ಸುಂಟಿಕೊಪ್ಪ NEWS DESK ಜ.13 : ಸುಂಟಿಕೊಪ್ಪ ಸಮೀಪ ಮಳ್ಳೂರು ಗ್ರಾಮದಲ್ಲಿ ನಾಲ್ಕು ತಿಂಗಳ ಕರುವೊಂದು ಮೃತಪಟ್ಟಿದ್ದು, ವನ್ಯಜೀವಿ ದಾಳಿ ಮಾಡಿರಬಹುದೆಂದು ಶಂಕಿಸಲಾಗಿದೆ. ಮಳ್ಳೂರಿನ ನಿವಾಸಿ ತೇಜ ಕುಮಾರ್ ಎಂಬುವವರಿಗೆ ಸೇರಿದ ಕರು ಇದಾಗಿದ್ದು, ಮೃತದೇಹದ ಅರ್ಧಭಾಗವನ್ನು ತಿಂದು ಹಾಕಿರುವುದು ಗೋಚರಿಸಿದೆ. ಕರುವನ್ನು ಹಾರಂಗಿ ಹಿನ್ನೀರು ಭಾಗದ ಕಾಫಿ ಕಣದ ಪಕ್ಕದಲ್ಲಿ ಮೇಯಲೆಂದು ಕಟ್ಟಿ ಹಾಕಲಾಗಿತ್ತು. ಹುಲಿ ಅಥವಾ ಚಿರತೆ ದಾಳಿಯಿಂದ ಕರು ಮೃತಪಟ್ಟಿರಬಹುದೆಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಆನೆಕಾಡು ವ್ಯಾಪ್ತಿಯ ಅರಣ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಲೇಖಕ: admin
ಮಡಿಕೇರಿ NEWS DESK ಜ.13 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ವಿರುದ್ಧ ವಿನಾಕಾರಣ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ಬಂಧಿಸಿದರೆ ಪ್ರತಿಭಟನೆ ನಡೆಸುವುದಾಗಿ ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೇರ ದಿನೇಶ್ ಬೆಳ್ಯಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೇವಲ ದ್ವೇಷ ಮತ್ತು ವಿಷಯಾಂತರದ ಕಾರಣಕ್ಕಾಗಿ ನಾಚಪ್ಪ ಅವರ ವಿರುದ್ಧ ದೂರು ನೀಡಿ ಬಂಧನಕ್ಕಾಗಿ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ನಾಚಪ್ಪ ಅವರನ್ನು ಬಂಧನಕ್ಕೆ ಒಳಪಡಿಸಿದರೆ ಅವರ ಹೋರಾಟ ಮತ್ತು ಧ್ವನಿಯನ್ನು ಅಡಗಿಸಿ ಕೊಡವರ ಬಲ ಕುಗ್ಗಿಸಬಹುದು ಎನ್ನುವುದು ಭ್ರಮೆ. ನಾಚಪ್ಪ ಅವರ ಹೋರಾಟ ಕೊಡವ ಜನಾಂಗದ ಪರವಾಗಿದ್ದು, ಕಾನೂನುಬದ್ಧ ಹಕ್ಕನ್ನು ಪ್ರತಿಪಾದಿಸಿದ್ದಾರೆಯೆ ಹೊರತು ಯಾರದ್ದೇ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರ ಮಾಡಿಲ್ಲ. ಅವರ ವಿರುದ್ಧದ ದೂರಿನಲ್ಲಿ ಹುರುಳಿಲ್ಲ ಎನ್ನುವ ಅರಿವಿದ್ದರೂ ಇಲಾಖೆ ಪ್ರಕರಣ ದಾಖಲಿಸಿರುವುದನ್ನು ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ನಾಚಪ್ಪ ಅವರನ್ನ ಬಂಧಿಸಿ ಅವಮಾನ ಮಾಡಿದರೆ, ಇಡೀ ಕೊಡವ ಸಮುದಾಯ ಪ್ರತಿಭಟಿಸಲಿದೆ ಎಂದು ತಿಳಿಸಿರುವ ದಿನೇಶ್…
ಮಡಿಕೇರಿ ಜ.13 NEWS DESK : ಹೊದ್ದೂರು ಗ್ರಾಮ ಪಂಚಾಯಿತಿಯು ಇದೀಗ ಇಡೀ ದೇಶಕ್ಕೆ ಮಾದರಿ ಪಂಚಾಯಿತಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸದಸ್ಯರು, ಸಿಬ್ಬಂದಿ ವರ್ಗದವರ ಸಹಕಾರ ಮತ್ತು ಒಗ್ಗಟ್ಟಿನಿಂದ ಮಾತ್ರ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಹೊದ್ದೂರು ಗ್ರಾ.ಪಂ ಅಧ್ಯಕ್ಷ ಹೆಚ್.ಎ.ಹಂಸ ಕೊಟ್ಟಮುಡಿ ಅಭಿಪ್ರಾಯಪಟ್ಟರು. ಚಿತ್ರದುರ್ಗ ಜಿಲ್ಲೆಯ ತುರುವನೂರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯು ಹೊದ್ದೂರು ಗ್ರಾಮ ಪಂಚಾಯಿತಿಗೆ ಇತ್ತೀಚಿಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿ ಆಡಳಿತ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಸಂದರ್ಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹೆಚ್.ಎ.ಹಂಸ ಹೊದ್ದೂರು ಗ್ರಾಮ ಪಂಚಾಯಿತಿಯು ಬಡವರ ಪರವಾಗಿ ವಿಶೇಷ ಕಾಳಜಿಯನ್ನು ವಹಿಸಿ ಕಾರ್ಯನಿರ್ವಹಿಸುತ್ತಿದೆ.ವಸತಿ ರಹಿತರಿಗೆ ನಿವೇಶನ ನೀಡುವಲ್ಲಿ ಗ್ರಾಮ ಪಂಚಾಯಿತಿ ಇಡೀ ಕೊಡಗು ಜಿಲ್ಲೆಯಲ್ಲಿ ಮುಂಚೂಣಿಯಲ್ಲಿದ್ದು,ರಾಜ್ಯದ ವಿವಿಧ ಜಿಲ್ಲೆಗಳ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯ ಸದಸ್ಯರು ಭೇಟಿ ನೀಡಿ ಹೊದ್ದೂರು ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳು ಇನ್ನಷ್ಟು ವಿಶೇಷವಾಗಿ ಗ್ರಾಮ ಪಂಚಾಯಿತಿ ಕಾರ್ಯನಿರ್ವಹಿಸಲಿದೆ ಎಂದು…
ಮಡಿಕೇರಿ ಜ.13 NEWS DESK : ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ವತಿಯಿಂದ ಜ.23 ಮತ್ತು 24 ರಂದು ಮಡಿಕೇರಿಯಲ್ಲಿ ನೀನಾಸಂ ತಿರುಗಾಟದ ನಾಟಕ ಪ್ರದಶ೯ನ ನಡೆಯಲಿದೆ. ನಗರದ ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದಲ್ಲಿ (ಶ್ರೀ ಓಂಕಾರೇಶ್ವರ ದೇವಾಲಯ ಬಳಿ) ಜ.22 ರಂದು ಸಂಜೆ 6.30 ಗಂಟೆಗೆ ನೀನಾಸಂ ತಿರುಗಾಟದ ಅಂಗವಾಗಿ ವಿದ್ಯಾನಿಧಿ ವನಾರಸೆ (ಪ್ರಸಾದ್) ನಿದೇ೯ಶನದ ಅಂಕದ ಪರದೆ ಎಂಬ ನಾಟಕ ( ರಚನೆ:ಮರಾಠಿ ಮೂಲ: ಅಭಿರಾಮ್ ಭಡ್ಕಮಕರ್, ಕನ್ನಡಕ್ಕೆ: ಜಯಂತ ಕಾಯ್ಕಿಣಿ ) ಪ್ರದಶ೯ನಗೊಳ್ಳಲಿದೆ. ಜ.23 ರಂದು ಸಂಜೆ 6.30 ಗಂಟೆಗೆ ‘ಮಾಲತೀ ಮಾಧವ’ (ಮೂಲ ರಚನೆ: ಭವಭೂತಿ, ಕನ್ನಡ ರೂಪ ಮತ್ತು ನಿರ್ದೇಶನ: ಅಕ್ಷರ ಕೆ.ವಿ) ನಾಟಕಗಳು ಪ್ರದಶ೯ನಗೊಳ್ಳಲಿದೆ ಎಂದು ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರದ ಕಾಯ೯ದಶಿ೯ ಬಾಲಾಜಿ ಕಶ್ಯಪ್ ಮಾಹಿತಿ ನೀಡಿದ್ದಾರೆ.
ಮಡಿಕೇರಿ ಜ.13 NEWS DESK : ಬೇಳೂರು ಬಸವನಹಳ್ಳಿ ಕಾರೆಕೊಪ್ಪದಲ್ಲಿ ಜ.19 ಮತ್ತು 20 ರಂದು ಶ್ರೀ ಸ್ವಾಮಿ ಕೊರಗಜ್ಜ ಹಾಗೂ ಆದಿ ಶಕ್ತಿ ಪಾಷಣಮೂರ್ತಿ ದೈವದ ಕೋಲ ನೇಮೋತ್ಸವ ನಡೆಯಲಿದೆ. ಬೇಳೂರು ಬಸವನಹಳ್ಳಿ ಕಾರೆಕೊಪ್ಪದ ಶ್ರೀ ಸ್ವಾಮಿ ಕೊರಗಜ್ಜ ಹಾಗೂ ಆದಿ ಶಕ್ತಿ ಪಾಷಣಮೂರ್ತಿ ದೈವಸ್ಥಾನದಲ್ಲಿ ಜ.19 ರಂದು ಸಂಜೆ 7 ಗಂಟೆಗೆ ಭಂಡಾರ ತೆಗೆಯುವುದು, 8 ಗಂಟೆಗೆ ಅನ್ನಸಂತರ್ಪಣೆ ನೆರವೇರಲಿದೆ. ರಾತ್ರಿ 9 ಗಂಟೆಯಿಂದ ಶ್ರೀ ಆದಿ ಶಕ್ತಿ ಪಾಷಣಮೂರ್ತಿ ತಾಯಿಯ ಕೋಲ ನೇಮೋತ್ಸವ ಜರುಗಲಿದೆ. ಜ.20 ರಂದು ಬೆಳಿಗ್ಗೆ ಸ್ವಾಮಿ ಕೊರಗಜ್ಜ ದೈವದ ಕೋಲ ನೇಮೋತ್ಸವ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೈವಸ್ಥಾನದ ಪ್ರಮುಖರು ಕೋರಿದ್ದಾರೆ. ಹೆಚ್ಚಿನ ಮಾಹಿತಿಗೆ 8277337603, 9481855328 ಸಂಪರ್ಕಿಸಬಹುದಾಗಿದೆ.
ಬೆಂಗಳೂರು ಡಿ.13 NEWS DESK : ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷಿ ಯೋಜನೆ ಯಾದ ‘ಮನೆಗೊಂದು ಗ್ರಂಥಾಲಯ’ ವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಪ್ರಾಧಿಕಾರ ಪ್ರಕಟಿಸಿರುವ ಕುಮಾರ ವ್ಯಾಸಭಾರತ ಸಂಪುಟಗಳನ್ನು ಲೋಕಾರ್ಪಣೆಗೊಳಿಸಿದರು. ‘ಮನೆಗೊಂದು ಗ್ರಂಥಾಲಯ’ದ ಮೊದಲ ಗ್ರಂಥಾಲಯವನ್ನು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿಯೇ ಸ್ಥಾಪಿಸುತ್ತಿದ್ದು, ಗ್ರಂಥಾಲಯಕ್ಕೆ ಹಿರಿಯ ಸಾಹಿತಿ ನಾಡೋಜ ಡಾ. ಹಂ.ಪ ನಾಗರಾಜಯ್ಯ ಚಾಲನೆ ನೀಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಗ್ರಂಥಾಲಯ ಫಲಕವನ್ನು ಅನಾವರಣಗೊಳಿಸಿದರು. ಮನೆಗೊಂದು ಗ್ರಂಥಾಲಯ ಈ ಯೋಜನೆಯು ಕನ್ನಡ ಪುಸ್ತಕ ಪ್ರಾಧಿಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಈ ಯೋಜನೆಯಡಿ ರಾಜ್ಯದಾದ್ಯಂತ ಪ್ರಸಕ್ತ ಸಮಿತಿಯ ಅವಧಿಯಲ್ಲಿ ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ. ಪುಸ್ತಕಾಭಿರುಚಿಯನ್ನು ಇಂದಿನ ಯುವಪೀಳಿಗೆಯಲ್ಲಿ ಬೆಳೆಸುವುದು ಇದರ ಮುಖ್ಯ ಉದ್ದೇಶ. ಮರೆಯಾಗುತ್ತಿರುವ ಪುಸ್ತಕ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿ ಮನೆಯಲ್ಲಿಯೂ ಒಂದು ಪುಟ್ಟ ಗ್ರಂಥಾಲಯ ಕಟ್ಟುವುದು ಈ ಯೋಜನೆಯ ಕನಸು.…
ಮಡಿಕೇರಿ ಜ.13 NEWS DESK : ಹೊದ್ದೂರು ಗ್ರಾಮ ಪಂಚಾಯಿತಿಗೆ ಚಿತ್ರದುರ್ಗ ಜಿಲ್ಲೆಯ ಕೂನಬೇವು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಅಭಿವೃದ್ಧಿ ಅಧಿಕಾರಿ,ಸಿಬ್ಬಂದಿ ವರ್ಗ ಭೇಟಿ ನೀಡಿ ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆಯನ್ನು ಶ್ಲಾಘಿಸಿದರು. ಈ ಸಂದರ್ಭ ಮಾತನಾಡಿದ ಕೂನಬೇವು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಧನಂಜಯ ಇಡೀ ರಾಜ್ಯಕ್ಕೆ ಹೊದ್ದೂರು ಗ್ರಾ.ಪಂ ಆಡಳಿತ ವ್ಯವಸ್ಥೆ ಮಾದರಿಯಾಗಿದೆ. ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿ ನೇತೃತ್ವದಲ್ಲಿ ಉತ್ತಮ ಆಡಳಿತ ವ್ಯವಸ್ಥೆ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಹೊದ್ದೂರು ಗ್ರಾಮ ಪಂಚಾಯಿತಿಯಲ್ಲಿ ಅಳವಡಿಸಿಕೊಂಡಿರುವ ಆಡಳಿತ ಕ್ರಮಗಳು, ಪಾರದರ್ಶಕತೆ, ಸಹಕಾರ ಮನೋಭಾವ ತುಂಬಾ ಶ್ಲಾಘನೀಯ. ಹೊದ್ದೂರು ಗ್ರಾಮ ಪಂಚಾಯಿತಿ ತೆಗೆದುಕೊಂಡಿರುವ ಜನಪರ ಕಾಳಜಿಯ ಆಡಳಿತವನ್ನು ಇತರೆ ಗ್ರಾಮ ಪಂಚಾಯಿತಿಗಳು ಕೂಡ ಅಳವಡಿಸಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎ.ಹಂಸ ಕೊಟ್ಟಮುಡಿ, ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ, ಗ್ರಾ.ಪಂ ಸದಸ್ಯರು ಮತ್ತು ಸಿಬ್ಬಂದಿಗಳು ಹಾಜರಿದ್ದರು.
ನಾಪೋಕ್ಲು ಜ.13 NEWS DESK : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಮಾನತೆಯನ್ನು ಸಾರುತ್ತಾ ಬಂದಿದ್ದು, ಸಮಾಜದಲ್ಲಿ ಎಲ್ಲರೂ ತಮ್ಮ ತಮ್ಮ ಧರ್ಮವನ್ನು ನಿರ್ಭೀತಿಯಿಂದ ಪಾಲನೆ ಮಾಡುವಂತಾಗಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು. ಕೂರ್ಗ್ ಜಂಇಯ್ಯುತುಲ್ ಉಲಾಮ 1973 ರಿಂದ ತನ್ನ ಯಶಸ್ವಿ ಐವತ್ತು ಸಂವತ್ಸರಗಳನ್ನು ಪೂರೈಸಿಕೊಂಡು ಬರುತ್ತಿರುವ ಹಿನ್ನೆಲೆಯಲ್ಲಿ “ಸತ್ಯವಂತರ ಸತ್ಯದಲ್ಲಿರಿ” ಎಂಬ ಘೋಷವಾಕ್ಯದೊಂದಿಗೆ ಹಜರತ್ ಸೂಫಿ ಶಾಹಿದ್ ಹಾಗೂ ಹಸನ್ ಸಖಾಫಿ ಅಂತ್ಯ ವಿಶ್ರಾಂತಿಗೊಳ್ಳುತ್ತಿರುವ ಚರಿತ್ರೆ ಪ್ರಸಿದ್ಧವಾದ ಎಮ್ಮೆ ಮಾಡಿನಲ್ಲಿ ಆಯೋಜಿಸಿದ್ದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯದಲ್ಲಿ ಜಾತ್ಯತೀತ ಧರ್ಮ ನಿರಪೇಕ್ಷತೆಯ ಸರ್ಕಾರ ಅಧಿಕಾರದಲ್ಲಿದೆ. ಎಲ್ಲಾ ಧರ್ಮದವರು ಸಮಾನತೆಯಿಂದ ಕಾಣುವ ಧೋರಣೆಯನ್ನು ಹೊಂದಿದೆ. ನೂರು ವರ್ಷಗಳ ಕಾಲ ಕೂರ್ಗ್ ಜಮಾತುಲ್ ಉಲಾಮ ಸಂಸ್ಥೆ ಶಕ್ತಿಶಾಲಿಯಾಗಿ ಬೆಳೆದು ಜನಸೇವೆ ಮಾಡುವಂತಾಗಲಿ. ಸಂಘ ಸಂಸ್ಥೆಗಳು ಮನುಕುಲದ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಅದು ನಮ್ಮೆಲ್ಲರ ಕರ್ತವ್ಯ ಎಂದರು.ಸರ್ಕಾರ ಬಡಜನರ ಶ್ರೇಯೋಭಿವೃದ್ಧಿಗೆ…
ಗುಡಿಬಂಡೆ NEWS DESK ಜ.13 : ನಿಯಂತ್ರಣ ಕಳೆದುಕೊಂಡ ಕಾರು ಕೆರೆಕಟ್ಟೆಗೆ ಡಿಕ್ಕಿ ಹೊಡೆದ ಪರಿಣಾಮ ಪತ್ರಕರ್ತರೊಬ್ಬರು ಮೃತಪಟ್ಟಿರುವ ಘಟನೆ ಗುಡಿಬಂಡೆ ತಾಲೂಕಿನ ಮಾಚಹಳ್ಳಿ ಗ್ರಾಮದಲ್ಲಿ ನಡೆದಿದೆ. ಪತ್ರಕರ್ತ ಭರತ್ (34) ಸಾವನ್ನಪ್ಪಿರುವ ದುರ್ದೈವಿ. ಫೆ.7ರಂದು ನಡೆಯಬೇಕಾಗಿದ್ದ ತಮ್ಮ ಮಗುವಿನ ನಾಮಕರಣಕ್ಕಾಗಿ ಗುಡಿಬಂಡೆಯಲ್ಲಿ ಭವನವನ್ನು ಖಾತ್ರಿ ಪಡಿಸಿಕೊಂಡು ಬಾಗೇಪಲ್ಲಿಗೆ ಮರಳುತಿದ್ದಾಗ ನಿಯಂತ್ರಣ ಕಳೆದುಕೊಂಡ ಕಾರು ಮಾಚಹಳ್ಳಿ ಕೆರೆಕಟ್ಟೆಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಭರತ್ ತಲೆಗೆ ತೀವ್ರ ಗಾಯಗಳಾಗಿದ್ದು, ಗುಡಿಬಂಡೆ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ತಿಳಿದು ಬಂದಿದೆ. ಮೃತರು ಪತ್ನಿ ಹಾಗೂ ಒಂದು ವರ್ಷದ ಪುತ್ರಿಯನ್ನು ಅಗಲಿದ್ದಾರೆ.
ನಾಪೋಕ್ಲು ಜ.13 NEWS DESK : ಕ್ಯಾಪ್ಟನ್ ಅರೆಯಡ ಕೃತಿಕ ದೇವಯ್ಯ ಬಿಇಜಿ ಕೇಂದ್ರ ಪುಣೆಯಲ್ಲಿ ಜ.15 ರಂದು ನಡೆಯಲಿರುವ ಆರ್ಮಿ ಡೇ ಪರೇಡ್ -2025 ರಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಸ್ತುತ ಆರ್ಮಿ ಏರ್ ಡಿಫೆನ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಯಾಪ್ಟನ್ ಕೃತಿಕ ದೇವಯ್ಯ 2018 ರಲ್ಲಿ ದೆಹಲಿಯಲ್ಲಿ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಿದ್ದರು. ಇವರು ಮಡಿಕೇರಿ ತಾಲೂಕಿನ ಯವಕಪಾಡಿ ಗ್ರಾಮದ ಅರೆಯಡ ಜೀವನ್ ದೇವಯ್ಯ ಮತ್ತು ಬಬಿತ ದಂಪತಿಗಳ ಪುತ್ರಿ. ವರದಿ : ದುಗ್ಗಳ ಸದಾನಂದ.






