ಲೇಖಕ: admin

ನಾಪೋಕ್ಲು ಅ.10 NEWS DESK : ಸಾರ್ವಜನಿಕರ ಕುಂದು ಕೊರತೆಗಳನ್ನು ಸರಿಪಡಿಸಿ ಉತ್ತಮ ಅಭಿವೃದ್ಧಿ ಕಾರ್ಯ ಗ್ರಾಮಪಂಚಾಯಿತಿಯಿಂದ ಆಗುತ್ತಿದೆ ಎಂದು ಪಂಚಾಯಿತಿಯ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಗ್ರಾಮ ಸಭೆಯು ಪಂಚಾಯತಿ ಸಮುದಾಯ ಭವನದಲ್ಲಿ ನಡೆಯಿತು. ನೋಡಲ್ ಅಧಿಕಾರಿ ಕೆ.ಬಾಲಕೃಷ್ಣ ರೈ ಅವರ ಸಮ್ಮುಖದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಮೆಚ್ಚುಗೆಯ ನುಡಿಗಳು ಕೇಳಿಬಂದವು. ಸಭೆಯಲ್ಲಿ ಮಾತನಾಡಿದ ಪಂಚಾಯಿತಿ ಅಧ್ಯಕ್ಷ ಕುಶನ್ ರೈ ಮಾತನಾಡಿ ಎಲ್ಲಾ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಕೊಡಿಸಿ ಸಾರ್ವಜನಿಕರ ಕುಂದು ಕೊರತೆಗಳನ್ನು ಸರಿಪಡಿಸುವಂಥ ಕಾರ್ಯ ಆಗಬೇಕೆಂದು ಆಲೋಚಿಸಿದ್ದೆವು. ಗ್ರಾಮ ಸಭೆಯಲ್ಲಿ ಪಕ್ಷಾತೀತವಾಗಿ ಎಲ್ಲರೂ ಬಂದು ತಮ್ಮ ತಮ್ಮ ಕುಂದುಕೊರತೆಯನ್ನು ತಿಳಿಸಿದ್ದರಿಂದ ಸಾರ್ವಜನಿಕರಿಗೂ ಹಾಗೂ ಸಮಾಜಕ್ಕೂ ಉತ್ತಮ ಕೆಲಸಗಳು ನಡೆಯುತ್ತದೆ ಯಾರೇ ಅಧಿಕಾರಕ್ಕೆ ಬಂದರು ಸಾರ್ವಜನಿಕರು ಹೀಗೆ ಸ್ಪಂದಿಸುತ್ತಾ ಹಾಗೆಯೇ ಸಂಘ-ಸಂಸ್ಥೆಗಳು ಪಂಚಾಯಿತಿ ಜೊತೆ ಸೇರಿ ಕೆಲಸ ಮಾಡಿದರೆ ಇನ್ನೂ ಹೆಚ್ಚು ಅಭಿವೃದ್ಧಿ ಕಾರ್ಯಗಳು ಆಗುತ್ತವೆ ಎಂದರು. ಏಳು ಗ್ರಾಮಗಳ ಸಾರ್ವಜನಿಕರು ಸೇರಿ ಗ್ರಾಮ ಸಭೆ ನಡೆಸಿದರು.…

Read More

ವಿರಾಜಪೇಟೆ ಅ.10 NEWS DESK : ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರಿಗೂ ಸ್ಪರ್ಧಿಸುವ ಅವಕಾಶವಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಪುರಸಭೆ ಸದಸ್ಯರಾದ ಎಸ್.ಹೆಚ್.ಮತೀನ್ ಹೇಳಿದರು. ವಿರಾಜಪೇಟೆಯ ಮೌಂಟೇನ್ ವ್ಯೂವ್ ಶಾಲೆಯಲ್ಲಿ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ಐಎಎಸ್ ಮತ್ತು ಐಪಿಎಸ್ ತರಬೇತಿ ಕೇಂದ್ರ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ತರಬೇತಿ ತಯಾರಿ ನಡೆಸುವ ಕುರಿತು ಮತ್ತು ಪರೀಕ್ಷೆಗಳನ್ನು ಬರೆದು ಉನ್ನತ ಹುದ್ದೆಯನ್ನು ಹೊಂದಬೇಕೆಂಬ ಉದ್ದೇಶದಿಂದ ಈ ತರಬೇತಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಇದು ಕೊಡಗಿನಲ್ಲಿಯೇ ಮೊಟ್ಟಮೊದಲು ನಮ್ಮ ವಿರಾಜಪೇಟೆಯಲ್ಲಿ ಪ್ರಾರಂಭವಾಗಿದೆ ಎಂದು ಭಾವಿಸುವುದಾಗಿ ಹೇಳಿದರಲ್ಲದೆ. ನಮ್ಮ ಕಾಲದಲ್ಲಿ ಉನ್ನತ ಮಟ್ಟದ ವಿದ್ಯಾಭ್ಯಸ ಕೇವಲ ಕನಸಾಗಿತ್ತು. ಈಗಿನ ವಿದ್ಯಾರ್ಥಿಗಳಿಗೆ ಇದು ಕೈಗೆಟುಕುವಂತ್ತಿದೆ. ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು. ಸಾಹಿತಿಗಳಾದ ರಜಿತ ಕಾರ್ಯಪ್ಪ ಮಾತನಾಡಿ, ಬಹುತೇಕ ಕೇಂದ್ರಗಳಲ್ಲಿ ನಾಗರಿಕ ಸೇವಾ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ…

Read More

ಮಡಿಕೇರಿ ಅ.10 NEWS DESK : ಜಿಲ್ಲೆಯಾದ್ಯಂತ ನಡೆದ 90 ದಿನಗಳ ವಿಶೇಷ ಮಧ್ಯಸ್ಥಗಾರಿಕಾ ಅಭಿಯಾನ ‘ಮಧ್ಯಸ್ಥಿಕೆ ರಾಷ್ಟ್ರಕ್ಕಾಗಿ ಕಾರ್ಯಕ್ರಮ ನಡೆಯಿತು. ಕೊಡಗು ಜಿಲ್ಲೆಗೆ ಸಂಬಂಧಪಟ್ಟಂತೆ ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ಮಧ್ಯಸ್ಥಿಕಾ ಕೇಂದ್ರದಲ್ಲಿ ಇತ್ಯರ್ಥವಾದ ಪ್ರಕರಣಗಳ ವಿವರ. 2025 ರ ಜುಲೈ, 01 ಕ್ಕೆ ಮಧ್ಯಸ್ಥಿಕೆಗೆ ಅರ್ಹವಾದ ಒಟ್ಟು ಪ್ರಕರಣಗಳು 12,054, ಮಧ್ಯಸ್ಥಿಕೆಗೆ ತೆಗೆದುಕೊಂಡ ಪ್ರಕರಣಗಳು 2779, ಮಧ್ಯಸ್ಥಿಕೆಯಲ್ಲಿ ಇತ್ಯರ್ಥವಾದ ಪ್ರಕರಣಗಳು 61. ಒಟ್ಟು ಇತ್ಯರ್ಥವಾದ ಪ್ರಕರಣಗಳು ವೈವಾಹಿಕ ಪ್ರಕರಣಗಳು 23, ಕೌಟುಂಬಿಕ ದೌರ್ಜನ್ಯ ಪ್ರಕರಣಗಳು 3, ಚೆಕ್ ಅಮಾನ್ಯ ಪ್ರಕರಣಗಳು 20, ರಾಜಿಯಾಗುವಂತಹ ಕ್ರಿಮಿನಲ್ ಪ್ರಕರಗಣಳು 1, ಪಾಲು ವಿಭಾಗ ಪ್ರಕರಣಗಳು(ಸಿವಿಲ್ ವ್ಯಾಜ್ಯ) 2, ಇತರೆ ಸಿವಿಲ್ ವ್ಯಾಜ್ಯಗಳು 12 ಆಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ತಿಳಿಸಿದ್ದಾರೆ.

Read More

ಮಡಿಕೇರಿ ಅ.9 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಿರಿಯ ನಾಗರಿಕರ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಹಿರಿಯ ನಾಗರಿಕರು: ತಮ್ಮ ಆಶೋತ್ತರಗಳು, ಯೋಗಕ್ಷೇಮ ಮತ್ತು ಹಕ್ಕುಗಳನ್ನು ಸ್ಥಳೀಯ ಮತ್ತು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬಲ್ಲ ಸಶಕ್ತರು’ ಎಂಬ ಘೋಷವಾಕ್ಯದೊಂದಿಗೆ ನಗರದ ಶಿಶು ಕಲ್ಯಾಣ ಸಂಸ್ಥೆಯಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ನಡೆಯಿತು. ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರು ಕಾರ್ಯಕ್ರಮ ಉದ್ಘಾಟಿಸಿ, ಹಿರಿಯ ನಾಗರಿಕರು ಸಮಾಜದ ಆಸ್ತಿ. ಇವರು ಪ್ರತಿಯೊಂದು ಕ್ಷೇತ್ರದಲ್ಲಿ ಮಾಡಿರುವಂತಹ ಸಾಧನೆಗಳು ಮಾದರಿಯಾಗಿವೆ. ಹಿರಿಯ ನಾಗರಿಕರ ಅನುಭವ ನಮಗೆ ದಾರಿದೀಪ ಎಂದರು.  ಹಿರಿಯ ನಾಗರಿಕರು ದೇಶದ ಸಂಪತ್ತು. ಇವರಿಗಾಗಿ ಸರ್ಕಾರವು 10 ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಹಿರಿಯ ನಾಗರಿಕರ ಪಾಲನೆ ಪೋಷಣೆ ಸಂರಕ್ಷಣೆ ಕಾಯ್ದೆ 2018 ಜಾರಿಗೊಳಿಸಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಹಿರಿಯರಿಗೆ ಮನವಿ…

Read More

ವಿರಾಜಪೇಟೆ ಅ.10 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿರಾಜಪೇಟೆ ವತಿಯಿಂದ ನಗರದ ಕಚೇರಿಯಲ್ಲಿ ಆಯುಧ ಮತ್ತು ಕಚೇರಿ ಪೂಜೆ ಮಹೋತ್ಸವ ಸಡಗರ ಸಂಭ್ರಮದಿಂದ ನಡೆಯಿತು. ವಿವಿಧ ಬಗೆಯ ಹೂವುಗಳಿಂದ ವಿಶೇಷವಾಗಿ ಹಾಗೂ ಬಣ್ಣ ಬಣ್ಣದ ರಂಗೋಲಿಯಿಂದ ಕಚೇರಿಯನ್ನು ಅಲಂಕಾರಿಗೊಳಿಸಲಾಗಿತ್ತು, ಶ್ರೀ ಲಕ್ಷ್ಮಿ ದೇವಿಯ ವಿಗ್ರಹವನ್ನು ಪ್ರತಿಷ್ಠಾಪಿಸಿ, ದೇವಿಗೆ ಹಾಗೂ ಕಚೇರಿ ಸಿಬ್ಬಂದಿಗಳ ವಾಹನಗಳಿಗೆ ಪೂಜೆ ಸಲ್ಲಿಸಿ, ಮಹಾ ಮಂಗಳಾರತಿ ಮಾಡಲಾಯಿತು ಬಳಿಕ ಪ್ರಸಾದ ವಿತರಣೆ ಮಾಡಲಾಯಿತು. ಜಿಲ್ಲಾ ಯೋಜನಾ ನಿರ್ದೇಶಕಿ ಲೀಲಾವತಿ ಅವರು ಮಾತನಾಡಿ ನವರಾತ್ರಿ ವೇಳೆ ಶಕ್ತಿ ದೇವತೆಗಳ ಆರಾಧನೆ ಮಾಡಿ ಒಂಬತ್ತು ದಿನಗಳ ಕಾಲ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಇದರ ಅಂಗವಾಗಿ ಕಛೇರಿಯಲ್ಲಿ ದೇವಿಯ ಆರಾದನೆ ನಡೆಸಲಾಯಿತು. ಶ್ರೀ ಕ್ಷೇತ್ರದ ಮಂಜುನಾಥ ಸ್ವಾಮಿ ಹಾಗೂ ದೇವತೆಗಳ ಅನುಗ್ರಹದಿಂದ ಉತ್ತಮ ಮಳೆ ಬೆಳೆಯಾಗಿ ಕರುನಾಡು ಸಂಪತ್ಭರಿತವಾಗಿರಲಿ ಎಂದು ಆಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕು ಯೋಜನಾ ಅಧಿಕಾರಿ ಹರೀಶ್, ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ…

Read More

ಮಡಿಕೇರಿ NEWS DESK ಅ.9 : ಹರ್ ಮಂದಿರ್ ಆಶ್ರಮ ವಸತಿ ಶಾಲೆಯಲ್ಲಿ ನಡೆದ ಅಗ್ನಿ ಅವಘಡದಲ್ಲಿ 2ನೇ ತರಗತಿಯ ವಿದ್ಯಾರ್ಥಿಯೋರ್ವ ಸಾವನ್ನಪ್ಪಿರುವ ಘಟನೆ ಮಡಿಕೇರಿ ತಾಲ್ಲೂಕಿನ ಬೆಟ್ಟಗೇರಿ ಗಾ.ಪಂ ವ್ಯಾಪ್ತಿಯ ಹೆರವನಾಡು ಗ್ರಾಮದ ಕಾಟಕೇರಿ ಗ್ರಾಮದಲ್ಲಿ ನಡೆದಿದೆ. ಅದೃಷ್ಟವಶಾತ್ ಉಳಿದ 52 ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾಗಮಂಡಲ ಹೋಬಳಿ ಚೆಟ್ಟಿಮಾನಿ ಗ್ರಾಮದ ಕೃಷಿಕ ಕೇಕಡ ಅನಿಲ್ ಕುಮಾರ್ ಹಾಗೂ ಕುಂದಚೇರಿ ಸರಕಾರಿ ಶಾಲೆಯ ಅತಿಥಿ ಶಿಕ್ಷಕಿ ತ್ರಿವೇಣಿ ದಂಪತಿಯ ಪುತ್ರ ಪುಷ್ಪಕ್ (7) ಅಗ್ನಿ ದುರಂತಕ್ಕೆ ಬಲಿಯಾದ ಬಾಲಕನಾಗಿದ್ದಾನೆ. ದೆಹಲಿಯ ಎನ್‌ಜಿಓ ಸಂಸ್ಥೆ ಕಾಟಕೇರಿ ಗ್ರಾಮದಲ್ಲಿ ನಡೆಸುತ್ತಿರುವ ಹರ್ ಮಂದಿರ್ ಆಶ್ರಮ ವಸತಿ ಶಾಲೆಯ ವಸತಿ ನಿಲಯದಲ್ಲಿ ಗುರುವಾರ ನಸುಕಿನ 4 ಗಂಟೆಯ ವೇಳೆಗೆ ಬೆಂಕಿ ಕಾಣಿಸಿಕೊಂಡಿದೆ. ಗಾಢ ನಿದ್ದೆಯಲ್ಲಿದ್ದ ಒಟ್ಟು 53 ವಿದ್ಯಾರ್ಥಿಗಳಲ್ಲಿ 52 ಮಂದಿ ಹೇಗೋ ಹೊರಗೆ ಓಡಿ ಬಂದಿದ್ದಾರೆ. ಆದರೆ ಪುಷ್ಪಕ್ ಹೊರ ಬರಲಾಗದೆ ಬೆಂಕಿಯಲ್ಲಿ ಸಿಲುಕಿ ಅಸುನೀಗಿದ್ದಾನೆ. ಬೆಂಕಿ ಅವಘಡದಲ್ಲಿ ವಿದ್ಯಾರ್ಥಿಗಳಾದ ಸಿದ್ದಾಪುರದ ತನ್ವಿತ್…

Read More

ಮಡಿಕೇರಿ NEWS DESK ಅ.9 : ಕಾಟಕೇರಿಯ ‘ಹರ್ ಮಂದಿರ’ ವಸತಿ ಶಾಲೆಯಲ್ಲಿ ಅಗ್ನಿ ಅವಘಡಕ್ಕೆ ತುತ್ತಾಗಿ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಾಗಿರುವ ಮಕ್ಕಳು ಹಾಗೂ ಸಿಬ್ಬಂದಿಗಳ ಆರೋಗ್ಯವನ್ನು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಗುರುವಾರ ಭೇಟಿ ನೀಡಿ ವಿಚಾರಿಸಿದರು. ಅಗ್ನಿ ಅವಘಡಕ್ಕೆ ಕಾರಣ ಮತ್ತಿತರ ಬಗ್ಗೆ ಅಲ್ಲಿನ ಸಿಬ್ಬಂದಿಯಿಂದ ಮಾಹಿತಿ ಪಡೆದರು. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಎ.ಎಸ್.ಪೊನ್ನಣ್ಣ ಅವರು ವಸತಿ ಶಾಲೆಯಲ್ಲಿ ಆಕಸ್ಮಿಕವಾಗಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಎರಡನೇ ತರಗತಿಯ ವಿದ್ಯಾರ್ಥಿ ಮೃತಪಟ್ಟು, ಇಬ್ಬರು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಮಾಹಿತಿ ದೊರೆತ ತಕ್ಷಣ ಆಗಮಿಸಿ ಮಕ್ಕಳ ಹಾಗೂ ಸಿಬ್ಬಂದಿಯ ಆರೋಗ್ಯ ವಿಚಾರಿಸಿ ಮಾಹಿತಿ ಪಡೆದಿದ್ದೇನೆ ಎಂದರು. ಮಾಹಿತಿ ತಿಳಿದ ತಕ್ಷಣ ಜಿಲ್ಲಾಧಿಕಾರಿ ಅವರು ಭೇಟಿ ನೀಡಿ ಪರಿಶೀಸಿದ್ದಾರೆ ಎಂದು ತಿಳಿಸಿದರು. ವಿದ್ಯುತ್ ಅವಘಡ ಬಗ್ಗೆ ಸತ್ಯ ಹೊರಬರಬೇಕು. ಆ ನಿಟ್ಟಿನಲ್ಲಿ ತನಿಖೆಯಿಂದ ತಿಳಿಯಲಿದೆ ಎಂದು ಎ.ಎಸ್.ಪೊನ್ನಣ್ಣ ಅವರು…

Read More

ಮಡಿಕೇರಿ ಅ.9 NEWS DESK : ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಶೂ ಎಸೆದ ಪ್ರಕರಣವನ್ನು ಖಂಡಿಸಿ ಅ.13 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸುವುದಾಗಿ ಪ್ರಗತಿಪರ, ಚಿಂತಕರ, ದಲಿತಪರ ಸಂಘಟನೆಗಳ ಒಕ್ಕೂಟ ತಿಳಿಸಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪದಾಧಿಕಾರಿಗಳಾದ ಅಂಬೇಡ್ಕರ್ ವಿಚಾರವಾದಿ ಸಿ.ಜೆ.ಮೋಹನ್ ಮೌರ್ಯ, ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ವಿರುದ್ಧ ನಡೆದಿರುವ ಘಟನೆ ಸಂವಿಧಾನ ವಿರೋಧಿ ಕೃತ್ಯವಾಗಿದ್ದು, ಆ ಮೂಲಕ ನ್ಯಾಯಾಂಗ ವ್ಯವಸ್ಥೆಗೆ ಅಪಮಾನ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದುಷ್ಕೃತ್ಯವೆಸಗಿದ ವಕೀಲನ ವಿರುದ್ಧ ಕೇಂದ್ರ ಸರ್ಕಾರ ‘ದೇಶ ದ್ರೋಹ’ದ ಪ್ರಕರಣವನ್ನು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಗಲ್ಲಾಗಿರುವ ಸಂವಿಧಾನಕ್ಕೆ ಮಾಡಿರುವ ಅಪಮಾನದ ಘಟನೆ ಇದಾಗಿದ್ದು, ಇದನ್ನು ಪ್ರತಿಯೊಬ್ಬ ನಾಗರಿಕರು ವಿರೋಧಿಸಬೇಕೆಂದು ಕರೆ ನೀಡಿದರು. ದುಷ್ಕೃತ್ಯವೆಸಗಿದ ವಕೀಲನನ್ನು ದೆಹಲಿ ವಕೀಲರ ಸಂಘ ಸಂಘದಿಂದ ಉಚ್ಛಾಟಿಸಿದೆ. ದೆಹಲಿ ವಕೀಲರ ಸಂಘಕ್ಕೆ ಇರುವ ಬದ್ಧತೆ ಕೇಂದ್ರದ ಬಿಜೆಪಿ…

Read More

ಮಡಿಕೇರಿ ಅ.9 NEWS DESK : ಮಡಿಕೇರಿ ದಸರಾ ಕ್ರೀಡಾ ಸಮಿತಿಯಿಂದ ಅ.12ರಂದು ನಗರದ ಗಾಂಧಿ ಮೈದಾನದಲ್ಲಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯಲಿದ್ದು, ಪಂದ್ಯಾವಳಿಯ ಆಹ್ವಾನ ಪತ್ರಿಕೆ ಮತ್ತು ಆಕರ್ಷಕ ಟ್ರೋಫಿಗಳನ್ನು ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅನಾವರಣಗೊಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಪ್ರದೀಪ್ ಕರ್ಕೆರ, ದಸರಾ ಉತ್ಸವದ ಸಂದರ್ಭ ನಡೆಯಬೇಕಿದ್ದ ಕಬಡ್ಡಿ ಪಂದ್ಯಾವಳಿಯನ್ನು ಮಳೆಯ ಕಾರಣಗಳ ಹಿನ್ನೆಲೆ ಇದೀಗ ನಡೆಸಲಾಗುತ್ತಿದೆ. ಪಂದ್ಯಾವಳಿ ಮುಕ್ತವಾಗಿದ್ದು, ಸುಮಾರು ಇಪ್ಪತ್ತು ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ನಾಕ್ ಔಟ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದೆಯೆಂದು ತಿಳಿಸಿದರು. ಪುರುಷರ ವಿಭಾಗದ ಕಬಡ್ಡಿ ಪಂದ್ಯಾವಳಿಗೆ ಪ್ರವೇಶ ಶುಲ್ಕವಾಗಿ ಪ್ರತಿ ತಂಡಕ್ಕೆ 10 ಸಾವಿರ ರೂ.ಗಳನ್ನು , ಮಹಿಳಾ ವಿಭಾಗಕ್ಕೆ 2 ಸಾವಿರ ರೂ.ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ. ಪಂದ್ಯಾವಳಿ ನಡೆಯುವ ದಿನದವರೆಗೆ ತಂಡಗಳು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಪಂದ್ಯಾವಳಿ ಮಧ್ಯಾಹ್ನ 2 ಗಂಟೆಗೆ ಆರಂಭಗೊಳ್ಳಲಿದ್ದು, ಅಂತಿಮ ಪಂದ್ಯವು ಅಂದು ರಾತ್ರಿಯೆ ಹೊನಲು ಬೆಳಕಿನಡಿ ನಡೆಯಲಿದೆಯೆಂದು ಸ್ಪಷ್ಟಪಡಿಸಿದರು. :: ವಿಜೇತರಿಗೆ…

Read More

ಮಡಿಕೇರಿ ಅ.9 NEWS DESK : ಧರ್ಮಸ್ಥಳದಲ್ಲಿ ನಡೆದ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಕೊಡಗು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದೆ. ಸೌಜನ್ಯ ಪ್ರಕರಣ ನಡೆದು 13 ವರ್ಷಗಳೇ ಕಳೆದಿದ್ದರೂ ನೈಜ ಆರೋಪಿಗಳನ್ನು ಬಂಧಿಸಲು ಆಡಳಿತ ವ್ಯವಸ್ಥೆಯಿಂದ ಸಾಧ್ಯವಾಗಿಲ್ಲ. ಆದ್ದರಿಂದ ವೇದಿಕೆ ಮೂಲಕ ರಾಜ್ಯವ್ಯಾಪಿ ‘ನ್ಯಾಯಕ್ಕಾಗಿ ಜನಾಗ್ರಹ ಕಾರ್ಯಕ್ರಮ’ ಹಮ್ಮಿಕೊಂಡಿದ್ದು, ಇದರ ಭಾಗವಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರ ಮೂಲಕ ಮನವಿ ಸಲ್ಲಿಸಿರುವುದಾಗಿ ವೇದಿಕೆಯ ಪ್ರಮುಖರು ಹಾಗೂ ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಅವರು ತಿಳಿಸಿದರು. ಸೌಜನ್ಯ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸದ ಮತ್ತು ಸೂಕ್ತ ತನಿಖೆ ನಡೆಸದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸೂಕ್ತ ಎಂಬ ಆದೇಶವನ್ನು ಸರಕಾರ ಪಾಲಿಸಬೇಕು. ವೈದ್ಯಕೀಯ ಅಧಿಕಾರಿಗಳು ಹಾಗೂ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ನೈಜ ಆರೋಪಿಗಳ…

Read More