ಮಡಿಕೇರಿ ನ.24 NEWS DESK : ಅಂಗನವಾಡಿಯ ನಿವೃತ್ತ ಕಾರ್ಯಕರ್ತೆ ಹಾಗೂ ಮಡಿಕೇರಿಯ ಸಮಾಜ ಸೇವಕಿ ಎಂ.ಸಿ.ಚಿನ್ನಮ್ಮ ಅವರ ಸಮಾಜಮುಖಿ ಸೇವೆಯನ್ನು ಗುರುತಿಸಿ ಬೆಂಗಳೂರಿನ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ರಾಜ್ಯ ಮಟ್ಟದ ನಾಗರೀಕ ಸೇವಾ ಪ್ರಶಸ್ತಿ ‘ಕರುನಾಡ ರತ್ನ’ವನ್ನು ನೀಡಿ ಗೌರವಿಸಿದೆ. ಬೆಂಗಳೂರಿನ ಕಲಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹಾಗೂ ಕರ್ನಾಟಕ ಸಾಂಸ್ಕøತಿಕ ಅಕಾಡೆಮಿಯ ಅಧ್ಯಕ್ಷ ದಯಾನಂದ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಅಂಗನವಾಡಿಯ ಸಾಮಾನ್ಯ ಕಾರ್ಯಕರ್ತೆಯಾಗಿದ್ದ ಎಂ.ಸಿ.ಚಿನ್ನಮ್ಮ ಅವರು ಪುಟಾಣಿಗಳ ಮೇಲಿನ ಪ್ರೀತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಹಿಂಭಾಗದಲ್ಲಿ ಅಂಗನವಾಡಿ ಕೇಂದ್ರಕ್ಕೆ ಸ್ವಪ್ರಯತ್ನದಿಂದ ಜಾಗವನ್ನು ಹುಡುಕಿಕೊಟ್ಟರು. ಸರಕಾರದಿಂದ ಜಾಗ ಮಂಜೂರು ಮಾಡಿಸಿ ಅದೇ ಸ್ಥಳದಲ್ಲಿ ಶಾಶ್ವತವಾದ ಅಂಗನವಾಡಿ ಕೇಂದ್ರ ಸ್ಥಾಪನೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವಿವಿಧ ಸಂಘ ಸಂಸ್ಥೆಗಳ ಸಹಕಾರ ಪಡೆದು ಅಂಗನವಾಡಿ ಕೇಂದ್ರಕ್ಕೆ ಮೂಲಭೂತ ಸೌಲಭ್ಯವನ್ನು ದೊರಕಿಸಿಕಟ್ಟಿದ್ದಾರೆ. ಸುಮಾರು 25 ವರ್ಷಗಳಿಂದ ಮಕ್ಕಳಿಗೆ ಆಟಪಾಠ, ಮನರಂಜನೆ. ಶಾಲಾಪೂರ್ವ ಪರಿಸರ ಜ್ಞಾನ, ಆರೋಗ್ಯ…
ಲೇಖಕ: admin
ವಿರಾಜಪೇಟೆ ನ.24 NEWS DESK : ಇಂಟನ್ರ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹಾಸ್ಪಿಟಾಲಿಟಿ ಮ್ಯಾನೇಜ್ಮೆಂಟ್ ಐಐಹೆಚ್‍ಎಂ. ಬೆಂಗಳೂರು ವತಿಯಿಂದ 2025ರ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಾಯಡತ್ ಮುಹಮ್ಮದ್ ಶಾಫಿ ಸ್ವೀಕರಿಸಿದ್ದಾರೆ. ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ ಸಮೀಪದ ಹೊಸಕೋಟೆಯ ಖಾಸಗಿ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಹಮ್ಮದ್ ಶಾಫಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಐ.ಐ.ಹೆಚ್.ಎಂ ಸಂಸ್ಥೆಯ ದಕ್ಷಿಣ ಭಾರತದ ನಿರ್ದೇಶಕರಾದ ಚೌದರಿ ಮತ್ತು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ನಿಕಟಪೂರ್ವ ಅಧ್ಯಕ್ಷರು ಮತ್ತು ಶಕ್ತಿ ದಿನಪತ್ರಿಕೆಯ ಸಂಪಾದಕರಾದ ಚಿದ್ವಿಲಾಸ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಇವರು ಮೂಲತಃ ಕುಂಜಿಲ-ಕಕ್ಕಬೆ ಗ್ರಾಮದ ನಿವಾಸಿಯಾಗಿದ್ದು, ಪ್ರಸ್ತುತ ವಿರಾಜಪೇಟೆಯ ಮೌಂಟೇನ್ ವ್ಯೂ ಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕುಶಾಲನಗರ ನ.24 NEWS DESK : ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ದಿನಾಚರಣೆಯ ಪ್ರಯುಕ್ತ ಕೊಡಗು ಸೈನಿಕ ಶಾಲೆಯ ಎನ್‌ಸಿಸಿ ಘಟಕವು ಕುಶಾಲನಗರದ ಸಮೀಪವಿರುವ ಹಾರಂಗಿ ಜಲಾಶಯದ ಆವರಣದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿತು. ಪರಿಸರ ಸಂರಕ್ಷಣೆ ಮತ್ತು ಜಲಾಶಯದ ಅಂದವನ್ನು ಹೆಚ್ಚಿಸುವ ಗುರಿಯೊಂದಿಗೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಮಾದರಿಯಾದರು. ಅಭಿಯಾನದಲ್ಲಿ ಶಾಲೆಯ ಒಟ್ಟು 171 ಎನ್‌ಸಿಸಿ ವಿದ್ಯಾರ್ಥಿಗಳು ಮತ್ತು ಐವರು ಎನ್‌ಸಿಸಿ ಅಧಿಕಾರಿಗಳು ಭಾಗವಹಿಸಿದ್ದರು. ಬೆಳಗಿನಿಂದಲೇ ಜಲಾಶಯದ ಆವರಣದಲ್ಲಿ ವಿದ್ಯಾರ್ಥಿಗಳು ಪ್ರವಾಸಿಗರ ಭೇಟಿಯಿಂದ ಸಂಗ್ರಹವಾಗಿದ್ದ ಎಲ್ಲ ರೀತಿಯ ತ್ಯಾಜ್ಯ ವಸ್ತುಗಳನ್ನು ಸ್ವಚ್ಛಗೊಳಿಸಿದರು. ಈ ಸಂದರ್ಭ ಹಾರಂಗಿ ಜಲಾಶಯ ಪ್ರದೇಶದಲ್ಲಿ ದೀರ್ಘಕಾಲದಿಂದ ಸಂಗ್ರಹವಾಗಿದ್ದ ಪ್ಲಾಸ್ಟಿಕ್ ಬಾಟಲಿಗಳು, ಪಾಲಿಥಿನ್ ಚೀಲಗಳು, ಕಾಗದ ಮತ್ತು ಇತರೆ ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸಲಾಯಿತು. ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳು ವೈಜ್ಞಾನಿಕ ಕ್ರಮದಲ್ಲಿ ತ್ಯಾಜ್ಯವನ್ನು ಬೇರ್ಪಡಿಸಿ, ಅದನ್ನು ಸೂಕ್ತ ವಿಲೇವಾರಿಗಾಗಿ ವ್ಯವಸ್ಥಿತವಾಗಿ ಸಂಗ್ರಹಿಸಿದರು. ಅಭಿಯಾನದಲ್ಲಿ ಶಾಲೆಯ ಎನ್ ಸಿ ಸಿ ಘಟಕದ ಲೆಫ್ಟಿನೆಂಟ್ ವಿಬಿನ್ ಕುಮಾರ್, ಎಫ್- ಒ…
ಮಡಿಕೇರಿ ನ.24 NEWS DESK : ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ದಾವಣಗೆರೆಯ ಚನ್ನಗಿರಿ ವಿರುಪಾಕ್ಷ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಯ್ಯನೆರವಂಡ ಪ್ರಿತುನ್ ಪೂವಣ್ಣ ಅವರಿಗೆ ಕರ್ನಾಟಕ ಸಿರಿಗನ್ನಡಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇವರು ನಾಲಡಿ ಕಕ್ಕಬ್ಬೆ ಗ್ರಾಮದ ಅಯ್ಯನೆರವಂಡ ಪ್ರಭಾ ಪೂವಯ್ಯ ದಂಪತಿಯ ಪುತ್ರ.
ಸುಂಟಿಕೊಪ್ಪ ನ.24 NEWS DESK : ಕೊಡಗರಹಳ್ಳಿ ಗ್ರಾಮದಲ್ಲಿರುವ ಶ್ರೀ ಬೈತೂರಪ್ಪ ಮತ್ತು ಪೊವ್ವದಿ ಬಸವೇಶ್ವರ ದೇವಾಲಯದಲ್ಲಿ ನ.26 ರಂದು ಶ್ರೀ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ. ದೇವಾಲಯದಲ್ಲಿ ಬೆಳಿಗ್ಗೆ 10 ಗಂಟೆಯಿಂದ ತನು ತಂಬಿಲ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಎಳನೀರು ಅಭಿಷೇಕ, ಹರಿದ್ರಾನರ್ವ ಅಭಿಷೇಕ ನಡೆಯಲಿದೆ. ಮಹಾಪೂಜೆ ಬಳಿಕ ಅನ್ನಸಂತರ್ಪಣೆ ಜರುಗಲಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಕಣಿವೆ ನ.24 NEWS DESK : ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ (ಐಐಹೆಚ್ಎಂ), ದೇಶದ ಪ್ರಮುಖ ಆತಿಥ್ಯ ಸಂಸ್ಥೆಗಳ ಸರಪಳಿಯು ವಿಶೇಷ ಕಾರ್ಯಕ್ರಮ ಏಳನೆ ಹೊಸಕೋಟೆಯ ರೆಸಾರ್ಟ್ ನಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ.ಚಿದ್ವಿಲಾಸ್ ಕೊಡಗು ಜಿಲ್ಲೆಯಾದ್ಯಂತ ಆಗಮಿಸಿದ್ದ 50 ಶಾಲೆಗಳ ಶಿಕ್ಷಕರು ಮತ್ತು ಪ್ರಾಂಶುಪಾಲರನ್ನು ಗೌರವಿಸಿ, ಮಾತನಾಡಿದರು. ಐಐಹೆಚ್ಎಂ ಅಧ್ಯಕ್ಷ ಡಾ.ಸುಭೋರ್ನೋ ಬೋಸ್ ಮಾತನಾಡಿ, ತಮ್ಮ ಸಂಸ್ಥೆಯ ಮುಖ್ಯ ಧ್ಯೇಯ ಕೊಡಗಿನ ಶಿಕ್ಷಣ ಹಾಗೂ ಇಲ್ಲಿನ ಪರಿಸರ ವ್ಯವಸ್ಥೆಯೊಂದಿಗೆ ತೊಡಗಿಸಿಕೊಳ್ಳುವುದು. ಸಮುದಾಯ-ಚಾಲಿತ ಉಪಕ್ರಮಗಳೊಂದಿಗೆ ಶೈಕ್ಷಣಿಕ ಅಭಿವೃದ್ಧಿ. ಒಟ್ಟಾಗಿ, ಸಂಘಟನೆಗಳು ಕೊಡಗಿನಲ್ಲಿ ಶೈಕ್ಷಣಿಕ ಮತ್ತು ಉದ್ಯಮ ಸಂಪರ್ಕಗಳನ್ನು ಬಲಪಡಿಸಲು ಮತ್ತು ವಿಸ್ತರಿಸಲು ಕೆಲಸ ಮಾಡುತ್ತಿದೆ ಎಂದು ಹೇಳಿದರು. ಐಐಹೆಚ್ ಎಂ ನಿರ್ದೇಶಕ ಸಂಚಾರಿ ಚೌಧರಿ ಹಾಗೂ ಇನ್ವೆಂಟ್ರೀ ಹೊಟೇಲ್‌ನ ವ್ಯವಸ್ಥಾಪಕ ನಿರ್ದೇಶಕರಾದ ಸುದೀಪ್ತ ದೇಬ್ ಮಾತನಾಡಿದರು. ಕಾರ್ಯಕ್ರಮದಲ್ಲಿ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಇ.ಬಿ. ಜೋಸೆಫ್ ಮತ್ತಿತರರು ಇದ್ದರು. ಸಮಾರಂಭದಲ್ಲಿ ಕೊಡವ ಸಮಾಜದ…
ಮಡಿಕೇರಿ ನ.24 NEWS DESK : ಕಾವೇರಿ ಶಾಲೆಯಲ್ಲಿ ಸಂಸ್ಥಾಪಕರ ದಿನ ಹಾಗೂ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲೆಯ ಸಂಸ್ಥಾಪಕರಾದ ದಿವಂಗತ ಶ್ರೀಮಾನ್ ಗುಡ್ಡಂಡ ನಂದಾ ಗಣಪತಿ ಹಾಗೂ ಕಾಂತೀ ಗಣಪತಿಯವರುಗಳ ಭಾವಚಿತ್ರಕ್ಕೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಸುದೇಶ್ ಬಿ.ಎಸ್, ಕಾರ್ಯದರ್ಶಿಯರಾದ ವಿನೋದ್ ಪಿ.ಎನ್, ಮುಖ್ಯ ಶಿಕ್ಷಕಿಯಾದ ಪಾರ್ವತಿ ಪಿ.ಯು, ಸಂಯೋಜಕಿಯಾದ ಅಮೃತ ಅರ್ಜುನ್ ಪುಷ್ಪ ನಮನವನ್ನು ಸಲ್ಲಿಸಿದರು. ವಿದ್ಯಾರ್ಥಿ ತಂಡದ ಮುಖಂಡರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲೆಯ ಮುಖ್ಯ ಶಿಕ್ಷಕಿ ಪಾರ್ವತಿ ಪಿ.ಯು ಮಾತನಾಡಿ ತಮ್ಮ ವಿಶಾಲ ದೃಷ್ಟಿಕೋನದಿಂದ ಕಟ್ಟಿದಂತಹ ಈ ಶಾಲೆಯ ಸಂಸ್ಥಾಪಕರುಗಳನ್ನು ಸ್ಮರಿಸುತ್ತಾ ಅವರುಗಳಲ್ಲಿ ಇದ್ದಂತಹ ಶಿಸ್ತು, ಸಮಯ ಪ್ರಜ್ಞೆಯ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು. ಮಕ್ಕಳ ದಿನಾಚರಣೆಯ ಮಹತ್ವದ ಬಗ್ಗೆ ಸಹ ಶಿಕ್ಷಕಿ ಭಾಗ್ಯ ಕಿರು ಭಾಷಣ ಮಾಡಿದರು. ಮಕ್ಕಳ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಹಲವಾರು ರೀತಿಯ ರಸಮಯವಾದ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ಅಲ್ಲದೆ ಶಿಕ್ಷಕರಿಂದ ವಿದ್ಯಾರ್ಥಿಗಳಿಗೋಸ್ಕರ ಹಲವಾರು…
ಮಡಿಕೇರಿ ನ.24 NEWS DESK : ಯಾದಗಿರಿ ಜಿಲ್ಲೆಯ ಶಹಪುರ ಪಿ.ಯು ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ವಿರಾಜಪೇಟೆಯ ಕಾವೇರಿಶಾಲಾ ವಿದ್ಯಾರ್ಥಿಗಳು ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿದ್ದಾರೆ. ಶಾಲೆಯ 10ನೇ ತರಗತಿಯ ಸೃಷ್ಟಿ ಬಿ.ಎಸ್, ಶ್ರೀ ವತ್ಸಯು .ಎಸ್ ಹಾಗೂ ತರುಣ್‍ಎನ್.ಎಂ, ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಹಾಸಂಸ್ಥಾನಮಠದಲ್ಲಿ ನಡೆದ ಚೆಸ್ ಪಂದ್ಯಾವಳಿಯಲ್ಲಿ 7ನೇ ತರಗತಿ ವಿದ್ಯಾರ್ಥಿಗಳಾದ ಮಾಲೇಟಿರ ಚಾಲ್ಸಿ ಹಾಗೂ ಆಜಾನ್‍ಎಂ.ಎ ಜಿಲ್ಲೆಯನ್ನು ಪ್ರತಿನಿಧಿಸಿ ಶಾಲೆಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರಿಗೆ ಚೆಸ್ ಮಾಸ್ಟರ್ ಮಾನ್ಮಣಿ ಮಾರ್ಗದರ್ಶನ ನೀಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿಯವರು, ಮುಖ್ಯಶಿಕ್ಷಕಿ, ಸಂಯೋಜಕಿ, ಬೋಧಕ-ಬೋಧಕೇತರ ವೃಂದದವರು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿರಾಜಪೇಟೆ ನ.24 NEWS DESK : ರಾಜ್ಯ ಸರಕಾರದ ವಿಶೇಷ ಅನುದಾನದ ಅಡಿಯಲ್ಲಿ ವಿರಾಜಪೇಟೆ ಪುರಸಭಾ ವ್ಯಾಪ್ತಿಯಲ್ಲಿನ ನೆಹರು ನಗರದಲ್ಲಿ, ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರ ವಿಶೇಷ ಪ್ರಯತ್ನದಿಂದ 20 ಲಕ್ಷಗಳ ಅನುದಾನದಲ್ಲಿ ನಿರ್ಮಾಣಗೊಂಡ, ನೂತನ ಕಾಂಕ್ರೀಟ್ ರಸ್ತೆಯನ್ನು ಶಾಸಕ ಪೊನ್ನಣ್ಣ ಅವರು ಉದ್ಘಾಟಿಸಿದರು. ನಂತರ ತಾವೇ ಸ್ವತಃ ನೂತನ ರಸ್ತೆಯಲ್ಲಿ ಸ್ಕೂಟರ್ ಚಲಾಯಿಸುವ ಮೂಲಕ ಉದ್ಘಾಟನಾ ಕಾರ್ಯಕ್ರಮದ ಸಭಾ ಕಾರ್ಯಕ್ರಮದ ವೇದಿಕೆಗೆ ತೆರಳಿದರು. ಬಳಿಕ ಸ್ಥಳಿಯರ ಮನವಿ ಹಾಗೂ ಸನ್ಮಾನ ಸ್ವೀಕರಿಸಿ ಮಾತನಾಡಿ, ಪುರಸಭೆ ಅಧ್ಯಕ್ಷರಾಗಿದ್ದ ದೇಚಮ್ಮ ಅವರ ಮುತುವರ್ಜಿಯಿಂದ ಇಂದು ಉತ್ತಮ ರಸ್ತೆ ನೆಹರುನಗರಕ್ಕೆ ನಿರ್ಮಾಣವಾಗಿದೆ. ರಸ್ತೆ ನಿರ್ಮಾಣ ಮಾಡಿಕೊಡಬೇಕು ಎಂದು ದೇಚಮ್ಮ ಅವರು ಮನವಿ ಮಾಡುವುದರೊಂದಿಗೆ ಒತ್ತಾಯವನ್ನೇ ಮಾಡುತ್ತಾರೆ. ಇದರ ಪರಿಣಾಮವಾಗಿ ಹಾಗೂ ಎಲ್ಲ ರಸ್ತೆಗಳು ಅಭಿವೃದ್ದಿಯಾಗಬೇಕು ಎನ್ನುವ ನಿಟ್ಟಿನಲ್ಲಿ ವಿಶೇಷ ಅನುದಾನ ತಂದು ಕಾಮಗಾರಿ ಮಾಡುತ್ತಿದ್ದೇವೆ. ಮಳೆಯಿಂದಾಗಿ ರಸ್ತೆಗಳು ಎಲ್ಲ ಕಡೆ ಸಂಪೂರ್ಣ ಹಾಳಾಗಿ ಹೋಗಿದೆ. ಮಳೆ ಕಡಿಮೆಯಾದ ಹಿನ್ನಲೆ…
ಮಡಿಕೇರಿ NEWS DESK ನ.23 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ 35 ನೇ ಕೊಡವ ನ್ಯಾಷನಲ್ ಡೇ ಮತ್ತು ಭಾರತೀಯ ಸಂವಿಧಾನ ದಿನ ನ.26 ರಂದು ನಡೆಯುತ್ತಿದ್ದು, ಇದರ ಪ್ರಯುಕ್ತ ದೇವಟ್ ಪರಂಬ್ ಕೊಡವ ನರಮೇಧ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿದ ಸಿಎನ್‌ಸಿ ಪ್ರಮುಖರು ಹಿರಿಯರಿಗೆ ಪ್ರಾರ್ಥನೆ ಸಲ್ಲಿಸಿದರು. 1785 ರಲ್ಲಿ ಮೈಸೂರು ಸುಲ್ತಾನರು ಹಾಗೂ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಪಡೆಗಳಿಂದ ಹತ್ಯಾಕಾಂಡಕ್ಕೊಳಗಾದ ಪೂರ್ವಜರಿಗೆ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಗೌರವ ಸಲ್ಲಿಸಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಗಾಗಿ ಆಶೀರ್ವಾದವನ್ನು ಕೋರಿದರು. ಕಲಿಯಂಡ ಪ್ರಕಾಶ್, ಪಟ್ಟಮಾಡ ಕುಶ ಹಾಗೂ ಮಂದಪಂಡ ಮನೋಜ್ ಭಾಗವಹಿಸಿದ್ದರು.






