ಲೇಖಕ: admin

ಮಡಿಕೇರಿ ಅ.24 NEWS DESK : ಭಾಗಮಂಡಲದ ಜಾನ್ ಡಾನ್ಸ್ ಗ್ಯಾಲರಿ ನೃತ್ಯ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ನವೆಂಬರ್‌ನಲ್ಲಿ ಪಾಂಡಿಚೆರಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪ್ರದರ್ಶನವನ್ನು ನೀಡಲಿದ್ದಾರೆ. ಸಂಸ್ಥೆಯ ಗಾನವಿ, ಧೃತಿ, ತ್ರೈಸಿ ಹೆಚ್ಆರ್, ಅನುಪಮಾ, ನೀಕ್ಷಾ, ಸಾನ್ವಿ ಜಿ, ದರ್ಶಿನಿ, ಯುಕ್ತ, ಹರ್ಷಿಕ, ಪವಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಭಾಗಮಂಡಲದ ನೃತ್ಯ ತರಬೇತಿ ಸಂಸ್ಥೆ ಹಾಗೂ ಕರಾಟೆ ತರಬೇತಿಯ ನಿರ್ದೇಶಕ ನಾಗರಾಜ್, ನೃತ್ಯ ತರಬೇತಿಯ ಮುಖ್ಯ ತರಬೇತಿದಾರಾಗಿ ಅಂತರಾಷ್ಟ್ರೀಯ ನೃತ್ಯಪಟು ಪೃಥ್ವಿ ನಾಯಕ್ ಹಾಗೂ ಸಹ ತರಬೇತಿದಾರರಾಗಿ ಬೃಂದಾಕವನ್, ಕರಾಟೆ ತರಬೇತುದಾರರಾಗಿ ರಾಷ್ಟ್ರೀಯ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ರೆಫ್ರಿ ಇಮ್ಯಾನ್ವಲ್ ಹಾಗೂ ರಾಯ್ ಜೋಸೆಫ್ ತರಬೇತಿ ನೀಡಿದರು. ವಿದ್ಯಾರ್ಥಿಗಳ ಪ್ರತಿಭೆಯನ್ನು ರಾಷ್ಟ್ರ ಮಟ್ಟದಲ್ಲಿ ಪರಿಚಯಿಸಲು ನಮ್ಮ ಸಂಸ್ಥೆ ಕಾರ್ಯೋನ್ಮುಖವಾಗಿದ್ದು,  ಆಸಕ್ತರು ಕರಾಟೆ ಹಾಗೂ ನೃತ್ಯ ತರಬೇತಿಗಾಗಿ Contact No 9207566495, PLACE: VSSN…

Read More

ಮಡಿಕೇರಿ ಅ.24 NEWS DESK : ಮಡಿಕೇರಿಯ ಹೋಂಡಾ ಶೋರೂಂನ  ನೂತನ  ಬೈಕ್‌ಗಳನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ  ಅವರು ಉದ್ಘಾಟಿಸಿ, ಶುಭಹಾರೈಸಿದರು. ಈ ಸಂದರ್ಭ ಮಡಿಕೇರಿ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೇಶ್ ಬಿ.ವೈ, ನಗರ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ, ಮೂಡ ಸದಸ್ಯರ ಚಂದ್ರಶೇಖರ್, ಮಡಿಕೇರಿ ನಗರಸಭೆ ನಾಮ ನಿರ್ದೇಶೀತ ಸದಸ್ಯ ಮುದ್ದುರಾಜ್, ಜಗದೀಶ್ ಜಿ.ಸಿ. ಹಾಜರಿದ್ದರು.

Read More

ಮಡಿಕೇರಿ ಅ.24 NEWS DESK : ಮಡಿಕೇರಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಹಳೇ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂತೋಷ ಕೂಟ ನ.16 ರಂದು ನಡೆಯಲಿದೆ. ಹಳೇ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದರೊಂದಿಗೆ ಸದಸ್ಯತ್ವವನ್ನು ಕೂಡ ಪಡೆದುಕೊಳ್ಳುವಂತೆ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಮನವಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆ ದೇವಾಲಯವಿದ್ದಂತೆ, ಪ್ರತಿಯೊಬ್ಬರಿಗೆ ತಾವು ಓದಿದ ಶಿಕ್ಷಣ ಸಂಸ್ಥೆಯ ಮೇಲೆ ಅಭಿಮಾನವಿರಬೇಕು. ವಿದ್ಯಾರ್ಥಿಗಳು ದೇಶದ ಮುಂದಿನ ಭವಿಷ್ಯವಾಗಿದ್ದು, ಉತ್ತಮ ಶಿಕ್ಷಣ, ಅವಕಾಶ ಮತ್ತು ಮಾರ್ಗದರ್ಶನ ದೊರೆತಾಗ ಯುವ ಸಮೂಹದಿಂದ ದೇಶದ ಪ್ರಗತಿಗೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಆದ್ದರಿಂದ ಕಾರ್ಯಪ್ಪ ಕಾಲೇಜ್ ನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಸದಸ್ಯತ್ವ ಪಡೆಯುವ ಮೂಲಕ ಕಾಲೇಜ್ ನ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಕೈಜೋಡಿಸುವಂತೆ ಕೋರಿದರು. ಹಳೇ ವಿದ್ಯಾರ್ಥಿಗಳ ಸಂಘದ ನೂತನ ಆಡಳಿತ ಮಂಡಳಿ ಸದಸ್ಯತ್ವವವನ್ನು ಹೆಚ್ಚಿಸುವ ಸಲುವಾಗಿ ಸದಸ್ಯತ್ವ…

Read More

ಮಡಿಕೇರಿ ಅ.24 NEWS DESK : ನಗರದ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ವಿಜಯ ವಿನಾಯಕ ದೇವಾಲಯದ 27ನೇ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ಜರುಗಿತು. ಅ.23ರ ಸಂಜೆಯಿಂದಲೇ ದೇವಾಲಯದಲ್ಲಿ ಹೋಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿತು. ಇಂದು ಮಹಾಮಂಗಳಾರತಿ ನಂತರ ನೆರೆದಿದ್ದ ಭಕ್ತಾಧಿಗಳಿಗೆ ಅನ್ನದಾನ ನಡೆಯಿತು. ನಗರದ ವಿವಿಧ ಬಡಾವಣೆಗಳಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

Read More

ಮಡಿಕೇರಿ ಅ.24 NEWS DESK : ರೋಟರಿ ಮಡಿಕೇರಿ ವುಡ್ಸ್ ಭಾರತ್ ಕ್ಯಾನ್ಸರ್ ಆಸ್ಪತ್ರೆ, ಮೈಸೂರು, ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಮಡಿಕೇರಿ., ಗ್ರಾಮ ಪಂಚಾಯತ್ ಕಾಂತೂರ್ ಮೂರ್ನಾಡು. ಇವರ ಸಹಯೋಗದಲ್ಲಿ ಕ್ಯಾನ್ಸರ್ ಉಚಿತ ತಪಾಸಣಾ ಬೃಹತ್ ಶಿಬಿರವು ಅ.25 ರಂದು ಮೂನಾ೯ಡುವಿನಲ್ಲಿ ಆಯೋಜಿತವಾಗಿದೆ. ಮೂನಾ೯ಡು ಗ್ರಾಮ ಪಂಚಾಯತ್ ಸಮುದಾಯ ಭವನದಲ್ಲಿ ಶನಿವಾರ ಬೆಳಗ್ಗೆ 10 ಗಂಟೆಯಿಂದ ಶಿಬಿರ ಪ್ರಾರಂಭವಾಗಲಿದೆ ಎಂದು ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್ ತಿಳಿಸಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಬಾರಿಕೆ ದಿನೇಶ್ ಶಿಬಿರ ಉದ್ಘಾಟಿಸಲಿದ್ದು, ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ಸಂಘಟನಾ ಕಾಯ೯ದಶಿ೯ ಹಾಗೂ ಕರ್ನಾಟಕ ರಾಜ್ಯ ಔಷದ ವ್ಯಾಪಾರರಿಗಳ ಸಂಘದ ಗೌರವ ಕಾರ್ಯದರ್ಶಿಗಳಾದ ಎ.ಕೆ.ಜೀವನ್, ಸಂಘದ ಜಿಲ್ಲಾ ಗೌರವ ಕಾಯ೯ದಶಿ೯ ಡಿ.ಐ. ಪುರುಷೋತ್ತಮ, ರೋಟರಿ ಪಬ್ಲಿಕ್ ಇಮೇಜ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಅನಿಲ್ ಹೆಚ್,ಟಿ, ಮೂನಾ೯ಡು ಕಾಂತೂರು ಗ್ರಾಮಪಂಚಾಯತ್ ಅಧ್ಯಕ್ಷ ಕುಶನ್ ರೈ, ರೋಟರಿ ವುಡ್ಸ್ ಕಾಯ೯ದಶಿ೯ ಪ್ರಮೀಳಾ ಶೆಟ್ಟಿ, ಶಿಬಿರದ…

Read More

ಮಡಿಕೇರಿ ಅ.24 NEWS DESK : ಸೈನಿಕಶಾಲೆಗಳ 6 ಮತ್ತು 9, ನೇ ತರಗತಿಗೆ ಸೇಪ೯ಡೆ ಸಂಬಂಧಿತ ವಿದ್ಯಾಥಿ೯ ಮತ್ತು ಪೋಷಕರಲ್ಲಿ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ರೋಟರಿ ಮಿಸ್ಟಿ ಹಿಲ್ಸ್ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ವತಿಯಿಂದ ತರಬೇತಿ ಕಾಯಾ೯ಗಾರ ಆಯೋಜಿಸಲಾಗಿದೆ. ನಗರದ ಸಕಾ೯ರಿ ಬಸ್ ನಿಲ್ದಾಣ ಬಳಿಯಿರುವ ಕೊಡಗು ಶಿಶುಕಲ್ಯಾಣ ಸಂಸ್ಥೆಯಲ್ಲಿ ನವೆಂಬರ್ 2 ರ ಭಾನುವಾರದಿಂದ ಪ್ರತೀ ಭಾನುವಾರಗಳಂದು 10 ಭಾನುವಾರಗಳ ಕಾಲ ಸೈನಿಕ ಶಾಲಾ ಪರೀಕ್ಷಾ ಮಾಹಿತಿ ಕಾಯಾ೯ಗಾರ ಪ್ರತೀ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಜರುಗಲಿದೆ. ಸರಗೂರು ಸೈನಿಕಶಾಲೆಯ ಪರಿಣಿತ ಅಧ್ಯಾಪಕರು ಸೇರಿದಂತೆ ವಿವಿಧ ವಿಷಯ ತಜ್ಞರು ಈ ಕಾಯಾ೯ಗಾರದಲ್ಲಿ ಉಪಯುಕ್ತ ಮಾಹಿತಿ ನೀಡಲಿದ್ದಾರೆ. ನವೆಂಬರ್ 2 ರಂದು ಬೆಳಗ್ಗೆ 9.30 ಗಂಟೆಗೆ ಉದ್ಘಾಟನೆ ನಂತರ ವಿದ್ಯಾರ್ಥಿಗಳ ಪೋಷಕರಿಗೂ ಮಾಹಿತಿ ಶಿಬಿರ ಆಯೋಜಿತವಾಗಿದೆ. ಸೈನಿಕಶಾಲೆಗೆ ಸೇರಲಿಚ್ಚಿಸುವ ಕೊಡಗಿನ ವಿದ್ಯಾಥಿ೯ಗಳು ಈ ಉಚಿತ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ರೋಟರಿ ಮಿಸ್ಟಿ…

Read More

ಮಡಿಕೇರಿ ಅ.24 NEWS DESK : ವಿಶ್ವ ಪೋಲಿಯೊ ನಿರ್ಮೂಲನಾ ದಿನದ ಅಂಗವಾಗಿ ರೋಟರಿ ಮಡಿಕೇರಿ ವುಡ್ಸ್ ನ ವತಿಯಿಂದ ನಗರದ ಹಲವಾರು ಕಡೆಗಳಲ್ಲಿ ಪೋಲಿಯೊ ನಿಮೂ೯ಲನ ಸಂದೇಶದ ಪೋಸ್ಟರಗಳನ್ನು ಅಳವಡಿಸಲಾಯಿತು. ನಗರಸಭಾಧ್ಯಕ್ಷೆ ಕಲಾವತಿ ಈ ಅಭಿಯಾನಕ್ಕೆ ನಗರಸಭೆ ಮುಂಬದಿ ಚಾಲನೆ ನೀಡಿದರು. ಪ್ರತೀ ಮನೆಯಲ್ಲಿಯೂ ಎರಡರಿಂದ ಆರು ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಲಸಿಕೆ ಹಾಕಿಸಿಕೊಳ್ಳುವಂತೆ ಕಲಾವತಿ ಮನವಿ ಮಾಡಿದರು. ರೋಟರಿ ವುಡ್ಸ್ ವತಿಯಿಂದ ಸಾವ೯ಜನಿಕರಲ್ಲಿ ಜಾಗ್ರತಿ ಉಂಟು ಮಾಡುವ ಈ ವಿನೂತನ ಅಭಿಯಾನವನ್ನು ಅವರು ಶ್ಲಾಘಿಸಿದರು. ವಿಶ್ವದಾದ್ಯಂತ ಪೊಲಿಯೋ ನಿಮೂ೯ಲನೆಯಲ್ಲಿ ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾದ ರೋಟರಿ ಅತ್ಯಂತ ಮಹತ್ವದ ಪಾತ್ರ ವಹಿಸಿದ್ದು ಲಕ್ಷಾಂತರ ಮಕ್ಕಳು ವಿಶೇಷಚೇತನರಾಗುವುದನ್ನು ಪೊಲಿಯೋ ನಿರೋಧಕ ಲಸಿಕೆ ಮೂಲಕ ರೋಟರಿ ತಪ್ಪಿಸಿದೆ ಎಂದು ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್ ಮಾಹಿತಿ ನೀಡಿದರು. ಜನರಲ್ಲಿ ಜಾಗ್ರತಿ ಉಂಟು ಮಾಡುವ ನಿಟ್ಟಿನಲ್ಲಿ ರೋಟರಿ ವುಡ್ಸ್ ವತಿಯಿಂದ ನಗರವ್ಯಾಪ್ತಿಯಲ್ಲಿ ಜಾಗೖತಿ ಸಂದೇಶದ ಪೋಸ್ಟರ್, ಬ್ಯಾನರ್ ಅಳವಡಿಸಲಾಗಿದೆ ಎಂದೂ…

Read More

ಮಡಿಕೇರಿ ಅ.23 NEWS DESK : ರಾಷ್ಟ್ರದ ಉದ್ದಗಲಕ್ಕೂ ನಿರಂತರವಾಗಿ ನಡೆಯುತ್ತಿರುವ ಅಪ್ರಾಪ್ತರು, ಯುವತಿಯರು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸಬೇಕೆಂದು ಆಗ್ರಹಿಸಿ ಮಹಿಳೋದಯ ಮಹಿಳಾ ಒಕ್ಕೂಟ(ಓಡಿಪಿ) ನಗರದಲ್ಲಿ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿಗಳ ಕಛೇರಿ ಎದುರು ಘೋಷಣೆಗಳೊಂದಿಗೆ ಪ್ರತಿಭಟನೆ ನಡೆಸಿದ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಕಠಿಣ ಕಾನೂನು ಜಾರಿಯ ಮೂಲಕ ಸ್ತ್ರೀಯರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು. ಒಕ್ಕೂಟದ ವಲಯ ಸಂಯೋಜಕರಾದ ಜಾಯ್ಸ್ ಮೆನೇಜಸ್ ಮಾತನಾಡಿ, ಹೆಣ್ಣು ಮಕ್ಕಳು ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾನೂನುಗಳನ್ನು ರೂಪಿಸಿದ್ದರು, ದೌರ್ಜನ್ಯ ನಿಯಂತ್ರಣಕ್ಕೆ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಠಿಣ ಕಾನೂನು ಕ್ರಮಗಳನ್ನು ರೂಪಿಸಬೇಕೆಂದು ಒತ್ತಾಯಿಸಿದರು. *ಪಿಂಚಣಿ ಹೆಚ್ಚಿಸಿ* ಪ್ರಸ್ತುತ ರಾಜ್ಯ ಸರ್ಕಾರವು ವಿಧವಾ ಪಿಂಚಣಿ, ವೃದ್ಧಾಪ್ಯ ಪಿಂಚಣಿ ಮತ್ತು ವಿಶೇಷ ಚೇತನರಿಗೆ ಪಿಂಚಣಿಯಾಗಿ ಮಾಸಿಕ 800 ರೂ.ಗಳಿಂದ 1200 ರೂ.ಗಳನ್ನು ನೀಡುತ್ತಿದ್ದು, ಇದು…

Read More

ಮಡಿಕೇರಿ ಅ.23 NEWS DESK : ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಇವರ ಆಶ್ರಯದೊಂದಿಗೆ ಅಕ್ಟೋಬರ್ 31 ರಂದು ಬೆಳಗ್ಗೆ 9.30 ಗಂಟೆಗೆ ಗುಡ್ಡೆಮನೆ ಅಪ್ಪಯ್ಯ ಗೌಡರ ಸ್ಮಾರಕ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಬಳಿ ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಸಂಸ್ಮರಣಾ ದಿನಾಚರಣೆ ಹಾಗೂ ಕೋಟೆ ಆವರಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್ ಭೋಸರಾಜು, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ, ವಿಶ್ರಾಂತ ಪ್ರಾಂಶುಪಾಲರು, ಇತಿಹಾಸ ಪ್ರಾಧ್ಯಾಪಕರಾದ ನಂಗಾರು ನಿಂಗರಾಜು, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಂಥರ್‍ಗೌಡ, ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ, ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ರಾಜ್ಯಸಭಾ ಸದಸ್ಯರಾದ ಅಜಯ್ ಮಾಕನ್,…

Read More

ಮಡಿಕೇರಿ ಅ.24 NEWS DESK : ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರು ಪ್ರತಿಯೊಬ್ಬರಿಗೂ ಮಾದರಿ ಎಂದು ಶಾಲಾ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕರಾದ ಕೆ.ಆರ್.ಬಿಂಧು ಅವರು ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬಾಲ್ಯದಲ್ಲಿಯೇ ಕತ್ತಿ ವರಸೆ, ಬಿಲ್ಲುಗಾರಿಕೆ, ಕುದುರೆ ಸವಾರಿ ಕಲಿತಿದ್ದ ಕಿತ್ತೂರು ರಾಣಿ ಚೆನ್ನಮ್ಮ ಅವರು 1857 ರ ಸ್ವಾತಂತ್ರ್ಯ ಹೋರಾಟಕ್ಕಿಂತ ಮೊದಲು ಬ್ರಿಟಿಷರ ವಿರುದ್ಧ ಹೋರಾಡಿದ್ದರು ಎಂದು ತಿಳಿಸಿದರು. ‘ಕಪ್ಪ ಕೊಡಬೇಕೆ ಕಪ್ಪ?  ನಿಮಗೇಕೆ ಕೊಡಬೇಕು ಕಪ್ಪ? ನೀವು ಏನು ಒಡಹುಟ್ಟಿದವರೆ, ನೆಂಟರೆ, ಬಂಧುಗಳೇ, ನೀವೇನು ಇಲ್ಲಿ ಉತ್ತಿರ, ಬಿತ್ತಿರ.. ರೈತರು ಕೃಷಿಕರು ಈ ಕೆಲಸ ಮಾಡುತ್ತಾರೆ. ಕಬ್ಬು ತಿನ್ನಲು ಬಿಟ್ಟ ತಪ್ಪಿಗೆ ಕೂಲಿ ಕೊಡಬೇಕಾ, ಕಿತ್ತೂರು ಕಟ್ಟಿ ಬೆಳೆಸಿದ ಆಸ್ತಿ ಏನು,…

Read More