ಮಡಿಕೇರಿ ಜ.29 NEWS DESK : ತಾರಾಮಂಡಲ ಸಂಸ್ಥೆಯವರು ಆಯೋಜಿಸಿದ ಅಂತರರಾಷ್ಟ್ರೀಯ ಮಟ್ಟದ ಪರಿಸರ ಜ್ಞಾನ ಸ್ಪರ್ಧೆಯಲ್ಲಿ ಚೇರಂಬಾಣೆ ಶ್ರೀ ರಾಜರಾಜೇಶ್ವರಿ ಶಾಲೆಯ 41 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ರಾಷ್ಟ್ರ ಮಟ್ಟದಲ್ಲಿ 7ನೇ ತರಗತಿಯ ಕೆ.ಟಿ.ತಾನ್ಯ ದ್ವಿತೀಯ ಸ್ಥಾನ, ರಾಜ್ಯಮಟ್ಟದಲ್ಲಿ 10ನೇ ತರಗತಿ ಬಿ.ಎಸ್.ಬಿಂದ್ಯಾ ತೃತೀಯ ಸ್ಥಾನ, ಜಿಲ್ಲಾ ಮಟ್ಟದಲ್ಲಿ 10ನೇ ತರಗತಿಯ ಕೆ.ಬಿ.ವರ್ಷ ತೃತೀಯ ಸ್ಥಾನ, 8ನೇ ತರಗತಿಯ ಕೆ..ಬಿಮಿಲನ ತೃತೀಯ ಸ್ಥಾನ, ತಾಲ್ಲೂಕು ಮಟ್ಟದಲ್ಲಿ 8ನೇ ತರಗತಿಯ ಕೆ.ಸಿ.ಶಿವಾನಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸಾಧನೆ ಮಾಡಿದ ವಿದ್ಯಾರ್ಥಿಗಳೊಂದಿಗೆ ಶಾಲೆಯ ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಕೆ.ಬಿ.ಸ್ವರೂಪ್, ವಿಜ್ಞಾನ ಶಿಕ್ಷಕಿ ಕೆ.ಜೆ.ಪ್ರಿಯಾಂಕ ಹಾಜರಿದ್ದರು.
ಲೇಖಕ: admin
ಮಡಿಕೇರಿ ಜ.29 NEWS DESK : ಕೊಯನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವವು ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮವನ್ನು ಸಂಪಾಜೆ ಗ್ರಾ.ಪಂ ಅಧ್ಯಕ್ಷರಾದ ರಮಾದೇವಿ ಕಳಗಿ ಉದ್ಘಾಟಿಸಿದರು. ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷ ಪುರುಷೋತ್ತಮ ಬಿಸಿಲುಮನೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಸ್.ಪಿ.ಹನೀಫ್, ಗ್ರಾ.ಪಂ ಸದಸ್ಯರುಗಳಾದ ನವೀನ್ ಕುಮಾರ್, ಜಗದೀಶ್ ಪರಮಲೆ, ಶಾಲಾ ಮುಂಚೂಣಿ ಹೋರಾಟಗಾರ ಟಿ.ಸಿ.ಅಪ್ಪಣ್ಣ, ವಿಶ್ವನಾಥ್ ಹೋಬಲಿದಾರ್, ಶ್ರೀನಿವಾಸ್, ಶಾಲಾ ಮುಖ್ಯೋಪಾಧ್ಯಾಯರಾದ ವನಿತಾಮಣಿ, ಶಾಲಾ ನಾಯಕಿಯಾದ ಕಾವ್ಯ ಹಾಜರಿದ್ದರು.ಶಿಕ್ಷಕಿ ನವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ನಂತರ ವಿದ್ಯಾರ್ಥಿಗಳಿಗೆ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ವಾರ್ಷಿಕೋತ್ಸವದ ಅಂಗವಾಗಿ ಹಿರಿಯ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಕ್ರೀಡಾಕೂಟ ನಡೆಯಿತು.
ಕುಶಾಲನಗರ ಜ.29 NEWS DESK : ಮೈಸೂರು ಮಲ್ಲಿಗೆ ಹೂವಿನ ಪರಿಮಳ ದಷ್ಟೇ ಸೊಗಸಾಗಿದ್ದವು ಕೆ.ಎಸ್.ನರಸಿಂಹಸ್ವಾಮಿ ಬರೆದ ದಾಂಪತ್ಯ ಗೀತೆಗಳು ಎಂದು ಸಾಹಿತಿ ಕಣಿವೆ ಭಾರಧ್ವಜ್ ಹೇಳಿದರು. ಕುಶಾಲನಗರದ ಸಾಹಿತ್ಯಾಸಕ್ತರ ವೇದಿಕೆ ವತಿಯಿಂದ ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ” ಪ್ರೇಮ ಕವಿ ಕೆ.ಎಸ್.ನರಸಿಂಹಸ್ವಾಮಿ ಸ್ಮರಣೆ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆ.ಎಸ್.ನರಸಿಂಹಸ್ವಾಮಿ ಬರೆದಂತಹ ಗೀತೆಗಳು ಇಂದಿಗೂ ಹಾಗೂ ಎಂದೆಂದಿಗೂ ಕೇಳುಗರ ಮನವನ್ನು ತಣಿಸುತ್ತವೆ. ತಮ್ಮ ಪತ್ನಿಯ ಕುರಿತ ಬರೆದಂತಹ ಕೆ.ಎಸ್.ನ ಕವನಗಳಲ್ಲಿ ಸಾರ್ಥಕ ದಾಂಪತ್ಯ ಜೀವನದ ಸೊಗಸು ಅಡಗಿದೆ. ಬದುಕಿನಲ್ಲಿ ಬಡತನವಿದ್ದರೂ ಕೂಡ ಯಾವುದನ್ನೂ ಲೆಕ್ಕಿಸದೇ ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ ಮೇರುಕವಿಯಾಗಿ ನಮ್ಮೊಡನೆ ಇದ್ದಾರೆ ಎಂದು ಭಾರಧ್ವಜ್ ಹೇಳಿದರು. ಕಾರ್ಯಕ್ರಮದಲ್ಲಿ ಪ್ರಧಾನ ನುಡಿಗಳಾಡಿದ ಕುಶಾಲನಗರದ ನಿವೃತ್ತ ಶಿಕ್ಷಕ ಉ.ರಾ.ನಾಗೇಶ್, ಕೆ.ಎಸ್.ನರಸಿಂಹಸ್ಚಾಮಿ ಕನ್ನಡ ಸಾಹಿತ್ಯದ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿದ ಕವಿ. ಬದುಕಿನಲ್ಲಿ ಬಡತನವಿದ್ದರೂ ಕೂಡ ತಮ್ಮತನ ಬಿಡಲಾಗದ ಕೆ.ಎಸ್.ನ ತಮ್ಮ ಕಲ್ಪನಾ ಲೋಕದಲ್ಲಿ ತಲ್ಲೀನರಾಗಿ…
ನಾಪೋಕ್ಲು ಜ.29 NEWS DESK : ಯವಕಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಹಾಗೂ 76ನೇ ಗಣರಾಜ್ಯೋತ್ಸವ ಸಮಾರಂಭವು ಸಂಭ್ರಮದಿಂದ ನಡೆಯಿತು. ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ತಮ್ಮಯ್ಯ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು. ಶಾಲಾ ನಾಯಕ ಚೇತನ್ ಕ್ರೀಡಾಜ್ಯೋತಿ ಬೆಳಗಿಸುವುದರ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಹಾಗೂ ಪೋಷಕರಿಗೆ, ಗ್ರಾಮಸ್ಥರಿಗೆ ವಿವಿಧ ರೀತಿಯ ಆಟೋಟ ಕಾರ್ಯಕ್ರಮಗಳು ನಡೆಯಿತು. ಮಕ್ಕಳಿಂದ ದೈಹಿಕ ಕಸರತ್ತು, ಡಂಬಲ್ಸ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು. ಈ ಸಂದರ್ಭ ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾದ ಸ್ಪರ್ಧಿಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು. ಸಮಾರೋಪ ಸಮಾರಂಭದಲ್ಲಿ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದಿರುವ ನಿವೃತ್ತ ಶಿಕ್ಷಕಿ ರೇಖಾ ಉಲ್ಲಾಸ್ ಮಕ್ಕಳಿಗೆ ಹಿತವಚನಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಕಕ್ಕಬೆ-ಕುಂಜಿಲಾ ಗ್ರಾ.ಪಂ ಮಾಜಿ ಅಧ್ಯಕ್ಷ ಸಂಪನ್ ಅಯ್ಯಪ್ಪ, ಸದಸ್ಯರಾದ ಭರತ್ ಚಂದ್ರ ದೇವಯ್ಯ, ಇಂದಿರಾ, ಪ್ರಕಾಶ್, ಎಸ್‍ಡಿಎಂಸಿ ಉಪಾಧ್ಯಕ್ಷ ಸುಬ್ರಮಣಿ, ಯವಕಪಾಡಿ…
ಮಡಿಕೇರಿ ಜ.29 NEWS DESK : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಹಾತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ, ಕುಂದ ಈಚೂರಿನ ತಾತೀರ ಹಾಗೂ ಮದ್ರೀರ ಕುಟುಂಬದ ಮನೆಗಳಿಗೆ ತೆರಳುವ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಯಿತು. ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹಾಗಾರ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರ ವಿಶೇಷ ಕಾಳಜಿಯಿಂದ ಮಂಜೂರು ಮಾಡಿದ ರೂ.5 ಲಕ್ಷಗಳಲ್ಲಿ ಕಾಮಗಾರಿ ನಡೆಯಿತು. ತಮ್ಮ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ ಶಾಸಕರಿಗೆ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರೀರ ನವೀನ್ ಗೆ ಹಾತೂರು ವಲಯ ಕಾಂಗ್ರೆಸ್ ಅಧ್ಯಕ್ಷ ಕೊಕ್ಕಂಡ ರೋಶನ್ ಗೆ ಕುಟುಂಬಸ್ಥರು ಕೃತಜ್ಞನೆ ಸಲ್ಲಿಸಿದರು.
ಮಡಿಕೇರಿ ಜ.29 NEWS DESK : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ 126ನೇ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ.ಬಿ.ರಾಘವ, ಮುಖ್ಯ ಅತಿಥಿಗಳು ಹಾಗೂ ಎನ್‍ಸಿಸಿ ಕೆಡೆಟ್‍ಗಳು ಕಾರ್ಯಪ್ಪ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಮೇಜರ್ ಡಾ.ಬಿ.ರಾಘವ ಅವರು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಅಪ್ರತಿಮ ಸೇನಾ ದಂಡ ನಾಯಕರಾಗಿದ್ದಾರೆ, ಯಾವುದೇ ಜಾತಿ, ಧರ್ಮ ಮತ್ತು ಜನಾಂಗಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ದೇಶಕ್ಕಾಗಿ ಸೇವೆ ಸಲ್ಲಿಸಿದ್ದಾರೆ. ಶಿಸ್ತು, ಸಂಯಮ, ಧೈರ್ಯ, ದೇಶಭಕ್ತಿಯ ಮೂಲಕ ಸೇನಾಸೇವೆ ಸಲ್ಲಿಸಿ, ತಮ್ಮ ಆದರ್ಶಗಳಿಂದ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು. ಕಾರ್ಯಪ್ಪ ಅವರ ಪುತ್ರರಾದ ಏರ್ ಮಾರ್ಷಲ್ ನಂದಾ ಕಾರ್ಯಪ್ಪ ಅವರು ವಾಯುದಳದಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಎರಡನೇ ಇಂಡೋ-ಪಾಕ್ ಯುದ್ಧದಲ್ಲಿ ಪಾಕಿಸ್ತಾನದ ಕೈದಿ ಆಗಿದ್ದಾಗ ಪುತ್ರನಿಗೆ ವಿಶೇಷ ಸವಲತ್ತುಗಳನ್ನು ನಿರಾಕರಿಸಿದ ಫೀ.ಮಾ.ಕಾರ್ಯಪ್ಪ ಅವರು ಎಲ್ಲಾ…
ಸುಂಟಿಕೊಪ್ಪ ಜ.29 NEWS DESK : ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಸಂತೆ ಮೇಳ ಮತ್ತು ವಸ್ತು ಪ್ರದರ್ಶನ ಗಮನ ಸೆಳೆಯಿತು. ಮಕ್ಕಳಿಗೆ ವ್ಯಾಪಾರ, ವಹಿವಾಟಿನ ಬಗ್ಗೆ ಜ್ಞಾನ ಮೂಡಿಸುವುದಕ್ಕಾಗಿ ಶಾಲಾ ಶಿಕ್ಷಕರ ಮಾರ್ಗದರ್ಶನದಲ್ಲಿ ವಿವಿಧ ಬಗೆಯ ತರಕಾರಿಗಳು, ಹಣ್ಣು ಹಂಪಲುಗಳು, ಮನೆಯಿಂದ ತಯಾರಿಸಿದ ಸಿಹಿ ಖಾದ್ಯ, ತಿಂಡಿಗಳನ್ನು ಮಾರಾಟ ಮಾಡಿ ಸಂಭ್ರಮಿಸಿದರು. ಶಾಲಾ ಶಿಕ್ಷಕರು, ಪೋಷಕರು, ಸಾರ್ವಜನಿಕರು ಮಕ್ಕಳ ವ್ಯಾಪಾರ ಶೈಲಿಗೆ ಮನಸೋತು ವಸ್ತುಗಳನ್ನು ಖರೀದಿಸಿದರು. ಇದೇ ವೇಳೆ ಶಾಲೆಯಲ್ಲಿ ವಸ್ತು ಪ್ರದರ್ಶನ ಕೂಡ ನಡೆಯಿತು. ಮಕ್ಕಳ ಕೈಯಿಂದ ಅರಳಿದ ವಿವಿಧ ರೀತಿಯ ವಿಜ್ಞಾನದ ಕೌತುಕದ ದೃಶ್ಯಾವಳಿಗಳು ಮನಸೂರೆಗೊಂಡಿತ್ತು. ಕನ್ನಡ, ವಿಜ್ಞಾನ, ಇಂಗ್ಲಿಷ್, ಹಿಂದಿ, ವಾಣಿಜ್ಯ ವಿಷಯಗಳ ಕುರಿತಾದ ವಸ್ತು ಪ್ರದರ್ಶನ ನಡೆಯಿತು. ರಾಕೆಟ್ ಉಡಾವಣೆ, ನೀರಿನ ಬಳಕೆ, ಮನೆಗಳ ನಿರ್ಮಾಣ ಶೈಲಿ, ಕನ್ನಡದ ಕವಿಗಳ ಚಿತ್ರಗಳು, ವ್ಯಾಕರಣ ರಚಿತ ದೃಶ್ಯಗಳು ಸೇರಿದಂತೆ ಇನ್ನಿತರ ವಸ್ತು ಪ್ರದರ್ಶನಗಳು ಮೆರುಗನ್ನು ನೀಡಿದವು. ಶಾಲೆಯ ವ್ಯವಸ್ಥಾಪಕರಾದ ಧರ್ಮಗುರು ವಿಜಯ್ ಕುಮಾರ್…
ವಿರಾಜಪೇಟೆ ಜ.29 NEWS DESK : ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ 126ನೇ ಜನ್ಮ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರು, ಉಪನ್ಯಾಸಕರು ಕಾರ್ಯಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಅಖಿಲ ಕರ್ನಾಟಕ ಸೈನಿಕ ಸಂಘದ ಅಧ್ಯಕ್ಷ ಕೊಟ್ಟುಕತ್ತಿರ ಸೋಮಣ್ಣ, ವಿದ್ಯಾರ್ಥಿಗಳು ಶಿಸ್ತು, ಪ್ರಾಮಾಣಿಕತೆ, ಕರ್ತವ್ಯಪ್ರಜ್ಞೆ, ಸಮಯಪಾಲನೆಯ ಮೂಲಕ ತಮ್ಮ ಗುರಿಯನ್ನು ಸಾಧಿಸಿ ಉತ್ತಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದರು. ರಾಷ್ಟ್ರ ಪ್ರೇಮವನ್ನು ಮೈಗೂಡಿಸಿಕೊಳ್ಳುವುದರ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸಬೇಕು. ರಾಷ್ಟ್ರೀಯ ಭಾವೈಕ್ಯತಾ ಅಂಶಗಳಿಗೆ ವಿದ್ಯಾರ್ಥಿಗಳು ಒತ್ತು ನೀಡಬೇಕು ಎಂದು ಕರೆ ನೀಡಿದರು. ಅಖಿಲ ಕರ್ನಾಟಕ ಸೈನಿಕ ಸಂಘದ ಕಾರ್ಯದರ್ಶಿ ಕುಟ್ಟoಡ ಲವ ಪೊನ್ನಪ್ಪ ಮಾತನಾಡಿ, ದೇಶ ಪ್ರೇಮ ಎಂಬುವುದು ವಿದ್ಯಾರ್ಥಿ ಜೀವನದಲ್ಲಿಯೇ ಮೈಗೂಡಿಸಿಕೊಳ್ಳಬೇಕು. ರಾಷ್ಟ್ರ ಮೊದಲು ಎಂಬ ಪರಿಕಲ್ಪನೆ ವಿದ್ಯಾರ್ಥಿಗಳಲ್ಲಿ ಬರಬೇಕು. ಶಿಸ್ತನ್ನು ಮೈಗೂಡಿಸಿಕೊಳ್ಳುವುದರ ಮೂಲಕ ಆದರ್ಶ ವ್ಯಕ್ತಿಗಳಾಗಿ ಬಾಳಿ ಎಂದು ಸಲಹೆ ನೀಡಿದರು ಕಾರ್ಯಕ್ರಮದ…
ವಿರಾಜಪೇಟೆ ಜ.29 NEWS DESK : ಪಟ್ಟಣದ ಸಂತ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಮೂಲತಃ ವಿರಾಜಪೇಟೆಯವರಾದ ಪಾಪನೋಗಿನಿಯ ದೇಶದ ಬಿಷಪ್ ರೋಸಾರಿಯೋ ಮೆನೇಜಸ್ ದ್ವಜಾರೋಹಣ ನೆರವೇರಿಸಿ ಮಾತನಾಡಿ ಭಾರತವು ವೈವಿಧ್ಯತೆಗಳಿಂದ ಕೂಡಿರುವ ದೇಶ. ಸಂವಿಧಾನವು ಶ್ರೇಷ್ಠ ಕಾನೂನಾಗಿದ್ದು, ಪ್ರತಿಯೊಬ್ಬರು ಗೌರವಿಸಬೇಕು ಎಂದು ಹೇಳಿದರು. ಪ್ರಜಾಪ್ರಭುತ್ವದ ಆಶಯದಂತೆ ಸ್ವತಂತ್ರ, ಸಮಾನತೆ, ಭ್ರಾತೃತ್ವ ಮತ್ತು ಕಾನೂನುನ್ನು ಪಾಲಿಸಿ ರಾಷ್ಟ್ರಕ್ಕೆ ಗೌರವವನ್ನು ಸೂಚಿಸಬೇಕು. ವಿದ್ಯಾರ್ಥಿಗಳು ರಾಷ್ಟ್ರ ಪ್ರೇಮವನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಸಂತ ಅನ್ನಮ್ಮ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ಹಾಗೂ ಪ್ರಧಾನ ಧರ್ಮ ಗುರುಗಳಾದ ರೆ. ಫಾ. ಜೇಮ್ಸ್ ಡೊಮಿನಿಕ್ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಈ ಸಂದರ್ಭ ಸಂತ ಅನ್ನಮ್ಮ ಪಿ. ಯು. ಕಾಲೇಜಿನ ಪ್ರಾಂಶುಪಾಲ ರೆ.ಫಾ.ಮದಲೈ ಮುತ್ತು, ಪದವಿ ಕಾಲೇಜು ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಪ್ರೌಢ ಶಾಲಾ ಮುಖ್ಯ ಶಿಕ್ಷಕ ಬೆನ್ನಿ ಜೋಸೆಫ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ರೋಸಿ, ಸಿಸ್ಟರ್ ಐಡಾ, ಸಂತ ಅನ್ನಮ್ಮ ಪಾಲಕ ಶಿಕ್ಷಕರ ಸಂಘದ…
ಕುಶಾಲನಗರ ಜ.29 NEWS DESK : ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಲೆಕ್ಕ ಶೀರ್ಷಿಕೆಗಳಡಿಯಲ್ಲಿ ಅನುಮೋದನೆಗೊಂಡಿರುವ ಹಾಗೂ ಪೂರ್ಣಗೊಂಡಿರುವ ರೂ.66 ಲಕ್ಷದ ವಿವಿಧ ಕಾಮಗಾರಿಗಳಿಗೆ ಶಾಸಕ ಡಾ.ಮಂತರ್ ಚಾಲನೆ ನೀಡಿದರು. ಗುಡ್ಡೆಹೊಸೂರು ಗ್ರಾ.ಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, 2023-24ನೇ ಸಾಲಿನ ಮುಖ್ಯ ಮಂತ್ರಿಗಳ ವಿಶೇಷ ಮಂಜೂರಾತಿ ಕಾರ್ಯಕ್ರಮದಡಿ ರೂ.10 ಲಕ್ಷ ವೆಚ್ಚದಲ್ಲಿ ಮಾದಾಪಟ್ಟಣ ಗ್ರಾಮದ ರಸ್ತೆ ದುರಸ್ತಿ, ಕಾಂಕ್ರೀಟ್ ರಸ್ತೆ ಹಾಗೂ ರೂ.12 ಲಕ್ಷ ವೆಚ್ಚದಲ್ಲಿ ಬಸವನಹಳ್ಳಿ ಗ್ರಾಮದ ದಿಡ್ಡಳ್ಳಿ ನಿರಾಶ್ರಿತರ ಮನೆಯವರೆಗೆ ಹಾಗೂ ರಸ್ತೆ ದುರಸ್ತಿ, ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಹಾಗೂ ಚಿಕ್ಕಬೆಟ್ಟಗೇರಿ ಮುಖ್ಯ ರಸ್ತೆಯಿಂದ ಸೋಲಿಗರ ಕಾಲೋನಿ ಸಮುದಾಯ ಭವನದ ರಸ್ತೆ ದುರಸ್ತಿ, ರೂ.11 ಲಕ್ಷ ವೆಚ್ಚದಲ್ಲಿ ಹಾರಂಗಿ ಗ್ರಾಮದ ಬೊಳ್ಳೂರು ಮುಖ್ಯ ರಸ್ತೆ ದುರಸ್ತಿ ಹಾಗೂ ಮಡಿಕೇರಿ ಮುಖ್ಯ ರಸ್ತೆಯಿಂದ ಮೊರಾರ್ಜಿ ಶಾಲೆಯ ರಸ್ತೆ ದುರಸ್ತಿಗೆ ಚಾಲನೆ ನೀಡಲಾಗಿದೆ ಎಂದರು. 2024-25ನೇ ಸಾಲಿನ ಜಿಲ್ಲಾ ಪಂಚಾಯಿತ್ ರಾಜ್ಯ ಹಣಕಾಸು ಆಯೋಗದ…






