ಮಡಿಕೇರಿ ಆ.18 NEWS DESK : ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ವೆಸ್ಟ್ ನೆಮ್ಮಲೆ ಗ್ರಾಮದ ಕಾಫಿ ತೋಟವೊಂದರಲ್ಲಿ ಹುಲಿಯ ಮೃತ ದೇಹ ಪತ್ತೆಯಾಗಿದೆ. ಹುಲಿ ವಯೋ ಸಹಜ ರೀತಿಯಲ್ಲಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಹಾಗೂ ಅರಣ್ಯ ಆಧಿಕಾರಿಗಳು ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಲೇಖಕ: admin
ಮಡಿಕೇರಿ ಆ.20 NEWS DESK : ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಉಳುವವನೆ ಭೂಮಿಯ ಒಡೆಯ, ಜೀತ ಪದ್ಧತಿ ನಿರ್ಮೂಲನೆ, ವಿದ್ಯಾರ್ಥಿ ನಿಲಯ ಸ್ಥಾಪನೆ, ಹಿಂದುಳಿದ ವರ್ಗಗಳಿಗೆ ನ್ಯಾಯ, ಎಲೆಕ್ಟ್ರಾನಿಕ್ ಸಿಟಿ ಆರಂಭ ಹೀಗೆ ಮಹತ್ವದ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ತುಂಬಾ ದೂರದೃಷ್ಟಿಯಿಂದ ಆಡಳಿತವನ್ನು ನಡೆಸಿ, ಇಂದಿಗೂ ಸಹ ಜನಮನ್ನಣೆ ಉಳಿಸಿಕೊಂಡಿರುವುದು ಸಾಕ್ಷಿ ಪ್ರಜ್ಞೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ. ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ನಡೆದ ಸಾಮಾಜಿಕ ಕ್ರಾಂತಿಯ ಹರಿಕಾರ ಹಾಗೂ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಪ್ರತಿಯೊಂದು ಸಮಾಜಕ್ಕೂ ಸಾಮಾಜಿಕ ನ್ಯಾಯ ಕಲ್ಪಿಸಲು ಸಾಕಷ್ಟು ಶ್ರಮಿಸಿದ್ದಾರೆ. ಇಂತಹ ಮಹನೀಯರ ಆದರ್ಶ ಮತ್ತು ಸಾಧನೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದರು. ಸಮ ಸಮಾಜ ನಿರ್ಮಾಣ ಹಾಗೂ ಸುಧಾರಣೆಗೆ ಶ್ರಮಿಸಿದ್ದಾರೆ. ಆ…
ಮಡಿಕೇರಿ ಆ.20 NEWS DESK : ‘ಶೋಷಣೆ ಮತ್ತು ಬಡತನ’ ಮುಕ್ತವಾದ ಸಮಾಜ ನಿರ್ಮಾಣಕ್ಕಾಗಿ ಬದುಕಿನುದ್ದಕ್ಕೂ ಹೋರಾಟಗಳನ್ನು ನಡೆಸಿಕೊಂಡು ಬಂದ ದಿ.ದೇವರಾಜ ಅರಸು, ಅಂತಃಕರಣದ ರಾಜ್ಯಭಾರದ ಮೂಲಕ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿದ ಮಹಾನ್ ನೇತಾರರಾಗಿದ್ದಾರೆ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರು ಹಾಗೂ ಅರಗು ಮತ್ತು ಬಣ್ಣದ ಕಾರ್ಖಾನೆ ನಿಗಮದ ಮಾಜಿ ಅಧ್ಯಕ್ಷರಾದ ಹೆಚ್.ಎ.ವೆಂಕಟೇಶ್ ತಿಳಿಸಿದ್ದಾರೆ. ಕೊಡಗು ಜಿಲ್ಲಾ ಅಹಿಂದ ಒಕ್ಕೂಟ ಮತ್ತು ಸಹಮತ ವೇದಿಕೆಯ ಸಂಯುಕ್ತಾಶ್ರಯದಲ್ಲಿ ನಗರದ ಲಯನ್ಸ್ ಸಭಾಂಗಣದಲ್ಲಿ ನಡೆದ ದಿ.ಡಿ.ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇವರಾಜ ಅರಸು ಅವರನ್ನು ಮುಖ್ಯಮಂತ್ರಿಗಳಾಗಿದ್ದವರು ಎನ್ನುವ ಕಾರಣದಿಂದ ಜನತೆ ನೆನಪಿಸಿಕೊಳ್ಳುತ್ತಿಲ್ಲ. ಬದಲಾಗಿ ಅವವರು ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಲು ಶ್ರಮಿಸಿದ ಮಹಾನ್ ನೇತಾರರಾಗಿದ್ದರೆಂದು ಸ್ಮರಿಸುತ್ತಾರೆ. ಇವರು ತಮ್ಮ ಆಡಳಿತದ ಅವಧಿಯಲ್ಲಿ ತಂದ ದೂರದೃಷ್ಟಿಯ ಜನಪರವಾದ ಯೋಜನೆಗಳು, ಆಡಳಿತ ವೈಖರಿಗಳು ರಾಜ್ಯದಲ್ಲಿ ಹೊಸ ರಾಜಕೀಯ ವಾತಾವರಣವನ್ನೆ ಸೃಷ್ಟಿಸಿತ್ತು.…
ಮಡಿಕೇರಿ ಆ.20 NEWS DESK : ಕರ್ನಾಟಕ ರಾಜ್ಯ ಔಷಧಿ ಮಾರಾಟಗಾರರ ಸಂಘದ ವತಿಯಿಂದ ನೀಡಲಾಗುವ ” ಕರ್ನಾಟಕ ಕೆಮಿಸ್ಟ್ ರತ್ನ ” ಪ್ರಶಸ್ತಿಯನ್ನು ಸೋಮವಾರಪೇಟೆಯ ಮವಿ೯ನ್ ಫನಾ೯ಂಡೆಸ್ ಅವರಿಗೆ ಪ್ರಧಾನ ಮಾಡಲಾಗಿದೆ. ಶಿವಮೊಗ್ಗದಲ್ಲಿ ನಡೆದ ಕರ್ನಾಟಕ ರಾಜ್ಯ ಔಷಧಿ ವ್ಯಾಪಾರಿಗಳ ಸಂಘದ ಸರ್ವ ಸದಸ್ಯರ 67 ನೇ ವಾಷಿ೯ಕ ಮಹಾಸಭೆಯಲ್ಲಿ ಸೋಮವಾರಪೇಟೆಯ ಮೆಡಿಕಲ್ ಎಂಪೋರಿಯಂ ಮಾಲೀಕ ಮರ್ವಿನ್ ಫರ್ನಾಂಡೆಸ್ ಅವರಿಗೆ ಕನಾ೯ಟಕ ಕೆಮಿಸ್ಟ್ ರತ್ನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೆವಿ೯ನ್ ಫೆನಾ೯ಂಡೀಸ್ 40 ವರ್ಷಗಳಿಂದ ಸೋಮವಾರಪೇಟೆಯಲ್ಲಿ ಆರೋಗ್ಯ ಸೇವೆಯನ್ನು ನೀಡುತ್ತಿದ್ದಾರೆ.
ಮಡಿಕೇರಿ ಆ.20 NEWS DESK : ಜುಲೈ 2026 ನೇ ಅಧಿವೇಶನಕ್ಕಾಗಿ ಉತ್ತರಖಂಡ ರಾಜ್ಯದ ಡೆಹಾರಡೂನ್ ರಾಷ್ಟ್ರೀಯ ಇಂಡಿಯಾನ್ ಮಿಲಿಟರಿ ಕಾಲೇಜಿಗೆ 8 ನೇ ತರಗತಿಗಾಗಿ ಪ್ರವೇಶ ಪಡೆಯಲು ಬಯಸುವ ಕರ್ನಾಟಕದ ರಾಜ್ಯದ ಬಾಲಕ ಮತ್ತು ಬಾಲಕಿಯರಿಗೆ ಅರ್ಹತ ಪ್ರವೇಶ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ 2025 ರ ಡಿಸೆಂಬರ್, 07 ರಂದು ನಡೆಯಲಿದೆ. ಅಭ್ಯರ್ಥಿಗಳು ಯಾವುದೇ ಸರ್ಕಾರದಿಂದ ಮಾನ್ಯತೆ ಪಡೆದಿರುವ ಯಾವುದೇ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ಅಥವಾ ಉತ್ತೀರ್ಣರಾಗಿರುವ ಹಾಗೂ ಜುಲೈ 01 2026 ರಂತೆ ಹನ್ನೊಂದುವರೆ ವರ್ಷದಿಂದ ಹದಿಮೂರು ವರ್ಷದೊಳಗೆ ಇರುವ (ಅಂದರೆ ದಿನಾಂಕ 02 ಜುಲೈ 2013 ರಿಂದ 01-01-2015 ರೊಳಗೆ ಜನಿಸಿರುವ) ಬಾಲಕ ಮತ್ತು ಬಾಲಕಿಯರು ಮಾತ್ರ ಈ ಪ್ರವೇಶ ಪರೀಕ್ಷೆಗೆ ಅರ್ಹರಿರುತ್ತಾರೆ. ಈ ಸಂಸ್ಥೆಯ ಮುಖ್ಯ ಗುರಿ ಯುವಕ ಮತ್ತು ಯುವತಿಯರನ್ನು ದೇಶದ ಸಶಸ್ತ್ರ ಪಡೆಗೆ ಸೇರಲು ಸಿದ್ದಗೊಳಿಸುವುದು ಕಾಲೇಜಿನ ವರ್ಷವೊಂದಕ್ಕೆ ಪುಸ್ತಕ ವಿದ್ಯಾಭ್ಯಾಸದ ಶುಲ್ಕ ರೂ. 98,650 ಗಳು ಹಾಗೂ ರೂ.81,850 (ಎಸ್ಸಿ/ಎಸ್ಟಿ)…
ಮಡಿಕೇರಿ ಆ.20 NEWS DESK : ಕೊಡಗು ಟೇಬಲ್ ಟೆನ್ನಿಸ್ ಅಸೋಸಿಯೇಷನ್ ವತಿಯಿಂದ ಮಡಿಕೇರಿಯಲ್ಲಿ ಸೆ.5 ರಿಂದ 7ರ ವರೆಗೆ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿ ನಡೆಯಲಿದೆ ಎಂದು ಅಸೋಸಿಯೇಷನ್‍ನ ಗೌರವಾಧ್ಯಕ್ಷ ಮಹಮ್ಮದ್ ಅಸಿಫ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ಪಂದ್ಯಾವಳಿ ನಡೆಯಲಿದ್ದು, ಸೆ.5 ರಂದು ಬೆಳಿಗ್ಗೆ 9 ಗಂಟೆಗೆ ಪಂದ್ಯಾವಳಿಗೆ ಚಾಲನೆ ದೊರೆಯಲಿದೆ ಎಂದು ಹೇಳಿದರು. 13 ವರ್ಷದ ಬಾಲಕ ಬಾಲಕಿಯರಿಗೆ ಹಾಗೂ 17 ವಯೋಮಿತಿಯ ಯುವಕ-ಯುವತಿಯರಿಗೆ ಪಂದ್ಯಾವಳಿಗಳು ನಡೆಯಲಿದ್ದು, 17 ವರ್ಷ ಮೇಲ್ಪಟ್ಟವರ ಮುಕ್ತ ಹಾಗೂ 50 ವರ್ಷದ ಮೇಲಿನ ವೆಟರನ್ ವಿಭಾಗದಲ್ಲಿ ಸ್ಪರ್ಧಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಅಸೋಸಿಯೇಷನ್‍ನ ನಿರ್ದೇಶಕ ಪೃಥ್ವಿ 9880073440, ಖಜಾಂಚಿ ಹರಿಶಂಕರ್ 8618369238 ಸಂಪರ್ಕಿಸಬಹುದಾಗಿದೆ. ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಅಧ್ಯಕ್ಷ ಪ್ರವೀಣ್ ಶೇಟ್, ಖಜಾಂಚಿ ಹರಿಶಂಕರ್, ನಿರ್ದೇಶಕ ಪೃಥ್ವಿ ಉಪಸ್ಥಿತರಿದ್ದರು.
ಸುಂಟಿಕೊಪ್ಪ, ಆ.19 NEWS DESK : ಕಂಬಿಬಾಣೆ ಕಮಲ ನೆಹರು ಯುವತಿ ಮಂಡಳಿ ವತಿಯಿಂದ ಮೂರನೇ ವರ್ಷದ ಶ್ರೀ ಕೃಷ್ಣಜನ್ಮಾಷ್ಠಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಅನ್ನಪೂರ್ಣೇಶ್ವರಿ ಫಂಕ್ಷನ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಟಾಣಿ ರಾಧ-ಕೃಷ್ಣರು ಗಮನ ಸೆಳೆದರು. ಕೃಷ್ಣ-ರಾಧೆ ಸ್ಪರ್ಧೆಗಳಲ್ಲಿ 6 ತಿಂಗಳಿನಿಂದ 2 ವರ್ಷದ ಮಕ್ಕಳಿಗೆ ಮುದ್ದು ಕೃಷ್ಣ, 3 ವರ್ಷದಿಂದ 5 ವರ್ಷದದೊಳಗಿನ ಮಕ್ಕಳಿಗೆ ಬಾಲಕೃಷ್ಣ, 6 ವರ್ಷದಿಂದ 12 ವರ್ಷ ಮಕ್ಕಳಿಗೆ ತುಂಟ ಕೃಷ್ಣ ಸ್ಪರ್ಧೆ, ಅದೇ ರೀತಿಯಲ್ಲಿ 6 ತಿಂಗಳಿನಿಂದ 5 ವರ್ಷದೊಳಗಿನ ಮಕ್ಕಳಿಗೆ ಮುದ್ದು ರಾಧೆ, 6 ವರ್ಷದಿಂದ 12 ವರ್ಷದ ಮಕ್ಕಳಿಗೆ ರಾಧ ಮಣಿ ಹಾಗೂ ಮಹಿಳೆಯರಿಗೆ ಯಶೋಧ ಸ್ಪರ್ಧೆ ನಡೆಯಿತು. ಅಲ್ಲದೇ 1 ವರ್ಷದಿಂದ 12 ವರ್ಷದ ಮಕ್ಕಳಿಗೆ ಛದ್ಮವೇಷ ಸ್ಪಧೆರ್É ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಮಲ ಯುವತಿ ಮಂಡಳಿಯ ಅಧ್ಯಕ್ಷೆ ವೀಣಾ ರಾಮಚಂದ್ರ ವಹಿಸಿದ್ದರು. ಸುಮಾರು 90 ಮಕ್ಕಳು ಕೃಷ್ಣ-ರಾಧೆ ಮತ್ತು ಯಶೋದೆಯ ವೇಷವನ್ನು ಧರಿಸಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ, ದ್ವಿತೀಯ…
ಬೆಂಗಳೂರು ಆ.20 NEWS DESK : ಆಧುನಿಕ ಭಾರತದ ನಿರ್ಮಾತೃ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜಯಂತಿಯ ಅಂಗವಾಗಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಚರಿಸಲ್ಪಡುವ ಸದ್ಭಾವನಾ ದಿನದ ಪ್ರತಿಜ್ಞಾ ವಿಧಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೋಧಿಸಿದರು. ಈ ಸಂದರ್ಭ ಸಚಿವರಾದ ಕೆ.ಜೆ.ಜಾರ್ಜ್, ಕೆ.ಹೆಚ್.ಮುನಿಯಪ್ಪ, ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ, ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಸರ್ಕಾರದ ಮುಖ್ಯಕಾರ್ಯದರ್ಶಿಗಳಾದ ಡಾ.ಶಾಲಿನಿ ರಜನೀಶ್ ಹಾಗೂ ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರತಿಜ್ಞೆ ಸ್ವೀಕರಿಸಿದರು.
ಹೊದ್ದೂರು ಆ.20 NEWS DESK : ನಿವೇಶನ ರಹಿತ ಬಡ ಕೂಲಿ ಕಾರ್ಮಿಕರು ಇಂದು ಸಂವಿಧಾನದ ಕಾನೂನಾತ್ಮಕ ಹಕ್ಕನ್ನು ಪಡೆಯಲು ಸಾಮಾಜಿಕವಾಗಿ ಒಗ್ಗಟ್ಟಾಗಬೇಕು ಎಂದು ಬಹುಜನ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷರಾದ ಕೆ.ಮೊಣ್ಣಪ್ಪ ಅವರು ಕರೆ ನೀಡಿದರು. ಬಹುಜನ ಕಾರ್ಮಿಕರ ಸಂಘಟನೆಯ ಜಿಲ್ಲಾ ಸಮಿತಿಯ ನೂತನ ಗ್ರಾಮ ಸಮಿತಿ ಪುನರ್ ರಚನಾ ಸಭೆಯು ಹೊದ್ದೂರು ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಮಾತನಾಡಿದ ಅವರು, ಇಂದು ನಿವೇಶನ ರಹಿತ ಬಡ ಕೂಲಿ ಕಾರ್ಮಿಕರು ಹೀನಾಯ ವ್ಯವಸ್ಥೆಯಲ್ಲಿದ್ದು, ಹಲವು ವರ್ಷಗಳಿಂದ ಭೂಮಾಲಿಕರ ದಬ್ಬಾಳಿಕೆಗೆ ಒಳಗಾಗಿ ಲೈನ್ ಮನೆಗಳಲ್ಲಿ ಶೋಚನೀಯವಾಗಿ ಬದುಕು ಸಾಗಿಸುತ್ತಿದ್ದಾರೆ. ಸರ್ಕಾರದ ಕೆಲವು ಅಧಿಕಾರಿಗಳು ನಿವೇಶನ ರಹಿತ ಬಡ ಕೂಲಿ ಕಾರ್ಮಿಕರ ಮೂಲಭೂತ ಹಕ್ಕೋತ್ತಾಯಗಳ ನಿರ್ಲಕ್ಷ್ಯವೇ ಕಾರಣ ಮತ್ತು ಸರ್ಕಾರದ ಭೂ ಗುತ್ತಿಗೆ ನೀತಿಯನ್ನು ವಿರೋಧಿಸಿ ಟೀಕಿಸಿದರು. ಬಡ ಕೂಲಿ ಕಾರ್ಮಿಕರು ಸಾಮಾಜಿಕವಾಗಿ ಸಧೃಡಗೊಳಿಸಲು ಸಂಘಟನೆಯೇ ಮೂಲಧಾರ. ಸಂಘಟನೆಗಳನ್ನು ಬಲಪಡಿಸಲು ಗ್ರಾಮ ಮಟ್ಟದಲ್ಲಿ ಕಾಲೋನಿಗಳಿಗೆ ಭೇಟಿ ನೀಡಿ ಕಾರ್ಮಿಕರ ಸಮಸ್ಯೆಯನ್ನು ಆಲಿಸಬೇಕು ಮತ್ತು…
ಕುಶಾಲನಗರ ಆ.20 NEWS DESK : ಕೂಡಿಗೆಯಲ್ಲಿರುವ ಸದ್ಗುರು ಅಪ್ಪಯ್ಯಸ್ವಾಮಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್ ವತಿಯಿಂದ ಸಮವಸ್ತ್ರ ಹಾಗೂ ಶೂ ವಿತರಿಸಲಾಯಿತು. ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ರೋಟರಿ ಸಂಸ್ಥೆಯ ಅಧ್ಯಕ್ಷ ಮನು ಪೇಮಯ್ಯ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಕಲಿಕೆಯ ಮೂಲಕ ತಮ್ಮ ಪ್ರತಿಭೆಯನ್ನು ಗಳಿಸಲು ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ರೋಟರಿ ಸಂಸ್ಥೆಯು ತೊಡಗಿಸಿಕೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಸಂಗ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸವಲತ್ತುಗಳನ್ನು ನೀಡುವ ಮೂಲಕ ವಿದ್ಯಾರ್ಜನೆಗೆ ಒತ್ತು ನೀಡಬೇಕು ಎಂಬ ಕನಸನ್ನು ನಮ್ಮ ರೋಟರಿ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಹಮ್ಮಿಕೊಂಡಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಶೂ ಗಳನ್ನು ವಿತರಣೆ ಮಾಡಲು ಮುಂದಾಗಿದೆ ಎಂದರು. ಮುಂದಿನ ದಿನಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ನಿರಂತರ ಸೇವೆಯನ್ನು ರೋಟರಿ ಸಂಸ್ಥೆ ವತಿಯಿಂದ ಮಾಡಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ವ್ಯವಸ್ಥಾಪಕರಾದ ಬೋಸ್ ಮೊಣ್ಣಪ್ಪ, ಶಾಲೆ…






