ಮಡಿಕೇರಿ ಆ.25 NEWS DESK : ಬಾಳೆಲೆ ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘದ ನೂತನ ಕಟ್ಟಡವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ಬಳಿಕ ಮಾತನಾಡಿದ ಶಾಸಕರು, ಸಹಕಾರ ಸಂಘಗಳು ರೈತರ ಹಾಗೂ ನಾಡಿನ ಆರ್ಥಿಕ ಅಭಿವೃದ್ಧಿಗೆ ಬಹುದೊಡ್ಡ ಕೊಡುಗೆ ನೀಡುತ್ತಿವೆ. ನೂತನ ಕಟ್ಟಡದಲ್ಲಿ, ಪ್ರಸ್ತುತ ಸಂಘವು ಮತ್ತಷ್ಟು ಯಶಸ್ಸನ್ನು ಕಾಣುತ್ತಾ ಲಾಭದೊಂದಿಗೆ ಈ ಭಾಗದ ಎಲ್ಲಾ ರೈತರ ಶ್ರೇಯೋಭಿವೃದ್ಧಿಗೆ ಕೊಡುಗೆ ನೀಡುವಂತಾಗಲಿ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಸಂಸದರಾದ ಯದುವೀರ್ ಒಡೆಯರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಬಾಂಡ್ ಗಣಪತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾನಂಡ ಪೃಥ್ವಿ, ಬಾಳಲೆ ವಲಯ ಅಧ್ಯಕ್ಷ ಕೋದಂಡ ಸೋಮಣ್ಣ, ಬಾಳಲೆ ಪಂಚಾಯಿತಿ ಅಧ್ಯಕ್ಷ ಸ್ಮಿತಾ ಪೊನ್ನಪ್ಪ, ಬಾಳಲೆ ಪಂಚಾಯಿತಿಯ ಮಾಜಿ ಸದಸ್ಯ ವಿನು ಉತ್ತಪ್ಪ, ನಿಟ್ಟೂರು ವಲಯ ಅಧ್ಯಕ್ಷರಾದ ಪವನ್, ಪಂಚಾಯಿತಿ ಅಧ್ಯಕ್ಷರಾದ ಅಮುಣಿ, ಸದಸ್ಯ ಅಪ್ಪಣ್ಣ, ಪೊನ್ನಪ್ಪಸಂತೆ ವಲಯ ಅಧ್ಯಕ್ಷ ಚೆಟ್ಟಿಮಾಡ ರಾಬಿನ್ ಬೋಪಣ್ಣ,…
ಲೇಖಕ: admin
ಬೆಂಗಳೂರು ಆ.25 NEWS DESK : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ 2025-26ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಾಗೃತ ಹಾಗೂ ಉಸ್ತುವಾರಿ ಸಮಿತಿ ಸಭೆ ನಡೆಸಿ, ಪ್ರಗತಿ ಪರಿಶೀಲನೆ ನಡೆಸಿದರು. ಸಚಿವರಾದ ಹೆಚ್.ಕೆ.ಪಾಟೀಲ್, ಹೆಚ್.ಸಿ.ಮಹದೇವಪ್ಪ, ಆರ್.ಬಿ.ತಿಮ್ಮಾಪುರ ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಮಡಿಕೇರಿ ಆ.25 NEWS DESK : ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ನ ಕೊಡಗು ಶಾಖೆ ವತಿಯಿಂದ ರಾಜ್ಯಮಟ್ಟದ ಕ್ರೀಡೋತ್ಸವ ನಡೆಯಿತು. ನಗರದ ಜಿಲ್ಲಾ ಒಳಂಗಾಣ ಕ್ರೀಡಾಂಗಣದಲ್ಲಿ ಪಂದ್ಯಾವಳಿಯಲ್ಲಿ ರಾಜ್ಯದ ವಿವಿಧಡೆಯಿಂದ ಆಗಮಿಸಿದ 50ಕ್ಕೂ ಹೆಚ್ಚಿನ ವೈದ್ಯರು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ್ದರು. ವೈದ್ಯರಿಗಾಗಿ ಶಟಲ್ ನಲ್ಲಿ ಪುರುಷರು, ಮಹಿಳೆಯರು, ವಿದ್ಯಾರ್ಥಿಗಳ ವಿಭಾಗ ಹಾಗೂ ಸಂಘಟಿತ ವಿಭಾಗದಲ್ಲಿ ಕ್ರೀಡಾಸ್ಪಧೆ೯ಗಳು ಜರುಗಿದವು. ಇದರೊಂದಿಗೆ ಚೆಸ್ ಹಾಗೂ ಕೇರಂ ಸ್ಪರ್ಧೆಗಳು ಕೂಡ ಆಯೋಜಿಸಲ್ಪಟ್ಟಿದ್ದವು. ಅ.18 ನಡೆಯಲಿರುವ ಬೆಳ್ಳಿ ಹಬ್ಬದ ಆಚರಣೆಯಂದು ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಲಿದೆ.
ಮಡಿಕೇರಿ ಆ.25 NEWS DESK : ಸಾಹಿತ್ಯ ಕೃತಿಗಾಗಿ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಕೆ.ಬಿ.ಸೂಯ೯ಕುಮಾರ್ ಮತ್ತು ವೃತ್ತಿ ಜೀವನದ ಸಾಧನೆಗಾಗಿ ಪ್ರಶಸ್ತಿಗೆ ಭಾಜನರಾದ ಡಾ.ರವಿ ಅಪ್ಪಾಜಿ ಅವರನ್ನು ಭಾರತೀಯ ಮೆಡಿಕಲ್ ಅಸೋಸಿಯೇಷನ್ ನ ಕೊಡಗು ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮಂಗಳಮುಖಿಯ ಜೀವನಗಾಥೆಯಾದ ಮಂಗಳಿ ಕೖತಿಗಾಗಿ ರಾಜ್ಯ ವೈದ್ಯ ಬರಹಗಾರರ ಸಂಘದಿಂದ ಪ್ರಶಸ್ತಿ ಪಡೆದ ಮಡಿಕೇರಿಯ ಡಾ.ಕೆ.ಬಿ.ಸೂಯ೯ಕುಮಾರ್ ಮತ್ತು ರಾಜ್ಯಮಟ್ಟದ ಹೆಲ್ತ್ ಕೇರ್ ಪ್ರಶಸ್ತಿ ಪಡೆದ ಮಡಿಕೇರಿಯ ಡಾ. ರವಿ ಅಪ್ಪಾಜಿ ಅವರನ್ನು ಭಾರತೀಯ ಮೆಡಿಕಲ್ ಅಸೋಸಿಯೇಷನ್ ನ ಕೊಡಗು ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಶ್ರೀಯುತರ ಸಾಧನೆ ಮತ್ತಷ್ಟು ಹೆಚ್ಚಲಿ ಎಂದು ಹಾರೈಸಲಾಯಿತು. ಭಾರತೀಯ ಮೆಡಿಕಲ್ ಅಸೋಸಿಯೇಷನ್ ನ ಕೊಡಗು ಘಟಕದ ಅಧ್ಯಕ್ಷ ಡಾ.ಶಾಮ್ ಅಪ್ಪಣ್ಣ, ಡಾ.ಪಾತಿಮ, ಡಾ. ಕೆ.ಬಿ.ಮುತ್ತಪ್ಪ ಮತ್ತು ಸಂಘದ ಜಿಲ್ಲಾ ಪ್ರಧಾನ ಕಾಯ೯ದಶಿ೯ ಡಾ. ಸಿ.ಆರ್.ಪ್ರಶಾಂತ್ ಅವರು ಸಾಧಕ ವೈದ್ಯರನ್ನು ಗೌರವಿಸಿದರು. ಕಾಯ೯ಕ್ರಮದಲ್ಲಿ ಮೈಸೂರಿನ ನಾರಾಯಣ ಹೖದಯಾಲಯದ ತಜ್ಞ ವೈದ್ಯರಾದ ಡಾ.ಲೇಪಾಕ್ಷಿ, ಡಾ. ವಿದ್ಯಾ,…
ಮಡಿಕೇರಿ ಆ.25 NEWS DESK : ಮಡಿಕೇರಿ ನಗರದ ಚೈನ್ ಗೇಟ್ ನ ಶ್ರೀ ವಿದ್ಯಾ ವಿನಾಯಕ ಯುವಕ ಮಂಡಳಿಯ 18ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಹಿರಿಯರಿಗೆ ಹಾಗೂ ಕಿರಿಯರಿಗೆ ಕ್ಯಾರಮ್ ಬೋರ್ಡ್ ಹಾಗೂ ಚೆಸ್ ಪಂದ್ಯಾವಳಿ ನಡೆಯಿತು. ಡಾ.ಕೆ.ಬಿ.ಸೂರ್ಯ ಕುಮಾರ್ ಅವರು ಪಂದ್ಯಾವಳಿಯನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಈ ಸಂದರ್ಭ ಮಡಿಕೇರಿ ಮೂಡ ಸದಸ್ಯ ಆರ್.ಪಿ.ಚಂದ್ರಶೇಖರ್, ಸಂಘದ ಅಧ್ಯಕ್ಷರಾದ ರಾಹುಲ್, ರಾಘವೇಂದ್ರ, ಮಧುಗೌಡ, ಸಚಿನ್, ಸುನಿಲ್, ಲೋಕೇಶ್ ಎಸ್, ಆರ್.ಸಿ.ಗೌರವ್, ಬಿ.ಬಿ.ದರ್ಶನ್ , ಪ್ರಶಾಂತ್, ಪುನೀತ್ ಕುಮಾರ್, ಯತೀಶ್ ರಂಜಿತ್ ಹಾಗೂ ರಾಜೇಶ್ ಮತ್ತು ಸಂಘದ ಸದಸ್ಯರು ಹಾಜರಿದ್ದರು.
ಮಡಿಕೇರಿ ಆ.25 NEWS DESK : ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಭಾಗಮಂಡಲ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕೊಟ್ಟೂರು ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ವಿದ್ಯಾಸಂಸ್ಥೆಯ ಪಿ.ಎನ್.ಜೀವ ನಾಣಯ್ಯ 400 ಮೀಟರ್ ಓಟದಲ್ಲಿ ಪ್ರಥಮ, 800 ಮೀಟರ್ ಓಟದಲ್ಲಿ ಆದರ್ಶ್ ಕೆ.ಬಿ.ದ್ವಿತೀಯ, 400 ಮೀಟರ್ ಓಟದಲ್ಲಿ ಕೆ.ಎಲ್.ಯಶ್ವಿನ್ ಎರಡನೇ ಸ್ಥಾನ, ಬಾಲಕರ 4×400 ರೀಲೆಯಲ್ಲಿ ದ್ವಿತೀಯ ಸ್ಥಾನ ಭಾರದ ಗುಂಡು ಹಾಗೂ ತಟ್ಟೆ ಎಸೆತದಲ್ಲಿ ಪಿ. ಸಿ ಶರಣ್ ಚಂಗಪ್ಪ ಪ್ರಥಮ ಸ್ಥಾನ, ಜಾವೇಲಿನ್ ಎಸೆತದಲ್ಲಿ ಆಶಿಕ್ ಮಂದಣ್ಣ ಕೆ. ಪಿ ಪ್ರಥಮ ಸ್ಥಾನ, ಬಾಲಕಿಯರ ಭಾರದ ಗುಂಡು ಎಸೆತದಲ್ಲಿ ಚಸ್ಮಿತಾ ಪ್ರಥಮ, ತಟ್ಟೆ ಎಸೆತದಲ್ಲಿಶಿವಾನಿ ಕೆ. ಸಿ ಪ್ರಥಮ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆ ಆಗಿದ್ದಾರೆ ಬಾಲಕಿಯರ 200 ಮೀಟರ್ ಓಟದಲ್ಲಿ ವರುಣಿಕ ಪಿ. ಎಂ. ಮೂರನೇ, ಬಾಲಕರ ಫುಟ್’ಬಾಲ್ ಹಾಗೂ ಕಬಡ್ಡಿ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ತಾಲ್ಲೂಕು ಮಟ್ಟದ ಚೆಸ್…
ಕುಶಾಲನಗರ ಆ.25 NEWS DESK : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ ಹಾಗೂ ಕುಶಾಲನಗರ ಸ್ಥಳೀಯ ಸಂಸ್ಥೆಯ ವತಿಯಿಂದ ಕುಶಾಲನಗರ ತಾಲ್ಲೂಕಿನ ಮುಳ್ಳುಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಆವರಣದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಹಾಗೂ ಕಬ್, ಬುಲ್ ಬುಲ್ ಮಕ್ಕಳಿಗೆ ದೇಶಭಕ್ತಿ ಗೀತೆಗಳ ತಾಲ್ಲೂಕು ಮಟ್ಟದ ಗೀತ ಗಾಯನ ಸ್ಪರ್ಧೆ ನಡೆಯಿತು. ಗೀತಗಾಯನ ಸ್ಪರ್ಧೆಗೆ ಚಾಲನೆ ನೀಡಿ ಶುಭ ಹಾರೈಸಿದ ನಂತರ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದ ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಕೃಷ್ಣಪ್ಪ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಹಾಗೂ ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಲು ಉತ್ತಮ ವೇದಿಕೆ ಒದಗಿಸುತ್ತದೆ. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮಕ್ಕಳ ಚಟುವಟಿಕೆಗಳಿಗೆ ಶಿಕ್ಷಣ ಇಲಾಖೆಯ ವತಿಯಿಂದ ಸದಾ ಸಹಕಾರ, ಪ್ರೋತ್ಸಾಹ ನೀಡಲಾಗುವುದು ಎಂದರು. ಗೀತ ಗಾಯನದಂತಹ ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ದೇಶಪ್ರೇಮ, ಸೌಹಾರ್ದತೆ ಹಾಗೂ ರಾಷ್ಟ್ರೀಯ…
ಮಡಿಕೇರಿ ಆ.25 NEWS DESK : ಭಾಗಮಂಡಲದಲ್ಲಿ ನಡೆದ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಗಮನ ಸೆಳೆಯಿತು. ಕ್ರೀಡಾಕೂಟದಲ್ಲಿ 500ಕ್ಕೂ ಅಧಿಕ ಮಂದಿ ಪಾಲ್ಗೊಂಡು ಕೆಸರಿನಲ್ಲಿ ಮಿಂದೆದ್ದರು. ಜಿಲ್ಲಾಡಳಿತ, జిల్లా ಪಂಚಾಯಿತಿ, ಕೊಡಗು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟ ಕೊಡಗು ಮಡಿಕೇರಿ, ವಿರಾಜಪೇಟೆ ಹಾಗೂ ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟ ಹಾಗೂ ಶ್ರೀ ಕೃಷ್ಣ ಯೂತ್ ಕ್ಲಬ್ ಅಯ್ಯಂಗೇರಿ ವತಿಯಿಂದ ಭಾಗಮಂಡಲದ ಬಳ್ಳಡ್ಕ ಅಪ್ಪಾಜಿ ಮತ್ತು ಅನು ಅವರ ಗದ್ದೆಯಲ್ಲಿ ನಡೆದ 33ನೇ ವರ್ಷದ ಕ್ರೀಡಾಕೂಟದಲ್ಲಿ ಉಡುಪಿ, ಬೆಂಗಳೂರು, ದಕ್ಷಿಣ ಕನ್ನಡ, ಹಾಸನ, ಕೊಡಗು ಜಿಲ್ಲೆಯ ಸ್ಪರ್ಧಿಗಳು ಭಾಗವಹಿಸಿದ್ದರು. ವಿಧಾನಸಭೆಯ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಕ್ರೀಡಾಕೂಟ ಉದ್ಘಾಟಿಸಿದರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೆಸರುಗದ್ದೆಯ ಆಟೋಟಗಳನ್ನು ವೀಕ್ಷಿಸಿದರು. ನಂತರ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ್ದ ಯಶಸ್ ರೈ ಅವರನ್ನು ಸನ್ಮಾನಿಸಿದರು. ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಸುಕುಮಾರ್, ಕ್ರೀಡಾ ಸಮಿತಿಯ ಸಂಚಾಲಕ ಕಾವೇರಿ…
ಮಡಿಕೇರಿ NEWS DESK ಆ.24 : ವಿಶ್ವ ಹಿಂದೂ ಪರಿಷತ್ ಕುಶಾಲನಗರ ಘಟಕದ ವತಿಯಿಂದ ಕುಶಾಲನಗರದಲ್ಲಿ ಗೋಕುಲೋತ್ಸವ ಕಾರ್ಯಕ್ರಮ ನಡೆಯಿತು. 60ಕ್ಕೂ ಹೆಚ್ಚು ಪುಟಾಣಿಗಳು, ಶ್ರೀಕೃಷ್ಣ ರಾಧೆಯರಾಗಿ ವೇದಿಕೆಯಲ್ಲಿ ಸಂಭ್ರಮಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಡಿಕೇರಿಯ ಸಂತ ಜೋಸೆಫರ ಕಾಲೇಜಿನ ಉಪನ್ಯಾಸಕಿ ಕೆ.ಜಯಲಕ್ಷ್ಮಿ ಅವರು ಶ್ರೀ ಕೃಷ್ಣನ ಉಪದೇಶ ಮತ್ತು ಬಾಲ್ಯವನ್ನು ವಿವರಿಸಿದರು. ಶ್ರೀಕೃಷ್ಣನ ಉಪದೇಶ ಪಾಲನೆಯಿಂದ ಜೀವನ ಸಾಕ್ಷಾತ್ಕಾರ ಎಂದು ವಿವರಿಸಿದರು. ತಿರುಪತಿ ಭಜನಾ ಮಂಡಳಿಯ ಮುಖ್ಯಸ್ಥೆ ಪದ್ಮಾ ಪುರುಷೋತ್ತಮ್ ಅಧ್ಯಕ್ಷತೆ ವಹಿಸಿದ್ದರು. ಸುಂಟಿಕೊಪ್ಪದ ಕುಮಾರಿ ಶ್ರೀಶ ದಿಕ್ಸೂಚಿ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪುಟಾಣಿಗಳಿಗೆ ನೆನಪಿನ ಕಾಣಿಕೆ ಮತ್ತು ಪ್ರಶಂಸನಾ ಪತ್ರ ನೀಡಲಾಯಿತು.
ಬೆಂಗಳೂರು NEWS DESK ಆ.24 : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಬೋಧಕ ಆಸ್ಪತ್ರೆಯಲ್ಲಿ ಪಿಪಿಪಿ ಮಾದರಿಯಲ್ಲಿ ಕಾರ್ಡಿಯಾಕ್ ಯೂನಿಟ್ ಸ್ಥಾಪಿಸುವ ಸಂಬಂಧ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವರಾದ ಡಾ.ಶರಣ ಪ್ರಕಾಶ ಪಾಟೀಲ ರವರ ಅಧ್ಯಕ್ಷತೆಯಲ್ಲಿ ವಿಕಾಸ ಸೌಧದಲ್ಲಿ ಕಾರ್ಡಿಯಾಕ್ ಯೂನಿಟ್ ಸ್ಥಾಪಿಸುವ ಸಂಬಂಧ ಪರಿಶೀಲನಾ ಸಭೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಪಾಲ್ಗೊಂಡು ಯೋಜನೆ ಕಾರ್ಯಗತಗೊಳಿಸುವ ಸಂಭಂಧ ಸಚಿವರೊಂದಿಗೆ ಚರ್ಚಿಸಿದರು. ಸಚಿವರು ಯೋಜನೆ ಪ್ರಗತಿ ವಿವರವನ್ನು ಪರಿಶೀಲಿಸಿ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾತ್ ಲ್ಯಾಬ್ ಸ್ಥಾಪಿಸುವ ಸಂಬಂಧ ಅಗತ್ಯ ಪ್ರಸ್ತಾವನೆಯನ್ನು ಶೀಘ್ರವಾಗಿ ಸಲ್ಲಿಸಿ ಟೆಂಡರ್ ಆಹ್ಚಾನಿಸಲು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್, ಜಂಟಿ ಕಾರ್ಯದರ್ಶಿ ಡಾ. ವೆಂಕಟೇಶ್ ಮೂರ್ತಿ, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ನಿರ್ದೇಶಕಾರದ ಡಾ. ಸುಜಾತ ರಾಥೋಡ್, ರಾಜ್ಯ ಪಿಪಿಪಿ ಕೋಶದ ನಿರ್ದೇಶಕಾರದ ಪುರುಷೋತ್ತಮ್ ಸಿಂಗ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ…






