ಮಡಿಕೇರಿ ಅ.27 NEWS DESK : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕೊಡಗು ಜಿಲ್ಲಾ ಸಂಸ್ಥೆ ವತಿಯಿಂದ ಮಡಿಕೇರಿ ನಗರದಲ್ಲಿರುವ ಸಂಸ್ಥೆಯ ಸ್ಕೌಟ್ಸ್, ಗೈಡ್ಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ಭಾನುವಾರ ( ಅ.26 ರಂದು ) ಸ್ಕೌಟ್ಸ್, ಗೈಡ್ಸ್ , ಬುಲ್ ಬುಲ್, ರೇಂಜರ್ಸ್ ಮತ್ತು ರೋವರ್ಸ್ ವಿದ್ಯಾರ್ಥಿಗಳಿಗಾಗಿ ವೇಷ ಭೂಷಣಗಳೊಂದಿಗೆ ದೇಶಭಕ್ತಿ ಗೀತಾ ಗಾಯನ ಸ್ಪರ್ಧೆ ನಡೆಯಿತು. ಸಮವಸ್ತ್ರ ಧರಿಸಿದ್ದ ವಿದ್ಯಾರ್ಥಿಗಳು ಸುಶ್ರಾವ್ಯವಾಗಿ ಹಾಡಿದ ಗೀತಾ ಗಾಯನವು ಪ್ರೇಕ್ಷಕರ ಗಮನ ಸೆಳೆಯಿತು. ಮಕ್ಕಳು ದೇಶಭಕ್ತಿ ಗೀತೆ ಹಾಡಿ ಸಂತಸಪಟ್ಟರು. ಗೀತಾ ಗಾಯನ ಸ್ಪರ್ಧೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕೊಡಗು ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ, ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಲ್ಲಿ ದೇಶಪ್ರೇಮ , ಭಾತೃತ್ವ, ರಾಷ್ಟ್ರೀಯ ಪ್ರಜ್ಞೆ ಹಾಗೂ ರಾಷ್ಟ್ರೀಯ ಭಾವೈಕ್ಯತೆ, ಬೆಳೆಸುವ ಉದ್ದೇಶದಿಂದ ದೇಶಭಕ್ತಿ ಗೀತೆಯಂತಹ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ ಎಂದರು. ಇಂದಿನ ದಿನಗಳಲ್ಲಿ ರಾಷ್ಟ್ರೀಯ ಭಾವೈಕ್ಯ, ಕೋಮುಸೌಹಾರ್ದ,…
ಲೇಖಕ: admin
ಮಡಿಕೇರಿ NEWS DESK ಅ.26 : ಕೊಡಗು ಜಿಲ್ಲೆಯಲ್ಲಿ ಮಿನಿ ವಿಮಾನ ನಿಲ್ದಾಣ ಸ್ಥಾಪನೆಗೆ ರಾಜ್ಯ ಸರಕಾರ ತಯಾರಿದ್ದು, ಮಡಿಕೇರಿ ಸಮೀಪ ಖಾಸಗಿ ವ್ಯಕ್ತಿಗಳಿಂದ ಕನಿಷ್ಠ 120 ಎಕರೆ ಸಮತಟ್ಟು ಜಾಗ ಲಭ್ಯವಿದ್ದಲ್ಲಿ ಅದನ್ನು ಮಾರುಕಟ್ಟೆ ದರದಲ್ಲಿ ಖರೀದಿಸಲು ಸರಕಾರ ಒಪ್ಪಿಗೆ ನೀಡಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾಕ್ಟರ್ ಮಂತರ್ ಗೌಡ ಪ್ರಕಟಿಸಿದ್ದಾರೆ. ಮಡಿಕೇರಿ ಸಮೀಪದ ಮಹಿಂದ್ರ ರೆಸಾರ್ಟ್ ನಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ವಾಣಿಜ್ಯ ಮಹಾ ಸಂಸ್ಥೆ ವತಿಯಿಂದ ಸಂವಾದ ಕಾರ್ಯಕ್ರಮ ಹಾಗೂ ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಹಾಗೂ ಇತರ ಅಭಿವೃದ್ಧಿ ಕುರಿತ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕುಶಾಲನಗರ ಸಮೀಪದ ಚಿಕ್ಕ ಅಳುವಾರದಲ್ಲಿ ಜಾಗ ಗುರುತಿಸಿದ್ದರೂ ಅದು ಸೂಕ್ತವಲ್ಲ ಎಂದು ವರದಿ ಬಂದಿದ್ದು ಹಾಗಾಗಿ ಮಡಿಕೇರಿ ಸಮೀಪ ಸಮತಟ್ಟು ಪ್ರದೇಶ ಲಭ್ಯವಾದಲ್ಲಿ ಅದನ್ನು ಸರಕಾರ ಖರೀದಿಸಲಿದೆ ಎಂದು ತಿಳಿಸಿದ ಶಾಸಕರು ಜಿಲ್ಲೆಯಲ್ಲಿ ನಾಲ್ಕು ಕಡೆ ಹೆಲಿಪೋರ್ಟ್ ಸ್ಥಾಪನೆಗೂ ಸರಕಾರ ಮುಂದಾಗಿದೆ ಎಂದು…
ಸುಂಟಿಕೊಪ್ಪ NEWS DESK ಅ.26 : ಬೀದಿನಾಯಿಗಳ ದಾಳಿಯಿಂದ ಜೀವ ಉಳಿಸಿಕೊಳ್ಳಲು ಜಿಂಕೆಯೊಂದು ಮನೆಯೊಳಗೆ ನುಗ್ಗಿ ಆತಂಕ ಸೃಷ್ಟಿಸಿದ ಘಟನೆ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊಂಡೂರು ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ತೊಂಡೂರಿನಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ, ನಾಯಿಗಳು ಜನರ ಮೇಲೆ ಮಾತ್ರವಲ್ಲದೆ ಜಿಂಕೆಗಳ ಮೇಲೂ ದಾಳಿ ಮಾಡುತ್ತಿವೆ. ಇಂದು ಕೂಡ ಹೆಣ್ಣು ಜಿಂಕೆಯೊಂದನ್ನು ಬೇಟೆಯಾಡಲು ನಾಯಿಗಳು ಹೊಂಚು ಹಾಕಿವೆ. ದಾಳಿ ಮಾಡಿದ ನಾಯಿಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಜಿಂಕೆ ಮುಖ್ಯ ರಸ್ತೆಯಲ್ಲಿರುವ ರಾಧಕೃಷ್ಣಪ್ಪ ಎಂಬುವವರ ಮನೆಗೆ ನುಗ್ಗಿದೆ. ತನ್ನ ಜೀವ ಉಳಿಸಿಕೊಳ್ಳಲು ಮನೆ ತುಂಬಾ ಓಡಾಡಿದ ಜಿಂಕೆಯಿಂದ ಮನೆಯೊಳಗಿದ್ದ ಪುಟ್ಟ ಮಗುವಿನ ಆಟಿಕೆಗಳು ಹಾನಿಗೊಂಡಿವೆ. ಮನೆಯಲ್ಲೇ ಆಟವಾಡುತ್ತಿದ್ದ ಮಗು ಅಪಾಯದಿಂದ ಪಾರಾಗಿದೆ. ಆದರೆ ಜಿಂಕೆ ಮನೆಯಿಂದ ಹೊರ ಬಂದು ರಸ್ತೆ ದಾಟಿ ಅರಣ್ಯ ಪ್ರವೇಶಿಸುವಷ್ಟರಲ್ಲಿ ಮತ್ತೆ ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಪ್ರಾಣ ಬಿಟ್ಟಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು 12 ವರ್ಷದ…
ಮೈಸೂರು NEWS DESK ಅ.26 : ಮೈಸೂರು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಇಂದು ಎನ್‌ಇಬಿ ಸ್ಪೋರ್ಟ್ಸ್ ಆ್ಯಂಡ್ ಎಂಟರ್‌ಟೈನ್‌ಮೆಂಟ್ ಲಿಮಿಟೆಡ್, ಭಾರತೀಯ ಅಂಚೆ, ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಮೈಸೂರು ಮ್ಯಾರಥಾನ್ – 2025’ರ ಕಾರ್ಯಕ್ರಮದಲ್ಲಿ ಮೈಸೂರು-ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಯುವ ಸಮೂಹಕ್ಕೆ ಸ್ಫೂರ್ತಿಯಾದರು. ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಆಯೋಜಿಸಿದ್ದ ಮ್ಯಾರಥಾನ್ ನಲ್ಲಿ ಓಟಗಾರರೊಂದಿಗೆ ಹೆಜ್ಜೆ ಹಾಕಿ 10 ಕಿ.ಮೀ ದೂರವನ್ನು ಕ್ರಮಿಸಿದರು.
ಮಡಿಕೇರಿ NEWS DESK ಅ.26 : ಡಿಸಿಸಿ ಬ್ಯಾಂಕ್ ಚುನಾವಣೆಯ ಸಂದರ್ಭ ಬೆಲ್ಲದ ಬಾಗೇವಾಡಿ ತಾಲ್ಲೂಕಿನ ರಮೇಶ್ ಕತ್ತಿ ಎಂಬುವವರು ವಾಲ್ಮೀಕಿ ಸಮುದಾಯವನ್ನು ಆಕ್ಷೇಪಾರ್ಹ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಮಾನವ ಬಂಧುತ್ವ ವೇದಿಕೆಯ ಕೊಡಗು ಜಿಲ್ಲಾ ಸಂಚಾಲಕ ಜೆ.ಎಲ್.ಜನಾರ್ಧನ್, ಸೋಮವಾರಪೇಟೆ ತಾಲ್ಲೂಕು ಸಂಚಾಲಕ ಎಂ.ಎಸ್.ವೀರೇಂದ್ರ ಹಾಗೂ ವೇದಿಕೆಯ ಮಹಿಳಾ ಘಟಕದ ಜಿಲ್ಲಾ ಸಂಚಾಲಕರಾದ ಡಾ.ಕಾವೇರಿ ಹೆಚ್.ಎಂ ಅವರು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಶಾಲಾ ಮೈದಾನದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭ ರಮೇಶ್ ಅವರು ಶತಶತಮಾನಗಳಿಂದ ತುಳಿತಕ್ಕೆ ಒಳಗಾಗಿರುವ ವಾಲ್ಮೀಕಿ ಸಮುದಾಯವನ್ನು ಅವಮಾನಿಸಿದ್ದಾರೆ. ರಾಜ್ಯಾದ್ಯಂತ 75 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ವಾಲ್ಮೀಕಿ ಸಮುದಾಯದ ಜನರ ಭಾವನೆಗಳಿಗೆ ದಕ್ಕೆಯಾಗಿದೆ. ಈ ವ್ಯಕ್ತಿ ಹುಕ್ಕೇರಿ ವಿದ್ಯುತ್ ಮಂಡಳಿ ಚುನಾವಣೆಯ ಸಂದರ್ಭವೂ ಇದೇ ರೀತಿ ನಡೆದುಕೊಂಡಿದ್ದು, ಸತತವಾಗಿ ವಾಲ್ಮೀಕಿ ಸಮುದಾಯಕ್ಕೆ ಅವಹೇಳನ ಮಾಡುತ್ತಿದ್ದಾರೆ. ಸಮಾಜದಲ್ಲಿ ಮೇಲು, ಕೀಳು ಎಂಬ ಭಾವನೆ ಮೂಡಿಸುವ ಮೂಲಕ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರ…
ಮಡಿಕೇರಿ NEWS DESK ಅ.26 : ಕಾವೇರಿ ತುಲಾ ಸಂಕ್ರಮಣದ “ಪತ್ತಲೋಧಿ” ದಿನದ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಡಿಕೇರಿ ಕೋಟೆ, ನಾಲ್ನಾಡ್ ಅರಮನೆ ಆವರಣ ಮತ್ತು ಮುಳ್ಳುಸೋಗೆಯ ಕಾವೇರಿ ನದಿಯ ದಡದಲ್ಲಿ ಹುತಾತ್ಮರಾದ ಹಿರಿಯ ಕೊಡವರಿಗೆ ಇಂದು ಮೀದಿ ಸಮರ್ಪಿಸಿತು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಪುಷ್ಪನಮನದ ಮೂಲಕ ಅಗಲಿದ ಹಿರಿಯರನ್ನು ಸ್ಮರಿಸಿಕೊಂಡರು. ಕೊಡವ ಜನಾಂಗೀಯ ಬುಡಕಟ್ಟು ಜನಾಂಗದ ಹತ್ಯೆಗಳು ಎರಡು ಶತಮಾನಗಳಿಗೂ ಹೆಚ್ಚು ಕಾಲ ನಿರಂತರವಾಗಿ ನಡೆದಿದೆ. ಷಡ್ಯಂತ್ರದಿಂದ ಪ್ರಾಣ ಕಳೆದುಕೊಂಡ ಅಮಾಯಕ ಹಿರಿಯರನ್ನು ಸ್ಮರಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು. ಮಡಿಕೇರಿ ಕೋಟೆ ಮತ್ತು ನಾಲ್ನಾಡ್ ಅರಮನೆ ಆವರಣದಲ್ಲಿ ಅರಸರ ಕಾಲದ ವಿಶ್ವಾಸಘಾತುಕ ಆಡಳಿತಗಾರರಿಂದ ಕೊಡವರ ದುರಂತ ಅಂತ್ಯವಾಗಿದೆ. ಕುಶಾಲನಗರ (ಫ್ರೇಜರ್ ಪೇಟ್) ಬಳಿಯ ಕಾವೇರಿ ನದಿಯ ದಡದಲ್ಲಿರುವ ಐತಿಹಾಸಿಕ ಸ್ಥಳದಲ್ಲಿ 32 ಕ್ಕೂ ಹೆಚ್ಚು ಯುದ್ಧಗಳಲ್ಲಿ ಹೈದರ್ ಅಲಿ ಹಾಗೂ ಟಿಪ್ಪು ಸುಲ್ತಾನನ ಪಡೆಗಳ ವಿರುದ್ಧ ಧೈರ್ಯದಿಂದ ಹೋರಾಡಿದ ವೀರ…
ಮಡಿಕೇರಿ NEWS DESK ಅ.25 : ಬುದ್ಧ, ಬಸವ ಹಾಗೂ ಡಾ.ಅಂಬೇಡ್ಕರ್ ಅವರ ಚಿಂತನೆ ಸಾಕಾರಗೊಳ್ಳಲು ಮತ್ತು ಆದರ್ಶಗಳು ಅರ್ಥಪೂರ್ಣಗೊಳ್ಳಲು ಪ್ರತಿಯೊಬ್ಬರು ವಿದ್ಯಾವಂತರಾಗಬೇಕು ಎಂದು ಚಿಕ್ಕಅಳುವಾರು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಅಶೋಕ ಸಂಗಪ್ಪ ಆಲೂರ ಕರೆ ನೀಡಿದ್ದಾರೆ. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ನಡೆದ 2024-25ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಪ್ರೊಫೆಸರ್ ಗಳಾಗಿ ಬಡ್ತಿ ಹೊಂದಿರುವ ಬೋಧಕ ಸಿಬ್ಬಂದಿಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮನುಕುಲದ ವಿಕಾಸಕ್ಕೆ ಶಿಕ್ಷಣ ಅತ್ಯಗತ್ಯ, ಬುದ್ಧ, ಬಸವ, ಡಾ.ಅಂಬೇಡ್ಕರ್ ಅವರು ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ಅನುಭವದ ಸಂಕೇತವಾಗಿದ್ದಾರೆ. ನಮ್ಮ ಅರಿವು ನಮಗೆ ಗುರುವಾಗಬೇಕು, ಸಮಸಮಾಜದ ಕಲ್ಪನೆಯನ್ನು ಸಾಕಾರಗೊಳಿಸಬೇಕು. ಅವರುಗಳ ಅನುಭವವನ್ನು ಅನುಸರಿಸಿ ಅದರ ಆಧಾರದ ಮೇಲೆ ಅತ್ಯುತ್ತಮ ಚೌಕಟ್ಟನ್ನು ಹಾಕಿಕೊಳ್ಳಬೇಕು. ಶಿಕ್ಷಣದ ಅರಿವು ಹೆಚ್ಚಾದರೆ ಸುಶಿಕ್ಷಿತ ಸಮಾಜ ನಿರ್ಮಾಣ ಸಾಧ್ಯ. ಸಮಸಮಾಜ ಕಲ್ಪನೆಯನ್ನು ನಡೆಯಾಗಿ,…
ಮಡಿಕೇರಿ NEWS DESK ಅ.25 : ಮಕ್ಕಂದೂರು ಮತ್ತು ಮುಕ್ಕೋಡ್ಲು ಗೌಡ ಮಹಿಳಾ ಒಕ್ಕೂಟ ನೂತನವಾಗಿ ರಚನೆಗೊಂಡಿದ್ದು, ಅಧ್ಯಕ್ಷರಾಗಿ ತೋಟೆರ ನವೀನ ಕುಮಾರಿ ಜಯಪ್ರಕಾಶ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ತೇಲಬೈಲು ಅಸಿಕಾ ದಿನೇಶ ಆಯ್ಕೆಯಾಗಿದ್ದಾರೆ. ಖಜಾಂಚಿಯಾಗಿ ಕೊಟ್ಟಗೇರಿಯನ ಕಲ್ಪನಾ ಪ್ರದೀಪ್, ಉಪಾಧ್ಯಕ್ಷರಾಗಿ ಕುಂಬುಗೌಡನ ಕವಿತಾ ಸುನಿಲ್, ಸಹಕಾರ್ಯದರ್ಶಿಯಾಗಿ ಮಳ್ಳನ ಅನಿತಾ ವಿಜಯಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ಕುಡೆಕಲ್ಲು ಸವಿತಾ ಸಂತೋಷ್ ಹಾಗೂ ಕುಂಬುಗೌಡನ ನಿಶ್ಚಲ್ ಜಗದೀಶ್ ನೇಮಕಗೊಂಡರು. ಸದಸ್ಯರಾಗಿ ಲಕ್ಕಪನ ಸೌಮ್ಯ ವಿಜೇತ, ಹಿರೇಗೌಡನ ಚಲನ ತೀರ್ಥಕುಮಾರ್, ಕೋಳಿಬೈಲು ಅನಿತಾ ರಂಜು, ಮಳ್ಳನ ಭವ್ಯ ವೀರೇಂದ್ರ, ಕುಂಬುಗೌಡನ ಜಿಜಾ ಹೇಮಂತ್, ತೇಲಬೈಲು ದಿವ್ಯ ಡೆನಿಲ್, ಮಾನಡ್ಕ ಹಿತಾ ದಯಾನಂದ, ಅಣ್ಣಚ್ಚಿರ ರೇಣುಕಾ ಸತೀಶ್, ಹೊಸೊಕ್ಲು ಜಯಶ್ರೀ ಪ್ರವೀಣ, ಗೌರವ ಸಲಹೆಗಾರರಾಗಿ ಅಣ್ಣಚ್ಚಿರ ಪ್ರಮೀಳ, ತೋಟೆರ ಪದ್ಮಾವತಿ ಕೆಂಚಪ್ಪ, ಕುಂಬುಗೌಡನ ಜಲಜಾ ವಿನೋದ್ ಕುಮಾರ್ ಆಯ್ಕೆಯಾದರು. *ಸಭೆ* ಮಕ್ಕಂದೂರು ಮತ್ತು ಮುಕ್ಕೋಡ್ಲು ಗೌಡ ಸಮಾಜದ ಅಧ್ಯಕ್ಷ ಲಕ್ಕಪ್ಪನ ಹರೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ…
ಮಡಿಕೇರಿ ಅ.25 NEWS DESK : ಜಿಲ್ಲಾ ಕೇಂದ್ರ ಮಡಿಕೇರಿಯ ಅಂಚಿನ ಮದೆನಾಡಿನ ಬಿಜಿಎಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ, ಯೋಗಪಟು ಕುಮಾರಿ ಸಿಂಚನ ಅವರಿಂದ ಅ.28 ರಂದು ವಿದ್ಯಾಸಂಸ್ಥೆಯಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್‍ಗಾಗಿ ಮೂರು ಯೋಗಾಸನಗಳ ಪ್ರದರ್ಶನ ಕಾರ್ಯಕ್ರಮ ನಡೆಯೊಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶ್ರೀ ಆದಿ ಚುಂಚನಗಿರಿ ಶಾಖಾ ಮಠದ ಮೈಸೂರು ಮತ್ತು ಕೊಡಗು ಶಾಖೆÉಯ ಕಾರ್ಯದರ್ಶಿಗಳಾದ ಶ್ರೀ ಸೋಮೇಶ್ವರನಾಥ ಸ್ವಾಮೀಜಿಗಳು ಈ ಕುರಿತು ಮಾಹಿತಿ ನೀಡಿ, ಈಗಾಗಲೆ ಕೊಡಗಿನಲ್ಲಿ ವಿಶ್ವದಾಖಲೆಯ ಎರಡು ಯೋಗ ಪ್ರದರ್ಶನವನ್ನು ಸಿಂಚನ ನೀಡಿದ್ದು, ಇದೀಗ ಮೂರನೇ ಬಾರಿ ವಿಶ್ವ ದಾಖಲೆಯ ಯೋಗ ಪ್ರದರ್ಶನವನ್ನು ನೀಡಲಿದ್ದಾರೆಂದು ತಿಳಿಸಿದರು. ಯೋಗಪಟು ಸಿಂಚನಳ ತಾಯಿ ರೇಣುಕಾ ಅವರು ಮಾತನಾಡಿ, ಈ ಬಾರಿ ಸಿಂಚನ ಖಂಡಪೀಡಾಸನ ಭಂಗಿಯಲ್ಲಿ ಒಂದು ನಿಮಿಷ ಸಮ ಸ್ಥಿತಿಯಲ್ಲಿ ಇರುವ ಮೂಲಕ ವಿಶ್ವದಾಖಲೆಯ ಪ್ರಯತ್ನ ನಡೆಸಲಿದ್ದು, ಧನುರಾಸನದಲ್ಲಿ ಒಂದು ನಿಮಿಷಕ್ಕೆ 15 ಬಾರಿ ಸುತ್ತು ಹೊಡೆಯುವ ಹಾಗೂ ಡಿಂಬಾಸನದಲ್ಲಿ ಒಂದು ನಿಮಿಷಕ್ಕೆ 10 ಬಾರಿ ಸುತ್ತು ಹೊಡೆಯುವ…
ಮಡಿಕೇರಿ ಅ.25 NEWS DESK : ರಾಜ್ಯ ಸರಕಾರದ ಜನಪರ ಕಾರ್ಯಕ್ರಮಗಳ ಕುರಿತು ಮತದಾರರಲ್ಲಿ ಅರಿವು ಮೂಡಿಸಲು ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾ ಕಾಂಗ್ರೆಸ್‍ನೊಂದಿಗೆ ಕೈಜೋಡಿಸಿ ಕೆಲಸ ಮಾಡಬೇಕು. ಹೀಗೆ ಮಾಡಿದಾಗ ಮಾತ್ರ ಸರಕಾರದ ಯೋಜನೆಗಳು ಜನತೆಗೆ ತಿಳಿಯಲಿದೆ ಮತ್ತು ಪಕ್ಷ ಸಂಘಟನೆ ಪ್ರಬಲವಾಗಲಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ಉಪಾಧ್ಯಕ್ಷರು ಹಾಗೂ ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಉಸ್ತುವಾರಿಯೂ ಆಗಿರುವ ಮಾಜಿ ಶಾಸಕ ಜೆ.ಆರ್.ಲೋಬೋ ತಿಳಿಸಿದ್ದಾರೆ. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸರಕಾರದ ಕಾರ್ಯಕ್ರಮಗಳನ್ನು ತಿಳಿಸಲು ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ವಾಟ್ಸಪ್, ಟ್ವಿಟರ್, ಫೇಸ್‍ಬುಕ್, ಇನ್ ಸ್ಟಾಗ್ರಾಮ್ ಮತ್ತಿತರ ಮೂಲಗಳಲ್ಲಿ ಪ್ರಚಾರ ಕೈಗೊಳ್ಳಬೇಕು. ಪತ್ರಿಕೆಗಳಲ್ಲಿ ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಪರ ಲೇಖನಗಳನ್ನು ನೀಡಬೇಕು. ಪಕ್ಷದ ಕಾರ್ಯಕ್ರಮಗಳನ್ನು ಜನ ಸಮೂಹಕ್ಕೆ…






