ಮಡಿಕೇರಿ NEWS DESK ಜ.4 : ದ್ವಿಚಕ್ರ ವಾಹನ ಸವಾರನ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ಮಡಿಕೇರಿ ತಾಲ್ಲೂಕಿನ ಜೋಡುಪಾಲದಲ್ಲಿ ನಡೆದಿದೆ. ಸ್ಥಳೀಯ ಕಾರ್ಮಿಕ ಮುತ್ತಯ್ಯ ಎಂಬುವವರು ಎಂದಿನಂತೆ ಬೆಳಗಿನ ಜಾವ ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭ ಜೋಡುಪಾಲದ 10ನೇ ಮೈಲ್ ಬಳಿ ಕಾಡಾನೆ ದಾಳಿ ನಡೆಸಿದೆ. ಮುತ್ತಯ್ಯ ಅವರು ಆನೆ ದಾಳಿಯಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಕಾಡಾನೆ ದ್ವಿಚಕ್ರ ವಾಹನವನ್ನು ತುಳಿದು ಜಖಂಗೊಳಿಸಿದೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಲೇಖಕ: admin
ಮಡಿಕೇರಿ NEWS DESK ಜ.4 : ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪಥ ಸಂಚಲನಕ್ಕೆ ಕೊಡಗಿನ ಮನ್ನೆರ ಪ್ರಶಸ್ತಿ ಆಯ್ಕೆಯಾಗಿದ್ದಾರೆ. ಮನ್ನೆರ ಪ್ರಶಸ್ತಿ ಅವರು ಕರ್ನಾಟಕ ಮತ್ತು ಗೋವಾ ಬೆಟಾಲಿಯನ್ ಏರ್ ವಿಂಗ್‌ನಿಂದ ಆಯ್ಕೆಯಾಗಿದ್ದಾರೆ. ಇವರು ಮೂಲತಃ ಪೊನ್ನಂಪೇಟೆ ತಾಲ್ಲೂಕು ಹರಿಹರ ಗ್ರಾಮದ ನಿವಾಸಿ ಮನ್ನೆರ ಮನು ಹಾಗೂ ಸೌಮ್ಯ ದಂಪತಿ ಪುತ್ರಿಯಾಗಿದ್ದು, ಪ್ರಸ್ತುತ ಮೂಡಬಿದ್ರೆಯ ಆಳ್ವಾಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.
ಮಡಿಕೇರಿ NEWS DESK ಜ.4 : ದೇವಾಲಯದ ಕಾಣಿಕೆ ಹುಂಡಿ ಕಳ್ಳತನ ಮಾಡಲು ಯತ್ನಿಸಿದ ಪ್ರಕರಣ ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಶ್ರೀಮುತ್ತಪ್ಪ ಹಾಗೂ ಐಶ್ವರ್ಯ ಗಣಪತಿ ದೇವಸ್ಥಾನದಲ್ಲಿ ನಡೆದಿದೆ. ಶುಕ್ರವಾರ ಮಧ್ಯರಾತ್ರಿ ಸುಮಾರು 1.45 ಗಂಟೆ ವೇಳೆ ದೇವಾಲಯದ ಆವರಣಕ್ಕೆ ಬಂದ ಚೋರರು ಹುಂಡಿಯನ್ನು ಕದ್ದು ಹೊರಗೆ ಬಂದಿದ್ದಾರೆ. ಈ ಸಂದರ್ಭ ನಾಯಿಗಳು ಬೊಗಳಿದ್ದು, ಅಕ್ಕಪಕ್ಕದ ಮನೆಯವರು ಹೊರ ಬಂದಿದ್ದಾರೆ. ಆತಂಕಗೊಂಡ ಕಳ್ಳರು ಕಾಣಿಕೆ ಹುಂಡಿಯನ್ನು ಅಲ್ಲೇ ಬಿಟ್ಟು ಪಕ್ಕದ ಕಾಡಿನೊಳಗೆ ಪರಾರಿಯಾಗಿದ್ದಾರೆ. ಗ್ರಾಮಸ್ಥರು ಸೇರಿ ಹುಡುಕಾಡಿದರೂ ಪರಾರಿಯಾದವರು ಪತ್ತೆಯಾಗಲಿಲ್ಲ. ದೇವಾಲಯದ ಆಡಳಿತ ಮಂಡಳಿ ನೀಡಿದ ದೂರಿನ ಹಿನ್ನೆಲೆ ಸಿದ್ದಾಪುರ ಪೊಲೀಸರು ಶ್ವಾನದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚೋರರ ಪತ್ತೆಗೆ ತನಿಖೆ ಮುಂದುವರೆದಿದೆ. ಮಾಲ್ದಾರೆ ಭಾಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹುಣಸೂರು NEWS DESK ಜ.4 : ಕಾರು ಮತ್ತು ಓಮ್ನಿ ನಡುವೆ ಡಿಕ್ಕಿ ಸಂಭವಿಸಿ ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮೈಸೂರು-ಹುಣಸೂರು ಹೆದ್ದಾರಿಯ ಸೋಮನಹಳ್ಳಿ ಬಳಿ ಹೆದ್ದಾರಿಯಲ್ಲಿ ನಡೆದಿದೆ. ಮೈಸೂರು ಕಡೆಯಿಂದ ಬರುತ್ತಿದ್ದ ತಮಿಳುನಾಡು ಭಾಗದ ಕಾರು ಮತ್ತು ಹುಣಸೂರು ಕಡೆಯಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಚಿತ್ರದುರ್ಗದ ಓಮ್ನಿ ನಡುವೆ ಡಿಕ್ಕಿ ನಡುವೆ ಡಿಕ್ಕಿ ಸಂಭವಿಸಿ ಕಾರು ಮಗುಚಿಕೊಂಡಿತು. ಓಮ್ನಿ ಸಂಪೂರ್ಣವಾಗಿ ಜಖಂಗೊಂಡಿದೆ. ಎರಡೂ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿಗೆ ಗಂಭೀರ ಗಾಯಗಳಾಗಿದ್ದು, ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಹೆದ್ದಾರಿಯಲ್ಲಿ ವಾಹನದಟ್ಟಣೆ ಏರ್ಪಟ್ಟು ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿತು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಡಿಕೇರಿ ಜ.4 NEWS DESK : ಜಿಲ್ಲಾ ಕ್ರೀಡಾಂಗಣದಲ್ಲಿರುವ ಕಿರಿಯ ಕ್ರೀಡಾ ವಸತಿ ನಿಲಯಕ್ಕೆ ಅಥ್ಲೆಟಿಕ್ಸ್ ಮತ್ತು ಹಾಕಿ ಕ್ರೀಡೆಯಲ್ಲಿ 2025-26 ನೇ ಸಾಲಿಗೆ ಪ್ರತಿಭಾನ್ವಿತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯು ಜನವರಿ, 16 ರಂದು ಮಡಿಕೇರಿ ತಾಲ್ಲೂಕಿನವರಿಗೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ, ಜ.17 ರಂದು ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕಿನವರಿಗೆ ಕೂಡಿಗೆ ಸರ್ಕಾರಿ ಕ್ರೀಡಾ ಶಾಲೆಯಲ್ಲಿ, ಜನವರಿ, 18 ರಂದು ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕಿನವರಿಗೆ ಪೊನ್ನಂಪೇಟೆಯ ತಾಲ್ಲೂಕು ಮಿನಿ ಕ್ರೀಡಾಂಗಣದಲ್ಲಿ ಪ್ರತಿಭಾನ್ವಿತ ಕ್ರೀಡಾಪಟುಗಳ ಆಯ್ಕೆ ನಡೆಯಲಿದೆ. ಕ್ರೀಡಾ ಶಾಲೆಯ ಆಯ್ಕೆಗೆ 01-06-2025 ಕ್ಕೆ 11 ವರ್ಷದೊಳಗಿರಬೇಕು.(ಅಂದರೆ 01-06-2014 ರ ನಂತರ ಜನಿಸಿರಬೇಕು), 2025-26ನೇ ಸಾಲಿಗೆ 5ನೇ ತರಗತಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಹಾಕಿ ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು 140 ಸೆಂ.ಮೀ. ಎತ್ತರವಿರಬೇಕು. ಹೆಚ್ಚಿನ ಮಾಹಿತಿಗೆ ಬಿ.ಜಿ.ಮಂಜುನಾಥ್, ಅಥ್ಲೇಟಿಕ್ ತರಬೇತುದಾರರು, ಕ್ರೀಡಾ ಶಾಲೆ ಕೂಡಿಗೆ ಸೋಮವಾರಪೇಟೆ ಮತ್ತು ಕುಶಾಲನಗರಕ್ಕೆ ದೂ.ಸಂ. 9342563014, ವೆಂಕಟೇಶ್ ಬಿ.ಎಸ್. ಹಾಕಿ ತರಬೇತುದಾರರು, ಕ್ರೀಡಾ…
ಮಡಿಕೇರಿ ಜ.4 NEWS DESK : ದುಶ್ಚಟಗಳಿಂದ ದೂರವಿರಲು ಸಹಕಾರಿಯಾಗಿರುವ ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾಥಿ೯ಗಳು ಕ್ರಿಯಾಶೀಲರಾಗಿ ಪಾಲ್ಗೊಳ್ಳುವ ಮೂಲಕ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವನ್ನು ಸಂರಕ್ಷಿಸಲು ಸಾಧ್ಯ ಎಂದು ಉದ್ಯಮ ತಜ್ಞ ಕೊಕ್ಕಲೇರ ಕುಮಾರ್ ಸುಬ್ಬಯ್ಯ ಅಭಿಪ್ರಾಯಪಟ್ಟಿದ್ದಾರೆ. ನಗರದ ಕೊಡಗು ವಿದ್ಯಾಲಯದ ಕ್ರೀಡಾ ದಿನಾಚರಣೆಯನ್ನು ಕ್ರೀಡಾಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿಯೂ ಕ್ರೀಡೆ ರಹಿತವಾದ ಶಿಕ್ಷಣ ಪ್ರಯೋಜನಕಾರಿಯಾಗದು. ಕ್ರೀಡಾ ತರಬೇತಿಯೊಂದಿಗಿನ ವಿದ್ಯೆಯು ಶಿಕ್ಷಣವನ್ನು ಪರಿಪೂಣ೯ಗೊಳಿಸುತ್ತದೆ ಎಂದರಲ್ಲದೇ, ಹಿರಿಯರು ಹೇಗೆ ವತಿ೯ಸುತ್ತಾರೆ ಎಂಬುದನ್ನೇ ಕಿರಿಯರೂ ಅನುಕರಿಸುವುದರಿಂದಾಗಿ ಹಿರಿಯರ ನಡವಳಿಕೆ ಕಿರಿಯರ ಪಾಲಿಗೆ ಮಾಗ೯ದಶಿ೯ಯಾಗಿರಬೇಕು ಎಂದು ಸಲಹೆ ನೀಡಿದರು, ಕ್ರಿಕೆಟ್ , ಹಣ ಮತ್ತು ಖ್ಯಾತಿ ತಂದುಕೊಂಡುವ ಕ್ರೀಡೆಯಾಗಿದ್ದರೂ ಕ್ರಿಕೆಟ್ ನಲ್ಲಿ ಸೀಮಿತ ಅವಕಾಶಗಳಿದೆ, ಹೀಗಾಗಿ ಭಾರತದಲ್ಲಿ ಇರುವ ಇತರ ಕ್ರೀಡೆಗಳಲ್ಲಿಯೂ ಪಾಲ್ಗೊಳ್ಳಲು ಕ್ರೀಡಾವಿದ್ಯಾಥಿ೯ಗಳು ಆಸಕ್ತಿ ತೋರುವ ಮೂಲಕ ಉತ್ತಮ ಕ್ರೀಡಾತಾರೆಗಳಾಗಿ ಹೊರಹೊಮ್ಮಲು ಸಾಧ್ಯವಿದೆ ಎಂದೂ ಅವರು ಅಭಿಪ್ರಾಯಪಟ್ಟರು. ಪೋಷಕರು, ಶಿಕ್ಷಕರು, ಹಿರಿಯರಿಗೆ ಸದಾ ಗೌರವ ನೀಡಿ ಎಂದು ವಿದ್ಯಾಥಿ೯…
ಮಡಿಕೇರಿ ಜ.4 NEWS DESK : ನಿರಂತರ ಅಧ್ಯಯನ ಮತ್ತು ಕಾರ್ಯ ತತ್ಪರತೆ ತಮ್ಮನ್ನು ಸಾಧಕರ ಸಾಲಿನಲ್ಲಿ ನಿಲ್ಲಿಸುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಕೋರನ ಸರಸ್ವತಿ ಹೇಳಿದರು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವ ಮತ್ತು ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭವು ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಒಂದು ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿದ್ದು, ಪ್ರತೀ ವರ್ಷವೂ ಉತ್ತಮ ಫಲಿತಾಂಶ ದಾಖಲಾಗುತ್ತಿದೆ. ಈ ಸಂಸ್ಥೆಯಲ್ಲಿ ಅಧ್ಯಯನ ಮಾಡಿ ಉನ್ನತ ಹುದ್ದೆಗೇರಿರುವ ಅನೇಕ ಹಿರಿಯ ವಿದ್ಯಾರ್ಥಿಗಳು ಇತಿಹಾಸವನ್ನೆ ನಿರ್ಮಾಣ ಮಾಡಿದ್ದಾರೆ ಎಂದು ಬಣ್ಣಿಸಿದರು. ವಿದ್ಯಾರ್ಥಿಗಳು ತಮ್ಮ ಹೆಜ್ಜೆ ಗುರುತುಗಳನ್ನು ವಿದ್ಯಾಸಂಸ್ಥೆಯಲ್ಲಿ ಬಿಟ್ಟು ಹೋದರೆ ಅದು ಮುಂಬರುವ ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿದೆ ಎಂದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಆರ್.ವಿಜಯ್, ‘ವಿದ್ಯಾರ್ಥಿಗಳು ಸ್ನೇಹಿತರ ಮಾತು ಕೇಳದೆ,…
ಮಡಿಕೇರಿ ಜ.4 NEWS DESK : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶಾಲಾ ಶಿಕ್ಷಣ, ಪದವಿ ಪೂರ್ವ ಶಿಕ್ಷಣ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪದವಿ ಪೂರ್ವ ಕಾಲೇಜು, ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆ ಇವರ ಸಹಯೋಗದಲ್ಲಿ ಕುವೆಂಪು ರಚಿಸಿರುವ ‘ನಾಡಗೀತೆಗೆ ನೂರು ವರ್ಷ’ ಸಹಸ್ರ ಕಂಠ ಗಾಯನ ಕಾರ್ಯಕ್ರಮವು ನಡೆಯಿತು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನೋತ್ಸವ ಹಾಗೂ ಕುವೆಂಪು ರಚಿತ ನಾಡಗೀತೆ ಆಶಯಕ್ಕೆ ನೂರು ವರ್ಷ ಪ್ರಯುಕ್ತ ನಾಡಗೀತೆ ಸಹಸ್ರ ಕಂಠ ಗಾಯನ ಕಾರ್ಯಕ್ರಮ ಜರುಗಿತು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ನಾಡು ಕಂಡ ಶ್ರೇಷ್ಠ ಕವಿ ಕುವೆಂಪು ಅವರು ನಾಡಗೀತೆ ರಚಿಸಿ ನೂರು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ಸಹಸ್ರ ಕಂಠ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಶಾಲಾ ಕಾಲೇಜು ಹಂತದಲ್ಲಿ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಕುವೆಂಪು ಅವರು ನಾಡಿಗೆ…
ಮಡಿಕೇರಿ ಜ.4 NEWS DESK : ಕೊಡಗಿನ ಮೂಲ ನಿವಾಸಿ ಜನಾಂಗವಾಗಿರುವ ಕೊಡವರು, ಇಂದು ತಮ್ಮ ಅಸ್ತಿತ್ವಕ್ಕಾಗಿ ತಮ್ಮ ತಾಯಿನೆಲದಲ್ಲಿಯೇ ಹೋರಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ತಮ್ಮತನವನ್ನು ಕಾಯ್ದುಕೊಳ್ಳಲು, ಕೊಡವಾಮೆಯ ಬೇರನ್ನು ಗಟ್ಟಿಗೊಳಿಸುವಲ್ಲಿ ಏಳ್‌ನಾಡ್ ಕೊಡವರ ಜವಾಬ್ದಾರಿ ಅಧಿಕವಾಗಿದ್ದು, ಈ ನಿಟ್ಟಿನಲ್ಲಿ ಇಲ್ಲಿನ ನಾಲ್ಕು ಕೊಡವ ಸಮಾಜಗಳು ಒಮ್ಮತದ ಯೋಜನೆ ತಯಾರಿಸಬೇಕಿದೆ ಎಂದು ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ, ನಡುಬಾಡೆ ಸಂಪಾದಕ ಚಾಮೆರ ದಿನೇಶ್ ಬೆಳ್ಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಮಕ್ಕಂದೂರು ಕೊಡವ ಸಮಾಜದ ಆಶ್ರಯದಲ್ಲಿ ನಡೆದ ಉಮ್ಮೇಟಿ ಕೋಲ್ ಮಂದ್ ಮತ್ತು ಪುತ್ತರಿ ಊರೋರ್ಮೆ ಕಾರ್ಯಕ್ರಮವನ್ನು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಏಳ್‌ನಾಡ್ ಎಂದರೆ ಕೊಡವಾಮೆಯ ಗೂಡು ಎನ್ನುವ ನಂಬಿಕೆ ಇದೆ. ಆದರೆ ಅದು ಇಂದಿನ ಕಾಲದಲ್ಲಿ ಎಷ್ಟರ ಮಟ್ಟಿಗೆ ಆ ಗೂಡನ್ನ ಉಳಿಸಿಕೊಂಡಿದ್ದೇವೆ ಎನ್ನುವುದನ್ನ ನಾವು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾದ ಸಮಯ ಬಂದಿದೆ ಎಂದರು. ಕೊಡಗಿನ ಮೂರು ಪ್ರಮುಖ ಭಾಗಗಳಾದ ಕ್‌ಗ್ಗಟ್ಟ್, ಮೇಂದಲೆ ಮತ್ತು ಏಳ್‌ನಾಡ್ ಭಾಗಗಳನ್ನು…
ಕುಶಾಲನಗರ ಜ.4 NEWS DESK : ರಾಜ್ಯದಲ್ಲಿಯೇ ಪ್ರಥಮ ಹಾಲಿನ ಡೈರಿ ಎಂಬ ಹೆಸರು ಗಳಿಸಿರುವ ಕೂಡಿಗೆ ಹಾಲಿನ ಡೈರಿಯು ಸದ್ಯದಲ್ಲೇ ಮೇಲ್ದರ್ಜೆಗೆ ಏರಲಿದ್ದು, ಮುಂದಿನ ದಿನಗಳಲ್ಲಿ ನಮ್ಮ ಡೈರಿಯಲ್ಲಿ ಮೊಸರು ಹಾಗೂ ಮಜ್ಜಿಗೆ ಉತ್ಪನ್ನ ತಯಾರಿಕೆ ಘಟಕ ಸ್ಥಾಪಿಸುವ ಯೋಜನೆ ರೂಪಿಸಲಾಗಿದೆ ಎಂದು ಹಾಸನ ಹಾಲು ಒಕ್ಕೂಟ ಕೊಡಗು ಘಟಕದ ನಿರ್ದೇಶಕರಾದ ಕೆ.ಕೆ. ಹೇಮಂತ್ ಕುಮಾರ್ ತಿಳಿಸಿದ್ದಾರೆ. ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದಿಂದ ಕೂಡಿಗೆ ಹಾಲಿನ ಡೈರಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 1955ರಲ್ಲಿ ರಾಜ್ಯದಲ್ಲಿಯೇ ಪ್ರಥಮ ಹಾಲಿನ ಡೈರಿಯಾಗಿ ಕೂಡಿಗೆ ಡೈರಿ ಸ್ಥಾಪನೆಗೊಂಡಿದೆ. ಇದನ್ನು ಮದರ್ ಡೈರಿ ಎಂದು ಕೂಡ ಕರೆಯಲಾಗುತ್ತದೆ. ಇದೀಗ ಕಚೇರಿಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ರು.34 ಲಕ್ಷ ವೆಚ್ಚದಲ್ಲಿ ತಾತ್ಕಾಲಿಕ ಕಚೇರಿ ನಿರ್ವಹಣೆಗೆ ಕಟ್ಟಡ ನಿರ್ಮಿಸಲಾಗುವುದು. ಅಲ್ಲದೆ ಮುಂದಿನ ದಿನಗಳಲ್ಲಿ ರು.20 ಕೋಟಿ ವೆಚ್ಚದಲ್ಲಿ ಕೂಡಿಗೆ ಡೈರಿಯನ್ನು ಸಂಪೂರ್ಣವಾಗಿ ಮೇಲ್ದರ್ಜೆಗೇರಿಸಲಾವುದು ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಸುಮಾರು 39 ಹಾಲು…






