ಮಡಿಕೇರಿ NEWS DESK ಜ.6 : ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡುವಿನ ಶ್ರೀ ಮಹಾ ಮೃತ್ಯುಂಜಯ ದೇವಾಲಯ ಸಮಿತಿಯು ವಸ್ತç ಸಂಹಿತೆ ಕುರಿತು ಜ.5 ರಂದು ನಡೆಸಿದ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದ ಕಾರಣ ನಮಗೆ ಮತ್ತಷ್ಟು ಸಮಯಾವಕಾಶ ಬೇಕೆಂದು ಸಮಿತಿ ಕೋರಿರುವ ಹಿನ್ನೆಲೆಯಲ್ಲಿ ಫೆ.10ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ. ದೇವಾಲಯ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಇಂದು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಜ.5ರಂದು ನಡೆದ ಸಭೆಯ ವರದಿಯನ್ನು ಮಂಡಿಸಿ ಅಂತಿಮ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದೆ ಇರುವುದಕ್ಕೆ ಕಾರಣಗಳನ್ನು ನೀಡಿದರು. ಗೊಂದಲ ನಿವಾರಣೆಗೆ ಒಂದು ತಿಂಗಳ ಕಾಲಾವಕಾಶಬೇಕೆಂದು ಕೋರಿದ ಹಿನ್ನೆಲೆಯಲ್ಲಿ ಫೆ.10ರವರೆಗೆ ಕಾಲಾವಕಾಶ ನೀಡಲಾಗಿದೆ. ಈ ಅವಧಿಯವರೆಗೆ ಕಳೆದ ಏಳು ದಿನಗಳಿಂದ ದೇವಾಲಯ ವ್ಯಾಪ್ತಿಯಲ್ಲಿ ಇದ್ದ ಪರಿಸ್ಥಿತಿಯೇ ಮುಂದುವರೆಯಲಿದೆ. ಸೆಕ್ಷನ್ 163 ಅಡಿಯಲ್ಲಿ ವಿಧಿಸಲಾಗಿರುವ ನಿರ್ಬಂಧದ ಕುರಿತು ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ದೇವಾಲಯದ ನಿತ್ಯ ಪೂಜೆಗೆ ಹಾಗೂ ಭಕ್ತರಿಗೆ ತೊಂದರೆಯಾಗದ ರೀತಿಯಲ್ಲಿ ದೇವಾಲಯ…
ಲೇಖಕ: admin
ಮಡಿಕೇರಿ ಜ.6 NEWS DESK : ವಿರಾಜಪೇಟೆ ತಾಲ್ಲೂಕಿನ ಚೆಂಬೆಬೆಳ್ಳೂರು ಗ್ರಾಮದಲ್ಲಿ ಗುಂಡೇಟಿಗೆ ಬಲಿಯಾದ ಕಾರ್ಮಿಕ ಪಣಿಎರವರ ಪೊನ್ನು ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಮಾಕ್ರ್ಸ್‍ವಾದಿಯ ಕೊಡಗು ಜಿಲ್ಲಾ ಘಟಕ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಪಕ್ಷದ ಪ್ರಮುಖರು ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಹೆಚ್.ಬಿ.ರಮೇಶ್ ಮಾತನಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ. ಆದರೆ ಪ್ರಭಾವಕ್ಕೆ ಮಣಿದು ಪ್ರಕರಣವನ್ನು ಸಡಿಲಗೊಳಿಸಬಾರದು, ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಾವಿಗೀಡಾದ ಪೊನ್ನುವಿನ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು, ನಿವೇಶನ ಮಂಜೂರು ಮಾಡಿ ಸರಕಾರವೇ ಮನೆ ನಿರ್ಮಿಸಿಕೊಡಬೇಕು. ಕುಟುಂಬದ ಸದಸ್ಯರೊಬ್ಬರಿಗೆ ಸರಕಾರಿ ನೌಕರಿ ನೀಡಬೇಕು ಮತ್ತು ನಿರಂತರವಾಗಿ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಬುಡಕಟ್ಟು ಜನಾಂಗದ ರಕ್ಷಣೆಗಾಗಿ ಕಠಿಣ ಕಾನೂನು ಕ್ರಮ ಜಾರಿಗೆ ತರಬೇಕು ಎಂದು ಆಗ್ರಹಿಸಿದರು. ಪಕ್ಷದ ಮುಖಂಡ ಪಿ.ಆರ್.ಭರತ್ ಮಾತನಾಡಿ ಕೊಡಗಿನ ನಿವಾಸಿಗಳಾದ ಎರವರು,…
ಮಡಿಕೇರಿ ಜ.6 NEWS DESK : ಕೈಪಡ್ಕ ಶ್ರೀ ಕೊರಗಜ್ಜ ಸ್ವಾಮಿ ಸನ್ನಿಧಿಯಲ್ಲಿ ಫೆ.1 ರಂದು ಸ್ವಾಮಿ ಕೊರಗಜ್ಜ ಮತ್ತು ಗುಳಿಗ ದೈವದ ನೇಮೋತ್ಸವ ನಡೆಯಲಿದ್ದು, ಅದರ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಈ ಸಂದರ್ಭ ದೈವಸ್ಥಾನದ ಗೌರವಾಧ್ಯಕ್ಷ ಸುರೇಶ್ ಕದಿಕಡ್ಕ, ಅಧ್ಯಕ್ಷ ರವಿಚಂದ್ರ ಬಿಳಿಯಾರು, ಕಾರ್ಯದರ್ಶಿ ರಮೇಶ್, ಖಜಾಂಚಿ ಚಂಗಪ್ಪ ಕೈಪಡ್ಕ, ಶ್ರೀಧರ ದುಗ್ಗಳ, ರಾಜಗೋಪಾಲ, ಲೋಕ್ಯಾನಾಯ್ಕ್, ಪಿ.ಆರ್.ನಾಗೇಶ್, ಯೋಗೇಶ್ವರ ಕೈಪಡ್ಕ, ಪ್ರಶಾಂತ್ ಹಾಗೂ ಸದಸ್ಯರು, ಭಕ್ತಾಧಿಗಳು ಹಾಜರಿದ್ದರು. ನೇಮೋತ್ಸವ :: ಫೆ.1 ರಂದು ಬೆಳಿಗ್ಗೆ 6 ಗಂಟೆಗೆ ಗಣಹೋಮ ಮತ್ತು ಸ್ಥಳಶುದ್ಧಿ, 7 ಗಂಟೆಗೆ ದೀಪಾರಾಧನೆ ನಡೆಯಲಿದ್ದು, ಸಂಜೆ 6 ಗಂಟೆಗೆ ಎಣ್ಣೆ ಕೊಡುವುದು, 7 ಗಂಟೆಗೆ ಗುಳಿಗ ದೈವದ ಕೋಲ, ರಾತ್ರಿ 8.30 ಗಂಟೆಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ. ರಾತ್ರಿ 8.45 ರಿಂದ ಶ್ರೀ ಕೊರಗಜ್ಜ ದೈವದ ನೇಮೋತ್ಸವ, ಕೊರಗಜ್ಜ ದೈವದ ಹರಕೆಯ ಕೋಲ, ನಂತರ ಪ್ರಸಾದ ವಿತರಣೆ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ…
ಮಡಿಕೇರಿ ಜ.6 NEWS DESK : ಮ್ಯಾನ್ಸ್ ಕಾಂಪೌಂಡ್ ಕ್ಲಬ್(ಎಂಸಿಸಿ) ವತಿಯಿಂದ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದ ಫುಟ್ಬಾಲ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಮೂರನೇ ವರ್ಷದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಸತತ ಮೂರನೇ ಬಾರಿಗೆ ಜಯಗಳಿಸಿ ಹ್ಯಾಟ್ರಿಕ್ ಸಾಧನೆಯೊಂದಿಗೆ ಟೀಂ ಭಗವತಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಸಂಗಂ ಎಫ್‌ಸಿ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಕಳೆದ ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಅಂತಿಮ ಸುತ್ತಿಗೆ ಪ್ರವೇಶಿಸಿದ ಭಗವತಿ ಹಾಗೂ ಸಂಗಂ ತಂಡಗಳ ನಡುವೆ ರೊಚಕತೆಯಿಂದ ಪಂದ್ಯಾಟ ನಡೆಯಿತು. ಉಭಯ ತಂಡಗಳು ಪೈಪೋಟಿಯೊಂದಿಗೆ ಸೆಣೆಸಾಟ ನಡೆಸಿದರೂ ಬಲಿಷ್ಠವಾಗಿದ್ದ ಭಗವತಿ ತಂಡ ಸಂಗಂ ತಂಡವನ್ನು 5-1 ಗೋಲುಗಳಿಂದ ಮಣಿಸಿ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಸಂಗಂ ತಂಡ ಎರಡನೇ ಸ್ಥಾನಕ್ಕೆ ತೃಪ್ತಿಕೊಟ್ಟುಕೊಳ್ಳಬೇಕಾಯಿತು. ಸಂಜೆ ನಡೆದ ಅಂತಿಮ ಪಂದ್ಯಾವಳಿಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಆಟಗಾರರನ್ನು ಪರಿಚಯಿಸಿಕೊಳ್ಳುವದರ ಮೂಲಕ ಉದ್ಘಾಟಿಸಿದರು. ನಂತರ ಎಂಸಿಸಿ ಅಧ್ಯಕ್ಷ ಎಂ.ಎ.ಕ್ರಿಸ್ಟೋಫರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ…
ಮಡಿಕೇರಿ ಜ.6 NEWS DESK : ಉತ್ತರ ಕಾಂಡ್ ರಾಜ್ಯ ದ ಹರಿದ್ವಾರ ಜಿಲ್ಲೆಯ ರೋಷನ್ ಬಾಗ್ ಕ್ರೀಡಾ0ಗಣದಲ್ಲಿ ಜ.8 ರಿಂದ 11ರ ವರೆಗೆ ನಡೆಯುವ 50ನೇ ಜೂನಿಯರ್ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ ಶಿಪ್ ಗೆ ಕೊಡಗಿನ ಎಸ್.ಟಿ.ಪ್ರಣಯ್ ಆಯ್ಕೆಯಾಗಿದ್ದು, ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾನೆ. ಇವನು ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಷನ್ ನಡೆಸಿ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿರುವುದಾಗಿ ಅಸೋಸಿಷನ್ ನ ದುಗ್ಗಳ ಕಪಿಲ್ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.
ಗೋಣಿಕೊಪ್ಪ ಜ.6 NEWS DESK : ಸರ್ವದೈವತ ವಿದ್ಯಾ ಸಂಸ್ಥೆಯ ವತಿಯಿಂದ ಜ.16ರಂದು ಅರುವತ್ತೊಕ್ಲು ವಿದ್ಯಾಸಂಸ್ಥೆಯ ಆವರಣದಲ್ಲಿ ಜಿಲ್ಲಾಮಟ್ಟದ ಅಂತರ ಶಾಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಶಾಲಾ ಮುಖ್ಯ ಶಿಕ್ಷಕಿ ಮನೆಯಪಂಡ ಶೀಲಾ ಬೋಪಣ್ಣ ತಿಳಿಸಿದ್ದಾರೆ. ಶಾಲೆಯಲ್ಲಿ ನಡೆದ ಅಂತರ್‍ಶಾಲಾ ಸ್ಪರ್ಧೆಯ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದ ಅವರು ವಿದ್ಯಾರ್ಥಿಗಳಿಗೆ ಜಾನಪದ ಸಮೂಹ ಗೀತೆ ಸ್ಪರ್ಧೆ, ಕ್ಲೇ ಮಾಡಲಿಂಗ್, ಸಿನಿಮಾ ಹಾಡಿಗೆ ನೃತ್ಯ, ವಿಜ್ಞಾನ ವಸ್ತು ಪ್ರದರ್ಶನಗಳಲ್ಲಿ ಪರಿಸರ ವ್ಯವಸ್ಥೆ, ಹವಾಮಾನ ಬದಲಾವಣೆ, ರೊಬೊಟಿಕ್ಸ್, ಸಾಮಾಜಿಕ, ಪೌರಾಣಿಕ ವಿಚಾರದ ಛದ್ಮವೇಷ, ಚೆಸ್ ಸ್ಪರ್ಧೆ, ಜಾಗತಿಕ ದುರಂತಗಳಿಗೆ ಕೈಗಾರಿಕೀಕರಣವೇ ಕಾರಣ ಹೌದು ಅಥವಾ ಇಲ್ಲ ಎಂಬ ವಿಚಾರವಾಗಿ ಚರ್ಚಾಸ್ಪರ್ಧೆ ನಡೆಯಲಿದೆ ಎಂದರು. ಆಸಕ್ತ ಶಾಲೆಯ ವಿದ್ಯಾರ್ಥಿಗಳು ತಮ್ಮ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿದೆ. ಹೆಚ್ಚಿನ ಮಾಹಿತಿಗೆ 8277021505/ 9482138848/ 9481226954 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಪ್ರಾಂಶುಪಾಲ ಪಿ.ಆರ್.ಪ್ರದೀಪ್, ಶಿಕ್ಷಕರುಗಳಾದ ಲೀನಾ ರಾಘವೇಂದ್ರ, ಮೋನಿಕಾ, ಧರಣಿ, ಕಾವೇರಮ್ಮ ಉಪಸ್ಥಿತರಿದ್ದರು.
ಮಡಿಕೇರಿ ಜ.6 NEWS DESK : ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಇಲಾಖೆ ವತಿಯಿಂದ ನೂತನವಾಗಿ ರಾಜ್ಯಾದ್ಯಂತ ಕೈಗೊಳ್ಳಲಾಗಿರುವ ತಾಲ್ಲೂಕು ಕಚೇರಿ, ಸರ್ವೇ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂ ದಾಖಲೆಗಳ ಡಿಜಿಟಲೀಕರಣ ಕಾರ್ಯಕ್ರಮದ ಅಂಗವಾಗಿ ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕಿನ ಭೂ ದಾಖಲೆಗಳ ಇ ಖಜಾನೆ ಕಾರ್ಯಕ್ರಮವನ್ನು ಸೋಮವಾರಪೇಟೆ ತಾಲ್ಲೂಕು ಕಚೇರಿಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು. ಇದೇ ಸಂದರ್ಭ ಸೋಮವಾರಪೇಟೆ ತಾಲ್ಲೂಕು ಕಚೇರಿಯ ಆಹಾರ ಶಾಖೆ ಹಾಗೂ ಭೂ ದಾಖಲೆಗಳ ಇಲಾಖೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸೂಕ್ತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು.
ಮಡಿಕೇರಿ ಜ.6 NEWS DESK : ಬುದ್ಧ, ಬಸವ, ಅಂಬೇಡ್ಕರ್ ಅವರ ಆಶಯ ಮತ್ತು ಚಿಂತನೆಗಳನ್ನು ಒಳಗೊಂಡ ಸಚಿವ ಸತೀಶ್ ಜಾರಕಿಹೊಳಿ ಅವರ ಸಾರಥ್ಯದಲ್ಲಿ ಪ್ರಾರಂಭವಾಗಿರುವ ಮಾನವ ಬಂಧುತ್ವ ವೇದಿಕೆಯು ದಶಮಾನೋತ್ಸವದ ಸಂಭ್ರಮದಲ್ಲಿದ್ದು, ಫೆ.2 ರಂದು ದಾವಣಗೆರೆಯಲ್ಲಿ ನಡೆಯಲಿರುವ ಬೃಹತ್ ಸಮಾವೇಶಕ್ಕೆ ಕೊಡಗಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವೇದಿಕೆಯ ಜಿಲ್ಲಾ ಸಂಚಾಲಕ ಜೆ.ಎಲ್.ಜನಾರ್ಧನ್ ಮನವಿ ಮಾಡಿದರು. ನಗರದ ಸುದರ್ಶನ ಅಥಿತಿ ಗೃಹದಲ್ಲಿ ಕಾರ್ಯಕ್ರಮದ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಿ, ಮಾತನಾಡಿದರು. ಸಭೆಯಲ್ಲಿ ರಾಜ್ಯ ಮಹಿಳಾ ಒಕ್ಕೂಟದ ಸಂಚಾಲಕಿ ಡಾ.ಲೀಲಾ ಸಂಪಿಗೆ, ಮಂಗಳೂರು ವಿಭಾಗೀಯ ಸಂಚಾಲಕ ಕೆ.ಎಸ್.ಸತೀಶ್ ಕುಮಾರ್, ರಾಜ್ಯ ಸಮಿತಿ ಸದಸ್ಯ ರಮನಾಥ್, ಜಿಲ್ಲಾ ಮಹಿಳಾ ಸಮಿತಿಯ ಸಂಚಾಲಕಿ ಡಾ.ಹೆಚ್.ಎಂ.ಕಾವೇರಿ, ಸದಸ್ಯರಾದ ನೆರವಂಡ ಉಮೇಶ್, ಸಾಮಾಜಿಕ ಹೋರಾಟಗಾರ ಟಿ.ಪಿ.ರಮೇಶ್ ಮಾತನಾಡಿ, ಎಲ್ಲಾ ಸದಸ್ಯರ ಅಭಿಪ್ರಾಯಗಳನ್ನು ಪಡೆದುಕೊಂಡು ಕೊಡಗು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಿಂದ ತಲಾ ಎರಡು ಬಸ್ಸುಗಳಂತೆ ಚಳುವಳಿಗಾರರು, ಸಂವಿಧಾನವನ್ನು ಗೌರವಿಸುವ ಮತ್ತು ಉಳಿಸುವ ಮಹತ್ವಕಾಂಕ್ಷೆ ಹೊಂದಿರುವ…
ಕುಶಾಲನಗರ ಜ.6 NEWS DESK : ಜೀವಪರವಾದ ಹೋರಾಟಗಳ ಸಾಹಿತ್ಯ ಕೃಷಿ ಮಾಡುವ ಮೂಲಕ ಜನಸಾಮಾನ್ಯರ ಗಟ್ಟಿಧ್ವನಿಯಾಗಿದ್ದ ಸಾಹಿತಿ ನಾ.ಡಿಸೋಜಾ ಅವರ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟ ಎಂದು ಕೊಡಗಿನ ಹಿರಿಯ ಸಾಹಿತಿ ಬಾಚರಣಿಯಂಡ ಪಿ.ಅಪ್ಪಣ್ಣ ಹೇಳಿದರು. ಸಾಹಿತ್ಯಾಸಕ್ತರ ವೇದಿಕೆ ವತಿಯಿಂದ ಕುಶಾಲನಗರದ ಅನುಗ್ರಹ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು, ನಾ.ಡಿಸೋಜಾ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, 60 ರ ದಶಕದಲ್ಲಿ ಪಾಟೀಲ್ ಪುಟ್ಟಪ್ಪ ಅವರ ಪ್ರಪಂಚ ಪತ್ರಿಕೆಯಲ್ಲಿ ನಿರಂತರವಾಗಿ ನಾ.ಡಿಸೋಜಾ ಅವರು ಬರೆಯುತ್ತಿದ್ದ ಲೇಖನಗಳಿಗಾಗಿ ಓದುಗರು ಕಾತರದಿಂದ ಕಾಯುತ್ತಿದ್ದರು. ಮಲೆನಾಡಿನ ಪ್ರಕೃತಿ ರಮಣೀಯ ಹಸಿರು ಹೊದಿಕೆಗೆ ಘಾಸಿಯಾಗದಂತೆ ಸದಾ ಕಾಲ ಕಾವಲುಗಾರನಂತಿದ್ದು ಪರಿಸರ ಸಂರಕ್ಷಕರಾಗಿದ್ದರು. ಕವಿ, ಸಾಹಿತಿ, ಕಥೆಗಾರ, ಕಾದಂಬರಿಕಾರ ಹೀಗೆ ಸಾಹಿತ್ಯದ ಹಲವು ಆಯಾಮಗಳನ್ನು ತನ್ನಲ್ಲಿ ಅವ್ಯಕ್ತಗೊಳಿಸಿದ್ದ ನಾ.ಡಿಸೋಜ ಶರಾವತಿ ಹಿನ್ನೀರಿನಿಂದಾಗಿ ಜನ ಅನುಭವಿಸುತ್ತಿದ್ದ ಸಂಕಷ್ಟಗಳನ್ನು ತಮ್ಮ ಲೇಖನಿಯ ಮೂಲಕವೇ ಪ್ರತಿರೋಧಿಸುತ್ತಾ ಆಳುವ ಸರ್ಕಾರಗಳಿಗೆ ಎಚ್ಚರಿಕೆಯ ಘಂಟೆಯಾಗಿದ್ದರು ಎಂದು ಬಾಚರಣಿ…
ಮಡಿಕೇರಿ ಜ.6 NEWS DESK : ಕುಶಾಲನಗರದ ಸಮೀಪದ ಬೈಲುಕುಪ್ಪೆ ಟಿಬೆಟಿಯನ್ ನಿರಾಶ್ರಿತರಕ್ಕೆ ಶಿಬಿರಕ್ಕೆ ಟೆಬೆಟಿಯನ್ ಧಾರ್ಮಿಕ ಗುರು ಮತ್ತು ನೊಬೆಲ್ ಪ್ರಶಸ್ತಿ ವಿಜೇತ 14ನೇ ದಲೈಲಾಮ ಭೇಟಿ ನೀಡಿದರು. ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಬೈಲುಕಪ್ಪೆಗೆ ಆಗಮಿಸಿದ ದಲೈದಾಮ ಅವರನ್ನು ಮೈಸೂರು ಜಿಲ್ಲಾಡಳಿತ, ಶಿಬಿರದ ಪ್ರತಿನಿಧಿಗಳು ಹಾಗೂ ಅವರ ಅನುಯಾಯಿಗಳು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ಟಿಬೆಟಿಯನ್ನರ ನಡೆದಾಡುವ ದೈವ ಎಂದೇ ಬಿಂಬಿತವಾಗಿರುವ ಸುಮಾರು 89ರ ವಯೋಮಾನದ ಟಿಬೆಟಿಯನ್ ಪರಮೊಚ್ಚ ಗುರುಗಳಾದ ದಲೈಲಾಮ ವಿಶ್ವಾಂತಿಗಾಗಿ ಬೈಲುಕುಪ್ಪೆಗೆ ಆಗಮಿಸಿದ್ದು, ಬೈಲುಕುಪ್ಪೆ ಶಿಬಿರದ ತಶಿಲೊಂಪೊ ಬೌದ್ಧ ಮಂದಿರದಲ್ಲಿ ಮುಂದಿನ ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಶಿಬಿರದ ಪ್ರತಿನಿಧಿ ಜಿಗ್ಮೆ ಸುಲ್ಟರೀಂ ಮಾಹಿತಿ ನೀಡಿದರು. ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.






