ಲೇಖಕ: admin

ಭಾಗಮಂಡಲ NEWS DESK ಆ.15 : ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದ ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಶ್ರೀ ಭಗಂಡೇಶ್ವರ – ತಲಕಾವೇರಿ ದೇವಾಲಯದ ಪ್ರಬಾರ ಕಾರ್ಯನಿರ್ವಹಣಾ ಅಧಿಕಾರಿಗಳು ಹಾಗೂ ಮಡಿಕೇರಿ ತಾಲ್ಲೂಕು ಕಛೇರಿ ಚುನಾವಣಾ ಶಿರಸ್ತೇದಾರರಾದ ಎನ್.ಜಿ.ಚಂದ್ರಶೇಖರ್ ಅವರು ಧ್ವಜಾರೋಹಣ ನೆರವೇರಿಸಿದರು, ದೇವಾಲಯದ ಸಿಬ್ಬಂದಿವರ್ಗ, ಅರ್ಚಕರು, ತಕ್ಕಮುಖ್ಯಸ್ಥರು, ಕಂದಾಯ ಇಲಾಖೆಯ ಸಿಬ್ಬಂದಿಗಳು, ಸ್ಥಳೀಯ ಮುಖಂಡರು ಹಾಗೂ ಭಕ್ತರು ಪಾಲ್ಗೊಂಡಿದ್ದರು. ನೆರೆದಿದ್ದವರಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು.

Read More

ಮಡಿಕೇರಿ ಆ.15 NEWS DESK : ಮಡಿಕೇರಿ ನಗರ ಚೇಂಬರ್ ಘಟಕದಿಂದ ನಗರದ ಚೌಕಿ ಆವರಣದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಪದ್ಮಶ್ರೀ ಪುರಸ್ಕೃತರಾದ ರಾಣಿ ಮಾಚಯ್ಯ ಅವರು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಏಕ ಬಳಕೆ ಮುಕ್ತ ಪ್ಲಾಸ್ಟಿಕ್ ನಗರ ಎಂಬ ಘೋಷಣೆಯ ಬಿತ್ತಿ ಪತ್ರವನ್ನು ಬಿಡುಗಡೆಗೊಳಿಸಿ 2ಲೀಟರ್ ವರೆಗಿನ ಕುಡಿಯುವ ನೀರಿನ ಬಾಟಲಿಯನ್ನು ಬಳಸದಂತೆ ಮನವಿ ಮಾಡಲಾಯಿತು. ಕಾರ್ಯಕ್ರಮದಲ್ಲಿ ನಗರ ಚೇಂಬರ್ ನ ನಿರ್ದೇಶಕರು ಮತ್ತು ವರ್ತಕರು ಉಪಸ್ಥಿತರಿದ್ದರು. ನಗರ ಘಟಕ ಅಧ್ಯಕ್ಷರಾದ ಸಂತೋಷ್ ಅನ್ವೇಕರ್ ಸ್ವಾಗತಿಸಿ ವಂದಿಸಿದರು.

Read More

ಮಡಿಕೇರಿ ಆ.15 NEWS DESK : ರಾಣಿಪೇಟೆಯ ಪೌರಕಾರ್ಮಿಕರ ವಸತಿ ಗೃಹದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ನಗರಸಭಾ ಸದಸ್ಯರಾದ ಮುಸ್ತಫ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ನೆರೆದಿದ್ದ ನಿವಾಸಿಗಳಿಗೆ ಸಿಹಿ ವಿತರಿಸಲಾಯಿತು.

Read More

ಮಡಿಕೇರಿ ಆ.15 NEWS DESK : ಪಾಲಿಬೆಟ್ಟ ಉಪ ಅಂಚೆ ಕಚೇರಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಅಂಚೆ ಕಚೇರಿಯ ಉಪ ಪೋಸ್ಟ್ ಮಾಸ್ಟರ್ ಹೆಚ್.ಬಿ.ಗಣೇಶ್ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಯಂಗ್ ಇಂಡಿಯಾ ಕ್ಲಬ್‍ನ ಸಿ.ಎಂ.ಹ್ಯಾರಿಸ್, ಸಬ್ ಇನ್ಸ್‍ಪೆಕ್ಟರ್ ಮಂಜುನಾಥ್, ಗ್ರಾ.ಪಂ ಅಧ್ಯಕ್ಷರು, ಸದಸ್ಯರು, ಯಂಗ್ ಇಂಡಿಯಾ ಕ್ಲಬ್‍ನ ಸದಸ್ಯರು, ಅಂಚೆ ಕಚೇರಿ ಸಿಬ್ಬಂದಿಗಳು ಹಾಜರಿದ್ದರು.

Read More

ವಿರಾಜಪೇಟೆ ಆ.15 NEWS DESK : ವಿರಾಜಪೇಟೆ ಪುರಸಭೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಧ್ವಜಾರೋಹಣ ನೆರವೇರಿಸಿ, ಮಾತನಾಡಿ ಭಾರತೀಯರ ಪಾಲಿಗೆ ಇಂದು ಅತ್ಯಂತ ಶುಭದಿನ. ಪರಕೀಯರ ಆಳ್ವಿಕೆಯನ್ನು ಹೊಡೆದೋಡಿಸಿ ಭಾರತೀಯರೇ ನಮ್ಮ ದೇಶವನ್ನು ಆಳಲು ಆರಂಭಿಸಿದ ಐತಿಹಾಸಿಕ ದಿನ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರೆಲ್ಲ ನೀಡಿದ ತ್ಯಾಗ, ಬಲಿದಾನವನ್ನು ನಾವೆಲ್ಲರೂ ಸ್ಮರಿಸಲೇಬೇಕು. ಅವರೆಲ್ಲರಿಗೂ ವಂದಿಸುತ್ತಾ, ಸ್ಮರಿಸುತ್ತಾ, ಅವರ ಕೆಚ್ಚೆದೆಯ ಹೋರಾಟವನ್ನು ನೆನೆದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದರೆ, ಅದಕ್ಕೆ ನಿಜವಾದ ಅರ್ಥ ದೊರೆತಂತಾಗುತ್ತದೆ ಎಂದು ಬಣ್ಣಿಸಿದರು.  ಈ ಸಂದರ್ಭ ಪುರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು, ತಾಲೂಕು ದಂಡಾಧಿಕಾರಿಗಳು ಹಾಗೂ ಅಧಿಕಾರಿಗಳು, ಸರಕಾರಿ ನಾಮನಿರ್ದೇಶಕ ಅಧ್ಯಕ್ಷರು ಹಾಗೂ ಸದಸ್ಯರುಗಳು, ಆಹ್ವಾನಿತ ಗಣ್ಯರು, ಪುರಸಭೆಯ ಪ್ರಮುಖರು ಹಾಗೂ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Read More

ಮಡಿಕೇರಿ NEWS DESK ಆ.15 : ಮಡಿಕೇರಿ ನಗರದ ಮಲ್ಲಿಕಾರ್ಜುನ ನಗರದಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡರಾಮ ದೇವಾಲಯದ ಆವರಣದಲ್ಲಿ ನಗರಸಭಾ ಸದಸ್ಯ ಮುಸ್ತಫ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಅವರು ಪ್ರತಿಯೊಬ್ಬರು ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ನಂತರ ಸಿಹಿ ಹಂಚಿದರು. ದೇವಾಲಯ ಟ್ರಸ್ಟ್ ನ ಪದಾಧಿಕಾರಿಗಳು, ಶ್ರೀರಾಮ ಸೇವಾ ಸಮಿತಿಯ ಪದಾಧಿಕಾರಿಗಳು, ಜ್ಯೋತಿ ಯುವಕ ಸಂಘದ ಸದಸ್ಯರು ಹಾಗೂ ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು.

Read More

ಮಡಿಕೇರಿ NEWS DESK ಆ.15 : ಮಡಿಕೇರಿ ಆಕಾಶವಾಣಿ ಕೇಂದ್ರದಲ್ಲಿ 79ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ನಿಲಯದ ಸಹಾಯಕ ಅಭಿಯಂತರರು ಹಾಗೂ ತಾಂತ್ರಿಕ ವಿಭಾಗದ ಮುಖ್ಯಸ್ಥರಾದ ಪಿ.ಆನಂದನ್ ಅವರು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ನಿಲಯದ ಪ್ರಸರಣ ಕಾರ್ಯ ನಿರ್ವಾಹಕರಾದ ಎಂ.ಶಕುಂತಲಾ, ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ಕೆ.ಪಿ.ಶಿವಾನಂದನ್, ಕೆ.ಟಿ.ನಾಗರಾಜ್, ಕೆ.ಎಸ್.ಉದಯಕುಮಾರ್, ಬಿ.ಕೆ. ಲೋಕೇಶ್, ಹೆಚ್.ಆರ್.ಜೀವನ್ ಕುಮಾರ್, ಗ್ರಂಥಪಾಲಕ ಪಂಕಜ್ ಕುಡ್ತರ್ಕರ್ ಹಾಗೂ ಇತರ ಸಿಬ್ಬಂದಿಗಳು ಹಾಜರಿದ್ದು, ರಾಷ್ಟ್ರಧ್ವಜಕ್ಕೆ ಗೌರವ ಅರ್ಪಿಸಿದರು.

Read More

ಮಡಿಕೇರಿ ಆ.15 NEWS DESK : ನಗರದ ಹಿಂದುಸ್ಥಾನ್ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ನಗರಸಭಾ ಸದಸ್ಯರಾದ ಮಸ್ತಾಫಾ ಧ್ವಜಾರೋಹಣ ನೆರವೇರಿಸಿದರು. ಶಾಲಾ ಶಿಕ್ಷಕಿ ಕೆ.ಬಿ.ವಿಮಲಾ, ಅಂಗನವಾಡಿ ಶಿಕ್ಷಕಿ ಕೆ.ಬಿ.ಸುಮತಿ, ಸಹಾಯಕಿ ಕೆ.ಎಂ.ಅಂಬಿಕಾ, ಹಳೆ ವಿದ್ಯಾರ್ಥಿಗಳಾದ ಕೆ.ಸಿ.ಜನಾರ್ಧನ, ಹಿರಿಯ ನಾಗರಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು. ಬಳಿಕ ಎಲ್ಲರಿಗೂ ಸಿಹಿ ಹಂಚಲಾಯಿತು.

Read More

ಮಡಿಕೇರಿ ಆ.15 NEWS DESK : ಇಂದಿರಾನಗರದ ಜ್ಯೋತಿ ಯುವಕ ಸಂಘದ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಹಿರಿಯರಾದ ರಜ಼ಾಕ್ ಧ್ವಜಾರೋಹಣ ನೇರವೇರಿಸಿದರು. ಈ‌ ಸಂದರ್ಭ ಯುವಕ‌ ಸಂಘದ ಜಯಕುಮಾರ್, ಮನೋಜ್, ಜಾವೀದ್, ಶ್ರೀಕಾಂತ್, ಮಕ್ಕಳು ಗ್ರಾಮಸ್ಥರು ಉಪಸ್ಥಿತಿ ಇದ್ದರು. ಕಾರ್ಯಕ್ರಮದಲ್ಲಿ ನೆರೆದಿದ್ದವರಿಗೆ ಸಿಹಿ ಹಂಚಲಾಯಿತು.

Read More

ಮಡಿಕೇರಿ ಆ.15 NEWS DESK : ಮೂಡ ಕಚೇರಿಯಲ್ಲಿ  79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.  ಮೂಡ ಅಧ್ಯಕ್ಷರಾದ ರಾಜೇಶ್  ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಸದಸ್ಯರಾದ ಚಂದ್ರಶೇಖರ್, ಕಾನೆಹಿತ್ಲು ಮೊಣ್ಣಪ್ಪ, ಸುದಯ್ ನಾಣಯ್ಯ, ಮೀನಾಜ್ ಪ್ರವೀಣ್, ಆಯುಕ್ತರಾದ ಹೇಮಾಮಾಲಿನಿ ಹಾಗೂ ಕಚೇರಿ ಸಿಬ್ಬಂದಿಗಳಾದ ಚೈತ್ರಾ, ಅನಿತಾ ಹಾಜರಿದ್ದರು.

Read More