ಮಡಿಕೇರಿ ನ.27 NEWS DESK : ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿ ಸಮೀಪದ ಮಜ್ಜಿಗೆಹಳ್ಳ ನರ್ಸರಿ ಬಳಿ ನಡೆದಿದೆ. ಸ್ಥಳೀಯ ನಿವಾಸಿ ರವಿ ಹಾಗೂ ಸಿಂಧು ದಂಪತಿ ಪುತ್ರಿ ಗಾನವಿ(6) ಮೃತ ದುರ್ದೈವಿ. ಈಕೆ ಮಜ್ಜಿಗೆಹಳ್ಳ ಪರಂಬು ಶಾಲೆಯ 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಗೋಣಿಕೊಪ್ಪ ಕಡೆಯಿಂದ ಹುಣಸೂರು ಕಡೆಗೆ ತೆರಳುತ್ತಿದ್ದ ಲಾರಿ ರಸ್ತೆಯಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿದ್ದ ಗಾನವಿಗೆ ಡಿಕ್ಕಿ ಹೊಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ಕನಕಪುರ ಮೂಲದ ಹರೀಶ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಾರಿ ಡಿಕ್ಕಿ ಹೊಡೆದ ಸಂದರ್ಭ ಗಂಭೀರ ಗಾಯಗೊಂಡಿದ್ದ ಗಾನವಿಯನ್ನು ಸಾರ್ವಜನಿಕರು ಆಟೋ ರಿಕ್ಷಾದಲ್ಲಿ ತಿತಿಮತಿ ವಿವೇಕಾನಂದ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಳು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಗೋಣಿಕೊಪ್ಪ ವೃತ್ತನಿರೀಕ್ಷಕ ಶಿವರಾಜ್ ಆರ್.ಮುಧೋಳ್, ಠಾಣಾಧಿಕಾರಿ ಪ್ರದೀಪ್ ಕುಮಾರ್, ಎಎಸ್‍ಐ ದೇವರಾಜ್ ಸಿಬಂದಿಗಳಾದ ನೆಹರು, ಸೀರಿಲ್, ಭರತ್ ರಾಘವೇಂದ್ರ ಹಾಗೂ ಶುಭ…
ಲೇಖಕ: admin
ಮಡಿಕೇರಿ ನ.27 NEWS DESK : 2023-24ನೇ ಸಾಲಿನ ಶೈಕ್ಷಣಿಕ ಸಾಲಿನ 10ನೇ ತರಗತಿ ಪರೀಕ್ಷೆಯಲ್ಲಿ ಯು.ಅದವಿಯಾ ಕನ್ನಡ ಮಾಧ್ಯಮದಲ್ಲಿ ಕೊಡಗು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಸಂಬಂಧ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕೊಡಮಾಡುವ ಟಿ.ಪಿ.ರಮೇಶ್ ದತ್ತಿ ನಿಧಿ ಪ್ರಶಸ್ತಿಗೆ ಭಾಜನರಾಗಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಈಕೆ ಉಮ್ಮರ್ ಸಿ.ಎಂ. ಮತ್ತು ಅಮೀನಾ ಕೆ.ಎ.(ಶಿಕ್ಷಕರು) ದಂಪತಿಯ ಪುತ್ರಿ. ಎಂದು ಮಾದಾಪುರ ಶ್ರೀಮತಿ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.
ಮಡಿಕೇರಿ ನ.27 NEWS DESK : ವಿರಾಜಪೇಟೆ ಮಲಬಾರ್ ರಸ್ತೆಯ ನಿವಾಸಿ ಪಳನಿ ಪ್ರಕಾಶ್ (58) ಇಂದು ಮೈಸೂರಿನ ಖಾಸಗಿ ಆಸ್ಪತ್ರೆ ಯಲ್ಲಿ ಹೃದಯಾಘಾತದಿಂದ ನಿಧನರಾದರು. ಇವರು ಮಹಾಬೋದಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು, ದಲಿತ ಸಂಘರ್ಷ ಸಮಿತಿ ಹಾಗೂ ಕೊಡಗು ಜಿಲ್ಲಾ ಮಾಜಿ ಎಸ್.ನಿವಾಸಿ ಮೋರ್ಚಾದ ಅಧ್ಯಕ್ಷರಾಗಿದ್ದರು.
ಬೆಂಗಳೂರು ನ.27 NEWS DESK : ಸೋತಾಗ ಇವಿಎಂ ತಿರುಚಲಾಗುತ್ತದೆ ಎನ್ನುತ್ತೀರಿ, ಗೆದ್ದಾಗ ಏನೂ ಹೇಳುವುದಿಲ್ಲ ಎಂದ ವಿಭಾಗೀಯ ಪೀಠ, ಮತಯಂತ್ರಗಳ (ಇವಿಎಂ) ಬದಲು ಬ್ಯಾಲೆಟ್ ಪೇಪರ್ ಮತದಾನ ವ್ಯವಸ್ಥೆಯನ್ನು ಮತ್ತೆ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಂಗಳವಾರ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಬ್ಯಾಲೆಟ್ ಪೇಪರ್ ಬದಲು ಇವಿಎಂ ಜಾರಿಗೊಳಿಸಿದ ಕ್ರಮ ಪ್ರಶ್ನಿಸಿ ಡಾ.ಕೆ.ಎ.ಪೌಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿಕ್ರಂನಾಥ್ ಮತ್ತು ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿದೆ. ಇದರಿಂದಾಗಿ ಚುನಾವಣೆಗಳಲ್ಲಿ ಇವಿಎಂಗಳ ಬಳಕೆಯ ಹಾದಿ ಮತ್ತಷ್ಟು ಸುಗಮವಾಗಿದೆ. ಈ ಹಿಂದೆ ಆಂಧ್ರದಲ್ಲಿನ ರಾಜಕೀಯ ನಾಯಕರ ಹೇಳಿಕೆಗಳನ್ನು ಗಮನಿಸಿದಾಗ ರಾಜಕೀಯ ನಾಯಕರಾದ ಚಂದ್ರಬಾಬು ನಾಯ್ಡು ಸೋತಾಗ ಮತ್ತು ಜಗನ್ ಮೋಹನ್ ರೆಡ್ಡಿ ಇತ್ತೀಚಿನ ಚುನಾವಣೆಗಳಲ್ಲಿ ಸೋತಾಗ ಅವರೂ ಸಹ ಒಬ್ಬರಿಗೊಬ್ಬರು ಇವಿಎಂ ಗಳನ್ನು ತಿರುಚಬಹುದು ಎಂಬ ಆರೋಪ-ಪ್ರತ್ಯಾರೋಪಗಳನ್ನು ಸ್ಮರಿಸಿದ ನ್ಯಾಯಾಧೀಶರು, ಅರ್ಜಿದಾರರ ವಾದವನ್ನು ತಳ್ಳಿಹಾಕಿದ ವಿಭಾಗೀಯ ಪೀಠ, ಚುನಾವಣೆಯಲ್ಲಿ ಗೆದ್ದರೆ ಇವಿಎಂಗಳನ್ನು ತಿರುಚಿಲ್ಲ, ಸೋತಾಗ ಇವಿಎಂಗಳನ್ನು ತಿರುಚಲಾಗುತ್ತದೆ…
ಮಡಿಕೇರಿ ನ.27 NEWS DESK : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಕಾರಾಗೃಹ ವಾರ್ಡನ್ ಹುದ್ದೆಗೆ ತಾತ್ಕಾಲಿಕವಾಗಿ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಮಾಜಿ ಸೈನಿಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಈ ಹುದ್ದೆಗೆ ಮಾಸಿಕ ವೇತನ ರೂ.28,499 ಹಾಗೂ ಕರ್ತವ್ಯ ಸಮಯ 8 ಗಂಟೆ/ 3 ಶಿಫ್ಟ್ ಗಳಾಗಿರುತ್ತದೆ. ಆಸಕ್ತಿಯುಳ್ಳ ಮಾಜಿ ಸೈನಿಕರು ಡಿ.4 ರೊಳಗೆ ಕಚೇರಿಯ ಸಮಯದಲ್ಲಿ ಬಂದು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಮಡಿಕೇರಿ NEWS DESK ನ.27 : ಭಾರತದ ಹೆಮ್ಮೆಯ ವೀರ ಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಿದ ಪ್ರಕರಣವನ್ನು ತೀವ್ರವಾಗಿ ಖಂಡಿಸುವುದಾಗಿ ಕೊಡಗು ಜಿಲ್ಲಾ ಕುಲಾಲ ಕುಂಬಾರ ಸಂಘ ತಿಳಿಸಿದೆ. ಆರೋಪಿಯ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು ಮತ್ತು ಇನ್ನು ಮುಂದೆ ಈ ರೀತಿಯ ಪ್ರಕರಣಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಪ್ರಮುಖರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಮಡಿಕೇರಿ ನ.27 NEWS DESK : ಕ್ರಿಸ್ಮಸ್ ಉತ್ಸವದ ಅಂಗವಾಗಿ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್, ಕುಶಾಲನಗರ ತಾಲ್ಲೂಕು ಘಟಕ ಹಾಗೂ ಕೂಡಿಗೆ ಪವಿತ್ರ ದೇವಾಲಯದ ಸಹಯೋಗದಲ್ಲಿ ಡಿ.1 ರಂದು ಜಿಲ್ಲಾ ಮಟ್ಟದ ಕ್ರಿಸ್ಮಸ್ ಕರೋಲ್ ಗಾಯನ ಸ್ಪರ್ಧೆ ನಡೆಯಲಿದೆ. ಕೂಡಿಗೆ ಆಂಜೆಲಾ ವಿದ್ಯಾನಿಕೇತನ ಆವರಣದಲ್ಲಿ ಮಧ್ಯಾಹ್ನ 12 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ವಿಧಾನ ಪರಿಷತ್ತು ಶಾಸಕ ಐವಾನ್ ಡಿಸೋಜ ಉದ್ಘಾಟಿಸಲಿದ್ದು, ಮೈಸೂರು ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿ ಮಹಾ ಧರ್ಮಾಧ್ಯಕ್ಷ ಡಾ.ಬರ್ನಾಡ್ ಮೊರಸ್ ದಿವ್ಯ ಸಾನಿಧ್ಯ ವಹಿಸಿ, ಆರ್ಶೀವಚನ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಕುಶಾಲನಗರ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎ.ಪೀಟರ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಡಿಕೇರಿ ವಲಯ ಶ್ರೇಷ್ಠ ಗುರು ವಂ.ಸ್ವಾಮಿ ಜಾರ್ಜ್ ದೀಪಕ್, ಕೂಡಿಗೆ ಪವಿತ್ರ ಕುಟುಂಬ ದೇವಾಲಯದ ಧರ್ಮಗುರು ವಂ.ಸ್ವಾಮಿ ಚಾಲ್ರ್ಸ್ ನೊರೋನ್ಹ, ಕುಶಾಲನಗರ ಸಂತ ಸೆಬಾಸ್ಟಿಯನ್‍ರ ದೇವಾಲಯದ ಧರ್ಮಗುರು ವಂ.ಸ್ವಾಮಿ ಎಂ.ಮಾರ್ಟಿನ್, ಕೂಡಿಗೆ ಆಂಜೆಲಾ ವಿದ್ಯಾನಿಕೇತನ ಸುಪೀರಿಯರ್ ಸಿಸ್ಟರ್…
ಮಡಿಕೇರಿ ನ.27 NEWS DESK : ಭಾರತೀಯ ಸೇನೆಯ ವೀರ ಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರುಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಮಾಡಿದ ಆರೋಪಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಹಿಂದು ಜಾಗರಣ ವೇದಿಕೆಯ ಕೊಡಗು ಘಟಕ ಒತ್ತಾಯಿಸಿದೆ. ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಚಾಲಕ ಕುಕ್ಕೇರ ಅಜಿತ್ ಹಾಗೂ ಪ್ರಮುಖರು ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ಬಳಸಿ ಅಪ್ರತಿಮ ವೀರ ಸೇನಾಧಿಕಾರಿಗಳಿಗೆ ಅಗೌರವ ತೋರಿದ ಆರೋಪಿಯನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಸೋಮವಾರಪೇಟೆ ನ.27 NEWS DESK : ಸೋಮವಾರಪೇಟೆ ತಾಲ್ಲೂಕು ಶಾಲಾ ಶಿಕ್ಷಣ ಇಲಾಖೆ, ಮತದಾರರ ಸಾಕ್ಷರತಾ ಸಂಘದ ವತಿಯಿಂದ ಮತದಾರರ ದಿನಾಚರಣೆ ಅಂಗವಾಗಿ ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ವಿವಿಧ ಸ್ಪರ್ಧೆಗಳಿಗೆ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸುಕುಮಾರಿ ಚಾಲನೆ ನೀಡಿದರು. ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಮಕ್ಕಳು, ಕನ್ನಡ, ಇಂಗ್ಲೀಷ್ ಪ್ರಬಂಧ, ರಸಪ್ರಶ್ನೆ, ಭಿತ್ತಿಪತ್ರ ತಯಾರಿಕೆ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ನೋಡೆಲ್ ಅಧಿಕಾರಿ ಶಿವಕುಮಾರ್, ಮುಖ್ಯ ಶಿಕ್ಷಕಿ ಯಶೋದಮ್ಮ, ತೀರ್ಪುಗಾರರಾಗಿ ಶಾಂತಳ್ಳಿ ಕ್ಲಸ್ಟರ್ ಸಿಆರ್‍ಪಿ ಚೈತ್ರ, ಸೋಮವಾರಪೇಟೆ ಕ್ಲಸ್ಟರ್‍ನ ಸಿಆರ್‍ಪಿ ಪ್ರೇಮ, ಬಿಟಿಆರ್‍ಪಿ ರಂಜಿತಾ, ಕ್ವೀಜ್ ಮಾಸ್ಟರ್ ವಿಜಯ್ ಇದ್ದರು.
ಸೋಮವಾರಪೇಟೆ ನ.27 NEWS DESK : ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದೆ. ಕಾನೂನನ್ನು ಉಲ್ಲಂಘಿಸಿದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೋಪಾಲಕೃಷ್ಣ ಎಚ್ಚರಿಸಿದರು. ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮತ್ತು ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ‘ಬಾಲ್ಯ ವಿವಾಹ ತಡೆ’ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅನಕ್ಷರತೆ, ಬಡತನ, ಮೂಢನಂಬಿಕೆ ಇಂತಹವುಗಳು ಬಾಲ್ಯವಿವಾಹಕ್ಕೆ ಕಾರಣವಾಗಿವೆ. ಬಾಲ್ಯ ವಿವಾಹ ತಡೆ ಜಾಗೃತಿಯಲ್ಲಿ ವಿದ್ಯಾರ್ಥಿಗಳು ಕೈಜೋಡಿಸಬೇಕು. ಬಾಲ್ಯವಿವಾಹದಂತಹ ಘಟನೆಗಳು ಕಂಡುಬಂದಾಗ ವಿದ್ಯಾರ್ಥಿಗಳು ಕೂಡಲೆ ಸಂಬಂಧಪಟ್ಟವರಿಗೆ ವಿಷಯ ಮುಟ್ಟಿಸಬೇಕು. ನಂತರ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುತ್ತಾರೆ ಎಂದು ಹೇಳಿದರು. 21 ವರ್ಷ ಒಳಗಿನ ಹುಡುಗ ಹಾಗೂ 18 ವರ್ಷ ಒಳಗಿನ ಹುಡುಗಿಯರ ನಡುವಿನ ಮದುವೆ ಬಾಲ್ಯವಿವಾಹವಾಗುತ್ತದೆ. ಗಿರಿಜನರಲ್ಲಿ ಬಾಲ್ಯವಿವಾಹ ನಡೆಯುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ ಎಂದು ಹೇಳಿದರು. ಜಾಗೃತಿಯ ಮೂಲಕ ಬಾಲ್ಯವಿವಾಹವನ್ನು ತಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು. ವಕೀಲರ ಸಂಘದ ಅಧ್ಯಕ್ಷ ಕೆ.ಹೆಚ್.ವಿಠಲ್ ಮಾತನಾಡಿ,…






