ಲೇಖಕ: admin

ವಿರಾಜಪೇಟೆ ಜು.31 NEWS DESK : ಅವರ್ಸ್ ಕ್ಲಬ್ ವತಿಯಿಂದ ಆ.5 ರಂದು ಚೆಟ್ಟಳ್ಳಿಯ ಮಂಗಳ ಸಭಾಂಗಣದಲ್ಲಿ ಕಕ್ಕಡ ನಮ್ಮೆ ಆಚರಣೆ, ಸಂತೋಷ ಕೂಟ ಏರ್ಪಡಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷೆ ಮುಳ್ಳಂಡ ಶೋಭಾ ಚಂಗಪ್ಪ ತಿಳಿಸಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಶೋಭಾ ಚಂಗಪ್ಪ ವಹಿಸಲಿದ್ದಾರೆ. ಕಕ್ಕಡ ಹಬ್ಬದ ಪ್ರಯುಕ್ತ ಕಕ್ಕಡ ತಿಂಗಳಿನ ವಿಶೇಷ ಆಹಾರ ಪದಾರ್ಥಗಳಿಂದ ಮದ್ದು ಪಾಯಸ, ಮದ್ದ್ ಪುಟ್ಟ್, ಹಲಸಿನ ಬೀಜದ ಚಟ್ನಿ, ಬೈಮಬಳೆ ಕರಿ, ಪಲ್ಯ, ಮದ್ದು ನೀರ್ ಜೆಲ್ಲಿ, ಕುವಾಲೆ ಪುಟ್ಟ್, ಪತ್ರೋಡೆ, ಏಡಿ ಕರಿ, ನಾಟಿ ಕೋಳಿ ಕರಿ, ಪ್ರೈ, ಹಂದಿಮಾಂಸ ಕರಿ, ಪ್ರೈ, ತಯಾರಿಕ ಸ್ಪರ್ಧೆ ಮತ್ತು ನಡೆಯಲಿದೆ. ಅಲ್ಲದೆ ಮನರಂಜನಾತ್ಮಕ ಆಟೋಟಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವು ಕ್ಲಬ್‍ನ ಎಲ್ಲಾ ಸದಸ್ಯರ ಸಹಭಾಗಿತ್ವದಲ್ಲಿ ನಡೆಯಲಿದೆ ಎಂದು ಕ್ಲಬ್‍ನ ಆಡಳಿತ ಮಂಡಳಿ ಹಾಗೂ ಸದಸ್ಯರ ಪರವಾಗಿ ಅದ್ಯಕ್ಷರಾದ ಶೋಭಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಸುಂಟಿಕೊಪ್ಪ ಜು.31 NEWS DESK : ಮಾದಕ ವಸ್ತುಗಳ ಸೇವನೆಯಿಂದ ಯುವಜನತೆ ದೂರವಿರುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಯೋಜನಾಧಿಕಾರಿಗಳಾದ ಪುರುಷೋತ್ತಮ್ ಹೇಳಿದರು. ಚೆಟ್ಟಳ್ಳಿ ಪ್ರೌಢಶಾಲೆಯ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಮಡಿಕೇರಿ ತಾಲೂಕು ಬಿ ಸಿ ಟ್ರಸ್ಟ್ ಹಾಗೂ ಸುಂಟಿಕೊಪ್ಪ ವಲಯದ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ದುಶ್ಚಟಗಳ ದಾಸತ್ವದಿಂದ ನಮ್ಮ ಆರೋಗ್ಯ ಕುಟುಂಬ ಮತ್ತು ಸಮಾಜದಿಂದ ದೂರವಿರಿಸುತ್ತದೆ. ಅಲ್ಲದೆ ಮಾನವರ ದೇಹಕ್ಕೆ ಕ್ಯಾನ್ಸರ್, ಶ್ವಾಸಕೋಶ, ಲಿವರ್ ಸೇರಿದಂತೆ ಇತರ ಅಂಗಾಗಳನ್ನು ನಾಶಪಡಿಸುತ್ತದೆ. ಮೊಬೈಲ್, ಸಾಮಾಜಿಕ ಜಾಲತಾಣದ ಅತಿಯಾದ ಬಳಕೆಯಿಂದ ನಿದ್ರೆ ಕಡಿಮೆ, ಏಕಾಗ್ರತೆ ಸಮಸ್ಯೆ ಕಾಡಲಾರಂಭಿಸುತ್ತದೆ ದುಶ್ಚಟಗಳಿಂದ ಸಮಾಜದಲ್ಲಿ ಗೌರವ ಕಡಿಮೆಯಾಗುತ್ತದೆ ಎಂದು ಹೇಳಿದರು. ವಕೀಲರಾದ ರೇವತಿ ಮಾತನಾಡಿ, ಹದಿಹರೆಯದ ಮಕ್ಕಳಲ್ಲಿ ಕಂಡು ಬರುವ ಸಮಸ್ಯೆಗಳ ಬಗ್ಗೆ ವಿವರಿಸಿದ ಅವರು ಲೈಂಗಿಕ ಕಿರುಕುಳ ಬಂದಲ್ಲಿ ತಕ್ಷಣವೇ 1098 ಕರೆ ಮಾಡಿ ಮಾಹಿತಿಯನ್ನು ಹಂಚಿಕೊಳ್ಳಿ,ನಿಮ್ಮ ಸುತ್ತ ಮುತ್ತಲಿನಲ್ಲಿ ಬಾಲ್ಯ…

Read More

ಮಡಿಕೇರಿ ಜು. 31 NEWS DESK : ಸೈನಿಕಶಾಲೆಗಳ 6 ಮತ್ತು 9ನೇ ತರಗತಿಗೆ ಸೇಪ೯ಡೆ ಸಂಬಂಧಿತ ವಿದ್ಯಾಥಿ೯ ಮತ್ತು ಪೋಷಕರಲ್ಲಿ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ವತಿಯಿಂದ ತರಬೇತಿ ಕಾಯಾ೯ಗಾರ ಆಯೋಜಿಸಲಾಗಿದೆ. ನಗರದ ಸಕಾ೯ರಿ ಬಸ್ ನಿಲ್ದಾಣ ಬಳಿಯಿರುವ ಕೊಡಗು ಶಿಶುಕಲ್ಯಾಣ ಸಂಸ್ಥೆಯಲ್ಲಿ ಆ.9 ಭಾನುವಾರದಿಂದ ಪ್ರತೀ ಭಾನುವಾರಗಳಂದು 20 ಭಾನುವಾರಗಳ ಕಾಲ ಸೈನಿಕ ಶಾಲಾ ಪರೀಕ್ಷಾ ಮಾಹಿತಿ ಕಾಯಾ೯ಗಾರ ಪ್ರತೀ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಜರುಗಲಿದೆ. ಸರಗೂರು ಸೈನಿಕಶಾಲೆಯ ಪರಿಣಿತ ಅಧ್ಯಾಪಕರು ಸೇರಿದಂತೆ ವಿವಿಧ ವಿಷಯ ತಜ್ಞರು ಈ ಕಾಯಾ೯ಗಾರದಲ್ಲಿ ಉಪಯುಕ್ತ ಮಾಹಿತಿ ನೀಡಲಿದ್ದಾರೆ. ಆಗಸ್ಟ್ 9 ರಂದು ಭಾನುವಾರ ಬೆಳಗ್ಗೆ 9.30 ಗಂಟೆಗೆ ಮಡಿಕೇರಿಯಲ್ಲಿ ಉದ್ಘಾಟನೆ ನಂತರ ವಿದ್ಯಾರ್ಥಿಗಳ ಪೋಷಕರಿಗೂ ಮಾಹಿತಿ ಶಿಬಿರ ಆಯೋಜಿತವಾಗಿದೆ. ಸೈನಿಕಶಾಲೆಗೆ ಸೇರಲಿಚ್ಚಿಸುವ ಕೊಡಗಿನ ವಿದ್ಯಾಥಿ೯ಗಳು ಈ ಉಚಿತ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ರೋಟರಿ…

Read More

ಕುಶಾಲನಗರ, ಜು.31 NEWS DESK : ನೀಟ್‌ ಪರೀಕ್ಷೆ ವಿವಾದದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸುವ ಉದ್ದೇಶದಿಂದ ಕೊಡಗು ಜಿಲ್ಲಾ ಎನ್‌ಎಸ್‌ಯುಐ ವತಿಯಿಂದ ಕುಶಾಲನಗರದಲ್ಲಿ ಕ್ಯಾಂಡಲ್ ಲೈಟ್‌ ಮಾರ್ಚ್‌ ಆಯೋಜಿಸಲಾಯಿತು. ಕುಶಾಲನಗರದ ಪ್ರಮುಖ ಬೀದಿಗಳಲ್ಲಿ ಕ್ಯಾಂಡಲ್ ಲೈಟ್‌ ಮಾರ್ಚ್‌ ನಡೆಸಿದ ವಿದ್ಯಾರ್ಥಿಗಳು ಹಾಗೂ ಕಾಂಗ್ರೆಸ್‌ ಮುಖಂಡರು ಬಳಿಕ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿ ಮೊಂಬತ್ತಿ ಬೆಳಗಿ ಅಗಲಿದ ವಿದ್ಯಾರ್ಥಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಇದೇ ವೇಳೆ ನೀಟ್‌ ಪರೀಕ್ಷೆ ಸಂಬಂಧ ಉಂಟಾಗಿರುವ ವಿವಾದಗಳ ಕುರಿತು ಆತಂಕ ವ್ಯಕ್ತಪಡಿಸಿ, ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡುವಂತೆ ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ರಫೀಕ್ ಅಲಿ, ಪ್ರಧಾನ ಕಾರ್ಯದರ್ಶಿ ಲೋಕೇಶ್, ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ್, ಮಾಜಿ ಅಧ್ಯಕ್ಷ ಹಾಗೂ ಯುವ ಕಾಂಗ್ರೆಸ್‌ ಮುಖಂಡ ತ್ರಿನೇಶ್, ಕುಶಾಲನಗರ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ವಿ.ಪಿ. ಶಶಿಧರ್, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್, ಕುಶಾಲನಗರ ನಗರ ಕಾಂಗ್ರೆಸ್‌ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕುಶಾಲನಗರ…

Read More

ಮಡಿಕೇರಿ, ಜು.31 NEWS DESK : ಬೆಂಗಳೂರಿನ ಕೊರಮಂಗಲದ ಚಿನ್ಮಯ ವಿದ್ಯಾಲಯದಲ್ಲಿ  ಆಯೋಜಿಸಲಾಗಿದ್ದ  ‘ಚಿನ್ಮಯ ಕಪ್–2026′ ಅಂತರಶಾಲಾ ರಾಜ್ಯಮಟ್ಟದ ರಿಂಕ್ ಹಾಕಿ (5–ಎ–ಸೈಡ್) ಪಂದ್ಯಾವಳಿಯಲ್ಲಿ  ಮಡಿಕೇರಿಯ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳ 14 ವರ್ಷದೊಳಗಿನ ಬಾಲಕರ ತಂಡವು  – ಚಾಂಪಿಯನ್ ಪಟ್ಟವನ್ನೂ,17 ವರ್ಷದೊಳಗಿನ ಬಾಲಕಿಯರ ತಂಡವು  ಸತತವಾಗಿ ಎರಡನೇ ಬಾರಿಯೂ ಚಾಂಪಿಯನ್ ಪಟ್ಟವನ್ನೂ ಹಾಗೂ 17 ವರ್ಷದೊಳಗಿನ ಬಾಲಕರ ತಂಡ  ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಪಂದ್ಯಾವಳಿಯ ಅತ್ಯುತ್ತಮ ಪ್ರದರ್ಶನಕ್ಕಾಗಿ  17 ವರ್ಷದೊಳಗಿನ ವಿಭಾಗದಲ್ಲಿ ಕೊಡಗು ವಿದ್ಯಾಲಯದ  ತೇಜಲ್ ಬೋಪಣ್ಣ ಮತ್ತು 14 ವರ್ಷದೊಳಗಿನ ವಿಭಾಗದ ಎಂ.ಎಸ್. ಚಿನ್ನಪ್ಪ  ಅವರು ಪಂದ್ಯಾವಳಿಯ ಅತ್ಯುತ್ತಮ ಆಟಗಾರ’  ಪ್ರಶಸ್ತಿಯನ್ನು ಪಡೆದರು. 17 ವರ್ಷದೊಳಗಿನ ವಿಭಾಗದಲ್ಲಿ ವರ್ಣ ಬೋಜಮ್ಮ  ಅವರು  ಪಂದ್ಯಾವಳಿಯ ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿಗೆ ಭಾಜನರಾದರು. ಈ ಸಾಧನೆಗೆ ತರಬೇತುದಾರರಾದ ದೀನಾ  ಹಾಗೂ ಪಾರ್ವತಿ  ಅವರ ನಿಖರ ತರಬೇತಿ ಮತ್ತು ಮಾರ್ಗದರ್ಶನ ಪ್ರಮುಖ ಕಾರಣವಾಗಿದೆ ಎಂದು ಶಾಲೆಯ ಪ್ರಾಂಶುಪಾಲರಾದ  ಸುಮಿತ್ರಾ ಕೆ ಎಸ್  ಹಾಗೂ ಆಡಳಿತ…

Read More

ಸೋಮವಾರಪೇಟೆ NEWS DESK ಜು.31 : ಸೋಮವಾರಪೇಟೆ ತಾಲೂಕಿನ ಸಮೀಪದ ಚೌಡ್ಲು ಗ್ರಾಮದ ಅರೆಬೆಟ್ಟ ಪ್ರದೇಶದಲ್ಲಿ ಹಾಡುಹಗಲೇ ಚಿರತೆ ದಾಳಿ ನಡೆಸಿ ಮೇಯಲು ಕಟ್ಟಿದ್ದ ನಾಲ್ಕು ಆಡುಗಳನ್ನು ಕೊಂದು ತಿಂದಿರುವ ಘಟನೆ ಶುಕ್ರವಾರ ನಡೆದಿದೆ. ಚೌಡ್ಲು ಗ್ರಾಮದ ಅರೆಬೆಟ್ಟ ನಿವಾಸಿ ದೇವರಾಜು ಅವರಿಗೆ ಸೇರಿದ ಎರಡು ಗಂಡು ಹಾಗೂ ಎರಡು ಹೆಣ್ಣು ಗರ್ಭಿಣಿ ಆಡುಗಳನ್ನು ತಮ್ಮ ಹೊಲದಲ್ಲಿ ಮೇಯಲು ಬಿಟ್ಟಿದ್ದ ವೇಳೆ ಏಕಾಏಕಿ ಚಿರತೆ ದಾಳಿ ನಡೆಸಿದೆ. ದಾಳಿಯ ತೀವ್ರತೆಗೆ ನಾಲ್ಕು ಆಡುಗಳೂ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕೆಲವು ಭಾಗಗಳನ್ನು ಚಿರತೆ ತಿಂದಿರುವುದು ಕಂಡುಬoದಿದೆ. ಘಟನೆಯಿAದ ಆಡು ಸಾಕಾಣಿಕೆ ನಡೆಸುತ್ತಿದ್ದ ದೇವರಾಜು ಅವರಿಗೆ ಭಾರೀ ನಷ್ಟ ಉಂಟಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಚಿರತೆ ಓಡಾಟದ ಬಗ್ಗೆ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸುತ್ತಿದ್ದು, ಇದೀಗ ನಡೆದ ದಾಳಿಯಿಂದ ಭಯ ಮತ್ತಷ್ಟು ಹೆಚ್ಚಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ದಾಳಿ…

Read More

ಮಡಿಕೇರಿ NEWS DESK  ಜು.31 : ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಮುಂಜಾಗೃತಾ ಕ್ರಮವಾಗಿ ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕಿನ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಆ.1 ರಂದು ರಜೆ ಘೋಷಿಸಲಾಗಿದೆ. ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿಯಿಂದ ಉತ್ತಮವಾಗಿ ಮಳೆೆಯಾಗುತ್ತಿದ್ದು, “ತ್ರಿವೇಣಿ” ಸಂಗಮದಲ್ಲಿ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಕಳೆದೊಂದು ದಿನದ ಅವಧಿಯಲ್ಲಿ ಕಾವೇರಿ ಕ್ಷೇತ್ರ ವ್ಯಾಪ್ತಿಯಲ್ಲಿ 73 ಮಿ.ಮೀ. ಮಳೆ ದಾಖಲಾಗಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಕಾವೇರಿ ನದಿ ಪಾತ್ರದ ನಾಪೋಕ್ಲು, ಬಲಮುರಿ, ಮೂರ್ನಾಡು, ಸಿದ್ದಾಪುರ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಮಡಿಕೇರಿ-ವಿರಾಜಪೇಟೆ ಮುಖ್ಯ ರಸ್ತೆಯ ನಡುವಿನ ಬೇತ್ರಿಯಲ್ಲಿ ಕಾವೇರಿ ನದಿಯ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ರುದ್ರರಮಣೀಯ ದೃಶ್ಯ ಗೋಚರಿಸುತ್ತಿದೆ. ನಾಪೋಕ್ಲು ವಿಭಾಗದಲ್ಲು ಉತ್ತಮ ಮಳೆಯಾಗುತ್ತಿದ್ದು, ನಾಪೋಕ್ಲು ಮತ್ತು ಹಳೇ ತಾಲ್ಲೂಕು ನಡುವಿನ ರಸ್ತೆಯ ಮೇಲೆ ಕಾವೇರಿ ನದಿ ನೀರು ಹರಿಯುತ್ತಿದೆ.…

Read More

ಮಡಿಕೇರಿ NEWS DESK ಜು.31 : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬoಧಿಸಿದoತೆ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಹಾಗೂ ಯುವ ಸಮೂಹದ ವಿರುದ್ಧ ಹೂಡಲಾಗಿರುವ ಎಫ್‌ಐಆರ್ ನ್ನು ತಕ್ಷಣ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯ ನಗರದಲ್ಲಿ ಪ್ರತಿಭಟನೆ ನಡೆಸಿತು. ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಎಸ್‌ಡಿಪಿಐ ಪಕ್ಷದ ಪ್ರಮುಖರು ಹಾಗೂ ಸದಸ್ಯರು ಕೇಂದ್ರ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಹಾಗೂ ಯುವ ಪೀಳಿಗೆ ಈ ದೇಶದ ಭವಿಷ್ಯವಾಗಿದ್ದು, ಅವರ ಮೇಲೆ ಹೂಡಲಾಗಿರುವ ಎಲ್ಲಾ ಕೇಸ್‌ಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಅವರು ಮಾತನಾಡಿ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬoಧಿಸಿದoತೆ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗುಂಡು ಹಾರಿಸಿ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಕೇಂದ್ರ ಸರಕಾರ ಮಾಡಿದೆ. ವಿದ್ಯಾರ್ಥಿಗಳ ಭವಿಷ್ಯದ ಆತಂಕಗಳನ್ನು ಕೇಂದ್ರ ಸರಕಾರ ಮನಗಾಣುವಲ್ಲಿ ವಿಫಲವಾಗಿದೆ. ದೇಶದಲ್ಲಿ ನಿರಂಕುಶ ಆಡಳಿತ ನಡೆಯುವುದನ್ನು ಯುವ…

Read More

ಕುಶಾಲನಗರ NEWS DESK ಜು.31 : ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ವತಿಯಿಂದ ಕುಶಾಲನಗರ, ಪುತ್ತೂರು, ಸುಳ್ಯ, ಮೂಡಬಿದ್ರೆ ಹಾಗೂ ಹಾಸನ ಶಾಖೆಗಳಲ್ಲಿ ನಡೆಯುತ್ತಿರುವ ವಿಶೇಷ ಆಟಿ ಸೇಲ್ ಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಸೇಲ್ ಇನ್ನು ಮೂರು ದಿನ ಮಾತ್ರ ಲಭ್ಯವಿದೆ. ಸೇಲ್ ಅಂಗವಾಗಿ ಚಿನ್ನದ ಆಭರಣಗಳ ವಿ.ಎ. (VA) ಶುಲ್ಕದ ಮೇಲೆ ಪ್ರತಿ ಗ್ರಾಂ.ಗೆ ರೂ.500 ರವರೆಗೆ, ಬೆಳ್ಳಿ ಆಭರಣಗಳ ಮೇಲೆ ಪ್ರತಿ ಕೆ.ಜಿಗೆ ರೂ.6,000 ಹಾಗೂ ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರೆಟ್ ಗೆ ರೂ.7,000ರವರೆಗೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಹಳೆಯ ಗೋ ಡೈಮಂಡ್ಸ್ ಆಭರಣಗಳಿಗೆ ಶೇ.90 ಬೈಬ್ಯಾಕ್ ಸೌಲಭ್ಯವೂ ಲಭ್ಯವಿದೆ. ಚಿನ್ನದ ದರ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಆಭರಣ ಖರೀದಿಗೆ ಇದು ಸೂಕ್ತ ಸಮಯವಾಗಿದ್ದು 8% VA ಶುಲ್ಕದಿಂದ ಆರಂಭವಾಗುವ ಹಳದಿ ಟ್ಯಾಗ್ ಆಭರಣಗಳು, ನವೀನ ವಿನ್ಯಾಸದ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳ ವಿಶಾಲ ಸಂಗ್ರಹ ಗ್ರಾಹಕರಿಗೆ ಲಭ್ಯವಿದೆ. ಸೀಮಿತ ಅವಧಿಗೆ ಮಾತ್ರ ನಡೆಯುತ್ತಿರುವ ಈ ವಿಶೇಷ…

Read More

ಮಡಿಕೇರಿ NEWS DESK ಜು.31 : ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿರುವ ಉಡುಪಿ ಕ್ಷೇತ್ರದ ಶಾಸಕ ಯಶಪಾಲ್ ಸುವರ್ಣ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಮಡಿಕೇರಿ ನಗರ ಠಾಣೆಯಲ್ಲಿ ದೂರು ನೀಡಿದೆ. ದೂರು ನೀಡಿದ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಅವರು ಶಾಸಕ ಯಶಪಾಲ್ ಸುವರ್ಣ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು. ವಿಳ0ಬವಿಲ್ಲದೆ ಎಫ್‌ಐಆರ್ ದಾಖಲಿಸುವ ಮೂಲಕ ಇನ್ನು ಮುಂದೆ ಈ ರೀತಿಯ ಪ್ರಕರಣಗಳು ನಡೆಯದಂತೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಸಂಸತ್ ನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಒಬ್ಬ ಸಜ್ಜನ ರಾಜಕಾಣಿಯಾಗಿದ್ದಾರೆ. ಆದರೆ ಇವರ ಕುರಿತು ಶಾಸಕ ಯಶಪಾಲ್ ಅವರು ದ್ವೇಷ ಭಾಷಣ ಮಾಡಿದ್ದಾರೆ. ರಾಹುಲ್ ಗಾಂಧಿ ಅವರ ವಂಶವನ್ನು ನಾಶ ಮಾಡುವುದಾಗಿ ಬೆದರಿಕೆ ಮತ್ತು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಕಾನೂನಿಗೆ ವಿರುದ್ಧವಾದ ಆಕ್ಷೇಪಾರ್ಹ…

Read More