ಮಡಿಕೇರಿ ಜ.18 NEWS DESK : ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದ ಕೊಡಗು ಜಿಲ್ಲಾಧ್ಯಕ್ಷರಾಗಿ ಸಂಘಟಕ, ಪತ್ರಕರ್ತ, ಚಿತ್ರನಟ, ಸಾಹಿತಿ ಬೊಳ್ಳಜಿರ ಬಿ.ಅಯ್ಯಪ್ಪ ಆಯ್ಕೆಯಾಗಿದ್ದಾರೆ. ಕನ್ನಡ ಭವನದ ರಜತ ಸಂಭ್ರಮ ವರ್ಷವಾದ 2025ರಲ್ಲಿ ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸದುದ್ದೇಶದಿಂದ ಎಲ್ಲ ಜಿಲ್ಲೆಗಳಲ್ಲಿ ಘಟಕ ಸ್ಥಾಪಿಸಲಾಗುತ್ತಿದೆ. ಕನ್ನಡ ಭವನದ ಕರ್ನಾಟಕ ರಾಜ್ಯ ಸಂಚಾಲಕರಾದ ಡಾ. ಟಿ.ತ್ಯಾಗರಾಜ್ ಮೈಸೂರು ನಾಮನಿರ್ದೇಶನ ಮಾಡಿದರು. ಇನ್ನೊರ್ವ ಕರ್ನಾಟಕ ರಾಜ್ಯ ಸಂಚಾಲಕರಾದ ಬಿ.ಶಿವಕುಮಾರ್ ಕೋಲಾರ ಹಾಗೂ ನಿರ್ದೆಶಕರಾದ ಡಾ.ಕೊಳಚಪ್ಪೆ ಗೋವಿಂದ ಭಟ್ ಅನುಮೋದಿಸಿದರು. ಸರ್ವಾನುಮತಿಯೊಂದಿಗೆ ಆಯ್ಕೆಯಾದ ಬೊಳ್ಳಜಿರ ಬಿ.ಅಯ್ಯಪ್ಪ ಕಾಸರಗೋಡು ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಕನ್ನಡ ಭವನ ಪ್ರಕಾಶನ, 20000ಪುಸ್ತಕಗಳುಳ್ಳ ಸಾರ್ವಜನಿಕ ವಾಚನಾಲಯ, ಕರ್ನಾಟಕದಿಂದ ಕಾಸರಗೋಡು ಪ್ರದೇಶಕ್ಕೆ ಆಗಮಿಸುವ ಸಾಹಿತ್ಯ, ಸಾಂಸ್ಕೃತಿಕ ಯಾತ್ರಾರ್ಥಿಗಳಿಗೆ ”ಉಚಿತ ವಸತಿ ಸೌಕರ್ಯ ” ಪ್ರತಿ ಮನೆಗೊಂದು ಗ್ರಂಥಾಲಯ -ಪುಸ್ತಕವೇ ಸತ್ಯ -ಪುಸ್ತಕವೇ ನಿತ್ಯ ಎಂಬ ನೂತನ ಜನಾಂದೋಲನ ಕಾರ್ಯಕ್ರಮ ಹಾಗೂ ರಜತ ಸಂಭ್ರಮ…
ಲೇಖಕ: admin
ಮಡಿಕೇರಿ ಜ.18 NEWS DESK : ಶಿವಯೋಗಿ ಸಿದ್ದರಾಮೇಶ್ವರರು ಆಗಾಧ ಶಕ್ತಿಯಿಂದ ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನ್ ಸಾಧಕ ಎಂದು ಸಾಹಿತಿ ಹಾಗೂ ಸರಸ್ವತಿ ಡಿಎಡ್ ಕಾಲೇಜು ಪ್ರಾಂಶುಪಾಲ ಕುಮಾರ್ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಆಶ್ರಯದಲ್ಲಿ ಗಾಂಧಿ ಭವನದಲ್ಲಿ ನಡೆದ ಶಿವಯೋಗಿ ಸಿದ್ದರಾಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದ ಉದ್ದಾರಕ್ಕಾಗಿ ಶ್ರಮಿಸಿ, ಲೋಕ ಕಲ್ಯಾಣಕ್ಕಾಗಿ ತಪಸ್ಸನ್ನು ಮಾಡಿ ಶಿವಯೋಗಿ ಆದ ಸಿದ್ದರಾಮೇಶ್ವರರು ಸಮಾಜದ ಕುಲವನ್ನು ಉದ್ದಾರ ಮಾಡಿದವರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು. ಶಿವಯೋಗಿ ಸಿದ್ದರಾಮ ಸರಳ ಜೀವನ ಮಾಡುತ್ತಾ ಸಕಲ ಜೀವಿಗಳ ಲೇಸುಗಳನ್ನು ಬಯಸುತ್ತಿದ್ದರು, ಶ್ರದ್ದೆ, ನಿಷ್ಠೆಯಿಂದ ನಡೆದುಕೊಂಡು ದೇಹದಲ್ಲಿಯೆ ದೇವರನ್ನು ಕಾಣಿ ಎಂದು ಕರೆ ನೀಡಿದರು. ಅಪರ ಜಿಲ್ಲಾಧಿಕಾರಿ ಐಶ್ವರ್ಯ ಅವರು ಇದೊಂದು ವಿಶೇಷ ಜಯಂತಿಯಾಗಿದ್ದು, ಮುಗ್ದ ಬಾಲಕ ಸಿದ್ದರಾಮ ಯೋಗಿ ಆದ ಕಥೆ ತುಂಬಾ ಆಶ್ಚರ್ಯಕರವಾಗಿದೆ. ಸಮಾಜದ ದಾರಿ ದೀಪವಾಗಿ ಬೆಳೆದು ಅಂದಿನ ಕಾಲಘಟ್ಟದಲ್ಲಿ ಕೆರೆಕಟ್ಟೆಗಳನ್ನು ನಿರ್ಮಿಸಿ…
ಮಡಿಕೇರಿ ಜ.18 NEWS DESK : ದೆಹಲಿಯಲ್ಲಿ ಜ.26 ರಂದು ನಡೆಯಲಿರುವ ರಾಷ್ಟ್ರೀಯ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸರಕಾರದ ವಿಶೇಷ ಅತಿಥಿಯಾಗಿ ಆಯ್ಕೆಯಾಗಿರುವ ಮಡಿಕೇರಿ ತಾಲ್ಲೂಕಿನ ಹೊದ್ದೂರು ಗ್ರಾ.ಪಂ ಅಧ್ಯಕ್ಷರಾದ ಹೆಚ್.ಎ.ಹಂಸ ಅವರನ್ನು ಕಬಡಕೇರಿ ಅಂಗನವಾಡಿ ಕೇಂದ್ರದ ಬಾಲವಿಕಾಸ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾದ ಸನ್ಮಾನ ಕಾರ್ಯಕ್ರಮದಲ್ಲಿ ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಶ್ವೇತಕಲಾ, ಮಾಜಿ ಅಧ್ಯಕ್ಷರಾದ ಹಂಸಾವತಿಸುರೇಶ್, ಬಾಲವಿಕಾಸ ಸಮಿತಿಯ ಸದಸ್ಯರಾದ ಜಲಜಾಕ್ಷಿ, ಫಾತಿಮಾ, ಜರೀನಾ, ವಿಶ್ವನಾಥ್, ಲಕ್ಷ್ಮಣ, ಪಚ್ಚುಪ್ರಸಾದ್, ಮಹಮ್ಮದ್, ರುಕ್ಮಿಣಿ, ಪಾರ್ವತಿ, ಅಂಗನವಾಡಿ ಕಾರ್ಯಕರ್ತೆ ತಂಜಿನಾಭಾನು, ಸಹಾಯಕಿ ಪ್ರೇಮ ಹಾಗೂ ಅಂಗನವಾಡಿಯ ಪುಟಾಣಿ ಮಕ್ಕಳು ಮತ್ತು ಗ್ರಾಮಸ್ಥರು ಇದ್ದರು.
ಸೋಮವಾರಪೇಟೆ ಜ.18 NEWS DESK : ಶ್ರೀ ಬಸವೇಶ್ವರ ದೇವಾಲಯದ ವಿಮಾನಗೋಪುರ ಕಳಸ ಪ್ರತಿಷ್ಠಾಪನಾ ಪಂಚ ದಶಮಾನೋತ್ಸವ ಪೂಜಾ ಕಾರ್ಯಕ್ರಮ ಜ.23 ಮತ್ತು 24ರಂದು ನಡೆಯಲಿದೆ ಎಂದು ದೇವಾಲಯದ ಯಜಮಾನರಾದ ಬಿ.ಪಿ.ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸ್ಥಳೀಯ ವಿರಕ್ತ ಮಠದ ನಿಶ್ಚಲ ನಿರಂಜನ ದೇಶಿಕೇಂದ್ರ ಮಹಾಸ್ವಾಮಿಗಳು, ಬಸವಪಟ್ಟಣದ ತೊಂಟದಾರ್ಯ ಸಂಸ್ಥಾನ ಮಠದ ಬಸವಲಿಂಗ ಶಿವಯೋಗಿಗಳು, ಶನಿವಾರಸಂತೆ ಸಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಮಹಾಸ್ವಾಮಿ ಹಾಗೂ ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಜ.23 ರಂದು ಬೆಳಿಗ್ಗೆ 7.30 ಗಂಟೆಗೆ ಗಂಗಾ ಪೂಜೆ, ಮಹಾಗಣಪತಿ ಪೂಜೆ, ವಾಸ್ತು ಪೂಜೆ ನಡೆಯಲಿದೆ. ಸಂಜೆ 4 ಗಂಟೆಗೆ ಶ್ರೀ ಮಹಾಗಣಪತಿ ಹೋಮ, ವಾಸ್ತು ಹೋಮ, ಅಘೋರ ಹೋಮ, ಆದಿತ್ಯಾದಿ ನವಗ್ರಹ ಮಹಾ ಮೃತ್ಯುಂಜಯ ಹೋಮ, ಕಾಳ ಹೋಮ, ಅವಾಹಿತ ಕಲಶಾಧಿ ದೇವತೆಗಳ ಹೋಮ ಪೂಜೆ ನಂತರ ಪೂರ್ಣ ಫಲ ಸಮರ್ಪಣೆ ಜರುಗಲಿದೆ. ಜ.24 ರಂದು ಬೆಳಿಗ್ಗೆ 5 ಗಂಟೆಗೆ ಶುಭ ಬ್ರಾಹ್ಮಿ…
ಸಂಪಾಜೆ NEWS DESK ಜ.18 : ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಸಂಪಾಜೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಸ್ಥಳೀಯ ನಿವಾಸಿ ಜಮೀರ್ (44) ಎಂಬುವವರೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ಸ್ಥಳಕ್ಕೆ ಸಂಪಾಜೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಬ್ಬಿಣದ ಕೆಲಸ ನಿರ್ವಹಿಸುತ್ತಿದ್ದ ಜಮೀರ್ ಅವಿವಾಹಿತರಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಸೋಮವಾರಪೇಟೆ ಜ.18 : ಇತಿಹಾಸ ಪ್ರಸಿದ್ಧ ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ದೇವಾಲಯದ 66ನೇ ವರ್ಷದ ಮಹಾರಥೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಕೆ.ಎಂ.ಲೋಕೇಶ್, ಶಾಂತಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎಂ.ಧರ್ಮಪ್ಪ ಶಾಸಕ ಡಾ.ಮಂತರ್‍ಗೌಡ, ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್, ಮಾಜಿ ಎಂಎಲ್ಸಿ ಎಸ್.ಜಿ.ಮೇದಪ್ಪ, ಸೋಮವಾರಪೇಟೆ ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅರುಣ್ ಕೊತ್ನಳ್ಳಿ, ರೈತ ಹೋರಾಟ ಸಮಿತಿ ಅಧ್ಯಕ್ಷ ಕೆ.ಬಿ.ಸುರೇಶ್, ಪ್ರಮುಖರಾದ ಬಿ.ಬಿ.ಸತೀಶ್, ಬಿ.ಇ.ಜಯೇಂದ್ರ, ಸಜನ್ ಮಂದಣ್ಣ, ಕೆ.ಪಿ. ಚಂಗಪ್ಪ, ಪ್ರಧಾನ ಅರ್ಚಕ ಕೃಷ್ಣಮೂರ್ತಿ ಭಟ್ ಸೇರಿದಂತೆ ಗ್ರಾಮದ ಪ್ರಮುಖರು ರಥವನ್ನು ಎಳೆಯುವ ಮೂಲಕ ಚಾಲನೆ ನೀಡಿದರು. ಶಾಂತಳ್ಳಿಯ ರಾಜಬೀದಿ ಮಾರ್ಗದಲ್ಲಿ ಅದ್ಧೂರಿಯ ರಥ ಸಾಗಿತು. ಭಕ್ತಾಧಿಗಳು ರಥಕ್ಕೆ ಈಡುಗಾಯಿ ಒಡೆದು ಪೂಜೆ ಸಲ್ಲಿಸಿದರು. ಕರುವಿನ ಹಬ್ಬದ ಅಂಗವಾಗಿ ದೇಗುಲದ ಗರುಡ ಕಂಬದ ಅಗ್ರಪೀಠದಲ್ಲಿ ತುಪ್ಪದ ನಂದಾದೀಪವನ್ನು ಹಚ್ಚಲಾಯಿತು. ಕಳೆದ ಒಂದು ವಾರದ ತನಕ ಧಾರ್ಮಿಕ ವಿಧಿ ವಿಧಾನದಂತೆ ದೇವರ ಪೂಜೆ ಉತ್ಸವಗಳು ನಡೆಯುತ್ತಿದ್ದು, ಹೊರ ಜಿಲ್ಲೆ,…
ಮಡಿಕೇರಿ ಜ.18 NEWS DESK : ಸ್ವಾಭಾವಿಕ ಪ್ರಕೃತಿ ವಿಕೋಪ ಅನಿರೀಕ್ಷಿತ ಅಕಸ್ಮಿಕ ಬೆಂಕಿ ಅವಘಡ ಹಾಗೂ ಅಪಘಾತಗಳು ಸಂಭವಿಸಿದಾಗ ಅದನ್ನು ನಿಭಾಯಿಸಲು ನಾವು ಸದಾ ಸನ್ನದ್ದರಾಗಬೇಕು. ಇದರ ಭಾಗವಾಗಿ ಹೆಚ್.ಆರ್.ಎಸ್ ರಕ್ಷಣಾ ತಂಡದಿಂದ ಇಂತಹ ಕಾರ್ಯಕ್ರಮಗಳು ಎಲ್ಲಡೆ ನಡೆಯಬೇಕು ಎಂದು ಸಾಮಾಜಿಕ ಕಾರ್ಯಕರ್ತರು ಹಾಗೂ ವಕೀಲರಾದ ಸಮೀರ್ ಹೇಳಿದರು. ಹೆಚ್.ಆರ್.ಎಸ್ ಗೋಣಿಕೊಪ್ಪ ಹಾಗೂ ಸಾಲಿಡಾರಿಟಿ ಯೂತ್ ವಿಂಗ್ ಸಹಯೋಗದಲ್ಲಿ ನಡೆದ ಹೆಚ್.ಆರ್.ಎಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಹ್ಯೂಮಾನಿಟಿ ರಿಲೀಪ್ ಸೊಸೈಟಿಯ ಗೋಣಿಕೊಪ್ಪಲು ಇದರ ಲೋಗೋ ಅನಾವರಣ ಗೊಳಿಸಿ ಮಾತನಾಡಿದರು. ಜ.ಇಬ್ರಾಹಿಂ ಮೌಲವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಮೈಸೂರು ವಲಯ ಕಾರ್ಯದರ್ಶಿ ಪಿ.ಕೆ.ಅಬ್ದುಲ್ ರೆಹಮಾನ್, ಸಗೀರ್ ಮೌಲವಿ, ಸಾಮಾಜಿಕ ಕಾರ್ಯಕರ್ತ ಸಲಿಮ್ ಪಾಲ್ಗೊಂಡು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಪ್ರಥಮ ಚಿಕಿತ್ಸಾ ವಿಧಾನದ ಬಗ್ಗೆ ಲಘು ತರಬೇತಿಯನ್ನು ಹೆಚ್.ಆರ್.ಎಸ್ ನ ತರಬೇತುದಾರ ಉಡುಪಿಯ ಸಲೀಮ್ ಹಾಗೂ ಮಲ್ಪೆಯ ಝುಬೇರ್ ಪ್ರಾತ್ಯಕ್ಷಿಕೆ ನೀಡಿದರು. ತಂಝೀಲ್ ಸ್ವಾಗತಿಸಿದರು, ತನ್ವೀರ್ ಅಹಮದ್ ನಿರೂಪಿಸಿದರು.
ಮಡಿಕೇರಿ ಜ.18 NEWS DESK : ಚೆಯ್ಯಂಡಾಣೆ-ಕರಡ-ಕಕ್ಕಬೆ ರಸ್ತೆ ದುರಸ್ತಿ ಕಾರ್ಯವು ಪ್ರಗತಿಯಲ್ಲಿದೆ. ದಿನಕ್ಕೆ ನೂರಾರು ವಾಹನಗಳು ಓಡಾಡುವ ಈ ರಸ್ತೆಯ ದುರಸ್ತಿ ಕಾಮಗಾರಿಯು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರ ಸೂಚನೆ ಮೇರೆಗೆ ನಡೆಯುತ್ತಿದೆ. ಕಾಮಗಾರಿಯ ಗುಣಮಟ್ಟವನ್ನು ಕಾಯ್ದುಕೊಳ್ಳುವ ಮೂಲಕ ಶೀಘ್ರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಕುಶಾಲನಗರ ಜ.18 NEWS DESK : ಕುಶಾಲನಗರದ 122ನೇ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ನಾಲ್ಕನೇ ಬಾರಿಗೆ ಟಿ.ಆರ್.ಶರವಣ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಕೆ.ವಿ.ನೇತ್ರಾವತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಯಾರೂ ಕೂಡಾ ನಾಮಪತ್ರ ಸಲ್ಲಿಸದ ಕಾರಣ, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾದವರು. ಅಧ್ಯಕ್ಷರಾಗಿ ಆಯ್ಕೆಯಾದ ನಂತರಮಾತನಾಡಿದ ಟಿ.ಆರ್.ಶರವಣ ಕುಮಾರ್, ಈ ಬಾರಿಯ ಚುನಾವಣೆಯಲ್ಲಿ ಬ್ಯಾಂಕಿನ ಬಗ್ಗೆ ಆರೋಪಗಳು, ಅಪಪ್ರಚಾರಗಳು ನಡೆದಿದ್ದವು. ಆದರೆ ಮತದಾರರು ಅವುಗಳಿಗೆ ಕಿವಿಕೊಡದೇ ನಮ್ಮ ತಂಡವನ್ನು ಆಯ್ಕೆಮಾಡಿದ್ದಾರೆ. ಇದೀಗ ಅಧ್ಯಕ್ಷರಾಗಿ ನಾಲ್ಕನೇ ಬಾರಿ ಆಯ್ಕೆಯಾಗಿದ್ದು, ಬ್ಯಾಂಕಿನ ಅಭಿವೃದ್ಧಿಗಾಗಿ ಶ್ರಮವಹಿಸಲಾಗುವುದು. ನನ್ನನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ ನಿರ್ದೇಶಕರಿಗೆ ಹಾಗೂ ಬ್ಯಾಂಕಿನ ಮತದಾರರಿಗೆ ಧನ್ಯವಾದಗಳು ಎಂದರು. ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಸಂದೀಪ್ ಅವರು ನಡೆಸಿಕೊಟ್ಟರು. ಈ ಸಂದರ್ಭ ನೂತನವಾಗಿ ಆಯ್ಕೆಯಾದ ನಿರ್ದೇಶಕರು, ಊರಿನ ಪ್ರಮುಖರು ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಇದ್ದರು.
ಸೋಮವಾರಪೇಟೆ NEWS DESK ಜ.17 : ಸೋಮವಾರಪೇಟೆ ತಾಲ್ಲೂಕಿನ ವಿವಿಧೆಡೆಗಳಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಕಳ್ಳಭಟ್ಟಿ ಸಾರಾಯಿ ಮತ್ತು ಪುಳಿಗಂಜಿ ವಶಪಡಿಸಿಕೊಂಡು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ದೊಡ್ಡತೋಳೂರು ಗ್ರಾಮದ ಮನೆಯಲ್ಲಿ 9 ಲೀಟರ್ ಪುಳಗಂಜಿ, 200 ಮಿ.ಲೀ ಕಳ್ಳಭಟ್ಟಿ ಸಾರಾಯಿ, ಮತ್ತೊಂದು ಮನೆಯಲ್ಲಿ 3.5 ಲೀ ಕಳ್ಳಭಟ್ಟಿ ಸಾರಾಯಿ, 20 ಲೀ ಬೆಲ್ಲದ ಪುಳಗಂಜಿ ಮತ್ತು ಡಿಸ್ಟಿಲರಿ ಪರಿಕರಗಳನ್ನು ಪತ್ತೆ ಮಾಡಿ ವಶಕ್ಕೆ ತೆಗೆದುಕೊಳ್ಳಲಾಯಿತು. ಮತ್ತೊಬ್ಬರ ಮನೆಯಿಂದ 30 ಲೀ ಪುಳಗಂಜಿ ಮತ್ತು ಕಳ್ಳಬಟ್ಟಿ ತಯಾರಿಸಲು ಬಳಸುತ್ತಿದ್ದ ಇತರೆ ಪರಿಕರಗಳನ್ನು ವಶಕ್ಕೆ ಪಡೆದು 3 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅಬಕಾರಿ ನಿರೀಕ್ಷಕ ಬಿ.ಎಸ್.ಲೋಕೇಶ್ ತಿಳಿಸಿದ್ದಾರೆ. ಕಾರ್ಯಚರಣೆಯಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಉಪನಿರೀಕ್ಷಕರಾದ ಬಿ.ಎಸ್.ಬಾಲಕೃಷ್ಣ, ಕೆ.ವಿ.ಸುಮತಿ, ಮುಖ್ಯಪೇದೆ ವಿರೇಶ್, ಸುರೇಶ್, ಸಿಬ್ಬಂದಿಗಳಾದ ಈರಣ್ಣ, ಕರಿಯಪ್ಪ, ಮಹಾಂತೇಶ್, ವಾಹನ ಚಾಲಕಿ ದಿವ್ಯ ಭಾಗವಹಿಸಿದ್ದರು.






