ಮಡಿಕೇರಿ NEWS DESK ಜು.21 : ಕೊಡಗು ಪ್ರೆಸ್ ಕ್ಲಬ್ ಹಾಗೂ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ತಾಳತ್‌ಮನೆಯ ಮಲ್ಲನ ಬೆಳ್ಯಪ್ಪ ಅವರ ಗದ್ದೆಯಲ್ಲಿ ಭಾನುವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪತ್ರಕರ್ತರ ಕೆಸರುಗದ್ದೆ ಕ್ರೀಡಾಕೂಟದಲ್ಲಿ ನಾಟಿ ಬಾಯ್ಸ್, ಮಡ್ ಕಮಾಂಡೋಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಹ್ಯಾಂಡ್ ಬಾಲ್‌ನ ಫೈನಲ್ ಪಂದ್ಯದಲ್ಲಿ ಇಸ್ಮಾಯಿಲ್ ಕಂಡಕರೆ ನಾಯಕತ್ವದ ನಾಟಿ ಬಾಯ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಆದರ್ಶ್ ನಾಯಕತ್ವದ ಯಂಗ್ ಸ್ಪೈಡರ್ಸ್ ದ್ವಿತೀಯ ಸ್ಥಾನ ಪಡೆಯಿತು. ಹಗ್ಗಜಗ್ಗಾಟ ಪಂದ್ಯದಲ್ಲಿ ಕಿಶೋರ್ ರೈ ನಾಯಕತ್ವದ ಮಡ್ ಕಮಾಂಡೋಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಆದರ್ಶ್ ನಾಯಕತ್ವದ ಯಂಗ್ ಸ್ಪೈಡರ್ಸ್ ದ್ವಿತೀಯ ಸ್ಥಾನ ಪಡೆಯಿತು. ಲೀಗ್ ಮಾದರಿಯಲ್ಲಿ ನಾಟಿ ಬಾಯ್ಸ, ಯಂಗ್ ಸ್ಪೈಡರ್ಸ್, ಮಡ್ ಕಮಾಂಡೋಸ್, ಮಡ್ ಫೀಲ್ಡರ್ಸ್, ಮಡ್ ಬಾಯ್ಸ, ರೈತ ಮಕ್ಕಳು ಸೇರಿದಂತೆ 6 ತಂಡಗಳು ಸೆಣಸಾಟ ನಡೆಸಿತ್ತು.ನಂತರ ನಡೆದ 40 ವರ್ಷ ವಯಸ್ಸಿನೊಳಗಿನವರ ವಿಭಾಗದಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ…
ಲೇಖಕ: admin
ಮಡಿಕೇರಿ NEWS DESK ಜು.20 : ಹಾರಂಗಿ ಅಣೆಕಟ್ಟಿನ ನಿರ್ಮಾಣದ ಹಂತದಲ್ಲಿ ಜಾಗ ಕಳೆದುಕೊಂಡವರಿಗೆ ಯಡವನಾಡಿನಲ್ಲಿ ಪರ್ಯಾಯವಾಗಿ ನೀಡಿದ ಜಾಗವೊಂದಕ್ಕೆ ಸಂಬ0ಧಿಸಿದ0ತೆ “ಸಾಗುವಳಿ ಪತ್ರ” ದಾಖಲೆಯನ್ನು ನೀಡದ ಕಂದಾಯ ಇಲಾಖೆ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಫಲಾನುಭವಿ ಕುಟುಂಬದ ಸದಸ್ಯ ಉಮೇಶ್ ಜಿ.ಪಿ. ಜಿಲ್ಲಾಡಳಿವನ್ನು ಒತ್ತಾಯಿಸಿದ್ದಾರೆ. ನಗದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಹಾರಂಗಿ ಹಿನ್ನೀರು ಪ್ರದೇಶದಲ್ಲಿ ತಮ್ಮ ಕುಟುಂಬ ವಾಸವಿತ್ತು. ಅಣೆಕಟ್ಟು ನಿರ್ಮಾಣದ ಬಳಿಕ ತಾನು ಗಾಳಿಬೀಡು ಪಂಚಾಯ್ತಿಯ ಒಂದನೇ ಮೊಣ್ಣಂಗೇರಿಯಲ್ಲಿ ನೆಲೆಸಿದ್ದೇನೆ. ನಮ್ಮ ಕುಟುಂಬಕ್ಕೆ ಯಡವನಾಡು ಗ್ರಾಮದಲ್ಲಿ ಮುಳುಗಡೆಯಾದ ಜಾಗಕ್ಕೆ ಬದಲಾಗಿ 3.74 ಎಕರೆ ಜಾಗವನ್ನು ಒದಗಿಸಲಾಗಿದೆ ಎಂದರು. ಯಡವನಾಡು ಗ್ರಾಮದಲ್ಲಿ ನಮ್ಮ ಕುಟುಂಬಕ್ಕೆ ನೀಡಿರುವ ಜಾಗಕ್ಕೆ ಸಂಬ0ಧಿಸಿದ ಸಾಗುವಳಿ ಪತ್ರದ ದಾಖಲೆಯ ಪ್ರತಿಯನ್ನು ನೀಡುವಂತೆ ಸೋಮವಾರಪೇಟೆ ತಾಲ್ಲೂಕು ತಹಶೀಲ್ದಾರ್ ಕಛೇರಿಯಲ್ಲಿ ಕೋರಿದ್ದೆ. ವಿಷಯಕ್ಕೆ ಸಂಬ0ಧಿಸಿದ0ತೆ ಉಪ ವಿಭಾಗಾಧಿಕಾರಿಯವರು ವಿಚಾರಣೆ ನಡೆಸಿ, ದಾಖಲೆ ಒದಗಿಸುವಂತೆ ಸೂಚಿಸಿದ್ದರು. ಆದರೆ ಪ್ರಸ್ತುತ ಮೂಲ ದಾಖಲಾಗಿ ಲಭ್ಯತೆ ಇಲ್ಲವೆಂದು…
ಮಡಿಕೇರಿ NEWS DESK ಜು.21 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ ಪ್ರತಿಷ್ಠಿತ “ಗೌರಮ್ಮ ದತ್ತಿ ಪ್ರಶಸ್ತಿ”ಗೆ ಕೊಡಗು ಜಿಲ್ಲೆಯ ಮಹಿಳಾ ಲೇಖಕಿಯರು ಬರೆದು ಪ್ರಕಟಿಸಿದ ಕನ್ನಡ ಭಾಷೆಯ ಕೃತಿಗಳನ್ನು ಆಹ್ವಾನಿಸಲಾಗಿದೆ. 2026-27ನೇ ಸಾಲಿನ ಪ್ರಶಸ್ತಿ ಪುರಸ್ಕಾರ ಪಡೆಯಲು ಆಸಕ್ತ ಲೇಖಕಿಯರು ತಾವು ರಚಿಸಿದ ಪುಸ್ತಕದ ನಾಲ್ಕು ಪ್ರತಿಗಳನ್ನು ಅರ್ಜಿಯೊಂದಿಗೆ ಕಳುಹಿಸಿ ತಕ್ಕದ್ದು.2021ರ ನಂತರ ಪ್ರಕಟಿತ ಪುಸ್ತಕಗಳನ್ನು ಮಾತ್ರ ಕಳುಹಿಸಬೇಕು. ಸ್ಪರ್ಧೆಗೆ ಪುಸ್ತಕ ಕಳುಹಿಸುವ ಲೇಖಕಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿರಬೇಕು. ಓರ್ವ ಲೇಖಕಿ ಒಂದು ಕೃತಿಯನ್ನು ಮಾತ್ರ ಕಳುಹಿಸಬೇಕು. ಲಕೊಟೆಯ ಮೇಲೆ *”ಗೌರಮ್ಮ ದತ್ತಿ ಪ್ರಶಸ್ತಿ”ಗೆ* ಎಂದು ಬರೆಯಬೇಕು. ಕೊಡಗು ಜಿಲ್ಲೆಯ ಲೇಖಕಿಯರಿಗೆ ಮಾತ್ರ ಅವಕಾಶ >>> ಕಳುಹಿಸಬೇಕಾದ ವಿಳಾಸ : ಅಧ್ಯಕ್ಷರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅಂಬೇಡ್ಕರ್ ಭವನದ ಬಳಿ, ಸುದರ್ಶನ ವೃತ್ತ, ಮಡಿಕೇರಿ. ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ : 94483 46276. ಇಲ್ಲಿಗೆ ದಿನಾಂಕ 31.07..2026 ರ ಒಳಗಾಗಿ ತಲುಪಿಸಬೇಕೆಂದು ಪರಿಷತ್ತಿನ ಅಧ್ಯಕ್ಷರಾದ…
ಮಡಿಕೇರಿ NEWS DESK ಜು.21 : ಸಂಪೂರ್ಣ ಹದಗೆಟ್ಟಿರುವ ಭಾಗಮಂಡಲ- ನಾಪೋಕ್ಲು ಮತ್ತು ಭಾಗಮಂಡಲ ಕರಿಕೆ ರಸ್ತೆಯ ಅವ್ಯವಸ್ಥೆಯನ್ನು ಖಂಡಿಸಿ ಬಿಜೆಪಿ ಶಕ್ತಿ ಕೇಂದ್ರ ಪ್ರತಿಭಟನೆ ನಡೆಸಿತು. ರಸ್ತೆಯಲ್ಲಿನ ಹೊಂಡ ಗುಂಡಿಗಳಲ್ಲಿ ಬಾಳೆಗಿಡ ನೆಡುವ ಮೂಲಕ ಪ್ರತಿಭಟನಾಕಾರರು ರಾಜ್ಯ ಸರಕಾರ ಹಾಗೂ ಶಾಸಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ರಸ್ತೆಯುದ್ದಕ್ಕೂ ಹೊಂಡ ಗುಂಡಿಗಳು ನಿರ್ಮಾಣವಾಗಿದ್ದು, ವಾಹನಗಳ ಸಂಚಾರ ದುಸ್ತರವಾಗಿದೆ. ಕೆಸರು ನೀರು ತುಂಬಿಕೊ0ಡು ವಾಹನಗಳ ಸಂಚಾರದೊ0ದಿಗೆ ಜನ ಸಂಚಾರಕ್ಕೂ ತೊಡಕುಂಟಾಗುತ್ತಿದೆ. ಹೀಗಿದ್ದೂ ಸಂಬ0ಧಪಟ್ಟವರು ರಸ್ತೆ ದುರಸ್ತಿಯತ್ತ ಗಮನ ಹರಿಸಿಲ್ಲವೆಂದು ಬಿಜೆಪಿ ಪ್ರಮುಖರು ಆರೋಪಿಸಿದರು.
ಮಡಿಕೇರಿ NEWS DESK ಜು.20 : ಕೊಡಗು ಕಲಾವಿದರ ಸಂಘದ ಸಾಮಾನ್ಯ ಸಭೆ ಮತ್ತು 2026-30ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ವಿರಾಜಪೇಟೆಯಲ್ಲಿ ನಡೆಯಿತು. ಅಧ್ಯಕ್ಷರಾಗಿ ಕಲಾವಿದ ವಾಂಚಿರ ವಿಠಲ್ ನಾಣಯ್ಯ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಈರಮಂಡ ಹರಿಣಿ ವಿಜಯ್, ಕಾರ್ಯದರ್ಶಿಯಾಗಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಖಜಾಂಚಿಯಾಗಿ ಕಾಡ್ಯಮಡ ಸುಮನ್, ಸಹ ಕಾರ್ಯದರ್ಶಿಯಾಗಿ ಮಲ್ಲಮಾಡ ಶ್ಯಾಮಲ ಸುನಿಲ್, ನಿರ್ದೇಶಕರುಗಳಾಗಿ ಸೋಮೆಯಂಡ ಎಸ್.ಬೆಳ್ಯಪ್ಪ, ಬಿದ್ದಂಡ ಉತ್ತಮ್ ಪೊನ್ನಪ್ಪ, ಕಾಳಮಂಡ ಜಗತ್, ಟಿ.ಡಿ.ಮೋಹನ್, ಚೇನಂಡ ಗಿರೀಶ್ ಪೂಣಚ್ಚ, ಪಟ್ಟಡ ಸಿ.ಧನು ರಂಜನ್ ಹಾಗೂ ಜಾದುಗಾರ್ ವಿಕ್ರಂ ಶೆಟ್ಟಿ ಆಯ್ಕೆಯಾದರು. ಸಂಚಾಲಕರಾಗಿ ನೆರವಂಡ ಉಮೇಶ್, ಸಲಹಾ ಸಮಿತಿಯ ನಿರ್ದೇಶಕರುಗಳಾಗಿ ಅನಂತಶಯನ ಬಿ.ಜಿ. ಹಾಗೂ ಅವರೆಮಾಡಂಡ ಶರಣ್ ನೇಮಕಗೊಂಡರು. ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಮಾತನಾಡಿದ ವಾಂಚಿರ ವಿಠ್ಠಲ್ ನಾಣಯ್ಯ ಅವರು, ಸರ್ವ ಸದಸ್ಯರು ಹಾಗೂ ಕಲಾವಿದರ ಸಹಕಾರದೊಂದಿಗೆ ಸಂಘವನ್ನು ಮತ್ತಷ್ಟು ಬಲಿಷ್ಠಗೊಳಿಸಿ, ಕಲಾವಿದರ ಹಿತಾಸಕ್ತಿಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಕಲ್ಪ ವ್ಯಕ್ತಪಡಿಸಿದರು. ಉಪಾಧ್ಯಕ್ಷೆ ಹರಿಣಿ ವಿಜಯ್, ಕಾರ್ಯದರ್ಶಿ ರಶ್ಮಿ ಕಾರ್ಯಪ್ಪ, ನಿರ್ದೇಶಕರಾದ…
ಮಡಿಕೇರಿ NEWS DESK ಜು.20 : ಅನುದಾನದ ಕೊರತೆಯಿಂದ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ನಿಭಾಯಿಸಲು ಸಾಧ್ಯವಾಗದ ಸರಕಾರ ಇದೀಗ ಪಡಿತರ ಚೀಟಿಗೂ ಜಾತಿ ಪ್ರಮಾಣ ಪತ್ರ ಕೇಳುವ ಮೂಲಕ ರಾಜ್ಯದ ಜನತೆಗೆ ವಿನಾಕಾರಣ ಕಿರುಕುಳ ನೀಡುತ್ತಿದೆ ಎಂದು ಸೋಮವಾರಪೇಟೆ ಬಿಜೆಪಿ ಮಂಡಲದ ವಕ್ತಾರ ಬಲ್ಲಾರಂಡ ಕಂಠಿ ಕಾರ್ಯಪ್ಪ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅಧಿಕಾರಕ್ಕೆ ಬರಬೇಕೆನ್ನುವ ಏಕೈಕ ಉದ್ದೇಶದಿಂದ ಆರ್ಥಿಕ ಹೊರೆಯ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದ ಕಾಂಗ್ರೆಸ್ ಇದೀಗ ಹಣ ಕ್ರೋಢೀಕರಣಕ್ಕಾಗಿ ಜನರಿಗೆ ತೊಂದರೆ ನೀಡುತ್ತಿದೆ. ಗ್ಯಾರಂಟಿ ಯೋಜನೆಯ ಸೌಲಭ್ಯಗಳನ್ನು ನೀಡಲಾಗದೆ ಪರದಾಡುತ್ತಿರುವ ರಾಜ್ಯ ಸರಕಾರ ಜನರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿ ಕಾಲಹರಣ ಮಾಡುತ್ತಿದೆ. ಪಡಿತರ ಚೀಟಿಗೂ ಜಾತಿ ಪ್ರಮಾಣ ಪತ್ರ ಕೇಳುತ್ತಿರುವುದು ಖಂಡನೀಯವೆoದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಡಿತರ ಚೀಟಿಗೆ ಜಾತಿ ಪ್ರಮಾಣ ಪತ್ರ ಒದಗಿಸಲು ಬಡವರು ಹಾಗೂ ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಅರ್ಜಿ ಹಿಡಿದು ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಾತ್ಯಾತೀತ ಸಿದ್ಧಾಂತದ ಆದರ್ಶಗಳ ಮುಖವಾಡ…
ಮಡಿಕೇರಿ NEWS DESK ಜು.20 : ದೇವಟ್ ಪರಂಬ್ ದುರಂತ ನರಮೇಧವನ್ನು ವಿಶ್ವಸಂಸ್ಥೆಯ ಹೊಲೊಕಾಸ್ಟ್ (ನರಮೇಧ) ಸ್ಮರಣಾರ್ಥ ಪಟ್ಟಿಗೆ ಸೇರಿಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಒತ್ತಾಯಿಸಿದ್ದಾರೆ. ದೇವಟ್ ಪರಂಬ್ ನಲ್ಲಿ ಸಿಎನ್‌ಸಿ ವತಿಯಿಂದ ಮಾಸಿಕ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಿದ ಅವರು ಪುಷ್ಪ ನಮನದ ಮೂಲಕ ಹಿರಿಯರಿಗೆ ಪ್ರಾರ್ಥನೆ ಸಲ್ಲಿಸಿದರು. ಕೊಡವಲ್ಯಾಂಡ್ ಮತ್ತು ಆದಿಮಸಂಜಾತ ಕೊಡವ ಬುಡಕಟ್ಟು ಸಮುದಾಯಕ್ಕಾಗಿ ತಮ್ಮ ಅಮೂಲ್ಯ ಪ್ರಾಣವನ್ನು ತ್ಯಾಗ ಮಾಡಿದ ನಮ್ಮ ಪೂರ್ವಜರು ಹಾಗೂ ಹಿರಿಯರಿಂದ ನಾವು ಆಶೀರ್ವಾದವನ್ನು ಬೇಡಿದೆವು. ಸಿಎನ್‌ಸಿ ತನ್ನ ಆಕಾಂಕ್ಷೆಗಳು ಮತ್ತು ಬೇಡಿಕೆಗಳನ್ನು ಪುನರುಚ್ಚರಿಸುತ್ತಿದ್ದು, ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿ ಅರಮನೆ ಪಿತೂರಿಯಿಂದ ನಡೆದ ಕೊಡವರ ರಾಜಕೀಯ ಹತ್ಯೆಗಳನ್ನು ಗುರುತಿಸಬೇಕು ಎಂದರು. ಭಾರತೀಯ ಸಂವಿಧಾನದ 49 ನೇ ವಿಧಿ ಮತ್ತು ಯುನೆಸ್ಕೋದ 1964 ರ ವೆನಿಸ್ ಚಾರ್ಟರ್ ಅಡಿಯಲ್ಲಿ ಈ ದುರಂತಗಳನ್ನು ಅಂತರರಾಷ್ಟ್ರೀಯ ಹೊಲೊಕಾಸ್ಟ್ ಸ್ಮಾರಕ, ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಹೊಲೊಕಾಸ್ಟ್ ಸ್ಮರಣಾರ್ಥ ಪಟ್ಟಿ ಮತ್ತು ಉಲುಗುಲಿ, ಮುಳ್ಳುಸೋಗೆ ಹಾಗೂ…
ಬೆಂಗಳೂರು NEWS DESK ಜು.20 : ರಾಜ್ಯದಲ್ಲಿ ಮನೆ ಮನೆಗೆ ತೆರಳಿ ಜಾತಿ ಪ್ರಮಾಣ ಪತ್ರಗಳನ್ನು ಉಚಿತವಾಗಿ ವಿತರಿಸುವ ಕಂದಾಯ ಇಲಾಖೆಯ ವಿಶೇಷ ಅಭಿಯಾನ ಹಾಗೂ ಶಾಶ್ವತ ನಿವಾಸ ಪ್ರಮಾಣಪತ್ರ ಸೇವೆಗೆ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು, ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ ಅವರ ಉಪಸ್ಥಿತಿಯಲ್ಲಿ ಚಾಲನೆ ನೀಡಿದರು. ರಾಜ್ಯಾದ್ಯಂತ ಒಟ್ಟು 4.85 ಕೋಟಿ ಡಿಜಿಟಲ್ ಜಾತಿ ಪ್ರಮಾಣ ಪತ್ರಗಳನ್ನು ಗ್ರಾಮವಾರು ವಿಂಗಡಿಸಿ ಪಿಡಿಎಫ್ ರೂಪದಲ್ಲಿ ಜಿಲ್ಲಾಧಿಕಾರಿಗಳಿಗೆ ಒದಗಿಸಲಾಗಿದ್ದು, ಇವುಗಳನ್ನು ಮುದ್ರಿಸಿ ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಮನೆ ಮನೆಗೆ ತೆರಳಿ ಉಚಿತವಾಗಿ ನೀಡುವ ಈ ವಿಶೇಷ ಅಭಿಯಾನದ ಜೊತೆಗೆ, ಸಾರ್ವಜನಿಕರು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಲು ವಿಶೇಷ ವೆಬ್‌ಸೈಟ್ (https://nadakacheri.karnataka.gov.in/AJSKCertificates) ಹಾಗೂ ಪ್ರತಿ ಹೋಬಳಿ ಮಟ್ಟದಲ್ಲಿ ಉಚಿತ ಮುದ್ರಣದ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈಗಾಗಲೇ ಸುಮಾರು 85 ಲಕ್ಷ ಜಾತಿ ಪ್ರಮಾಣ ಪತ್ರಗಳನ್ನು ಮೊಬೈಲ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡಲಾಗಿದ್ದು, ವಾಟ್ಸ್ಆಪ್ ಅಥವಾ ಎಸ್‌ಎಂಎಸ್ ಮೂಲಕ ನೇರ ಲಿಂಕ್…
ಸುಂಟಿಕೊಪ್ಪ NEWS DESK ಜು.20 : ಸುಂಟಿಕೊಪ್ಪದ ಜನತಾ ಕಾಲೋನಿಯಲ್ಲಿ ಗಾಳಿ ಮಳೆಯಿಂದ ಮನೆಗೆ ಹಾನಿ ಉಂಟಾಗಿ ನಷ್ಟ ಅನುಭವಿಸಿದ್ದ, ಸ್ಥಳೀಯ ನಿವಾಸಿ ಎಲಿಜಬೆತ್ (ಎಲ್ಸಿ) ಅವರಿಗೆ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ನೆರವಿನ ಹಸ್ತ ಚಾಚಿತು.ಅಸೋಸಿಯೇಷನ್ ಅಧ್ಯಕ್ಷ ಜಾನ್ಸನ್ ಪಿಂಟೋ ಅವರ ನೇತೃತ್ವದಲ್ಲಿ ಸಂತ್ರಸ್ತೆಯ ಮನೆಗೆ ಭೇಟಿ ನೀಡಿದ ಪದಾಧಿಕಾರಿಗಳು ಸಾಂತ್ವನ ಹೇಳಿ ರೂ.30 ಸಾವಿರ ಧನ ಸಹಾಯ ನೀಡಿದರು. ಮನೆಯ ಮೇಲ್ಚಾವಣಿ ಮತ್ತು ಗೋಡೆ ಕುಸಿದು ನಷ್ಟ ಉಂಟಾಗಿರುವ ಬಗ್ಗೆ ಎಲಿಜಬೆತ್ (ಎಲ್ಸಿ) ಅಸಹಾಯಕತೆ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಜಾನ್ಸನ್ ಪಿಂಟೋ ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಅಸೋಸಿಯೇಷನ್ ನ ಗೌರವಾಧ್ಯಕ್ಷ ಜೋಕಿಂವಾಸ್, ಸ್ಥಾಪಕ ಅಧ್ಯಕ್ಷ ವಿ.ಎ.ಲಾರೆನ್ಸ್, ಜಿಲ್ಲಾ ಉಪಾಧ್ಯಕ್ಷ ಮೈಕಲ್, ಜಿಲ್ಲಾ ಖಜಾಂಚಿ ಜೇಮ್ಸ್ ಡಿಸೋಜ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸಾಲಂ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಡೆನ್ಜಿಲ್ ವರ್ಗೀಸ್ , ಸದಸ್ಯರುಗಳಾದ ಪಿ.ಎಫ್.ಸಬಾಸ್ಟೀನ್, ಪಿ.ಎಂ.ಬಿಜು, ಮಹಿಳಾ ವಿಭಾಗದ ಉಪಾಧ್ಯಕ್ಷೆ ರೋಸ್ ಮೇರಿ…
ಮೈಸೂರು NEWS DESK ಜು.20 : ಸಾಹಿತಿ ಹಾಗೂ ಹಿರಿಯ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರಿಗೆ “ಯೋಗ ಕೌಸ್ತುಭ” ಪ್ರಶಸ್ತಿ ಲಭ್ಯವಾಗಿದೆ. ಸುಮಾರು 41 ಅಧ್ಯಯನ ಕೃತಿಗಳ ರಚಿಸಿರುವ ರಮೇಶ್ ಉತ್ತಪ್ಪ ಅವರು ಮೈಸೂರು ಯೋಗದ ಕುರಿತು “ಯೋಗ ಸಂಗೀತ-ಮೈಸೂರು ಪರಂಪರೆ” ಎಂಬ ಕೃತಿ ಬರೆದಿದ್ದಾರೆ. ಇದರಲ್ಲಿ ಯೋಗಕ್ಕೆ ಮೈಸೂರಿನ ಕೊಡುಗೆ, ಹಿನ್ನೆಲೆ, ಯೋಗಾಚಾರ್ಯರು, ಮೈಸೂರು ಸಂಗೀತ ಪರಂಪರೆಯ ಸಂಶೋಧನಾತ್ಮಕ ವಿವರಗಳಿವೆ. ಮೈಸೂರು ಯೋಗ ಸ್ಫೋರ್ಟ್ಸ್ ಫೌಂಡೇಶನ್ ಹಾಗೂ ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಘಟಿಕೋತ್ಸವದಲ್ಲಿ ಶನಿವಾರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭ ಮಾತನಾಡಿದ ಶಾಸಕ ಶ್ರೀವತ್ಸ, “ರಮೇಶ್ ಉತ್ತಪ್ಪ ಅವರು ಮೈಸೂರಿನ ಗಲ್ಲಿ ಹಾಗೂ ವೃತ್ತಗಳ ಕುರಿತು ಬರೆದ ಅಧ್ಯಯನ ಕೃತಿ ಅತ್ಯಂತ ಮಹತ್ವದ್ದು. ಅದೇ ರೀತಿ ಯೋಗ ಪರಂಪರೆ ಹಾಗೂ ದಸರಾ ಆನೆಗಳ ಕೃತಿ ಕೂಡ ಜನರ ಮೆಚ್ಚುಗೆ ಪಾತ್ರವಾಗಿವೆ. ಈ ಕೃತಿಗಳನ್ನು ದಸರಾ ಉನ್ನತ ಸಮಿತಿ ಸಭೆಯಲ್ಲಿ ತಾವು ಮುಖ್ಯಮಂತ್ರಿಗಳಿಗೆ…






