ಲೇಖಕ: admin

ಮಡಿಕೇರಿ ಏ.18 NEWS DESK : ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮದಲ್ಲಿ ಸಹಾಯಕ ಇಂಜಿನಿಯ್‌ ಆಗಿ ಕರ್ತವ್ಯ ನಿರ್ವಹಿಸಿ ಇದೀಗ ವರ್ಗಾವಣೆಯಾದ ಎ.ಆರ್.‌ ಸಂಪತ್‌ ಅವರಿಗೆ ಗ್ರೀನ್‌ ಸಿಟಿ ಫೋರಂ ವತಿಯಿಂದ ಬೀಳ್ಕೊಡಲಾಯಿತು. 2015ರಿಂದ ಸುದೀರ್ಘ ಅವಧಿವರೆಗೆ ಸಹಾಯಕ ಇಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸಿದ್ದ ಸಂಪತ್‌ ಅವರು ಸರ್ಕಾರದ ಆದೇಶದಂತೆ ಹಾಸನ ಜಿಲ್ಲೆಗೆ ವರ್ಗಾವಣೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ  ಕಚೇರಿಯಲ್ಲಿ ಭೇಟಿಯಾದ ಫೋರಂ ಸ್ಥಾಪಕಾಧ್ಯಕ್ಷ ಚೆಯ್ಯಂಡ ಸತ್ಯ ಗಣಪತಿ ಹಾಗೂ ಲೈನ್‌ಮನ್‌ಗಳು ಶಾಲು ಹೊಸಿದಿ ಫಲ ತಾಂಬೂಲ ನೀಡಿ ಗೌರವಿಸಿದರು.  ಸಂಪತ್‌ ಅವರ ಕಾರ್ಯನಿರ್ವಹಣೆಯ ಅವಧಿ ಸುಲಭದ್ದಾಗಿರಲಿಲ್ಲ. 2018ರ ನಂತರ ಪ್ರಕೃತಿ ವಿಕೋಪ, ಪ್ರವಾಹದಂತಹ ಕಠಿಣ ಪರಿಸ್ಥಿತಿಯಲ್ಲಿ ಜನರಿಗೆ ಹೆಚ್ಚು ಸಮಸ್ಯೆಯಾಗದ ರೀತಿ ಕಾರ್ಯ ನಿರ್ವಹಿಸಿದ್ದಾರೆ. ಕಠಿಣ ಸಂದರ್ಭದಲ್ಲಿ ತನ್ನ ಸಿಬ್ಬಂದಿಯನ್ನು ಸಮರ್ಥ ರೀತಿಯಲ್ಲಿ ಬಳಸಿಕೊಂಡು ಜನ ಮನ್ನಣೆ ಗಳಿಸಿದ್ದಾರೆಂದು ಸತ್ಯ ಗಣಪತಿ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವಾರ್ಥಕ್ಕಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳ ಮಧ್ಯೆ ಸಂಪತ್‌ ಅವರು ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ತನ್ನ ಲಾಭಕ್ಕಾಗಿ ಸಮಯ ಕಳೆಯುವುದಕ್ಕಿಂತ…

Read More

ಮಡಿಕೇರಿ ಏ.18 NEWS DESK : ವಕ್ಫ್ ಮಂಡಳಿಗಳಿಗೆ ಸದಸ್ಯರ ನೇಮಕ ಮಾಡದಂತೆ ಮತ್ತು ವಕ್ಫ್ ಆಸ್ತಿಗಳಲ್ಲಿ ಯಾವುದೇ ಬದಲಾವಣೆ ತಾರದಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಮುಂದಿನ ಆದೇಶದವರೆಗೆ ಮಧ್ಯಂತರ ತಡೆಯಾಜ್ಞೆ ನೀಡಿರುವ ಸುಪ್ರೀಂಕೋರ್ಟ್ ಕ್ರಮ ಸ್ವಾಗತಾರ್ಹವೆಂದು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಎ.ಉಸ್ಮಾನ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸುವುದಾಗಿ ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಕೇಂದ್ರ ಸರ್ಕಾರದ ನಿರ್ಧಾರದಿಂದ ಯಾರೂ ಗೊಂದಲಕ್ಕೀಡಾಗುವ ಅಗತ್ಯವಿಲ್ಲ. ದೇಶದ ಸಂವಿಧಾನ ಮತ್ತು ಕಾನೂನಿನ ಮೇಲೆ ನಮಗೆ ಅಪಾರ ಗೌರವವಿದೆ. ನ್ಯಾಯಾಲಯದ ಮೇಲೆ ನಾವು ಹೊಂದಿರುವ ವಿಶ್ವಾಸಕ್ಕೆ ವಕ್ಫ್ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶವೇ ಸಾಕ್ಷಿಯಾಗಿದೆ. ಅರ್ಜಿಗಳ ವಿಚಾರಣೆಯ ನಂತರ ಮುಸಲ್ಮಾನರ ಧಾರ್ಮಿಕ ನಂಬಿಕೆಗೆ ಜಯ ಸಿಗಲಿದೆ ಎನ್ನುವ ಬಲವಾದ ವಿಶ್ವಾಸವಿದೆ. ಆದ್ದರಿಂದ ಈ ನಿಟ್ಟಿನಲ್ಲಿ ನಡೆಯುವ ಎಲ್ಲಾ ಕಾನೂನು ಹೋರಾಟಗಳಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಸುಪ್ರೀಂಕೋರ್ಟ್ ಮಧ್ಯಂತರ ಆದೇಶದ ಬಳಿಕ…

Read More

ಮಡಿಕೇರಿ ಏ.18 NEWS DESK : ಲಾರಿ ಮತ್ತು ಓಮ್ನಿ ನಡುವೆ ಡಿಕ್ಕಿ ಸಂಭವಿಸಿ ತಾಯಿ ಹಾಗೂ ಮಗ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಕ್ಷಿಣ ಕೊಡಗಿನ ಹಾತೂರು ಗ್ರಾಮದಲ್ಲಿ ನಡೆದಿದೆ. ಬಿ.ಶೆಟ್ಟಗೇರಿ ಗ್ರಾಮದ ಅರ್ಚಕ ದಿ.ಪುಂಡರಿಕಾಕ್ಷ ಅವರ ಪತ್ನಿ ಲಲಿತ(70) ಹಾಗೂ ಪುತ್ರ, ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಸುದರ್ಶನ(42) ಮೃತ ದುರ್ದೈವಿಗಳು. ಮೈಸೂರಿನತ್ತ ಹೋಗುತ್ತಿದ್ದ ತರಕಾರಿ ಲಾರಿ ಮತ್ತು ಗೋಣಿಕೊಪ್ಪಲಿನಿಂದ ಬಿ.ಶೆಟ್ಟಿಗೇರಿಯತ್ತ ಬರುತ್ತಿದ್ದ ಮಾರುತಿ ಓಮ್ನಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓಮ್ನಿಯಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಓಮ್ನಿ ನಜ್ಜುಗುಜ್ಜಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಮಡಿಕೇರಿ ಏ.18 NEWS DESK : ಗೋಣಿಕೊಪ್ಪ ಮತ್ತು ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಗ್ರಾಮ ಗಸ್ತು ಸದಸ್ಯರ ಸಭೆ ನಡೆಯಿತು. ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾದಕ ದ್ರವ್ಯ, ಸಂಚಾರ ಸುರಕ್ಷತೆ, ಗ್ರಾಮ ಸುರಕ್ಷತೆ, ಅಪರಾಧ ತಡೆಗಟ್ಟುವಿಕೆಯಲ್ಲಿ ಗ್ರಾಮಸ್ಥರ ಪಾತ್ರ, ಮಹಿಳೆಯರ ಸುರಕ್ಷತೆ ಮುಂತಾದ ವಿಷಯಗಳ ಬಗ್ಗೆ ಅರಿವು ಮೂಡಿದರು.   

Read More

ಮಡಿಕೇರಿ ಏ.18 NEWS DESK : ಮುದ್ದಂಡ ಕಪ್ ಹಾಕಿ ಉತ್ಸವದಲ್ಲಿ ಶಾರ್ಪ್‍ಶೂಟರ್‍ಗಳಿಗೆ ರೋಮಾಂಚಕಾರಿ ಓಪನ್ ಶೂಟಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಏ.20 ರಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಮೂರು ವಿಭಾಗಗಳಲ್ಲಿ ಬೊಡಿ ನಮ್ಮೆ ಸ್ಪರ್ಧೆ ನಡೆಯಲಿದೆ. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ.22 (50ಮೀ), 12″ ಬೋರ್ ತೆಂಗಿನಕಾಯಿ ಶೂಟಿಂಗ್ (30ಮೀ) ಹಾಗೂ ಏರ್ ರೈಫಲ್ ಎಗ್ ಶೂಟಿಂಗ್ (15ಮೀ) ವಿಭಾಗದಲ್ಲಿ ಮುಕ್ತ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ಆಕರ್ಷಕ ನಗದು ಬಹುಮಾನ ಹಾಗೂ ಟ್ರೋಫಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ 94487 96947, 94488 95969 ಸಂಪರ್ಕಿಸಬಹುದಾಗಿದೆ ಎಂದು ಮುದ್ದಂಡ ಕಪ್ ಹಾಕಿ ಉತ್ಸವ ಸಮಿತಿಯ ಅಧ್ಯಕ್ಷ ಮುದ್ದಂಡ ರಶಿನ್ ಸುಬ್ಬಯ್ಯ ತಿಳಿಸಿದ್ದಾರೆ.

Read More

ನಾಪೋಕ್ಲು ಏ.18 NEWS DESK : ಬಲ್ಲಮಾವಟಿ ಪಂಚಾಯತಿಯ ಪೇರೂರು ಗ್ರಾಮದ ಪೇರೂರಿಯನ್ಸ್ ಕ್ಲಬ್ ವತಿಯಿಂದ 7ನೇ ವರ್ಷದ ಉಚಿತ ಬೇಸಿಗೆ ಹಾಕಿ ಶಿಬಿರ ಉದ್ಘಾಟನೆಗೊಂಡಿತು. ಪೇರೂರು ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ ಉಚಿತ ಬೇಸಿಗೆ ಹಾಕಿ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಬಲ್ಲಮಾವಟಿ ಗ್ರಾಮ ಪಂಚಾಯತ್ ಸದಸ್ಯರಾದ ಮಚ್ಚುರ ಎಂ.ರವೀಂದ್ರ, ಆರೋಗ್ಯಯುತ ಸಮಾಜಕ್ಕಾಗಿ ಕ್ರೀಡೆ ಮುಖ್ಯ, ಕೊಡಗು ಪುಟ್ಟ ಜಿಲ್ಲೆಯಾದರೂ ಅನೇಕ ಕ್ರೀಡಾಪಟುಗಳನ್ನು ರಾಷ್ಟ್ರಕ್ಕೆ ನೀಡಿದೆ ಎಂದರು. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಯುವ ಪೀಳಿಗೆ ಮಾರ್ಗದರ್ಶನ ನೀಡಿ ಸದೃಢ ಸಮಾಜ ನಿರ್ಮಾಣಕ್ಕೆ ಶ್ರಮಿಸುವಂತಾಗಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಶಿಬಿರಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಖ್ಯಾತ ತರಬೇತುದಾರರಾದ ಮಣವಟ್ಟಿರ ಮಧು ಅಯ್ಯಪ್ಪ ಮಾತನಾಡಿ, ಕ್ರೀಡೆಯಲ್ಲಿ ಶಿಸ್ತಿನಿಂದ ಮುನ್ನಡೆದರೆ ಉತ್ತಮ ಆಟಗಾರನಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು. ಚೀಯಕಪೂವಂಡ ಮಿಥುನ್ ಚಂಗಪ್ಪ ಮಾತನಾಡಿ, ಬೇಸಿಗೆ ರಜಾ ದಿನಗಳಲ್ಲಿ ಮಕ್ಕಳು ಮೊಬೈಲ್ ಮತ್ತು ಟಿವಿಯ…

Read More

ನಾಪೋಕ್ಲು ಏ.18 NEWS DESK : ಹಿಂದೂ ಮಲಯಾಳಿ ಸಂಘದ ವತಿಯಿಂದ ವಿಷು ಕಣಿ ಹಾಗೂ ವಿಷು ಕೈನೀಟಂ ಸಂಭ್ರಮದಿಂದ ನಡೆಯಿತು. ಸಂಘದ ಕಛೇರಿಯಲ್ಲಿ ವರ್ಷಂಪ್ರತಿಯಂತೆ ಈ ವರ್ಷವೂ ವಿಷು ಹಬ್ಬದ ಪ್ರಯುಕ್ತ ಆಯೋಜಿಸಿದ ವಿಷು ಹಬ್ಬಕ್ಕೆ ಮುಖ್ಯವಾಗಿ ಬೇಕಾದಂತಹ (ಕೊನ್ನ ಪೂ) ಹೊನ್ನೇ ಹೂ ವನ್ನು ಜನಾಂಗಬಾಂಧವರಿಗೆ ವಿತರಣೆ ಮಾಡಲಾಯಿತು. ಈ ಸಂದರ್ಭ ಹಿಂದೂ ಮಲಯಾಳಿ ಸಂಘದ ಅಧ್ಯಕ್ಷರು ಅನಿಲ್ ಮಹಿಳಾ ಅಧ್ಯಕ್ಷರಾದ ಸುಮಿತ್ರಾ, ಕಾರ್ಯದರ್ಶಿ ರಾಮು, ಉಪಾಧ್ಯಕ್ಷ ಅಭಿಲಾಷ್, ಖಜಂಚಿ ಮಣಿ, ಸಂಘಟನಾ ಕಾರ್ಯದರ್ಶಿ ಸತೀಶ್, ಚೇತನ್, ಮುಖ್ಯ ಅತಿಥಿಗಳಾಗಿ ಮುತ್ತಪ್ಪ ದೇವಾಲಯದ ಅಧ್ಯಕ್ಷರು ಚಂದ್ರ, ಮತ್ತು ವಿನಿಲ್, ಮನ್ಮದನ್ ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಮಲಯಾಳಿ ಬಾಂಧವರು ಪಾಲ್ಗೊಂಡಿದ್ದರು.

Read More

ನಾಪೋಕ್ಲು ಏ.18 NEWS DESK : ಕೈಕಾಡು ಗ್ರಾಮದ ಮಕ್ಕೋಟು ಮಹಾಲಕ್ಷ್ಮಿ ದೇವರ ವಾರ್ಷಿಕ ಉತ್ಸವವು ಶ್ರದ್ಧಭಕ್ತಿಯಿಂದ ನಡೆಯಿತು. ಎರಡು ವರ್ಷಕೊಮ್ಮೆ ನಡೆಯುವ ಹಬ್ಬದಲ್ಲಿ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ರಾತ್ರಿ ಹದಿನೆಂಟು ತರಹದ ದೇವರ ಕುಣಿತವನ್ನು ದೇವರ ಹೆಸರನ್ನು ಹೇಳುತ್ತಾ ಕೈಕಾಡು ಗ್ರಾಮದ, ಮಕ್ಕೋಟು ಕೇರಿಯ ವಿವಿಧ ಕುಟುಂಬದ 18 ವರ್ಷ ಮೇಲ್ಪಟ್ಟ ಸದಸ್ಯರು ಕುಣಿದರು. ಬಳಿಕ ಆ ನೃತ್ಯಗಳನ್ನು ಮಂಗಳವಾರ ದೇವಾಲಯದಲ್ಲಿ ಪ್ರದರ್ಶಿಸಲಾಯಿತು. ಮಂಗಳವಾರ ಬೆಳಿಗ್ಗೆ ದೇವತಕ್ಕರಾದ ಚೊಟ್ಟೆಯಂಡ, ಭಂಡಾರ ತಕ್ಕರ ನೆರೆಯಂಡಮ್ಮಂಡ ಕುಟುಂಬದಿಂದ ಹಾಗೂ ಪಾಡೆಯಂಡ, ಬಟ್ಟಿಯಂಡ, ಕದ್ದಣಿಯಂಡ, ನಾಯಕಂಡ ಆರು ಕುಟುಂಬದವರು ಎತ್ತುಪೊರಾಟದೊಂದಿಗೆ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಪ್ರವೇಶವಾಗಿ ಬಳಿಕ ಸಾಂಪ್ರದಾಯಕವಾಗಿ ದೇವರ ವಿವಿಧ ಬಗೆಯ ಕುಣಿತಗಳನ್ನು ಒಂದೊಂದಾಗಿ ಕುಣಿಯುತ್ತಾ ಸಂಪನ್ನಗೊಂಡಿತು. ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು. ಪ್ರತೀ ಎರಡು ವರ್ಷಗಳಿಗೊಮ್ಮೆ ನಡೆಸಲ್ಪಡುವ ಹಬ್ಬ ಇದಾಗಿದೆ. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು, ತಕ್ಕ ಮುಖ್ಯಸ್ಥರು ಸೇರಿದಂತೆ ಊರ ಮತ್ತು ಪರ ಊರಿನ ಭಕ್ತಾದಿಗಳು ಅಧಿಕ…

Read More

ನಾಪೋಕ್ಲು ಏ.18 NEWS DESK : ಕೊಳಕೇರಿ ಗ್ರಾಮದ ಮೂಟೇರಿ ಶ್ರೀ ಉಮಾಮಹೇಶ್ವರಿ ದೇವರ ವಾರ್ಷಿಕ ಉತ್ಸವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು. ಉತ್ಸವದ ಪ್ರಯುಕ್ತ  ದೇವಾಲಯದಲ್ಲಿ ವಿಶೇಷ ಪೂಜೆ, ಅಲಂಕಾರಪೂಜೆ, ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿತರಣೆ ನೆರವೇರಿತು. ಉತ್ಸವದ ಅಂಗವಾಗಿ  ಪಟ್ಟಣಿ ಹಬ್ಬದಂದು ಭಕ್ತರು ದೇವಾಲಯದಲ್ಲಿ ದೇವರ ಪ್ರದರ್ಶನ ನೃತ್ಯ ಬಲಿಯನ್ನು ವೀಕ್ಷಿಸಿ ಕಣ್ತುಂಬಿಕೊಂಡು ತಮ್ಮ ಇಷ್ಟಾರ್ಥ ಸೇವೆ ಹರಕೆ ಕಾಣಿಕೆ ಒಪ್ಪಿಸಿ ಪ್ರಸಾದವನ್ನು ಸ್ವೀಕರಿಸಿದರು. ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ, ತಕ್ಕ ಮುಖ್ಯಸ್ಥರು ಹಾಗೂ ವಿವಿಧ ಗ್ರಾಮದ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ವರದಿ : ದುಗ್ಗಳ ಸದಾನಂದ 

Read More

ಮಡಿಕೇರಿ ಏ.18 NEWS DESK  : ದುಬೈ ಒಕ್ಕಲಿಗರ ಸಂಘದ ವತಿಯಿಂದ ದುಬೈ ನಲ್ಲಿ ಆಯೋಜಿಸಲಾಗಿರುವ “ಕುವೆಂಪು ವಿಶ್ವ ಒಕ್ಕಲಿಗರ ಉತ್ಸವ ವೈಭವ ” ಸಮ್ಮೇಳನದಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಹಾಗೂ ದಿವ್ಯಾ ಮಂತರ್ ಅವರನ್ನು ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಯೋಜಕರು ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು.

Read More