕಾರ್ಯದರ್ಶಿ ಬಶೀರ್ ಅಹಮದ್, ರಾಜ್ಯ ಸಮಿತಿ ಸದಸ್ಯ ನವಾಸ್ ಉಳ್ಳಾಲ್, ಪ್ರಮುಖರಾದ ಮನ್ಸೂರ್, ಅಮೀನ್ ಮೊಹಿಸಿನ್, ಅಬ್ದುಲ್ಲಾ ಅಡ್ಕಾರ್, ಮುಸ್ತಫಾ ಮಡಿಕೇರಿ, ಮಡಿಕೇರಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಉಸ್ಮಾನ್ ಸುಂಟಿಕೊಪ್ಪ  ಸಭೆಯಲ್ಲಿ ಇದ್ದರು.

Read More

ಮಡಿಕೇರಿ ಜ.11 : ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರಾಗಿದ್ದು, ‘ಗ್ರಾಹಕರೇ ದೊರೆಗಳು’ ಎಂಬುದನ್ನು ಯಾರೂ ಸಹ ಮರೆಯಬಾರದು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಗೌರಮ್ಮಣ್ಣಿ  ಅವರು ಪ್ರತಿಪಾದಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವೇದಿಕೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ, ಕುಶಾಲನಗರ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಬುಧವಾರ ನಡೆದ ‘ರಾಷ್ಟ್ರೀಯ ಗ್ರಾಹಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಮೂಲಕ ವಸ್ತು/ಪದಾರ್ಥಗಳನ್ನು ಕೊಳ್ಳುವುದು ಹೆಚ್ಚಾಗಿದೆ. ಗ್ರಾಹಕರಿಗೆ ಮೋಸ, ವಂಚನೆ ಉಂಟಾದಲ್ಲಿ ಗ್ರಾಹಕರ ಹಕ್ಕುಗಳ ಪರಿಹಾರ ವೇದಿಕೆಗೆ ದೂರು ಸಲ್ಲಿಸಬೇಕು ಎಂದು ಅವರು ತಿಳಿಸಿದರು. ಜಾಹೀರಾತು ನೋಡಿ ಪದಾರ್ಥ/ವಸ್ತುಗಳನ್ನು ಖರೀದಿ ಮಾಡಬಾರದು. ಅದರ ಗುಣಮಟ್ಟ ಪರಿಶೀಲಿಸಿ ಕೊಳ್ಳುವಂತಾಗಬೇಕು. ಜಾಹೀರಾತುಗೆ ಯಾರೂ ಸಹ ಮರಳು ಆಗಬಾರದು ಎಂದು ಅವರು ಹೇಳಿದರು. ಯಾವ ಸ್ಥಳದಲ್ಲಿಯೇ ಪದಾರ್ಥ/ವಸ್ತುಗಳನ್ನು ಕೊಂಡಿದ್ದರೂ…

Read More

ಮಡಿಕೇರಿ ಜ.11 : ಮಡಿಕೇರಿ ನಗರಕ್ಕೆ ಕುಡಿಯುವ ನೀರು ಒದಗಿಸುವ ಕೂಟುಹೊಳೆಯಲ್ಲಿ ನೀರಿನ ಕೊರತೆ ಉಂಟಾಗಿದ್ದು, ನೀರು ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ. ಇದಕ್ಕೆ ನಗರಸಭೆಯ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೇ ಕಾರಣವೆಂದು ನಗರ ಕಾಂಗ್ರೆಸ್ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಬಿ.ವೈ.ರಾಜೇಶ್ ಆರೋಪಿಸಿದ್ದಾರೆ. ಕೂಟುಹೊಳೆಯ ಸ್ಥಿತಿಗತಿಯನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು ಜನವರಿ ತಿಂಗಳಾಯಿತ್ತೆಂದರೆ ಕೂಟುಹೊಳೆಯಲ್ಲಿ ನೀರಿನ ಕೊರತೆ ಎದುರಾಗುವುದು ಸಾಮಾನ್ಯ. ಇದರ ಅರಿವಿದ್ದರೂ ಕುಂಡಾಮೇಸ್ತ್ರಿ ಯೋಜನೆಯ ಪ್ರದೇಶದಿಂದ ನೀರು ಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳದೆ ಇರುವುದು ನಗರಸಭೆಯ ಜಡ್ಡುಗಟ್ಟಿದ ಆಡಳಿತ ವ್ಯವಸ್ಥೆಗೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು. ಜನವರಿಯ ನಂತರ ನೀರಿನ ಅಭಾವ ನಗರವನ್ನು ಕಾಡುತ್ತದೆ ಎನ್ನುವ ಕಾರಣಕ್ಕಾಗಿ ಕೋಟ್ಯಾಂತರ ಹಣವನ್ನು ವಿನಿಯೋಗಿಸಿ ಕುಂಡಾಮೇಸ್ತ್ರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಆದರೆ ಇದರ ಲಾಭವನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಪ್ರಸ್ತುತ ವರ್ಷದ ಆರಂಭದಿಂದಲೇ ಕೂಟುಹೊಳೆಯ ನೀರು ಕ್ಷೀಣಿಸುತ್ತಾ ಬಂದಿದೆ. ಇದೇ ಕಾರಣಕ್ಕೆ ನಗರದ ಬಹುತೇಕ ಭಾಗಕ್ಕೆ ಬೇಡಿಕೆಗೆ ಅನುಗುಣವಾಗಿ ನೀರು…

Read More