ಮಡಿಕೇರಿ ಆ.16 NEWS DESK : ನಗರದ ರಾಜರಾಜೇಶ್ವರಿ ಪದವಿಪೂರ್ವ ಕಾಲೇಜ್ ನ ರೋಟರಿ ಮಡಿಕೇರಿಯಿಂದ ಪ್ರಾಯೋಜಿಸಲ್ಪಟ್ಟ ಇಂಟರಾಕ್ಟ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕಾಲೇಜು ಸಭಾಂಗಣದಲ್ಲಿ ನಡೆಯಿತು. ಕ್ಲಬ್ ನ ನೂತನ ಅಧ್ಯಕ್ಷೆಯಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಗೌತಮಿ ಅಧಿಕಾರ ಸ್ವೀಕರಿಸಿದರು. ಕಾರ್ಯದರ್ಶಿಯಾಗಿ ಪೆಮ್ಮಯ್ಯ ಪದಗ್ರಹಣ ಮಾಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ರೋ.ಪಿಹೆಚ್‍ಎಫ್ 1 ಸಿಎ ಎಂ.ಈಶ್ವರ ಭಟ್ ಅವರು ಎಲ್ಲಾ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಪದಗ್ರಹಣ ಮಾಡಿಸಿದರು. ನಂತರ ಮಾತನಾಡಿದ ಅವರು ಎಳೆ ವಯಸ್ಸಿನಲ್ಲಿಯೇ ದೊರೆತ ನಾಯಕತ್ವದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಮಂದಿನ ಜೀವನವನ್ನು ಉಜ್ವಲಗೊಳಿಸುವಂತೆ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಸಂದೇಶ ನೀಡಿದರು. ರೋಟರಿ ಮಡಿಕೇರಿಯ ಅಧ್ಯಕ್ಷರಾದ ರೋ. ಲಲಿತ ರಾಘವನ್ ಮಾತನಾಡಿ 12 ರಿಂದ 18 ವರ್ಷದೊಳಗಿನ ವಿದ್ಯಾರ್ಥಿಗಳಲ್ಲಿ ಸೇವಾಮನೋಭಾವವನ್ನು ಬೆಳೆಸುವ ಸದುದ್ದೇಶದಿಂದ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ ಇಂಟರಾಕ್ಟ್ ಕ್ಲಬ್ ನ್ನು ರಚಿಸಿದ್ದು, ಇದರ ಧ್ಯೇಯೋದ್ದೇಶಗಳನ್ನು ಅರಿತುಕೊಳ್ಳಬೇಕೆಂದು ವಿವರಿಸಿದರು. ರೋಟರಿ ಕಾರ್ಯದರ್ಶಿ ರೋ. ಅದರ್ಶ್ ಸೋಮಣ್ಣ,…
ಲೇಖಕ: admin
ಮಡಿಕೇರಿ ಆ.16 NEWS DESK : ಮುಸಲ್ಮಾನರನ್ನು ಕೇವಲ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ ಯಾವುದೇ ಅಧಿಕಾರವನ್ನು ನೀಡದೆ ಅನ್ಯಾಯ ಮಾಡುತ್ತಿದೆ ಎಂದು ಕೊಡಗು ಜಿಲ್ಲಾ ಜಾತ್ಯತೀತ ಜನತಾದಳದ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಕೆ.ಜಿ.ಜಾಶಿರ್ ಟೀಕಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬದಲಾವಣೆ ತರಬೇಕು ಎಂಬ ಉದ್ದೇಶದಿಂದ ಮುಸಲ್ಮಾನ ಸಮುದಾಯದವರು ಒಗ್ಗೂಡಿ ಶೇ.99 ರಷ್ಟು ಕಾಂಗ್ರೆಸ್‍ಗೆ ಮತಹಾಕಿ ಇಬ್ಬರು ಶಾಸಕರನ್ನು ಗೆಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದರೂ ಜಿಲ್ಲೆಯ ಮುಸಲ್ಮಾನ ಸಮುದಾಯವನ್ನು ಎರಡನೇ ದರ್ಜೆಯ ಕೆಲಸಗಾರರಂತೆ ನಡೆಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತಗಳನ್ನು ನೀಡಿದ್ದರೂ ಅಧ್ಯಕ್ಷ ಸ್ಥಾನವನ್ನು ಕೇಳುವ ನೈತಿಕತೆ ನಮ್ಮ ಸಮುದಾಯದ ನಾಯಕರಿಗಿಲ್ಲದಂತಾಗಿದೆ. ಮತಗಳಿಕೆಗೆ ಮಾತ್ರ ಮುಸಲ್ಮಾನರಿಗೆ ಯೋಜನೆಗಳನ್ನು ಘೋಷಿಸಲಾಗುತ್ತಿದೆ, ಮುಸಲ್ಮಾನ ಗುತ್ತಿಗೆದಾರರಿಗೆ ಯಾವುದೇ ಕೆಲಸಗಳನ್ನು ನೀಡುತ್ತಿಲ್ಲ. ಮುಸಲ್ಮಾನರಲ್ಲಿ ಶೇ.5 ರಷ್ಟು ಮಂದಿ ಮಾತ್ರ ಕಾಂಗ್ರೆಸ್ ಪಕ್ಷದ ಮುಖಂಡರಾಗಿ ಗುರುತಿಸಿಕೊಂಡರೆ ಶೇ.99 ರಷ್ಟು ಮಂದಿ ಮತದಾರರಿದ್ದಾರೆ. ಆದರೂ ಸಮುದಾಯದ ಅಭಿವೃದ್ಧಿಗೆ ಅನುದಾನ ತರುವ ಕೆಲಸ ಕಾಂಗ್ರೆಸ್…
ಮಡಿಕೇರಿ ಆ.16 NEWS DESK : ನಾರ್ತ್‌ಈಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ಕೊಡಗು ಜಿಲ್ಲೆಯ ಯದೀಶ್ ರಮೇಶ್, ಹಾರ್ವರ್ಡ್ ಪ್ರಾಜೆಕ್ಟ್ ಫಾರ್ ಏಷ್ಯನ್ ಅಂಡ್ ಇಂಟರ್‌ನ್ಯಾಷನಲ್ ರಿಲೇಶನ್ಸ್ (HPAIR) 2025 ಸಮ್ಮೇಳನಕ್ಕೆ ಭಾರತದ ಪ್ರತಿನಿಧಿಗಳಲ್ಲಿ ಒಬ್ಬರಾಗಿ ಆಯ್ಕೆಯಾಗಿದ್ದಾರೆ. ಮಡಿಕೇರಿ ನಗರಸಭಾ ಸದಸ್ಯ ಕೆ.ಎಸ್.ರಮೇಶ್ ಮತ್ತು ಕೆ.ಆರ್.ರಮ್ಯಾ ಅವರ ಪುತ್ರರಾಗಿರುವ ಯದೀಶ್ ರಮೇಶ್ ಏಷ್ಯಾದಿಂದ ಆಯ್ಕೆಯಾದ ಕೆಲವೇ ಪ್ರತಿನಿಧಿಗಳಲ್ಲಿ ಒಬ್ಬರಾಗಿದ್ದಾರೆ. ಈ ಪ್ರತಿಷ್ಠಿತ ಜಾಗತಿಕ ಸಮ್ಮೇಳನವು ಈ ವರ್ಷ ಆ.20 ರಿಂದ 24ರವರೆಗೆ ಜಪಾನ್‌ನ ಟೋಕಿಯೋ ನಗರದಲ್ಲಿ ನಡೆಯಲಿದೆ. ಇದೇ ವರ್ಷ 2025ರಲ್ಲಿ, ಯದೀಶ್ ರಮೇಶ್ ಅವರು ಜಾಗತಿಕ ವೇದಿಕೆಗಳಲ್ಲಿ ಭಾರತದ ಪ್ರತಿನಿಧಿಯಾಗಿ ಹಲವಾರು ಪ್ರಮುಖ ಸಮಾವೇಶಗಳಲ್ಲಿ ಪಾಲ್ಗೊಂಡಿದ್ದರು ನ್ಯೂಯಾರ್ಕ್‌ನ ವಿಶ್ವಸಂಸ್ಥೆ ಮುಖ್ಯ ಕಚೇರಿಯಲ್ಲಿ ನಡೆದ ಸಂಯುಕ್ತ ರಾಷ್ಟ್ರಗಳ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ (ECOSOC) ಯುವ ಸಮ್ಮೇಳನದಲ್ಲಿ MGCY ಭಾರತವನ್ನು ಪ್ರತಿನಿಧಿಸಿದ್ದಾರೆ. , ಲಾಸ್ ಏಂಜಲೀಸ್‌ನಲ್ಲಿ ನಡೆದ 11ನೇ ಆವೃತ್ತಿಯ ಅಂತರಾಷ್ಟ್ರೀಯ ಯುವ ಸಮ್ಮೇಳನ 2025ರಲ್ಲಿ ಕೂಡ…
ವಿರಾಜಪೇಟೆ ಆ.16 NEWS DESK : ವಿರಾಜಪೇಟೆ ನಗರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ನೂತನವಾಗಿ ಆರಂಭಿಸಲಾದ 8 ಹೊಸ ಮಾರ್ಗಗಳನ್ನು ಹಾಗೂ 8 ನೂತನ ಬಸ್ ಸಂಚಾರಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ ನೀಡಿದರು. ನಂತರ ಮಾತನಾಡಿದ ಶಾಸಕರು ವಿರಾಜಪೇಟೆ ಪುರಸಭೆ ವ್ಯಾಪ್ತಿಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರಯಾಣಿಕರ ದಟ್ಟಣೆಯನ್ನು ತಗ್ಗಿಸಲು ಹಾಗೂ ಏರಿಕೆಯಾಗಿರುವ ಪ್ರಯಾಣಿಕರ ಸಂಖ್ಯೆಗನುಗುಣವಾಗಿ ನೂತನ ಬಸ್ ಮಾರ್ಗಕ್ಕೆ ಹೆಚ್ಚುವರಿಯಾಗಿ ಎಂಟು ನೂತನ ಬಸ್‍ಗಳನ್ನು ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಬಸ್ ನ ಚಾಲಕರು ಹಾಗೂ ನಿರ್ವಾಹಕರು ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಸಂಸ್ಥೆಗೆ ಒಳ್ಳೆಯ ಹೆಸರು ತರುವಲ್ಲಿ ಶ್ರಮಿಸಬೇಕೆಂದು ಕಿವಿಮಾತು ಹೇಳಿದರು. ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗಾಗಿ ಉಚಿತ ಬಸ್ ಸೌಲಭ್ಯವನ್ನು ಕಲ್ಪಿಸಿದ್ದು ಇದರಿಂದ ನಾಡಿನ ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ ಎಂದು ಹೇಳಿದರು. ಈ ಸಂದರ್ಭ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ…
ಮಡಿಕೇರಿ ಆ.16 NEWS DESK : ಮಡಿಕೇರಿ ಬಿಜೆಪಿ ಗ್ರಾಮಾಂತರ ಮಂಡಲದ ಯುವಮೋರ್ಚಾದಿಂದ ವಿದ್ಯಾರ್ಥಿಗಳಿಗೆ ಸ್ವೆಟರ್ ವಿತರಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರು ವಿದ್ಯಾರ್ಥಿಗಳಿಗಾಗಿ ಕೊಡುಗೆಯಾಗಿ ನೀಡಿದ ಸ್ವೆಟರ್ ಅನ್ನು ಮದೆ ಗ್ರಾ.ಪಂ ವ್ಯಾಪ್ತಿಯ ತಾಳತ್ತಮನೆ, ಕಾಟಕೇರಿ, ಮೊಣ್ಣಂಗೇರಿ, ಜೋಡುಪಾಲ, ದೇವರಕೊಲ್ಲಿ ಗ್ರಾಮಗಳ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ಮಡಿಕೇರಿ ಬಿಜೆಪಿ ಗ್ರಾಮಾಂತರ ಮಂಡಲದ ಯುವಮೋರ್ಚಾ ಅಧ್ಯಕ್ಷರಾದ ಚೇತನ್ ಬಂಗೇರ ವಿತರಿಸಿದರು. ಈ ಸಂದರ್ಭ ಯುವ ಮೋರ್ಚಾದ ಸದಸ್ಯರಾದ ದೀಕ್ಷಿತ್ ಸುವರ್ಣ, ಗ್ರಾಮಗಳ ಪಕ್ಷದ ಪ್ರಮುಖರು, ಪಂಚಾಯತ್ ಸದಸ್ಯರು, ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು, ಪೋಷಕರಗಳು ಉಪಸ್ಥಿತರಿದ್ದರು.
ಮಡಿಕೇರಿ ಆ.16 NEWS DESK : ಬೆಟೋಳಿ ಗ್ರಾಮದ ನಿವಾಸಿ, ಸೆಂಟ್ ಆನ್ಸ್ ಪದವಿ ಕಾಲೇಜಿನ ಉಪನ್ಯಾಸಕರಾದ ಶಾಂತಿ ಭೂಷಣ್ ಅವರ ತಂದೆ ಬಿ.ಎಸ್.ನಾಗೇಂದ್ರರಾವ್ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಮೃತರ ಅಂತ್ಯಕ್ರಿಯೆ ಮೃತರ ಸ್ವಗ್ರಹದಲ್ಲಿ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮಡಿಕೇರಿ ಆ.15 NEWS DESK : ವಿದ್ಯುತ್ ಸ್ಪರ್ಶಿಸಿ ಹಸುವನ್ನು ಕಳೆದುಕೊಂಡು ರೈತ ಕುಟುಂಬಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಪರಿಹಾರ ಚೆಕ್ ವಿತರಿಸಿದರು.ಕಾಕೋಟುಪರಂಬು ಪಂಚಾಯಿತಿಯ ಕುಂಜಲಗೇರಿ ಗ್ರಾಮದ ಚಿಯಂಡೀರ ಸುರೇಶ್ ಹಾಗೂ ಸುಬ್ರಮಣಿ ಎಂಬ ರೈತರ ಹಸುಗಳು, ಇತ್ತೀಚೆಗೆ ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದು, ವಿಷಯ ತಿಳಿದೊಡನೆ ಸರ್ಕಾರ ಮಟ್ಟದಲ್ಲಿ ಮಾತನಾಡಿದ ಶಾಸಕರು ರೈತ ಕುಟುಂಬಕ್ಕೆ ರೂ.1.62ಲಕ್ಷ ಪರಿಹಾರ ಒದಗಿಸುವಲ್ಲಿ ಸಫಲರಾಗಿದ್ದರು. ಇಂದು ವಿರಾಜಪೇಟೆಯ ತಮ್ಮ ಗೃಹ ಕಚೇರಿಯಲ್ಲಿ ರೈತನಿಗೆ ಪರಿಹಾರದ ಚೆಕ್ ವಿತರಿಸಿದರು. ಈ ಸಂದರ್ಭ ಪ್ರಮುಖರಾದ ಬಟ್ಟಕಾಳಂಡ ರಾಜ, ಮುಂಡಂಡ ಅನಿಲ್ ಬಿದ್ದಪ್ಪ, ಬಂಟ್ರ ದಯಾ ರೈ, ಬೋವೇರಿಯಂಡ ಅಜಿತ್, ಚೆಸ್ಕಾಂ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಮಡಿಕೇರಿ ಆ.16 NEWS DESK : ತಾಳತ್ತಮನೆಯ ನೇತಾಜಿ ಯುವಕ ಹಾಗೂ ಯುವತಿ ಮಂಡಳಿ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮಾಜಿ ಸೈನಿಕರಾದ ದೊಡ್ಡೇರ ಎಂ.ತಿಮ್ಮಯ್ಯ ಧ್ವಜಾರೋಹಣ ನೆರವೇರಿಸಿದರು. ಸಮಾರಂಭದಲ್ಲಿ ನೇತಾಜಿವಕ ಮಂಡಳದ ಅಧ್ಯಕ್ಷರಾದ ಕೊಂಡಿರ ಪಿ.ಕಾರ್ಯಪ್ಪ, ಯುವಕ ಮಂಡಲದ ಸಲಹಾ ಸಮಿತಿ ಮುಖ್ಯಸ್ಥರಾದ ಚೆಟ್ಟೊಳ್ಳಿರ ಗಿರೀಶ್ ಅಪ್ಪಯ್ಯ , ಯುವತಿಮಂಡಳಿ ಅಧ್ಯಕ್ಷರಾದ ಸಿಂಧು ಸುದೇವ, ಯುವಕ ಮಂಡಲದ ಉಪಾಧ್ಯಕ್ಷರಾದ ಸುರೇಶ್ ಕುಮಾರ್, ಮಾಜಿ ಸೈನಿಕರು, ಯುವಕ ಹಾಗೂ ಯವತಿ ಮಂಡಳಿಯ ಸದಸ್ಯರು, ನಾಗರಿಕರು ಹಾಜರಿದ್ದರು.
ಭಾಗಮಂಡಲ NEWS DESK ಆ.15 : ಭಾಗಮಂಡಲ ಪಂಚಾಯತ್ ವತಿಯಿಂದ 79ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಬಳ್ಳಡ್ಕ ಅಪ್ಪಾಜಿ ಮತ್ತು ಅನುರವರ ಗದ್ದೆಯಲ್ಲಿ ಹೋಬಳಿ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಸಂಭ್ರಮದಿಂದ ನಡೆಯಿತು. ಹಗ್ಗಜಗ್ಗಾಟ, ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಪುರುಷರ ಹಗ್ಗಜಗ್ಗಾಟ ಶ್ರೀಕೃಷ್ಣ ಯುವಕ ಸಂಘ, ಅಯ್ಯಂಗೇರಿ ಪ್ರಥಮ ಸ್ಥಾನ , ಶ್ರೀ ಭಗವತಿ ಕಾರುಗುಂದ ದ್ವಿತೀಯ ಸ್ಥಾನ, ಮಹಿಳೆಯರ ಹಗ್ಗಜಗ್ಗಾಟ ದಲ್ಲಿ ಮಹಾವಿಷ್ಣು ಯುವತಿ ಮಂಡಳಿ ಸಿಂಗತ್ತೂರು ಪ್ರಥಮ, ಭಗವತಿ ಯುವತಿ ಮಂಡಳಿ ತಣ್ಣಿಮಾನಿ ದ್ವಿತೀಯ ಸ್ಥಾನ ಪಡೆದುಕೊಂಡವು. ಮಳೆಯ ನಡುವೆಯೂ ಕ್ರೀಡಾಭಿಮಾನಿಗಳು ಚಪ್ಪಾಳೆ, ಸಿಳ್ಳೆಯ ಮೂಲಕ ಪ್ರೋತ್ಸಾಹ ನೀಡಿ ಸಂಭ್ರಮಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಹೊಸೂರು ಸತೀಶ್ ಜೋಯಪ್ಪ ಅವರು ಮಾತನಾಡಿ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಆಪರೇಷನ್ ಸಿಂಧೂರದ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುವ ಕೆಲಸ ಮಾಡಿದ್ದಾರೆ. ನಮ್ಮ ಸೈನಿಕರು ತಮ್ಮ ಕುಟುಂಬವನ್ನು ತೊರೆದು ದೇಶಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ನಾವು…
ಮೂರ್ನಾಡು NEWS DESK ಆ.15 : ಮೂರ್ನಾಡು ಫ್ರೆಂಡ್ಸ್ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ 79ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಘದ ಕಛೇರಿಯ ಆವರಣದಲ್ಲಿ ಸಂಘದ ಅಧ್ಯಕ್ಷ ಕೆ.ಎ.ಖಾದರ್ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಸಂಘದ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಸರ್ವರಿಗೂ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ನಂತರ ಮೂರ್ನಾಡುವಿನ ಅಂಗನವಾಡಿ ಕೇಂದ್ರಕ್ಕೆ ತೆರಳಿ ಸಂಘದ ವತಿಯಿಂದ ಮಕ್ಕಳಿಗೆ ಸಿಹಿ ಹಂಚಿ, ಕೇಂದ್ರಕ್ಕೆ ಅಗತ್ಯವಿದ್ದ ಬೆಡ್ ವಿತರಿಸಲಾಯಿತು.






