ಮಡಿಕೇರಿ ಏ.18 NEWS DESK : ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಕೊಡವ ಹಾಕಿ ಪಂದ್ಯಾವಳಿಯ 25 ವಷ೯ಗಳ ಇತಿಹಾಸವನ್ನು ದಾಖಲಿಸುವ ಸ್ಟಿಕ್ ವಕ್೯ ಮ್ಯಾಜಿಕ್ – ಸಾಗಾ ಆಫ್ ಕೊಡವ ಫ್ಯಾಮಿಲಿ ಹಾಕಿ ಹೆಸರಿನ ಇಂಗ್ಲೀಷ್ ಕೃತಿಯು ಏ.22 ರಂದು ಲೋಕಾಪ೯ಣೆಯಾಗಲಿದೆ. ಹಿರಿಯ ಪತ್ರಕತ೯, ಲೇಖಕ ಕೊಟ್ಟಿಯಂಡ ಜೀವನ್ ಚಿಣ್ಣಪ್ಪ ರಚಿಸಿರುವ ಈ ಪುಸ್ತಕವನ್ನು ಮಡಿಕೇರಿಯ ವಾತಾ೯ ಕಮ್ಯೂನಿಕೇಷನ್ಸ್ ಪ್ರಕಾಶನದಲ್ಲಿ ಹೊರತರಲಾಗುತ್ತಿದೆ. 25 ವಷ೯ಗಳ ಕೊಡವ ಹಾಕಿ ಪಂದ್ಯಾವಳಿಯ ಇತಿಹಾಸದ ದಾಖಲೆಯ ಲೇಖನಗಳು, ಛಾಯಾಚಿತ್ರಗಳನ್ನು ಹೊಂದಿರುವ ಪುಸ್ತಕದಲ್ಲಿ ಕೊಡಗಿನ ಹಾಕಿ ಇತಿಹಾಸದ ಮೆಲಕು ಕೂಡ ಇದೆ. ಏ.22 ರಂದು ಮಂಗಳವಾರ ಸಂಜೆ 6 ಗಂಟೆಗೆ ಮಡಿಕೇರಿಯ ಪತ್ರಿಕಾಭವನ ಸಭಾಂಗಣದಲ್ಲಿ ಸ್ಟಿಕ್ ವಕ್೯ ಮ್ಯಾಜಿಕ್ – ಸಾಗಾ ಆಫ್ ಕೊಡವ ಫ್ಯಾಮಿಲಿ ಹಾಕಿ ಕೖತಿಯನ್ನು ಮಾಜಿ ಕಾನೂನು ಸಚಿವ ಮೇರಿಯಂಡ ಸಿ. ನಾಣಯ್ಯ ಲೋಕಾಪ೯ಣೆ ಮಾಡಲಿದ್ದು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ .ಎ.ಎಸ್. ಪೊನ್ನಣ್ಣ, ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ, ಕೊಡವ…
ಲೇಖಕ: admin
ಮಡಿಕೇರಿ ಏ.18 NEWS DESK : ಸಿದ್ದಾಪುರ- ಪಾಲಿಬೆಟ್ಟ ರಸ್ತೆಯ ತೂಪನಕೊಲ್ಲಿ ಎಂಬಲ್ಲಿ ಮುಂಜಾನೆ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿ ಆತಂಕ ಸೃಷ್ಟಿಸಿತು. ನಡು ರಸ್ತೆಯಲ್ಲೇ ವಾಯು ವಿಹಾರ ಮಾಡುತ್ತಿದ್ದ 10ಕ್ಕೂ ಹೆಚ್ಚು ಕಾಡಾನೆಗಳನ್ನು ಕಂಡು ವಾಹನ ಚಾಲಕರು ಮಾರ್ಗ ಬದಲಾಯಿಸಿದರು. ಅಕ್ಕಪಕ್ಕದ ತೋಟ ಅಥವಾ ಕಾಡಿಗೆ ತೆರಳದ ಗಜಪಡೆ ರಸ್ತೆಯ ಮೂಲಕವೇ ಸಂಚರಿಸಿದವು. ಈ ಮಾರ್ಗವಾಗಿ ಬಂದ ವಾಹನ ಚಾಲಕರು ಮುಂದೆ ಸಾಗದೆ ಆತಂಕದಿಂದ ಬೇರೆ ರಸ್ತೆಯ ಮೂಲಕ ತೆರಳಿದರು. ತೂಪನಕೊಲ್ಲಿ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಸುತ್ತಮುತ್ತಲಿನ ತೋಟಗಳಲ್ಲಿದ್ದ 2-3 ವರ್ಷದ ಅಡಿಕೆ ಗಿಡಗಳನ್ನು ಸಂಪೂರ್ಣ ನಾಶ ಮಾಡಿದೆ. ಯಾವುದೇ ಕೃಷಿ ಫಸಲು ಕೈಗೆ ಸಿಗುತ್ತಿಲ್ಲ, ಬದಲಿಗೆ ಕಾಡಾನೆಗಳ ಪಾಲಾಗುತ್ತಿದೆ. ಕಾರ್ಮಿಕರು ತೋಟದಲ್ಲಿ ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ ಎಂದು ಸ್ಥಳೀಯ ಕೃಷಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ತಕ್ಷಣ ಸೂಕ್ತ ಕ್ರಮ ಕೈಗೊಂಡು ಕಾಡಾನೆಗಳನ್ನು ಕಾಡಿಗಟ್ಟಬೇಕು ಮತ್ತು ಬೆಳೆನಷ್ಟ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಮಡಿಕೇರಿ ಏ.18 NEWS DESK : ಕೊಡಗು ಫೆಡರೇಶನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಿ, ಫೆಡರೇಶನ್ ಆಫ್ ವೈನ್ ಮರ್ಚೆಂಟ್ ಅಸೋಸಿಯೇಷನ್ ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳು :: ನೂತನ ಪದಾಧಿಕಾರಿಗಳಾಗಿ ನವೀನ್ ಉತ್ತಯ್ಯ, ಬಿದ್ದಪ್ಪ, ಪ್ರಸಾದ್, ಗಣೇಶ್, ಉಣ್ಣಿಕೃಷ್ಣ. ಗೋಕುಲ್ ಉತ್ತಯ್ಯ, ಬಾಬು ನಾಯ್ದು, ಬಿ.ಎ.ಮಹಾಬಲ ಆಯ್ಕೆಯಾದರು. ಫೆಡರೇಶನ್ ಆಫ್ ವೈನ್ ಮರ್ಚೆಂಟ್ ಅಸೋಸಿಯೇಶನ್ ಮಡಿಕೇರಿ ತಾಲ್ಲೂಕು ಅಧ್ಯಕ್ಷ ಪೈಕೇರ ಮನೋಹರ, ಕಾರ್ಯದರ್ಶಿ ವೇಣು, ಜಿಲ್ಲಾಧ್ಯಕ್ಷ ಗುಮ್ಮಟ್ಟೀರ ಕೀಲನ್ ಗಣಪತಿ, ಪ್ರಧೀಪ್ ಹಿರಿಯರಾದ ಮಾಚಯ್ಯ, ರಮೇಶ್ ಹಾಗೂ ಎಲ್ಲಾ ಸನ್ನದಾರ ಮಿತ್ರರರು ಹಾಜರಾಗಿದ್ದರು.
ಮಡಿಕೇರಿ ಏ.18 NEWS DESK : ಐನ್‍ಮನೆಗಳು ಕೊಡವ ಕುಟುಂಬಗಳ ಕೇಂದ್ರಸ್ಥಾನವಾಗಿದ್ದು, ಇಡೀ ಕುಟುಂಬದ ಸಾಂಸ್ಕೃತಿಕ ಶಕ್ತಿಯಾಗಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅಭಿಪ್ರಾಯಪಟ್ಟರು. ಕಾಕೋಟುಪರಂಬು ಮಂಡೇಟಿರ ಕುಟುಂಬಸ್ಥರ ಗುರು-ಕಾರೋಣರಿಗೆ ಮೀದಿ ಹಾಗೂ ಮಂದಣಮೂರ್ತಿಗಳ ಭಾರಣಿ ನಡೆದ ಸಂದರ್ಭದಲ್ಲಿ ಕುಟುಂಬಸ್ಥರಿಂದ ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಮುಂದ್‍ಮನೆ, ಬಲ್ಯಮನೆ, ಗುರುಮನೆ, ಐನ್‍ಮನೆಗಳೆಂದು ಕರೆಯಲ್ಪಡುವ ಇವುಗಳು ಕೊಡವ ಕುಟುಂಬಗಳಿಗೆ ದೇವನೆಲೆ ಇದ್ದಂತೆ. ಇವುಗಳಿಗೆ ದೇವಾಲಯಗಳಷ್ಟೇ ಪ್ರಾಮುಖ್ಯತೆ ಇದ್ದು, ಕುಟುಂಬ ಸದಸ್ಯರ ಆಧ್ಯಾತ್ಮಿಕ ಕೇಂದ್ರ ಇದಾಗಿದೆ. ಇಂತಹ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನಲೆಯುಳ್ಳ ಐನ್‍ಮನೆಗಳನ್ನು ಕಾಪಾಡಿಕೊಂಡು ಹೋಗಬೇಕಾದದ್ದು ಪ್ರತಿಯೊಂದು ಕುಟುಂಬಸ್ಥರ ಕರ್ತವ್ಯವಾಗಿರಬೇಕಾಗಿದೆ ಎಂದರು. ಐನ್‍ಮನೆಗಳ ಪ್ರಾಮುಖ್ಯತೆ ಹಾಗೂ ದೈವಿಕ ಹಿನ್ನಲೆಯನ್ನು ಅರ್ಥೈಸಿಕೊಂಡಿರುವ ಪ್ರಸಕ್ತ ಸರ್ಕಾರ ಸಹಾಯಧನ ನೀಡುವುದರ ಮೂಲಕ ಐನ್‍ಮನೆ, ಮುಂದ್‍ಮನೆಗಳ ರಕ್ಷಣೆಗೆ ಮುಂದಾಗಿರುವುದು ಅಭಿನಂದನಾರ್ಹ. ಐನ್‍ಮನೆಗಳಿಲ್ಲದ ಕೊಡವ ಕುಟುಂಬಗಳಲ್ಲಿ ಒಂದೊಂದು ಐನ್‍ಮನೆಗಳನ್ನು ನಿರ್ಮಿಸಿಕೊಳ್ಳಬೇಕಾದ ಅನಿವಾರ್ಯತೆ ಕಾಣುತ್ತಿದೆ. ಪ್ರತಿಯೊಂದು ಕುಟುಂಬದ ಸದಸ್ಯರು ಹೊರನಾಡು, ವಿದೇಶದಲ್ಲಿದ್ದರೂ ವರ್ಷಕೊಮ್ಮೆಯಾದರೂ…
ವಿರಾಜಪೇಟೆ ಏ.18 NEWS DESK : ಹುಬ್ಬಳ್ಳಿಯ ಉಮಾ ಶಂಕರ ಪ್ರತಿಷ್ಠಾನದಿಂದ ನೀಡಲಾಗುವ ಅತ್ಯುತ್ತಮ ಪುಸ್ತಕ ಪ್ರಶಸ್ತಿಗೆ ಮಡಿಕೇರಿಯ ಕೆ.ಜಯಲಕ್ಷ್ಮಿ ಅವರ “ಮತ್ತೆ ವಸಂತ” ಕಥಾ ಸಂಕಲನ ಆಯ್ಕೆಯಾಗಿದ್ದು, ಹುಬ್ಬಳ್ಳಿಯಲ್ಲಿ ಮೇ 11 ರಂದು ನಡೆಯಲಿರುವ ವಾರ್ಷಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೆ.ಜಯಲಕ್ಷ್ಮಿ ಅವರು ಮಡಿಕೇರಿಯ ಸಂತ ಜೋಸೆಫರ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಮರ್ಥ ಕನ್ನಡಿಗರು ಸಂಸ್ಥೆಯ ಜಿಲ್ಲಾ ಪ್ರಧಾನ ಸಂಚಾಲಕಿ ಹಾಗೂ ಕೊಡಗು ಜಾನಪದ ಪರಿಷತ್‍ನ ನಿರ್ದೇಶಕಿಯಾಗಿದ್ದಾರೆ. ಇವರು ಮಡಿಕೇರಿಯ ಜೀವ ವಿಮಾ ನಿಗಮದ ಉದ್ಯೋಗಿ ವಿ.ಹೆಚ್.ಜಯಕುಮಾರ್ ಅವರ ಪತ್ನಿ.
ಸುಂಟಿಕೊಪ್ಪ,ಏ.18 NEWS DESK : ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಪ್ರಾರ್ಥನಾ ಕೂಟ ನಡೆಯಿತು. ಪವಿತ್ರ ಗುರುವಾರದ ಸಂಜೆ ಕಡೆಯ ಭೋಜನ ವಿಶೇಷ ಬಲಿಪೂಜೆಯನ್ನು ಸಂತ ಮೇರಿ ಶಾಲಾವರಣದಲ್ಲಿ ದೇವಾಲಯದ ಧರ್ಮಗುರುಗಳಾದ ಫಾಧರ್ ವಿಜಯಕುಮಾರ್ ನೇರವೇರಿಸಿದರು. ಧರ್ಮಗುರುಗಳಾದ ವಂ.ಫಾ.ವಿಜಯಕುಮಾರ್ ಅವರು ದೇವಾಲಯದ ಹಿರಿಯರು ಕ್ರೈಸ್ತಭಾಂದವರ ಪಾದಗಳನ್ನು ತೊಳೆಯುವ ಮೂಲಕ ಪ್ರಭು ಕ್ರಿಸ್ತರ ನಡೆಸಿದ ಮಹತ್ಕಾರ್ಯವನ್ನು ನೆನಪಿಸಿದರು. ನಂತರ ಕನ್ಯಾಸ್ತ್ರೀಯರು, ಕ್ರೈಸ್ತ ಭಾಂದವರು ಮಧ್ಯರಾತ್ರಿಯವರೆಗೆ ವಿಶೇಷ ಪ್ರಾರ್ಥನೆ ದ್ಯಾನಗಳಲ್ಲಿ ತೊಡಗಿಸಿಕೊಂಡಿದ್ದರು. ನೂರಾರು ಸಂಖ್ಯೆಯಲ್ಲಿ ನೇರೆದಿದ್ದ ಕ್ರೈಸ್ತ ಭಾಂದವರು ಪ್ರಾರ್ಥನಾಕೂಟದಲ್ಲಿ ಪಾಲ್ಗೊಂಡಿದ್ದರು.
ಮಡಿಕೇರಿ ಏ.18 NEWS DESK : ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಏ.28 ರಂದು 11 ಗಂಟೆಗೆ ನಡೆಯಲಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷರ ಸ್ಥಾನ ಸಾಮಾನ್ಯಕ್ಕೆ ಮೀಸಲಾಗಿದೆ. ಏ.28 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಇದೆ. ನಂತರ ಪರಿಶೀಲನಾ ಕಾರ್ಯ ನಡೆಯಲಿದ್ದು, ವಾಪಸ್ ತೆಗೆದುಕೊಳ್ಳಲು ಕಾಲಾವಕಾಶ ಕೊಡಲಾಗುವುದು. ನಂತರ ಕೈಎತ್ತುವ ಮೂಲಕ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಬಹುದು ಎಂದು ಚುನಾವಣಾಧಿಕಾರಿ ವಿನಾಯಕ ನರ್ವಡೆ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಸಿದ್ದಾಪುರ ಏ.18 NEWS DESK : ನೈಮ ಎಜುಕೇಶನಲ್ ಆಂಡ್ ವೆಲ್ಫೇರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಮೂರು ದಿನಗಳ ಉಚಿತ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ತರಗತಿಯನ್ನು ನೆಲ್ಲಿಹುದಿಕೇರಿ ವಿ.ಎಸ್.ಎಸ್.ಎನ್ ಸಭಾಂಗಣದಲ್ಲಿ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಸಿವಿಲ್ ನ್ಯಾಯಾಧೀಶರು ಎ.ಎಸ್.ಸಲ್ಮಾ ಮತ್ತು ಜೆ ಎಂ ಎಪ್ ಸಿ ಆನೇಕಲ್ ಭಾಗವಹಿಸಿ ಮಾತನಾಡಿ, ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಂಡು ಪ್ರತಿಭಾನ್ವಿತರಾಗಿ ಸಮಾಜದ ಮುಖ್ಯ ವಾಹಿನಿಗೆ ಬಂದು ಉನ್ನತ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ಕಾನೂನು ಪದವಿಯನ್ನು ಪಡೆದುಕೊಳ್ಳಬೇಕು. ಕಾನೂನಿನ ತಿಳುವಳಿಕೆಯಿಂದ ಸಮಾಜದ ತಪ್ಪುಗಳನ್ನು ತಿದ್ದಿಕೊಳ್ಳುವ ಅವಕಾಶಗಳಿರುತ್ತವೆ. ಅದರಲ್ಲೂ ವಿದ್ಯಾರ್ಥಿನಿಯರು ಕಾನೂನು ಪದವಿ ಪಡೆಯುವ ಮೂಲಕ ಗೌರವಯುತ ಬದುಕು ಸಾಗಿಸಲು ಸಹಾಯವಾಗುತ್ತದೆ. ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದೆ ಕಡ್ಡಾಯವಾಗಿ ಶಾಲಾ ಕಾಲೇಜಿಗೆ ಬರುವುದರ ಮೂಲಕ ಮುಂದಿನ ಶಿಕ್ಷಣದ ಭವಿಷ್ಯ ರೂಪಿಸಿಕೊಳ್ಳಬೇಕೆಂದರು. ನಿವೃತ ಹಿರಿಯ ನ್ಯಾಯಾಧೀಶರಾದ ಎ.ಎ.ಶಫೀರ್ ಮಾತನಾಡಿ ಕಾನೂನು ವೃತ್ತಿಯಲ್ಲಿರುವ ವಿವಿಧ ಅವಕಾಶಗಳ ಕುರಿತು ಮಾರ್ಗದರ್ಶನ ನೀಡಿ ಶಿಕ್ಷಣದೊಂದಿಗೆ ಕಾನೂನು ಅರಿವಿನ ಮೂಲಕ ಮುನ್ನಡದಲ್ಲಿ ಉತ್ತಮ ಭವಿಷ್ಯ…
ಮಡಿಕೇರಿ NEWS DESK ಏ.17 : ಕೊಡವ ಹೊಸ ವರ್ಷಾಚರಣೆ ಎಡ್ಮ್ಯಾರ್ ಒಂದ್ ರ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕೊಡವ ನರಮೇಧದ ದೇವಟ್ ಪರಂಬು ಸ್ಮಾರಕ ಸ್ಥಳದಲ್ಲಿ ಹಿರಿಯರಿಗೆ ಪುಷ್ಪ ನಮನ ಸಲ್ಲಿಸಿತು. ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಹಿರಿಯರನ್ನು ಸ್ಮರಿಸಿ ಗೌರವ ಅರ್ಪಿಸಿದ ಸದಸ್ಯರು ದೇವಟ್ ಪರಂಬುವಿನಲ್ಲಿ ಅಂತರಾಷ್ಟ್ರೀಯ ಕೊಡವ ನರಮೇಧದ ಸ್ಮಾರಕವನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದರು. ಎನ್.ಯು.ನಾಚಪ್ಪ ಅವರು ಮಾತನಾಡಿ ಟಿಪ್ಪುವಿನ ಆಕ್ರಮಣಗಳಿಂದ ಕೊಡವ ವೀರ ಯೋಧರು ರಾಜ್ಯವನ್ನು 32 ಕ್ಕೂ ಹೆಚ್ಚು ಬಾರಿ ರಕ್ಷಿಸಿದರು. ತನ್ನ ಪುನರಾವರ್ತಿತ ಸೋಲುಗಳಿಗೆ ಸೇಡು ತೀರಿಸಿಕೊಳ್ಳುವ ಪ್ರಯತ್ನವಾಗಿ ಟಿಪ್ಪು ಶಾಂತಿಸಭೆಯ ಸಂಚು ಹೂಡಿ ಕೊಡವರ ನಾಶಕ್ಕೆ ಕಾರಣನಾದನು. ಇಂದು ಉಳಿದಿರುವ ಆದಿಮಸಂಜಾತ ಕೊಡವ ಜನಾಂಗದ ಸಮಗ್ರ ಸಬಲೀಕರಣಕ್ಕೆ ಮತ್ತು ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆಯನ್ನು ಪಡೆಯಲು ಹಿರಿಯರ ಆಶೀರ್ವಾದ ಪಡೆಯಲಾಯಿತು ಎಂದರು. ಕೊಡವ ನರಮೇಧದ ದೇವಟ್ ಪರಂಬುವಿನಲ್ಲಿ ಅಂತರಾಷ್ಟ್ರೀಯ ಸ್ಮಾರಕ, ನಾಲ್ನಾಡ್ ಅರಮನೆ ಮತ್ತು ಮಡಿಕೇರಿ ಕೋಟೆಯಲ್ಲಿ ಸ್ಮಾರಕಗಳನ್ನು…
*ಮೈದಾನ 1 :: ಬೆಳಿಗ್ಗೆ 9 ಗಂಟೆಗೆ ಚೋಯಮಾಡಂಡ ಮತ್ತು ಕೋಟೇರ, 10 ಗಂಟೆಗೆ ಕುಮ್ಮಂಡ ಮತ್ತು ಪುದಿಯೊಕ್ಕಡ, 11 ಗಂಟೆಗೆ ಮುಕ್ಕಾಟಿರ (ಬೋಂದ) ಮತ್ತು ಚಂಗುಲಂಡ, ಮಧ್ಯಾಹ್ನ 1 ಗಂಟೆಗೆ ಅಟ್ರಂಗಡ ಮತ್ತು ಮಳವಂಡ, 2 ಗಂಟೆಗೆ ಕಾಯಪಂಡ ಮತ್ತು ಮೇಕೇರಿರ, 3 ಗಂಟೆಗೆ ನಂಬುಡುಮಾಡ ಮತ್ತು ಅಂಜಪರವಂಡ *ಮೈದಾನ 2 :: ಬೆಳಿಗ್ಗೆ 9 ಗಂಟೆಗೆ ಅಮ್ಮಣಿಚಂಡ ಮತ್ತು ಅಜ್ಜಮಾಡ, 10 ಗಂಟೆಗೆ ಮೇರಿಯಂಡ ಮತ್ತು ಬೋವ್ವೆರಿಯಂಡ, 11 ಗಂಟೆಗೆ ನೆರವಂಡ ಮತ್ತು ಚೆರುಮಂದಂಡ, ಮಧ್ಯಾಹ್ನ 1 ಗಂಟೆಗೆ ಮುರುವಂಡ ಮತ್ತು ಮಂಡೇಪಂಡ, 2 ಗಂಟೆಗೆ ಪುಲ್ಲಂಗಡ ಮತ್ತು ಸಣ್ಣುವಂಡ, 3 ಗಂಟೆಗೆ ಸೋಮೆಯಂಡ ಮತ್ತು ಕಲಿಯಂಡ






