ಪೊನ್ನಂಪೇಟೆ ಜ.13 NEWS DESK : ಕೊಟ್ಟಮುಡಿಯ ಮರ್ಕಜ್ಹುಲ್ ಹಿದಾಯ ಪದವಿ ಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜಿನಲ್ಲಿ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷ ದುದ್ದಿಯಂಡ ಹೆಚ್.ಸೂಫಿ ಹಾಜಿ ಪ್ರಾಯೋಜಿಸಿರುವ ಮಾಹಿತಿ ತಂತ್ರಜ್ಞಾನ ಕಲಿಕಾ ಕೇಂದ್ರವನ್ನು ಉದ್ಘಾಟಿಸಲಾಯಿತು. ಸೂಫಿ ಹಾಜಿ ಅವರ ಮಾಲಿಕತ್ವದ ಡಿ. ಹೆಚ್. ಎಸ್. ಗ್ರೂಪ್ ಆಫ್ ಕಂಪನೀಸ್ ಮೂಲಕ ತಮ್ಮ ತಂದೆ ದುದ್ದಿಯಂಡ ಪಿ. ಹುಸೇನಾರ್ ಹಾಜಿ ಮತ್ತು ತಾಯಿ ಆಮೀನ ಹಜ್ಜುಮ್ಮ ಅವರ ಸ್ಮರಣಾರ್ಥವಾಗಿ ಪ್ರಾಯೋಜಿಸಿರುವ ಈ ಕಲಿಕಾ ಕೇಂದ್ರವನ್ನು ಭಾರತದ ಪ್ರಸಿದ್ಧ ವಿದ್ವಾಂಸರಾದ ಇಂಡಿಯನ್ ಗ್ರ್ಯಾಂಡ್ ಮುಫ್ತಿ, ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕ್ಕರ್ ಮುಸ್ಲಿಯರ್ ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಮಾಹಿತಿ ತಂತ್ರಜ್ಞಾನ ವಲಯ ಉಳಿದೆಲ್ಲ ವಲಯಗಳಿಂದ ಹೆಚ್ಚು ಅವಕಾಶಗಳನ್ನು ಮತ್ತು ಅನುಕೂಲಗಳನ್ನು ಕಲ್ಪಿಸುತ್ತದೆ ಎಂದು ಹೇಳಿದರು. ನಂತರ ನಡೆದ ಸಾಮೂಹಿಕ ಪ್ರಾರ್ಥನೆಗೆ ಎ.ಪಿ.ಅಬೂಬಕ್ಕರ್ ಮುಸ್ಲಿಯರ್ ನೇತೃತ್ವ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಮಾತನಾಡಿ,…
ಲೇಖಕ: admin
ವಿರಾಜಪೇಟೆ ಜ.13 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್, ವಿರಾಜಪೇಟೆ ಸ್ವಸಹಾಯ ಸಂಘಗಳ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಹೈನುಗಾರಿಕೆ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಿತು. ಗೋಣಿಕೊಪ್ಪಲು ವಲಯದ ಹರಿಶ್ಚಂದ್ರಪುರ ಕಾರ್ಯಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವಿನು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ತಂಡದ ಸದಸ್ಯ ಯೋಜನೆಯ ಕಿರು ಆರ್ಥಿಕ ಪ್ರಗತಿ ನಿಧಿ ಪಡೆದುಕೊಂಡು ಪ್ರಾರಂಭದಲ್ಲಿ ಒಂದು ಹಸುವನ್ನು ಖರೀದಿ ಮಾಡಿ ಈಗ 10 ಹಸುಗಳನ್ನು ಹೊಂದಿದ್ದಾರೆ. ದಿನಕ್ಕೆ 84 ಲೀಟರ್ ಹಾಲು ನೀಡುತ್ತಿದೆ. ಇದರಿಂದ ದಿನಕ್ಕೆ 2,500 ರೂ ಆದಾಯ ಬರುತ್ತಿದ್ದು, ನಮ್ಮ ಗೋಣಿಕೊಪ್ಪಲಿನಲ್ಲಿ ಹಾಲಿನ ಡೈರಿ ಇಲ್ಲದ ಕಾರಣ ತುಂಬಾ ಸಮಸ್ಯೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೈನುಗಾರಿಕೆ ಮಾಡುತ್ತೇನೆ, ಹೈನುಗಾರಿಕೆ ಒಂದು ಲಾಭದಾಯಕವಾಗಿದೆ ಎಂದರಲ್ಲದೆ ಹಲವು ಹಸುಗಳ ತಳಿಗಳ ಬಗ್ಗೆ ಮಾಹಿತಿ ನೀಡಿ, ಗೊಬ್ಬರದಿಂದ ಆದಾಯ ಬರುತ್ತದೆ, ಹೈನುಗಾರಿಕೆಯಿಂದ ಕುಟುಂಬವನ್ನು ನಿರ್ವಹಣೆ ಮಾಡಬಹುದು…
ಮಡಿಕೇರಿ ಜ.13 NEWS DESK : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ವಿರುದ್ಧ ಪ್ರಕರಣ ದಾಖಲಾಗಿರುವ ವಿಚಾರ ತಿಳಿದು ಬಂದಿದ್ದು, ಇದನ್ನು ತೀವ್ರವಾಗಿ ಖಂಡಿಸುವುದಾಗಿ ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ನ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡವರ ಹಕ್ಕುಗಳ ಪರ ಹೋರಾಟ ನಡೆಸುತ್ತಿರುವ ನಾಚಪ್ಪ ಅವರು ಕೊಡವರ ಧ್ವನಿಯಾಗಿದ್ದಾರೆ. ಕೊಡಗಿನ ಹಳ್ಳಿಯಿಂದ ದೆಹಲಿಯ ಸಂಸತ್ ವರೆಗೆ ಕೊಡವರ ಪರ ಹೋರಾಟವನ್ನು ಕೊಂಡೊಯ್ದಿದ್ದಾರೆ. ಸುಳ್ಳು ದೂರು ನೀಡಿ ಇವರ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿದೆ. ಇದನ್ನು ತೀವ್ರವಾಗಿ ವಿರೋಧಿಸುವುದಲ್ಲದೆ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸುವುದಾಗಿ ಹೇಳಿದ್ದಾರೆ. ಅತ್ಯಂತ ಸೂಕ್ಷ್ಮ ಮತ್ತು ವಿಶಿಷ್ಟ ಜನಾಂಗವಾಗಿರುವ ಕೊಡವರ ಹಕ್ಕುಗಳಿಗಾಗಿ ನಾಚಪ್ಪ ಅವರು ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಕೊಡವ ಲ್ಯಾಂಡ್ ಸ್ವಾಯತ್ತತೆ, ಕೊಡವರಿಗೆ ಎಸ್‍ಟಿ ಟ್ಯಾಗ್, ಕೊಡವ ಭಾಷೆಯನ್ನು 8ನೇ ಶೆಡ್ಯೂಲ್ ಗೆ ಸೇರಿಸುವುದು, ಕೋವಿಯ ಹಕ್ಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು…
ವಿರಾಜಪೇಟೆ ಜ.13 NEWS DESK : ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್.ಎಸ್.ಎಸ್ ಘಟಕ ಹಾಗೂ ಎಂ.ಕಾಂ ಸ್ನಾತಕೋತ್ತರ ವಿಭಾಗದ ವತಿಯಿಂದ ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಯಿತು. ಸಂತ ಅನ್ನಮ್ಮ ಪಿ.ಯು.ಕಾಲೇಜಿನ ಪ್ರಾಂಶುಪಾಲ ಹಾಗೂ ಪದವಿ ಕಾಲೇಜಿನ ವ್ಯವಸ್ಥಾಪಕ ರೆ.ಫಾ.ಮದಲೈ ಮುತ್ತು ಕಾರ್ಯಕ್ರಮ ಉದ್ಘಾಟಿಸಿದರು.ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಬಿ.ಡಿ.ಹೇಮ ಮಾತನಾಡಿ, ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಮಾರ್ಗದರ್ಶನ ಹಾಗೂ ತತ್ವಗಳನ್ನು ಅನುಸರಿಸುವುದರ ಮೂಲಕ ಅವರ ದ್ಯೇಯ ಉದ್ದೇಶಗಳನ್ನುಸಾಕಾರಗೊಳಿಸಿ ರಾಷ್ಟ್ರದ ಪ್ರಗತಿಗೆ ಶ್ರಮಿಸಬೇಕೆಂದು ಕರೆ ಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಸ್ವಾಮಿ ವಿವೇಕಾನಂದರು ಯುವಕರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು. ಇಂದು ರಾಷ್ಟ್ರವು ವಿಕಸಿತ ಭಾರತದ ಪರಿಕಲ್ಪನೆಯನ್ನು ಹೊಂದಿದ್ದು, ಆರ್ಥಿಕ ಅಭಿವೃದ್ಧಿ ಆಗುವತ್ತ ಗುರಿಯನ್ನು ಮುಟ್ಟುತ್ತಿದೆ. ಆ ಗುರಿ ಸಾಕಾರಗೊಳ್ಳಲು ಯುವಕರ ಪಾತ್ರ ಅತೀ ಪ್ರಮುಖವಾಗಿದ್ದು, ಯುವಕರು ತನ್ನದೇಯಾದ ಕೊಡುಗೆಯನ್ನು ರಾಷ್ಟ್ರಕ್ಕೆ ನೀಡಬೇಕೆಂದರು. ಕಾಲೇಜಿನ ಎನ್.ಎಸ್.ಎಸ್. ಘಟಕದ ಅಧಿಕಾರಿ ಬಿ.ಎನ್.ಶಾಂತಿಭೂಷಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಅರ್ಜುನ್, ವಿಲೀನ ಗೋನ್ಸಾಲ್ವೇಸ್,…
ಸುಂಟಿಕೊಪ್ಪ ಜ.13 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್‍ಬೈಲ್ ಕಾರ್ಯಕ್ಷೇತ್ರದ ವಿವಿಧ ಸ್ವಸಹಾಯ ಸಂಘಗಳ ವತಿಯಿಂದ ಕಾನ್‍ಬೈಲ್ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು. ಶಾಲೆಯ ಆವರಣದಲ್ಲಿ ಬೆಳೆದ ಕಾಡು ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್‍ಬೈಲು ಒಕ್ಕೂಟದ ಕಾರ್ಯದರ್ಶಿ ಪುಷ್ಪಲತಾ, ಮಾಜಿ ಅಧ್ಯಕ್ಷ ಖತೀಜ ಹಾಗೂ ಸೇವಾ ಪ್ರತಿನಿಧಿ ಯಶೋಧ ಬಸವರಾಜ್ ಸ್ವಚ್ಛತಾ ಶ್ರಮದಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಸ್ವಸಹಾಯ ಸಂಘಗಳಾದ ಜನನಿ, ಭೂಮಿಕ, ಶ್ರೀನಿಧಿ, ಮೂಕಾಂಬಿಕಾ, ಕನ್ನಿಕ, ಭಗವತಿ ದೃತಿ ಹಾಗೂ ನೇತಾಜಿ ಸಂಘದ ಸದಸ್ಯರು ಪಾಲ್ಗೊಂಡಿದ್ದರು.
ಕುಶಾಲನಗರ ಜ.13 NEWS DESK : ಹನ್ನೆರಡನೇ ಶತಮಾನದ ಶರಣರು ಸತ್ಯ ಶುದ್ಧವಾದ ಕಾಯಕಕ್ಕೆ ಹೆಚ್ಚಿನ ಮನ್ನಣೆ ನೀಡಿದ್ದರು. ನುಡಿದಂತೆ ನಡೆದು ಪ್ರಾತಃಸ್ಮರಣೀಯವಾಗುಳಿದರು. ಶರಣರ ಈ ನಡೆ ಮನುಕುಲಕ್ಕೆ ಎಲ್ಲಾ ಕಾಲಕ್ಕೂ ನಿತ್ಯನೂತನ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾಧ್ಯಕ್ಷ ಹೆಚ್.ವಿ.ಶಿವಪ್ಪ ಹೇಳಿದರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಚಿಕ್ಕಹೊಸೂರಿನ ಕೃಷಿಕರಾದ ಜಗದೀಶ್ ಹಾಗೂ ಶೈಲಜಾ ಶರಣ ದಂಪತಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ಯಾವ ಕಾಯಕವೇ ಆಗಲೀ ಸತ್ಯವಾಗಿರಬೇಕು ಹಾಗೂ ಶುದ್ಧವಾಗಿರಬೇಕು. ಕಾರ್ಮಿಕರ ಅಲಭ್ಯದ ಇಂದಿನ ದಿನಗಳಲ್ಲಿ ಶರಣ ದಂಪತಿಗಳಾದ ಜಗದೀಶ್ ಹಾಗೂ ಶೈಲಾ ದಂಪತಿಗಳ ಕೃಷಿ ಸೇವೆಯನ್ನು ಶಿವಪ್ಪ ಶ್ಲಾಘಿಸಿದರು. ಸತತ ಅಧ್ಯಯನ ಹಾಗೂ ನಿರಂತರ ಕಲಿಕೆಯೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ತೋರುವ ಮೂಲಕ ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನಿಯುಕ್ತಿಗೊಂಡ ಶರಣ ದಂಪತಿಗಳ ಪುತ್ರ ಡಾ.ತೇಜಸ್ವಿ ಕುಮಾರ್ ಅವರನ್ನು ಇದೇ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಮಾತನಾಡಿದ ಡಾ.ತೇಜಸ್ವಿ ಕುಮಾರ್,…
ಮಡಿಕೇರಿ ಜ.13 NEWS DESK : ಗರಗಂದೂರಿನ ಶ್ರೀಮತಿ ಡಿ.ಚೆನ್ನಮ್ಮ ಎಜುಕೇಷನ್ ಸೊಸೈಟಿಯ ವಜ್ರಮಹೋತ್ಸವ ಸಂದಭ೯ ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ 2 ಲಕ್ಷ ರು. ಮೌಲ್ಯದ 5 ಕಂಪ್ಟೂಟರ್ ಗಳನ್ನು ಶಿಕ್ಷಣ ಸಂಸ್ಥೆಗೆ ನೀಡಲಾಯಿತು. ಸಂಸ್ಥೆಯಲ್ಲಿ ಆಯೋಜಿತ ವಜ್ರಮಹೋತ್ಸವ ಸಂದಭ೯ದಲ್ಲಿ ರೋಟರಿ ಮಾಜಿ ಜಿಲ್ಲಾ ಗವನ೯ರ್ ಹೆಚ್.ಆರ್.ಕೇಶವ್ ಕಂಪ್ಯೂಟರ್ ಗಳಿಗೆ ಚಾಲನೆ ನೀಡಿದರು. ಶ್ರೀಮತಿ ಡಿ.ಚೆನ್ನಮ್ಮ ಎಜುಕೇಷನ್ ಸೊಸೈಟಿಯ ಆಡಳಿತ ಮಂಡಳಿ ಅಧ್ಯಕ್ಷ ಕನ೯ಲ್ ಬಿ.ಜಿ.ವಿ. ಕುಮಾರ್, ಸಂಸ್ಥೆಯ ಕಾಯ೯ದಶಿ೯ ಎಂ.ಬಿ.ಬೋಪಣ್ಣ, ಎಂ.ಜಿ.ಬೋಪಣ್ಣ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್, ಕಾಯ೯ದಶಿ೯ ಕಟ್ಟೆಮನೆ ಸೋನಜಿತ್, ಮಾಜಿ ಸಹಾಯಕ ಗವನ೯ರ್ ಗಳಾದ ಡಾ.ಸಿ.ಆರ್. ಪ್ರಶಾಂತ್, ಅನಿಲ್ ಹೆಚ್.ಟಿ., ರತನ್ ತಮ್ಮಯ್ಯ, ರೋಟರಿ ಮಿಸ್ಟಿ ಹಿಲ್ಸ್ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಸದಸ್ಯ ಪಿ.ಡಬ್ಲು.ಫ್ರಾನ್ಸಿಸ್, ಕನಾ೯ಟಕ ಸಕಾ೯ರದ ಚೀಫ್ ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್ ತೀತೀರ ರೋಷನ್ ಅಪ್ಪಚ್ಚು, ನಗರಸಭೆ ಮಾಜಿ ಪೌರಾಯುಕ್ತೆ ಬಿ.ಬಿ.ಪುಪ್ಪಾವತಿ, ಸಂಸ್ಥೆಯ ಪ್ರಾಂಶುಪಾಲ ಸಿ.ಜಿ.ಮಂದಪ್ಪ, ಮುಖ್ಯ…
ಸೋಮವಾರಪೇಟೆ NEWS DESK ಜ.13 : ಪಶ್ಚಿಮ ಘಟ್ಟಗಳ ಉಳಿವಿಗಾಗಿ ಕಸ್ತೂರಿ ರಂಗನ್ ವರದಿ ರೈತರ ಹಾಗೂ ಜನಸಾಮಾನ್ಯರ ಹಿತಾಸಕ್ತಿ ಕಡೆಗಣನೆ ಬೇಡ ಎಂದು ತುಮಕೂರು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ. ಶ್ರೀ.ಸಿದ್ಧಲಿಂಗ ಸ್ವಾಮೀಜಿ ಹೇಳಿದರು. ತಾಲ್ಲೋಕಿನ ಆಲೂರುಸಿದ್ದಾಪುರದ ರಾಜ್ಯ ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತರಾದ ವಿರುಪಾಕ್ಷಪ್ಪ ನವರ ಮನೆಯ ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದರು. ಕಸ್ತೂರಿರಂಗನ್ ವರದಿ ಹಾಗೂ ಸಿ ಅಂಡ್ ಡಿ ಭೂಮಿ ವಿವಾದದಿಂದ ಇಲ್ಲಿನ ರೈತರು ಹಾಗೂ ಜನಸಾಮಾನ್ಯರು ತೊಂದರೆಗೆ ಸಿಲುಕಿದ್ದಾರೆ ಇಂದು ಆತಂಕ ವ್ಯಕ್ತಡಿಸಿದರು. ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿ ಕ್ರಮಕೈಗೊಳ್ಳಬೇಕು,ಒಂದೆಡೆ ಪ್ರಕೃತಿ ಉಳಿಯಬೇಕು ನಿಜ ಇದರಲ್ಲಿ ರೈತರ ಪಾತ್ರವೂ ಬಹಳ ಮುಖ್ಯವಾದದ್ದು ಅವರು ಸಾಕಷ್ಟು ಗಿಡಮರಬೆಳೆಸ್ತಾರೆ. ರೈತರಿಗೆ ತೊಂದರೆ ಆಗಬಾರದು ಸರ್ಕಾರ ಪಶ್ಚಿಮ ಘಟ್ಟ ಹಾಗು ರೈತರನ್ನೂ ಸಮರೀತಿಯಲ್ಲಿ ಕಾಣುವುದರೊಂದಿಗೆ ಸಮನ್ವಯ ಕ್ರಮ ಅನುಸರಿಸಬೇಕೆಂದರು. ಸಾಕಷ್ಟು ಮಂದಿ ಕೃಷಿಯನ್ನೇ ಅವಲಂಬಿಸಿ ಬದುಕುತ್ತಿದ್ದಾರೆ ಕೆಲವು ಕಠಿಣ ಕ್ರಮಗಳಿಂದ ಇಂತಹವರಿಗೆ ತೊಂದರೆ ಆಗುತ್ತದೆ ಎಂದು…
ವಿರಾಜಪೇಟೆ ಜ.13 NEWS DESK : ವಾರ್ಷಿಕೋತ್ಸವ ಎಂಬುವುದು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸುವ ಅವಿಸ್ಮರಣೀಯ ದಿನವಾಗಿದ್ದು, ಪೋಷಕರು ಶಿಕ್ಷಕರೊಂದಿಗೆ ಹೊಂದಿಕೊಂಡು ತಮ್ಮ ಮಕ್ಕಳ ಧನಾತ್ಮಕ ಬೆಳವಣಿಗೆಗೆ ಪೂರಕವಾಗಿ ನಿಲ್ಲಬೇಕು ಎಂದು ವಿರಾಜಪೇಟೆ ತಹಶೀಲ್ದಾರ್ ರಾಮಚಂದ್ರ ಸಲಹೆ ನೀಡಿದರು. ವಿರಾಜಪೇಟೆಯ ಸಂತ ಅನ್ನಮ್ಮ ಸಭಾ ಭವನದಲ್ಲಿ ನಡೆದ ಲಿಟಲ್ ಸ್ಕಾಲರ್ಸ್ ಅಕಾಡೆಮಿಯ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ಪಠ್ಯ ಹಾಗೂ ಪಠ್ಯೇತರ ಪ್ರತಿಭೆ ಪೋಷಕರ ಮುಂದೆ ಪ್ರದರ್ಶನಗೊಳ್ಳುವ ದಿನ ವಿದ್ಯಾರ್ಥಿ ಜೀವನದ ಮಹತ್ವದ ದಿನವಾಗಿರುತ್ತದೆ. ಲಿಟಲ್ ಸ್ಕಾಲರ್ಸ್ ಅಕಾಡೆಮಿ ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣವನ್ನು ಮಾತ್ರ ನೀಡುತ್ತಿಲ್ಲ. ಬದಲಾಗಿ ಶಿಕ್ಷಣದೊಂದಿಗೆ ಜೀವನದ ಮೌಲ್ಯಗಳನ್ನು ಕಲಿಸಿಕೊಡುವ ಕೆಲಸವನ್ನು ಮಾಡುತ್ತಿದೆ. ಅದೇ ರೀತಿಯಾಗಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರೊಂದಿಗೆ ಪೋಷಕರು ಸಹ ಸದಾ ಪೂರಕವಾಗಿ ಶ್ರಮಿಸಬೇಕೆಂದರು. ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ಲಿಟಲ್ ಸ್ಕಾಲರ್ಸ್ ಅಕಾಡೆಮಿಯಲ್ಲಿ ವಿದ್ಯಾರ್ಥಿಗಳ ಪ್ರತಿಭೆಗೆ ಅನುಗುಣವಾಗಿ ಕ್ರಿಯಾಶೀಲತೆಯೊಂದಿಗೆ ಭಾಗವಹಿಸಲು ಪ್ರೋತ್ಸಾಹವನ್ನು ನೀಡಲಾಗುತ್ತಿದೆ. ಕೇವಲ ಶೈಕ್ಷಣಿಕ ಮಾತ್ರವಲ್ಲ ಶೈಕ್ಷಣಿಕೇತರ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ…
ಸೋಮವಾರಪೇಟೆ NEWS DESK ಜ.13 : ರಾಷ್ಟ್ರ ಸುಭಿಕ್ಷವಾಗಿರಲಿ ಸಂಕ್ರಾಂತಿ ಎಲ್ಲರ ಬದುಕನ್ನು ಹಸನುಗೊಳಿಸಲಿ ಎಂದು ತುಮಕೂರು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ. ಶ್ರೀ.ಸಿದ್ಧಲಿಂಗ ಸ್ವಾಮೀಜಿ ಆಶಯ ವ್ಯಕ್ತಪಡಿಸಿ ಹಾರೈಸಿದರು. ಆಲೂರು ಸಿದ್ದಾಪುರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿ ಗೈಕ್ಯ ಶತಾಯುಷಿ ಸಿದ್ದಮಲ್ಲಯ್ಯನವರ ಸಂಸ್ಮರಣೋತ್ಸವದಲ್ಲಿ ಪಾಲ್ಗೊಂಡ ಸಂದರ್ಭ ಮಾತನಾಡಿದ ಅವರು ವರ್ಷದ ಮೊದಲ ಹಬ್ಬ ಸಂಕ್ರಾಂತಿ ಇದು ರೈತರ ಪ್ರಮುಖವಾದ ಹಬ್ಬ ತಾವು ಬೆಳೆದ ಬೆಳೆಯನ್ನು ಪೂಜಿಸಿ, ಪ್ರಾರ್ಥಿಸುವ ಸಂಭ್ರಮದ ಹಬ್ಬವಾಗಿದೆ. ಕಷ್ಟಪಟ್ಟು ದುಡಿದು ಬೆಳೆಯುವ ಅನ್ನದಾತನ ಬದುಕು ಹಸನಾಗಬೇಕೆಂದರು. ಸಂಕ್ರಾಂತಿಯಂದು ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಪ್ರವೇಶಿಸುವ ಕಾಲ ಕಳೆದ ವರ್ಷ ಹಲವು ಅವಗಡ,ಅನಾಹುತಗಳು ಸಂಭವಿಸಿವೆ,ಈ ವರ್ಷ ಅಂತಹ ಘಟನೆಗಳು ನಡೆಯದಿರಲಿ. ಕಾಲಕಾಲಕ್ಕೆ ತಕ್ಕಂತೆ ಮಳೆ ಬೆಳೆಯಾಗಲಿ ರಾಷ್ಟ್ರ ಸುಭೀಕ್ಷವಾಗಿರಲಿ ಎಂದು ಆಶಿಸಿದರು. ಕೊಡಗು ಜಿಲ್ಲೆಯನ್ನು ದಕ್ಷಿಣದ ಕಾಶ್ಮೀರ ಎನ್ನುತ್ತೇವೆ ಇಲ್ಲಿಯೂ ಕಳೆದ ಭಾರಿ ಅಕಾಲಿಕ ಮಳೆ,ಪ್ರಕೃತಿ ವೈಪರ್ಯದಿಂದ ಕಾಫಿ ಬೆಳೆಗಾರರು ಸಂಕಷ್ಟ ಅನುಭವಿಸಿದ್ದಾರೆ.ಈ ವರ್ಷ ಎಲ್ಲಾರಿಗೂ ಶುಭವಾಗಲಿ ಎಂದರು. ಈ ಸಂದರ್ಭ ಅರಮೆರಿ ಮಠದ ಶ್ರೀ.ಶಾಂತ…






