ಶ್ರೀ ಕಾಂತೇಶ್ವರ ದೇವಸ್ಠಾನ, ಕಾಂತಾವರ ಶಿಲ್ಪ ಕಲೆಗಳ ಬೀಡಾದ ಕರ್ನಾಟಕವು ಅನೇಕ ಪುಣ್ಯ ಕ್ಷೇತ್ರಗಳಿಗೆ ಸಾಕ್ಷಿಯಾಗಿದೆ. ಅಂತಹವುಗಳಲ್ಲಿ ಕರಾವಳಿಯ ಪಶ್ಚಿಮ ಘಟ್ಟದ ತಪ್ಪಲ್ಲಿನಲ್ಲಿರುವ ಶಿವನ ದೇಗುಲವಾದ ಕಾಂತಾವರದ ಕಾಂತೇಶ್ವರ ದೇವಾಲಯವೂ ಒಂದಾಗಿದೆ. ಕಾಂತೇಶ್ವರ ದೇವಸ್ಥಾನವು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದಲ್ಲಿದೆ. ಇದು ಉಡುಪಿಯಿಂದ ೪೦ ಕಿ.ಮೀ ದೂರದಲ್ಲಿದೆ. ಇದು ಪಡುಬಿದ್ರಿಯಿಂದ ಕಾರ್ಕಳಕ್ಕೆ ಹೋಗುವ ರಸ್ತೆಯಲ್ಲಿನ ಬೆಳವಾಯಿಯಿಂದ ಸ್ವಲ್ಪವೇ ದೂರದಲ್ಲಿದೆ. ಇತಿಹಾಸ :: ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾದ ಈ ದೇವಸ್ಥಾನ 7ನೇ ಶತಮಾನಕ್ಕೆ ಸೇರಿದ್ದು ಎನ್ನಲಾಗುತ್ತದೆ. ಇಲ್ಲಿನ ಮೂಲದೈವ ಕಾಂತೇಶ್ವರ. ಇಲ್ಲಿ ಗಣೇಶ, ಅಣ್ಣಪ್ಪ ಹಾಗೂ ಅರ್ಧನಾರೀಶ್ವರ ಗುಡಿಯೂ ಇದೆ. ಕಾಂತಾರ ಎಂದರೆ ಅರಣ್ಯ. ಈ ಕ್ಷೇತ್ರವು ಹಿಂದೆ ಅರಣ್ಯದಿಂದ ಕೂಡಿತ್ತು ಈ ಕಾರಣದಿಂದಾಗಿ ಈ ಊರಿಗೆ ಕಾಂತವರ ಎಂಬ ಹೆಸರು ಬಂದಿದೆ ಎಂಬ ಪ್ರತೀತಿಯಿದೆ. ಹಾಗೆಯೇ ಜಂಜವಾತ ಎನ್ನುವ ಅಸುರನ ಕುಟುಂಬ ಇಲ್ಲಿ ನೆಲೆಸಿದ್ದರಂತೆ. ಅವರ ಕುಟುಂಬ ಇಲ್ಲಿ ತಪಸ್ಸು ಮಾಡುತ್ತಿದ್ದ ಮುನಿಗಳಿಗೆ ಕಾಟ ನೀಡುತ್ತಿದ್ದರಂತೆ. ಅವರಲ್ಲಿ…
ಲೇಖಕ: admin
ಮಡಿಕೇರಿ ಜ.3 NEWS DESK : ಸದೃಢ ಸಮಾಜ ನಿರ್ಮಾಣವಾಗಬೇಕಾದರೆ ಉತ್ತಮ ಶಿಕ್ಷಣದಿಂದ ಮಾತ್ರ ಸಾಧ್ಯವೆಂದು ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್ ಅಭಿಪ್ರಾಯಟ್ಟರು. ನಾಪೋಕ್ಲು ಬಳಿಯ ಹೊದವಾಡ ಗ್ರಾಮದ ರಾಫೆಲ್ಸ್ ಇಂಟರ್ನ್ಯಾಷನಲ್ ಇಂಗ್ಲಿಷ್ ಸ್ಕೂಲ್ ಮತ್ತು ಪಿ.ಯು ಕಾಲೇಜು ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿರು. ಜೀವನದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಮಾರ್ಗದರ್ಶಕರಾಗಿಸಿ, ಇಂದಿನ ವಿದ್ಯಾರ್ಥಿಗಳು ಹಲವು ವಿಷಯವನ್ನು ಕಲಿಯಬೇಕಾಗಿದೆ. ಮೊಬೈಲ್ ನಲ್ಲಿ ರೀಲ್ಸ್ ನೋಡಿ ಸಮಯ ವ್ಯರ್ಥ ಮಾಡದೆ ಉತ್ತಮ ರೀತಿಯಲ್ಲಿ ಸಮಯನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬಹುದು ಎಂಬುವುದನ್ನು ವಿದ್ಯಾರ್ಥಿಗಳು ಮನದಟ್ಟು ಮಾಡಿಕೊಳ್ಳಬೇಕು ಎಂದರು. ಸ್ವಾಮಿ ವಿವೇಕಾನಂದರಿಗಿದ್ದ ಏಕಾಗ್ರತೆ ಇದ್ದರೆ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ. ಮಾದಕ ದ್ರವ್ಯಗಳಿಗೆ ಬಲಿಯಾಗದೆ, ಹೇಗೆ ಜೀವನದಲ್ಲಿ ಗುರಿ ಸಾಧಿಸಬಹುದು ಎಂಬುವುದರ ಬಗ್ಗೆ ಯುವ ಸಮೂಹ ಚಿಂತಿಸಬೇಕಾಗಿದೆ. ತೋರ್ಪಡಿಸುವಿಕೆಯ ಜೀವನ ನಿಲ್ಲಿಸಿ ಸ್ವಪ್ರಯತ್ನದಿಂದ ಹೇಗೆ ಜೀವನದಲ್ಲಿ ಮುಂದೆ ಬರಬಹುದೆಂದು ಯೋಚಿಸಬೇಕೆಂದು ಅವರು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪದ್ಮಶ್ರೀ…
ಪ್ರತಿಯೊಬ್ಬರೂ ತಮ್ಮ ಚರ್ಮವು ಕಲೆರಹಿತವಾಗಿ ಕಾಂತಿಯುತಾಗಿರಬೇಕೆಂದು ಬಯಸುತ್ತಾರೆ. ತ್ವಚೆಯ ಅಂದವನ್ನು ಹೆಚ್ಚಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ಫೇಶಿಯಲ್, ಸ್ಕಿನ್ ಕೇರ್ ಪ್ಯಾಕ್, ಬ್ಯೂಟಿ ಉತ್ಪನ್ನಗಳನ್ನು ಬಳಸುತ್ತಾರೆ. ಈ ವಸ್ತುಗಳು ಚರ್ಮವನ್ನು ಸುಂದರವಾಗಿಸುತ್ತದೆ, ಆದರೆ ಮೂಗಿನ ಮೇಲಿನ ಕಪ್ಪು ಚುಕ್ಕೆಗಳಂತೆ ಕಾಣುವ ಬ್ಯಾಕ್‌ಹೆಡ್ಸ್‌ಗಳು ನಿಮ್ಮ ಮುಖದ ಅಂದವನ್ನು ಹಾಳುಮಾಡುತ್ತದೆ. ಮೂಗಿನ ಮೇಲೆ ಕಾಣಿಸಿಕೊಳ್ಳುವ ಈ ಕಪ್ಪು ಚುಕ್ಕೆಗಳ ಸಮಸ್ಯೆಗಳು ಚಳಿಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ನೀವು ಮೂಗಿನ ತುದಿಯಲ್ಲಿ ಬ್ಲ್ಯಾಕ್‌ಹೆಡ್ ಸಮಸ್ಯೆಯನ್ನು ಹೊಂದಿದ್ದರೆ ಮೊಟ್ಟೆಗಳನ್ನು ಬಳಸುವ ಮೂಲಕ ಬ್ಲ್ಯಾಕ್‌ಹೆಡ್ಸ್‌ಗಳನ್ನು ನಿವಾರಿಸಬಹುದು. ತಯಾರಿಸುವುದು ಹೇಗೆ? ಅಕ್ಕಿ ಹಿಟ್ಟು – 1/2 ಟೀಸ್ಪೂನ್ ಟಿಶ್ಯೂ ಪೇಪರ್ – 1 ಮೊಟ್ಟೆ – 1 ಮುಲ್ತಾನಿ ಮಿಟ್ಟಿ – 1/2 ಟೀಸ್ಪೂನ್ ಇದನ್ನು ತಯಾರಿಸಲು ಒಂದು ಬಟ್ಟಲಿನಲ್ಲಿ ಮೊಟ್ಟೆಯ ಬಿಳಿಭಾಗ ಮತ್ತು ಹಳದಿ ಭಾಗಗಳನ್ನು ಪ್ರತ್ಯೇಕಿಸಿ. ಈಗ ಇನ್ನೊಂದು ಬಟ್ಟಲಿನಲ್ಲಿ ಮೊಟ್ಟೆಯ ಬಿಳಿಭಾಗವನ್ನು ಹಾಕಿ. ಇದಕ್ಕೆ ಅಕ್ಕಿ ಹಿಟ್ಟು ಮತ್ತು ಮುಲ್ತಾನಿ ಮಿಟ್ಟಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್…
ಮಡಿಕೇರಿ ಜ.3 NEWS DESK : ಕರ್ನಾಟಕ ಮಾಧ್ಯಮ ಅಕಾಡೆಮಿ ವತಿಯಿಂದ ನೀಡಲಾಗುವ ವಾರ್ಷಿಕ ದತ್ತಿ ಪ್ರಶಸ್ತಿಗೆ ರಿಪಬ್ಲಿಕ್ ವಾಹಿನಿಯ ಜಿಲ್ಲಾ ವರದಿಗಾರ ಬಾಚರಣಿಯಂಡ ಅನು ಕಾರ್ಯಪ್ಪ ಆಯ್ಕೆಯಾಗಿದ್ದಾರೆ. “6 ವರ್ಷಗಳಿಂದ ಪಿಂಚಣಿ ಬರದೆ ಪರದಾಟ” ಎಂಬ ವರದಿಗೆ ಮೈಸೂರು ದಿಗಂತ ದತ್ತಿ ಪ್ರಶಸ್ತಿ ಲಭಿಸಿದೆ.
ಬೆಂಗಳೂರು ಜ.3 NEWS DESK : ರಾಜ್ಯ ಪ್ರವಾಸದಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮ ಅವರು ಬೆಂಗಳೂರಿಗೆ ಆಗಮಿಸಿದ್ದು, ಎಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆತ್ಮೀಯವಾಗಿ ಸ್ವಾಗತಿಸಿದರು. ವೈದ್ಯಕೀಯ ಶಿಕ್ಷಣ ಸಚಿವರಾದ ಶರಣಪ್ರಕಾಶ್ ಪಾಟೀಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಈ ಸಂದರ್ಭದಲ್ಲಿ ಜೊತೆಗಿದ್ದರು.
ಕಡಂಗ ಜ.3 NEWS DESK : ಮಡಿಕೇರಿ ತಾಲ್ಲೂಕಿನ ಅರಪಟ್ಟು ಗ್ರಾಮದ ಶ್ರೀ ಭಗವತಿ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿತು. ದೇವಾಲಯದಲ್ಲಿ ಮುಂಜಾನೆಯಿಂದಲೇ ಚಂಡಿಕಾ ಹೋಮ, ಸುಹಾಸಿನಿ ಪೂಜೆ, ದ್ವದಶ ಮೂರ್ತಿ ಆರಾಧನೆ ಪೂಜೆಗಳು ನೆರವೇರಿತು. ಅರಪಟ್ಟು ಪೂದವಾಡ ಗ್ರಾಮಸ್ಥರು, ದೇವಸ್ಥಾನದ ತಕ್ಕರು, ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ 2008 ರಿಂದ ಶ್ರೀ ಭಗವತಿ ಶ್ರೀ ಪಟ್ಟೋಟು ಈಶ್ವರ ಶ್ರೀ ಮಂದಣ ಮೂರ್ತಿ ದೇವಸ್ಥಾನದ ಪುನಃ ಪ್ರತಿಷ್ಠ ಜೀರ್ಣೋದ್ಧಾರ ಹಾಗೂ ಇನ್ನಿತರ ಕಾರ್ಯಗಳಲ್ಲಿ ಜ್ಯೋತಿಷ್ಯ ಸಲಹೆ ಸೂಚನೆಗಳನ್ನು ನೀಡುವುದರ ಮುಖಾಂತರ ದೇವಸ್ಥಾನದ ಅಭಿವೃದ್ಧಿಗೆ ಪಾತ್ರರಾದ ಕಕ್ಕಬ್ಬೆ ಅಮ್ಮಂಗೇರಿ ಕಣಿಯರ ಕುಟುಂಬದ ಜ್ಯೋತಿಷಿ ಹಾಗೂ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ಜ್ಯೋತಿಷಿಗಳಾದ ಶ್ರೀ ಶಶಿಕುಮಾರ್ ಪಂಡಿತ್ ಅವರಿಗೆ ಊರಿನವರು ಹಾಗೂ ಆಡಳಿತ ಮಂಡಳಿ ಸದಸ್ಯರು ದೇವಸ್ಥಾನದ ಸನ್ನಿಧಿಯಲ್ಲಿ ಸನ್ಮಾನಿಸಿ ಗೌರವಿಸಿದರು. ವರದಿ : ನೌಫಲ್
ಮಡಿಕೇರಿ ಜ.3 NEWS DESK : ಮದೆ-ಬೆಟ್ಟತ್ತೂರು-ಚೇರಂಬಾಣೆ ರಸ್ತೆ ದುರಸ್ತಿ ಕಾರ್ಯ ಭರದಿಂದ ಸಾಗಿದೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರ ಆದೇಶದ ಮೇರೆಗೆ ಈ ಕಾಮಗಾರಿ ನಡೆಸಲಾಗುತ್ತಿದ್ದು, ಗುಣಮಟ್ಟ ಕಾಯ್ದುಕೊಂಡು ಶೀಘ್ರವಾಗಿ ಕಾಮಗಾರಿಯನ್ನು ಮುಗಿಸಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ನಾಪೋಕ್ಲು ಜ.3 NEWS DESK : ಮರಂದೋಡ ಗ್ರಾಮದ ಕೊಡವ ಸಂಘದ ಮಹಾಸಭೆಯು ಸಂಘದ ಅಧ್ಯಕ್ಷರಾದ ಅನ್ನಾಡಿಯಂಡ ದಿಲೀಪ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮರಂದೋಡ ಗ್ರಾಮದ ಕೊಡವ ಕುಟುಂಬಸ್ಥರು ವರ್ಷ ಪ್ರತಿ ನಡೆಸುವ ಪುತ್ತರಿ ಕೋಲ್ ಮಂದ್, ಈಡ್ ಮಂದ್‍ಗಳನ್ನು ಮುಂದಿನ ಯುವ ಪೀಳಿಗೆಗೆ ನಡೆಸಿಕೊಂಡು ಹೋಗುವಂತೆ ಕರೆ ನೀಡಲಾಯಿತು. ಪುತ್ತರಿ ಹಬ್ಬದಲ್ಲಿ ಮಂದ್ ಗೆ ತೆರಳುವಾಗ ಕೊಡವ ಸಂಪ್ರದಾಯದಲ್ಲಿ ಕಡ್ಡಾಯವಾಗಿ ಕುಪ್ಪಸ ಧರಿಸುವಂತೆ ನಿರ್ಣಯ ಮಾಡಲಾಯಿತು. ಮೃತಪಟ್ಟ ಸಂಘದ ಸದಸ್ಯರ ಕುಟುಂಬಕ್ಕೆ ರೂ.25,000 ನೀಡುವುದನ್ನು ರೂ. 30,000ಕ್ಕೆ ಹೆಚ್ಚಿಸಿ ನಿರ್ಣಯ ಕೈಗೊಳ್ಳಲಾಯಿತು. ಮುಂದಿನ ಸಾಲಿಗೆ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಸಭೆಯಲ್ಲಿ ಸಂಘದ ಕಾರ್ಯದರ್ಶಿ ಮರ್ಚಂಡ ದೇವಯ್ಯ, ಆಡಳಿತ ಮಂಡಳಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯ ಚೋಯಮಾಡಂಡ ಹರೀಶ್ ಮೊಣ್ಣಪ್ಪ, ಮರ್ಚಂಡ ಗಣೇಶ್ ಪೊನ್ನಪ್ಪ, ಊರಿನ ತಕ್ಕರಾದ ಮರ್ಚಂಡ ಅಯ್ಯಪ್ಪ, ಮೇರಿಯಂಡ ಸೋಮಯ್ಯ, ಚೋಯಮಾಡಂಡ ಗಣಪತಿ, ಅನ್ನಾಡಿಯಂಡ ಗಣಪತಿ, ಮರ್ಚಂಡ ತಿಮ್ಮಯ್ಯ, ಚೋಯಮಾಡಂಡ ಪೂಣಚ್ಚ ಪುತ್ತರಿ ಹಬ್ಬದ ಆಚಾರ, ವಿಚಾರ,…
ಸುಂಟಿಕೊಪ್ಪ,ಜ.3 NEWS DESK : ಶ್ರೀ ಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಜ.5 ರಂದು ಸಂಜೆ 6 ಗಂಟೆಗೆ ಶ್ರೀ ನಾಗದೇವರಿಗೆ ಆಶ್ಲೇಷ ಪೂಜೆಯನ್ನು ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಬಿ.ಎಂ.ಸುರೇಶ್ ತಿಳಿಸಿದ್ದಾರೆ.
ಮಡಿಕೇರಿ ಜ.3 NEWS DESK : ಪ್ರಸಕ್ತ (2024-25) ಸಾಲಿನಲ್ಲಿ ಪ್ರಥಮ ವರ್ಷದ ಪೂರ್ಣಾವಧಿ ಪಿ.ಹೆಚ್.ಡಿ. ಅಧ್ಯಯನದಲ್ಲಿ ತೊಡಗಿರುವ ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಗೆ ಮಾಸಿಕ ವ್ಯಾಸಂಗ ವೇತನ/ ಫೆಲೋಶಿಪ್‍ಗಾಗಿ ಅರ್ಜಿ ಆಹ್ವಾನಿಸಲಾಗಿದೆ. 2024-25ನೇ ಸಾಲಿನಲ್ಲಿ ಕರ್ನಾಟಕದ ಶಾಸನಬದ್ಧ ವಿಶ್ವ ವಿದ್ಯಾಲಯಗಳಲ್ಲಿ/ ಅಧೀನಕ್ಕೆ ಒಳಪಡುವ ಸಂಸ್ಥೆಗಳಲ್ಲಿ ಪ್ರಥಮ ವರ್ಷದ ಪಿ.ಹೆಚ್.ಡಿ. ಅಧ್ಯಯನ ಮಾಡುತ್ತಿರುವ ಹೊಸ ವಿದ್ಯಾರ್ಥಿಗಳು ಮಾತ್ರ ಆಫ್-ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಜನವರಿ 20 ಕೊನೆಯ ದಿನವಾಗಿದೆ. ಅರ್ಹತೆಗಳು :: ವಿದ್ಯಾರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಮಾಸಿಕ ವ್ಯಾಸಂಗ ವೇತನ/ ಫೆಲೋಶಿಪ್‍ಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ನಿಗಧಿಪಡಿಸಿರುವ ವಾರ್ಷಿಕ ಆದಾಯ ಮಿತಿ:- ಪ್ರವರ್ಗ-1 ರೂ. 4.50 ಲಕ್ಷ, ಪ್ರವರ್ಗ-2ಎ, 3ಎ, 3ಬಿ ರೂ. 3.50 ಲಕ್ಷ ಮಿತಿಯಲ್ಲಿರಬೇಕು. ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ.55 ಅಂಕಗಳನ್ನು ಪಡೆದಿರಬೇಕು. ವಿಶ್ವವಿದ್ಯಾಲಯ/ ಅಧಿಕೃತ ಸಂಸ್ಥೆಗಳಲ್ಲಿನ ಸಂಶೋಧನಾ ಮಾರ್ಗದರ್ಶನದಡಿ…






