ಮಡಿಕೇರಿ ಜ.7 NEWS DESK : ಕೊಡಗು ಜಿಲ್ಲೆಯಲ್ಲಿ ವೇದಪಾಠ ಶಾಲೆ ಆರಂಭಿಸುವ ಉದ್ದೇಶಕ್ಕೆ ಸೂಕ್ತ ಜಾಗವನ್ನು ಮಂಜೂರು ಮಾಡಬೇಕೆಂದು ಕೊಡಗು ಪುರೋಹಿತ ಕಾರ್ಮಿಕರ ಫೆಡರೇಷನ್ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಅವರ ಬಳಿ ಮನವಿ ಮಾಡಿದೆ. ವೇದಪಾಠ ಶಾಲೆ ಆರಂಭಿಸಲು ಜಾಗ ಮಂಜೂರು ಮಾಡುವುದಾಗಿ ಶಾಸಕರು ನಿಯೋಗಕ್ಕೆ ಭರವಸೆ ನೀಡಿರುವುದಾಗಿ ಪುರೋಹಿತ ಕಾರ್ಮಿಕರ ಫೆಡರೇಷನ್ ನ ಜಿಲ್ಲಾಧ್ಯಕ್ಷ ಪ್ರಸನ್ನ ಭಟ್ ತಿಳಿಸಿದರು. ಭಾರತದ ಎಲ್ಲಾ ಜ್ಞಾನ ಶಾಖೆಗಳಿಗೂ ಮಾತೆಯಾಗಿರುವ ವೇದಗಳ ಅಧ್ಯಯನಕ್ಕೆ ಸ್ಥಳಾವಕಾಶವನ್ನು ನೀಡುವುದು ಕೊಡಗು ಜಿಲ್ಲೆಗೆ ಹೆಮ್ಮೆಯ ವಿಚಾರವಾಗಿದೆ. ವೇದಪಾಠ ಶಾಲೆಯೊಂದಿಗೆ ವೈದಿಕ ಭವನವನ್ನು ಸ್ಥಾಪಿಸಿ ವೈದಿಕರ ಧಾರ್ಮಿಕ ವಿಧಿಗಳಿಗೂ ಅನುಕೂಲ ಕಲ್ಪಿಸುವ ಕಾರ್ಯವಾಗಬೇಕು. ಇದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಫೆಡರೇಷನ್ ರಾಜ್ಯಾಧ್ಯಕ್ಷ ಡಾ.ಶ್ರೀನಿವಾಸನ್ ಹೇಳಿದ್ದಾರೆ. ಈ ಸಂದರ್ಭ ಫೆಡರೇಷನ್ ಉಪಾಧ್ಯಕ್ಷ ಸುದರ್ಶನ್, ಖಜಾಂಚಿ ಎಸಳೂರು ಉದಯಕುಮಾರ್, ಕಾರ್ಯದರ್ಶಿ ಪ್ರಸಾದ್ ಮತ್ತಿತರರು ಹಾಜರಿದ್ದರು. ಕೊಡಗು ಜಿಲ್ಲೆಯ ಅಸಂಘಟಿತ ಪುರೋಹಿತರನ್ನು ಸಂಘಟಿಸಲು ತಾಲ್ಲೂಕು ಸಮಿತಿಗಳನ್ನು ರಚಿಸಲಾಗುವುದು. ವಿವಿಧ ದೇವಾಲಯಗಳಲ್ಲಿ…
ಲೇಖಕ: admin
ಮಡಿಕೇರಿ ಜ.7 NEWS DESK : ಗ್ರಾಮೀಣ ಪ್ರದೇಶದಲ್ಲಿ ನೆಲೆನಿಂತಿರುವ ಮಾದಾಪುರದ ಶ್ರೀಮತಿ ಡಿ. ಚೆನ್ನಮ್ಮ ಎಜುಕೇಶನ್ ಸೊಸೈಟಿ ಈಗ ವಜ್ರ ಮಹೋತ್ಸವದ ಸಂಭ್ರಮದಲ್ಲಿದ್ದು, ಜ.11 ರಂದು ಸಂಸ್ಥೆಯ 60ನೇ ವಷಾ೯ರಣೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಕನ೯ಲ್ ಬಿ.ಜಿ.ವಿ. ಕುಮಾರ್ ತಿಳಿಸಿದ್ದಾರೆ. ದಾನಿಗಳಾದ ದಿವಂಗತ ಲೆಫ್ಟಿನೆಂಟ್ ಕನ೯ಲ್ ಡಿ.ಸಿ.ಬಸಪ್ಪ ಅವರ ಪ್ರಯತ್ನದಿಂದಾಗಿ ಅವರ ತಾಯಿ ಡಿ ಚೆನ್ನಮ್ಮ ಸ್ಮರಣಾಥ೯ 1960 ರ ಜುಲೈ 22 ರಂದು ಆರಂಭವಾದ ಪ್ರೌಡಶಾಲೆ 6 ದಶಕಗಳಲ್ಲಿ ಈ ವ್ಯಾಪ್ತಿಯ ಗ್ರಾಮೀಣ ವಿದ್ಯಾಥಿ೯ಗಳಿಗೆ ಜ್ಞಾನದೀವಿಗೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ದಿವಂಗತರಾದ | ಮಚ್ಚಂಡ ಗಣಪತಿ, ಪುಟ್ಟುಸ್ವಾಮಿ ಮುತ್ತಯ್ಯ ಗುಂಡುಕುಟ್ಟಿ ಮಂಜುನಾಥಯ್ಯ, ಎಂ ಎ ಪೊನ್ನಪ್ಪ, , ಕೆ.ಡಿ.ಸೋಮಯ್ಯ, ಸಿ.ಎ.ಪೂವಯ್ಯ, ಎಂ ಜಿ ಬೋಪಣ್ಣ ಸೇರಿದಂತೆ ಅನೇಕ ಮಹನೀಯರ ಪರಿಶ್ರಮದಿಂದಾಗಿ ಶಿಕ್ಷಣ ಸಂಸ್ಥೆಯು ಸಾಕಷ್ಟು ಅಭಿವೖದ್ದಿ ಹೊಂದಿದೆ ಎಂದು ಸ್ಮರಿಸಿಕೊಂಡರು. 1964ರಲ್ಲಿ ಗರಗಂದೂರಿನ ಈಗಿನ ಸುಂದರ ಕಟ್ಟಡಕ್ಕೆ ಶಾಲೆಯನ್ನು ಸ್ಥಳಾಂತರಿಸಲಾಯಿತು ಎಂದು ತಿಳಿಸಿದ…
ನಾಪೋಕ್ಲು ಜ.7 NEWS DESK : ಎಸ್‍ಎನ್‍ಡಿಪಿ ಶಾಖೆಯ ನೂತನ ಅಧ್ಯಕ್ಷರಾಗಿ ಟಿ.ಸಿ.ಲವ ಆಯ್ಕೆಯಾಗಿದ್ದಾರೆ. ನಾಪೋಕ್ಲುವಿನಲ್ಲಿ ಆಯೋಜಿಸಲಾಗಿದ್ದ ಎಸ್‍ಎನ್‍ಡಿಪಿ ಶಾಖೆಯ ಸಂಘಟನಾ ಪುನರ್ ರಚನಾ ಕಾರ್ಯಕ್ರಮದಲ್ಲಿ ಶಾಖೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಪಿ.ಎನ್.ಹರಿದಾಸ್, ಎಂ.ಕೆ.ತಂಗ, ಕಾರ್ಯದರ್ಶಿಯಾಗಿ ಪಿ.ಸಿ.ಕಿಶೋರ್ ಕುಮಾರ್, ಸಹ ಕಾರ್ಯದರ್ಶಿಯಾಗಿ ಎಂ.ಆರ್.ಅಜಿತ್, ಖಜಾಂಜಿಯಾಗಿ ಕೆ.ಬಿ.ಸುಧೀಶ್, ಯೂನಿಯನ್ ಪ್ರತಿನಿಧಿಯಾಗಿ ಟಿ.ಸಿ.ರಾಜೀವ್, ಸಂಘಟನಾ ಕಾರ್ಯದರ್ಶಿ ಚಿನ್ನ, ಸಂಘಟನಾ ಸಹ ಕಾರ್ಯದರ್ಶಿಯಾಗಿ ಎ.ಕೆ.ಮನೋಹರ, ನಿರ್ದೇಶಕರಾಗಿ ಟಿ.ಸಿ.ಮಣಿ, ಟಿ.ಸಿ.ಹರೀಶ್, ಪಿ.ಬಿ.ಹರೀಶ್ ಕುಮಾರ್ ನೇಮಕಗೊಂಡರು. ಸಂಘದ ಅಧ್ಯಕ್ಷ ಟಿ.ಸಿ.ರಾಜೀವ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಎಸ್‍ಎನ್‍ಡಿಪಿ ಜಿಲ್ಲಾಧ್ಯಕ್ಷ ವಿ.ಕೆ.ಲೋಕೇಶ್, ಕೊಡಗು ಜಿಲ್ಲಾ ಮಹಿಳಾ ಯೂನಿಯನ್ ಹಾಗೂ ಬ್ಯಾಂಕ್ ಅಧ್ಯಕ್ಷ ರಿಷ ಸುರೇಂದ್ರನ್, ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೇಮಾನಂದ, ನಾಪೋಕ್ಲು ವಿ ಎಸ್ ಎಸ್ ಎನ್ ನಿರ್ದೇಶಕ, ಎಸ್.ಎನ್‍ಡಿ.ಪಿ ಶಾಖೆಯ ನಿರ್ದೇಶಕ ಟಿ.ಎ.ಮಿಟ್ಟು, ನಾಪೋಕ್ಲು ಶಾಖೆಯ ಉಪಾಧ್ಯಕ್ಷ ಟಿ.ಆರ್.ಮಣಿ, ಕಬಡಕೇರಿ ನಿರ್ದೇಶಕ ವಿನಿಲ್ ಪಪ್ಪು, ಗೌರವ ಕಾರ್ಯದರ್ಶಿ ಟಿ.ಕೆ.ರಘು ಹಾಗೂ ಶಾಖೆಯ ನಿರ್ದೇಶಕರು ಸದಸ್ಯರು ಪಾಲ್ಗೊಂಡಿದ್ದರು. ವರದಿ…
ನಾಪೋಕ್ಲು ಜ.7 NEWS DESK : ಸಿ ಮತ್ತು ಡಿ ವರ್ಗದ ಜಮೀನನ್ನು ಮೀಸಲು ಅರಣ್ಯವೆಂದು ಘೋಷಿಸುವ ವಿಷಯದ ಕುರಿತಾಗಿ ಚರ್ಚಿಸಲು ಕುಂಜಿಲ ಕಕ್ಕಬೆ ಗ್ರಾಮ ಪಂಚಾಯಿತಿಯಲ್ಲಿ ವಿಶೇಷ ಗ್ರಾಮ ಸಭೆ ನಡೆಯಿತು. ಕುಂಜಿಲ ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಜಿಲ, ಯವಕಪಾಡಿ, ನಾಲಡಿ ಮತ್ತು ಮರಂದೋಡ ಗ್ರಾಮಗಳಲ್ಲಿ ಈಗಾಗಲೇ ವಾಸದ ಮನೆಯನ್ನು ನಿರ್ಮಿಸಿರುವ, ಕೃಷಿ ಮಾಡಿಕೊಂಡು ಅನುಭವ ಸ್ವಾಧೀನದಲ್ಲಿರುವ ಜಾಗವನ್ನು ಹೊರತುಪಡಿಸಿ, ಜಮ್ಮಾ ಮಲೆಗೆ ಹೋಗುವ ಬಂಡಿ ದಾರಿ, ಕುಡಿಯುವ ನೀರಿನ ಮೂಲ, ದೇವರ ಸ್ಥಾನಗಳಿಗೆ ಹೋಗುವ ದಾರಿಗೆ ಅಡ್ಡಿ ಪಡಿಸದಂತೆ ನಿರ್ಣಯ ಕೈಗೊಂಡು ಸಂಬಂಧಿಸಿದ ಇಲಾಖೆಯ ಅಧಿಕಾರಿವರಿಗೆ ಕಳುಹಿಸಿಕೊಡುವಂತೆ ತೀರ್ಮಾನಿಸಿದರು. ಪಂಚಾಯಿತಿ ಅಧ್ಯಕ್ಷೆ ಪಿ.ಎಲ್.ಶಿಲ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ವೈ.ಅಶೋಕ್ ಕುಮಾರ್, ಕಂದಾಯ ಪರಿವೀಕ್ಷಕ ರವಿ ಕುಮಾರ್, ಭಾಗಮಂಡಲ ವಲಯ ಅರಣ್ಯಾಧಿಕಾರಿ ಗ್ರಾಮಸ್ಥರ ಕೆಲ ಪ್ರಶ್ನೆಗಳಿಗೆ ಉತ್ತರಿಸಿದರು. ಸಭೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಬೀನಾ ಸುಚಿತ್ರ, ಸದಸ್ಯರಾದ ಚೋಯಮಾಡಂಡ ಹರಿ ಮೊಣ್ಣಪ್ಪ, ಲೀಲಾವತಿ, ನಂಬುಡಮಂಡ ಶೈಲ,…
ಮಡಿಕೇರಿ ಜ.7 NEWS DESK : ನವದೆಹಲಿಯಲ್ಲಿ ಜ.12 ರಂದು ನಡೆಯಲಿರುವ ರಾಷ್ಟ್ರಮಟ್ಟದ ಯುವ ಜನೋತ್ಸವದಲ್ಲಿ ಕೊಡಗಿನ ಶ್ವೇತನ್ ಜಿ.ರೈ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಭಾರತ ಸರ್ಕಾರದ ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಮಡಿಕೇರಿ, ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಯುವ ಒಕ್ಕೂಟ ಕೊಡಗು, ತಾಲ್ಲೂಕು ಯುವ ಒಕ್ಕೂಟ ಮಡಿಕೇರಿ, ಸೋಮವಾರಪೇಟೆ, ಹಾಗೂ ವಿರಾಜಪೇಟೆ, ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಜನೋತ್ಸವದ ವೈಯಕ್ತಿಕ ವಿಜ್ಞಾನ ಮೇಳ ವಿಭಾಗದಲ್ಲಿ ಭಾಗವಹಿಸಿದ ಶ್ವೇತನ್ ಜಿ.ರೈ ಪ್ರಥಮ ಸ್ಥಾನ ಗಳಿಸಿದ್ದರು. ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ವಿಜ್ಞಾನ ಮೇಳದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಯುವ ಜನೋತ್ಸವದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಎಂದು ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ತಿಳಿಸಿದ್ದಾರೆ. ಕಳತ್ಮಾಡ್ ಲಯನ್ಸ್ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಯಾಗಿರುವ…
ನಾಪೋಕ್ಲು ಜ.8 NEWS DESK : ಪಟ್ಟಣದಲ್ಲಿ ವಾಹನ ದಟ್ಟಣೆ ನಿಯಂತ್ರಿಸುವ ಸಲುವಾಗಿ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಲು ಜ.8 ರಂದು ಪಟ್ಟಣದ ಅಂಗಡಿ ಮಾಲೀಕರ ತುರ್ತು ಸಭೆಯನ್ನು ಕರೆಯಲಾಗಿದೆ ಎಂದು ಠಾಣಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ. ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಬೆಳಗ್ಗೆ 10.30 ಗಂಟೆಗೆ ಅಂಗಡಿ ಮಾಲೀಕರ ಸಭೆ ನಡೆಯಲಿದ್ದು, ಎಲ್ಲ ಅಂಗಡಿ ಮಾಲೀಕರು ಸಮಯಕ್ಕೆ ಸರಿಯಾಗಿ ಆಗಮಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ. ವರದಿ : ದುಗ್ಗಳ ಸದಾನಂದ.
ವಿರಾಜಪೇಟೆ ಜ.7 NEWS DESK : ವಿರಾಜಪೇಟೆಯ ಮಟನ್ ಮಾರ್ಕೆಟ್ ಬಳಿ ಇರುವ ಆಟೋ ನಿಲ್ದಾಣಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ ನೀಡಿ ಆಟೋ ಚಾಲಕರ ಮನವಿಗೆ ಸ್ಪಂದಿಸಿದರು. ವಿರಾಜಪೇಟೆಯ ಮಟನ್ ಮಾರ್ಕೆಟ್ ಬಳಿ ಹಲವಾರು ವರ್ಷದಿಂದ ಇದ್ದ ಆಟೋ ನಿಲ್ದಾಣವನ್ನು ಬದಲಾಯಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ ಹಿನ್ನೆಲೆ ಆಟೋ ಚಾಲಕರು ಶಾಸಕರೊಂದಿಗೆ ತಮ್ಮ ನೋವನ್ನು ಹೇಳಿಕೊಂಡರು. ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಆಟೋ ಚಾಲಕರ ಅಹವಾಲುಗಳನ್ನು ಆಲಿಸಿದ ಶಾಸಕರು, ಸ್ಥಳೀಯ ವ್ಯಾಪಾರಿಗಳಿಗೆ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಅಲ್ಲಿಯೇ ಆಟೋ ನಿಲ್ದಾಣವನ್ನು ಚಾಲಕರ ಇಚ್ಛೆಯಂತೆ ಮುಂದುವರೆಯಲು ಸೂಚನೆ ನೀಡಿದರು. ಅಲ್ಲದೇ ತಾವೇ ಸ್ವತಹ ಆಟೋವನ್ನು ಚಾಲನೆ ಮಾಡುವ ಮೂಲಕ ಆಟೋ ಚಾಲಕರೊಂದಿಗೆ ತಾನು ಸದಾ ಇದ್ದೇನೆ ಎಂದು ಸಂದೇಶ ಸಾರಿದರು. ಈ ಸಂದರ್ಭ ಆಟೋ ಚಾಲಕರು ಹಾಗೂ ಸಾರ್ವಜನಿಕರು ಶಾಸಕರಿಗೆ ಜಯ ಘೋಷ ಕೂಗಿ ಹರ್ಷ ವ್ಯಕ್ತಪಡಿಸಿದರು. ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ…
ಮಡಿಕೇರಿ NEWS DESK ಜ.7 : ಹುಲಿ ದಾಳಿಯಿಂದ ಹಸುವೊಂದು ಸಾವನ್ನಪ್ಪಿರುವ ಘಟನೆ ಪೊನ್ನಂಪೇಟೆಯ ಮಾಯಮುಡಿ ಗ್ರಾಮದಲ್ಲಿ ನಡೆದಿದೆ. ಕೊಂಗಂಡ ನಂಜಪ್ಪ ಎಂಬುವವರಿಗೆ ಸೇರಿದ ಹಸು ಇದಾಗಿದ್ದು, ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಹಾಗೂ ಗ್ರಾ.ಪಂ ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹುಲಿ ಮಾಯಮುಡಿ ವ್ಯಾಪ್ತಿಯಲ್ಲೇ ಇರುವುದರಿಂದ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಎಚ್ಚರಿಕೆಯಿಂದ ಇರುವಂತೆ ಮಾಯಮುಡಿ ಗ್ರಾ.ಪಂ ಅಧ್ಯಕ್ಷ ಟಾಟು ಮೊಣ್ಣಪ್ಪ ಮನವಿ ಮಾಡಿದ್ದಾರೆ.
ಬೆಂಗಳೂರು NEWS DESK ಜ.7 : ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ವಿಮಾನ ನಿಲ್ದಾಣ ಮೊದಲ ಹಂತದ ವಿಸ್ತರಣೆಗಾಗಿ ಭೂಮಿ ಹಸ್ತಾಂತರ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಮಧ್ಯ ಪ್ರವೇಶಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿಗಳ ನಿವಾಸ “ಕಾವೇರಿ”ಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಮವಾರ ಬೆಳಗ್ಗೆ ಭೇಟಿ ಮಾಡಿದ ಸಂಸದರು ಮನವಿ ಸಲ್ಲಿಸಿ, ಮೈಸೂರು ಕ್ಷೇತ್ರದಲ್ಲಿ ಆಗಬೇಕಾಗಿರುವ ಅಭಿವೃವೃದ್ಧಿ ಯೋಜನೆಗಳು ಹಾಗೂ ಇತರೆ ವಿಷಯಗಳ ಬಗ್ಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಿದರು. ಮೈಸೂರು ಸಾಂಸ್ಕೃತಿಕ ರಾಜಧಾನಿಯಾಗಿದೆ ಹಾಗೂ ಇತ್ತೀಚೆಗೆ ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿರುವುದರಿಂದ ದೇಶ-ವಿದೇಶಗಳಿಂದ ಆಗಮಿಸುವ ಪ್ರಯಾಣಿಕರಿಗೆ, ಉದ್ಯಮಿಗಳಿಗೆ, ಅನುಕೂಲವಾಗಲು ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಮಾಡಬೇಕಾದ ತುರ್ತು ಅಗತ್ಯವಿದೆ. ಈ ನಿಟ್ಟಿನಲ್ಲಿ 46 ಎಕರೆ ಭೂಮಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಲು ಮಧ್ಯಪ್ರವೇಶಿಸಬೇಕು ಎಂದು ಸಿದ್ದರಾಮಯ್ಯ ಅವರಿಗೆ ಯದುವೀರ್ ಮನವಿ ಮಾಡಿದರು. ಈಗಾಗಲೇ ಭೂ ಸ್ವಾಧೀನಕ್ಕೆ ವಿಶೇಷ…
ಮಡಿಕೇರಿ ಜ.7 NEWS DESK : ಅಖಿಲ ಭಾರತ ಟೆಕ್ವಾಂಡೊ ಅಸೋಸಿಯೇಷನ್ ವತಿಯಿಂದ ನಡೆದ 27ನೇ ಎಐಟಿಎ ರಾಷ್ಟ್ರೀಯ ಐಟಿಎಫ್ ಟೆಕ್ವಾಂಡೊ ಚಾಂಪಿಯನ್ ಶಿಪ್ ನಲ್ಲಿ ಬಲಂಬೇರಿ ಗ್ರಾಮದ ಬೊಳ್ತಂಡ ಸಿ.ಜಸ್ಮಿತಾ ಚಿನ್ನ ಹಾಗೂ ಕಂಚಿನ ಪದಕ ಗೆದ್ದುಕೊಂಡಿದ್ದಾಳೆ. ನವದೆಹಲಿಯ ರಾಜ್‌ಘಾಟ್‌ನ ಇಂದಿರಾ ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಸ್ಟೇಡಿಯಂನಲ್ಲಿ ನಡೆದ 14ರ ಒಳಗಿನ ವಯೋಮಿತಿಯ ಬಾಲಕಿಯರ ವಿಭಾಗದ ಸ್ಪರಿಂಗ್ ವಿಭಾಗದಲ್ಲಿ ಪ್ರಥಮ ಹಾಗೂ ಸೆಲ್ಫ್‌ಡಿಫೆನ್ಸ್ ವಿಭಾಗದಲ್ಲಿ ಕಂಚಿನ ಪದಕ ಸಾಧನೆ ಮಾಡಿದ್ದಾಳೆ. ಬೊಳ್ತಂಡ ಸಿ.ಜಸ್ಮಿತಾ ಬೆಂಗಳೂರಿನಲ್ಲಿ ನೆಲೆಸಿದ್ದು, ಮೂಲತಃ ಮೂರ್ನಾಡು ಸಮೀಪದ ಬಲಂಬೇರಿ ಗ್ರಾಮದ ಬೊಳ್ತಂಡ ಚಂಗಪ್ಪ ಹಾಗೂ ನಮಿತಾ (ತಾಮನೆ-ಗಿಜಿಗಂಡ) ದಂಪತಿ ಪುತ್ರಿ. ಬೆಂಗಳೂರಿನ ಖಾಸಗಿ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಳೆದ ಒಂದುವರೆ ವರ್ಷದಿಂದ ತರಬೇತುದಾರರಾದ ಗಂಗಾಧರ್ ಹಾಗೂ ಅನಿಲ್ ಅವರಿಂದ ಕರಾಟೆ ತರಬೇತಿ ಪಡೆಯುತ್ತಿದ್ದಾಳೆ.






