ಲೇಖಕ: admin

ಮಡಿಕೇರಿ, NEWS DESK ಆ.24:-ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‍ಐಆರ್)-2026 ರ ಪರಿಷ್ಕøತ ವೇಳಾ ಪಟ್ಟಿಯ ಕರಡು ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಅವರು ಸೋಮವಾರ ಬಿಡುಗಡೆ ಮಾಡಿದರು. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಜತೆ ಸೋಮವಾರ ನಡೆದ ಸಭೆ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ಅವರು, ಪ್ರಕಟಿಸಿದ ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ 567 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 4,05,803 ಮತದಾರರು ಇದ್ದು, ಇವರಲ್ಲಿ 1,98,294 ಪುರುಷರು ಮತ್ತು 2,07,505 ಮಹಿಳಾ ಮತದಾರರು ಜೊತೆಗೆ 4 ಇತರೆ ಮತದಾರರನ್ನು ಒಳಗೊಂಡಿದೆ ಎಂದರು. ವಿಧಾನಸಭಾ ಕ್ಷೇತ್ರವಾರು ಗಮನಿಸಿದಾಗ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,09,115 ಮತದಾರರು ಇದ್ದು, 1,01,316 ಪುರುಷ ಮತದಾರರು ಮತ್ತು 1,07,797 ಮಹಿಳಾ ಮತದಾರರು ಇತರರು ಇಬ್ಬರು ಮತದಾರರನ್ನು ಒಳಗೊಂಡಿದ್ದು, 285 ಮತಗಟ್ಟೆಗಳನ್ನು ಹೊಂದಿದೆ ಎಂದು ಹೇಳಿದರು. ಹಾಗೆಯೇ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕರಡು ಮತದಾರರ ಪಟ್ಟಿಯಂತೆ 1,96,688 ಮತದಾರರು ಇದ್ದು, 96,978 ಪುರುಷರು…

Read More

ಮಡಿಕೇರಿ, NEWS DESK ಆ.24 : ಈಶಾ ಔಟ್‌ರೀಚ್ ಸಹಕಾರ ಮತ್ತು ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿರುವ ನಾಪೋಕ್ಲುವಿನ ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆ(ಎಫ್‌ಪಿಓ)ಯು ಮಾರುಕಟ್ಟೆ ವಿಭಾಗದಲ್ಲಿ ರಾಜ್ಯ ಮಟ್ಟದ ಶ್ರೇಷ್ಠತಾ ಪ್ರಶಸ್ತಿಗೆ ಭಾಜನವಾಗಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷÀ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅವರು, ಬೆಂಗಳೂರಿನ ರೈತ ಉತ್ಪಾದಕ ಸಂಸ್ಥೆಗಳ ಉತ್ಕೃಷ್ಠ ಕೇಂದ್ರದಲ್ಲಿ ಆಯೋಜಿತ ಸಂಸ್ಥೆಯ 9ನೇ ಸಂಸ್ಥಾಪನಾ ದಿನಾಚರಣೆೆ ಸಮಾರಂಭದಲ್ಲಿ ಪೊನ್ನಾಡ್ ಎಫ್‌ಪಿಓಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ಎಂದರು. ರಾಜ್ಯ ವ್ಯಾಪಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಮಟ್ಟದ 1750 ಎಫ್‌ಪಿಓ ಮತ್ತು ಕೇಂದ್ರ ಸರ್ಕಾರದ ಪ್ರಾಯೋಜಕತ್ವದಡಿ ನಬಾರ್ಡ್ ಸಹಕಾರದೊಂದಿಗೆ ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ 250 ಎಫ್‌ಪಿಓ ಸೇರಿದಂತೆ ಒಟ್ಟು 2 ಸಾವಿರ ಎಫ್‌ಪಿಓಗಳ ಪೈಕಿ ನಾಪೋಕ್ಲು ಪೊನ್ನಾಡ್ ರೈತ ಉತ್ಪಾದಕರ ಸಂಸ್ಥೆ ಮಾರುಕಟ್ಟೆ ವಿಭಾಗದಲ್ಲಿ ಗಣನೀಯ ಸಾಧನೆ ಮಾಡುವ ಮೂಲಕ ಪ್ರಥಮ ಸ್ಥಾನದ ಗೌರವಕ್ಕೆ ಪಾತ್ರವಾಗಿದೆ ಎಂದು ತಿಳಿಸಿದರು. 15 ಕೋಟಿ ವ್ಯವಹಾರ- ಪೊನ್ನಾಡ್ ರೈತ ಉತ್ಪಾದಕರ ಸಂಸ್ಥೆ…

Read More

ಮಡಿಕೇರಿ, NEWS DESK ಆ.24 : ಕಾವೇರಿ ನದಿಯ ಸಂರಕ್ಷಣೆ, ಸ್ವಚ್ಛತೆ ಮತ್ತು ಜನಜಾಗೃತಿಗಾಗಿ 16ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆ ಅ.26ರಿಂದ ತಲಕಾವೇರಿಯಲ್ಲಿ ಆರಂಭವಾಗಿ ನ.18ರಂದು ಕಾವೇರಿಯು ಬಂಗಾಳಕೊಲ್ಲಿಯಲ್ಲಿ ಸಂಗಮವಾಗುವ ತಮಿಳುನಾಡಿನ ಪೂಂಪುಹಾರ್ ವರೆಗೆ ನಡೆಯಲಿದೆ ಎಂದು ರಾಜ್ಯ ಸಂಚಾಲಕ ಎಂ.ಎನ್.ಚAದ್ರಮೋಹನ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಭಾರತ ಸನ್ಯಾಸಿ ಸಂಘದ ಆಶ್ರಯದಲ್ಲಿ, ಕಾವೇರಿ ರಿವರ್ ವಾಟರ್ ಪ್ರೊಟೆಕ್ಷನ್ ಟ್ರಸ್ಟ್, ಕಾವೇರಿ ರಿವರ್ ಸೇವಾ ಟ್ರಸ್ಟ್ ಹಾಗೂ ನಮಾಮಿ ಕಾವೇರಿ ಸಹಯೋಗದಲ್ಲಿ ರಥಯಾತ್ರೆ ಆಯೋಜಿಸಲಾಗಿದೆ ಎಂದರು. ಕಾವೇರಿ ನದಿ ದಕ್ಷಿಣ ಭಾರತದ ಕೋಟ್ಯಂತರ ಜನರು ಹಾಗೂ ಜಾನುವಾರುಗಳಿಗೆ ಜೀವಜಲವಾಗಿದ್ದು, ಇತ್ತೀಚಿನ ದಿನಗಳಲ್ಲಿ ಮಾಲಿನ್ಯ, ಅರಣ್ಯ ನಾಶ, ಪ್ಲಾಸ್ಟಿಕ್ ತ್ಯಾಜ್ಯ, ರಾಸಾಯನಿಕ ಕೃಷಿ, ಒಳಚರಂಡಿ ಹಾಗೂ ಕೈಗಾರಿಕಾ ತ್ಯಾಜ್ಯಗಳಿಂದ ನದಿಯ ಪಾವಿತ್ರ‍್ಯತೆ ಹಾಳಾಗುತ್ತಿದೆ. ನದಿ ತಟಗಳ ಒತ್ತುವರಿ ಮತ್ತು ಜಲಮೂಲಗಳ ನಾಶದಿಂದ ಕಾವೇರಿ ತನ್ನ ಮೂಲ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ರಥಯಾತ್ರೆಯ ಮೂಲಕ…

Read More

ಮಡಿಕೇರಿ, NEWS DESK ಆ. 24 – ಎಸ್. ಕಟ್ಟೆಮಾಡು ಸಕ೯ರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ರೋಟರಿ ಮಿಸ್ಟಿ ಹಿಲ್ಸ್  ವತಿಯಿಂದ  ವಿಶ್ವ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಯಿತು. ಕಟ್ಟೆಮಾಡು ಗ್ರಾಮದ ಕಳ್ಳೀರ   ಗಣಪತಿ, ಬಿದ್ರುಪಣೆ   ಬೋಜಪ್ಪ ಹಾಗೂ ನಂದೇಟಿರ  ದೇವಯ್ಯ ಅವರನ್ನು ಮಿಸ್ಟಿ ಹಿಲ್ಸ್ ವತಿಯಿಂದ ಸನ್ಮಾನಿಸಲಾಯಿತು. ವ್ಯಕ್ತಿ ಪರಿಚಯವನ್ನು ಶಾಲೆಯ ಮುಖ್ಯ ಶಿಕ್ಷಕಿಬಿಂದು ಹಾಗೂ  ಪ್ರೀತ ಮಾಡಿದರು.   ಸನ್ಮಾನ ಸ್ವೀಕರಿಸಿದ ಕಳ್ಳಿರ   ಗಣಪತಿ ಅವರು ತಮ್ಮ ಬಾಲ್ಯದ ಕಠಿಣ ಪರಿಶ್ರಮ ಮಾಡಿದರು.   ವಿದ್ಯಾರ್ಥಿಗಳು ಹಿರಿಯರನ್ನು ಗೌರವಿಸಬೇಕು ಎಂದು ಕಿವಿಮಾತು ಹೇಳಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಂದೇಟಿರ ದೇವಯ್ಯ   ತಮ್ಮ ಬಾಲ್ಯ,ಸೇನಾ ಅನುಭವದ ಬಗ್ಗೆ ತಿಳಿಸಿದರು.   ಮಿಸ್ಿ ಹಿಲ್ಸ್ ನಿದೇ೯ಶಕ  ಕಟ್ಟೆಮನೆ ಸೋನಾಜಿತ್   ಹಿರಿಯ ನಾಗರಿಕರ ದಿನದ ಮಹತ್ವದ ಕುರಿತು ಮಾತನಾಡಿದರು. ಶಿಕ್ಷಕಿ   ಪ್ರೀತ  ಹಿರಿಯ ಜೀವಿಗಳ ಕುರಿಾದ ತಮ್ಮ ಅನಿಸಿಕೆ ಹಂಚಿಕೊಂಡರು. ಶಾಲೆಯ ಎಸ್ ಡಿ…

Read More

ಮಡಿಕೇರಿ NEWS DESK ಆ.24 : ವಿಶ್ವ ಬುಡಕಟ್ಟು ದಿನಾಚರಣೆ ಹಾಗೂ 80ನೇ ಸ್ವಾತಂತ್ರ‍್ಯ ದಿನಾಚರಣೆಯ ಅಂಗವಾಗಿ ಸಂಸ್ಕೃತಿ ಸಿರಿ ಟ್ರಸ್ಟ್ ಕೊಡಗು ವತಿಯಿಂದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ ಹಾಗೂ ಭಾರತೀಯ ವೈದ್ಯಕೀಯ ಸಂಘ ಕೊಡಗು ಘಟಕದ ಸಹಯೋಗದಲ್ಲಿ ಬಾಳುಗೋಡು ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಬುಡಕಟ್ಟು ಸಾಂಸ್ಕೃತಿಕ ಕಾರ್ಯಕ್ರಮ, ವೈದ್ಯಕೀಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಬುಡಕಟ್ಟು ಸಮುದಾಯವು ವಿಶಿಷ್ಟ ಸಂಸ್ಕೃತಿ, ಪರಂಪರೆ, ಆಚಾರ-ವಿಚಾರ ಹಾಗೂ ಜೀವನ ಪದ್ಧತಿಯನ್ನು ಹೊಂದಿದ್ದು, ಅವುಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು. ಬುಡಕಟ್ಟು ಸಮುದಾಯದ ಮಕ್ಕಳು ಹಾಗೂ ಯುವಜನರಿಗೆ ಶಿಕ್ಷಣ, ಆರೋಗ್ಯ ಮತ್ತು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅಗತ್ಯ ಅವಕಾಶಗಳು ದೊರೆಯಬೇಕು ಎಂದರು.…

Read More

ಮಡಿಕೇರಿ, NEWS DESK  ಆ.24 –  ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ರಂದು ಸ.ಹಿ.ಪ್ರಾ.ಶಾಲೆ ಮರಗೋಡುವಿನಲ್ಲಿ ನಡೆಸಲಾಯಿತು. ಮಾಜಿ ಯೋಧ   ಐಮಂಡ ನಾಣಯ್ಯ  ನಿವೖತ್ತ ಶಿಕ್ಷಕ.  ಕೆಂಜನ ಕೆಂಚಪ್ಪ ನಿವೃತ್ತ ಶಿಕ್ಷಕಿ  ಕೆ.ಜಿ.ವಿಶಾಲಾಕ್ಷಿ  ಅವರನ್ನ ಸನ್ಮಾನಿಸಲಾಯಿತು. ನಿವೃತ್ತ ಶಿಕ್ಷಕಿ ವಿಶಾಲಾಕ್ಷಿ  ಮಾತನಾಡಿ,  ಪ್ರತಿಯೊಂದು ಕೆಲಸ ಕಾರ್ಯ ಮಾಡುವಾಗ ಹಿರಿಯರ ನೆನಪಿಸಿಕೊಳ್ಳಬೇಕು.ನಮ್ಮ ಜೀವನ ರೂಪಿಸಲು ಅವರ ಶ್ರಮ ಅಪಾರವಾದದ್ದು ಎಂಬ  ಕರೆ ನೀಡಿದರು. ಶಿಕ್ಷಕ ಕೆಂಜನ ಕೆಂಚಪ್ಪ ಮಾತನಾಡಿ, , ಹಿರಿಯರನ್ನು ಗುರುತಿಸಿ ಅವರನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯ ನಡೆದಿದೆ ಎಂದು   ರೋಟರಿ ಮಿಸ್ಟಿ  ಹಿಲ್ಸ್ ಸಂಸ್ಥೆಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ  ಮಿಸ್ಟಿ ಹಿಲ್ಸ್ ನಿದೇ೯ಶಕ ಕೋಚನ ಲವಿನ್   ಮಾತನಾಡಿ,   ಹಿರಿಯರು ಸಮಾಜದ ಮಾಣಿಕ್ಯ ಅವರ ಅನುಭವ ಸಮಾಜಕ್ಕೆ ಕೊಡುಗೆಯಾಗಿದೆ ಎಂದು ತಿಳಿಸಿದರು. ಶಾಲಾ ಮುಖ್ಯ ಶಿಕ್ಷಕಿ ಪಿ.ಎಂ.ಪದ್ಮಾವತಿ  ಅಧ್ಯಕ್ಷತೆ ವಹಿಸಿದ್ದ ಕಾಯ೯ಕ್ರಮದಲ್ಲಿ  ಮಿಸ್ಟಿ ಹಿಲ್ಸ್ ನಿದೇ೯ಶಕರಾದ  ಕಾಂಗೀರ ಸತೀಶ್,  ಸವಿತಾ,  ವರ್ಷಿತ, ಅರೆಕಾಡು ಶಾಲಾ ಸಹ…

Read More

ಮಡಿಕೇರಿ, NEWS DESK ಆ. 24  – ಪಾರಾಣೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಮಿಸ್ಟಿ ಹಿಲ್ಸ್ ನಿಂದ ಹಿರಿಯ ನಾಗರಿಕರಿಗೆ ಗೌರವ ನಮನ ಕಾಯ೯ಕ್ರಮ ಆಯೋಜಿಸಲಾಗಿತ್ತು. ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯೋಪಾಧ್ಯಾಯರಾದ ಕೆ.ಎ.. ಉಮ್ಮರ್ ನಿವೖತ್ತ ನಾಯಕ್ ಸುಬೇದಾರ್ ನಾಯಕಂಡ ಬೋಪಣ್ಣ ಅವರನ್ನು ಮಿಸ್ಟಿ ಹಿಲ್ಸ್ ವತಿಯಿಂದ ಸನ್ಮಾನಿಸಲಾಯಿತು. ಮಾತೃಭಾಷೆಯಾದ ಕನ್ನಡ ಮಾಧ್ಯಮದಲ್ಲಿ ಓದಿ ಸಮಾಜದಲ್ಲಿ ಉನ್ನತ ಹುದ್ದೆಯನ್ನು ಪಡೆಯಲು ಸಾದ್ಯ.ಮನಸಿದ್ದರೆ ಮಾರ್ಗ.ಎಂಬಂತೆ ಪ್ರತಿಯೊಬ್ಬರು ಏಕಾಗ್ರತೆಯಿಂದ ಓದಿ ಉತ್ತಮ ನಾಗರೀಕರಾಗಿ ಸಂಸ್ಕಾರವಂತ ಸಮಾಜ ನಿರ್ಮಾಣ ಮಾಡುವಂತೆ ಉಮ್ಮರ್ ಕರೆ ನೀಡಿದರು ಹಿರಿಯರು ನಮ್ಮ ಕುಟುಂಬದ ನಾವಿಕರು .ಅವರ ಮಾತುಗಳಿಗೆ ನಾವು ಕಿವಿಯಾಗಬೇಕು.ಅವರನ್ನು ಗೌರವಿಸುವುದು, ಪ್ರೀತಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ವಿದ್ಯಾಥಿ೯ಗಳು ಹಿರಿಯರಿಗೆ ನುಡಿ ನಮನ ಸಲ್ಲಿಸಿದರು. ರೋಟರಿ ಮಿಸ್ಟಿ ಹಿಲ್ಸ್ ಪರವಾಗಿ ಮಾತನಾಡಿದ ಡಾ.ಶುಭಾ ಕೆ.ಜಿ., ಶಿಕ್ಷಣ, ಆರೋಗ್ಯ , ಪ್ರಕೃತಿ ವಿಕೋಪದಂಥ ,ಅನೇಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಮಡಿಕೇರಿಯ ರೋಟರಿ ಮಿಸ್ಟಿ ಸಕ್ರಿಯವಾಗಿ ಕಳೆದ 22…

Read More

ಮಡಿಕೇರಿ, NEWS DESK ಆ.23- ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಪಿ.ಎಂ.ನರೇಂದ್ರಸ್ವಾಮಿ, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರು ಪುಣ್ಯಕ್ಷೇತ್ರ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಹೆಚ್ಚಿನ ಮಳೆಗಾಗಿ ಭಾನುವಾರ ರುದ್ರಾಭಿಷೇಕ ವಿಶೇಷ ಪೂಜೆ ಸಲ್ಲಿಸಿದರು.        ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದ ಮುಖ್ಯ ಅರ್ಚಕರಾದ ಕುಶಾಲ್ ಭಟ್ ಅವರು ರುದ್ರಾಭಿಷೇಕ ವಿಶೇಷ ಪೂಜೆ ನೆರವೇರಿಸಿದರು.       ಬೆಳಗ್ಗೆ 6 ಗಂಟೆಗೆ ಆಗಮಿಸಿದ ಸಚಿವರು ಮತ್ತು ಶಾಸಕರು ದೇವಾಲಯದ ಪ್ರದಕ್ಷಿಣೆ ನಡೆಸಿ, ನಾಡಿನಾದ್ಯಂತ ಹೆಚ್ಚಿನ‌ ಮಳೆಯಿಂದ ಜಲಾಶಯಗಳು ಭರ್ತಿಯಾಗಿ, ಅಧಿಕ ಬೆಳೆಯಾಗಿ ಎಲ್ಲರಲ್ಲಿಯೂ ಸಮೃದ್ಧಿ, ಸಂತಸ ತರುವಂತಾಗಲಿ ಎಂದು ಪಾಡಿ ಶ್ರೀ ಇಗ್ಗುತಪ್ಪ ದೇವರಲ್ಲಿ ಪ್ರಾರ್ಥಿಸಿದರು.        ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವರು ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತ ವತಿಯಿಂದ ಹೆಚ್ಚಿನ ಮಳೆಗಾಗಿ ಪುಣ್ಯಕ್ಷೇತ್ರ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ರುದ್ರಾಭಿಷೇಕ ವಿಶೇಷ…

Read More

ಕುಶಾಲನಗರ, NEWS DESK ಆ.23 : ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಥಮ ಬಾರಿಗೆ ಕುಶಾಲನಗರಕ್ಕೆ ಆಗಮಿಸಿದ ಎಸ್.ಎಸ್. ನಕುಲ್ ಅವರನ್ನು(ಶುಕ್ರವಾರ) ಆರ್ಯ ವೈಶ್ಯ ಮಂಡಳಿಯ ವತಿಯಿಂದ ಆತ್ಮೀಯವಾಗಿ ಗೌರವಿಸಲಾಯಿತು. ತಾಲೂಕಿನ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಈ ಸರಳ ಸಮಾರಂಭದಲ್ಲಿ ಎಸ್.ಎಸ್. ನಕುಲ್ ಅವರು ತಮ್ಮ ಧರ್ಮಪತ್ನಿ ಪೂಜಿತಾ ಹಾಗೂ ಪೋಷಕರೊಂದಿಗೆ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಆರ್ಯ ವೈಶ್ಯ ಮಂಡಳಿಯ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ್, ಮಾಜಿ ಅಧ್ಯಕ್ಷರಾದ ಸತ್ಯನಾರಾಯಣ ಬಿ.ಎಲ್., ಉದಯ್ ಕುಮಾರ್, ಖಜಾಂಚಿ ಪ್ರಶಾಂತ್ ಹಾಗೂ ನಿರ್ದೇಶಕರುಗಳಾದ ಕೆ.ಜಿ. ಅಶೋಕ್, ಸತೀಶ್ ಮತ್ತು ವೈಶಾಖ್ ಉಪಸ್ಥಿತರಿದ್ದು ನಕುಲ್ ದಂಪತಿಯನ್ನು ಸನ್ಮಾನಿಸಿದರು.

Read More

ಮಡಿಕೇರಿ, NEWS DESK ಆ.23 – ಚೆಟ್ಟಳ್ಳಿ ಪ್ರೌಢಶಾಲೆಯ ಮಂಗಳಾ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಹಿರಿಯ ನಾಗರಿಕರಿಗೆ ಗೌರವ ನಮನ ಆಯೋಜಿತವಾಗಿತ್ತು.ಈ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಾದ ಪೆರಿಯನ ಪಿ. ದಯಾನಂದ, ಹೆಚ್. ಎಸ್. ತಿಮ್ಮಪ್ಪಯ್ಯ, ಕ್ಯಾಪ್ಟನ್ ಎಂ. ಪಿ. ತಿಮ್ಮಯ್ಯ ಹಾಗೂ ಹೊಸಮನೆ ಪೂವಯ್ಯ ಅವರನ್ನು ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್.ರಾಜೇಶ್, ನಿದೇ೯ಶಕರಾದ ಕಟ್ಟೆಮನೆ ಸೋನಜಿತ್, ಲವಿನ್, ಕಾಂಗೀರ ಸತೀಶ್ ಸನ್ಮಾನಿಸಿದರು.   ಸನ್ಮಾನಿತರಾದ ಕಾಫಿ ಬೆಳೆಗಾರರಾದ .ಎಚ್.ಎಸ್. ತಿಮ್ಮಪ್ಪಯ್ಯ ಮಾತನಾಡಿ, ರೋಟರಿ ಮಿಸ್ಟಿ ನ ಹಿಲ್ಸ್ ನ ಸಮಾಜ ಸೇವಾ ಕಾಯ೯ಗಳ ಬಗ್ಗೆ ಶ್ಲಾಘಿಸಿದರು ಚಟ್ಟಳ್ಳಿ ಪ್ರೌಢಶಾಲೆಯ ಸ್ಥಾಪನೆಗೆ ಕಾರಣರಾದ ಹಿರಿಯರನ್ನು ನೆೆನಪಿಸಿಕೊಂಡು ಆ ಹಿರಿಯರ ತ್ಯಾಗ ಮನೋಭಾವ ಸದಾ ಸ್ಮರಣೀಯ ಎಂದರು ಗೌರವ ಸ್ವೀಕರಿಸಿ ಮಾತನಾಡಿದ ಹೊಸಮನೆ ಪೂವಯ್ಯ ಮಾತನಾಡಿ, ತನ್ನ ಸಾಮಾಜಿಕ ಸೇವೆಯನ್ನು ಗುರುತಿಸಿ ಗೌರವಿಸಿದ ರೋಟರಿ ಸಂಸ್ಥೆಗೆ ಧನ್ಯವಾದ ಸಲ್ಲಿಸಿದರು. ಸನ್ಮಾನಿತರಾದ ಕ್ಯಾಪ್ಟನ್ ಎಂ ಪಿ ತಿಮ್ಮಯ್ಯ ಮಾತನಾಡಿ ಭಾರತೀಯ ಸೇನೆಗೆ ತಾವು…

Read More