ಮಡಿಕೇರಿ NEWS DESK ಏ.4 : ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿಗೂ ಮೊದಲು ವಿನಯ್ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿರುವ ಕಾಂಗ್ರೆಸ್ ವಕ್ತಾರನ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತಕ್ಷಣ ಬಂಧಿಸಬೇಕೆದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಅತ್ಯಂತ ಸೌಮ್ಯ ವ್ಯಕ್ತಿತ್ವದ ವಿನಯ್ ಅವರ ಸಾವು ಬೇಸರ ಮೂಡಿಸಿದೆ. ಇವರ ಸಾವಿನ ಹಿಂದಿನ ಬೆಳವಣಿಗೆಗಳು ಖಂಡನೀಯ. ಸಾಮಾಜಿಕ ಜಾಲತಾಣದಲ್ಲಿ ವಿರಾಜಪೇಟೆ ಶಾಸಕರನ್ನು ತೇಜೋವಧೆ ಮಾಡಲಾಗಿದೆ ಎಂದು ಆರೋಪಿಸಿ ವಿನಾಕಾರಣ ಎಫ್‌ಐಆರ್ ದಾಖಲಿಸಲಾಗಿತ್ತು. ಎಫ್‌ಐಆರ್ ಗೆ ನ್ಯಾಯಾಲಯದಿಂದ ತಡೆ ದೊರೆತ ನಂತರವೂ ಮಾನಸಿಕ ಕಿರುಕುಳ ನೀಡಿದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸಾವಿಗೂ ಮುನ್ನ ವಿನಯ್ ನೀಡಿರುವ ಹೇಳಿಕೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ವಿನಯ್ ಅವರು ಕಾಂಗ್ರೆಸ್ ವಕ್ತಾರನ ಹೆಸರನ್ನು ಉಲ್ಲೇಖಿಸಿರುವುದರಿಂದ ಅವರನ್ನು ತಕ್ಷಣ ಬಂಧನಕ್ಕೊಳಪಡಿಸಿ ತನಿಖೆ ನಡೆಸಬೇಕು. ಇವರೊಂದಿಗೆ ಇನ್ನೂ ಕೆಲವರ ಹೆಸರುಗಳನ್ನು…
ಲೇಖಕ: admin
ಮಡಿಕೇರಿ ಏ.4 NEWS DESK : ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಆತ್ಮಹತ್ಯೆ ಪ್ರಕರಣವನ್ನು ಖಂಡಿಸಿ ಕೊಡಗು ಜಿಲ್ಲಾ ಬಿಜೆಪಿ ಮಡಿಕೇರಿಯಲ್ಲಿ ದಿಢೀರ್ ರಸ್ತೆ ತಡೆ ಪ್ರತಿಭಟನೆ ನಡೆಸಿತು. ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ವಿನಯ್ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮೊದಲು ನೀಡಿರುವ ಹೇಳಿಕೆಯಲ್ಲಿ ಉಲ್ಲೇಖಿಸಿರುವ ಕಾಂಗ್ರೆಸ್ ಪಕ್ಷದ ವಕ್ತಾರನನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ವಿನಯ್ ವಿರುದ್ಧ ದಾಖಲಾಗಿದ್ದ ಎಫ್‍ಐಆರ್‍ಗೆ ನ್ಯಾಯಾಲಯದಿಂದ ತಡೆ ದೊರೆತ್ತಿದ್ದರು ಪೊಲೀಸರು ಬೇರೆ ಸೆಕ್ಷನ್ ನಡಿ ಪ್ರಕರಣ ದಾಖಲಿಸಲು ಪ್ರಯತ್ನಿಸಿದ್ದಾರೆ. ಅಶುಚಿತ್ವದಿಂದ ಕೂಡಿದ್ದ ನಾಪೋಕ್ಲು ಸಾರ್ವಜನಿಕ ಶೌಚಾಲಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿನಯ್ ಅವರು ವಿಚಾರ ಹಂಚಿಕೊಂಡಿದ್ದೇ ದೊಡ್ಡ ತಪ್ಪು ಎಂದು ಪ್ರತಿಬಿಂಬಿಸಿ ಎಫ್‍ಐಆರ್ ದಾಖಲಿಸಲಾಗಿದೆ. ಶೌಚಾಲಯವನ್ನು ಶುಚಿಗೊಳಿಸಲು…
ಮಡಿಕೇರಿ NEWS DESK ಏ.4 : ನಗರದ ಹೊಸಬಡಾವಣೆಯ ಸೆಂಟ್ ಮೇರಿ ಮರಿಯ ಮಾಂಟೆಸ್ಸರಿ ಶಿಕ್ಷಕ ತರಬೇತಿ ಸಂಸ್ಥೆಯ ಫ್ಯೂಚರ್ ಸ್ಟಾರ್ ಪ್ರಿ-ಸ್ಕೂಲ್ ಮತ್ತು ನರ್ಸರಿಯಲ್ಲಿ ಏ.15 ರಿಂದ ಮೇ 7 ರವರೆಗೆ ಮಕ್ಕಳ ಬೇಸಿಗೆ ಶಿಬಿರ ನಡೆಯಲಿದೆ. ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ನಡೆಯಲಿರುವ ಶಿಬಿರದಲ್ಲಿ ಕಲೆ, ಕರಕುಶಲತೆ, ಮನೋರಂಜನ ಆಟಗಳು, ನೃತ್ಯ, ಚಿತ್ರಕಲೆ ಹಾಗೂ ಒಂದು ದಿನದ ಪ್ರವಾಸವನ್ನು ಕೈಗೊಳ್ಳಲಾಗುವುದು. ಆಸಕ್ತ ವಿದ್ಯಾರ್ಥಿಗಳು ಏ.15ರ ಒಳಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಹಾಗೂ ನೋಂದಾವಣಿಗಾಗಿ 9591945787 ಸಂಪರ್ಕಿಸಬಹುದಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕಿ ಕೆ.ಎಸ್.ರೆಹಮತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿರಾಜಪೇಟೆ ಏ.4 NEWS DESK : ವಿರಾಜಪೇಟೆ ಗ್ರಾಮಾಂತರ ಠಾಣೆಯ ಪೊಲೀಸ್ ಡಿ.ರಾಜಾ ದೊರೈಪಾಂಡಿಯನ್ ಅವರು ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದು, ಬೆಂಗಳೂರಿನ ಕೋರಮಂಗಲದ ಪೋಲೀಸ್ ಪೆರೆಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಮುಖ್ಯಮಂತ್ರಿ ಪೊಲೀಸ್ ಪದಕ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪದಕ ಪ್ರದಾನ ಮಾಡಿದರು. ರಾಜ್ಯದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸರಿಗೆ ಪ್ರತಿಷ್ಠಿತ ಮುಖ್ಯಮಂತ್ರಿ ಪದಕ ನೀಡಲಾಗುತ್ತಿದ್ದು ಈ ಬಾರಿ 2022-23ನೇ ಸಾಲಿನ ಅತ್ಯುತ್ತಮ ಸೇವೆಗಾಗಿ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಡಿ ರಾಜಾ ಅವರಿಗೆ ವಿಶೇಷ ಕರ್ತವ್ಯ ನಿಮಿತ್ತ ಈ ಪ್ರಶಸ್ತಿ ಸಂದಿದೆ. ಉತ್ತಮ ಕರ್ತವ್ಯಕ್ಕಾಗಿ ಹಿರಿಯ ಅಧಿಕಾರಿಗಳಿಂದ ಹಲವು ಬಾರಿ ಪ್ರಶಂಷನೆಗೊಳಗಾಗಿದ್ದು, 2022ನೇ ಸಾಲಿನಲ್ಲಿ ಉತ್ತಮ ಕರ್ತವ್ಯಕ್ಕಾಗಿ ಮುಖ್ಯಮಂತ್ರಿಗಳ ಪದಕಕ್ಕೆ ಆಯ್ಕೆಯಾಗಿದ್ದಾರೆ. ಮದುರೈ ಮೂಲದ ದೊರೈಪಾಂಡಿಯನ್ ಮತ್ತು ಪಂಚವರ್ಣಂ ಅವರ ಮಗ ಡಿ ರಾಜಾ ಅವರು ಟಾಟಾ ಕಾಫಿ ಸಂಸ್ಥೆ ಪಾಲಿಬೆಟ್ಟದ ಎಮ್ಮೆಗುಂಡಿ ಕಾಫಿ ತೋಟದಲ್ಲಿ ಹುಟ್ಟಿ ಬೆಳೆದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಮ್ಮೆಗುಂಡಿಯಲ್ಲಿ ಪ್ರಾಥಮಿಕ ಶಿಕ್ಷಣ,…
ಕುಶಾಲನಗರ NEWS DESK : ಭಾರತ್ ಸ್ಕೌಟ್ಸ್, ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಸ್ಕೌಟ್ಸ್, ಗೈಡ್ಸ್ ನ ಕುಶಾಲನಗರ ಸ್ಥಳೀಯ ಸಂಸ್ಥೆಯ ವತಿಯಿಂದ ಮುಳ್ಳುಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ದಿನಗಳ ಸ್ಕೌಟ್ಸ್, ಗೈಡ್ಸ್ ನ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಲಾಯಿತು. ಶಾಲಾ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಿದ ಸೋಮವಾರಪೇಟೆ ಉಪ ವಿಭಾಗದ ಡಿವೈಎಪ್ಸಿ ಆರ್.ವಿ.ಗಂಗಾಧರಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಉತ್ತಮ ವ್ಯಕ್ತಿತ್ವ ಹಾಗೂ ಸಮಯ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಲು ಸ್ಕೌಟ್ಸ್ ಮತ್ತು ಗೈಡ್ಸ್ ಉತ್ತಮ ವೇದಿಕೆಯಾಗಿದೆ ಎಂದು ಹೇಳಿದರು. ಸಮವಸ್ತ್ರಧಾರಿಗಳಿಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನ ಇದೆ. ಜೊತೆಗೆ ಜವಾಬ್ದಾರಿ ಕೂಡ ಜಾಸ್ತಿ ಇರುತ್ತದೆ. ಜನರು ಸಮವಸ್ತ್ರಧಾರಿಗಳನ್ನು ಗಮನಿಸುತ್ತಾರೆ. ಆದ್ದರಿಂದ ತಮ್ಮ ನಡವಳಿಕೆ,ರೀತಿ,ನೀತಿ ಜೊತೆಗೆ ಉತ್ತಮ ವರ್ತನೆಯನ್ನು ತೋರಬೇಕು ಎಂದರು. ಸ್ಕೌಟ್ಸ್ ಮತ್ತು ಗೈಡ್ಸ್ ಸಮವಸ್ತ್ರ ಧರಿಸಿರುವ ವಿದ್ಯಾರ್ಥಿಗಳು ಮುಂದೆ ಪೊಲೀಸ್, ಸೈನಿಕರ ಸಮವಸ್ತ್ರ ಧರಿಸುವಂತಾಗಿ ದೇಶ ಸೇವೆಯಲ್ಲಿ…
ಮಡಿಕೇರಿ ಏ.4 NEWS DESK : ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ತೆರಿಗೆ ಹೊರೆಯನ್ನು ವಿರೋಧಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಾರ್ಟಿ ಏ.5 ರಂದು ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಪಕ್ಷದ ಕೊಡಗು ಜಿಲ್ಲಾಧ್ಯಕ್ಷ ಮುಕ್ಕಾಟಿರ ಅಪ್ಪಯ್ಯ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬೆಳಿಗ್ಗೆ 10.30ಗಂಟೆಗೆ ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳನ್ನು ಖಂಡಿಸಲಾಗುವುದು ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರ ನಿರಂತರವಾಗಿ ತೆರಿಗೆಯನ್ನು ಏರಿಕೆ ಮಾಡುತ್ತಿದೆ ಮತ್ತು ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆಯನ್ನು ದುಬಾರಿಗೊಳಿಸುತ್ತಿದೆ. ರಾಜ್ಯದ ಜನರು ನೆಮ್ಮದಿ ಕಳೆದುಕೊಂಡಿದ್ದು, ಆರ್ಥಿಕ ಸಂಕಷ್ಟದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ರಾಜ್ಯ ಸರ್ಕಾರ ಮುದ್ರಾಂಕ ಶುಲ್ಕ, ವಾಹನ ನೋಂದಣಿ ಶುಲ್ಕ, ನಂದಿನಿ ಹಾಲಿನ ಬೆಲೆ, ಬಸ್ ಪ್ರಯಾಣ ದರ, ಮದ್ಯದ ಬೆಲೆ, ವಿದ್ಯುತ್ ಶುಲ್ಕ, ವ್ಯಾಸಂಗ ಶುಲ್ಕ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿದೆ.…
ವಿರಾಜಪೇಟೆ ಏ.4 NEWS DESK : ಸಶಸ್ತ್ರ ಪೊಲೀಸ್ ಹೆಡ್ ಕಾನ್ಸ್ಟೇಬಲ್ ವಿ.ಎಸ್.ರಾಚಪ್ಪ ಅವರಿಗೆ 2022-23ನೇ ಸಾಲಿನ ಅತ್ಯುತ್ತಮ ಸೇವೆಗಾಗಿ ಮುಖ್ಯಮಂತ್ರಿ ಪದಕವನ್ನು ಬೆಂಗಳೂರಿನ ಕೋರಮಂಗಲದ ಪೋಲೀಸ್ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರದಾನ ಮಾಡಿದರು. ರಾಚಪ್ಪ ಅವರು ಪೊನ್ನಂಪೇಟೆ ತಾಲೂಕು, ಮಾಯಮುಡಿ ಗ್ರಾಮದ ಸುಲೋಚನಾ ವಿ.ಎಸ್, ದಿವಂಗತ ಶ್ರೀನಿವಾಸ್ ವಿ.ಎ. ಇವರ ಮಗ. ಪ್ರಸ್ತುತ ಇವರು ಭಯೋತ್ಪಾದನ ನಿಗ್ರಹ ಕೇಂದ್ರ (ಗರುಡ ಪಡೆ) ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸೋಮವಾರಪೇಟೆ ಏ.4 NEWS DESK : ರೋಟರಿ ಹಿಲ್ಸ್ ಸೋಮವಾರಪೇಟೆ ಮತ್ತು ರೋಟರಿ ಕುಶಾಲನಗರ ವತಿಯಿಂದ ಹಾರಂಗಿ ಡ್ಯಾಂ ಸಮೀಪದ ಹುಲುಗುಂದ ಗ್ರಾಮದಲ್ಲಿ ನಿರ್ಮಾಣವಾಗಿರುವ ಸಾರ್ವಜನಿಕರ ತಂಗುದಾಣವನ್ನು ರೋಟರಿ ಜಿಲ್ಲಾ ಪ್ರಾಂತಪಾಲ ವಿಕ್ರಮ್ ದತ್ತ ಉದ್ಘಾಟಿಸಿರು. ನಂತರ ಅವರು ಮಾತನಾಡಿ, ರೋಟರಿ ಸಂಸ್ಥೆಯೂ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ. ರೋಟರಿ ಸದಸ್ಯರು ಪ್ರತಿಫಲಾಫೇಕ್ಷೆಯಿಲ್ಲದೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಾಜದ ಪ್ರತಿಯೊಬ್ಬರೂ ತಾವು ಸಂಪಾದಿಸಿದ ಹಣದಲ್ಲಿ ಅಲ್ಪ ಹಣವನ್ನು ಸಮಾಜಸೇವೆಗೆ ಉಪಯೋಗಿಸಿದರೆ ಅದು ಪುಣ್ಯ ಕಾರ್ಯ ಎಂದು ಹೇಳಿದರು. ರೋಟರಿ ಸಹಾಯಕ ಪ್ರಾಂತಪಾಲ ಡಾ. ಹರಿ ಎ.ಶೆಟ್ಟಿ. ವಲಯ ಸೇನಾನಿ ಎಂ.ಎಂ.ಪ್ರಕಾಶ್ ಕುಮಾರ್, ಸೋಮವಾರಪೇಟೆ ರೋಟರಿ ಹಿಲ್ಸ್ ಅಧ್ಯಕ್ಷ ಜೆ.ಕೆ.ಪೊನ್ನಪ್ಪ, ಕಾರ್ಯದರ್ಶಿ ಕೆ.ಡಿ.ಬಿದ್ದಪ್ಪ, ರೋಟರಿ ಕುಶಾಲನಗರ ಅಧ್ಯಕ್ಷ ಸಿ.ಬಿ.ಹರೀಶ್, ಕಾರ್ಯದರ್ಶಿ ಡಿ.ಡಿ. ಕಿರಣ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಇದ್ದರು.
ಗೋಣಿಕೊಪ್ಪ ಏ.4 NEWS DESK : ಭಗತ್‍ಸಿಂಗ್ ಯುವಕ ಸಂಘ ಅಯೋಜಿಸಿದ ಜಿಸಿಎಲ್ ಐದನೇ ಅವೃತಿಗೆ ಗೋಣಿಕೊಪ್ಪ ದಸರಾ ಮೈದಾನದಲ್ಲಿ ಚಾಲನೆ ದೊರೆತಿದೆ. ಪೊನ್ನಂಪೇಟೆ ರಾಮಕೃಷ್ಣ ಶಾರದ ಆಶ್ರಮದ ಅಧ್ಯಕ್ಷ ಪರಹಿತ ನಂದಾಜಿ ಮಹಾರಾಜ್ ಮತ್ತು ಗೋಣಿಕೊಪ್ಪ ಸಂಥ ಥೋಮಸ್ ಶಾಲೆಯ ಪ್ರಾಂಶುಪಾಲ ಆಂಟೋನಿ ಪಯ್ಯಪಲ್ಲಿ ಮತ್ತು ಇತರ ಅತಿಥಿಗಳು ಪಂದ್ಯಾವಳಿಗೆ ಚಾಲನೆ ನೀಡಿದರು. ಇಪ್ಪತ್ತು ತಂಡಗಳು ನಾಲ್ಕು ದಿನಗಳು ಗೋಣಿಕೊಪ್ಪಲು ಚಾಂಪಿಯನ್ಸ್ ಕ್ರಿಕೆಟ್ ಲೀಗ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ. ನಂತರ ಮಾತನಾಡಿದ ಸ್ವಾಮಿ ಪರಾಹಿತಾನಂದ ಮಹರಾಜ್, ಏಕಾಗ್ರತೆಯನ್ನು ಮೈಗೂಡಿಸಿಕೊಳ್ಳಲು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯುತ್ತಮವಾಗಿದೆ. ದೇವರ ಪ್ರಾರ್ಥನೆಯಿಂದ ಏಕಾಗ್ರತೆ ಸಿಗದಂತಹ ಪರಿಸ್ಥಿತಿ ನಿರ್ಮಾಣವಾದರೂ, ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಏಕಾಗ್ರತೆ ಸಿಗಲಿದೆ ಎಂದು ತಿಳಿಸಿದರು. ಸ್ವಾಮಿ ವಿವೇಕಾನಂದರು ಈ ಭಾರತ ದೇಶ ಕಟ್ಟಲು ಬಲಿಷ್ಠ ಯುವಕರ ಶಕ್ತಿ ಬೇಕು ಎಂದು ಹೇಳುತ್ತಿದ್ದರು, ಅಂತಹ ಶಕ್ತಿ ಕ್ರೀಡೆಯಿಂದ ಯುವಕರು ಪಡೆದುಕೊಳ್ಳಬಹುದು. ನಮ್ಮ ಶಕ್ತಿ ಬಗ್ಗೆ ನಂಬಿಕೆ ಇರಬೇಕು. ಧ್ಯಾನ ಮತ್ತು ಕ್ರೀಡೆಗಳು ಪರಿಣಾಮಕಾರಿ ಜೀವನವನ್ನು ರೂಪಿಸುತ್ತದೆ ಎಂದು…
ಮಡಿಕೇರಿ ಏ.4 NEWS DESK : ಕೊಡಗು ಗೌಡ ಸಮಾಜಗಳಲ್ಲಿ ಸಕ್ರಿಯರಾಗಿದ್ದ ಗೌಡ ಜನಾಂಗದ ಹಿತೈಷಿ ವಿನಯ್ ಸೋಮಯ್ಯ ಅವರ ಆತ್ಮಹತ್ಯೆಗೆ ಕಾರಣಕರ್ತರಾದ ವ್ಯಕ್ತಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಡಗು ಗೌಡ ಸಮಾಜಗಳ ಒಕ್ಕೂಟ ಒತ್ತಾಯಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಆರ್.ಸೋಮಣ್ಣ ಅವರು ಸೋಮವಾರಪೇಟೆ ಗೋಣಿಮರೂರು ಗ್ರಾಮದ ನಿವಾಸಿಯಾಗಿರುವ ಪ್ರಸ್ತುತ ವೃತ್ತಿ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದ ವಿನಯ್ ಸೋಮಯ್ಯ ಗೌಡ ಸಮಾಜಗಳಲ್ಲಿ ಸಕ್ರಿಯರಾಗಿ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಇವರ ಆತ್ಮಹತ್ಯೆ ಆತಂಕಕಾರಿ ಬೆಳವಣಿಗೆಯಾಗಿದ್ದು, ಯುವಕನ ಸಾವಿಗೆ ಕೊಡಗು ಗೌಡ ಸಮಾಜಗಳ ಒಕ್ಕೂಟ ಸಂತಾಪ ಸೂಚಿಸುತ್ತದೆ. ವಿನಯ್ ನ ಆತ್ಮಹತ್ಯೆಗೆ ಕಾರಣವಾದ ಬೆಳವಣಿಗೆಗಳನ್ನು ಒಕ್ಕೂಟ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ. ಸೌಮ್ಯ ಸ್ವಭಾವದ ವ್ಯಕ್ತಿಯಾಗಿರುವ ವಿನಯ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಶಾಸಕರ ಕುರಿತು ಕೀಳು ಮಟ್ಟದ ಸಂದೇಶ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು ಮತ್ತು ಇದನ್ನು ಪ್ರಚಾರ ಕೂಡ…






