ಮಡಿಕೇರಿ ಜ.16 NEWS DESK : ಅರೆಭಾಷಿಕ ಗೌಡ ಜನಾಂಗವನ್ನು ತೇಜೋವಧೆ ಮಾಡಿದವರ ವಿರುದ್ಧ ದೂರು ನೀಡಿದ್ದರೂ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದನ್ನು ಖಂಡಿಸಿ ವಿವಿಧ ಗೌಡ ಸಂಘಟನೆಗಳಿಂದ ಜ.20 ರಂದು ಮಡಿಕೇರಿಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆಗಳ ಪ್ರಮುಖರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಡಗು ಗೌಡ ಯುವ ವೇದಿಕೆಯ ಕಾರ್ಯದರ್ಶಿ ಪುದಿಯನೆರವನ ರಿಶಿತ್ ಮಾದಯ್ಯ ಮಾತನಾಡಿ ನಗರದ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಯಾವುದೇ ಘೋಷಣೆಗಳನ್ನು ಕೂಗದೆ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಪ್ರಚೋದನೆಯ ಹೇಳಿಕೆಗಳನ್ನು ನೀಡಿ ಶಾಂತಿ ಕದಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದರು. ಕೊಡಗು ಜಿಲ್ಲೆಯಲ್ಲಿರುವ ಎಲ್ಲಾ ಜನಾಂಗದವರು ಕಳೆದ ಅನೇಕ ವರ್ಷಗಳಿಂದ ಒಗ್ಗಟ್ಟಿನಿಂದ ಜೀವನ ಸಾಗಿಸುತ್ತಾ ಬಂದಿದ್ದಾರೆ. ಪ್ರಮುಖ ಜನಾಂಗಗಳಾದ ಅರೆಭಾಷಿಕ ಗೌಡ ಹಾಗೂ ಕೊಡವ ಜನಾಂಗದ ಮಂದಿ ಅತ್ಯಂತ…
ಲೇಖಕ: admin
ಮಡಿಕೇರಿ ಜ.16 NEWS DESK : ಬೆಳಗಾವಿ ಜಿಲ್ಲೆಯ ಅಜೂರ ಪ್ರತಿಷ್ಠಾನದ ವತಿಯಿಂದ ಕೊಡಮಾಡುವ ರಾಜ್ಯ ಪ್ರಶಸ್ತಿಗೆ ಕೃಪಾ ದೇವರಾಜ್ ಅವರ ಮರ್ಮರ ಕಥಾ ಸಂಕಲನ ಆಯ್ಕೆಯಾಗಿದೆ. ರಾಜ್ಯದ 8 ಮಂದಿ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಕೃಪಾ ದೇವರಾಜ್ ಕೂಡಾ ಒಬ್ಬರಾಗಿದ್ದು, ಜ.26 ರಂದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಹಾರೂಗೇರಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಎಂ.ಕಾಂ ಪದವಿಯ ನಂತರ ಮಡಿಕೇರಿಯ ಖಾಸಗಿ ಕಂಪನಿಯ ಉದ್ಯೋಗಿ ಆಗಿರುವ ಕೃಪ ದೇವರಾಜ್ ಕಥಾಸಂಕಲನ, ಕವನ ಸಂಕಲನ, ಲೇಖನಗಳು ಇತ್ಯಾದಿ ಕನ್ನಡ ಸಾಹಿತ್ಯದಲ್ಲಿ ಈಗಾಗಲೇ ಗುರುತಿಸಿಕೊಂಡಿದ್ದಾರೆ. ಪತ್ರಿಕೆಗಳಲ್ಲಿ ಕಥೆ, ಕವನ, ಲೇಖನ, ಲಲಿತ ಪ್ರಬಂಧ ಚುಟುಕುಗಳು ಪ್ರಕಟವಾಗಿರುವುದರ ಜೊತೆಗೆ ಭಾವದ ಕದ ತಟ್ಟಿ(ಕವನ ಸಂಕಲನ), ಮರ್ಮರ(ಕಥಾ ಸಂಕಲನ), ಚೌಚೌ ಬಾತ್(ಲಲಿತ ಪ್ರಬಂಧಗಳು), ಕಾರ್ಪಣ್ಯದ ಹೂವು (ಕವನ ಸಂಕಲನ) ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಕೃಪಾ ದೇವರಾಜ್ ಮಡಿಕೇರಿ ತಾಲ್ಲೂಕು ಕಚೇರಿಯ ಶಿರಸ್ತೆದಾರ ಪಿ.ಎಲ್.ದೇವರಾಜ್ ಅವರ ಪತ್ನಿ.
ಸೋಮವಾರಪೇಟೆ ಜ.16 NEWS DESK : ಆದಿಚುಂಚನಗಿರಿ ಬೃಹನ್ ಮಠ ಕೊಡಮಾಡುವ ಚುಂಚಾದ್ರಿ ಭೈರವಿ ಪ್ರಶಸ್ತಿಗೆ ಹಾನಗಲ್ಲು ನಿವಾಸಿ ಸಾಹಿತಿ ಜಲಕಾಲಪ್ಪ ಭಾಜನರಾಗಿದ್ದಾರೆ. ಜ.17 ರಂದು ನಡೆಯುವ ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಮಡಿಕೇರಿ ಜ.16 NEWS DESK : ವಿರಾಜಪೇಟೆಯ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಸಂಸ್ಥೆಯು ಈ ಭಾಗಕ್ಕೆ ಹೆಮ್ಮೆ ನೀಡಿರುವುದು ಮಾತ್ರವಲ್ಲದೆ ಅಸಂಖ್ಯಾತ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯವನ್ನು ರೂಪಿಸುವುದರಲ್ಲಿ ಉತ್ತಮ ಕೊಡುಗೆ ನೀಡಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಸ್ಮರಿಸಿದರು. ವಿರಾಜಪೇಟೆಯ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಸಂಸ್ಥೆಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಸಂಸ್ಥೆಯು ಇದೇ ರೀತಿ ಮುಂದುವರೆದು ಸಮಾಜಕ್ಕೆ ಉತ್ತಮ ವೈದ್ಯರನ್ನು ನೀಡುವುದೊಂದಿಗೆ ತಮ್ಮ ಸಂಸ್ಥೆಯ ಕೀರ್ತಿಯನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸುವಂತಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭ ಕಾರ್ಯಕ್ರಮ ಆಯೋಜಕರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಮಡಿಕೇರಿ ಜ.16 NEWS DESK : ಸೌತ್ ಇಂಡಿಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ಸೌತ್ ಏಷಿಯಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಓಪನ್ ಚಾಂಪಿಯನ್ ಶಿಪ್ ನಲ್ಲಿ 5 ಕಿ.ಮೀ ದೂರದ ವಾಕ್ ರೇಸ್ ನಲ್ಲಿ 60 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಮಡಿಕೇರಿಯ ಎಡಿಕೇರಿ ಎನ್.ವಿಶಾಲಾಕ್ಷಿ ಅವರು ಪ್ರಥಮ ಬಹುಮಾನ ಗೆದ್ದಿದ್ದಾರೆ. ಇವರು ದಿ.ಎಡಿಕೇರಿ ನರೇಶ್ ಅವರ ಪತ್ನಿಯಾಗಿದ್ದು, ಬಾಲ್ಯದಿಂದಲೇ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ವಿವಿಧ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಿ ಹಲವು ಪದಕಗಳನ್ನು ಗೆದ್ದು ಕೊಡಗು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈ ಹಿಂದೆ ಎಡಿಕೇರಿ ವಿಶಾಲಾಕ್ಷಿ ಅವರು ಗೃಹ ರಕ್ಷಕ ದಳದಲ್ಲಿ ಕೂಡ ಕರ್ತವ್ಯ ನಿರ್ವಹಿಸಿದ್ದಾರೆ.
ಮಡಿಕೇರಿ ಜ.20 NEWS DESK : ಕೊಡಗು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇಯಿ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗಳಲ್ಲಿ 2025-26ನೇ ಸಾಲಿಗೆ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯ ಸರ್ಕಾರವು ಸ್ಥಾಪಿಸಿರುವ ಮೊರಾರ್ಜಿ ದೇಸಾಯಿ, ಏಕಲವ್ಯ ಮಾದರಿ, ಅಟಲ್ ಬಿಹಾರಿ ವಾಜಪೇಯಿ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಗಳಲ್ಲಿ 6 ರಿಂದ 10ನೇ ತರಗತಿಯವರೆಗೆ ಆಂಗ್ಲ ಮಾಧ್ಯಮದಲ್ಲಿ ವ್ಯಾಸಂಗ ಮಾಡಲು ಪ್ರತಿಭಾನ್ವಿತ ಗ್ರಾಮೀಣ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ವಸತಿ, ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಇನ್ನಿತರೆ ಸಾಮಗ್ರಿಗಳನ್ನು ನೀಡುವುದರ ಜೊತೆಗೆ ಉತ್ತಮವಾದ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಈ ಶಾಲೆಗಳಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಅಂದರೆ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಪ್ರವೇಶ ಲಭ್ಯವಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1ರ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ ಮಿತಿ ರೂ.2.50 ಲಕ್ಷಗಳು ಮತ್ತು…
ನಾಪೋಕ್ಲು ಜ.16 NEWS DESK : ಪ್ರತಿಯೊಬ್ಬ ವ್ಯಕ್ತಿಯೂ ಭಾರತೀಯ ಸೇನೆಯ ಬಗ್ಗೆ ಅಭಿಮಾನ ಹೊಂದಿರಬೇಕು ಎಂದು ಮೈಸೂರಿನ ಕೊಡಗು ಗೌಡ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚಂಡಿರ ಬಸಪ್ಪ ಹೇಳಿದರು. ಮೈಸೂರಿನ ಕೊಡಗು ಗೌಡ ಮಾಜಿ ಸೈನಿಕರ ಸಂಘದ ವತಿಯಿಂದ ಸಂಘದ ಸಭಾಂಗಣದಲ್ಲಿ ನಡೆದ ಹೊಸ ವರ್ಷಾಚರಣೆ ಹಾಗೂ ಸಂತೋಷ ಕೂಟ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರದ ಅಗ್ನಿವೀರ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ಪ್ರತಿಯೊಬ್ಬರೂ ಸೈನಿಕರಾಗಿ ದೇಶ ಸೇವೆಯಲ್ಲಿ ತೊಡಗುವ ಪ್ರಯತ್ನ ಮಾಡಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ದೇಶಭಕ್ತಿ ಮೂಡಿಸುವ, ಹಾಗೂ ಸೈನಿಕರ ತ್ಯಾಗ ಬಲಿದಾನಗಳಿಗೆ ಸಂಬಂಧಿಸಿದ ಹಾಡು ಮತ್ತು ನೃತ್ಯಗಳನ್ನು ಪ್ರಸ್ತುತ ಪಡಿಸುವ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅತಿ ಹಿರಿಯರನ್ನು ಹಾಗೂ ನಿವೃತ್ತಿ ಹೊಂದಿದ ಯೋಧರನ್ನು ಸನ್ಮಾನಿಸಲಾಯಿತು. ಅಲ್ಲದೇ ಹತ್ತನೇ ತರಗತಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಯೋಧರ ಮಕ್ಕಳಿಗೆ ಪುರಸ್ಕಾರ ನೀಡಲಾಯಿತು. ಸಂಘದ ಸ್ಥಾಪಕ…
ನಾಪೋಕ್ಲು ಜ.16 NEWS DESK : ಚಂಡೀರ ದೀಪ್ತಿ ಜನಾರ್ದನ ಪಿ.ಹೆಚ್.ಡಿ ಪದವಿಗೆ ಭಾಜನರಾಗಿದ್ದಾರೆ. ರಶ್ಮಿ ಅವರ ಸಂಶೋಧನಾ ಪ್ರಬಂಧ “ಅನುವಾದ ಸಂಸ್ಕೃತಿಯಲ್ಲಿನ ಸವಾಲುಗಳು” (ಚಾಲೆಂಜರ್ಸ್ ಇನ್ ಟ್ರಾನ್ಸ್ಲೇಟಿಂಗ್ ಕಲ್ಚರ್) ಗೆ ಮೈಸೂರಿನ ಅಮೃತ ವಿಶ್ವವಿದ್ಯಾಪೀಠವೂ ಪಿ.ಹೆಚ್‍ಡಿ ಪ್ರದಾನ ಮಾಡಿದೆ. ದೀಪ್ತಿ ಪ್ರಸ್ತುತ ಬೆಂಗಳೂರಿನ ಅಮೃತ ಸ್ಕೂಲ್ ಆಫ್ ಇಂಜಿನಿಯರಿಂಗ್ ಕಾಲೇಜಿನ ಇಂಗ್ಲಿಷ್ ವಿಭಾಗದಲ್ಲಿ ಸಹಾಯಕ ಪೆÇ್ರಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಪರ್ಲಕೋಟಿ ಹರಿಣಿ ಮತ್ತು ಜನಾರ್ದನ ದಂಪತಿಗಳ ಪುತ್ರಿ. ಕಕ್ಕಬೆ ಗ್ರಾಮ ಪಂಚಾಯಿತಿಯ ಮರಂದೋಡ ಗ್ರಾಮದ ಚಂಡೀರ ರವಿ (ಇಂಜಿನಿಯರ್) ಅವರ ಪತ್ನಿ. ವರದಿ : ದುಗ್ಗಳ ಸದಾನಂದ
ಮಡಿಕೇರಿ ಜ.16 NEWS DESK : ಮಡಿಕೇರಿ-ಭಾಗಮಂಡಲ ಮುಖ್ಯ ರಸ್ತೆಯ ದುರಸ್ತಿ ಕಾಮಗಾರಿಯು ಆರಂಭಗೊಂಡಿದೆ. ಸ್ಥಳೀಯ ನಿವಾಸಿಗಳಲ್ಲದೆ ದಿನಕ್ಕೆ ಸಾವಿರಾರು ಪ್ರವಾಸಿಗರು ಓಡಾಡುವ ಈ ರಸ್ತೆಯು ತೀವ್ರ ಮಳೆಯಿಂದ ಹಾನಿಗೀಡಾಗಿದ್ದು, ಶ್ರೀ ಕಾವೇರಿ ಜಾತ್ರೆ ಸಂದರ್ಭ ಇದರ ದುರಸ್ತಿ ಕಾರ್ಯ ಕೈಗೊಂಡಿದ್ದರೂ, ಆ ಸಂದರ್ಭದಲ್ಲಿ ಸುರಿದ ಮಳೆಯ ಕಾರಣ ಅದು ಪರಿಪೂರ್ಣವಾಗಿರಲಿಲ್ಲ. ಇದನ್ನು ಮನಗಂಡ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಮಳೆ ಕಡಿಮೆ ಆಗಿರುವುದರಿಂದ ದುರಸ್ತಿ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಬೇಕೆಂದು ಅಧಿಕಾರಿಗಳಿಗೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿಯ ಗುಣಮಟ್ಟ ಕಾಯ್ದುಕೊಂಡು ಶೀಘ್ರದಲ್ಲಿ ಮುಗಿಸಿ ಕೊಡುವುದಾಗಿ ಅಧಿಕಾರಿಗಳು ಸ್ಥಳೀಯರಿಗೆ ತಿಳಿಸಿದ್ದಾರೆ.
ಮಡಿಕೇರಿ ಜ.16 NEWS DESK : ಭಾಗಮಂಡಲ ನಾಡು ಐಯಂಗೇರಿ ಗ್ರಾಮದ ಶ್ರೀ ಚಿನ್ನತಪ್ಪ ದೇವಾಲಯದ ವಾರ್ಷಿಕ ಉತ್ಸವವು ಫೆ.21 ರಿಂದ 23ರ ವರೆಗೆ ನಡೆಯಲಿದೆ. ದೇವಾಲಯದ ತಕ್ಕಮುಖ್ಯಸ್ಥ ಮತ್ತು ಆಡಳಿತಮಂಡಳಿಯ ಜಂಟಿ ಸಭೆಯಲ್ಲಿ ಉತ್ಸವದ ಕುರಿತು ಚರ್ಚಿಸಿ ತೀರ್ಮಾನಿಸಲಾಯಿತು ಎಂದು ಅಧ್ಯಕ್ಷರು ಮತ್ತು ಕಾರ್ಯದರ್ಶಿ ತಿಳಿಸಿದ್ದಾರೆ.






