ಲೇಖಕ: admin

ಮಡಿಕೇರಿ ನ.17 NEWS DESK : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಹಿರಿಯ ನಾಗರಿಕರಿಗಾಗಿ ಕೇಂದ್ರ ಪ್ರಾಯೋಜಿತ ಅಟಲ್ ವಯೋ ಅಭ್ಯುದಯ ಯೋಜನೆಯಡಿ ಕೇಂದ್ರ ಸರ್ಕಾರದ ಸ್ಟೇಟ್ ಆಕ್ಷನ್ ಪ್ಲಾನ್ ಫಾರ್ ಸೀನಿಯರ್ ಸಿಟಿಜನ್ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಸಲುವಾಗಿ ಕಾನೂನು ಸೇವಾ ಸಮಿತಿ ಸಹಯೋಗದಲ್ಲಿ ಹಿರಿಯ ನಾಗರಿಕರ ಕಾಯ್ದೆ 2007, ಹಿರಿಯ ನಾಗರಿಕರ ಆಸ್ತಿ ಸಂರಕ್ಷಣೆ, ಹಿರಿಯ ನಾಗರಿಕರಿಗೆ ಇರುವ ಸೌಲಭ್ಯಗಳ ಕುರಿತಾಗಿ ಸಾರ್ವಜನಿಕರಿಗೆ ಕಾನೂನು ಅರಿವು ಮತ್ತು ನೆರವು ಶಿಬಿರ ಕಾರ್ಯಕ್ರಮವು ವಿರಾಜಪೇಟೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನವೆಂಬರ್, 18 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ವಿರಾಜಪೇಟೆ ತಾಲ್ಲೂಕಿನ ಹಿರಿಯ ನಾಗರಿಕರು ಕಾರ್ಯಕ್ರಮಕ್ಕೆ ಹಾಜರಾಗಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವರು ತಿಳಿಸಿದ್ದಾರೆ.

Read More

ಗೋಣಿಕೊಪ್ಪ ನ.17 NEWS DESK : ಭಗವಾನ್ ಬಿರ್ಸಾ ಮುಂಡಾ ಅವರ 151ನೇ ಜಯಂತಿಯನ್ನು ತಿತಿಮತಿ ಸಮುದಾಯ ಭವನದಲ್ಲಿ ಆಚರಿಸಲಾಯಿತು. ಆದಿವಾಸಿಗಳು ಮರೂರು ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯ ಮುಂಭಾಗದಿಂದ ತಿತಿಮತಿ ಶಾಲೆಯವರೆಗೆ ಮೆರವಣಿಗೆ ನಡೆಸಿ ಬಿರ್ಸಾಮುಂಡಾ ಜಯಂತಿಯ ಬಗ್ಗೆ ಜನರಿಗೆ ಅರಿವು ಮೂಡಿಸಿದರು. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ತಾಲೂಕು ಪಂಚಾಯಿತಿ ವಿವಿಧ ಆದಿವಾಸಿ ಬುಡಕಟ್ಟು ಸಂಘಗಳ ಆಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನಂತರ ಬುಡಕಟ್ಟು ಸಮುದಾಯದ ಸಂಸ್ಕøತಿಗಳನ್ನ ಅನಾವರಣಗೊಳಿಸಲಾಯಿತು. ಕಾರ್ಯಕ್ರಮವನ್ನು ವಿರಾಜಪೇಟೆ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುμÁ್ಠನ ಸಮಿತಿ ಅಧ್ಯಕ್ಷ ಜಾನ್ಸನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ತನ್ನ ಸಣ್ಣ ಪ್ರಾಯದಲ್ಲೇ ಬಿರ್ಸಾಮುಂಡಾ ಬ್ರಿಟಿಷರ ವಿರುದ್ಧ ಹೋರಾಡಿ ತನ್ನ ಸಮುದಾಯದ ಉಳಿವಿಗಾಗಿ ಶ್ರಮಿಸಿದ ಜೀವಿ. ಆತನ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಅಗತ್ಯತೆ ಇದೆ. ಬ್ರಿಟಿಷರ ಕ್ರೈಸ್ತ ಪಾದ್ರಿಗಳಾಗಿ ಬುಡಕಟ್ಟು ಸಮುದಾಯವನ್ನು ಮತಾಂತರ ಮಾಡುವ ಹುನ್ನಾರದ ವಿರುದ್ದ ಹೋರಾಡಿದ ವೀರ. ಆತನ ನಡೆ ನುಡಿಗಳು ಮತ್ತು ಸಾಹಸ…

Read More

ಸುಂಟಿಕೊಪ್ಪ NEWS DESK ನ.17 : ಸಹಕಾರ ಕ್ಷೇತ್ರದಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ನಿರ್ದೇಶಕರುಗಳ ಆಯ್ಕೆಗೆ ಕೂಡ ಮೀಸಲಾಯಿತಿಯನ್ನು ಅಳವಡಿಸಿದಲ್ಲಿ ಅದು ಸಹಕಾರ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಅಲ್ಲದೆ ಸಹಕಾರಿ ಕ್ಷೇತ್ರ ಕುಂಠಿತಗೊಳ್ಳಲು ಕಾರಣವಾಗುತ್ತದೆ ಎಂದು ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ.ಪಿ.ಬಾಂಡ್ ಗಣಪತಿ ಹೇಳಿದ್ದಾರೆ. 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸಹಕಾರ ಸಂಸ್ಥೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಯ ಬಲವರ್ಧನೆ ದಿನಾಚರಣೆಯು ಸುಂಟಿಕೊಪ್ಪದ ಮಂಜುನಾಥಯ್ಯ ಸಹಕಾರ ಭವನದಲ್ಲಿ  ಭಾನುವಾರದಂದು ನಡೆಯಿತು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮಡಿಕೇರಿ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಮಡಿಕೇರಿ ಸಹಕಾರ ಇಲಾಖೆ ಕೊಡಗು ಜಿಲ್ಲೆ ಸುಂಟಿಕೊಪ್ಪ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಮತ್ತು ಸುಂಟಿಕೊಪ್ಪ ಮಹಿಳಾ ಸಹಕಾರ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿಗಳಿಗೆ ಸನ್ಮಾನಿಸಿ ಮಾತನಾಡಿದ ಅವರು  ಸಹಕಾರ ಕ್ಷೇತ್ರ ಏಕಸೇವಾ ಕ್ಷೇತ್ರವಾಗಿ…

Read More

ಮಡಿಕೇರಿ NEWS DESK ನ.16 : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಅತ್ಯುತ್ತಮ ವಿದ್ಯಾ ಸಂಸ್ಥೆಯಾಗಿದ್ದು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟಕ್ಕೆ ಸಾಕಷ್ಟು ಸಾಧಕರನ್ನು ನೀಡಿದೆ. ಈ ಕಾಲೇಜ್ ನ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಹಳೇ ವಿದ್ಯಾರ್ಥಿ ಸಂಘ ಆಂದೋಲನದ ರೂಪದಲ್ಲಿ ಶ್ರಮ ವಹಿಸಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು ಕರೆ ನೀಡಿದ್ದಾರೆ. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜ್ ನಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷ ಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊಡಗು ಪ್ರಾಕೃತಿಕವಾಗಿ ಅತ್ಯಂತ ಶ್ರೀಮಂತ ಮತ್ತು ಮನೋಹರವಾದ ಜಿಲ್ಲೆಯಾಗಿದ್ದು, ಇಲ್ಲಿನ ಜನರ ಸೃಜನಶೀಲತೆ ರಕ್ತಗತವಾಗಿ ಬಂದಿದೆ. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಬಹಳ ಹಿಂದಿನಿಂದಲೂ ಅತ್ಯಂತ ಹೆಸರು ಮಾಡಿದ ವಿದ್ಯಾಸಂಸ್ಥೆಯಾಗಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ದೇಶಕ್ಕೆ ಕೊಡುಗೆ ನೀಡಿದ್ದಾರೆ. ಕಾಲೇಜು ಇಂದು ನೋವಿನಲ್ಲಿರುವಾಗ ಕಾಲೇಜ್ ನ ಅಭಿವೃದ್ಧಿಗೆ…

Read More

ಮಡಿಕೇರಿ NEWS DESK ನ.16 : ಬ್ಲೂ ಬ್ಯಾಂಡ್ ಎಫ್‌ಎಂ ಎಸ್‌ಸಿಐ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್ ಶಿಪ್ ನೇತೃತ್ವದಲ್ಲಿ ರೋಬಸ್ಟಾ ಸ್ಪೋರ್ಟ್ಸ್ ಅಂಡ್ ಅಡ್ವೆಂಚರ್ ಅಕಾಡೆಮಿ ಸಹಕಾರದೊಂದಿಗೆ ರೋಬಸ್ಟಾ 2025 ರ‍್ಯಾಲಿ ಪಾಲಿಬೆಟ್ಟ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಕಡಿದಾದ ರಸ್ತೆಯಲ್ಲಿ ನಡೆಯಿತು. ಕರ್ನಾಟಕ, ತಮಿಳುನಾಡು, ಆಂಧ್ರ, ಕೇರಳ, ಮಹಾರಾಷ್ಟ್ರ, ಗೋವಾ, ಪೂನಾ, ಚಂಡೀಗಡ್, ಕಲ್ಕತ್ತಾ ಸೇರಿದಂತೆ ವಿವಿಧ ರಾಜ್ಯಗಳ 58 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಪ್‌ನ ಮೂರನೇ ಸುತ್ತಿನ ಸ್ಪರ್ಧೆ ಟಾಟಾ ಕಾಫಿ ಸಂಸ್ಥೆಯ ಕಾಫಿ ಎಸ್ಟೇಟ್‌ನಲ್ಲಿ ನಡೆಯಿತು. ಕೊಡಗಿನಲ್ಲಿ ಸತತ ಮೂರನೇ ಬಾರಿಗೆ ನಡೆದ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್ ಶಿಪ್‌ನ ಜವಾಬ್ದಾರಿಯನ್ನು ತಿಮ್ಮಣ್ಣ, ಮಾಚಯ್ಯ ಮ್ಯಾಕ್ಸ್, ಸೋಮಣ್ಣ ಮತ್ತಿತರರು ವಹಿಸಿಕೊಂಡಿದ್ದರು. ಮೊದಲನೇ ದಿನದಲ್ಲಿ ಸಂಚರಿಸಿದ 58 ಕಾರುಗಳ ಪೈಕಿ 10ಕ್ಕೊ ಹೆಚ್ಚು ಕಾರುಗಳು ತಾಂತ್ರಿಕ ದೋಷ ಅನುಭವಿಸಿದವು. ಜಿಲ್ಲೆಯ ಸುತ್ತಮುತ್ತಲ ಸಾರ್ವಜನಿಕರು, ಕ್ರೀಡಾಪಟುಗಳು, ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರ‍್ಯಾಲಿಪಟುಗಳನ್ನು ಹುರಿದುಂಬಿಸಿದರು. ಸವಾಲಿನೊಂದಿಗೆ ಗುರಿ…

Read More

ಮಡಿಕೇರಿ NEWS DESK ನ.16 : ಕಾಳು ಮೆಣಸು ಕಳ್ಳತನದ ಆರೋಪದಡಿ ಬಂಧಿತನಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿಯೊಬ್ಬ ತನ್ನ ಪತ್ನಿಗೆ ಲೈವ್ ವಿಡಿಯೋ ಮಾಡಿ ನೇಣಿಗೆ ಶರಣಾಗಿರುವ ಘಟನೆ ಮಡಿಕೇರಿ ತಾಲ್ಲೂಕಿನ ಬೋಯಿಕೇರಿ ಗ್ರಾಮದಲ್ಲಿ ನಡೆದಿದೆ. ಕಿಬ್ಬೆಟ್ಟ ಗ್ರಾಮದ ಕೀರ್ತಿ (32) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾನೆ. ಮಡಿಕೇರಿ ತಾಲ್ಲೂಕಿನ ಬೋಯಿಕೇರಿ ಸಮೀಪದ ತೋಟವೊಂದಕ್ಕೆ ಹೋದ ಕೀರ್ತಿ ಊರಿನಲ್ಲಿದ್ದ ಪತ್ನಿಗೆ ಲೈವ್ ವಿಡಿಯೋ ಮಾಡಿ ಮನೆಗೆ ಬರುವಂತೆ ಕರೆದಿದ್ದಾನೆ. ಆಕೆ ಬರಲು ಒಪ್ಪದೆ ಇದ್ದಾಗ ಮರದಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ಹೇಳಲಾಗಿದೆ. ಯಡವಾರೆ ಗ್ರಾಮದ ಕಾಫಿ ತೋಟದಲ್ಲಿ ನಡೆದಿದ್ದ ಕಾಳು ಮೆಣಸು ಕಳ್ಳತನ ಪ್ರಕರಣದ ಆರೋಪಿಯಾಗಿದ್ದ ಕೀರ್ತಿ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Read More

ಮಡಿಕೇರಿ NEWS DESK ನ.16 : ಕುಶಾಲನಗರ ಸಮೀಪದ ಅತ್ತೂರಿನ ಜ್ಞಾನಗಂಗಾ ವಸತಿ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಸಂಭ್ರಮದಿಂದ ನಡೆಯಿತು. ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅಂತರಾಷ್ಟ್ರೀಯ ಮಟ್ಟದ ಖೋಖೋ ಕ್ರೀಡಾಪಟು ಚೈತ್ರ ಬಿ. ಅವರು ತಮ್ಮ ಕ್ರೀಡಾಕ್ಷೇತ್ರದ ಯಶೋಗಾಥೆಯನ್ನು ವಿವರಿಸಿದರು. ಸಾಧನೆ ಮಾಡುವಾಗ ಎಡರುತೊಡರುಗಳು ಎದುರಾಗುವುದು ಸಹಜ, ಅವುಗಳನ್ನೆಲ್ಲ ಮೀರಿ ಗುರಿ ಸಾಧನೆಯ ಕಡೆಗೆ ಸಾಗಬೇಕು. ವಿದ್ಯಾರ್ಥಿಗಳಲ್ಲಿರುವ ಕ್ರೀಡಾಸಕ್ತಿಯನ್ನು ಶಿಕ್ಷಕರು ಗುರುತಿಸಿ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಶಿಕ್ಷಣದ ಜೊತೆಗೆ ಕ್ರೀಡೆ ಕೂಡ ಜೀವನದಲ್ಲಿ ಬಹಳ ಮುಖ್ಯವಾಗಿದೆ ಎಂದರು. ಜ್ಞಾನಗಂಗಾ ವಸತಿ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಟಿ.ಕೆ.ಸುಧೀರ್ ಅವರು ಮಾತನಾಡಿ ಆರೋಗ್ಯವೇ ಭಾಗ್ಯ, ಉತ್ತಮ ಆರೋಗ್ಯ ಮತ್ತು ದೈಹಿಕ ಸದೃಢತೆ ನಮ್ಮದಾಗಬೇಕಾದರೆ ಕ್ರೀಡೆ ಅತೀ ಅವಶ್ಯಕ ಎಂದು ಅಭಿಪ್ರಾಯಪಟ್ಟರು. ಪ್ರಸ್ತುತ ದಿನಗಳಲ್ಲಿ ಮಕ್ಕಳು ಟಿವಿ ಮತ್ತು ಮೊಬೈಲ್ ಗಳಲ್ಲಿ ಬರುವ ಆಟಗಳನ್ನು ಹೆಚ್ಚೆಚ್ಚು ಆಡುತ್ತಾರೆ. ಇಂತಹ ಆಟಗಳನ್ನು ಆಡುವುದರಿಂದ ಮಕ್ಕಳ ಮಾನಸಿಕ ಆರೋಗ್ಯ ಕುಗ್ಗುತ್ತದೆ. ಮೈದಾನದಲ್ಲಿ ಆಡುವ ಕ್ರೀಡೆಗಳಿಂದ ದೈಹಿಕ…

Read More

ಮಡಿಕೇರಿ NEWS DESK ನ.16 : ಭಾಗಮಂಡಲದ ಜಾನ್ ಡ್ಯಾನ್ಸ್ ಗ್ಯಾಲರಿ ನೃತ್ಯ ತರಬೇತಿ ಸಂಸ್ಥೆ ಮತ್ತು ಚೈನೀಸ್ ಕೆನ್ ಪೊ ಕರಾಟೆ ಸಂಸ್ಥೆಯ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಭಾಗಮಂಡಲದಲ್ಲಿ ಕನ್ನಡ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗಾಗಿ ನಡೆದ ಕಿರುಭಾಷಣ ಸ್ಪರ್ಧೆಯಲ್ಲಿ ಜಿತಿಕಾ ಹೆಚ್.ಎಂ, ಸ್ಪರ್ಷ ಹೆಚ್.ಜಿ, ವಿದ್ಯಾ ಎಂ.ಪಿ, ಡಿಂಪಾ ಎಂ.ಡಿ, ಜೆಶಿಕಾ ಪಿ.ಬಿ ಹಾಗೂ ಜನ್ಯ ಬಿ.ಸಿ ಕನ್ನಡ ನಾಡುನುಡಿಯ ಬಗ್ಗೆ ಭಾಷಣವನ್ನು ಪ್ರಸ್ತುತಪಡಿಸಿ ಬಹುಮಾನ ಪಡೆದರು. ಜಾನ್ ಡ್ಯಾನ್ಸ್ ಗ್ಯಾಲರಿ ಸಂಸ್ಥೆಯ ವಿದ್ಯಾರ್ಥಿಗಳು ನೃತ್ಯದ ಮೂಲಕ ಕನ್ನಡ ನಾಡಿನ ವರ್ಣನೆಯನ್ನು ಮಾಡಿದರು. ನೃತ್ಯ ಮತ್ತು ಕರಾಟೆ ತರಬೇತುದಾರರಾದ ಪೃಥ್ವಿ ನಾಯಕ್, ಬೃಂದಾ ಕವನ್, ಇಮ್ಯಾನ್ವುಲ್ ಕೆ.ಜೆ, ರಾಯ್ ಜೋಸೆಫ್ ಹಾಗೂ ನಾಗರಾಜ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶ ನೀಡಿದರು.

Read More

ಮಡಿಕೇರಿ NEWS DESK ನ.16 : ವಿರಾಜಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ತಾಲ್ಲೂಕು ಮಟ್ಟದ ಅಥ್ಲೆಟಿಕ್ಸ್ ಪಂದ್ಯಾವಳಿಯ ವಿವಿಧ ಆಟೋಟಗಳಲ್ಲಿ ವಿರಾಜಪೇಟೆಯ  ಕಾವೇರಿ ಶಾಲೆಯ ಪ್ರೌಢಶಾಲಾ ಮತ್ತು ಪ್ರಾಥಮಿಕ  ವಿಭಾಗದ  ವಿದ್ಯಾರ್ಥಿಗಳು  ಸ್ಪರ್ಧಿಸಿ ಪದಕಗಳನ್ನು ಗೆದ್ದಿದ್ದಾರೆ. 200 ಮೀ ಓಟದ ಸ್ಪರ್ಧೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಬೊವ್ವೇರಿಯಂಡ ಹನ್ಸಿಕಾ ಪೊನ್ನಪ್ಪ ಚಿನ್ನದ ಪದಕ , 400 ಮೀ ಓಟದ ಸ್ಪರ್ಧೆಯಲ್ಲಿ  9ನೇ ತರಗತಿ ವಿದ್ಯಾರ್ಥಿನಿ  ಕರ್ನಂಡ ಕೃತಿಕಾ  ಅಕ್ಕಮ್ಮ ಚಿನ್ನದ ಪದಕ,400 ಮೀ ಓಟದ ಸ್ಪರ್ಧೆಯಲ್ಲಿ 8ನೇ  ತರಗತಿಯ ವಿದ್ಯಾರ್ಥಿನಿ ಕರ್ನಂಡ ಶತಕ ಕಾವೇರಮ್ಮ  ಬೆಳ್ಳಿ ಪದಕ, 400 ಮೀ ಓಟದ ಸ್ಪರ್ಧೆಯಲ್ಲಿ  ನಡುಮನೆ ಮೋಕ್ಷಿತ ಕಂಚಿನ ಪದಕ,   600 ಮೀ ಓಟದ ಸ್ಪರ್ಧೆಯಲ್ಲಿ 7ನೇ ತರಗತಿ ಹಿತಾರ್ಥ ಕಂಚಿನ ಪದಕ, 4×400 ಮೀ ರಿಲೇ ಪಂದ್ಯಾಟದಲ್ಲಿ ಕರ್ನಂಡ ಕೃತಿಕಾ ಅಕ್ಕಮ್ಮ, ಬೊವ್ವೇರಿಯಂಡ ಹನ್ಸಿಕಾ ಪೊನ್ನಪ್ಪ, ಕರ್ನಂಡ ಶತಕ ಕಾವೇರಮ್ಮ, ಕುಲ್ಲಚಂಡ ಭೂಮಿಕ ಬೋಜಮ್ಮ  ಒಳಗೊಂಡ ತಂಡ …

Read More

ಮಡಿಕೇರಿ NEWS DESK ನ.15 : ಕೊಡವ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಮಡಿಕೇರಿ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ನಾಲ್ಕನೇ ವರ್ಷದ ಐಪಿಎಲ್ ಮಾದರಿಯ ಕೊಡವ ಪ್ರೀಮಿಯರ್ ಲೀಗ್ ಸೀಸನ್-4 ಟೆನ್ನಿಸ್ ಬಾಲ್ ಕ್ರಿಕೆಟ್ ನ ಎರಡನೇ ದಿನದ ಪಂದ್ಯಾವಳಿ ರೋಚಕವಾಗಿ ನಡೆಯಿತು. *ಫಲಿತಾಂಶ ಇಲ್ಲಿದೆ*

Read More