ಲೇಖಕ: admin

ಕುಶಾಲನಗರ ಮೇ 6 NEWS DESK : ದೇಶದ ಎಲ್ಲೆಡೆ ಹಿಂದುಗಳ ರಕ್ಷಣೆ ಸಂಬಂಧ ಶಕ್ತಿಯುತ ಜಾಗೃತ ಸಮಾಜ ನಿರ್ಮಾಣದ ಅಗತ್ಯತೆ ಇದೆ ಎಂದು ಮಾಜಿ ಶಾಸಕ ಕೆ.ಜಿ.ಬೋಪಯ್ಯ ಕರೆ ನೀಡಿದ್ದಾರೆ. ಕುಶಾಲನಗರದಲ್ಲಿ ನಡೆದ ಮಿಷನ್ ಮೋದಿ ಡೆಮಾಕ್ರಸಿ ಡೆವಲಪ್ಮೆಂಟ್ ಟ್ರಸ್ಟ್ ಆಶ್ರಯದಲ್ಲಿ ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದುಗಳ ಹತ್ಯೆ ಹಾಗೂ ಹಿಂದೂ ಕಾರ್ಯಕರ್ತರ ಕಗ್ಗೊಲೆಯನ್ನು ಖಂಡಿಸಿ ನಡೆದ ಮೌನ ಮೆರವಣಿಗೆ ಮತ್ತು ಪ್ರತಿಭಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಾಶ್ಮೀರದಲ್ಲಿ ನಡೆದ ಉಗ್ರರ ಕೃತ್ಯವನ್ನು ಖಂಡಿಸಿದ ಬೋಪಯ್ಯ ಅಮಾಯಕ ಯುವಕ ವಿನಯ್ ಸೋಮಯ್ಯ ಅವರ ಆತ್ಮಹತ್ಯೆಗೆ ಕಾರಣಕರ್ತರಾದ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಒಂದು ತಿಂಗಳು ಕಳೆದರೂ ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ ಎಂದ ಅವರು, ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಲು ಆಗ್ರಹಿಸಿದರು. ಮಂಗಳೂರಿನಲ್ಲಿ ನಡೆದ ಸುಹಾಸ್ ಶೆಟ್ಟಿ ಹತ್ಯೆ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹಿಂದುಗಳ ಹತ್ಯೆಗಳು…

Read More

ಮಡಿಕೇರಿ, ಮೇ 6 NEWS DESK : ನಗರದ ಅಶೋಕಪುರದ ಶ್ರೀ ವೀರಭದ್ರ, ಪಾಷಾಣ ಮೂರ್ತಿ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ನೇಮೋತ್ಸವ ನಡೆಯಿತು. ಪಂಜುರ್ಲಿ, ಕಲ್ಕುಡ, ಪಾಷಾಣ ಮೂರ್ತಿ, ಗುಳಿಗ, ಕೊರ್ತಿ, ಕಲ್ಲುರ್ಟಿ ಹಾಗೂ ಕೊರಗಜ್ಜ ದೈವಗಳ ಕೋಲಗಳು ನಡೆದವು. ನಗರ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ದೈವಗಳ ದರ್ಶನ ಪಡೆದರು. ಇದೇ ಸಂದರ್ಭ ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಯಿತು. ದೇವಾಲಯ ಅರ್ಚಕ ರಾಜೇಶ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯ ನಡೆಯಿತು.

Read More

ನಾಪೋಕ್ಲು ಮೇ 6 NEWS DESK : ಈಸ್ಟ್‍ಕೋಳಕೇರಿಯ ಶ್ರೀ ಮಹಾದೇವ ಕೋಟ ಈಶ್ವರ ದೇವಾಲಯದ ವಾರ್ಷಿಕೋತ್ಸವವು ಮೇ 10 ರಂದು ನಡೆಸಲು ತೀರ್ಮಾನಿಸಲಾಗಿದೆ. ವಾರ್ಷಿಕೋತ್ಸವ ಪ್ರಯುಕ್ತ ಬೆಳಿಗ್ಗೆ 7 ಗಂಟೆಯಿಂದ 8 ಗಂಟೆಯ ವರೆಗೆ ಗಣ ಹೋಮ, 9ಗಂಟೆ ಯಿಂದ 12.00 ಗಂಟೆ ವರೆಗೆ ಶತ ರುದ್ರಾಭಿಷೇಕ, ಹಾಗೂ ರುದ್ರಾಭಿಷೇಕ ಪೂಜೆ ಮಧ್ಯಾಹ್ನ 12 ಗಂಟೆಟೆಗೆ ಮಹಾಪೂಜೆ ನಡೆಯಲಿದೆ. ನಂತರ ಭಕ್ತಾದಿಗಳಿಗೆ ತೀರ್ಥ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನೆರವೇರಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯ ಅಧ್ಯಕ್ಷರು ಹಾಗೂ ಸಮಿತಿ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ನಾಪೋಕ್ಲು ಮೇ 6 NEWS DESK : ಕಕ್ಕಬೆಯ ನೆಟ್ಟುಮಾಡಿನಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಉರಗ ತಜ್ಞ ಪೊನ್ನಿರ ಸ್ನೇಕ್ ಗಗನ್ ರಕ್ಷಿಸಿದ್ದಾರೆ. ಗ್ರಾಮದ ನಿವಾಸಿ ವೈಕೋಲ್ ಉಸ್ಮಾನ್ ಅವರ ಮನೆಯ ಸಮೀಪದಲ್ಲಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ಸ್ಥಳೀಯ ನಿವಾಸಿಗಳಾದ ಪಾಂಡ ನರೇಶ ಹಾಗೂ ರಘು ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಪೊನ್ನಿರ ಸ್ನೇಕ್ ಗಗನ್ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟರು. ವರದಿ : ದುಗ್ಗಳ ಸದಾನಂದ.

Read More

ಸುಂಟಿಕೊಪ್ಪ ಮೇ 6 NEWS DESK : ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಪಾಲಕ ಸಂತ ಅಂತೋಣಿಯವರ ವಾರ್ಷಿಕೋತ್ಸವವು ಸಂಭ್ರಮದಿಂದ ನಡೆಯಿತು. ವಾರ್ಷಿಕೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ಬಳ್ಳಾರಿ ಧರ್ಮಕ್ಷೇತ್ರದ ಹಟ್ಟಿ ಪವಿತ್ರ ದೇವಾಲಯದ ಧರ್ಮಗುರುಗಳಾದ ಗುರುಗಳಾದ ರೇ.ಫಾ.ವಿಜಯಕುಮಾರ್, ಆರಾಧನೆಯನ್ನು ಬಳ್ಳಾರಿ ಧರ್ಮಕ್ಷೇತ್ರದ ವಂ.ಗುರುಗಳಾದ ರೇ.ಫಾ.ವಿಜಯಕುಮಾರ್, ಆನಂದ್ ಪ್ರಸಾದ್, ಅನಿಲ್ ಹಾಗೂ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ವಿಜಯಕುಮಾರ್ ನೇರವೇರಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ಬೆಂಗಳೂರು ಹೋಲಿ ಘೋಸ್ಟ್ ದೇವಾಲಯದ ಧರ್ಮಗರುಗಳಾದ ಸಿಲುವೈ ಮುತ್ತು ವಿಶೇಷ ಪೂಜೆ ಪ್ರಭೋದನೆಯನ್ನು ನೀಡಿದರು. ಮೈಸೂರಿನ ಪುಷ್ಪಗಿರಿ ಬಾಲಯೇಸುವಿನ ದೇವಾಲಯದ ಧರ್ಮಗುರುಗಳಾದ ಮರಿಯ ಕ್ಷೇವಿಯರ್ ಹಾಗೂ ಸಂತ ಸೆಬಾಸ್ಟಿನ್ ದೇವಾಲಯದ ಧರ್ಮಗುರುಗಳಾದ ಜೆರಾಲ್ಡ್ ಹಾಗೂ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ವಿಜಯಕುಮಾರ್ ಆಡಂಬರ ದಿವ್ಯ ಬಲಿಪೂಜೆ ಪ್ರಭೋದನೆ ಮತ್ತು ಮಕ್ಕಳಿಗೆ ಪ್ರಥಮ ಪರಮ ಪ್ರಸಾದ ಸಂಸ್ಕಾರ ವಿತರಿಸಿದರು. ಮಧ್ಯಾಹ್ನ ಅಂಬು ಕಾಣಿಕೆಯ ಹರಕೆಯನ್ನು ಭಕ್ತಾಧಿಗಳು ಸಲ್ಲಿಸಿದರು. ಮರುದಿನ ಸಂತ ಅಂತೋಣಿಯವರ ದೇವಾಲಯದ ಧರ್ಮಗುರುಗಳು ಹಾಗೂ ಕ್ರೈಸ್ತ ಭಕ್ತಾಧಿಗಳು…

Read More

ಕುಶಾಲನಗರ ಮೇ 6 NEWS DESK : ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾ ವತಿಯಿಂದ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ 44ನೇ ರಾಷ್ಟ್ರೀಯ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಗುಡ್ಡೆ ಹೊಸೂರಿನ ಐಮುಡಿಯಂಡ ಶೈಲಾ ಕುಶಾಲಪ್ಪ ಎರಡು ಚಿನ್ನ ಮತ್ತು ಬೆಳ್ಳಿ ಪದಕ ಪಡೆಯುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುವ ಅರ್ಹತೆ ಗಳಿಸಿದ್ದಾರೆ.  400 ಮೀಟರ್ ಓಟ 400 ಮೀಟರ್ ರಿಲೇ ಮತ್ತು 100 ಮೀಟರ್ ರಿಲೇ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿರುವ ಶೈಲಾ ಅವರು ಸಿಂಗಾಪುರದಲ್ಲಿ ನಡೆಯುವ ಅಂತರರಾಷ್ಟ್ರೀಯ ಪಂದ್ಯದಲ್ಲಿ ಭಾಗವಹಿಸುವ ಅರ್ಹತೆ ಗಳಿಸಿದ್ದಾರೆ. ಶೈಲ ಕುಶಾಲಪ್ಪ ಕಾಲೂರು ಗ್ರಾಮದ ಚನ್ನಪಂಡ ಗಣಪತಿ ಮತ್ತು ಮುತ್ತಕಿ ದಂಪತಿಗಳ ಪುತ್ರಿಯಾಗಿದ್ದಾರೆ.

Read More

ಮಡಿಕೇರಿ ಮೇ 6 NEWS DESK : ಸಾಹಿತ್ಯ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳು. ಒಂದರ ಅಂತಃಸ್ವರೂಪ ಇನ್ನೊಂದರಲ್ಲಿ ವ್ಯಕ್ತವಾಗುವುದರಿಂದ ಒಂದು ಇನ್ನೊಂದಕ್ಕೆ ಪೂರಕ ವಾಗಿರುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಹೇಳಿದ್ದಾರೆ.  ನಗರದ ರೆಡ್ ಬ್ರಿಕ್ಸ್ ಸಭಾಂಗಣದಲ್ಲಿ ನಡೆದ ಸಮರ್ಥ ಕನ್ನಡಿಗರು ಕೊಡಗು ಮತ್ತು ದಿ.ಚಂದ್ರಶೇಖರ ರಾವ್ ಮೆಮೋರಿಯಲ್ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ ಕನ್ನಡ ಹಬ್ಬ ಉದ್ಘಾಟಿಸಿ ಅವರು ಮಾತನಾಡಿದರು. ವಿಶ್ವದ ನಾನಾ ದೇಶಗಳಲ್ಲಿ ಭಾರತ ಇಂದು ವಿಜೃಂಭಿಸಲು ಪ್ರಮುಖ ಕಾರಣವೇ ನಮ್ಮ ಸಂಸ್ಕೃತಿಯಾಗಿದೆ. ಲಿಪಿಯ ಮೂಲಕ ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವ ಕಲೆಯನ್ನು ಮನುಷ್ಯ ರೂಢಿಸಿಕೊಂಡದ್ದು ಸಂಸ್ಕೃತಿಯ ವಿಕಾಸದಲ್ಲಿ ಬಹು ದೊಡ್ಡ ಹೆಜ್ಜೆಯಾಗಿದೆ. ನಮ್ಮ ಭಾಷೆ ಸಂಸ್ಕೃತಿ ಬೆಳೆಯಲು ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದೂ ಅವರು ಹೇಳಿದರು. ಈ ನಿಟ್ಟಿನಲ್ಲಿ ಕೊಡಗಿನ ಸಮರ್ಥ ಕನ್ನಡಿಗರು ಸಂಸ್ಥೆಯ ಮಹಿಳಾ ಮಣಿಗಳ ಕಾರ್ಯವನ್ನು ರಮೇಶ್ ಶ್ಲಾಘಿಸಿದರು. ಎರಡು ಕೃತಿಗಳನ್ನು ಲೋಕಾರ್ಪಣೆ ಮಾಡಿದ ಮಡಿಕೇರಿ ಆಕಾಶವಾಣಿಯ ಹಿರಿಯ…

Read More

ವಿರಾಜಪೇಟೆ ಮೇ 6 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ,ಸಿ ಟ್ರಸ್ಟ್(ರಿ)ವಿರಾಜಪೇಟೆ ತಾಲೂಕು, ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಶ್ರೀ ಮಹಾದೇವರ ಪೆಗ್ಗೆರೆ ಕೆರೆ ಕಾಮಗಾರಿಯ ಪೂರ್ವಭಾವಿ ಸಭೆ ನಡೆಯಿತು. ತಾಲೂಕಿನ ಯೋಜನಾಧಿಕಾರಿಗಳಾದ ಹರೀಶ್ ಪಿ. ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಕೆರೆ ಕಾಮಗಾರಿ ಹೂಳು ಎತ್ತುವುದು, ಕೆರೆ ಹೂಳು ತೆಗೆಯುವುದರಿಂದ ಆಗುವ ಪ್ರಯೋಜನ, ಕುಡಿಯುವ ನೀರು ಮತ್ತು ಕೃಷಿ ಭೂಮಿಗಳಿಗೆ ಪೂರಕವಾಗುತ್ತದೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಜನ ಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಅರುಣ್ ಬಾನಂಗಡ ಗ್ರಾಮ ಅಭಿವೃದ್ಧಿ ಯೋಜನೆಯ ಕಾರ್ಯಕ್ರಮದ ಬಗ್ಗೆ ತಿಳಿಸಿದರು. ಇದೇ ಸಂದರ್ಭ ಕೆರೆ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಕಾರ್ಯುಕ್ರಮದಲ್ಲಿ ಈ ಮಹಾದೇವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಸಿ.ಜಿ ಕರುಂಬಯ್ಯ, ಊರಿನ ತಕ್ಕ ಮುಖ್ಯಸ್ಥ ಪೃಥ್ವಿ ಸುಬ್ಬಯ್ಯ, ಹುದಿಕೇರಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿವ್ಯ ಕಾವೇರಮ್ಮ, ಪಂಚಾಯತ್ ಸದಸ್ಯ ಮಿಲನ್, ಹುದಿಕೇರಿ ಒಕ್ಕೂಟದ ಅಧ್ಯಕ್ಷ…

Read More

ಮಡಿಕೇರಿ ಮೇ 6 NEWS DESK : ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆಯ ಕೂರನ ಇಂಚರ ಕಿಶೋರ್ 619 ಅಂಕ ಪಡೆದು ಮಡಿಕೇರಿ ತಾಲ್ಲೂಕಿಗೆ ದ್ವಿತೀಯ ಸ್ಥಾನ ಹಾಗೂ ಶಾಲೆಗೆ ಪ್ರಥಮ ಸ್ಥಾನ ಪಡೆದು ಕೊಂಡಿದ್ದಾರೆ. ಕೇಕಡ ಮೋಕ್ಷ ಬೋಪಣ್ಣ 613 ಅಂಕ ಪಡೆದು ದ್ವಿತೀಯ ಸ್ಥಾನ, ಚಕ್ಷ ಕಾವೇರಮ್ಮ 597 ಅಂಕ ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ. ಶಾಲೆಯ ಒಟ್ಟು 50 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 26 ಉನ್ನತ ಶ್ರೇಣಿ 23 ಪ್ರಥಮ ಶ್ರೇಣಿ, 1 ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಶೇ 100 ಫಲಿತಾಂಶ ದೊರಕಿದೆ ಎಂದು ಶಾಲಾ ಮುಖ್ಯ ಶಿಕ್ಷಕರಾದ ಕುದುಪಜೆ ಕವನ್ ಕುಮಾರ್ ತಿಳಿಸಿದ್ದಾರೆ.

Read More

ಮಡಿಕೇರಿ ಮೇ 6 NEWS DESK : ಶ್ರೀ ದಂಡಿನಮ್ಮ ಮತ್ತು ಶ್ರೀ ಬಸವೇಶ್ವರ, ಶ್ರೀ ಮುತ್ತತ್ ರಾಯ ದೇವಸ್ಥಾನ ಮತ್ತು ಗ್ರಾಮಗಳ ಸೇವಾ ಸಮಿತಿ ಹಾಗೂ ಕೂಡಿಗೆ- ಕೊಪ್ಪಲು, ಹೆಗಡ್ಡಳ್ಳಿ ಗ್ರಾಮಸ್ಥರ ವತಿಯಿಂದ ದಂಡಿನಮ್ಮ ಗ್ರಾಮ ದೇವತೆಯ ಜಾತ್ರಾ ಮಹೋತ್ಸವವು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಹಬ್ಬದ ಅಂಗವಾಗಿ ಗಣಪತಿ ಹೋಮ, ನವಗ್ರಹ ಹೋಮ, ರುದ್ರ ಹೋಮ, ಮೃತ್ಯುಂಜಯ ಹೋಮ, ಗಾಯಿತ್ರಿ ಹೋಮ , ನಂತರ ದೇವಿಗೆ ಪಂಚಾಮೃತ ಅಭಿಷೇಕ, ರುದ್ರ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದು ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ರಾತ್ರಿ ಅಗ್ನಿ ಸ್ಧಾಪನೆ, ನಂತರ ಶ್ರೀ ಬಸವೇಶ್ವರ ದೇವಾಲಯದಿಂದ ಗ್ರಾಮಸ್ಥರು ಮತ್ತು ಹರಕೆ ಹೊತ್ತ ನೂರಾರು ಭಕ್ತರು ಕಾವೇರಿ ನದಿಗೆ ತೆರಳಿ ಗಂಗಾ ಪೂಜೆ, ಕಳಸ ಪೂಜೆ, ಹಣ್ಣಾಡಗೆ ಉತ್ಸವದ ಮೂಲಕ ಮಂಗಳವಾದ್ಯ, ನಾಡವಾದ್ಯದ ಮೂಲಕ ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಸಾಗಿ ದಂಡಿನಮ್ಮ ದೇವಾಲಯ ಮುಂಭಾಗದಲ್ಲಿ ಹಾಕಲಾಗಿದ್ದ ಬೆಂಕಿ ಕೊಂಡದಲ್ಲಿ…

Read More