ಮಡಿಕೇರಿ ಅ.25 NEWS DESK : ಸಾಮಾಜಿಕ ಜಾಲತಾಣಗಳೇ ಹೆಚ್ಚು ಪ್ರಭಾವ ಬೀರುತ್ತಿರುವ ಇಂದಿನ ದಿನಗಳಲ್ಲಿ ಪುಸ್ತಕಗಳನ್ನು ಓದುವವರ ಸಂಖ್ಯೆ ಬಹಳ ವಿರಳ ಎನ್ನುವ ಮಾತಿದೆ. ಆದರೆ ಪ್ರಪಂಚಕ್ಕೆ ಬರವಣಿಗೆ ನೀಡುವ ಅಮೂಲ್ಯವಾದ ಸಾರವನ್ನು ಎಐ ತಂತ್ರಜ್ಞಾನ ನೀಡಲು ಸಾಧ್ಯವಿಲ್ಲವೆಂದು ಸಾಹಿತಿ ಹಾಗೂ ಸಮಾಜ ಸೇವಕಿ ಮಾಳೇಟಿರ ಸೀತಮ್ಮ ವಿವೇಕ್ ಅವರು ಅಭಿಪ್ರಾಯಪಟ್ಟಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಲೇಖಕಿ ಕೊಟ್ಟಂಗಡ ಕವಿತಾ ವಾಸುದೇವ ಅವರು ರಚಿಸಿರುವ ಕೊಡವ ಮಕ್ಕಡ ಕೂಟದ 119ನೇ ಪುಸ್ತಕ “ಬಯಂದ ಬಾಳ್” ಕೊಡವ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಯಾವುದೇ ನಿರೀಕ್ಷೆಗಳಿಲ್ಲದೆ ಸಾಹಿತ್ಯವನ್ನು ಸಮಾಜಕ್ಕೆ ಧಾರೆ ಎರೆಯಬೇಕು, ಆಗ ಸಮಾಜ ಅದನ್ನು ಉತ್ತಮ ರೀತಿಯಲ್ಲಿ ಸ್ವೀಕರಿಸುತ್ತದೆ. ಸಮಾಜವನ್ನು ಬದಲಾಯಿಸುವ ಶಕ್ತಿ ಸಾಹಿತ್ಯಕ್ಕಿದೆ, ಪ್ರತಿಯೊಬ್ಬ ವ್ಯಕ್ತಿಯಲ್ಲೂ ವೈಯಕ್ತಿಕ ಭಾವಗಳಿರುತ್ತವೆ. ಬರಹಗಾರರು ಅದಕ್ಕೆ ಅಕ್ಷರದ ರೂಪ ನೀಡಿ ಪುಸ್ತಕವನ್ನಾಗಿ ಹೊರ ತರುತ್ತಾರೆ. ಮೌಲ್ಯಯುತವಾದ ಪುಸ್ತಕಗಳನ್ನು ಓದುವ ಸಾಹಿತ್ಯಾಸಕ್ತರು ಸಮಾಜದಲ್ಲಿ ಇನ್ನೂ ಇದ್ದಾರೆ. ಆದ್ದರಿಂದ ಬರಹಗಾರರು…
ಲೇಖಕ: admin
ಮಡಿಕೇರಿ ಅ.25 NEWS DESK : ಕೊಡಗು ಗೌಡ ಸಮಾಜಗಳ ಒಕ್ಕೂಟ ಮತ್ತು ಅಂಗ ಸಂಸ್ಥೆಗಳ ಸಹಯೋಗದಲ್ಲಿ ಅ.31 ರಂದು ನಡೆಯುವ ಹುತಾತ್ಮ ಸುಬೇಧಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಸಂಸ್ಮರಣಾ ದಿನದ ಪ್ರಯುಕ್ತ ಅ.27ರಂದು ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ತಿಳಿಸಿದ್ದಾರೆ. ಸೋಮವಾರ ಬೆಳಿಗ್ಗೆ 10 ಗಂಟೆಗೆ ನಗರದ ಜೂನಿಯರ್ ಕಾಲೇಜು ಆವರಣದಲ್ಲಿರುವ ಸರಕಾರಿ ಮಹಿಳಾ ಕಾಲೇಜ್ ನಲ್ಲಿ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಸಂಪರ್ಕಿಸಬೇಕಾದ ಮೊ.ಸಂ ಪುದಿಯನೆರವನ ರೇವತಿ ರಮೇಶ್ *9663254829*
ಮಡಿಕೇರಿ ಅ.25 NEWS DESK : ಕರ್ನಾಟಕ ರಾಜ್ಯ ಸರಕಾರದ ಎಸ್.ಎಫ್.ಸಿ ಅನುದಾನದಲ್ಲಿ ವಿರಾಜಪೇಟೆ ಪುರಸಭಾ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಆಯ್ದ ವರ್ಡ್ ಗಳಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರ ವಿಶೇಷ ಮುತುವರ್ಜಿಯಿಂದ ಮಂಜೂರಾದ ರೂ.20 ಕೋಟಿಗಳ ವಿಶೇಷ ಅನುದಾನಗಳ ಕಾಮಗಾರಿಗಳಿಗೆ ಚಾಲನೆ ದೊರೆಯಿತು. ವಿರಾಜಪೇಟೆ ಪುರಸಭಾ ವ್ಯಾಪ್ತಿಯ ಕಲ್ಲು ಬಾಣೆ, ತಿಮ್ಮಯ್ಯ ಬಾಡವಣೆ, ಶಿವಕೇರಿ, ಬೋಯಿಕೇರಿ, ಗಾಂಧಿ ನಗರ, ಮಹಿಳಾ ಸಮಾಜ, ಸುಣ್ಣದ ಬೀದಿ, ನಿಸರ್ಗ ಬಾಡವಣೆ ಭಾಗದಲ್ಲಿ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ತಿತೀರ ಧರ್ಮಜ ಉತ್ತಪ್ಪ, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಜಾನ್ಸನ್, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪಟ್ಟಡ ರಂಜಿ ಪೂಣಚ್ಚ, ನಗರ ಕಾಂಗ್ರೆಸ್ ಅಧ್ಯಕ್ಷರು ಮದಂಡ ತಿಮ್ಮಯ್ಯ, ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಉಪಾಧ್ಯಕ್ಷೆ ಫಸಿಯಾ ತಬ್ಸುಂ, ಪುರಸಭೆ ಮುಖ್ಯಅಧಿಕಾರಿ ನಾಚಪ್ಪ, ಸ್ಥಾಯಿ ಸಮಿತಿಯ ಅಧ್ಯಕ್ಷರು…
ಮಡಿಕೇರಿ NEWS DESK ಅ.24 : ಕೊಡಗು ಜಿಲ್ಲಾ ಏಲಕ್ಕಿ ಮಾರಾಟ ಸಹಕಾರ ಸಂಘದ 2025-30 ನೇ ಸಾಲಿನ ಆಡಳಿತ ಮಂಡಳಿಗೆ ಇದೇ ಅ.26 ರಂದು ಚುನಾವಣೆ ನಡೆಯಲಿದೆ. ಹಾಲಿ ಅಧಿಕಾರದಲ್ಲಿರುವ ಅಧ್ಯಕ್ಷ ಸೂದನ ಎಸ್.ಈರಪ್ಪ ಅವರ ನೇತೃತ್ವದ ರೈತ ಮಿತ್ರಕೂಟ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದೆ. 2020ರಲ್ಲಿ ರೈತಮಿತ್ರಕೂಟ ತಂಡವನ್ನು ರಚಿಸಿಕೊಂಡು ಭರ್ಜರಿ ಜಯ ಸಾಧಿಸಿದ ಸೂದನ ಎಸ್.ಈರಪ್ಪ ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಸಂಘದಲ್ಲಿ ಕಳೆದ 35-40 ವರ್ಷಗಳಿಂದ ಏಲಕ್ಕಿ ವ್ಯವಹಾರ ನಡೆಯುತ್ತಿರಲಿಲ್ಲ. ಇದನ್ನು ಮನಗಂಡು ಕಳೆದ ನಾಲ್ಕು ವರ್ಷಗಳಿಂದ “ಉತ್ಪತಿ” ಎಂಬ ಹೆಸರಿನ ಸಾಂಬಾರ ಮಳಿಗೆಯೊಂದನ್ನು ಸ್ಥಾಪಿಸಿ ವ್ಯಾಪಾರಕ್ಕೆ ಒತ್ತು ನೀಡಲಾಯಿತು. ಕೊಡಗಿನ ಏಲಕ್ಕಿಯನ್ನು ಸಂಘದ ಮೂಲಕ ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆಯನ್ನು ಆರಂಭಿಸಲಾಯಿತು. ಗುಣಮಟ್ಟದ ಏಲಕ್ಕಿ, ಕರಿಮೆಣಸು, ವೈನ್, ಜೇನುತಪ್ಪ ಮುಂತಾದ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಕಳೆದ ಹಲವು ವರ್ಷಗಳಿಂದ ಸೋಮವಾರಪೇಟೆ ಶಾಖೆ ನಷ್ಟದಲ್ಲಿದ್ದು, ಪರ್ಯಾಯ ಮಾರ್ಗದ ಮೂಲಕ ರೈತಪರ ಯೋಜನೆಗಳನ್ನು ರೂಪಿಸಿ ಶಾಖೆಯನ್ನು ನಷ್ಟದಿಂದ…
ವಿರಾಜಪೇಟೆ ಅ.24 NEWS DESK : ಶ್ರೀ ರಾಮ ಭಕ್ತರ ಬಳಗ ವತಿಯಿಂದ ಎರಡನೇ ವರ್ಷದ ರಕ್ತದಾನ ಶಿಬಿರ ನಡೆಯಿತು. ವಿರಾಜಪೇಟೆ ಪುರಸಭೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ರಾಮ ಭಕ್ತರ ಬಳಗ ಅಧ್ಯಕ್ಷರಾದ ಬಿ.ಎಂ.ಕುಮಾರ್ ಅವರು ಮಾತನಾಡಿ, ರಕ್ತದಾನ ಶ್ರೇಷ್ಠ ದಾನ. ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲ. ಮಾನವರಿಗೆ ಮಾನವರೆ ರಕ್ತದಾನ ಮಾಡಬೇಕು, ಎರಡನೇ ಬಾರಿಗೆ ನಮ್ಮ ಮಹಿಳಾ ಸದಸ್ಯರಾದ ಸಂದ್ಯ ರಂಜನ್, ಅದೀತ ಮುತ್ತಮ್ಮ, ಹಾಗೂ ಹತ್ತೊಂಬತ್ತನೆ ಬಾರಿ ವಿರಾಜಪೇಟೆ ಮನೋಜ್, ನಲವತ್ತಾರು ಬಾರಿ ರಕ್ತದಾನ ಮಾಡಿದ ಸ್ನೇಕ್ ಸತೀಶ್, ಸೇರಿದಂತೆ ಹಲವಾರು ಮಂದಿ ಇಂದು ರಕ್ತದಾನ ಮಾಡಿ ಮಾದರಿಯಾಗಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ರಕ್ತದ ಕೊರತೆ ಇದೆ. ಶಸ್ತ್ರಚಿಕಿತ್ಸೆ ಸಮಯದಲ್ಲಿ ನಾವು ನೀಡುವ ರಕ್ತದಲ್ಲಿ ಅನೇಕರ ಪ್ರಾಣವನ್ನು ಉಳಿಸಬಹುದು ಎಂದು ತಿಳಿಸಿದರು. ರಕ್ತದಾನ ಶಿಬಿರದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಬಳಗದ ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಸದಸ್ಯರಾದ ವಿವೇಕ್ ರೈ, ದಿನೇಶ್ ಸೇರಿದಂತೆ…
ಬೆಂಗಳೂರು ಅ.24 NEWS DESK : 2025ರ ಅಕ್ಟೋಬರ್ 23 ಮತ್ತು 24 ರಂದು ತರಬೇತಿ ಕಮಾಂಡ್ ನ ಬೆಂಗಳೂರಿನ ಪ್ರಧಾನ ಕಚೇರಿ (ಎಚ್ ಕ್ಯೂ -ಟಿಸಿ) ಯಲ್ಲಿ ನಡೆದ ತರಬೇತಿ ಕಮಾಂಡ್ ಕಮಾಂಡರ್‌ಗಳ ಸಮ್ಮೇಳನ 2025 ರ ಅಧ್ಯಕ್ಷತೆಯನ್ನು ವಾಯುಪಡೆಯ ಮುಖ್ಯಸ್ಥ (ಸಿಎಎಸ್) ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ವಹಿಸಿದ್ದರು. ಈ ಸಮ್ಮೇಳನದಲ್ಲಿ ತರಬೇತಿ ಕಮಾಂಡ್‌ನ ಅಡಿಯಲ್ಲಿರುವ ಎಲ್ಲಾ ತರಬೇತಿ ಸಂಸ್ಥೆಗಳ ಕಮಾಂಡರ್‌ಗಳು ಭಾಗವಹಿಸಿದ್ದರು. ಈ ವಾರ್ಷಿಕ ಸಮ್ಮೇಳನದಲ್ಲಿ ತರಬೇತಿ ತತ್ವಶಾಸ್ತ್ರದ ಪರಿವರ್ತನೆ, ಮೂಲಸೌಕರ್ಯದ ಆಧುನೀಕರಣ ಮತ್ತು ಭಾರತೀಯ ವಾಯುಪಡೆಯ ವಿಕಸನಗೊಳ್ಳುತ್ತಿರುವ ಕಾರ್ಯಾಚರಣೆಯ ಅಗತ್ಯಗಳಿಗೆ ಅನುಗುಣವಾಗಿ ಬೋಧನಾ ಪದ್ಧತಿಗಳ ಅಳವಡಿಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ವ್ಯಾಪಕ ಕುರಿತು ಚರ್ಚೆಗಳು ನಡೆದವು. ಸಮ್ಮೇಳನದಲ್ಲಿ ಸಿಎಎಸ್, ಎಲ್ಲಾ ತರಬೇತಿ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು ಮತ್ತು ಅವುಗಳ ಗಮನಾರ್ಹ ಸಾಧನೆಗಳನ್ನು ಶ್ಲಾಘಿಸಿದರು ಹಾಗೂ ಸುಧಾರಣೆಗಳು ಅಗತ್ಯವಿರುವ ಪ್ರಮುಖ ಕ್ಷೇತ್ರಗಳನ್ನು ಗುರುತಿಸಿ ಅಗತ್ಯ ಸಲಹೆಗಳನ್ನು ನೀಡಿದರು. ತಮ್ಮ ಪ್ರಧಾನ ಭಾಷಣದಲ್ಲಿ ಸಿಎಎಸ್, “ತರಬೇತಿ…
ಪುತ್ತೂರು NEWS DESK ಅ.24 : ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಗ್ರಾಹಕರು ತಮ್ಮ ಆಭರಣ ಯೋಜನೆಗಳನ್ನು ನಿರ್ವಹಿಸಲು, ಆರ್ಡರ್ ಸ್ಥಿತಿಯನ್ನು ವೀಕ್ಷಿಸಲು.ಲೋಹದ ದರಗಳನ್ನು ಪರಿಶೀಲಿಸಲು ಮತ್ತು ಬ್ಯಾಲೆನ್ಸ್ ವಿವರಗಳ ಮಾಹಿತಿಗಾಗಿ ಗ್ರಾಹಕರ ಸಮ್ಮುಖದಲ್ಲೇ “ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್” ಶೀರ್ಷಿಕೆಯ ಹೊಸ ಅಪ್ಲಿಕೇಶನ್‌ನನ್ನು ಬಿಡುಗಡೆ ಮಾಡಲಾಯಿತು. ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹಾಗೂ ಆ್ಯಪ್ ಸ್ಟೋರ್‌ನಲ್ಲಿ ಲಭ್ಯವಿದ್ದು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಈ ಆ್ಯಪ್‌ನಲ್ಲಿ ಗ್ರಾಹಕರಿಗೆ ದಿನನಿತ್ಯದ ಚಿನ್ನದ ದರ ಲಭ್ಯವಿದ್ದು, ಗ್ರಾಹಕರ ವಿವರ ಡಿಜಿಟಲ್ ಪಾಸ್‌ಬುಕ್ ವಿವರ,ಆರ್ಡರ್ ವಿವರಗಳು, ಅಲ್ಲದೆ ಗ್ರಾಹಕರು ಪಾವತಿಸಿರುವ ಮೊತ್ತದ ವಿವರಗಳನ್ನು ಸಹ ಪರಿಶೀಲಿಸಬಹುದು.ಯಾವುದೇ ಪಾವತಿ ಶುಲ್ಕವನ್ನು ಬರಿಸದೇ ಗ್ರಾಹಕರು ಸ್ಟೀಮ್ ಪೇಮೆಂಟ್ ಮಾಡಬಹುದು.ಈ ಆ್ಯಪ್ ಮುಖಾಂತರ ಮನೆಯಲ್ಲೇ ಕುಳಿತುಕೊಂಡು ಪೇಮೆಂಟ್‌ಮಾಡಿ ರಶೀದಿ ಪಡೆಯಬಹುದು..ಈ ಅಪ್ಲಿಕೇಶನ್ ಸಮಯದ ಅಭಾವವಿರುವವರಿಗೆ ಇದು ತುಂಬಾ ಅನು ಕೂಲಕರವಾಗಿದೆ.ಈ ಆ್ಯಪ್ ಮೂಲಕ ಸಮಾಜಿಕ ಜಾಲತಾಣಗಳನ್ನು ಸಂಪರ್ಕಿಸಿ ನಮ್ಮ ಆಭರಣಗಳ ಬಗೆಗಿನ ಹೊಸ ಅಪ್‌ಡೇಟ್ಸ್‌ಗಳ ಮಾಹಿತಿಗಳನ್ನು ತಿಳಿದುಕೊಳ್ಳಬಹುದು. 24 ಕ್ಯಾರೆಟ್, 22ಕ್ಯಾರೆಟ್ ಚಿನ್ನದ…
ಸೋಮವಾರಪೇಟೆ ಅ.24 NEWS DESK : ರಾಷ್ಟ್ರಕವಿ ಕುವೆಂಪು ಕನ್ನಡ ಮಣ್ಣಿನ ಅಮೂಲ್ಯ ರತ್ನ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಮಂತರ್ ಗೌಡ ಬಣ್ಣಿಸಿದ್ದಾರೆ. ಕುವೆಂಪು ಪ್ರತಿಮೆ ನಿರ್ಮಾಣ ಸಮಿತಿ, ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತಾಶ್ರಯದಲ್ಲಿ ಪಟ್ಟಣದ ಸಾಹಿತ್ಯ ಪರಿಷತ್ತು ಕಚೇರಿ ಬಳಿ ರಾಷ್ಟ್ರಕವಿ ಕುವೆಂಪು ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು. ಕುವೆಂಪು ಈ ನಾಡಿನ ಘನತೆಯನ್ನು ಹೆಚ್ಚಿಸಿದ ಮಹಾನ್ ವ್ಯಕ್ತಿ, ಜ್ಞಾನಪೀಠ ಪ್ರಶಸ್ತಿ ತಂದುಕೊಡುವ ಮೂಲಕ ಕನ್ನಡದ ಹಿರಿಮೆಯನ್ನು ಹೆಚ್ಚಿಸಿದವರು. ಇಂತಹ ಮಹಾನ್ ವ್ಯಕ್ತಿಯ ಪ್ರತಿಮೆಯನ್ನು ಪ್ರತಿಷ್ಠಾಪಿಸಿರುವುದು ಶ್ಲಾಘನೀಯವೆಂದರು. ಪರಿಷತ್ತಿನ ಮೇಲಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಶಾಸಕರ ಅನುದಾನದ ನೀಡುವುದಾಗಿ ತಿಳಿಸಿದರು. ಮಾಜಿ ಕ್ರೀಡಾ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ಕನ್ನಡ ನಾಡಿನಲ್ಲಿ ಹುಟ್ಟಿದ ನಾವೆಲ್ಲರೂ ಪುಣ್ಯವಂತರು. ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನಂತರ ಬೇರೆ ಭಾಷೆಗಳಿಗೆ ಎಂದರು. ಕುವೆಂಪು ಅವರು ರಾಷ್ಟ್ರಕವಿಯಾಗಿ ಕನ್ನಡವನ್ನ ದೇಶ ವಿದೇಶಗಳಲ್ಲಿ ಪಸರಿಸಿದ್ದಾರೆ ಎಂದರು. ಮಾಜಿ ಸಚಿವ ಬಿ.ಎ.ಜೀವಿಜಯ, ತಹಶೀಲ್ದಾರ್ ಕೃಷ್ಣ ಮೂರ್ತಿ, ಜಿಲ್ಲಾ ಕನ್ನಡ…
ಮಡಿಕೇರಿ ಅ.24 NEWS DESK : ಭಾಗಮಂಡಲದ ಜಾನ್ ಡಾನ್ಸ್ ಗ್ಯಾಲರಿ ನೃತ್ಯ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ನವೆಂಬರ್‌ನಲ್ಲಿ ಪಾಂಡಿಚೆರಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರದರ್ಶನವನ್ನು ನೀಡಲಿದ್ದಾರೆ. ಸಂಸ್ಥೆಯ ಗಾನವಿ, ಧೃತಿ, ತ್ರೈಸಿ ಹೆಚ್ಆರ್, ಅನುಪಮಾ, ನೀಕ್ಷಾ, ಸಾನ್ವಿ ಜಿ, ದರ್ಶಿನಿ, ಯುಕ್ತ, ಹರ್ಷಿಕ, ಪವಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಭಾಗಮಂಡಲದ ನೃತ್ಯ ತರಬೇತಿ ಸಂಸ್ಥೆ ಹಾಗೂ ಕರಾಟೆ ತರಬೇತಿಯ ನಿರ್ದೇಶಕ ನಾಗರಾಜ್, ನೃತ್ಯ ತರಬೇತಿಯ ಮುಖ್ಯ ತರಬೇತಿದಾರಾಗಿ ಅಂತರಾಷ್ಟ್ರೀಯ ನೃತ್ಯಪಟು ಪೃಥ್ವಿ ನಾಯಕ್ ಹಾಗೂ ಸಹ ತರಬೇತಿದಾರರಾಗಿ ಬೃಂದಾಕವನ್, ಕರಾಟೆ ತರಬೇತುದಾರರಾಗಿ ರಾಷ್ಟ್ರೀಯ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ರೆಫ್ರಿ ಇಮ್ಯಾನ್ವಲ್ ಹಾಗೂ ರಾಯ್ ಜೋಸೆಫ್ ತರಬೇತಿ ನೀಡಿದರು. ವಿದ್ಯಾರ್ಥಿಗಳ ಪ್ರತಿಭೆಯನ್ನು ರಾಷ್ಟ್ರ ಮಟ್ಟದಲ್ಲಿ ಪರಿಚಯಿಸಲು ನಮ್ಮ ಸಂಸ್ಥೆ ಕಾರ್ಯೋನ್ಮುಖವಾಗಿದ್ದು, ಆಸಕ್ತರು ಕರಾಟೆ ಹಾಗೂ ನೃತ್ಯ ತರಬೇತಿಗಾಗಿ Contact No 9207566495, PLACE: VSSN…
ಮಡಿಕೇರಿ ಅ.24 NEWS DESK : ಮಡಿಕೇರಿಯ ಹೋಂಡಾ ಶೋರೂಂನ ನೂತನ ಬೈಕ್‌ಗಳನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಉದ್ಘಾಟಿಸಿ, ಶುಭಹಾರೈಸಿದರು. ಈ ಸಂದರ್ಭ ಮಡಿಕೇರಿ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಬಿ.ವೈ, ನಗರ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ, ಮೂಡ ಸದಸ್ಯರ ಚಂದ್ರಶೇಖರ್, ಮಡಿಕೇರಿ ನಗರಸಭೆ ನಾಮ ನಿರ್ದೇಶೀತ ಸದಸ್ಯ ಮುದ್ದುರಾಜ್, ಜಗದೀಶ್ ಜಿ.ಸಿ. ಹಾಜರಿದ್ದರು.






