ಮಡಿಕೇರಿ ಡಿ.19 NEWS DESK : ‘ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ’ ಎನ್ನುವ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಧ್ಯೇಯ ವಾಕ್ಯದ ಸಾಕಾರವಾಗಬೇಕಿದ್ದಲ್ಲಿ, ನಮ್ಮಲ್ಲಿ ನಾವು ಪರಿವರ್ತನೆಯನ್ನು ಕಾಣುವುದು ಅವಶ್ಯ. ಇಂತಹ ಪರಿವರ್ತನೆಗಾಗಿ ‘ಅಧ್ಯಯನ’ಕ್ಕೆ ಮಹತ್ವವನ್ನು ನೀಡಬೇಕೆಂದು ಖ್ಯಾತ ವಾಗ್ಮಿ ಹಾಗೂ ಮೀಡಿಯಾ ಮಾಸ್ಟರ್ ಯೂ ಟ್ಯೂಬ್ ಸಂಸ್ಥಾಪಕ ಎಂ.ಎಸ್.ರಾಘವೇಂದ್ರ ಯುವ ಸಮೂಹಕ್ಕೆ ಕರೆ ನೀಡಿದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 45ನೇ ದಕ್ಷಿಣ ಪ್ರಾಂತ ಸಮ್ಮೇಳನದ ಕೊನೆಯ ಹಾಗೂ ಮೂರನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ಜಾರಿಗೆ ಬಂದ ಮೆಕಾಲೆ ಶಿಕ್ಷಣ ಪದ್ಧತಿ ನಮ್ಮಲ್ಲಿ ‘ಪ್ರಶ್ನಿಸುವ’ ಮನೋಭಾವವನ್ನು ಮರೆಸಿ, ಗುಲಾಮಗಿರಿತನವನ್ನಷ್ಟೆ ತುಂಬಿತು. ಸ್ವಾತಂತ್ರ್ಯ ಬಂದು ಇಲ್ಲಿಯವರೆಗೂ ನಾವು ಅಂದಿನ ಶಿಕ್ಷಣ ಪದ್ಧತಿಗಳಡಿಯಲ್ಲೇ ಸಾಗುತ್ತಿದ್ದೇವೆ ಎಂದು ವಿಷಾದಿಸಿದರು. ಸ್ವಾತಂತ್ರ್ಯ ಬಂದ ಅವಧಿಯಲ್ಲಿಯೂ ಗುಲಾಮಗಿರಿತನದ ಮನೋಭಾವವೆ ನಮ್ಮನ್ನು ಆವರಿಸಿತ್ತು. ಇವುಗಳ ನಡುವೆ ಕೆಲವರು ಯುವ ಸಮೂಹದಲ್ಲಿ ರಾಷ್ಟ್ರಾಭಿಮಾನವನ್ನು, ಸ್ವಾಭಿಮಾನವನ್ನು ತುಂಬುವ ಮೂಲಕ, ವ್ಯಕ್ತಿಯಿಂದ ರಾಷ್ಟ್ರ…
ಲೇಖಕ: admin
ಮಡಿಕೇರಿ ಡಿ.19 NEWS DESK : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್, ಕೊಡಗು ಜಿಲ್ಲಾ ಘಟಕದ ವತಿಯಿಂದ ಪರಿಷತ್ತಿನ ಕೇಂದ್ರ ಸಮಿತಿಯ ನಿರ್ದೇಶನದಂತೆ ನಡೆದ “ನನ್ನ ಕಲ್ಪನೆಯ ಸ್ವಚ್ಛ ಕೊಡಗು” ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಮಡಿಕೇರಿಯ ಕೊಡಗು ವಿದ್ಯಾಲಯದ ವಿದ್ಯಾರ್ಥಿನಿ ಎಂ.ರುಶೀಲ್ ಪ್ರಥಮ ಸ್ಥಾನ ಗೆದ್ದುಕೊಂಡಿದ್ದಾಳೆ. ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಎಂ.ಎಸ್.ಸಮನ್ವಿ ರಾವ್ ದ್ವಿತೀಯ ಹಾಗೂ ವಿರಾಜಪೇಟೆ ತ್ರಿವೇಣಿ ಶಾಲೆಯ ಸನ್ನಧಿ ಆರ್.ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಅಧ್ಯಕ್ಷರಾದ ಚಾಮೆರ ದಿನೇಶ್ ಬೆಳ್ಯಪ್ಪ ಅವರು ತಿಳಿಸಿದ್ದಾರೆ. ಸ್ಪರ್ಧೆಯಲ್ಲಿ ಕೊಡಗು ವಿದ್ಯಾಲಯದ ಎಂ.ರುಶೀಲ್, ಕೆ.ಪಿ ವರ್ಣಬೋಜಮ್ಮ, ಅರಮೇರಿ ಎಸ್.ಎಂ.ಎಸ್ ಶಾಲೆಯ ವಿ.ಎಸ್.ಅಮೃತ, ಎ.ಹೆಚ್.ಇಶಿತ ಕಾವೇರಮ್ಮ, ಚಾಮೆರ ನಕ್ಷ ದೇಚಮ್ಮ, ವಿರಾಜಪೇಟೆ ಕಾವೇರಿ ಶಾಲೆಯ ಪುಗ್ಗೆರ ಗದಿನ್ ಬೋಪಣ್ಣ, ಟಿ.ಡಿ.ಹಂಸಿಕ, ಮಡಿಕೇರಿ ಜ.ತಿಮ್ಮಯ್ಯ ಶಾಲೆಯ ಎಂ.ಕಾವೇರಿ ಮನೋಜ್, ಸಮನ್ವಿ ರಾವ್, ಬಿ.ಡಿ.ಕುಷಿ, ಕೆ.ವಿ.ಗ್ರೀಷ್ಮ , ಪಿ.ಪ್ರತಿಕ್ಷ, ಸಮನ್ವಿತ ಉತ್ತಮ್, ಜಿ.ವಿ.ಲಿಖಿತ್,…
ಬೆಳಗಾವಿ ಡಿ.19 NEWS DESK : ಆರೋಗ್ಯ ಸೇವೆಯಿಂದ ವಂಚಿತರಾಗಿರುವ ಜನರಿಗೆ ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕ ಯೋಜನೆ ನೆರವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಜಿಲ್ಲಾಡಳಿತ ಬೆಳಗಾವಿ ಜಿಲ್ಲಾ ಪಂಚಾಯತ್ ಇವರ ವತಿಯಿಂದ ಸುವರ್ಣ ಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಲಾಗಿದ್ದ ‘ಆರೋಗ್ಯ ಸೇತು ಸಂಚಾರಿ ಆರೋಗ್ಯ ಘಟಕ’ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಸಂಪರ್ಕ ರಹಿತ, ದುರ್ಗಮ ಮತ್ತು ಗುಡ್ಡಗಾಡು ಪ್ರದೇಶಗಳ ಜನರ ಮನೆಯ ಬಾಗಿಲಲ್ಲೆ ಆರೋಗ್ಯ ಸೇವೆ ನೀಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಹಿಂದೆ ಆ್ಯಂಬುಲೆನ್ಸ್ ಗಳ ಸೇವೆಗೆ 2.90 ಲಕ್ಷ ರೂ.ಗಳ ವೆಚ್ಚವಾಗುತ್ತಿತ್ತು. ಪ್ರಸ್ತುತ ಆರೋಗ್ಯ ಸೇತುವಿನ ಪ್ರತಿ ಘಟಕಕ್ಕೆ 1.60 ಲಕ್ಷ ರೂ. ವೆಚ್ಚವಾಗಲಿದ್ದು, ಪ್ರತಿ ಘಟಕದಲ್ಲಿ ವೈದ್ಯರು, ಶುಶ್ರೂಷಿಕಿಯರು, ತಂತ್ರಜ್ಞರ ಸೇವೆ ಇರಲಿದ್ದು, ರೋಗಿಗಳ ತಪಾಸಣೆ ಮತ್ತು ಚಿಕಿತ್ಸೆಗೆ ನೆರವಾಗಲಿದೆ ಎಂದರು. :: ಪ್ರತಿಯೊಬ್ಬರಿಗೂ ಗುಣಮಟ್ಟದ ಆರೋಗ್ಯ ಸೇವೆ ಸರ್ಕಾರದ ಗುರಿ :: …
ಉಡುಪಿ ಡಿ.19 NEWS DESK : ಶಿಕ್ಷಣ ಕ್ಷೇತ್ರದ ಮಹೋನ್ನತ ಗುರಿಯೊಂದಿಗೆ ಏಳು ಜನ ಅತ್ಯಂತ ಅನುಭವಿ ಉಪನ್ಯಾಸಕರುಗಳೇ ಸೇರಿ ಸ್ಥಾಪಿಸಿದ ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ 2022ರಲ್ಲಿ ತನ್ನ ಶಿಕ್ಷಣ ಸೇವೆಯನ್ನು ಉಡುಪಿಗೂ ವಿಸ್ತರಿಸುವ ಯೋಜನೆಯೊಂದಿಗೆ ಕಲ್ಯಾಣ ಪುರದ ತ್ರಿಶಾ ಪ.ಪೂ.ಕಾಲೇಜಿನ ಶೈಕ್ಷಣಿಕ ಸಹಭಾಗಿತ್ವ ವಹಿಸಿಕೊಂಡಿತು. ಈಗಾಗಲೇ ಪಿ.ಯು ಫಲಿತಾಂಶದಲ್ಲಿ ಆರಂಭಿಕ ವರ್ಷದಲ್ಲೇ ರಾಜ್ಯದ ಗಮನ ಸೆಳೆದ ಕ್ರಿಯೇಟಿವ್ ಸಂಸ್ಥೆ ಉಡುಪಿಯ ಶಾಖೆಯಲ್ಲೂ ಆ ಯಶಸ್ಸನ್ನು ಮುಂದುವರೆಸಿದೆ. ತನ್ನ ಪ್ರಥಮ ವರ್ಷದ ಫಲಿತಾಂಶದಲ್ಲೇ ಶೇ.100 ಗಳಿಸುವುದರ ಜೊತೆಗೆ ಪಿ.ಯು. ಪರೀಕ್ಷೆಯಲ್ಲಿ ರಾಜ್ಯಕ್ಕೆ 8ನೇ ರ್ಯಾಂಕ್ ಗಳಿಸುವ ಮೂಲಕ ಸಂಸ್ಥೆ ಕೀರ್ತಿ ಗಳಿಸಿದೆ. 94 ಮಕ್ಕಳೊಂದಿಗೆ ಪ್ರಾರಂಭವಾದ ವಿದ್ಯಾಸಂಸ್ಥೆಯಲ್ಲಿ ಇಂದು 400ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಕೇವಲ ಅಂಕ ಗಳಿಕೆಯ ಹಸಿವನ್ನು ಮಾತ್ರ ಬೆಳೆಸದೆ ಜೀವನ ಮೌಲ್ಯಗಳು, ನೈತಿಕತೆ, ಸದ್ವಿಚಾರಗಳನ್ನು ಪ್ರತಿನಿತ್ಯ ಬೋಧಿಸುತ್ತಿರುವುದು ಸಂಸ್ಥೆಯ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. :: ಉಡುಪಿಯಲ್ಲಿ ಕ್ರಿಯೇಟಿವ್ ಸಂಸ್ಥೆಯ ಯಶಸ್ಸಿನ ಪಯಣ ::…
ಮಡಿಕೇರಿ ಡಿ.19 NEWS DESK : ಇತಿಹಾಸದ ಘಟನೆಗಳನ್ನು ನೆನಪಿಸಿ, ಹೋರಾಟಗಾರರಿಗೆ ಗೌರವ ಸಲ್ಲಿಸುವ ಸಲುವಾಗಿ ಯುನೈಟೆಡ್ ಕೊಡವ ಆರ್ಗನೈಸೇಷನ್ ಯುಕೋ ಸಂಘಟನೆಯಿಂದ ’ನೆಪ್ಪ್‌ರ ನಳತ್ ಮಾಂಜತ ಮೊಟ್ಟ್’ (ನೆನಪಿನ ಅಂಗಳದಲ್ಲಿ ಮರೆಯದ ಹೆಜ್ಜೆ) ಕಾರ್ಯಕ್ರಮ ನಡೆಯಿತು. ಸ್ವಾತಂತ್ರ್ಯ ಮತ್ತು ಕೊಡಗು ‘ಫ್ಯೂಜನ್ ಆಫ್ ಹಿಸ್ಟರಿ, ಮ್ಯೂಸಿಕ್ ಅಂಡ್ ಪೇಟ್ರಿಯಾಟಿಸಮ್’ ಎಂಬ ಘೋಷವಾಕ್ಯದಲ್ಲಿ ನಗರದ ಕೋಟೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಸ್ಮರಿಸುವ ನಿಟ್ಟಿನಲ್ಲಿ ಭಾವಚಿತ್ರ ಪ್ರದರ್ಶನ ಗಮನ ಸೆಳೆಯಿತು. ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಕೊಡಗಿನ ನೂರಾರು ಹೋರಾಟಗಾರರ ಭಾವಚಿತ್ರವನ್ನು ಕೋಟೆಯೊಳಗೆ ಪ್ರದರ್ಶನಕ್ಕಿಡಲಾಗಿತ್ತು. ಇದರೊಂದಿಗೆ ಹೋರಾಟದ ಸಂದರ್ಭ ಕೊಡಗಿನಲ್ಲಾದ ಘಟನೆಗಳ ಅಪರೂಪದ ಛಾಯಾಚಿತ್ರಗಳು ವೀಕ್ಷಕರಲ್ಲಿ ರೋಮಾಂಚನ ಮೂಡಿಸಿತು. ಅಲ್ಲದೇ ಹೋರಾಟಗಾರರಿಗೆ ನುಡಿ ಹಾಗೂ ಗಾಯನದ ಮೂಲಕ ನಮನ ಸಲ್ಲಿಸಲಾಯಿತು. ಮಲ್ಲೇಂಗಡ ಚಂಗಪ್ಪ, ಪಂದ್ಯಂಡ ಬೆಳ್ಯಪ್ಪ, ಚೆಕ್ಕೆರ ಮೊಣ್ಣಯ್ಯ ಸೇರಿದಂತೆ ಸ್ವಾತಂತ್ರ್ಯಕ್ಕಾಗಿ ಜೀವ ಹಾಗೂ ಜೀವನ ತ್ಯಾಗ ಮಾಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜ.ತಿಮ್ಮಯ್ಯ ಶಾಲಾ ವಿದ್ಯಾರ್ಥಿಗಳು ನೃತ್ಯ ರೂಪಕದ ಮೂಲಕ…
ಕುಶಾಲನಗರ ಡಿ.19 NEWS DESK : ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸ್ಥಾನೀಯ ಸಮಿತಿಯ ವಾರ್ಷಿಕ ಮಹಾಸಭೆ ಡಿ.21 ರಂದು ಕುಶಾಲನಗರದಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಕೆ.ಎಸ್.ನಾಗೇಶ್ ತಿಳಿಸಿದ್ದಾರೆ. ಕುಶಾಲನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಧ್ಯಾಹ್ನ 3 ಗಂಟೆಗೆ ಕುಶಾಲನಗರ ಗೌಡ ಸಮಾಜದ ಮುಂಭಾಗ ಇರುವ ಪಾಳ್ಯಂ ಎಮರಾಲ್ಡ್ ಸಭಾಂಗಣದಲ್ಲಿ ಸಭೆ ನಡೆಯಲಿದೆ ಎಂದು ಹೇಳಿದರು. ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸ್ಥಾಪಕ ಪ್ರಧಾನ ಕಾರ್ಯದರ್ಶಿ ಟಿ.ಪಿ.ರಮೇಶ್ ವೇದಿಕೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಚೇಂಬರ್ ಜಿಲ್ಲಾ ಅಧ್ಯಕ್ಷರಾದ ಬಿ.ಆರ್.ನಾಗೇಂದ್ರ ಪ್ರಸಾದ್ ಮತ್ತು ಸಂಘಟನಾ ಕಾರ್ಯದರ್ಶಿ ಟಿ.ಆರ್.ಶರವಣಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು. ಈ ಸಂದರ್ಭ ಕುಶಾಲನಗರದಲ್ಲಿ ಚೇಂಬರ್ ಆರಂಭವಾಗಲು ಪ್ರಮುಖ ಕಾರಣಕರ್ತರಾದ ವಿ.ವಿ.ನಾಗೇಂದ್ರ ಹಾಗೂ ಸ್ಥಾಪಕ ಅಧ್ಯಕ್ಷರಾದ ಪಿ.ಪಿ.ಸತ್ಯನಾರಾಯಣ, ಸ್ಥಾಪಕ ಕಾರ್ಯದರ್ಶಿ ಬಿ.ಜಿ.ಅನಂತಶಯನ ಸೇರಿದಂತೆ ಇದುವರೆಗಿನ ಮಾಜಿ ಅಧ್ಯಕ್ಷರು ಮಾಜಿ ಕಾರ್ಯದರ್ಶಿಗಳನ್ನು ಗೌರವಿಸಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು. ಕುಶಾಲನಗರ ಚೇಂಬರ್ ಸದಸ್ಯರಾಗ ಬಯಸುವ ಉದ್ಯಮಿಗಳು ಮಹಾಸಭೆಗೆ…
ಮಡಿಕೇರಿ ಡಿ.19 NEWS DESK : “ತೆರೆದ ಮನೆ” ಪರಿಕಲ್ಪನೆಯಡಿ ಮಡಿಕೇರಿ ನಗರದ ಟಿಟ್ಟೂಸ್ ಶಾಲೆಯ ಮಕ್ಕಳನ್ನು ಮಡಿಕೇರಿ ಗ್ರಾಮಾಂತರ ಠಾಣೆಗೆ ಬರ ಮಾಡಿಕೊಂಡು ಠಾಣೆಯ ಕಾರ್ಯ ನಿರ್ವಹಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ತೋರಿಸಿಕೊಡಲಾಯಿತು.
ಮಡಿಕೇರಿ NEWS DESK ಡಿ.19 : ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ಮಹದೇಶ್ವರ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ ಡಿ.23 ರಿಂದ 28 ರವರೆಗೆ ವಿವಿಧ ಧಾರ್ಮಿಕ ಕೈಂಕರ್ಯಗಳೊAದಿಗೆ ಶ್ರದ್ಧಾಭಕ್ತಿಯಿಂದ ಜರುಗಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಕಟ್ಟೆಮನೆ ಶಶಿ ಜನಾರ್ಧನ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಾಲಯದಲ್ಲಿ ಆರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದ ವಿವಿಧ ಪೂಜಾ ವಿಧಿವಿಧಾನಗಳ ಕುರಿತು ಮಾಹಿತಿ ನೀಡಿದರು. ಡಿ.23 ರಂದು ಗಣಪತಿ ಹೋಮ, ಬ್ರಹ್ಮರಾಕ್ಷಸನಿಗೆ ನೈವೇದ್ಯ ಸಮರ್ಪಣೆ, ದುರ್ಗಾಪೂಜೆ, ಹೊರೆಕಾಣಿಕೆ ಸಮರ್ಪಣೆ, ಮಹಾಪೂಜೆ ಮತ್ತು ಧ್ವಜಾರೋಹಣ, ಡಿ.24 ಮತ್ತು 25 ರಂದು ನೈರ್ಮಲ್ಯ ಬಲಿ, ಧ್ವಜಸ್ತಂಭ ಪೂಜೆ, ಭೂತಬಲಿ ಹಾಗೂ ಮಹಾಪೂಜೆ ಜರುಗಲಿದೆ. ಡಿ.26 ರಂದು ತುಲಭಾರ ಸೇವೆ, ಧ್ವಜಸ್ತಂಭ ಪೂಜೆ, ನೃತ್ಯ ಬಲಿ, ವಸಂತ ಪೂಜೆ, ದೇವರ ಶಯನೋತ್ಸವ ಮತ್ತು ಮಹಾಪೂಜೆ ನಡೆಯಲಿದೆ. ಡಿ.27 ರಂದು ಕವಟ ಪೂಜೆ, ತೈಲಾಭ್ಯಂಜನ, ಪಂಚಭೂತ ಅಭಿಷೇಕ, ಧ್ವಜಸ್ತಂಭ…
ಮಡಿಕೇರಿ NEWS DESK ಡಿ.19 : ಅಕಾಲಿಕವಾಗಿ ನಿಧನರಾದ ಕಾರ್ಮಿಕರೊಬ್ಬರ ಪತ್ನಿಗೆ ಜಿಲ್ಲಾ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡಿಂಗ್ ಯೂನಿಯನ್ (ಎಸ್‌ಡಿಟಿಯು) ಸಂಘಟನೆಯು ಕಾರ್ಮಿಕ ಇಲಾಖೆಯಿಂದ ಸಹಾಯಧನವನ್ನು ದೊರಕಿಸಿ ಕೊಡುವ ಮೂಲಕ ಮಾನವೀಯತೆ ಮೆರೆದಿದೆ. ನಗರದ ತ್ಯಾಗರಾಜ ಕಾಲೋನಿಯ ನಿವಾಸಿ ಕಟ್ಟಡ ಕಾರ್ಮಿಕರ ಮಹಮದ್ ಅಲಿ ಅವರು ಕಳೆದ ಒಂದು ವರ್ಷದ ಹಿಂದೆ ಅಕಾಲಿಕವಾಗಿ ನಿಧನಹೊಂದಿದ್ದರು.ಅವರ ಪತ್ನಿ ಅಸೀನ ಅವರಿಗೆ ಕಾರ್ಮಿಕ ಇಲಾಖೆಯಿಂದ ನೀಡಲಾಗುವ ಮೃತ ಪಟ್ಟವರ ಕಟುಂಬಕ್ಕೆ ನಿಡಲಾಗುವ ಸಹಾಯಧನ ಲಭ್ಯವಾಗಿರಲಿಲ್ಲ. ಈ ಹಿನ್ನೆಲೆ ಕೊಡಗು ಜಿಲ್ಲಾ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡಿಂಗ್ (ಎಸ್‌ಡಿಟಿ) ಸಂಘಟನೆ ಸಂಬಂಧಿಸಿದ ಕಾರ್ಮಿಕ ಇಲಾಖೆಯ ಅಧಿಕಾರಿಗಳನ್ನು ನಿರಂತರವಾಗಿ ಸಂಪರ್ಕಿಸಿ, ಇಲಾಖೆಯ ಸಹಾಯಧನವನ್ನು ತೋಟ ಕಾರ್ಮಿಕರಾದ ಅಸೀನ ಅವರಿಗೆ ದೊರಕಿಸಿ ಕೊಡುವಲ್ಲಿ ಯಶಸ್ವಿಯಾಗಿದೆ. ಈ ಮಾನವೀಯ ಕಾರ್ಯದಲ್ಲಿ ಸಂಘಟನೆಗೆ ಸಹಕಾರ ನೀಡಿದ ಕಾರ್ಮಿಕ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು ಹಾಗೂ ಮಡಿಕೇರಿಯ ಕಾರ್ಮಿಕ ನಿರೀಕ್ಷಕರಾದ ಯತ್ನಟ್ಟಿ ಮತ್ತು ಝರೀನಾ, ಕಾರ್ಮಿಕ ಇಲಾಖೆಯ ಎಲ್ಲಾ ಅಧಿಕಾರಿ ವೃಂದ ಹಾಗೂ ಸಿಬ್ಬಂದಿಗಳಿಗೆ…
ಮಡಿಕೇರಿ ಡಿ.19 NEWS DESK : ಕೊಡಗು ಜಿಲ್ಲೆಯ ಮರಗೋಡುವಿನಲ್ಲಿ ಹಿಂದೂ ರುದ್ರ ಭೂಮಿ ಸ್ಥಾಪನ ಸಮಿತಿ ಹಾಗೂ ಮರಗೋಡು ಗ್ರಾಮ ಪಂಚಾಯಿತಿಯ ಸಹಕಾರದೊಂದಿಗೆ ನಿರ್ಮಿಸಲಾದ ನೂತನ ಹಿಂದೂ ರುದ್ರಭೂಮಿಯನ್ನು ಅಧಿಕೃತವಾಗಿ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗಿದೆ. ಸ್ಥಳೀಯ ಗ್ರಾಮಸ್ಥರು ಹಲವು ವರ್ಷಗಳಿಂದ ವ್ಯಕ್ತಪಡಿಸುತ್ತಿದ್ದ ಅಗತ್ಯ ಮತ್ತು ಕೋರಿಕೆಯ ಹಿನ್ನೆಲೆಯಲ್ಲಿ ಈ ಮಹತ್ವದ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಈವರೆಗೆ ಅಂತ್ಯಸಂಸ್ಕಾರ ನೆರವೇರಿಸಲು ಸಮರ್ಪಕ ಸ್ಥಳದ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದ ಗ್ರಾಮಸ್ಥರಿಗೆ ಇದೀಗ ಶಾಶ್ವತ ಪರಿಹಾರ ದೊರೆತಿದೆ. ನೂತನ ರುದ್ರ ಭೂಮಿಯಲ್ಲಿ ಸಂಸ್ಕಾರ ವೇದಿಕೆ, ಮೂಲಭೂತ ಸೌಕರ್ಯ, ರಸ್ತೆ ಸಂಪರ್ಕ, ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವ ಯೋಜನೆಯೂ ಇದೆ. ಕಾರ್ಯಕ್ರಮದಲ್ಲಿ ಮರಗೋಡುವು ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಹಿಂದೂ ರುದ್ರ ಭೂಮಿ ಸ್ಥಾಪನ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ…






