ಮಡಿಕೇರಿ ಸೆ.13 NEWS DESK : ಕೊಡಗು ಜಿಲ್ಲಾ ಮಹಾಬೋಧಿ ಪತ್ತಿನ ಸಹಕಾರ ಸಂಘದ 10ನೇ ಮಹಾಸಭೆಯು ಸೆ.14 ರಂದು ಸಂಘದ ಅಧ್ಯಕ್ಷರಾದ ಎಸ್.ಸಿ.ಸತೀಶ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಅಂದು ಪೂರ್ವಹ್ನ 10.30 ಗಂಟೆಗೆ ನಗರದ ಬಾಲ ಭವನದಲ್ಲಿ ಸಭೆ ನಡೆಯಲಿದ್ದು, ಮಹಾಸಭೆಯಲ್ಲಿ ನಿರ್ದೇಶಕರುಗಳು ಹಾಗೂ ಸರ್ವ ಸದಸ್ಯರು ಪಾಲ್ಗೊಳ್ಳುವಂತೆ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೇವಕ್ಕಿ ಮನವಿ ಮಾಡಿದ್ದಾರೆ. ಸಭೆಯಲ್ಲಿ 2024-25ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ತೇರ್ಗಡೆಯಾದ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುವುದು ಎಂದು ತಿಳಿಸಿದರು.
ಲೇಖಕ: admin
ಹಾಸನ ಸೆ.13 NEWS DESK : ಹಾಸನ ಗಣೇಶ ಮೆರವಣಿಗೆಯಲ್ಲಿ ಜರುಗಿದ ದುರಂತದಲ್ಲಿ ಗಾಯಗೊಂಡು HIMS ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರನ್ನು ಹಾಸನ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ ಭೇಟಿಯಾಗಿ ಸಾಂತ್ವನ ಹೇಳಿದರು. ಅಲ್ಲದೆ, ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸುವ ಭರವಸೆ ನೀಡಿದರು.
ಮಡಿಕೇರಿ ಸೆ.13 NEWS DESK : ಸ್ವಾತಂತ್ರ್ಯ ಬಂದು 78 ವರ್ಷ ಕಳೆದರೂ ಇಂದಿಗೂ ಆದಿ ದ್ರಾವಿಡ ಸಮಾಜದ ಜನಾಂಗವನ್ನು ಕಡೆಗಣಿಸುತ್ತಿರುವ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಆದಿ ದ್ರಾವಿಡ ಸಮಾಜದ ರಾಜ್ಯಾಧ್ಯಕ್ಷ ಎಚ್. ಎಂ.ಸೋಮಪ್ಪ ಎಚ್ಚರಿಕೆ ನೀಡಿದ್ದಾರೆ. ವಿರಾಜಪೇಟೆ ತಾಲೂಕಿನ ಮಾಲ್ದಾರೆಯಲ್ಲಿ ಕೊಡಗು ಆದಿ ದ್ರಾವಿಡ ಸಮಾಜ ಸೇವಾ ಸಂಘದ ಮಾಲ್ದಾರೆ ಘಟಕದ ನೇತೃತ್ವದಲ್ಲಿ ಆಯೋಜಿತ ಸಮುದಾಯ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಆದಿ ದ್ರಾವಿಡ ಜನಾಂಗ ದಕ್ಷಿಣ ಕನ್ನಡ ಜಿಲ್ಲೆಯ ಮೂಲ ನಿವಾಸಿಗಳಾಗಿದ್ದು, ಅಲ್ಲಿನ ಜಾತಿ ಪ್ರಮಾಣ ಪತ್ರದಲ್ಲಿ ಪರಿಶಿಷ್ಟ ಜಾತಿ ಆದಿ ದ್ರಾವಿಡ ಎಂದು ನಮೂದಿಸಲಾಗಿದೆ. ಹಲವು ವರ್ಷಗಳ ಹಿಂದೆ ಅಲ್ಲಿಂದ ಕೂಲಿ ಕೆಲಸಕ್ಕಾಗಿ ಕೊಡಗು, ಚಿಕ್ಕಮಂಗಳೂರು, ಹಾಸನ, ಶಿವಮೊಗ್ಗ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಆದಿ ದ್ರಾವಿಡ ಜನಾಂಗದ ಕುಟುಂಬ ನೆಲೆಸಿದ್ದಾರೆಂದು ತಿಳಿಸಿದರು. ಕೊಡಗು ಜಿಲ್ಲೆಯಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಮಂದಿ ನೆಲೆಸಿದ್ದಾರೆ. ಸರ್ಕಾರ ಇತರ ಜಿಲ್ಲೆಗಳಲ್ಲಿ ವಾಸವಾಗಿರುವ ಆದಿ ದ್ರಾವಿಡ…
ಸೋಮವಾರಪೇಟೆ ಸೆ.13 NEWS DESK : ಕೃಷಿ ಸಂಶೋಧನಾ ಅರ್ಹತಾ ಪರೀಕ್ಷೆಯಲ್ಲಿ ಸೋಮವಾರಪೇಟೆಯ ಬಿ.ಎಂ.ಸೃಜನ್ ದೇಶಕ್ಕೆ 34ನೇ ರ‍್ಯಾಂಕ್ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಪೈಕಿ 18ನೇ ರ‍್ಯಾಂಕ್ ಪಡೆದು ಸಾಧನೆ ತೋರಿದ್ದಾರೆ. ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯಕ್ಕೆ ಒಳಪಡುವ ಮೈಸೂರು ತೋಟಗಾರಿಕಾ ಕಾಲೇಜಿನಲ್ಲಿ ಬಿ.ಎಸ್.ಸಿ (ಹಾನರ್ಸ)ವ್ಯಾಸಾಂಗ ಮಾಡಿದ್ದ ಶ್ರೇಯಸ್, ಕಳೆದ ಜುಲೈ ತಿಂಗಳಿನಲ್ಲಿ ನಡೆದ ಕೃಷಿ ಸಂಶೋದನಾ ಸ್ನಾತಕೋತ್ತರ ಅರ್ಹತಾ ಪರೀಕ್ಷೆಯಲ್ಲಿ ದೇಶದ ಒಟ್ಟು 42 ಸಾವಿರ ವಿದ್ಯಾರ್ಥಿಗಳ ಪೈಕಿ ಸೃಜನ್ 34ನೇ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಲ್ಲಿ 18ನೇ ರ‍್ಯಾಂಕ್ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರು ಸೋಮವಾರಪೇಟೆ ಪಟ್ಟಣದ ಬಸ್ಸ್ ಚಾಲಕ ಮೋನಪ್ಪ ಹಾಗೂ ಶ್ರೇಯಾ ಬಟ್ಟೆ ಅಂಗಡಿ ಮಾಲೀಕರು ಹಾಗೂ ಸೋಮವಾರಪೇಟೆ ಮಂಡಲ ಬಿಜೆಪಿ ಕಾರ್ಯದರ್ಶಿ ಇಂದಿರಾ ದಂಪತಿಗಳ ಪುತ್ರ. ಸೃಜನ್ ಸ್ಥಳೀಯ ಸಾಂದೀಪನಿ ಶಾಲೆಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ.
ಮಡಿಕೇರಿ ಸೆ.13 NEWS DESK : ಮಡಿಕೇರಿ ತಾಲ್ಲೂಕಿನ ಗಾಳಿಬೀಡುವಿನಿಂದ ಕೋಳಿಗೂಡು ಪುನರ್ವಸತಿ ಬಡಾವಣೆಯವರೆಗೆ ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಆರಂಭಗೊಂಡಿದೆ. ಪ್ರತಿದಿನ ಬೆಳಿಗ್ಗೆ 8.30 ಮತ್ತು ಸಂಜೆ 4.45 ಗಂಟೆಗೆ ಕೋಳಿಗೂಡು ಪುನರ್ವಸತಿ ಬಡಾವಣೆಗೆ ಬಸ್ ತಲುಪಲಿದೆ. ಬಸ್ ಸಂಚಾರವನ್ನು ಆರಂಭಿಸಿದ ಹಿನ್ನೆಲೆ ಮಡಿಕೇರಿ ಬಸ್ ಡಿಪೋ ವ್ಯವಸ್ಥಾಪಕರು ಹಾಗೂ ಚಾಲಕರನ್ನು ಕೋಳಿಗೂಡು ಪುನರ್ವಸತಿ ಬಡಾವಣೆಯಲ್ಲಿ ಗ್ರಾಮಸ್ಥರು ಅಭಿನಂದಿಸಿ ಸ್ವಾಗತಿಸಿದರು. ನಂತರ ಗಾಳಿಬೀಡು ಪುನರ್ವಸತಿ ಸಂಘದ ಅಧ್ಯಕ್ಷ ರವಿ ಅಪ್ಪುಕುಟ್ಟನ್, ಉಪಾಧ್ಯಕ್ಷ ಸ್ಟೀವನ್ ಡಿಸೋಜ, ತಾಜ್, ಕಾರ್ಯದರ್ಶಿ ಅಮ್ಮಿ, ಖಜಾಂಚಿ ಸುಮಿತ್ರ ಹಾಗೂ ಬಡಾವಣೆ ನಿವಾಸಿಗಳು ಬಸ್ ಗೆ ಪೂಜೆ ಸಲ್ಲಿಸಿದರು. ಮನವಿಗೆ ತಕ್ಷಣ ಸ್ಪಂದಿಸಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರ ಕಾರ್ಯವೈಖರಿಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಹಿಂದೆ ಶಾಸಕರು ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭ ಗಾಳಿಬೀಡು ಪುನರ್ವಸತಿ ಸಂಘದಿಂದ ಬಡಾವಣೆಗೆ ಬಸ್ ಸೌಲಭ್ಯ ಕಲ್ಪಿಸುವಂತೆ ನಿವಾಸಿಗಳು ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಶಾಸಕರು ಶೀಘ್ರ…
ಕಾರ್ಕಳ ಸೆ.13 NEWS DESK : ಕಾರ್ಕಳ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಕಾರ್ಕಳ ತಾಲೂಕು ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ “ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ” ನಡೆಯಲಿದೆ. ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರಾದ ಸಂತೋಷ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದ ಪ್ರಗತಿ ಆರೋಗ್ಯದ ಹಾದಿಯಲ್ಲೇ ಅಡಗಿದೆ. ಆರೋಗ್ಯದ ಅರಿವು ಬೆಳೆಯಲು ಜಾಗೃತಿ ಅತ್ಯವಶ್ಯಕ ‘ ಎಂದು ಕಿವಿಮಾತುಗಳನ್ನು ಹೇಳಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಪ್ರಾದೇಶಿಕ ಕಛೇರಿ, ಉಡುಪಿಯ ಯೋಜನಾಧಿಕಾರಿಗಳಾದ ಗಣೇಶ್ ಆಚಾರ್ಯ ‘ ಆರೋಗ್ಯದ ಅರಿವು ಬೆಳಗಿದಾಗ ಮಾತ್ರ ಸಮಾಜ ಶ್ರೇಯೋಭಿವೃದ್ಧಿಯ ಹಾದಿ ಹಿಡಿಯುತ್ತದೆ ‘ ಎಂಬ ಸತ್ಯವಾಕ್ಯವನ್ನು ತಮ್ಮ ನಿರರ್ಗಳ ನುಡಿಗಳೊಂದಿಗೆ ತಿಳಿಸಿಕೊಟ್ಟರು. ಅಲ್ಲದೇ ಪ್ರತಿಜ್ಞಾವಿಧಿ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಡಾ. ಬಿ.ಗಣನಾಥ ಶೆಟ್ಟಿ, ‘ ಜಾಗೃತಿಯ ಬೆಳಕು ಮೂಡಿದಾಗಲೇ ಸಮಾಜ ಆರೋಗ್ಯ, ಅರಿವು ಮತ್ತು ಪ್ರಗತಿಯನ್ನು ಕಾಣುತ್ತದೆ…
ಚೆಟ್ಟಳ್ಳಿ ಸೆ.13 NEWS DESK : ಅಂತರಾಷ್ಟ್ರೀಯ ಮಟ್ಟದ ರ‍್ಯಾಲಿಯಲ್ಲಿ ವಿಜೇತರಾದ ಕೊಂಗೆಟ್ಟಿರ ಬೋಪಯ್ಯ ಅವರನ್ನು ಚೆಟ್ಟಳ್ಳಿಯ ಅವರ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಕ್ಲಬ್ ನ ಅಧ್ಯಕ್ಷರಾದ ಮುಳ್ಳಂಡ ಶೋಭಾ ಚಂಗಪ್ಪ ಹಾಗೂ ಪದಾಧಿಕಾರಿಗಳು ಬೋಪಯ್ಯ ಬೋಪಯ್ಯ ಅವರಿಗೆ ನೆನಪಿನ ಕಾಣಿಕೆ ನೀಡುವ ಮೂಲಕ ಸನ್ಮಾನಿಸಿದರೆ, ಹಿರಿಯ ಸದಸ್ಯರಾದ ಪುತ್ತರಿರ ಪ್ರೇಮಾ ಭೀಮಯ್ಯ, ಐಚೆಟ್ಟೀರ ಚೋಂದಮ್ಮ ಹೂಗುಚ್ಚ ನೀಡಿ ಗೌರವಿಸಿದರು. ಕೊಂಗೇಟೀರ ಸಂಗೀತ ಅಚ್ಚಪ್ಪ ಕಿರುಪರಿಚಯಿಸಿದರು. ಹಿರಿಯರಾದ ಕೊಂಗೇಟಿರ ಕುಸುಮ ಪೊನ್ನಪ್ಪ ಹಾಗೂ ಕೊಂಗೇಟಿರ ವೀಣಾ ಅಪ್ಪಣ್ಣ ರ‍್ಯಾಲಿ ಸಾಧನೆಯ ಬಗ್ಗೆ ಪ್ರಶಂಸಿದರು. ಕೊಂಗೇಟೀರ ಬೋಪಯ್ಯ ಮಾತನಾಡಿ, ಸಣ್ಣ ವಯಸ್ಸಿನಲ್ಲೇ ರ‍್ಯಾಲಿಯಲ್ಲಿ ಸಾಧನೆ ಮಾಡಬೇಕೆಂಬ ಗುರಿಹೊಂದಿದ್ದು, ಹಲವು ರ‍್ಯಾಲಿಯಲ್ಲಿ ಸಾಧನೆಯನ್ನು ತೋರಿದ್ದೇನೆ. ತನ್ನ ತಾಯಿ ಹಾಗೂ ಪತ್ನಿ ನನ್ನ ಸಾಧನೆಗೆ ಸಂಪೂರ್ಣ ಸಹಕಾರ ನೀಡುತ್ತಿರುವುದರಿಂದ ಈ ಬಾರಿಯ ಅಂತರ ರಾಷ್ಟ್ರೀಯ ರ‍್ಯಾಲಿಯಲ್ಲಿ ಸಾಧನೆಗೈಯಲ್ಲು ಸಾಧ್ಯ ವಾಗಿದೆಂದರು. ಶೋಭ ಚಂಗಪ್ಪ ಸ್ವಾಗತಿಸಿದರು. ಮನೆಪಂಡ ಅಂಜಲಿ…
ಕಣಿವೆ ಸೆ.13 NEWS DESK : ಪೌಷ್ಟಿಕ ಸಮತೋಲನ ಆಹಾರ ಸೇವನೆಯಿಂದ ಗರ್ಭಿಣಿ ಮತ್ತು ಮಗು ಇಬ್ಬರು ಆರೋಗ್ಯವಂತರಾಗಿರಲು ಸಾಧ್ಯ ಎಂದು ಕೂಡಿಗೆ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ದೀಪಿಕಾ ಮೂರ್ತಿ ತಿಳಿಸಿದರು. ಪಟ್ಟಣದ ಗುಮ್ಮನಕೊಲ್ಲಿಯ ವಿನಾಯಕ ಬಡಾವಣೆಯಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ದಿ ಯೋಜನೆ ಆಶ್ರಯದಲ್ಲಿ ಗರ್ಭಿಣಿ ಮಹಿಳೆಯರಿಗೆ ಹಮ್ಮಿಕೊಂಡಿದ್ದ ಸೀಮಂತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರ ಗರ್ಭಿಣಿಯರ ದೈಹಿಕ ಆರೋಗ್ಯದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸುತ್ತಿದ್ದು, ಮಾನಸಿಕ ಆರೋಗ್ಯದ ಕಡೆಗೂ ಅತಿ ಹೆಚ್ಚಿನ ಗಮನ ಕೊಡಬೇಕಿದೆ. ಗರ್ಭಿಣಿಯರು ಧನಾತ್ಮಕವಾಗಿ, ಉತ್ತಮ ಆಲೋಚನೆ ಹೊಂದಬೇಕು. ಶಾಂತಿಯಿಂದ ಧ್ಯಾನ, ಶ್ಲೋಕ ಹೇಳಿಕೊಂಡಲ್ಲಿ ಜನಿಸುವ ಮಗುವಿನ ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ. ತಾಯಿಯ ಮನಸ್ಸು ಚಿಂತೆ, ದುಗುಡ, ದುಃಖ, ಹಿಂಸೆಯಿಂದ ಕೂಡಿದ್ದರೆ ಮಗುವಿನ ಮನಸ್ಥಿತಿಯೂ ಹಾಗೇ ಇರುತ್ತದೆ. ಆದ್ದರಿಂದ ಗರ್ಭಾವಸ್ಥೆಯಲ್ಲಿರುವಾಗ ತಾಯಂದಿರ ವಿಚಾರಧಾರೆ ಉತ್ತಮವಾಗಿರಬೇಕು ಎಂದರು. ಗುಮ್ಮನಕೊಲ್ಲಿ ಉಪಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ಮಮತಾ…
ನಾಪೋಕ್ಲು ಸೆ.13 NEWS DESK : ಮುರ್ನಾಡು ಮಾರುತಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸುವ ಸಲುವಾಗಿ “ಗುರುವಂದನಾ” ಕಾರ್ಯಕ್ರಮವನ್ನು ಆಯೋಜಿಸಿದ್ದರು. ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಸ್ಪಂದನಾ ಮಾತನಾಡಿ, ಸರ್ವಪಲ್ಲಿ ರಾಧಾಕೃಷ್ಣನ್ ಅವರ ಅಧ್ಯಾಪನ ವೃತ್ತಿ, ಮಾರ್ಗದರ್ಶನ ಅವರಿಗಿದ್ದ ತಾತ್ವಿಕ ಚಿಂತನೆ ಇಂದಿನ ಶಿಕ್ಷಕರ ಸ್ಫೂರ್ತಿಯ ಸೆಲೆಯಾಗಿದೆ. ಗುರುಗಳ ವಿನಃ ಯಾವ ವಿದ್ಯಾರ್ಥಿಯೂ ಪರಿಪೂರ್ಣನಾಗಲಾರ ಎಂದರು. ವಿದ್ಯಾರ್ಥಿನಿ ಮಯೂರಿ ಮಾತನಾಡಿ ಶಿಕ್ಷಕರ ಕರ್ತವ್ಯ ನಿಷ್ಠೆ, ನಿಷ್ಪಕ್ಷಪಾತ ಮನೋಭಾವ, ಶ್ರದ್ಧೆ, ಶಿಸ್ತು ವಿದ್ಯಾರ್ಥಿಗಳ ಭವಿಷ್ಯಕ್ಕೆ ದಾರಿದೀಪ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಶಿಕ್ಷಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಕಿರುಕಾಣಿಕೆಯನ್ನು ನೀಡಿ ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಮುಂಡಂಡ ಕೆ.ಅಪ್ಪಚ್ಚು, ಉಪಾಧ್ಯಕ್ಷರಾದ ಚೇಂದ್ರಿಮಾಡ ಗಿಲ್ ಸೋಮಯ್ಯ, ಗೌರವ ಕಾರ್ಯದರ್ಶಿ ಬಡುವಂಡ ಎಂ.ಅರುಣ್ ಅಪ್ಪಚ್ಚು, ಉಪಪ್ರಾಂಶುಪಾಲರು, ಶಿಕ್ಷಕವೃಂದ, ಶಿಕ್ಷಕೇತರ ಸಿಬ್ಬಂದಿಗಳ ಉಪಸ್ಥಿತರಿದ್ದರು. ಸೌಜನ್ಯ ತಂಡದವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಆರ್.ಪ್ರಕೃತಿ ಸ್ವಾಗತಿಸಿದರು, ಹಬೀಬ ನಿರೂಪಿಸಿ…
ನಾಪೋಕ್ಲು ಸೆ.13 NEWS DESK : ಸುನ್ನೀ ಮುಹಿಯದ್ದೀನ್ ಜುಮಾ ಮಸೀದಿ ವತಿಯಿಂದ ಇಂದಿನಿಂದ ಮೂರು ದಿನ ಆಯೋಜಿಸಿರುವ “ಮದದೇ ಮದೀನ” ಮಿಲಾದ್ ಬೃಹತ್ ಸಮಾವೇಶ ಕಾರ್ಯಕ್ರಮದ ಧ್ವಜಾರೋಹಣವನ್ನು ಮಸೀದಿ ಆವರಣದಲ್ಲಿ ನೆರವೇರಿಸಲಾಯಿತು. ಜುಮುಅ ನಮಾಜ್ ನಂತರ ಜಮಾಯತ್ ಅಧ್ಯಕ್ಷರಾದ ಎಂ.ಹೆಚ್.ಅಬ್ದುಲ್ ರಹಮಾನ್ ಅವರು ಧ್ವಜಾರೋಹನವನ್ನು ನೆರವೇರಿಸಿ, ಖತೀಬ್ ರದ ಹಾಫಿಳ್ ಶೌಕತಲಿ ಪ್ರಾರ್ಥನೆಯನ್ನು ನೆರವೇರಿಸಿದರು. ಈ ಸಂದರ್ಭ ಕೆ.ಎ.ಇಸ್ಮಾಯಿಲ್, ಪಿ.ಎ.ಮನ್ಸೂರ್ ಆಲಿ, ಪಿ.ಎಂ.ಯುನಸ್, ಅಬ್ದುಲ್ ಅಜೀಜ್ ಪಿ.ಎಂ.ಇಸ್ಮಾಯಿಲ್ ಸಖಾಫಿ ಕುಂಡಂಗೇರಿ, ಸಲೀಂ ಹ್ಯಾರಿಸ್, ಶಂಸು ಕಾರೆಕಾಡು, ಅರಫತ್ ಪಿ.ಎಂ, ಹುಸೇನಾರು ತಿರೋವತ್, ಹಮೀದ್ ಸಿ.ಹೆಚ್, ಜಬ್ಬರ್, ಆಸಿಫ್ ಆಲಿ, ಫಾರೂಕ್, ನೌಫಲ್, ಅಬೂಬಕರ್ ಎಂ.ಎಂ, ಅಶ್ರಫ್ ಅಲಿ, ಪಿ.ಎಂ.ಬಜರುದ್ದೀನ್ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಮಾತನಾಡಿದರು. ಮೌಲಿದ್ ಬುರ್ದು, ದಫ್ ಮತ್ತು ಧಾರ್ಮಿಕ ಪ್ರಭಾಷಣ ಸಮಾರಂಭ ಮೀಲಾದ್ ಸಮಿತಿಯ ಅಧ್ಯಕ್ಷರಾದ ಅರಫತ್ ಪಿ.ಎಂ. ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಖತೀಬ್ ಖಲೀಲ್ ಸಖಾಫಿ ಪ್ರಾರ್ಥನೆ ನೆರವೇರಿಸಿದರು. ಕಾರ್ಯಕ್ರಮದ ಉದ್ಘಾಟನೆ…






