ಮಡಿಕೇರಿ ಡಿ.3 NEWS DESK : ಜಿಲ್ಲೆಯ ಶೋಷಿತ ಸಮೂಹಗಳಾದ ಪರಿಶಿಷ್ಟರು ಹಾಗೂ ಆದಿವಾಸಿಗಳ ಸಂಕಷ್ಟಗಳಿಗೆ ಸ್ಪಂದಿಸುವಂತೆ ಆಗ್ರಹಿಸಲು ಇದೇ ತಿಂಗಳಿನಲ್ಲಿ ಜಿಲ್ಲೆಯ ಎರಡೂ ಕ್ಷೇತ್ರಗಳ ಶಾಸಕರನ್ನು ಭೇಟಿಯಾಗುವ ‘ಆದಿವಾಸಿಗಳ ನಡೆ ಶಾಸಕರ ಮನೆ ಕಡೆ’ ಕಾರ್ಯಕ್ರಮವನ್ನು ರೂಪಿಸಿರುವುದಾಗಿ ಆಲ್ ಇಂಡಿಯಾ ಯುನೈಟೆಡ್ ಕಿಸಾನ್ ಸಭಾ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಡಿ.ಎಸ್.ನಿರ್ವಾಣಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರದ ಶಾಸಕರನ್ನು ಭೇಟಿ ಮಾಡಿ ನಮ್ಮ ಸಂಕಷ್ಟಗಳನ್ನು ಅವರ ಮುಂದಿಡಲಾಗುತ್ತದೆ. ಇದಕ್ಕೆ ಅವರಿಂದ ಸೂಕ್ತ ಸ್ಪಂದನ ದೊರಕದಿದ್ದಲ್ಲಿ ಮುಂಬರುವ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು. ಕಳೆದ ಚುನಾವಣಾ ಸಂದರ್ಭದಲ್ಲಿ ದಲಿತ ಆದಿವಾಸಿಗಳ ಸಂಪೂರ್ಣ ಬೆಂಬಲದೊಂದಿಗೆ ಆಯ್ಕೆಯಾಗಿ ಬಂದ ಜಿಲ್ಲೆಯ ಇಬ್ಬರು ಶಾಸಕರುಗಳ ಬಗ್ಗೆ ಇದ್ದ ಆಶಾಭಾವನೆ ಇಂದು ಕರಗಿದೆ. ಇವರು ಜಿಲ್ಲೆಯ ನೊಂದ, ದೌರ್ಜನ್ಯಗಳಿಗೆ ಒಳಗಾಗಿರುವ ಆದಿವಾಸಿಗಳ ಸಮಸ್ಯೆಯ ಪರಿಹಾರಕ್ಕೆ ಕಾಳಜಿ ತೋರುತ್ತಿಲ್ಲವೆಂದು ಆರೋಪಿಸಿದರು. ಜಿಲ್ಲೆಯಲ್ಲಿಂದು ಸಹಸ್ರಾರು ಏಕರೆ ಸರ್ಕಾರಿ ಜಾಗ ಉಳ್ಳವರಿಂದ ಅತಿಕ್ರಮಣಕ್ಕೆ…
ಲೇಖಕ: admin
ಮಡಿಕೇರಿ ಡಿ.3 NEWS DESK : ರಾಜ್ಯ ಕಾಂಗ್ರೆಸ್ ಸರಕಾರ ರೈತ ವಿರೋಧಿ ಧೋರಣೆಯನ್ನು ನುಸರಿಸುತ್ತಿದೆ, ಬೆಳೆಹಾನಿ ಪರಿಹಾರ ನೀಡದೆ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಬಿಜೆಪಿಯ ರೈತ ಮೋರ್ಚಾ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿತು. ರಾಜ್ಯ ಸರಕಾರ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಮಾಜಿ ಶಾಸಕರು ಹಾಗೂ ಬಿಜೆಪಿ ಪ್ರಮುಖರು ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಮುಂಗಾರು 5 ತಿಂಗಳಿಗೂ ಹೆಚ್ಚಿನ ಕಾಲ ವಿಸ್ತರಿಸಿದ ಪರಿಣಾಮ ಕೊಡಗು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ವ್ಯಾಪಕವಾದ ಕೃಷಿ ಹಾನಿಯಾಗಿದೆ. ಜಿಲ್ಲೆಯ ಆರ್ಥಿಕ ಬೆನ್ನೆಲುಬಾಗಿರುವ ಕಾಫಿ, ಕರಿಮೆಣಸು ಕೃಷಿಗಳಿಗೆ ಶೇ.60 ರಿಂದ 70 ರಷ್ಟು ನಷ್ಟ ಉಂಟಾಗಿದೆ. ಈ ಕುರಿತು ಸರ್ವೇ ನಡೆಸಿದ ಸರ್ಕಾರ ಕೇವಲ ಶೇ.30 ರಷ್ಟು ಮಾತ್ರ ಕೃಷಿ ಹಾನಿಯಾಗಿದೆ ಎಂದು ವರದಿ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯ…
ಮಡಿಕೇರಿ ಡಿ.3 NEWS DESK : ಉಡೋತ್‍ಮೊಟ್ಟೆಯ ಶ್ರೀ ಸ್ವಾಮಿ ಕೊರಗಜ್ಜ ದೈವ ಸಾನಿಧ್ಯದಲ್ಲಿ ಡಿ.6 ಮತ್ತು 7 ರಂದು ಐದನೇ ವರ್ಷದ ನೇಮೋತ್ಸವ ನಡೆಯಲಿದೆ. ಡಿ.6 ರಂದು ಬೆಳಿಗ್ಗೆ 7 ಗಂಟೆಗೆ ಗಣಪತಿ ಹೋಮ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6 ಗಂಟೆಗೆ ದೈವದ ಭಂಡಾರ ಇಳಿಯುವುದು, ರಾತ್ರಿ 9 ಗಂಟೆಯಿಂದ ಡಿ.7ರ ಮಧ್ಯಾಹ್ನದ ವರೆಗೆ ಪರಿವಾರ ಸತ್ಯ ದೈವಗಳಾದ ಶ್ರೀ ಧರ್ಮದೈವ, ಪಂಜುರ್ಲಿ, ಶ್ರೀ ಸತ್ಯ ದೈವ ಕಲ್ಲುರ್ಟಿ, ಶ್ರೀ ಮಂತ್ರವಾದಿ ಗುಳಿಗ ಹಾಗೂ ಶ್ರೀ ಸಾರ್ಲಪಟ್ಟದ ಸ್ವಾಮಿ ಕೊರಗಜ್ಜ ದೈವದ ನೇಮ ಜರುಗಲಿದೆ. ಎರಡು ದಿನವೂ ಅನ್ನದಾನ ನೆರವೇರಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೈವಸ್ಥಾನದ ಪ್ರಮುಖರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ 9900931278, 9591304757, 9483399077 ಸಂಪರ್ಕಿಸಬಹುದಾಗಿದೆ.
ಮಡಿಕೇರಿ ಡಿ.3 NEWS DESK : ಪೊನ್ನಂಪೇಟೆ-ಕಾನೂರು-ನಿಟ್ಟೂರು ರಸ್ತೆ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಕಾಮಗಾರಿಯನ್ನು ಅತ್ಯಂತ ಶೀಘ್ರದಲ್ಲಿ ಗುಣಮಟ್ಟ ಕಾಯ್ದುಕೊಂಡು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮೀದೇರಿರ ನವೀನ್, ವಲಯ ಕಾಂಗ್ರೆಸ್ ಅಧ್ಯಕ್ಷರು ರಮೇಶ್, ಪಂಚಾಯಿತಿ ಸದಸ್ಯರು ಬೋಪಣ್ಣ, ದಾನಿಗಳು ಜೀವನ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಬಾನಂಡ ಪ್ರತ್ಯು, ಹಿರಿಯರು ಪೆಮ್ಮಂಡ ಪೊನ್ನಪ್ಪ, ಪಕ್ಷದ ಮುಖಂಡರು ಮುಕಟೀರ ಸಂದೀಪ್, ವಿನು ಉತ್ತಪ್ಪ, ಮನು, ಸಿದ್ದು ನಾಚಪ್ಪ, ನಿಖಿಲ್ ಸೋಮಣ್ಣ, ಅಜ್ಜಿಕುಟ್ಟಿರ ಪೊನ್ನು, ಪಮು, ಅಣ್ಣಳ್ಳಮಾಡ ಹರೀಶ್, ಅಂಟೋನಿ, ಚೆಕೇರ ಸುಧೀರ್, ಪಕ್ಷದ ಮುಖಂಡರು, ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು. ರಸ್ತೆಯ ಅಭಿವೃದ್ಧಿಗೆ ಶಾಸಕರು ರಾಜ್ಯ ಸರ್ಕಾರದಿಂದ ₹…
ಮಡಿಕೇರಿ ಡಿ.3 NEWS DESK : ಪೊನ್ನಂಪೇಟೆ ತಾಲ್ಲೂಕಿನಲ್ಲಿರುವ ಪ್ರಸಿದ್ಧ ಮಲ್ಲಗೆರೆ ಶ್ರೀ ಮಾರಮ್ಮ ಹಾಗೂ ಶ್ರೀ ಈಶ್ವರ ದೇವಾಲಯದ ಮುಖ್ಯ ಹೆಬ್ಬಾಗಿಲನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದಶಾಸಕರು, ಅತ್ಯಂತ ಸುಂದರ ಹಾಗೂ ಸಾವಿರಾರು ಭಕ್ತರು ಆಗಮಿಸುವ ಈ ದೇವಸ್ಥಾನಕ್ಕೆ ನೂತನ ಹೆಬ್ಬಾಗಿಲು ಮತ್ತಷ್ಟು ಮೆರಗು ನೀಡುತ್ತದೆ ಎಂದು ಬಣ್ಣಿಸಿದರು. ಶ್ರೀ ದೇವರು ಭಕ್ತಾದಿಗಳ ಇಷ್ಟಾರ್ಥ ಈಡೇರಿಸಿ ನಾಡಿಗೆ ಸುಖ, ಸಂತೋಷ, ಸಮೃದ್ಧಿ ಕರುಣಿಸಲಿ ಎಂದು ಪ್ರಾರ್ಥಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮೀದೇರಿರ ನವೀನ್, ವಲಯ ಕಾಂಗ್ರೆಸ್ ಅಧ್ಯಕ್ಷರು ರಮೇಶ್, ಪಂಚಾಯಿತಿ ಸದಸ್ಯರು ಬೋಪಣ್ಣ, ದಾನಿಗಳು ಜೀವನ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಬಾನಂಡ ಪ್ರತ್ಯು, ಹಿರಿಯರು ಪೆಮ್ಮಂಡ ಪೊನ್ನಪ್ಪ, ಪಕ್ಷದ ಮುಖಂಡರು ಮುಕಟೀರ ಸಂದೀಪ್, ವಿನು ಉತ್ತಪ್ಪ, ಮನು, ಸಿದ್ದು ನಾಚಪ್ಪ, ನಿಖಿಲ್ ಸೋಮಣ್ಣ, ಅಜ್ಜಿಕುಟ್ಟಿರ ಪೊನ್ನು,…
ಮಡಿಕೇರಿ ಡಿ.3 NEWS DESK : ಎಲೆಕ್ಟ್ರಿಕ್ ಆಟೋರಿಕ್ಷಾಗಳ ಸಂಚಾರಕ್ಕೆ ಈಗಾಗಲೇ ಕೇಂದ್ರ ಸರಕಾರ ಜಾರಿಗೆ ತಂದಿರುವ ಆದೇಶಗಳನ್ವಯ ಕೆಲವು ವಿನಾಯಿತಿಗಳನ್ನು ನೀಡಬೇಕು ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಈ ಆದೇಶಕ್ಕೆ ವಿರುದ್ಧವಾದ ನಿಯಮಗಳನ್ನು ಜಾರಿಗೆ ತರಬಾರದೆಂದು ಆಟೋ ರಿಕ್ಷಾ ಮಾಲೀಕರ ಹಾಗೂ ಚಾಲಕರ ಸಂಘ ಒತ್ತಾಯಿಸಿದೆ. ನಗರದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರಿಗೆ ಮನವಿ ಸಲ್ಲಿಸಿದ ಚಾಲಕರು ಜಿಲ್ಲೆಯಲ್ಲಿ ಎಲೆಕ್ಟ್ರಿಕ್ ಆಟೋ ಮಾಲೀಕರು ಹಾಗೂ ಚಾಲಕರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಗಮನ ಸೆಳೆದರು ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ಅನುಸರಿಸುತ್ತಿರುವ ಕ್ರಮಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಸರಕಾರದ ಆದೇಶದ ಪ್ರಕಾರ ಎಲೆಕ್ಟ್ರಿಕ್ ಆಟೋ ರಿಕ್ಷಾವನ್ನು ಓಡಿಸಲು ರಹದಾರಿಯ ಅಥವಾ ಅನುಮತಿಯ ಅಗತ್ಯವಿಲ್ಲ. ಆದರೆ ಮಡಿಕೇರಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಇನ್ನು ಮುಂದೆ ರಹದಾರಿ ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ. ಅಲ್ಲದೆ ಕೇವಲ 15 ಕಿ.ಮೀ ದೂರ ಮಾತ್ರ ಓಡಿಸಲು ಅವಕಾಶವಿದೆ ಎಂದಿದ್ದಾರೆ. ಇದು ಸರಕಾರದ ನಿಯಮಕ್ಕೆ ವಿರುದ್ಧವಾದ ಕ್ರಮ ಎಂದು ಆಟೋ…
ಮಡಿಕೇರಿ ಡಿ.3 NEWS DESK : ಪೊನ್ನಂಪೇಟೆ ತಾಲ್ಲೂಕಿನ ಹೈಸೊಡ್ಲೂರು ಗ್ರಾಮದ ಮಾದೇಶ್ವರ ದೇವಸ್ಥಾನದಿಂದ ಐಗುಂದ ಎಸ್ಟೇಟ್ ವರೆಗಿನ ಪೂರ್ಣಗೊಂಡಿರುವ 11 ಕೆವಿ ವಿದ್ಯುತ್ ಮಾರ್ಗದ ರೀ ರೂಟಿಂಗ್ ಹಾಗೂ ರೀ ಕಂಡಕ್ಟರಿಂಗ್ ರೂ 14.71ಲಕ್ಷ ರೂ ಕಾಮಗಾರಿಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ನಂತರ ಮಾತನಾಡಿದ ಶಾಸಕರು, ಪ್ರಮುಖವಾಗಿ ಕೃಷಿ ಅವಲಂಬಿತ ಕೊಡಗಿನ ಜನತೆಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆಗಾಗಿ ಕ್ಷೇತ್ರದಾದ್ಯಂತ ಇಂತಹ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ರೈತರ ಕಡೆಯಿಂದ ಮೆಚ್ಚುಗೆಯ ಸಂದೇಶಗಳು ಬರುತ್ತಿವೆ. ನಾಡಿನ ರೈತರ ಹಾಗೂ ವಿದ್ಯುತ್ ಬಳಕೆದಾರರ ಹಿತ ದೃಷ್ಟಿಯಿಂದ ಈ ಯೋಜನೆ ತಂದಿದ್ದು ಇದರ ಸದುಪಯೋಗವನ್ನು ನಾಡಿನ ಜನತೆ ಪಡೆದುಕೊಳ್ಳಬೇಕೆಂದು ಶಾಸಕರು ಕರೆ ನೀಡಿದರು. ಈ ಸಂದರ್ಭದಲ್ಲಿ ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷರು ಮೀದೇರಿರ ನವೀನ್, ವಲಯ ಅಧ್ಯಕ್ಷರು ಚಂಗುಲಂಡ ಸೂರಜ್, ಹಿರಿಯರು ಮುಕಳೆರ ಕುಶಾಲಪ್ಪ, ಪೆಮ್ಮಂಡ ಪೊನ್ನಪ್ಪ, ಸುಧೀರ್, ಅಜ್ಜಿಕುಟ್ಟಿರ ಗಿರೀಶ್, ಪಮು, ಸುರೇಂದ್ರ, ಯೋಗೇಶ್,…
ಮಡಿಕೇರಿ NEWS DESK ಡಿ.3 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ 31ನೇ ವರ್ಷದ ಸಾರ್ವತ್ರಿಕ ‘ಪುತ್ತರಿ ನಮ್ಮೆ’ಯನ್ನು ಆದಿಮಸಂಜಾತ ಆನಿಮಿಸ್ಟಿಕ್ ನಂಬಿಗೆಯ ಏಕ ಜನಾಂಗೀಯ ಕೊಡವರ ಸಕಲ ಜನಪದ ಪರಂಪರೆಯAತೆ ರೋಹಿಣಿ ನಕ್ಷತ್ರದ ಆರಂಭದಲ್ಲಿ ಡಿ.4 ರಂದು ಬೆಳಿಗ್ಗೆ 10 ಗಂಟೆಗೆ ಬಾಳೆಲೆ ಹೋಬಳಿಯ “ಪತ್ತ್ ಕಟ್” ನಾಡ್ ನ ಬಿಳೂರು ಗ್ರಾಮದಲ್ಲಿ ಆಚರಿಸಲಾಗುವುದು ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಬಿಳೂರು ಗ್ರಾಮದ ಕಾಂಡೇರ ಸುರೇಶ್ ಅವರ ಭತ್ತದ ಗದ್ದೆಯಲ್ಲಿ ಗುರುವಾರ ಬೆಳಿಗ್ಗೆ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಕೊಡವ ನೇತೃತ್ವದಲ್ಲಿ ಕದಿರು ತೆಗೆಯುವ ಮೂಲಕ ‘ಪುತ್ತರಿ ನಮ್ಮೆ’ಯನ್ನು ಸಂಭ್ರಮದಿಂದ ಆಚರಿಸಲಾಗುವುದು ಎಂದು ಹೇಳಿದ್ದಾರೆ. ಕೊಡವರ ರಾಜ್ಯಾಂಗದತ್ತ ಹಕ್ಕುಗಳ ಮಂಡನೆಗೆ ಪೂರಕವಾಗಿ ಮತ್ತು ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಹಾಗೂ ಹಸ್ತಾಂತರಿಸುವ ಉದ್ದೇಶದಿಂದ ಕಳೆದ ಮೂರು ದಶಕಗಳಿಂದ ಕೊಡವರ ಎಲ್ಲಾ ಹಬ್ಬಗಳನ್ನು ಸಿಎನ್‌ಸಿ ಸಂಘಟನೆ ಸಾರ್ವತ್ರಿಕವಾಗಿ ಆಚರಿಸಿಕೊಂಡು ಬರುತ್ತಿದೆ. ಅತೀ…
ನಾಪೋಕ್ಲು ಡಿ.3 NEWS DESK : ಕೊಡಗು ಸಂಪದ್ಭರಿತವಾದ ಕೃಷಿ, ಪ್ರವಾಸೋದ್ಯಮ ಹೊಂದಿದ್ದು, ಇದರಲ್ಲಿ ವಿಪುಲ ಅವಕಾಶ ಇರುವುದರಿಂದ ಮಕ್ಕಳು ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಜಿಲ್ಲೆ ಬಿಟ್ಟು ಹೋಗುವ ಅವಶ್ಯಕತೆ ಇಲ್ಲ ಎಂದು ಪೊನ್ನಂಪೇಟೆ ಅರಣ್ಯ ವಿದ್ಯಾಲಯದ ನಿವೃತ್ತ ಡೀನ್ ಚೆಪ್ಪುಡಿರ ಜಿ. ಕುಶಾಲಪ್ಪ ಅವರು ಹೇಳಿದರು. ಮೂರ್ನಾಡಿನ ಮಾರುತಿ ವಿದ್ಯಾ ಸಂಸ್ಥೆಯ 42ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯಲ್ಲಿ ತಂದೆಯ ಪಾತ್ರ ಮಹತ್ವದ್ದಾಗಿದೆ. ಮಕ್ಕಳು ತಾಯಿಯ ತ್ಯಾಗವನ್ನು ಅರಿತು ಮುನ್ನಡೆಯಬೇಕು ಎಂದ ಅವರು ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಅದನ್ನು ಈಡೇರಿಸುವ ದಿಶೆಯಲ್ಲಿ ನಿರಂತರ ಕನಸು ಕಾಣುವಂತಾಗಬೇಕೆಂದು ಹೇಳಿದರು. ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಪಿಯುಸಿ ಹಂತದಲ್ಲಿ ತಮ್ಮ ಮುಂದಿನ ಗುರಿಗೆ ಅನುಗುಣವಾಗಿ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಪ್ರಾಮಾಣಿಕ ಪ್ರಯತ್ನವೂ ಇರಬೇಕು. ಎಲ್ಲಾ ಕ್ಷೇತ್ರದಲ್ಲೂ ವಿಪುಲ ಅವಕಾಶವಿರುವುದರಿಂದ ಯಾರು ಕೂಡ ಇಂದು ನಿರುದ್ಯೋಗಿ ಎನ್ನುವಂತಿಲ್ಲ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ…
ಮಣಿಪಾಲ ಡಿ.3 NEWS DESK : ಮಣಿಪಾಲದ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಘಟಕವಾಗಿರುವ ಟಿ.ಎ.ಪೈ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್‌ನ 10ನೇ ತರಗತಿ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ತಮ್ಮ ಚಾತುರ್ಯ, ಸಮಯ ಪ್ರಜ್ಞೆ ಮತ್ತು ಧೈರ್ಯಶಾಲಿ ಮಹತ್ಕಾರ್ಯಕ್ಕಾಗಿ ರಾಜ್ಯ ಮಟ್ಟದ ಹೊಯ್ಸಳ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪ್ರದಾನ ಮಾಡಿತು. ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಐಸಿಡಿಎಸ್ ಗೋಲ್ಡನ್ ಜ್ಯೂಬಿಲಿ ಸಮಾರಂಭದಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು. ಕರ್ನಾಟಕ ರಾಜ್ಯ ಸರ್ಕಾರವು ಮಕ್ಕಳ ಧೈರ್ಯ, ಸಮಯಪ್ರಜ್ಞೆ ಮತ್ತು ತ್ವರಿತ ನಿರ್ಧಾರಶಕ್ತಿಗೆ ನೀಡುವ ಅತ್ಯುನ್ನತ ಗೌರವಗಳಲ್ಲಿ ಹೊಯ್ಸಳ ಶೌರ್ಯ ಪ್ರಶಸ್ತಿಯು ಪ್ರಮುಖವಾಗಿದೆ. ಈ ಪ್ರಶಸ್ತಿ ದೊರೆತ ದೀಪೇಶ್ ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಮತ್ತು ಟಿ.…






