ಮಡಿಕೇರಿ ನ.20 NEWS DESK : ಇದೇ ನ.26 ರಂದು ಸಂವಿಧಾನ ದಿನಾಚರಣೆಯನ್ನು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಆಚರಿಸಲಾಗುತ್ತಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಸೂಚಿಸಿದ್ದಾರೆ. ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಸರ್ಕಾರ ಸಂವಿಧಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಸೂಚಿಸಿದೆ. ಆ ದಿಸೆಯಲ್ಲಿ ಜಾಥ ಹಾಗೂ ಸಭಾ ಕಾರ್ಯಕ್ರಮ ಏರ್ಪಡಿಸಿ ಸಂವಿಧಾನದ ಮಹತ್ವ ಕುರಿತು ಉಪನ್ಯಾಸ ನೀಡುವಂತಾಗಬೇಕು ಎಂದು ಸಲಹೆ ಮಾಡಿದರು. ಕಾರ್ಯಕ್ರಮ ಆಯೋಜನೆ ಸಂಬಂಧ ವಿವಿಧ ಇಲಾಖೆ ಅಧಿಕಾರಿಗಳ ಜೊತೆ ಸರ್ಕಾರೇತರ ಸಂಸ್ಥೆಗಳು ಹಾಗೂ ವಿವಿಧ ಸಮಾಜದ ಮುಖಂಡರನ್ನು ಆಹ್ವಾನಿಸಿ ಸಂವಿಧಾನ ದಿನಾಚರಣೆ ಆಚರಿಸುವಂತೆ ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್ ಅವರು ನ.26 ರಂದು ಸಂವಿಧಾನ ದಿನಾಚರಣೆ ಪ್ರಯುಕ್ತ ಜಾಥ ಏರ್ಪಡಿಸಬೇಕಿದೆ. ತೆರೆದ ವಾಹನದಲ್ಲಿ ಅಂಬೇಡ್ಕರ್ ವೇಷಧಾರಿ ವಿದ್ಯಾರ್ಥಿ ಒಳಗೊಂಡಂತೆ ಸಂವಿಧಾನ ಪುಸ್ತಕ ಪ್ರದರ್ಶಿಸಿ ತೆರಳಬೇಕಿದೆ. ಅಂಬೇಡ್ಕರ್ ಅವರ ಚಿಂತನೆಗಳು,…
ಲೇಖಕ: admin
ಮಡಿಕೇರಿ ನ.20 NEWS DESK : ದೇಶದ ಆರ್ಥಿಕತೆಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ. ಸಹಕಾರ ಸಂಸ್ಥೆಗಳು ಎಲ್ಲಾ ವಲಯಗಳನ್ನು ವ್ಯಾಪಿಸಿದ್ದು, ಗ್ರಾಮೀಣ ಪ್ರದೇಶಗಳಲ್ಲಿಯೂ ಸೇವೆ ಒದಗಿಸುತ್ತಾ ಸಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಹೇಳಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆ, ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಹಾಗೂ ಸ್ಥಳೀಯ ಎಲ್ಲಾ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಗರದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಉನ್ನತಿ ಭವನದ ಪಂದ್ಯಂಡ ಐ.ಬೆಳ್ಯಪ್ಪ ಸ್ಮಾರಕ ಸಭಾಂಗಣದಲ್ಲಿ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನಿಂದ ಆಯ್ಕೆಗೊಂಡ ಕೊಡಗಿನ ಶ್ರೇಷ್ಠ ಸಹಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು, ಮಾತನಾಡಿದರು. ಸಹಕಾರ ಎಂದರೆ ಸಮೂಹಿಕ ನಂಬಿಕೆ, ಶ್ರಮ, ನ್ಯಾಯದ ಹಂಚಿಕೆ. ಸಹಕಾರ ಚಳುವಳಿ ದೇಶದ ಆರ್ಥಿಕತೆಗೆ…
ವಿರಾಜಪೇಟೆ ನ.20 NEWS DESK : ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕೊಡವ ಮುಸ್ಲಿಂ ಸ್ಪೋರ್ಟ್ಸ್ ಅಕಾಡೆಮಿ (ಕೆ.ಎಂ.ಎಸ್.ಎ)ಯ ಅಧಿಕೃತ ಲಾಂಛನವನ್ನು ಅನಾವರಣಗೊಳಿಸಲಾಯಿತು. ಸಂಸ್ಥೆಗಾಗಿ ವಿನ್ಯಾಸಗೊಳಿಸಲಾಗಿದ್ದ ನೂತನ ಲಾಂಛನವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಆಗಿರುವ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಬೆಂಗಳೂರಿನ ವಿಧಾನಸೌಧದ 2ನೇ ಮಹಡಿಯಲ್ಲಿರುವ ತಮ್ಮ ಕಚೇರಿಯಲ್ಲಿ ಅನಾವರಣಗೊಳಿಸಿದರು. ಈ ಸಂದರ್ಭ ಮಾತನಾಡಿದ ಪೊನ್ನಣ್ಣ ಅವರು, ಕ್ರೀಡೆಗಳು ಜನರ ನಡುವೆ ಸೌಹಾರ್ದ ಬೆಳೆಸುತ್ತವೆ. ವಿವಿಧ ಹಿನ್ನೆಲೆಯ ಜನರು ಒಟ್ಟಾಗಿ ಆಡಲು ಮತ್ತು ಒಟ್ಟಿಗೆ ಕೆಲಸ ಮಾಡಲು ಅವಕಾಶ ನೀಡುತ್ತವೆ. ಮುಖ್ಯವಾಗಿ ಕ್ರೀಡಾಕೂಟಗಳು ಸಮುದಾಯಗಳನ್ನು ಒಟ್ಟುಗೂಡಿಸುತ್ತವೆ. ಕ್ರೀಡೆಗಳು ಮನಸ್ಸಿನ ಉಲ್ಲಾಸವನ್ನು ನೀಡುವುದರ ಜೊತೆಗೆ, ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗಿವೆ. ಇದು ಶಾಂತಿಯುತ ವಾತಾವರಣ ನಿರ್ಮಾಣಕ್ಕೆ ಅವಕಾಶ ಕಲ್ಪಿಸುತ್ತದೆ. ಈ ಕಾರಣಕ್ಕಾಗಿ ಕ್ರೀಡಾ ಸಂಸ್ಥೆಗಳು ಹೆಚ್ಚು ಮೂಡಿ ಬರಬೇಕಾಗಿದೆ ಎಂದು ಹೇಳಿದರು. ಕ್ರೀಡೆಗಳು ಶಿಸ್ತು ಮತ್ತು ಪರಸ್ಪರ ಗೌರವದ ಮೌಲ್ಯಗಳನ್ನು ಕಲಿಸುತ್ತವೆ, ಇದು ಸಮಾಜದಲ್ಲಿ ಉತ್ತಮ ಸಂಬಂಧಗಳನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೀಡೆಗಳಿಂದ ಕ್ರೀಡಾಪಟುಗಳು…
ಪುತ್ತೂರು ನ.20 NEWS DESK : ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಕಾಲೇಜು ವಾರ್ಷಿಕೋತ್ಸವ ಸಮಾರಂಭ ನವರಂಗ್-2025 ಮತ್ತು ಕಾಲೇಜು ಆವರಣದಲ್ಲಿ ಪ್ರಾರಂಭಗೊಳ್ಳಲಿರುವ ಸ್ಟಾರ್ಟ್-ಅಪ್ ಗಳ ಉದ್ಘಾಟನೆ ನ.21 ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ಕಾಲೇಜಿನ ಕೃಷ್ಣ ಚೇತನಾ ಕಟ್ಟಡದಲ್ಲಿ ನಿರ್ಮಾಣಗೊಂಡಿರುವ ನೂತನ ಸ್ಟಾರ್ಟ್-ಅಪ್ ವಿಭಾಗ ಲಾಂಚ್‍ವರ್ಸ್‍ನಲ್ಲಿ ದ ವೆಬ್ ಪೀಪಲ್ ಮತ್ತು ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್ ಇದರ ಕಛೇರಿಗಳ ಉದ್ಘಾಟನೆ ನಡೆಯಲಿದೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ಕ್ಯಾ.ಬೃಜೇಶ್ ಚೌಟ ದೀಪ ಪ್ರಜ್ವಲನೆ ಮಾಡಲಿದ್ದಾರೆ. ದ ವೆಬ್ ಪೀಪಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಣಾಧಿಕಾರಿ ಆದಿತ್ಯ ಕಲ್ಲೂರಾಯ, ಮುಖ್ಯ ಕಾರ್ಯಾಚರಣಾಧಿಕಾರಿ ಶರತ್ ಶ್ರೀನಿವಾಸ್, ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್‍ನ ಕಾರ್ಯನಿರ್ವಹಣಾ ನಿರ್ದೇಶಕ ಡಾ.ಶ್ರೀಶ ಭಟ್, ಕಾಲೇಜು ಆಡಳಿತ ಮಂಡಳಿಯ ಪದಾಧಿಕಾರಿಗಳು, ಪ್ರಾಂಶುಪಾಲರು ಮತ್ತು ಇತರ ಗಣ್ಯರು ಇದರಲ್ಲಿ ಭಾಗವಹಿಸುತ್ತಾರೆ. ಬೆಳಿಗ್ಗೆ 10 ಗಂಟೆಗೆ ಕಾಲೇಜು ವಾರ್ಷಿಕೋತ್ಸವ ಸಮಾರಂಭ ನವರಂಗ್-2025…
ಬೆಂಗಳೂರು ನ.20 NEWS DESK : ಕರ್ನಾಟಕ ವಿಧಾನಸಭೆಯ 2025 ನೇ ಸಾಲಿನ ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕದ, ಪರಿಶೀಲನ ಸಮಿತಿಯ ಸಭೆ ಇಂದು ಬೆಂಗಳೂರಿನ ವಿಧಾನಸೌಧದ ಕೊಠಡಿಯಲ್ಲಿ ನಡೆಯಿತು. ಕರ್ನಾಟಕ ರಾಜ್ಯ ಘನ ಸರಕಾರದ ಕಂದಾಯ ಸಚಿವರು ಹಾಗೂ ಪರಿಶೀಲನ ಸಮಿತಿಯ ಅಧ್ಯಕ್ಷರಾದ ಕೃಷ್ಣಭೈರೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಿತಿಯ ಎಲ್ಲಾ ಸದಸ್ಯರು ಭಾಗವಹಿಸಿದರು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎಸ್.ಪೊನ್ನಣ್ಣ ಅವರು, ಮಡಿಕೇರಿ ಶಾಸಕರಾದ ಮಂಥರ್ ಗೌಡ ಉಪಸ್ಥಿತರಿದ್ದರು. ಕೊಡಗು ಜಿಲ್ಲೆಯ ದಶಕಗಳ ಸಮಸ್ಯೆಯಾಗಿರುವ ಪಟ್ಟೇದಾರ್ ಭೂ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸುವ ಸಂಬಂಧ ಇಂದು ಮೂರನೇ ಬಾರಿಗೆ ಕರ್ನಾಟಕ ವಿಧಾನಸಭೆ ಪರಿಶೀಲನಾ ಸಮಿತಿ ಸಭೆಯಲ್ಲಿ ಚರ್ಚಿಸಲಾಯಿತು. ಸಮಿತಿಯವರೊಂದಿಗೆ ಚರ್ಚಿಸಿದ ಶಾಸಕರಾದ ಎ.ಎಸ್ ಪೊನ್ನಣ್ಣ, ಕೊಡಗಿನ ಜನತೆಗೆ ಮಾರಕವಾದ ಕೆಲವು ತಿದ್ದುಪಡಿಗಳನ್ನು ಕೈ ಬಿಟ್ಟು, ಕಂದಾಯ ವಿಷಯದಲ್ಲಿ ಹಲವು ದಶಕಗಳಿಂದ ಸಂಕಷ್ಟದಲ್ಲಿರುವ ಕೊಡಗಿನ ಜನತೆಗೆ…
ಗೋಣಿಕೊಪ್ಪ ನ.20 NEWS DESK : ಕೊಡಗಿನ ಕಲಾವಿದ ರತೀಶ್ ಹುದಿಕೇರಿ ನಟಿಸಿ, ನಿರ್ಮಿಸಿದ ಗಿಡುಗ ಸಿನಿಮಾ ನ.21 ರಂದು ಗೋಣಿಕೊಪ್ಪದ ಕೂರ್ಗ್ ಸಿನಿಫ್ಲೆಕ್ಸ್‍ನಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಕೆಂಪೆಗೌಡ ಮಾಗಡಿ ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 10 ಗಂಟೆಗೆ ಮೊದಲ ಪ್ರದರ್ಶನ ಕಾಣಲಿದ್ದು, ಗಿಡುಗ ಸಿನಿಮಾವೊಂದು ಕೊಡಗು, ಬೆಂಗಳೂರು, ಮಾಗಡಿ ಪ್ರದೇಶದಲ್ಲಿ ಶೂಟಿಂಗ್ ಮುಗಿಸಿ, ಬಿಡುಗಡೆಗೆ ಸಿದ್ಧವಾಗಿದೆ. ಕೆಂಪೆಗೌಡ ಮಾಗಡಿ ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಜತೆಗೆ ಬಂಡವಾಳ ಹೂಡಿದ್ದಾರೆ. ಶಂಕರ ನಾರಾಯಣ ನಂಬುದಿರಿ ಮತ್ತು ವಿ.ಎ.ರತೀಶ್ ಹುದಿಕೇರಿ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ದ ಹಂಟರ್ ಎಂಬ ಅಡಿಬರಹವಿದೆ. ಅಣ್ಣತಂಗಿ ಬಾಂಧವ್ಯದ ಕಥೆಯಳ್ಳ ಚಿತ್ರ ಇದಾಗಿದ್ದು, ಸಸ್ಪೆನ್ಸ್ ಮರ್ಡರ್ ಮಿಸ್ಟರಿ ಅಂಶಗಳನ್ನು ಒಳಗೊಂಡಿದೆ. ರತೀಶ್ ಕೂರ್ಗ್ ಈ ಚಿತ್ರದ ನಾಯಕ ತಂಗಿಯಾಗಿ ಭವಾನಿ ಉಳಿದಂತೆ ಭಾನು ಮೋಹನ್, ಚಾಮರಾಜು, ರೇವಣ್ಣ ಮಾಗಡಿ, ಚೆನ್ನಬಸವ, ಕಿಶೋರ್, ಸಂಜೀವ್, ಮಾಸ್ಟರ್ ಹೃದಯನ್ ಗೌಡ, ಮಾಸ್ಟಪುನೀತ್ ಮುಂತಾದವರು ನಟಿಸಿದ್ದಾರೆ. ಹಾಡುಗಳಿಗೆ ವಿನ್ಸೆಂಟ್ ಮುಕೇಶ್…
ಮಡಿಕೇರಿ ನ.20 NEWS DESK : ಕನ್ನಡದ ಮೊದಲ ನಾಡಗೀತೆ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡಿಗೆ ನೂರು ವಷ೯ಗಳು ತುಂಬಿರುವ ಹಿನ್ನಲೆಯಲ್ಲಿ ಕೊಡಗು ಪತ್ರಕತ೯ರ ಸಂಘದಿಂದ ಪ್ರತಿಷ್ಟಿತ ಮುಳಿಯ ಚಿನ್ನಾಭರಣ ಸಂಸ್ಥೆಯ ಸಹಯೋಗದಲ್ಲಿ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು – ಗೀತಗಾಯನ ಕಾಯ೯ಕ್ರಮವನ್ನು ನ.23 ರಂದು ಮಡಿಕೇರಿಯಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಭಾನುವಾರ ಸಂಜೆ 5.30 ಗಂಟೆಗೆ ನಗರದ ರೆಡ್ ಬ್ರಿಕ್ಸ್ ಇನ್ ನ ಸತ್ಕಾರ್ ಸಭಾಂಗಣದಲ್ಲಿ ಆಯೋಜಿತ ಕಾಯ೯ಕ್ರಮಕ್ಕೆ ಮುಳಿಯ ಚಿನ್ನಾಭರಣ ಸಂಸ್ಥೆ ಸಹಯೋಗ ನೀಡಿದ್ದು 3 ಗಂಟೆ ಅವಧಿಯ ಕನ್ನಡ ಗೀತೆಗಳ ಕಾಯ೯ಕ್ರಮದಲ್ಲಿ ಜಿಲ್ಲೆಯ 33 ಗಾಯಕ, ಗಾಯಕಿಯರು ಹಾಡಲಿದ್ದಾರೆ ಎಂದರು. 1924 ರಲ್ಲಿ ಕನ್ನಡದ ಹೆಸರಾಂತ ಕವಿ, ಸಾಹಿತಿ ಹುಯಿಲಗೋಳ ನಾರಾಯಣರಾವ್ ವಿರಚಿತ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು.. ಬೆಳಗಾವಿಯ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮ ಗಾಂಧೀಜಿ ಸಮ್ಮುಖದಲ್ಲಿ ಹಾಡಲ್ಪಟ್ಟು ಕನ್ನಡದ…
ಕುಶಾಲನಗರ NEWS DESK ನ.20 : ಅನಾದಿಕಾಲದಿಂದಲೂ ‘ಮಾಂಗಲ್ಯ ಸರ’ ಹೆಣ್ಣಿನ ಮನಸಿಗೂ-ಘನತೆಗೂ ಹಾಗೂ ಗಂಡನ ಆಯಸ್ಸು-ಶ್ರೇಯಸ್ಸು-ಆರೋಗ್ಯಕ್ಕೂ ಸಂಬಂಧ ಬೆಸೆಯುತ್ತ ಬಂದಿದೆ. ಮಂಗಳಸೂತ್ರ, ತಾಳಿ, ಕಂಠಿ, ಕರಿಮಣಿ ಇತ್ಯಾದಿ ವಿವಿಧ ಹೆಸರುಗಳಿರುವ, ಅತಿ ಪಾವಿತ್ರ್ಯದ, ಅತ್ಯಂತ ಭಾವನಾತ್ಮಕವಾದ ಆಭರಣ ಮಾಂಗಲ್ಯ ಸರ. ಇಷ್ಟೊಂದು ಪ್ರಾಮುಖ್ಯತೆ ಪಡೆದಿರುವ ಮಾಂಗಲ್ಯ ಸರವನ್ನು ಸುಮಂಗಲಿಯರು ಬದಲಾಯಿಸಲು ಅಥವಾ ಹೊಸ ಮಾಂಗಲ್ಯ ಸರ ಖರೀದಿಸಲು ಬಯಸುತ್ತಿದ್ದರೆ ಕುಶಾಲನಗರದ ಮುಖ್ಯ ರಸ್ತೆಯಲ್ಲಿರುವ ಜಿಎಲ್ ಆಚಾರ್ಯ ಜ್ಯುವೆಲ್ಲರ್‌ಗೆ ಭೇಟಿ ನೀಡಿ. ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಪ್ರಸ್ತುತ ಪಡಿಸಿರುವ ಮಾಂಗಲ್ಯ ಸರ ಮೇಳವು ನ.23ರಂದು ಕೊನೆಗೊಳ್ಳಲಿದೆ. ಹಾಗಾದ್ರೆ ಇನ್ಯಾಕೆ ತಡ… ಬೇಗ ಬೇಗ ಬನ್ನಿ ಕೊನೆಯ ನಾಲ್ಕು ದಿನಗಳ ಕಾಲಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ. ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್‌ನಲ್ಲಿ ನ.8 ರಿಂದ ಮಾಂಗಲ್ಯ ಸರ ಮೇಳ ಪ್ರಾರಂಭಗೊಂಡಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ಗ್ರಾಹಕರಿಗಾಗಿ ವಿಶೇಷ ಆಫರ್ ನೀಡಲಾಗಿದೆ. ನ.8ರಿಂದ ಪ್ರಾರಂಭಗೊಂಡ ಮಾಂಗಲ್ಯ ಸರ ಮೇಳವು ನ.23ರಂದು…
ಮಡಿಕೇರಿ ನ.20 NEWS DESK : ಸಿನಿರಂಗದ ಹಿರಿಯ ನಟ ದೊಡ್ಡಣ್ಣ ಅವರನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಭೇಟಿ ಮಾಡಿ ಅವರ ಆರೋಗ್ಯ-ಕ್ಷೇಮ ವಿಚಾರಿಸಿದರು. ಈ ಸಂದರ್ಭದಲ್ಲಿ ಸಿನಿರಂಗದ ಇತರ ಹಿರಿಯ ಕಲಾವಿದರು ಉಪಸ್ಥಿತರಿದ್ದರು.
ಬೆಂಗಳೂರು ನ.20 NEWS DESK : ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಂಗವಾಗಿ, ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮಾಣವಚನ ಬೋಧಿಸಿದರು. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಾಸಿರ್ ಅಹ್ಮದ್, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಜ್ ಹಾಗೂ ಗಣ್ಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.






