ಮಡಿಕೇರಿ ಜ.2 NEWS DESK : ವಿರಾಜಪೇಟೆ ವಿಧಾನಸಭಾ ವ್ಯಾಪ್ತಿಗೆ ಒಳಪಟ್ಟ ನಾಪೋಕ್ಲು ಹೋಬಳಿಯ ಕಕ್ಕಬ್ಬೆ-ಚೆಯ್ಯಂಡಾಣೆ ರಸ್ತೆಯ ದುರಸ್ತಿ ಕಾಮಗಾರಿಯು ಪ್ರಗತಿಯಲ್ಲಿದೆ. ಮಳೆಯಿಂದಾಗಿ ಈ ಭಾಗದ ರಸ್ತೆ ತೀವ್ರ ಹಾನಿಯಾಗಿತ್ತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರ ವಿಶೇಷ ಕಾಳಜಿ ಹಾಗೂ ಅನುದಾನದಿಂದ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಶಾಸಕರ ಕಾಳಜಿಗೆ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಲೇಖಕ: admin
ಮಡಿಕೇರಿ ಜ.2 NEWS DESK : ಕೊಡ್ಲಿಪೇಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಸ್.ಡಿ.ತಮ್ಮಯ್ಯ, ಉಪಾದ್ಯಕ್ಷರಾಗಿ ಹೆಚ್.ಜೆ.ಪ್ರವೀಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೊಡ್ಲಿಪೇಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಇಂದು ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಹನ್ನೊಂದು ಸದಸ್ಯ ಬಲದ ಬ್ಯಾಂಕಿನಲ್ಲಿ ತಮ್ಮಯ್ಯ ನವರ ತಂಡದ 8 ಮಂದಿ ಭರ್ಜರಿ ವಿಜಯ ಸಾಧಿಸಿದ್ದಾರೆ. ಈ ಸಂದರ್ಭ ನಿರ್ದೇಶಕರುಗಳಾದ ಯತೀಶ್, ಮಹಾಬ್, ನಾಗರಾಜ್, ಮಲ್ಲೇಶ, ರಂಜಿತಾ, ದೊಡ್ಡಯ್ಯ ಹಾಗೂ ಸಂಘದ ವ್ಯವಸ್ಥಾಪಕರು ಉಪಸ್ಥಿತರಿದ್ದರು. ಚುನಾವಣಾಧಿಕಾರಿಯಾಗಿ ಮೋಹನ್ ಕಾರ್ಯ ನಿರ್ವಹಿಸಿದರು.
ವಿರಾಜಪೇಟೆ ಜ.2 NEWS DESK : ಸಂಘ-ಸಂಸ್ಥೆಗಳ ವ್ಯವಹಾರಗಳು ಬಲಿಷ್ಟವಾಗುವುದು ಗ್ರಾಹಕ ಧರ್ಮದಿಂದಾಗಿ. ಸಿಬ್ಬಂದಿಗಳು ಗ್ರಾಹಕರ ನಡುವೆ ಉತ್ತಮ ಬಾಂಧವ್ಯ ಕಲ್ಪಿಸಿದಲ್ಲಿ ಸಹಕಾರ ಕ್ಷೇತ್ರದಲ್ಲಿ ಹೆಸರು ಅಜರಾಮರವಾಗುತ್ತದೆ ಎಂದು ನಿವೃತ್ತ ವಾಯು ಸೇನಾಧಿಕಾರಿ ಬಾಳೆಯಡ ಶಂಭು ಮಂದಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ವಿರಾಜಪೇಟೆಯ ಗಾಂಧಿನಗರದ ಲಯನ್ಸ್ ಕ್ಲಬ್ ಕಟ್ಟಡದಲ್ಲಿ ನೂತನವಾಗಿ ಆರಂಭಿಸಿರುವ ಶ್ರೀ ಪಾವನಿ ಸೌಹಾರ್ದ ಸಹಕಾರಿ ಸಂಸ್ಥೆಯ ಕಚೇರಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಸಹಕಾರಿ ಕ್ಷೇತ್ರವು ಗ್ರಾಹಕ, ಠೇವಣಿದಾರ ಮತ್ತು ಆಡಳಿತ ಮಂಡಳಿ, ಸಿಬ್ಬಂದಿಗಳನ್ನು ಅಡಕಗೊಂಡಿರುವ ಸಂಸ್ಥೆಯಾಗಿದೆ. ಕಾನೂನು ಮತ್ತು ಸಂಸ್ಥೆಯ ನಿಬಂಧನೆಗಳಿಗೆ ಅನುಗುಣವಾಗಿ ಗ್ರಾಹಕರು ಸಾಲ ಪಡೆದು ಕ್ರಮಬದ್ಧವಾಗಿ ಹಿಂದಿರುಗಿಸಲು ಶಕ್ತರಾಗಿರಬೇಕು, ಸಂಸ್ಥೆಯು ಗ್ರಾಹಕ ಮತ್ತು ಠೇವಣಿದಾರರನ್ನು ಸರಿಸಮಾನವಾಗಿ ಕಾಣವಂತಾಗಬೇಕು, ಇದರಿಂದ ಸಂಸ್ಥೆಯ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಟ್ಟಣ ಸಹಕಾರ ಬ್ಯಾಂಕ್ ನ ಮಾಜಿ ಅಧ್ಯಕ್ಷ ಮತ್ತು ಉದ್ಯಮಿ ಕೋಲತಂಡ ಬೋಪಯ್ಯ, ಸಹಕಾರ ಸಂಘದ ಉನ್ನತ್ತಿಗಾಗಿ ಸದಸ್ಯರ ಪರಿಪೂರ್ಣ ಸಹಕಾರ ಅತ್ಯವಶ್ಯಕ. ಸಹಕಾರ ಸಂಘ…
ಸಕಲೇಶಪುರ NEWS DESK ಜ.2 : ಶಾರ್ಟ್ ಸರ್ಕ್ಯೂಟ್‌ನಿಂದ ಬಸ್ ವೊಂದು ಅಗ್ನಿಗಾಹುತಿಯಾದ ಘಟನೆ ಸಕಲೇಶಪುರ ತಾಲ್ಲೂಕಿನ ಶಿರಾಡಿಘಾಟ್ ರಸ್ತೆಯ ಎತ್ತಿನಹಳ್ಳ ಬಳಿ ನಡೆದಿದೆ. ಇಂದು ಬೆಳಿಗ್ಗೆ ಸುಮಾರು 5 ಗಂಟೆ ವೇಳೆಯಲ್ಲಿ ಬೆಂಗಳೂರಿನಿoದ ಸುಬ್ರಮಣ್ಯಕ್ಕೆ ತೆರಳುತ್ತಿದ್ದ ಸ್ಲೀಪಿಂಗ್ ಕೋಚ್ ಎಸಿ ಬಸ್ ನ ಇಂಜಿನ್‌ನಲ್ಲಿ ಬೆಂಕಿ ಕಾಣಸಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಬಸ್ ನ ಚಾಲಕ ಯೋಗೀಶ್ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ನೋಡುನೋಡುತ್ತಿದ್ದಂತೆಯೇ ಬಸ್ ಹೊತ್ತಿ ಉರಿದಿದೆ. ಸುಮಾರು ಮೂವತ್ತು ಪ್ರಯಾಣಿಕರು ಬಸ್ ನಲ್ಲಿ ಪ್ರಯಾಣಿಸುತ್ತಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಬೆಂಕಿಯನ್ನು ನಿಯಂತ್ರಿಸುವ ಪ್ರಯತ್ನ ಮಾಡಿದರು.
ಮಡಿಕೇರಿ NEWS DESK ಜ.2 : ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯದಲ್ಲಿ ಎದುರಾಗಿರುವ ಭಿನ್ನಾಭಿಪ್ರಾಯದ ಕುರಿತು ಹೇಳಿಕೆ, ಪ್ರತಿ ಹೇಳಿಕೆ ನೀಡಿ ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುವ ಬದಲು ಕೊಡಗಿನ ಹಿತಕ್ಕಾಗಿ ಆಗಿರುವುದನ್ನು ಮರೆತು ಬಿಡೋಣ. ಎಲ್ಲರ ಸಂಪ್ರದಾಯವನ್ನು ಎಲ್ಲರೂ ಪರಸ್ಪರ ಗೌರವಿಸಿ ಶಾಂತಿ ಕಾಪಾಡುವ ಮೂಲಕ ಪ್ರೀತಿ ಬೆಳೆಸೋಣವೆಂದು ಅರೆಕಾಡು ಹೊಸ್ಕೇರಿಯ ಕೊಡವ ವೆಲ್ ಫೇರ್ ಐಂಡ್ ರಿಕ್ರಿಯೇಷನ್ ಅಸೋಸಿಯೇಷನ್ ನ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಮನವಿ ಮಾಡಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು ಹೊತ್ತಿರುವ ಕಿಡಿಯನ್ನು ಶಮನ ಮಾಡಲು ಪ್ರತಿಯೊಬ್ಬರು ಪ್ರಯತ್ನಿಸಬೇಕೆ ಹೊರತು ಬೆಂಕಿಯ ಜ್ವಾಲೆಯಾಗಲು ಬಿಡಬಾರದು. ಕೊಡಗಿನಲ್ಲಿ ನೆಲೆಸಿರುವ ಪ್ರತಿಯೊಂದು ಜನಾಂಗದ ಮಂದಿಯೂ ಸ್ವಾಭಿಮಾನಿಗಳಾಗಿದ್ದಾರೆ, ಪ್ರಜ್ಞಾವಂತರಾಗಿದ್ದಾರೆ, ವಿದ್ಯಾವಂತರಾಗಿದ್ದಾರೆ. ಆದ್ದರಿಂದ ದೇವಾಲಯದಲ್ಲಿ ನಡೆದ ಪ್ರಕರಣವನ್ನು ಮತ್ತಷ್ಟು ಬೆಳೆಸದೆ ಸಾಮರಸ್ಯದ ಮೂಲಕ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ವಿಷ ಗಳಿಗೆಯೊಂದರಲ್ಲಿ ಘಟನೆ ನಡೆದು ಹೋಗಿದೆ, ನಂತರ ನಡೆದ ಬೆಳವಣಿಗೆಗಳು ಕೊಡಗಿನ ಗೌರವಕ್ಕೆ ದಕ್ಕೆ ತಂದಿದೆ.…
ಬೆಂಗಳೂರು ಜ.2 NEWS DESK : ಕರ್ನಾಟಕ ಸರ್ಕಾರವು ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಠ ಸಾಧನೆ ಮಾಡಿದ ಪತ್ರಕರ್ತರಿಗೆ ನೀಡುವ 2017 ರಿಂದ 2023ರ ಕ್ಯಾಲೆಂಡರ್ ವರ್ಷಗಳ ಅಭಿವೃದ್ದಿ ಮತ್ತು ಪರಿಸರ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ಪ್ರಕಟಿಸಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ ನಿಂಬಾಳ್ಕರ್ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಈ ಪ್ರಶಸ್ತಿಗಳನ್ನು ಸರ್ಕಾರವು 2001ನೇ ಸಾಲಿನಿಂದ ಸ್ಥಾಪಿಸಿದ್ದು 2016 ರವರೆಗೆ ನಾಡಿನ 32 ಜನ ಹಿರಿಯ ಪತ್ರಕರ್ತರು ಈ ಎರಡೂ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. ಕೋವಿಡ್ ಹಾಗೂ ಇತರೆ ಕಾರಣಗಳಿಂದ ವಿಳಂಬವಾಗಿದ್ದ 2017ರಿಂದ 2023ರ ವರೆಗಿನ ಏಳು ವರ್ಷಗಳ ಅವಧಿಯ ಪ್ರಶಸ್ತಿಗಳಿಗೆ ಅರ್ಹ ಪತ್ರಕರ್ತರನ್ನು ಹಿರಿಯ ಪತ್ರಕರ್ತರಾದ ಸನತ್ ಕುಮಾರ್ ಬೆಳಗಲಿ ಹಾಗೂ ಕೆ.ಶಿವಕುಮಾರ್ ಅವರಿದ್ದ ಸಮಿತಿಯು ಆಯ್ಕೆ ಮಾಡಿದೆ. ಪ್ರಶಸ್ತಿಯು ತಲಾ ಒಂದು ಲಕ್ಷ ರೂಪಾಯಿ ನಗದು, ಸ್ಮರಣಿಕೆ, ಅಭಿನಂದನಾ ಪತ್ರ ಒಳಗೊಂಡಿರುತ್ತದೆ. 2017ರಿಂದ 2023ರವರೆಗಿನ ಪರಿಸರ ಪತ್ರಿಕೋದ್ಯಮ…
ನಾಪೋಕ್ಲು ಜ.2 NEWS DESK : ಮಡಿಕೇರಿ ತಾಲ್ಲೂಕು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಯಲ್ಲಿ 15 ಸ್ಥಾನಗಳಿಗೆ ಬಿಜೆಪಿಯ ಎಲ್ಲಾ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ನಾಪಂಡ ರ್ಯಾಲಿ ಮಾದಯ್ಯ, ಉಪಾಧ್ಯಕ್ಷರಾಗಿ ಅಜಯ್ ಹೊದ್ದೂರು, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಬೋಪಣ್ಣ, ಖಜಾಂಚಿಯಾಗಿ ಎಂ.ಎಸ್.ಶಂಭಯ್ಯ ಹಾಗೂ ಜಿಲ್ಲಾ ಸಮಿತಿ ಪ್ರತಿನಿಧಿಯಾಗಿ ಕೋಡಿ ಕೆ.ಪೊನ್ನಪ್ಪ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಕಿಶೋರ್ ಕುಮಾರ್, ಉಮೇಶ್ ಪಳಂಗಪ್ಪ, ಅಯ್ಯಲಪಂಡ ಕಾರ್ಯಪ್ಪ, ಸಿ.ಎಸ್.ಉದಯಕುಮಾರ್, ಸನ್ನಿ ತಿಮ್ಮಯ್ಯ, ಮುಕ್ಕಾಟಿರ ಹರೀಶ್, ಕೋಡಿ ಪೊನ್ನಪ್ಪ, ನಾಗೇಶ್ ಕುಂದಲ್ಪಾಡಿ, ಕೆ.ಆರ್ ರಾಜಾರಾಮ, ಮುಂಡಂಡ ಕಾರ್ಯಪ್ಪ, ನಾಪಂಡ ರವಿ ಕಾಳಪ್ಪ ಆಯ್ಕೆಯಾಗಿದ್ದಾರೆ. ವರದಿ : ದುಗ್ಗಳ ಸದಾನಂದ.
ನಾಪೋಕ್ಲು ಜ.2 NEWS DESK : ಕಾಲೇಜು ಜೀವನದಲ್ಲಿ ವಿದ್ಯಾರ್ಥಿಗಳ ಮನಸ್ಸು ತುಂಬಾ ಚಂಚಲ. ಈ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಮನಸ್ಸನ್ನು ಹತೋಟಿಗೆ ತಂದುಕೊಳ್ಳುವ ಅನಿವಾರ್ಯತೆ ಇದೆ ಎಂದು ಚೇರಂಬಾಣೆ ಅರುಣ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಟಿ.ಎಸ್.ಸುಬ್ಬಯ್ಯ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮಡಿಕೇರಿ ತಾಲ್ಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ಕೊಡಗು, ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ನಾಪೋಕ್ಲು ವಲಯ ಮತ್ತು ಅರುಣ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢ ಶಾಲಾ ವಿಭಾಗ ಚೇರಂಬಾಣೆ ಸಂಯುಕ್ತ ಆಶ್ರಯದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳೇ ಉತ್ತಮ ಸಮಾಜದ ಆಸ್ತಿ. ಸ್ವಸ್ಥ ಮತ್ತು ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖವಾದದ್ದು ಎಂದರು. ಸಂಪನ್ಮೂಲ ವ್ಯಕ್ತಿ ಶಿಬಿರಾಧಿಕಾರಿ ನಂದಕುಮಾರ್ ಮಾತನಾಡಿ ಇದುವರೆಗೆ ಕರ್ನಾಟಕ ರಾಜ್ಯದ 17,848 ಶಾಲಾ ಕಾಲೇಜುಗಳಲ್ಲಿ ಜಾಗೃತಿ…
ನಾಪೋಕ್ಲು ಜ.2 NEWS DESK : ಬಲ್ಲಮಾವಟ್ಟಿ ಗ್ರಾಮ ಪಂಚಾಯಿತಿಯ ಪಡಿಯಾಣಿ ಗ್ರಾಮದ ಸ.ಹಿ.ಪ್ರಾ ಶಾಲೆಗೆ ಸ್ಥಳೀಯರಾದ ಕಡವಿಲ್ ಕರೀಂ ಶಾಲೆಗೆ ಯು.ಪಿ.ಎಸ್.ನ್ನು ಕೊಡುಗೆ ನೀಡಿದರು. ಶಾಲೆಯ ಮುಖ್ಯ ಶಿಕ್ಷಕ ಕೆ.ಸಿ. ಧಮೇಂದ್ರ ಹಾಗೂ ಸಹ ಶಿಕ್ಷಕರು ಕೊಡುಗೆಯನ್ನು ಸ್ವೀಕರಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿ, ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭ ಶಾಲೆಯ ಶಿಕ್ಷಕಿಯರಾದ ಎಂ.ಪಿ.ಭಾರತಿ. ಎಂ.ಎಸ್.ಬೋಜಮ್ಮ, ಕೆ.ಎ.ಹೇಮಮಾಲಿನಿ ಉಪಸ್ಥಿತರಿದ್ದರು. ವರದಿ : ದುಗ್ಗಳ ಸದಾನಂದ.
ಮಡಿಕೇರಿ ಜ.2 NEWS DESK : ಕೊಡಗು ಜಿಲ್ಲೆಯ ಜಗದೀಶ್ ಬೆಳ್ಯಪ್ಪ ಅವರು 2024ನೇ ಸಾಲಿನ ಬೆಂಗಳೂರು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ 28 ವರ್ಷಗಳಿಂದ ನಿರಂತರವಾಗಿ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಜಗದೀಶ್ ಬೆಳ್ಯಪ್ಪ ಅವರು ಮೂಲತಃ ಕೊಡಗು ಜಿಲ್ಲೆಯವರು. 1997ರಲ್ಲಿ ತಮ್ಮ 22ನೇ ವಯಸ್ಸಿಗೆ ಕೊಡಗು ಜಿಲ್ಲೆಯ ಶಕ್ತಿ ಪತ್ರಿಕೆ ಮೂಲಕ ಪತ್ರಿಕಾ ಕ್ಷೇತ್ರಕ್ಕೆ ಛಾಯಚಿತ್ರಕಾರರಾಗಿ ಪ್ರವೇಶಿಸಿದರು. ನಂತರ ಶಕ್ತಿ ಪತ್ರಿಕೆಯ ಉಪಸಂಪಾದಕರಾದರು. ಮುಂದಿನ ದಿನಗಳಲ್ಲಿ ಸಂಯುಕ್ತ ಕರ್ನಾಟಕ, ಕಾವೇರಿ ಚಾನಲ್, ಎನ್ಡಿ ಟಿವಿಯ ವರದಿಗಾರರಾಗಿ ಕೆಲಸ ಮಾಡಿದರು. ನಂತರ ಬೆಂಗಳೂರಿಗೆ ಬಂದು ಉಷಾಕಿರಣ ಪತ್ರಿಕೆಯಲ್ಲಿ ಸ್ಟೇಟ್ ಎಡಿಷನ್ ಟೀಂ ನಲ್ಲಿದ್ದರು. ಟಿವಿ9 ಮೂಲಕ ಮತ್ತೆ ಕೊಡಗು ಜಿಲ್ಲೆಗೆ ವರದಿಗಾರರಾಗಿ ಜನಪ್ರಿಯಗೊಂಡರು. ಸ್ವಲ್ಪ ಸಮಯದ ನಂತರ ವಿಜಯ ಕರ್ನಾಟಕ ವರದಿಗಾರರಾಗಿ ರಾಜ್ಯ ಮಟ್ಟದ ಎರಡು ಸಾಹಿತ್ಯ ಸಮ್ಮೇಳನದ ವರದಿ ಮಾಡಿ ಮೆಚ್ಚುಗೆ ಪಡೆದರು. ನಂತರ ಮತ್ತೆ ಬೆಂಗಳೂರಿಗೆ ತೆರಳಿದ ಅವರು ಸುವರ್ಣ ಟಿವಿಯ ಇನ್ ಪುಟ್…






