ಲೇಖಕ: admin

ಮಡಿಕೇರಿ ನ.12 NEWS DESK : ಭಾರತ ಸರ್ಕಾರದ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಭಿವೃದ್ಧಿ ಮತ್ತು ಸೌಲಭ್ಯ ಕಚೇರಿ ಮಂಗಳೂರು (ಎಂಎಸ್‍ಎಂಇ) ಕ್ಯಾಟಲಿಸ್ಟ್ ವಿಮೆನ್ ಎಂಟ್ರೆಫ್ರೆನ್ಸ್ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಕೊಡಗು ಜಿಲ್ಲೆ ಹೋಂ-ಸ್ಟೇ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ಕೊಡಗು ಜಿಲ್ಲೆಯಲ್ಲಿ ನೋಂದಾಯಿತ ಹೋಂಸ್ಟೇಗಳ ನಿರ್ವಹಣೆ ಕುರಿತು ತರಬೇತಿ ಕಾರ್ಯಾಗಾರವು ನಗರದ ಹೋಟೆಲ್ ಮಯೂರ ವ್ಯಾಲಿ ವ್ಯೂನಲ್ಲಿ ನಡೆಯಿತು. ಆರ್ಥಿಕವಾಗಿ ಲಾಭದಾಯಕ ಹಾಗೂ ಜವಾಬ್ದಾರಿಯಾಗಿ ಹೋಂಸ್ಟೇ ನಡೆಸುವ ಬಗ್ಗೆ ಹಾಗೂ ಸ್ಥಳೀಯವಾಗಿ ದೊರೆಯುವ ಉತ್ಪನ್ನಗಳಿಗೆ ಬಾರ್ಕೋಡ್ ಅಳವಡಿಸುವ ಬಗ್ಗೆ ಇತರೆ ವಿಷಯದ ಬಗ್ಗೆ ಸಮಗ್ರವಾಗಿ ಎಂಎಸ್‍ಎಂಇ ಸಂಸ್ಥೆಯ ವಿಷಯ ತಜ್ಞರು ಮಾಹಿತಿ ನೀಡಿದರು. ಜಿಲ್ಲೆಯಲ್ಲಿರುವ ನೋಂದಾಯಿತ ಹೋಂ-ಸ್ಟೇಗಳಿಗೆ ತಾಂತ್ರಿಕ ಮಾರ್ಗದರ್ಶನ ಹಾಗೂ ಜಿಲ್ಲೆಯ ಉತ್ಪನ್ನಗಳಾದ ಕಾಫಿ, ವೈನ್, ಚಾಕೋಲೇಟ್, ಜೇನು, ಮಸಾಲೆ ಪದಾರ್ಥಗಳಿಗೆ ಮೌಲ್ಯ ವರ್ಧನೆ ಮಾಡುವ ಬಗ್ಗೆ ಹಾಗೂ ಮಾರ್ಕೆಟಿಂಗ್ ಮಾಡುವ ಬಗ್ಗೆ ಹಾಗೂ ಸ್ವಾಸ್ಥ್ಯ ಕೇಂದ್ರ ಭಾರತ ಸರ್ಕಾರದ ಎಂಎಸ್‍ಎಂಇ ನೋಂದಾಣಿ ಬಗ್ಗೆ ತಿಳಿಸಿದರು.…

Read More

ಮಡಿಕೇರಿ ನ.12 NEWS DESK : ಹೋರಾಟ ಮನೋಭಾವದ ಸಮಯ ಪ್ರಜ್ಞೆ ಮತ್ತು ಸ್ವಯಂ ರಕ್ಷಣೆಯಲ್ಲಿ ತಮ್ಮದೇ ಆದ ಪಾತ್ರ ವಹಿಸಿರುವ ವೀರರಾಣಿ ಒನಕೆ ಓಬವ್ವ ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಹೇಳಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ನಗರದ ಗಾಂಧಿ ಭವನದಲ್ಲಿ ಸೋಮವಾರ ನಡೆದ ಕನ್ನಡ ನಾಡಿನ ವೀರನಾರಿ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಐತಿಹಾಸಿಕ ಹಿನ್ನೆಲೆ ಹೊಂದಿರುವ ಚಿತ್ರದುರ್ಗದ ಕೋಟೆಯ ರಕ್ಷಣೆಗೆ ಹೋರಾಡಿದ ವೀರರಾಣಿ ಒನಕೆ ಓಬವ್ವ ಅವರ ಹೋರಾಟದ ಜೀವನವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವಂತಾಗಬೇಕು ಎಂದರು. ಸಾಮಾನ್ಯ ಮಹಿಳೆಯಾಗಿ ಬದುಕುತ್ತಿದ್ದ ಒನಕೆ ಓಬವ್ವ ಶತ್ರುಗಳ ವಿರುದ್ಧ ಹೋರಾಡಿ ಜಯಗಳಿಸುತ್ತಾರೆ. ರಕ್ಷಣೆಗಾಗಿ ಒನಕೆ ಬಳಸುವ ಮೂಲಕ ಜಯ ಪಡೆಯುತ್ತಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದರು. ವೀರ ವನಿತೆ ಒನಕೆ ಓಬವ್ವ ಅವರು ನಾಡಿಗೆ ನೀಡಿರುವ ಕೊಡುಗೆಯಿಂದ ಇಂದಿಗೂ ಸಹ ಪ್ರಸ್ತುತರಾಗಿದ್ದಾರೆ. ಕಿತ್ತೂರು…

Read More

ಮಡಿಕೇರಿ ನ.11 NEWS DESK : ಅಕ್ರಮವಾಗಿ ಬೀಟೆ ಮರ ಸಾಗಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಮಡಿಕೇರಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಗ್ಗೋಡ್ಲು ಬಳಿ ಸುಮಾರು 8 ಲಕ್ಷ ರೂ. ಮೌಲ್ಯದ 27 ಬೀಟೆ ಮರ ನಾಟಾ ಸಹಿತ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಭಾನುವಾರ ರಾತ್ರಿ ವಾಹನ ಒಂದರಲ್ಲಿ ಬೀಟೆ ಮರವನ್ನು ಸಾಗಿಸುತ್ತಿರುವ ಕುರಿತು ಮಡಿಕೇರಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಖಚಿತ ಮಾಹಿತಿ ಲಭಿಸಿತ್ತು. ವಿರಾಜಪೇಟೆ-ಕಗ್ಗೋಡ್ಲು ಮಾರ್ಗವಾಗಿ ಬರುತ್ತಿದ್ದ ಶುಂಠಿ ತುಂಬಿದ ಪಿಕ್‍ಅಪ್ ವಾಹನವನ್ನು ತಡೆದು ಪರಿಶೀಲನೆ ನಡೆಸಿದ ಸಂದರ್ಭ ಮೇಲ್ಭಾಗದಲ್ಲಿ 38 ಚೀಲಗಳಲ್ಲಿ ಶುಂಠಿ ತುಂಬಿರುವುದು ಕಂಡು ಬಂದಿದೆ. ಸಂಶಯದಿಂದ ವಾಹನವನ್ನು ಪರಿಶೀಲಿಸಿದಾಗ ಕೆಳಭಾಗದಲ್ಲಿ ಒಟ್ಟು 27 ಬೀಟೆ ಮರದ ನಾಟಾಗಳನ್ನು ಜೋಡಿಸಿರುವುದು ಪತ್ತೆಯಾಗಿದೆ. ಸ್ಥಳದಲ್ಲೇ ವಾಹನದ ಚಾಲಕ ಹೆಚ್.ಡಿ.ಕೋಟೆ ನಿವಾಸಿ ಆದಿತ್ಯ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ವಿಚಾರಣೆ ನಡೆಸಿದ ಸಂದರ್ಭ ವಿರಾಜಪೇಟೆಯಿಂದ ಹೊಳೆ ನರಸೀಪುರದ ಕಡೆಗೆ ಬೀಟೆ ಮರದ ನಾಟಾಗಳನ್ನು ಸಾಗಿಸುತ್ತಿರುವುದಾಗಿ…

Read More

ಮಡಿಕೇರಿ ನ.11 NEWS DESK  : ಸಹಸ್ರಾರು ಕಂಠಗಳಿಂದ ಕನ್ನಡಾಭಿಮಾನ ಎನ್ನುವುದು ಹಾಡಾಗಿ ಹೊರ ಹೊಮ್ಮಿ, ಕುಶಾಲನಗರದ ನಗರದ ದಶ ದಿಕ್ಕುಗಳಲ್ಲಿ ಪಸರಿಸುವ ಮೂಲಕ “ಸಹಸ್ರ ಕಂಠ ಗಾಯನ” ಕನ್ನಡ ತಾಯಿ ಶ್ರೀಭುವನೇಶ್ವರಿಯ ಪ್ರಭಾವಳಿಯನ್ನು ಮತ್ತಷ್ಟು ಬೆಳಗುವಲ್ಲಿ ಯಶಸ್ವಿಯಾಯಿತು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತು,್ತ ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಇಂದು ಮಧ್ಯಾಹ್ನ ನಗರದ ಶ್ರೀ ಗಣಪತಿ ದೇಗುಲದ ಬಳಿಯ ಫೀ.ಮಾ. ಕಾರ್ಯಪ್ಪ ವೃತ್ತದಲ್ಲಿ ನೆರೆದ ಸಹಸ್ರಾರು ವಿದ್ಯಾರ್ತಿಗಳು, ಕನ್ನಡಾಭಿಮಾನಿಗಳು ಏಕ ಕಂಠದಿಂದ, ಏಕಕಾಲದಲ್ಲಿ ಕನ್ನಡ ನಾಡಗೀತೆ, ರೈತ ಗೀತೆ ಮತ್ತು ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತ ಗಾಯನವನ್ನು ನಡೆಸಿಕೊಟ್ಟರು. ಸಹಸ್ರಾರು ಮಂದಿಯಿಂದ ಮೊಳಗಿದ ಕನ್ನಡ ನಾಡಗೀತೆ ಅಪರೂಪದ ರೋಮಾಂಚಕ ಅನುಭವವನ್ನು ಪಾಲ್ಗೊಂಡವರಲ್ಲಿ ಮೂಡಿಸಿತು. ಕನ್ನಡ ಜ್ಯೋತಿ ರಥದ ಮೆರವಣಿಗೆ- ಸಹಸ್ರ ಕಂಠ ಗಾಯನಕ್ಕೂ ಮುನ್ನ ಸಿದ್ದಾಪುರ ಕಡೆಯಿಂದ ಆಗಮಿಸಿದ ‘ಕನ್ನಡ ಜ್ಯೋತಿ ರಥ’ಕ್ಕೆ ಬೈಚನಹಳ್ಳಿಯ ಮಾರಮ್ಮ ದೇಗುಲದ ಬಳಿ…

Read More

ಕೂಡಿಗೆ, ನ.11 NEWS DESK : ಬಾಣಾವರ ಸಮೀಪದ ಬೂವಂಗಾಲ ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಹಾಡಹಗಲೇ ಕಾಡಾನೆಯೊಂದು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಮುಂಜಾನೆ  ಬಾಣಾವರ ಮುಖ್ಯ ರಸ್ತೆ, ಬೂವಂಗಾಲ ವ್ಯಾಪ್ತಿಯ ರಸ್ತೆಯಲ್ಲಿ ಒಂಟಿ ಸಲಗ ಕಾಣಿಸಿಕೊಂಡಿದೆ. ಬಾಣಾವರ ಮೀಸಲು ಅರಣ್ಯ ವ್ಯಾಪ್ತಿಯಿಂದ ಕಾಡಾನೆಗಳು ರಸ್ತೆ ಬದಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಲು ಹಾಕಲು ಪಕ್ಕದ ಗ್ರಾಮಕ್ಕೆ ತೆರಳುವ ಕಷ್ಟವಾಗಿದೆ ಎಂದು ಗ್ರಾಮಸ್ಥರಾದ ವಿವೇಕ, ಈರಪ್ಪ, ಮೋಹನ್ ತಿಳಿಸಿದ್ದಾರೆ. ಈಗಾಗಲೇ ಕಟಾವುಗೆ ಬಂದ ಭತ್ತದ ಬೆಳೆ, ಬಾಳೆ, ಗೆಣಸು ಸೇರಿದಂತೆ ಇತರೆ ಬೆಳೆಗಳನ್ನು ತಿಂದು ತುಳಿದು ಬಾರಿ ನಷ್ಟ ಪಡಿಸುತ್ತಿದ್ದು, ಅರಣ್ಯ ಇಲಾಖೆ ಕಾಡಾನೆ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

Read More

ಮಡಿಕೇರಿ ನ.11 NEWS DESK : ಅಕ್ಷರ ದಾಸೋಹ ನೌಕರರ ಮಡಿಕೇರಿ ತಾಲ್ಲೂಕು ಮಟ್ಟದ ಸಮಾವೇಶ ನಗರದ ಚೇಂಬರ್ ಆಫ್ ಕಾಮರ್ಸ್‍ನ ಸಭಾಂಗಣದಲ್ಲಿ ನಡೆಯಿತು. ಅಕ್ಷರ ದಾಸೋಹ ಮಡಿಕೇರಿ ತಾಲ್ಲೂಕು ಅಧ್ಯಕ್ಷೆ ಸಿ.ಕೆ.ಲಲಿತ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ನೌಕರರ ರಾಜ್ಯ ಖಜಾಂಚಿ ಮಹದೇವಮ್ಮ ಮಾತನಾಡಿ, ಅಕ್ಷರ ದಾಸೋಹ ನೌಕರರು ರಾಜ್ಯದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು, ಸರ್ಕಾರ ಕಾರ್ಮಿಕರ ಮೇಲೆ ತೋರುತ್ತಿರುವ ನಿರ್ಲಕ್ಷ್ಯತೆ, ವೇತನದ ಸಮಸ್ಯೆ, ಹೆಚ್ಚಿನ ಒತ್ತಡ ಕೆಲಸಗಳು, ಕನಿಷ್ಠ ವೇತನದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಅಕ್ಷರ ದಾಸೋಹ ನೌಕರರನ್ನು ಅತ್ಯಂತ ಕಡಿಮೆ ವೇತನದಲ್ಲಿ ದುಡಿಸುತ್ತಿರುವುದು, ಇಂದಿನ ಬೆಲೆ ಏರಿಕೆಯಿಂದ ಕಾರ್ಮಿಕರ ಬದುಕು ಅತ್ಯಂತ ಕಷ್ಟಕರವಾಗಿರುವ ದಿನಗಳಲ್ಲಿ ಕಡಿಮೆ ವೇತನ ಪಡೆದುಕೊಂಡು ಅತೀ ಹೆಚ್ಚು ಕೆಲಸ ಮಾಡಿಸಿಕೊಂಡು ಅಕ್ಷರ ದಾಸೋಹ ನೌಕರರನ್ನು ವಂಚಿಸುತ್ತಿದೆ ಎಂದು ಆರೋಪಿಸಿದರು. ಸರ್ಕಾರದ ನೀತಿಗಳು, ಹೊಸ ಕಾರ್ಮಿಕ ನೀತಿಯಿಂದಾಗಿ ಇಂದು ಕಾರ್ಮಿಕರು ತತ್ತರಿಸುತ್ತಿದ್ದಾರೆ. ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮುಖಾಂತರ ಕಾರ್ಮಿಕರಿಗೆ ದೊಡ್ಡ ಮಟ್ಟದ ಅನ್ಯಾಯವನ್ನು…

Read More

ಮಡಿಕೇರಿ ನ.11 NEWS DESK : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕೊಡವ ವೆಲ್ಫೇರ್ ಐಂಡ್ ರಿಕ್ರಿಯೇಷನ್ ಅಸೋಸಿಯೇಷನ್ ವತಿಯಿಂದ ನ.14 ರಂದು “ಅರೆಕಾಡು- ಹೊಸ್ಕೇರಿ ನಾಡೊರ್ಮೆ” ಕಾರ್ಯಕ್ರಮ ನಡೆಯಲಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ತಿಳಿಸಿದ್ದಾರೆ. ಅರೆಕಾಡು ಗ್ರಾಮದ ರಿಯಾವರ್ ರೆಸಾರ್ಟ್‍ನಲ್ಲಿ ಬೆಳಿಗ್ಗೆ 9ಗಂಟೆಗೆ ತಮ್ಮ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಅವರು ಕೊಡವ ವೆಲ್ಫೇರ್ ಐಂಡ್ ರಿಕ್ರಿಯೇಷನ್ ಅಸೋಸಿಯೇಷನ್ ನ ನೂತನ ಕಟ್ಟಡಕ್ಕೆ ಅರೆಕಾಡುವಿನಲ್ಲಿ ಭೂಮಿಪೂಜೆ ನೆರವೇರಿಸಲಿದ್ದಾರೆ. ಸಭಾ ಕಾರ್ಯಕ್ರಮವನ್ನು ಶಾಸಕ ಡಾ||ಮಂತರ್ ಗೌಡ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ಜಿಲ್ಲಾಧಿಕಾರಿ ವೆಂಕಟರಾಜ, ಸರ್ಕಾರಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ ಹಾಗೂ ಆಡಳಿತ ಮಂಡಳಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಮೈಸೂರಿನ ‘ಪಡಿಪು ಕಯ್ಯಾಲೆ’…

Read More

ಕುಶಾಲನಗರ ನ.11 NEWS DESK : ಮಂಡ್ಯ ನಗರದಲ್ಲಿ ಡಿ.20-22 ರ ವರೆಗೆ ಮೂರು ದಿನಗಳ ಕಾಲ ನಡೆಯಲಿರುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಕ್ಕೆ ಕುಶಾಲನಗರದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ಕುಶಾಲನಗರ ತಾಲ್ಲೂಕು ಆಡಳಿತ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕುಶಾಲನಗರ ತಾಲ್ಲೂಕು  ಕನ್ನಡ ಸಾಹಿತ್ಯ ಪರಿಷತ್ತು, ವಿವಿಧ ಸಂಘ- ಸಂಸ್ಥೆಗಳು, ಕನ್ನಡಾಭಿಮಾನಿಗಳು, ಶಾಲಾ- ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಸೇರಿದಂತೆ ನಾಗರಿಕರ ಸಮ್ಮುಖದಲ್ಲಿ ಕನ್ನಡ ರಥವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.  ಶಾಸಕ.ಡಾ ಮಂತರ್ ಗೌಡ ರಥದಲ್ಲಿನ ಕನ್ನಡ ಭುವನೇಶ್ವರಿ ಪುತ್ಥಳಿಗೆ ಪುಷ್ಪ ಅರ್ಪಿಸುವ ಮೂಲಕ ಕನ್ನಡ ಜ್ಯೋತಿ ರಥವನ್ನು ಕನ್ನಡಾಭಿಮಾನಿಗಳು ಹಾಗೂ ನಾಗರಿಕರ ಪರವಾಗಿ ಬರಮಾಡಿಕೊಂಡು, ಪ್ರತಿಯೊಬ್ಬರೂ ಕನ್ನಡ ನಾಡು- ನುಡಿ, ಸಂಸ್ಕೃತಿಯ ಬೆಳವಣಿಗೆಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು. ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳು, ಮಹಿಳಾ ಸಂಘಟನೆಗಳು, ಕನ್ನಡಾಭಿಮಾನಿಗಳು ಹಾಗೂ ನಾಗರಿಕರು ರಥವನ್ನು ಬರಮಾಡಿಕೊಂಡು ಪಟ್ಟಣದ…

Read More

ಮಡಿಕೇರಿ ನ.11 NEWS DESK : ಮಡಿಕೇರಿ ಗ್ರಾಮಾಂತರ ಪ್ರಖಂಡದ ವಿಶ್ವ ಹಿಂದೂ ಪರಿಷತ್, ಭಜರಂಗದಳ ಮತ್ತು ಮಾತೃಶಕ್ತಿ ದುರ್ಗಾವಾಹಿನಿ ವತಿಯಿಂದ ಹೊದ್ದೂರಿನ ಕಬ್ಬಡಕೇರಿಯ ಶ್ರೀಮುತ್ತಪ್ಪ ದೇವಾಲಯದಲ್ಲಿ ಗೋಪೂಜೆ ಹಾಗೂ ಶ್ರೀಲಕ್ಷ್ಮೀ ಪೂಜೆ ಶ್ರದ್ಧಾಭಕ್ತಿಯಿಂದ ನಡೆಯಿತು. ಗೋವುಗಳಿಗೆ ಫಲಹಾರ ನೀಡಿ, ವಿಶೇಷ ಪೂಜೆ ಸಲ್ಲಿಸಿ ಗೋಸಂತತಿಯ ಉದ್ಧಾರಕ್ಕೆ ಪ್ರಾರ್ಥನೆ ಸಲ್ಲಿಸಲಾಯಿತು. ಜಿಲ್ಲಾ ಮಠಮಂದಿರ ಅರ್ಚಕರ ಪ್ರಮುಖ್ ಡಾ.ಮಹಾಬಲೇಶ್ವರ ಭಟ್ ಗೋವಿನ ಮಹತ್ವದ ಕುರಿತು ತಿಳಿಸಿದರು. ದೇವಾಲಯದ ಅಧ್ಯಕ್ಷ ಬಾಲಕೃಷ್ಣ, ಪೂಜಾರಿ ಮಣಿ ಅವರ ಸಹಕಾರದಲ್ಲಿ ನಡೆದ ಪೂಜೆಯಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ, ಕಾರ್ಯದರ್ಶಿ ರಮೇಶ್ ಪುದಿಯೊಕ್ಕಡ, ಮಾತೃಶಕ್ತಿ ಜಿಲ್ಲಾ ಸಂಯೋಜಕಿ ಪೂರ್ಣಿಮಾ ಸುರೇಶ್, ಮಡಿಕೇರಿ ತಾಲ್ಲೂಕು ಸಂಯೋಜಕಿ ಮಮತ, ಭಜರಂಗದಳ ಪ್ರಮುಖರಾದ ಪ್ರವೀಣ್, ಸಜೀನ ಸೂರಜ್, ಪುರುಷೋತ್ತಮ, ಮಾತೃಶಕ್ತಿಯ ರುಕ್ಮಿಣಿ, ಜಾನಕಿ ಚಂಗಪ್ಪ, ಹೊದ್ದೂರು ಘಟಕದ ಪ್ರಮುಖರು, ಗ್ರಾಮಸ್ಥರು ಪಾಲ್ಗೊಂಡಿದ್ದರು.  

Read More

ಮಡಿಕೇರಿ ನ.11 NEWS DESK : ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ರಾಜ್ಯವ್ಯಾಪಿ ಸಂಚರಿಸುತ್ತಿರುವ ಕನ್ನಡ ಜ್ಯೋತಿ ರಥಕ್ಕೆ ಮೂರ್ನಾಡಿನಲ್ಲಿ ಅದ್ದೂರಿ ಸ್ವಾಗತ ದೊರೆಯಿತು.  ಮೂರ್ನಾಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು, ಮೂರ್ನಾಡು ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ, ಟೈಲರ್ ಅಸೋಸಿಯೇಷನ್ ಸದಸ್ಯರು, ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಕನ್ನಡ ರಥವನ್ನು ಕೊಂಡಂಗೇರಿ ರಸ್ತೆಯಿಂದ ಬಸ್ ನಿಲ್ದಾಣದವರೆಗೆ ಪೂರ್ಣಕುಂಭ ಕಳಸ ಮತ್ತು ವಾದ್ಯಗೋಷ್ಠಿಗಳೊಂದಿಗೆ ಅದ್ದೂರಿಯಾಗಿ ಬರಮಾಡಿಕೊಂಡು ಗೌರವ ಅರ್ಪಿಸಿದರು. ಪಂಚಾಯಿತಿ ಸದಸ್ಯರಾದ ಮುಂಡಂಡ ವಿಜಯಲಕ್ಷ್ಮಿ ಅವರ ನೇತೃತ್ವದಲ್ಲಿ ತಾಯಿ ಭುವನೇಶ್ವರಿಗೆ ಪೂಜೆಯನ್ನು ನೆರವೇರಿಸಲಾಯಿತು. ಮೂರ್ನಾಡು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಈರಮಂಡ ಹರಿಣಿ ವಿಜಯ್, ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶನ್ ರೈ, ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಜಾಶಿರ್ ಮತ್ತಿತರರು ಭುವನೇಶ್ವರಿಗೆ ಮಾಲಾರ್ಪಣೆ ಮಾಡಿದರು. ನಂತರ ಮೂರ್ನಾಡು ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಕನ್ನಡನಾಡು ನುಡಿಯ ಕುರಿತು ನೃತ್ಯ ಪ್ರದರ್ಶಿಸಿದರು.…

Read More